Posts

Showing posts from September, 2018

*ಅಸಾಧ್ಯವಾದದ್ದನ್ನೇ ಬಯಸು......*

*ಅಸಾಧ್ಯವಾದದ್ದನ್ನೇ ಬಯಸು......* "ಅಸಾಧ್ಯವಾದದ್ದನ್ನೇ ಬಯಸು" ಇದು ಭೀಮಸೇನದೇವರ ನೇರ ಹಾಗೂ ದಿಟ್ಟ ಮಾತು. ಯಥಾಸ್ಥಿತವಾದ ಮಾತು. ಅಸಾಧ್ಯವಾದದ್ದನ್ನು ಬಯಸು ಎಂದರೆ, ಯಾವದು ಅಪ್ರಾಪ್ಯವೋ ಅದನ್ನು ಬಯಸು ಎಂದರ್ಥ. ಪ್ರಾಪ್ಯವಾದದ್ದು ಯಾವುದೋ ಸಾಧ್ಯವಾದದ್ದು ಯಾವದೋ ಅದನ್ನು ಬಯಸಬೇಕು ನಿಜ.  ಯಾವದು ಸಿಗಬಹುದೋ ಅದನ್ನು ಏನೆಂದು ಬಯಸುವದು... ??? ಯಾವುದು ಸಿಕ್ಕೇಬಿಡುವದು ಅದನ್ನು ಬೇಡುವದಾದರೂ ಏತಕ್ಕೆ.... ?? ಬೇಡಲೇ ಬೇಕೆಂದರೆ, ಬಯಸಲೇ ಬೇಕೆಂದರೆ ಯಾವದು ಅಸಾಧ್ಯವೋ ಯಾವದು ಅಪ್ರಾಪ್ಯವೋ ಅದನ್ನೇ ಬೇಡಿ ಬಯಸಬೇಕು. ನಿಮ್ಮ ವಾದ ಬಲು ವಿಚಿತ್ರವಾಗಿದೆ ಅಲ್ವೆ.... ಏಕೆಂದರೆ ಯಾವದು ಸಿಗುವದೇ ಇಲ್ಲ ಅದನ್ನು ಬೇಡುವದರಲ್ಲಿ ಅರ್ಥವೇನಿದೆ ?? ನಿಶ್ಚಿತವಾಗಿಯೂ ಸಿಗದಿರುವದಾಗಿದ್ದರೆ, ಅದನ್ನು ಇಚ್ಛಿಸಿ ಪ್ರಯೋಜನವಾದರೂ ಏನು.. ?? ಎಲ್ಲ ನಿಜ. ನಮ್ಮಿಂದ ಸಾಧಿಸಲ್ಪಡುವಂತಹ ವಸ್ತುಗಳು ಸಾಮಾನ್ಯವಾಗಿ ನಮಗೆ ಸುಲಭ ರೀತಿಯಲ್ಲಿ ಖಂಡಿತವಾಗಿಯೂ ಸಿಗುವಂತಹವುಗಳೇ ಆಗಿರುತ್ತವೆ. ಯಾಕೆಂದರೆ ಅವುಗಳನ್ನು ಪಡೆದುಕೊಂಡೇ ಹುಟ್ಟಿರುತ್ತೇವೆ. ಅನ್ನ ನೀರು ಘಾಳಿ ಸೂರು ಕುಟುಂಬ ರೋಗ ಆರೋಗ್ಯ ಧನ ಕನಕ ಹೆಂಡತಿ ಮಕ್ಕಳು ಇತ್ಯಾದಿ ಇತ್ಯಾದಿ ..... ಯಾವದು ನಮಗೆ ಸಿಗುವದೇ ಇಲ್ಲವೋ ಅದಕ್ಕಾಗಿ ಎಷ್ಟು ಶ್ರಮಪಟ್ಟರೂ ಎಷ್ಟು ಇಚ್ಛಿಸಿದರೂ ಅದು ಸಿಗುವದೇ ಇಲ್ಲ.ಅದು ಅಪ್ರಾಪ್ಯವೇ. ಅದುವೂ ಅಷ್ಟೇ ನಿಶ್ಚಿತ. ಇದರಲ್ಲಿಯೂ ಸಂದೇಹವಿಲ್ಲ.  ಬ್ರಹ್ಮ ಪದ...

*ಪಡೆದು ಮರೆಯುವರು ಆಗದೆ, ಕೊಟ್ಟು ಮರೆಯುವರು ಆಗಬೇಕು.....*

*ಪಡೆದು ಮರೆಯುವರು ಆಗದೆ, ಕೊಟ್ಟು ಮರೆಯುವರು ಆಗಬೇಕು.....* ಮರೆವು ಸಾಮಾನ್ಯ. ಮರೆವುನಲ್ಲಿಯೂ ಮನುಷ್ಯ ತಾ ಎಡವಟ್ಟು ಮಾಡಿಕೊಳ್ಳತ್ತಾನೆ. "ಹೆಚ್ಚು ಪಡೆದೇ ಮರೀತಾನೆ. ಅದಾಗದೆ ಕೊಟ್ಟು ಮರೀಬೇಕು." ಕೊಟ್ಟದ್ದು ನೆನಪು ಉಳಿಸಿಕೊಳ್ಳುತ್ತಾನೆ. ನಾ ಅದು ಕೊಟ್ಟೆ. ಇದು ಕೊಟ್ಟೆ ಹೀಗೆ. ಕೊಟ್ಟಿದ್ದೇನಾದರೂ ಬಹಳಷ್ಟಿದೆಯಾ... ??? ಅದೂ ಇರದು. ಒಂದು ಸೀರೆ ಧೋತ್ರ ಕೊಟ್ಟಿರುತ್ತಾನೆ. ಅದನ್ನು ನೆನಪಿಟ್ಟು ಕುಳಿತರೆ, ಆಧೊತ್ರ ಸೀರಿ ಇಷ್ಟರಲ್ಲಿ ಎಷ್ಟು ಕೈ ಬದಲಾಗಿರುತ್ತದೆಯೋ ಆ ಭಗವಾನ್ ಜಾನೆ.... ಆದರೆ ನಾ ಕೊಟ್ಟೀನಿ ನಾ ಕೊಟ್ಟೀನಿ ಅಂತ ಮಾತ್ರ ಇದ್ದೇ ಇರುತ್ತದೆ. ತುಂಬ ಚಿಕ್ಕವರು. ಒಂದು ಪ್ರಸಿದ್ಧ ಕ್ಷೇತ್ರಕ್ಕೆ ಹೊಗಿದ್ದೆವು. ಅಲ್ಲಿ ನಮ್ದೆಲ್ಲ  ಏನೋ ಜೋರು ಖಾರುಬಾರು ನಡದಿತ್ತು. ಆಗ ಒಬ್ಬರು ಬಂದು "ಏ ಮರಿಗಳೆ ಈ ಬಿಲ್ಡಿಂಗ್ ಅದಲಾ, ಅದನ್ನ ನಾನೇ ಕಟ್ಲಿಕ್ಕ ಹಣ ಕೊಟ್ಟಿದ್ದು" ಎಂದು. ನಮಗೋ ಆಶ್ಚರ್ಯ.. ಗೌರವ.. ಇವರಿಗೆ ನಮ್ಮಿಂದೇನರೆ ಅಪಚಾರವಾಯಿತೋ ಏನೋ ಎಂದು ಭಯ... ಅಷ್ಟರಲ್ಲಿ ವ್ಯವಸ್ಥಾಪಕರು ಬಂದರು. ನಾವು ಹೋಗಿ ಕೇಳಿದೆವು, ಬಿಲ್ಡಿಂಗ್ ಕಟ್ಟಲು ಪೂರ್ಣ ಹಣ ಅವರೇ ಕೊಟ್ಟಿದಾರೆ ಅಂತ ಅಲಾ... ನಮ್ಮಿಂದ ಏನರೆ ಅವಮಾನ ಆಯ್ತೇನೋ ಅಂತ ಘಾಬರಿಯಿಂದ ಹೇಳಿದವು. ಆಗ ವ್ಯವಸ್ಥಾಪಕರು ಹೇಳಿದರು, "ಅವರು ಅಂದು ಕೊಟ್ಟಿದ್ದು ಕೇವಲ ೦೫ ರೂ ಗಳನ್ನು ಮಾತ್ರ" ಎಂದು. ಒಂದೇ ಕ್ಷಣದಲ್ಲಿ ವ್ಯಕ್ತಿಯ ಬಗ್ಗೆ ...

*ಮನಸ್ಸನ್ನು ಧ್ಯಾನದ ಚಾಪೆಯಲ್ಲಿ ಸ್ಥಾಪಿಸಿ.....*

Image
*ಮನಸ್ಸನ್ನು ಧ್ಯಾನದ ಚಾಪೆಯಲ್ಲಿ ಸ್ಥಾಪಿಸಿ.....* ಸ್ವಯಂ ಚಂಚಲ, ಸ್ಥಿರ ಹಿತೈಷಿಯಾದ ಬುದ್ಧಿಯ ಮಾತೂ ಕೇಳದು, ಅಂತಹದ್ದೊಂದು ಪದಾರ್ಥ ಅಂದರೆ ಅದುವೇ ಮನಸ್ಸು. ಈ ಮನಸ್ಸಿನ ಜೊತೆಗೆ ಇರುವಾಗ ತಾಳ್ಮೆ ತುಂಬ ಮಹತ್ವ. ಮನಸ್ಸಿನ ಸಂಘರ್ಷಗಳು ಸಾವಿರಾರು. ಸಂಘರ್ಷದಿಂದ ವಿಷವೂ ಹುಟ್ಟಬಹುದು. ಅಮೃತವೂ ಹುಟ್ಟಬಹುದು. ಆರೋಗ್ಯಪೂರ್ಣ ಧನ್ವಂತರಿಯೂ ಹುಟ್ಟಬಹುದು. ಸುಖಪೂರ್ಣ ಲಕ್ಷ್ಮಿಯೂ ಹುಟ್ಟಬಹುದು. *ಮನಸ್ಸಿಗೊಂದು ಗುರಿ ಇರಬೇಕು....* ಗುರಿ ಇದ್ದರೆ ಕೆಲಸ ಮಾಡತ್ತೆ. ಇಲ್ಲವೋ ಕೆಟ್ಟ ಆಲಸಿ. ಬೇಗ ಏಳಲು ನಿರ್ದಿಷ್ಟ ಕಾರಣಗಳಿಲ್ಲದಿದ್ದರೆ, ಹನ್ನೊಂದಾದರೂ ಏಳಲು ಮನಸ್ಸೇ ಮಾಡದು. ಅಂತಹ ಆಲಸಿ ಮನಸ್ಸು. ಆ ಮನಸ್ಸಿಗೆ ಆತರಹದ ಟ್ರೈನಿಂಗ ಅಂತೂ ನಾವೇ ಕೊಟ್ಟಿದ್ದೇವೆ ಅಂದರೆ ತಪ್ಪಾಗದು. *ಈ ಆಲಸೀ ಮನಸದಸನ್ನು ಬದಲಾಯಿಸುವದು ಹೇಗೆ.... ???* ವ್ಯೋಮನೌಕೆ ಇಡೀ ಭೂಮಿಯನ್ನು ಸುತ್ತಲು ಬೇಕಾದ ಇಂಧನವನ್ನು ಪಯಣದ ಆರಂಭದ ನಿಮಿಷಗಳಲ್ಲಿ ಬಳಿಸುತ್ತದೆ.  ಏಕೆಂದರೆ ಆರಂಭದಲ್ಲಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಧಿಕ್ಕರಿಸಿ  ಮೇಲೇರಲು ಹೆಚ್ಚೆಚ್ಚು ಶಕ್ತಿ ಬೇಕಾಗುತ್ತದೆ. ಒಂದುಬಾರಿ ಮೇಲೇಹೋದರೆ ಯೃಏಚ್ಛ ವಿಹಾರ ಮಾಡುತ್ತದೆ.  ಹಾಗೇಯೇ.... ಮನಸ್ಸನಲ್ಲೂ ಸಹ. ಬದಲಾವಣೆಯ ಪ್ರಕ್ರಿಯೆ ಆರಂಭದಲ್ಲಿ ತುಂಬ ಕಷ್ಟ. ಅದು ಒಂದೇ ದಿನದಲ್ಲಿ ಸಂಭಿವಿಸದು. *ಹಳೆಯ ಅಭ್ಯಾಸದ ಸೆಳೆತವನ್ನು ಧಿಕ್ಕರಿಸಿ ಕೆಕ್ಕರಿಸಿ ಮೇಲೇಳಲು ಸಾಕಷ್ಟು ಸಮಯ...

*ಶ್ರೀ ಶ್ರೀ ಯಾದವಾರ್ಯರ ಆರಾಧನಾ ಮಹೋತ್ಸವ

Image
*ಶ್ರೀ ಶ್ರೀ ಯಾದವಾರ್ಯರ ಆರಾಧನಾ ಮಹೋತ್ಸವ* ಜ್ಙಾನಿಶ್ರೇಷ್ಠರಾದ, ವಿರಕ್ತಶಿಖಾಮಣಿಗಳಾದ, ವೇದವ್ಯಾಸದೇವರನ್ನೇ ಒಲಿಸಿಕೊಂಡ, ಪೀಠಾಧಿಪತಿಗಳಿಂದಲೂ ವಂದ್ಯರಾದ, ಮಹಾನ್ ಟಿಪ್ಪಣೀಕಾರರಾದ, *ಶ್ರೀ ಶ್ರೀಯಾದವಾರ್ಯರ* ಆರಾಧನಾ ಮಹೋತ್ಸವ ಇಂದು. ಒಂದು ಕಾಲದ ಭಂಗಾರದ ದೊಡ್ಡವ್ಯಾಪರಸ್ಥರು ಅಂತೆಯೇ ಚಿನಿವಾರರು ಎಂದೇ ಪ್ರಸಿದ್ಧರು.  ಯಾದವಾರ್ಯರ ಪೂರ್ವಾಶ್ರಮದ ಅಣ್ಣಂದಿರು ಮಹಾಜ್ಙಾನಿಗಳು, ಟಿಪ್ಪಣೀಕಾರರು, ವಿರಕ್ತಪುರುಷರು *ಶ್ರೀವೇದೇಶತೀರ್ಥರು.*  ಆ ವೇದೇಶತೀರ್ಥರಲ್ಲಿ ಅಧ್ಯನ ಮಾಡಿದ ಮಹಾನ್ ಮೇಧಾವಿಗಳು ಶ್ರೀ ಯಾದವಾರ್ಯರು. *ಶ್ರೀಮನ್ಯಾಯಸುಧಾ ವ್ಯಾಖ್ಯಾತೃಗಳು* ಶ್ರೀಮನ್ಯಾಯಸುಧ ಗ್ರಂಥಕ್ಕೆ ನಾಲಕನೆಯ ಅಥವಾ ಐದನೆಯ ವ್ಯಾಖ್ಯಾನವೇ *ಯಾದುಪತ್ಯ.* ಶ್ರೀಗುರುಸಾರ್ವಭೌಮರಾದ ರಾಯರ ಸಮಕಾಲೀನರು ಯಾದವಾರ್ಯರು. ಶ್ರೀರಾಯರು ಪರಿಮಳ ಸಹಿತ ಶ್ರೀಮನ್ಯಾಯಸುಧಾ ಮಂಗಳ ಮಾಡುವಾಗ *ಯಾದಪ್ಪ ಇದ್ದಿದ್ರೆ ಚೊಲೊ ಆಗ್ತಿತ್ತು* ಎಂದು ಹೇಳಿದರು. ಆಗ ದೂರದಲ್ಲಿ ಕಂಬಲ ಹೊದ್ದು ಕುಳಿತ ವ್ಯಕ್ತಿ *ನಿಮ್ಮ ಯಾದಪ್ಪ  ಇಲ್ಲೇ ಇದ್ದಾನೆ* ಎಂದು ಕೈ ಎತ್ತಿ ಉತ್ತರಿಸಿದರು ಅಂತೆ ಕಥೆ ಕೇಳ್ತೇವೆ. ಇದು ಯಾದುಪತ್ಯ ಟಿಪ್ಪಣಿಯ ಒಂದು ವೈಭವ. *ಶ್ರೀಮದ್ಭಾಗವತ ಟೀಕಾ* ಶ್ರೀಮದ್ಭಾಗವತಕ್ಕೆ ವಿಜಯಧ್ವಜರತೀರ್ಥರ ತರುವಾಯ ಟೀಕೆ ಬರೆದ ಮಹಾನುಭಾವರು ಯಾದವಾರ್ಯರು. ಕೇವಲ ಐದು ಸ್ಕಂಧಗಳಿಗೆ ಬರೆದರೂ, ಸಮಗ್ರ  ಭಾಗವತ ಹೇಗೆ ಅಧ್ಯಯನ ಮಾಡಬಹುದು ಎನ್ನ...

*ದೇವರಲ್ಲಿ ನಂಬಿಕೆ, ವಿಶ್ವಾಸಗಳಿದ್ದರೆ ಭಕ್ತಿ ಸಾರ್ಥಕ..*

Image
*ದೇವರಲ್ಲಿ ನಂಬಿಕೆ, ವಿಶ್ವಾಸಗಳಿದ್ದರೆ ಭಕ್ತಿ ಸಾರ್ಥಕ..* ದೇವರ ಅಸ್ತಿತ್ವವನ್ನು ಒಪ್ಪಿಕೊಂಡವ ಆಸ್ತಿಕ. ಅಂತೆಯೇ ದೇವರನ್ನು ನಂಬದವರಿಗಿಂತಲೂ ನಂಬಿದವ ಅತ್ಯಂತ ಯೋಗ್ಯ. ನಂಬಿಕೆಗೆ ಮೂಲ ವಿಶ್ವಾಸ. ವಿಶ್ವಾಸಕ್ಕೆ ಯೋಗ್ಯ ನಂಬಿಕೆ. ಆಸ್ತಿಕರಾದ ನಾವು ಭಕ್ತಿ ಇಂದಲೇ ದೇವರ ಪೂಜೆ ಮಾಡುತ್ತೇವೆ. ಆದರೆ ಏನನ್ನೂ ಪಡೆಯಲು ಆಗುವದಿಲ್ಲ. "ಈ ದೇವರಲ್ಲಿ ಯಾಕಪ್ಪಾ ಭಕ್ತಿ ಮಾಡಿದೆ" ಎಂದು ಹತಾಶನಾಗುವ ಸಂಭವ ಹೆಚ್ಚಾಗಿ ಕಾಣುತ್ತದೆ. ಅನುಭವಿಸುದ್ದೇವೆ. ಹತಾಶೆ ಭಕ್ತಿಯನ್ನು ಕ್ಷೀಣಿಸುತ್ತದೆ. *ಭಕ್ತಿಯ ರಕ್ಷಣೆ ಹೇಗೆ... ?? ಭಕ್ತಿ ದೃಢವಾಗಲು ಏನು ಮಾಡಬೇಕು... ??* ಭಕ್ತಿ ದೃಢವಾಗಲು ಮೂಲ ನಂಬಿಕೆ ವಿಶ್ವಾಸಗಳೇ.  *ದೇವ ರಕ್ಷಣೆ ಮಾಡುವ* ಎಂಬ ನಂಬಿಕೆ ಇಲ್ಲದೇ ಇರುವದರಿಂದಲೋ ಏನೋ, ದೇವರಿಗೆ ಬೇಡುತ್ತೇವೆ. ಅಥವಾ ನಮ್ಮ ರಕ್ಷಣೆಗೆ ನಾವೇ ಹೊಣೆಗಾರರು ಎಂಬಂತೆ ಹೋರಾಡುತ್ತೇವೆ. ಶ್ರೀಮದ್ಭಾಗವತ ತಿಳಿಸುತ್ತದೆ *ನಿಯತಾರ್ಥೋ ಭಜೇತ* ಮಾಡುವ ಭಗವತ್ಕಾರ್ಯದಲ್ಲಿ  ರಕ್ಷಣೆ ಮಾಡಿಯೇ ಮಾಡುತ್ತಾನೆ, ಫಲ ಸಿದ್ಧ ಎಂದು ದೃಢವಾದ ವಿಶ್ವಾಸದಿಂದಲೇ ಪೂಜೆ ಮಾಡು ಎಂದು. *ಕ್ಷುದ್ರವಿಷಯಗಳಲ್ಲಿಯೇ ನಂಬಿಕೆ ಹೆಚ್ಚು.....* ತುಂಬ ವಿಚಿತ್ರ ಬೆಕ್ಕು ಅಡ್ಡ ಹೋದರೆ ಎಷ್ಟು ನಂಬುತ್ತೇವೆ, ಅಷ್ಟು ಬೇಡ, ಆ ನಂಬಿಕೆಯ ಶತಾಂಶ  " *ದೇವರ ನಾಮ* ಈ ತರಹದ ಅಪಶಕುನಗಳಿಂದ ಸೂಚಿತವಾದ ಎಲ್ಲಾ ದೋಷಗಳನ್ನು  ಪಾಪಗಳನ್ನೂ ಪರಿಹರಿಸುತ್ತದೆ" ...

*ದೇವರು ಕೊಟ್ಟದ್ದು ಎಂದು ಎಲ್ಲವನ್ನೂ ಉಣ್ಣುವದು ಸರಿಯೇ..... ???*

*ದೇವರು ಕೊಟ್ಟದ್ದು ಎಂದು ಎಲ್ಲವನ್ನೂ ಉಣ್ಣುವದು ಸರಿಯೇ..... ???* ಜಗತ್ಸೃಷ್ಟಿಕಾರಕ ನಾರಾಯಣ. ಜಗತ್ತಿನ ಎಲ್ಲ ಪದಾರ್ಥಗಳೂ ದೇವರು ಕೊಟ್ಟಿರುವದೆ. ರೂಪ ಲಾವಣ್ಯ, ಮನೆ ಮಠ, ವಸ್ತ್ರ ವಸತಿ, ಅನ್ನ ನೀರು, ದೇಹ ಇಂದ್ರಿಯ, ಜ್ಙಾನ ಬುದ್ಧಿ, ನಡತೆ, ಆಸೆ ಸಿಟ್ಟು , ವಿಧಿ ನಿಷೇಧ, ಟೀವಿ ಪುಸ್ತಕ, ಮೋಬೈಲು ಪೂಜೆ, ಗುರು ಶಿಷ್ಯ, ತಂದೆ ತಾಯಿ, ಹೆಂಡತಿ ಮಗ,  ಹೀಗೆ ಪ್ರತಿಯೊಂದೂ ದೇವರು ಕೊಟ್ಟಿರುವದೇ. ಈ ಎಲ್ಲ ಪದಾರ್ಥಗಳೂ ದೇವರು ಕೊಟ್ಟಿದ್ದಾನೆ, ಎಂದು ಬೀಗಿ, ಎಲ್ಲ ಭೋಗ್ಯವಸ್ತುಗಳನ್ನೂ ಭೋಗಿಸುವದು ಸರಿಯೇ ??? ಶಾಸ್ತ್ರ ತುಂಬ ಚೆನ್ಬಾಗಿ ವಿವರಿಸುತ್ತದೆ. ಎಲ್ಲ ಪದಾರ್ಥಗಳೂ ದೇವರೇ ಕೊಡುವವ, ದೇವರಿಂದಲೇ ಹುಟ್ಟಿದ್ದು, ದೇವರೇ ಕೊಟ್ಟೂ ಇದ್ದಾನೆ ಇದು ನೂರಕ್ಕೆ ನೂರರಷ್ಟು ನಿಜ. ಅಂತ ಹೇಳಿ ದೊರೆತ ಎಲ್ಲವನ್ನೂ ಉಣ್ಣುವೆ, ಭೋಗಿಸುವೆ ಎನ್ನುವದು ಶುದ್ಧತಪ್ಪೇ...... *ಹಿತವಾದದ್ದನ್ನೇ ಭೋಗಿಸು* *ಕೊಟ್ಟದ್ದು ಸಾವಿರ. ಹಿತವಾದದ್ದು ನೂರು.* ಹಿತಾಹಿತ ವಿವೇಕ ಇರೋದರಿಂದ ಎಲ್ಲವನ್ನೂ ಭೋಗಿಸುವದು ಧಡ್ಡತನದ ಪರಮಾವಧಿ ಎಂದಾಗಬಹುದು. ಅತ್ಯಂತ ದೀರ್ಘಕಾಲೀನವಾಗಿ ಯಾವದು ಅತ್ಯಂತ ಹಿತವೋ ಅದನ್ನೇ ಭೋಗಿಸುವದು ಸೂಕ್ತ. *ಹಿತವಾಗಿದ್ದರೂ ಮಿತವೇ ಆಗಿರಬೇಕು*  ಹಿತ ಎಂದು ಹೇಳಿ ಎಲ್ಲವನ್ನೂ ಭೋಗಿಸುವದು ಭಾಗವತದ ದೃಷ್ಟಿಯಲ್ಲಿ  ತಪ್ಪೂ ಎಂದಾಗಬಹುದು. ಅಂತೆಯೇ ಹಿತವಾದದ್ದರಲ್ಲಿಯೂ ಮಿತವಾಗಿಯೇ ಭುಂಜಿಸು.  ಆದ್ದರಿಂದ ...

*ವೈಭವದ ನವರಾತ್ರೋತ್ಸವ ಹಾಗೂ ಪ್ರೋಷ್ಠಪದೀ ಶ್ರೀಮದ್ಭಾಗವತ*

Image
*ವೈಭವದ ನವರಾತ್ರೋತ್ಸವ ಹಾಗೂ ಪ್ರೋಷ್ಠಪದೀ ಶ್ರೀಮದ್ಭಾಗವತ* ಭೂ ವೈಕುಂಠಕ್ಷೇತ್ರವಾದ ಶ್ರೀತಿರುಮಲ ಕ್ಷೇತ್ರದಲ್ಲಿ, ಸರ್ವೋತ್ತಮ, ಸರ್ವವೇದಪ್ರತಿಪಾದ್ಯ, ಅನಂತಗುಣಪೂರ್ಣ, ಅನಂತ, ಸತ್ ಚಿದಾನಂದ ಮೂರ್ತಿಯಾದ *ಶ್ರೀಭೂ ಸಹಿತ ಶ್ರೀಶ್ರೀನಿವಾಸದೇವರ ದಿವ್ಯ ಸನ್ನಿಧಿಯಲ್ಲಿ,*  ವೇದಕ್ಕೆ ಸಮವಾದ ಅಂತೆಯೇ ಗ್ರಂಥರಾಜವಾದ ಶ್ರೀಮದ್ಭಾಗವತದ ಪಾಠರೂಪದ ಉಪನ್ಯಾಸ ದಿನಕ್ಕೆ ಕನಿಷ್ಠ ಎಂಟು ಗಂ... ಯಂತೆ ಅತ್ಯಂತ ವೈಭವೋಪೇತವಾಗಿ, *ಅಭಿನವ ಯಾದವಾರ್ಯರಂದೇ ಪ್ರಸಿದ್ಧರಾದ, ಪರಮ ಪೂಜ್ಯ ಮಾಹುಲೀ (ಪಂ.ವಿದ್ಯಾಸಿಂಹಾಚಾರ್ಯ) ಪರಮಾಚಾರ್ಯ* ರಿಂದ ಶ್ರೀಮದುತ್ತರಾದಿಮಠದಲ್ಲಿ ಜರುಗಿತು. *ಶ್ರೀಮದ್ಭಾಗವತ* ವಿಜಯಧ್ವಜೀಯ, ಯಾದುಪತ್ಯ, ಶ್ರೀನಿವಾಸತೀರ್ಥೀಯ ಮುಂತಾದ ಅನೇಕ ಟಿಪ್ಪಣೀ ವಿಷಯಗಳಿಂದ ಯುಕ್ತವಾದ, ಶ್ರೀಮಟ್ಟೀಕಾಕೃತ್ಪಾದರು ಟೀಕಾಗ್ರಂಥಗಳಲ್ಲಿ  ಸೂಚಿಸಿದ ಮಾರ್ಗದಲ್ಲಿ, ಶ್ರೀಮದ್ಭಾಗವತ ತಾತ್ಪರ್ಯ ಸಹಿತವಾಗಿ ಶ್ರೀಮದ್ಭಾಗವತದ ಉಪನ್ಯಾಸದ ವೈಭವ, ಊಹೆಗೆ ನಿಲುಕದು‌.  ನನಗೆ ಹೇಳಲು ಅಸಾಧ್ಯ ಇಷ್ಟು ನಾನು ಹೇಳಬಹುದು. *ಉಪನ್ಯಾಸದ ವೈಭವ* ಪೂ ಆಚಾರ್ಯರ ಜ್ಙಾನದಾನೋದ್ಯಶ್ಯಕವಾದ ಈ ಜ್ಙಾನಸತ್ರ ಕೆಳುಗರಿಗೆ *ಒಂದು ದಿವ್ಯ ಜ್ಙಾನ ಹಬ್ಬದಂತೆ* ಇತ್ತು. ಬಂದ ಪ್ರಮೇಯಗಳು ಕನಿಷ್ಠ ಸಾವಿರಾರು. ಸಾವಿರಾರು ಭಗವದ್ಗುಣಗಳು. ಅನೇಕಾನೇಕ ಭಗವನ್ಮಹಿಮೆಗಳು ಅದಲ್ಲದೇ ಭಗವದ್ಭಕ್ತರಾದ ದೇವತೆಗಳ, ಋಷಿಮುನಿಗಳ, ಚಕ್ರವರ್ತಿಗಳ ಸಂಬಂಧಿಸಿದ ...

*ದೈವೀ ಭಕ್ತಿಯ ದಿವ್ಯ ಮೂರ್ತಿ.....*

Image
*ದೈವೀ ಭಕ್ತಿಯ ದಿವ್ಯ ಮೂರ್ತಿ.....* ಇಂದು ನಮ್ಮ ಪರಮಗುರುಗಳಾದ ಪರಮಪೂಜ್ಯ  *ಮಾಹುಲೀ (ಪಂ. ಪೂ. ಗೋಪಾಲಾಚಾರ್ಯ ಮಾಹುಲೀ) ಪರಮಾಚಾರ್ಯರ* ಸಂಸ್ಮರಣ ದಿನ..   *ಉತ್ತುಂಗ* ಎಂಬ ಗ್ರಂಥದಲ್ಲಿಯ ಒಂದು ಮಹಾನ್ ವಿಷಯ. "ಭಕ್ತಿ" ಜೀವಿಸುವ ಜೀವನ ಒಂದು ಅದ್ಭುತವಾದ ಪರಮುಖ್ಯವಾದ ಒಂದಂಶ. ಭಕ್ತಿಯಿಲ್ಲದವ ಭಾಗವತನಾಗಲಾರ. ಭಕ್ತಿ ಇರುವವ ಅವೈಷ್ಣವನಾಗಲಾರ. ಅತ್ಯಲ್ಪ ಭಕ್ತಿಗೂ ಮುಕ್ತಿಗೆ ನೇರ ಕಾರಣ. ಚುಟುಕು ಭಕ್ತಿಯಿದ್ದರೂ ಸಾಕು ಅವ ಮುಕ್ತಿಯೋಗ್ಯ.  ಇರಲೇಬೇಕಾದ ಮೊಟ್ಟ ಮೊದಲ ಗುಣ *ಭಕ್ತಿ* ಆದರೆ, ಪಡೆಯಲೇ ಬೇಕಾದ ಅತಿದೊಡ್ಡ ಮತ್ತು ಶ್ರೇಷ್ಠಫಲ *ವಿಷ್ಣುಪ್ರೀತಿ.* ಪರಮಪೂಜ್ಯ ಪರಮಾಚಾರ್ಯರ ಎಲ್ಲ ಕಾರ್ಯದ ಹಿನ್ನಲೆಯಲ್ಲಿಯೂ ವಿಷ್ಣು ಭಕ್ತಿ ಘಟ್ಟಿಯಾಗಿ ನಿಂತಿದೆ. ಮಾಡುವ ಕರ್ತವ್ಯ, ಪಡುವ ಕಷ್ಟ, ಹೊಂದಿದ ಸಂಪತ್ತು, ಘಳಿಸಿದ ಕೀರ್ತಿ, ಪಡೆದ ಮರ್ಯಾದೆ, ಮಾಡಿದ ಉಪಕಾರ, ನೀಡಿದ ದಾನ, ಭೋಗಿಸಿದ ರೋಗ, ಅನುಭವಿಸಿದ ಆಪತ್ತು, ಆಚರಿಸಿದ ಧರ್ಮ, ನಡೆಸಿದ ಪಾಠ ಪ್ರವಚನ, ನೆರವೇರಿಸಿದ ಉತ್ಸವಗಳು ಇದೆಲ್ಲದಕ್ಕೂ ವಿಷ್ಣು ಭಕ್ತಿಯೇ ಬುನಾದಿಯಾಗಿತ್ತು. ಪೂ. ಪರಮಾಚಾರ್ಯರ ಮಾತುಗಳಲ್ಲಿಯೇ ಅವರಿಗಿದ್ದ ವಿಷ್ಣುಭಕ್ತಿಯ ಆಳ, ಹರಹು, ಸಾಂದ್ರತೆಯನ್ನು ತಿಳಿಯೋಣ. ೧) *ವಿಷ್ಣುಭಕ್ತಿ* ಜೀವನದ ಎಲ್ಲ ಕಾರ್ಯಗಳಿಗೆ ಹಿರಿದಾದ ಉದ್ಯೇಶ್ಯವನ್ನು, ಉನ್ನತ ಧ್ಯೇಯವನ್ನು ತಂದು ಕೊಡುತ್ತದೆ.  ಕರ್ತವ್ಯಕರ್ಮಗಳನ್ನು ಮಾಡಲು ಬಲಿಷ್ಠ, ಉತ್ತಮ, ಧೈರ್...

*ಬಂದ ವಿಘ್ನ ಕಳಿಯೋ ಗಣನಾಥ.....*

Image
*ಬಂದ ವಿಘ್ನ ಕಳಿಯೋ ಗಣನಾಥ.....* ಹೇ ಗಣನಾಥ !!!!! ಸಾಧನೆಗೆ ಬಂದ, ಬರುವ ಸಕಲ ವಿಘ್ನಗಳನ್ನು ಪರಿಹರಿಸೋ. ಏಕೆ ಪರಿಹರಿಸಬೇಕು.... ??  *ನೀನು ಎನ್ನ ಸ್ವಾಮಿ, ನಾನು ನಿನ್ನ ದಾಸ* ಹೀಗಿರುವಾಗ ವಿಘ್ನಗಳ ಪರಿಹರಿಸುವ ಜವಾಬ್ದಾರಿ ಯಾರದು... ??? ದಾಸರಿಗೆ ಬಂದ ಆಪತ್ತುಗಳನ್ನು, ವಿಘ್ನಗಳನ್ನು ನೀ ಪರಿಹರಿಸದಿರೆ ಇನ್ನಾರು ಪರಿಹರಿಸುವವರು.... ??? ಆದ್ದರಿಂದ ಕರುಣೆ ಮಾಡಿ, ದಯೆತೋರಿ ನೀನೇ ವಿಘ್ನಗಳನ್ನು ಪರಿಹರಿಸಲೇಬೇಕು. ಸಾಮಾನ್ಯವಾಗಿ *ಪೂಜೆಗೆ ಕೇಂದ್ರ ಪೂಜ್ಯನಾದ ದೇವರೋ ದೇವತೆಯೋ ಆಗದೆ, ಪೂಜಕನಾದ ನಾನೇ ಆಗಿರುತ್ತೇನೆ.* ಅಂತೆಯೇ ಪೂಜೆಯ ಆದಿಯಿಂದ ಆರಂಭಿಸಿ ಪೂಜೆಯ ಸಮಾಪ್ತಿಯವರೆಗೆ ನನ್ನ ಸಮಯ, ನನ್ನ ಓಫೀಸ್, ನನ್ನ ಉಡುಗೆ, ನನ್ನ ತೊಡುಗೆ, ನನ್ನ ಮಡಿ, ನನ್ನ ಬೆಳ್ಳಿ ಭಂಗಾರದ ಪಾತ್ರೆಗಳು ಇವುಗಳ ಕಡೆಯೇ ಹೆಚ್ಚೆಚ್ಚು ಗಮನ ಹೋಗಿರುತ್ತದೆ.  ನಾನು ಏನೆಲ್ಲ ಬೇಡುವದಿತ್ತು, ಏನೆಲ್ಲ ಬೇಡಿಕೊಂಡೆ ಇದು ಕೊನೆಯಾಗಿ ಮುಗಿದಿರುತ್ತದೆ. ಇಷ್ಟಾಗುವದರಲ್ಲಿ ಪೂಜೆ ಮುಗಿದೇ ಹೋಗಿರುತ್ತದೆ. (ಎಲ್ಲರದ್ದೂ ಅಲ್ಲ, ನಂದಂತೂ ಹೀಗಾಗಿರತ್ತೆ) *ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೆ* ಪೂಜೆಯ ಉದ್ದೇಶ್ಯ *ದೇವರ ಹಾಗೂ ದೇವತೆಯ ಅಂತರ್ಗತನಾದ ದೇವರ ಪ್ರೀತಿಯೇ.*  ನಾಳೆ ಬರುವ ಗಣಪತಿ ಪೂಜೆಯ ಉದ್ದೇಶ್ಯ *ಗಣಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ವಿಶ್ವಂಭರ ರೂಪೀ ಭಗವಂತನ ಪ್ರೀತಿಯೇ ಉದ್ದೇಶ್ಯವಾಗಿಟ್ಟುಕೊಳ್ಳೋಣ....

*ಹೀಗಾಗಲೇಬೇಕು, ಇದು ಅತ್ಯಾವಶ್ಯಕ....*

*ಹೀಗಾಗಲೇಬೇಕು, ಇದು ಅತ್ಯಾವಶ್ಯಕ....* ಇಲ್ಲಿಯವರೆಗೆ ಸಾಕಷ್ಟು ಕತ್ತಲೆಯಲ್ಲಿ ಇದ್ದದ್ದು ಆಯಿತು. ಮುಚ್ಚಿಕೊಂಡು ಇದ್ದಿದ್ದೂ ಆಯಿತು. ಯಾವುದೇ ತರಹದ ದುರ್ಘಟನೆ ಆಗದಿರಲಿ ಎಂಬಂತೆಯೋ ಏನೋ ಇಲ್ಲಿಯ ವರೆಗೆ ನಾನು ಮುಚ್ಚಿಕೊಂಡಿಯೇ ಇದ್ದೆ. ಆಂರತರ್ಯದ ಮಮರ್ಸ್ಥಾನವನ್ನು ತೆರದಿಟ್ಟರೆ ಯಾರಾದರೂ ಅದನ್ನು ಹಾಳು ಮಾಡಬಹುದೆಂದು, ಏನಾದರೂ ಕೆಟ್ಟದ್ದು ಒ್ರವೇಶಿಸದಿರಲೀ ಎಂದು ನನ್ನ ಹೃದಯವನ್ನು ಮುಚ್ಚಿಟ್ಟಿದ್ದೆ. ಎಲ್ಲ ತರಹದಲ್ಲಿಯೂ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ನನ್ನನ್ನು ಒಳಗಿರಿಸಿದ್ದೆ. "ಅನಿಸುತ್ತುದೆ ಇದೇ ನನ್ನ ದೊಡ್ಡ ತಪ್ಪು ಎಂದು......" ಕಾಲ ಮಿಂಚಿಲ್ಲ... ಏಕಾಕಿಯಾಗಿ ಇದ್ದೆ. ಒಬ್ಬನೇ ತುಂಬ ದಿನ, ತುಂಬ ಖುಶಿಯಿಂದಿರಲು ಸಾಧ್ಯವಿಲ್ಲ. ಎನ್ನೊಡನೆ ನೀನು ಬಾ. ಹೇ ಭಗವನ್....!!!!!! ನೀನು ಎನ್ನ ಅಂತರ್ಗೃಹಕ್ಕೆ ಬಂದು ಬಿಡು. ನಾನು ನಿನ್ನ ಮಂದಿರನಾಗುವೆ. ನಾನು ನಿನ್ನ ಸೇವಕನಾಗಿರುವೆ.  ನಾನು ನಿನ್ನ ದಾಸನಾಗುವೆ. "ನೀನು ಕುಣಿಸಿದಂತೆ ನಾನು ಕುಣಿವೆ." ನಾನು ಯಾವಾಗ ನಿನ್ನೊಟ್ಟಿಗೆ ರಾಜಿಯಾಗುವೆ, ಆಗ ನೀನೂ ಸಹ ಕೊಡಲು ಉತ್ಸುಕನಾಗುತ್ತೆ. ಎಲ್ಲಿಯವರೆಗೆ ನಾನು ಮುದಡಿ ಕೂತಿರುವೆ, ಅಲ್ಲಿಯ ವರೆಗೆ ಕೊಡುಗೈವೀರರಂತೆ ಇರುವ ನಿನ್ನ ಕೈಗಳೂ ಕೊಡಲು ಮುಂದು ಬಾರದು. ಕೊಡುವ ಕೈ ಕೊಡಲು ಹಾತೊರೆಯುತ್ತೆ, ಆದರೆ ತೆಗೆದುಕೊಳ್ಳುವವ ನಾನು ಮುದುಡಿ ಹೋಗಿದ್ದೇನೆ. ಕೊಡುವ ಮಾರ್ಗವಿಲ್ಲವಷ್ಟೇ. ನಾನು ನನ್ನ ಹೃದ...

*ಮೌನ......*

*ಮೌನ......* ಆಡುವ ಮಾತು ಒಂದೇ ಅರ್ಥವನ್ನು ತಿಳಿಸುತ್ತದೆ, ಬಹಳಾದರೆ ಎರಡು ಅರ್ಥಗಳನ್ನು ತಿಳಿಸಬಹುದು. ಆದರೆ *ಮೌನ* ಹಾಗಲ್ಲ ಸಾವಿರಾರು ಅರ್ಥರಗಳನ್ನೂ ಹುಟ್ಟು ಹಾಕಬಹುದು. ಜೊತೆಗೆ ನೂರಾರು ಉಪಯೋಗಗಳನ್ನೂ ಒದಗಿಸುತ್ತದೆ *ಮೌನ.* *ಹಿಂದು -  ಇಂದು*  ಪ್ರೀತಿ, ಪ್ರೇಮ, ಕಾರುಣ್ಯ, ಅಭಿಮಾನ, ಅಂತಃಕರಣ, ವಾತ್ಸಲ್ಯಗಳೇ ತುಂಬಿದಂತಹ ಕೃತಯುಗಕ್ಕೆ ಸಮನಾದ ಒಂದು ಕಾಲವಿತ್ತು. ಆಗ ಆಡುವ ಮಾತುಗಳೆಲ್ಲ ಸುಮಧುರವಾಗಿರುತ್ತಿದ್ದವು. ಕೇಳಲು ಇಂಪಾಗಿರುತ್ತಿತ್ತು. ಅಂತೆಯೇ ಮಾತುಗಳದ್ದೇ ಸಾಮ್ರಾಜ್ಯ ಇರುತ್ತಿತ್ತು.  ಆದರೆ ಇಂದು ಹಾಗಿಲ್ಲ ಸ್ವಾರ್ಥ, ಮಾತ್ಸರ್ಯ, ಅಸಹನೆ, ದ್ವೇಶ, ವ್ಯವಹಾರ,  ಇವುಗಳಿಂದಲೇ ಕೂಡಿದ ವಾತಾವರಣ ಇರುವದರಿಂದ ಮೌನವೇ ಅತ್ಯಂತ ಸೂಕ್ತ ಎಂದೆನಿಸುತ್ತದೆ. ತಪ್ಪಿ ಬಾಯಿಂದ ಬಂದ ಸಣ್ಣ ಮಾತೂ, ದೊಡ್ಡ ಕಂದಕವನ್ನೇ ಸೃಷ್ಟಿಸವಹುದು,  ಮಹಾ ಹೆಮ್ಮರವಾಗಬಹುದು, ದೊಡ್ಡ ಚೈನಾ ವಾಲ್ ನಿರ್ಮಿಸಬಹುದು. *ಮಾತಾಡಿ ಕೆಟ್ಟಯೋ....* ಮಾತಿನಿಂದ ಆಪ್ಯಾಯತೆಗಿಂತಲೂ ಅಸಾಮಾಧಾನವೇ ಹೆಚ್ಚು. ಮನಸ್ಸಿರದೆ ಮಾತಾಡುವದರಿಂದ ಅಪಾರ್ಥವೇ ಹೆಚ್ಚು.   "ಮಾರಿ ಯಾಕ ಹರ್ಕೋಬೇಕು ಸುಮ್ ಹಾಯ್ ಬಾಯ್ ಹೇಳಿದ್ರಾಯ್ತಲಾ" ಎಂಬ ಭಾವನೆ ಇರುವದರಿಂದಲೇ ಇಂದು ಮಾತಾಡುವದರಿಂದ ಝಗಳವೇ ಹೆಚ್ಚಾಗುತ್ತದೆ. ಮೌನ ತಾಳುವದರಿಂದ ಪ್ರಶಾಂತವಾಗಿ ಇರದಿದ್ದರೂ ತಮ್ಮಷ್ಟಕ್ಕೆ ತಾವು ಏಕಾಕಿಯಾಗಿಯಾದರೂ ಇರಬಹುದು. *ಮೌನವೇ ಅತ್ಯ...

*ಆವರೀತಿಯಿಂದ ನೀ ಎನ್ನ ಸಲಹುವಿ....... ???????*

Image
*ಆವರೀತಿಯಿಂದ ನೀ ಎನ್ನ ಸಲಹುವಿ....... ???????* ಶ್ರೀಹರಿ ಜಗದ್ರಕ್ಷಕ. ಅವನೇ ಜಗತ್ಸಂಹಾರಕ. ಕಾಯುವ ದೇವ ಶ್ರೀಹರಿ, ಕೊಲ್ಲುವ ಸ್ವಾಮಿಯೂ ಅವನೆ. *ರಕ್ಷಿಸಲು ಅನಂತ ಉಪಾಯಗಳು ಅವನಲ್ಲಿ ಇವೆ, ಕೊಲ್ಲಲೂ ಅನಂತ ಉಪಾಯಗಳು ಅವನಲ್ಲಿ ಉಂಟು* ಅಂತೆಯೇ ಅವನು ಯೋಗೇಶ್ವರ. ಶ್ರೀಹರಿಯು ಜಗತ್ತನ್ನು  ಕಾಯಲು ಅಥವಾ ಕೊಲ್ಲಲು ಮಾಡುವ ಉಪಾಯ ನೀತಿ ರೀತಿಗಳನ್ನು ನಾವು ಅರಿತುಕೊಳ್ಳಬೇಕು. ಅರಿತುಕೊಂಡಾಗಲೇ ಆ ಹರಿಯ ನಿಜವಾದ ಅರಿವು ಆಗುವದು. ಅವನಲ್ಲಿ ಭಕ್ತಿ ವಿಶ್ವಾಸಗಳು ದೃಢವಾಗುವವು. ನಮ್ಮ ಹಿತಕ್ಕಾಗಿ ಕೆಲವನ್ನು ನಾವು ಆರಿಸಿಕೊಂಡಿರುತ್ತೇವೆ. ಹರಿ ಅದನ್ನು ಕಸಿದುಕೊಂಡು ಬಿಡುತ್ತಾನೆ, ಅಂತಹ ಪ್ರಸಂಗದಲ್ಲಿ ಕೆಲ  ಸಲ ಬೇಸರವಾಗುತ್ತದೆ. ಸಿಟ್ಟು ಬರುತ್ತದೆ. ಹತಾಶನಾಗುತ್ತೇನೆ. ಹೀಗಾಗುವದು *ಕಸಿದುಕೊಂಡಿರುವದು ನಮಗೆ ಹಿತ ಎಂಬ ಅರಿವು ಇಲ್ಲದಾಗ ಮಾತ್ರ.* ಒಂದು ಸುಂದರ ಕಥೆ. ಒಂದು ನಾವು. ನಾವಿನಲ್ಲಿ ತುಂಬ ಜನರು. ನಿತ್ಯ ಸಮುದ್ರದಲ್ಲಿ ಓಡಾಡುವದೇ ಅವರ ಕಸುಬು. ವಾತಾವರಣದ ಬದಲಾವಣೆಗಳ ಉತ್ತಮ ಅರಿವು ಇದೆ. ಆ ನಾವು ಸ್ವರ್ಗಕ್ಜೆ ಮಿಗಿಲು ಎಂದು ಹೇಳಬಹುದು. ಎಲ್ಲ ವೈಭವಗಳೂ ಅಲ್ಲಿವೆ. ನಾವಿಕ ದೇವರ ಮಹಾನ್ ಭಕ್ತ. ಆ ವೈಭವದ ನಾವಿನಲ್ಲಿ ದೂರದ ದೇಶದ ಸಂಚಾರಕ್ಕಾಗಿ ದುರ್ದೈವವಶಾತ್ ಅನೇಕ  ದುಷ್ಟರೇ ಅಂದು ಸೇರಿಕೊಳ್ಳುತ್ತಾರೆ. ಆ ದುಷ್ಟರ ನಡೆ, ಅವರ ನುಡಿ, ಅವರ ವ್ಯವಹಾರಗಳಿಗೆ ಬೇಸತ್ತ ನಾವಿಕ,  ಎಂದರೆ  ...

*"ಇಲ್ಲವೆಂದು" ನಿರಾಕರಿಸಲೂ ಕಲಿಯಬೇಕು*

Image
*"ಇಲ್ಲವೆಂದು" ನಿರಾಕರಿಸಲೂ ಕಲಿಯಬೇಕು* ಪ್ರತಿಬಾರಿಯೂ ಯಾವುದೋ ಅಮುಖ್ಯ ವಿಷಯಕ್ಕೆ "ಹು" ಎಂದು ಒಪ್ಪಿಗೆ ಕೊಟ್ಟಿರುತ್ತೇವೆ. ಮತ್ಯಾವುದೋ ಮುಖ್ಯ ವಿಷಯಕ್ಕೆ "ಉಹು" ಆಗಲ್ಲ ಎಂದೂ ನಿರಾಕರಿಸಿರುತ್ತೇವೆ. ಜಗತ್ತಲ್ಲಿ ಹು ಹೌದು ಹೌದಪ್ಪ ಹೌದಮ್ಮಗಳು ಯಾವ ಸಾಧನೆಯನ್ನೂ ಮಾಡಿವೆಯೊ ಬಿಟ್ಟಿವೆಯೋ ಗೊತ್ತಿಲ್ಲ, ಆದರೆ ಸಾಧನೆಯ ಹಂಬಲ ಇದ್ದವನಿಗೆ *ಊಹು* ಎಂದು ಹೇಳಲು ಮಾತ್ರ ಬಹಳ ದಮ್ ಇರಬೇಕು. ಒಳ್ಳೆಯ ಕಾರ್ಯಕ್ಕೆ ಹೂ ಅನ್ನದ ವ್ಯಕ್ತಿ ಅಪದ್ದಕಾರ್ಯಕ್ಕೆ ಹು ಎಂದು ಒಪ್ಪಿಗೆ ಕೊಟ್ಟೇಬಿಡುತ್ತಾನೆ. ಇದು ಸಾಮಾನ್ಯ.... ಟೀ ಕುಡಿಯಲು ಬರ್ತೀಯಾ  ಓಕೆ... ಟೀಕೆ ಟಿಪ್ಪಣಿಗೆ ಬರ್ತೀಯಾ ಖಂಡಿತ....  ಸಿನೆಮಾಗೆ ಬರ್ತೀಯಾ ಓಕೆ... ಎಂದು ಹೇಳವ ಬದಲು ಧೈರ್ಯದಿಂದ ಆಗಲ್ಲ ಊಹು ಎಂದು ಹೇಳಲು ಕಲಿಯಲೇಬೇಕು. *ಅಮುಖ್ಯ ಅಪದ್ಧ  ವಿಷಯಗಳಿಗೆ ಒಪ್ಪಿಗೆ ಕೊಟ್ಟಾಗ, ಒಂದು ಅತೀ ಮುಖ್ಯವಿಷಯಕ್ಕೆ ಅಸಮ್ಮತಿ ಕೊಟ್ಟಿರುತ್ತೇವೆ* ಇದು ನೂರರಷ್ಟು ಖಚಿತ. ಸಾಯಂಕಾಲ ಸಿನೆಮಾಕ್ಕೆ ಹೋಗಲು, ಧಾರವಾಹಿ ನೋಡಲು ಒಪ್ಪಿಗೆ ಕೊಟ್ಟಿದ್ದೀವು ಎಂದರೆ  ಮುಖ್ಯವಾದ ಓದಿಗೆ, ಅತ್ಯಂತ ಮುಖ್ಯವಾದ ಸಂಧ್ಯಾವಂದನ ಪಾರಾಯಣಗಳಿಗೆ ಕೈ ಕೊಟ್ಟಿದ್ದೇವೇ ಎಂದೇ ಅರ್ಥ.  ಹೆಚ್ಚೊತ್ತು ಮಲಗಲು ಒಪ್ಪಿಗೆ ಕೊಟ್ಟಿದ್ದೇವೆ ಎಂದರೆ, ಪೂಜೆಗೆ ಕೈ ಕೊಟ್ಟಿದ್ದೇವೆ ಎಂದೇ ಅರ್ಥ. ಎಲ್ಲರಿಗೂ ಬೇಕಾದ ಎಲ್ಲವನ್ನೂ ಮಾಡಲು ಎಲ್ಲರಿಂದಲೂ ಸಾಧ್ಯವೇ ಇಲ್ಲ. ಇದು ಯಶಸ್ವೀ...

*ಪ್ರೀತಿಯಲ್ಲಿರುವ ಶಕ್ತಿ.....*

Image
*ಪ್ರೀತಿಯಲ್ಲಿರುವ ಶಕ್ತಿ.....* ಮನುಷ್ಯ ಪ್ರೀತಿಸುವದನ್ನು ಎಂದು ಕಲಿಯುತ್ತಾನೆಯೋ ಅಂದೇ ಅವ ಮಾನವ ನಾಗುತ್ತಾನೆ. ಕೃಮಿ ಕೀಟಗಳಿಂದ ಆರಂಭಿಸಿ ಎಲ್ಲ ಜೀವಗಳಲ್ಲೂ ಇರುವಂತಹದ್ದು ಪ್ರೀತಿ. ದೇವರಲ್ಲೂ ಪ್ರೀತಿ ತುಂಬ ಇದೆ. ಪ್ರೀತಿ ಎಷ್ಟು ಸಮೃದ್ಧವಾಗಿರುತ್ತದೆಯೋ ಅಷ್ಟೇ ಪ್ರೀತ್ಯಾಸ್ಪದರ ಸಣ್ಣ ಪುಟ್ಟ ಸಮಸ್ಯೆಗಳೂ ಹೆಮ್ಮರವಾಗಿ ಕಾಣುತ್ತವೆ. ಆ ಸಮಸ್ಯೆ ಬಗೆಹರಿಸಲು ನಾನೇ ಇರಬೇಕು ಎಂಬ ಭಾವನೆಯೂ ಮೂಡುತ್ತದೆ. ಅದೇ ಪ್ರೀತಿ ಕಡಿಮೆ ಆಯಿತು ಎಂದಾದರೆ ದೊಡ್ಡ ಸಮಸ್ಯೆ ಆಪತ್ತುಗಳಲ್ಲಿ ಸಿಲುಕಿದರೂ ಅದು ಅವರಿಗೆ ಬಂದ ಆಪತ್ತು ಎಂದನಿಸುವದೇ ಇಲ್ಲ. *ಪ್ರೀತಿ ಇದು one wey ಅಲ್ಲ. ಕೊಟ್ಟು ತೆಗೆದು ಕೊಳ್ಳುವಂತಹದ್ದೇ ಪ್ರೀತಿ.* ಕೊಡಲು ಹಿಂಜರಿಯುವ ವ್ಯಕ್ತಿಗೆ ಪ್ರೀತಿ ಸಿಗದು. *ಪ್ರೀತಿಯೇ ಅತ್ಯುತ್ತಮ ಭಾವನೆ...* ಇಂದು ಒಂದು ಮನೆ, ಅನ್ನ, ಬಟ್ಟೆ, ಬೈಕು, ಮೊಬೈಲು, ಪುಸ್ತಕ, ಧರ್ಮ, ಜ್ಙಾನ, ಗದ್ದಲ, ಝಗಳ, ದೇವರು, ವ್ಯಕ್ತಿ, ಸಹನೆ, ಕ್ಷಮ, ಕೋಪ, ತಾಪ, ಸಿಡುಕು, ಸಿಟ್ಟು, ದೀರ್ಘಸೂತ್ರಿ (ಸಣ್ಣದಾದ್ದನ್ನು ಎಳೆದುಕೊಳ್ಳುತ್ತಾ ಹೋಗುವದು), ಹೀಗೆ ಯಾವದನ್ನು ಆಲಂಗಿಸುವದೇನಿದೆ  ಅವುಗಳಮೆಲೆ ಪ್ರೀತಿ ಇದೆ ಎಂದರ್ಥ. *ಪ್ರೀತಿಯಲ್ಲಿ ನಿಸ್ವಾರ್ಥತೆ ಹೆಚ್ಚಿರುತ್ತದೆ* ಪ್ರೀತಿ ತುಂಬಿದ ಮರ. ತಾನು ಸ್ವಯಂ ಬಿಸಲಿನಲ್ಲಿ ನಿಂತಿದ್ದರೂ ಪಕ್ಷಿಗಳಿಗೆ ಮನೆಯಾಗಿದೆ, ದಾರಿಹೋಕರಿಗೆ ನೆರಳು ನೀಡುತ್ತದೆ, ಹಸಿದವರಿಗೆ ಹಣ್ಣು ಕೊಡುತ್ತದೆ ಇಷ...

*ಓ ಭಕ್ತಪ್ರಿಯ.... !!!! ನಿನಗೆ ನಮಃ*

*ಓ ಭಕ್ತಪ್ರಿಯ.... !!!! ನಿನಗೆ ನಮಃ* ಜಗದೊಡೆಯನಾದ ದೇವರನ್ನು *ಭಕ್ತಪ್ರಿಯ* ಎಂದು ಅನೇಕ ಕಡೆ, ಅನೇಕಬಾರಿ ಶಾಸ್ತ್ರ ಕರೆದಿರುವದು ಕಂಡಿದೆ. ಜೀವನದ ನೂರಾರು ಸಾವಿರಾರು ಉದ್ಯೇಶ್ಯಗಳಲ್ಲಿ "ದೇವರಿಗೆ ಪ್ರಿಯನಾಗುವದೇ* ಮಹೋದ್ಯೇಶ್ಯ. "ಇರಲೇ ಬೇಕಾದ ಗುಣಗಳಲ್ಲಿ ಮೊಟ್ಟಮೊದಲ ಗುಣ *ಭಕ್ತಿ* ಎಂದಾದರೆ, ದೇವರಿಂದ ಸಂಪಾದಿಸುವದರಲ್ಲಿ ಮೊದಲಿಗವಾದ ಗುಣ *ಪ್ರೀತಿ.*  ಭಗವದ್ಭಕ್ತಿ - ಭಗವತ್ಪ್ರೀತಿಗಳಿಂದ ಅಭಿವ್ಯಕ್ತವಾದ ಸಂಬಂಧದ ಕುರುಹು ಎಂದರೆ *ಭಕ್ತಪ್ರಿಯ.* *ಭಕ್ತಿ ತುಂಬ ಶ್ರೆಷ್ಠ ಗುಣವೇ... ???* ರಾಘವೇಂದ್ರ ಗುರುಸಾರ್ವಭೌಮರು ಶ್ರೀಮದಾಚಾರ್ಯರನ್ನು ಸ್ತೋತ್ರ ಮಾಡುವಾಗ *ಶ್ರೀವಿಷ್ಣುಭಕ್ತ್ಯಾದ್ಯನಂತ ಗುಣಪೂರ್ಣ* ಎಂದು ಕೊಂಡಾಡುತ್ತಾರೆ. ಇದರಿಂದಲೇ ತಿಳಿದು ಬರುತ್ತದೆ ಭಕ್ತಿ ಮೊಟ್ಟಮೊದಲ ಮಹಾಗುಣ ಎಂದು. ಅಂತೆಯೇ ಶ್ರೀಕೃಷ್ಣಪರಮಾತ್ಮ *ಯೋ ಮದ್ಭಕ್ತಃ ಸ ಮೇ‌ಪ್ರಿಯಃ* (ಯಾರು ಭಕ್ತರೋ ಅವರೇ ನನಗೆ ಪ್ರಿಯರು) ಎಂದು ಗೀತೆಯಲ್ಲಿ ಹತ್ತಾರು ಬಾರಿ ಹೇಳುತ್ತಾನೆ. " ಜೊತೆಗೆ *ಭಕ್ತ್ಯಾ ತು ಅನನ್ಯಯಾ ಶಕ್ಯಾ ಅಹಮೇವಂ ವಿಧೋರ್ಜುನ* ಅನನ್ಯವಾದ ಭಕ್ತಿಯಿಂದಲೇ ಇಂತಿಥ ನಾನು ಕಾಣಲ್ಪಡುತ್ತೇನೆ" ಎಂದೂ ಕೃಷ್ಣ ಸಾರುತ್ತಾನೆ.ಭಕ್ತಿ ಎಂಬ ಗುಣ ಹೊಂದಿದ ಕಾರಣ, ಪ್ರಿಯರಾದವರಲ್ಲಿ ಭಗವದ್ರಕ್ಷಣೆಯೂ ತುಂಬ ಕಂಡು ಬರುತ್ತೆ. ಮೋಕ್ಷಾದಿ ಪುರುಷಾರ್ಥಗಳು ದೊರೆಯುವದೂ ಭಕ್ತಿ ಇಂದಲೇ. ಪ್ರಿಯರಾದವರಿಗೇನೇ. *ಜ್ಙಾನ ಇದು ಉತ್ತಮವ...

*ಅಂತರಂಗದ ಅನಾವರಣೆಯಾಗಬೇಕು.....*

*ಅಂತರಂಗದ ಅನಾವರಣೆಯಾಗಬೇಕು.....* ನಮ್ಮ ಅಂತರಂಗ ನಮಗೆ ಗೊತ್ತಿದೆಯಾ... ?? ಸರ್ವಥಾ ಇಲ್ಲ. ಏಕೆಂದರೆ ಅನೇಕ ಧೂಳುಗಳಿಂದ ಆವರಿತವಾಗಿದೆ ಅಂತರಂಗ, ಆದ್ದರಿಂದ ನಮ್ಮ ಅಂತರಂಗ ಹೇಗಿದೆ ಎಂವುವದು ತಿಳಿಯಲಾಗಿಲ್ಲ. ಶಾಪಿಂಗ ಮಾಲ್ ಗೆ ಹೋಗಿದ್ದೆ. ಅಲ್ಲಿ ತುಂಬ ರಿಚ್ ರಿಚ್ ಜನ. ಗ್ರಾಹಕರ ಗಮನ ವಸ್ತುಗಳ ಕಡೆಯೇ. ಅಂತರಂಗದೆಡೆ ಇರಲೆ ಇಲ್ಲ ಎಂದರೆ ತಪ್ಪಾಗದು. ಸೊಗಸಾದ ಉಡುಗೆ, ತೊಡುಗೆ ತೊಟ್ಟಿದ್ದರು. ತೋರಿಕೇಯೇ ಸರ್ವಸ್ವ ಎಂದು ಸ್ಪಷ್ಟವಾಗಿ ತೋರುತ್ತಿತ್ತು. ಅಂಗಡಿಗಳು ಗ್ರಾಹಕರ ಹುಚ್ಚಿಗೆ ಬೇಕಾದ ಎಲ್ಲ ಸವಲತ್ತುಗಳನ್ನೂ ಒದಗಿಸಿಕೊಟ್ಟಿದ್ದರು. ಅಲ್ಲಿ ನೋಡುವ ಪ್ರತಿ ವಸ್ತುವೂ ಅತ್ಯಗತ್ಯ ಎಂದೇ ಪ್ರತಿಬಿಂಬಿಸುತ್ತಿದ್ದವು. ಅವುಗಳನ್ನು ತೆಗೆದುಕೊಂಡೇ ತೀರಬೇಕು ಎಂಬ ಭಾವನೆ ಅಚ್ಚೊತ್ತುವ ಹಾಗೆ ಜೊಡಿಸಿಟ್ಟಿದ್ದರು. "ಜನ ಮರುಳೋ ಜಾತ್ರೆ ಮರುಳೋ" ಎಂದಾಗಿತ್ತು. ಆ ಮಾರುಕಟ್ಟೆಯ ಬ್ರಾಂಡ್ ಗೆ  ಜನ ಮರುಳಾಗಿ ಉಪಯುಕ್ತವೋ ಅನುಪಯುಕ್ತವೋ ಎಂದು ಕ್ಷಣ ಯೋಚಿಸದೆಯೇ ತೆಗೆದುಕೊಳ್ಳುತ್ತಾ ಹೋಗುತ್ತಿದ್ದರು. ಎಷ್ಟು ವಿಚಿತ್ರಾ ಎಂದರೆ ತಾನು ತೆಗೆದುಕೊಳ್ಳುವ ಉಡುಗೆ ತೊಡಿಗೆ ಇನ್ನೊಬ್ಬರು "ಡಬ್ಬಾ ಇದೆ" ಎಂದು ಬಿಸಾಡಿ ಹೋಗಿರುವಂತಹದ್ದೆ. ಆ ತರಹದ ವಸ್ತುವನ್ನು ಮನೆಗೆ ತಂದರೆ ಕೆಲವರಿಗೆ ಸಂತೋಷ, ಮತ್ತೆ ಕೆಲವರಿಗೆ ಆ ಪದಾರ್ಥ "ಕೆಟ್ಟ ಡಬ್ಬಾ." ನನಗೂ ದುಡ್ಡು ತೆತ್ತಿದ್ದಕ್ಕೆ  ಖುಶಿ ಅಷ್ಟೆ..... ಸಂತೃಪ್ತಿ ಸ...

*ಏಶೋದೆ ನಿನ್ನ ಕಂದಗೇಸು ರೂಪವೇ ಏ ಸುರೂಪವೇ.....*

Image
*ಏಶೋದೆ ನಿನ್ನ ಕಂದಗೇಸು ರೂಪವೇ ಏ ಸುರೂಪವೇ.....* ಅನಂತ ರೂಪ ಗುಣ ಕ್ರಿಯೆಗಳಿಂದ ಅಭಿನ್ನ ನಮ್ಮ ನಾರಾಯಣ. ಆ ನಾರಾಯಣ ಹೊತ್ತು ರೂಪಗಳೂ ಅನಂತಾನಂತ. ಅವುಗಳಲ್ಲಿ ಕೃಷ್ಣಾವತಾರವೂ ಒಂದು. ಬ್ರಹ್ಮದೇವರಿಂದಾರಂಭಿಸಿ ಯಾವತ್ತೂ ಜೀವರೂ ಸೃಷ್ಟಿಗೆ ಬರುವದು ಪಡೆಯುವದಕ್ಕಾಗಿಯೇ, ಅಂದರೆ ತಮಗೋಸ್ಕರವಾಗಿಯೇ. ಆದರೆ ನಮಗೋಸ್ಕರ, ನಮ್ಮ ಉದ್ಧಾರಕ್ಕೋಸ್ಕರ ಬರುವವನು ದೇವರು ಮಾತ್ರ. ಇದು ದೇವರ ಒಂದು *ಅನಂತ ಕರುಣಾ ರೂಪ.* ಅನಂತ ಕರ್ಮಗಳನ್ನು ಹೊತ್ತು, ಅನಂತ ಆನಂದವನ್ನು ಪಡೆಯಲು ಹಂಬಲಿಸಿ ನಾವು ಭುವಿಗಿಳಿದು ಬಂದರೆ, ಯಾವ ಕರ್ಮಗಳ ಭಾರವಿಲ್ಲದೇ ಸ್ವಯಂ ಅನಂತ ಆನಂದ ರೂಪನಾಗಿ ಬಂದು, ಅನಂತ ಆನಂದ ರೂಪನಾಗಿಯೇ ಇದ್ದು, ಅನಂತ ಆನಂದ ರೂಪನಾಗಿಯೇ ಉಳಿಯುವವನು ನಮ್ಮ ಕೃಷ್ಣನ ಎರಡನೇಯದಾದ *ಭವ್ಯಸ್ವರೂಪ .* ಭೀಮ, ಅರ್ಜುನ, ಉದ್ಧವ, ಮೈತ್ರೇಯರು ಮೊದಲಾದವರನ್ನು ಇಟ್ಟುಕೊಂಡು ಸಮಗ್ರ ಜಗತ್ತಿಗೇ ಗೀತೆ ಭಾಗವತ ಮೊದಲಾದ ದಿವ್ಯಜ್ಙಾನವನ್ನು ದಯಪಾಲಿಸಿದ *ಅನಂತಜ್ಙಾನ ರೂಪ* ಮೂರನೇಯದು. ಪೂತನೆ, ಶಕಟ, ಕಂಸ ನರಕ ಶಿಶುಪಾಲ ದಂತವಕ್ತ್ರ ಮೊದಲಾದ ಮಹಾ ಮಹಾ ದೈತ್ಯರನ್ನು ಸ್ವಯಂ ತಾನು ಸಂಹರಿಸಿ, ಜರಾಸಂಧ ದುರ್ಯೋಧನ ಬಕಾಸುರ ದುಃಶ್ಶಾಸನ ಮೊದಲಾದವರನ್ನು ಪಾಂಡವರ ಮುಖಾಂತರ ಸಂಹರಿಸಿರುವ *ಮಹಾ ಬಲರೂಪ* ನಾಲಕನೇಯದು. ಯಶೋದೆ, ನಂದ, ರೋಹಿಣೀ ಮೊದಲು ಮಾಡಿ ಸಕಲ ಗೋಪಾಲಕರಿಗೂ ಹಾಗೂ ಗೋಪಿಕಾಸ್ತ್ರೀಯರಿಗೂ ದಿವ್ಯವಾದ, ಅದ್ಭುತವಾದ, ಮನಮೋಹಕ, ಮೋಕ್ಷಪ್ರದ ಲೀಲೆಗಳನ್ನ...

*ನಾಥನು ನೀನು, ಅನಾಥನು ನಾನಯ್ಯ*

Image
*ನಾಥನು ನೀನು, ಅನಾಥನು ನಾನಯ್ಯ* "ಮಮ ಸ್ವಾಮೀ ಹರಿರ್ನಿತ್ಯಂ ಸರ್ವಸ್ಯಪತಿರೇವ ಚ" ಶ್ರೀಮದಾಚಾರ್ಯರು ತಿಳಿಸಿದಂತೆ ಶ್ರೀಹರಿಯೇ ಎನ್ನ ನಾಥ, ಎನ್ನೊಡೆಯ, ಎನ್ನ ಸ್ವಾಮಿ. ಇದ್ದದ್ದನ್ನು ಬಿಟ್ಟು ಇಲ್ಲದ್ದನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಸ್ವಭಾವ ನನ್ನದು. ಅಂತೆಯೇ ನಾನೇ ನಾಥ, ಒಡೆಯ, ಸ್ವಾಮಿ ಎಂದು ಬೀಗುತ್ತೇನೆ. ಆದರೆ ನಿಜವಾಗಿಯೂ ನಮ್ಮೊಟ್ಟಿಗೆ ಬರುವದು ಎಂದರೆ ಏನಿದೆಯೋ ಅದೇ ಹೊರತು, ಇನ್ಯಾವದೂ ಅಲ್ಲ. ನನ್ನ ಆಭರಣ, ನನ್ನ ಒಡವೆ, ನನ್ನ ವಸ್ತ್ರ, ನನ್ನ ಕಾರು, ನನ್ನ ಸುಖ, ನನ್ನ ಸಂತೋಷ ಇವುಗಳು ನನ್ನೊಟ್ಟಿಗೇ ಇರುವಂಥವುಗಳು. ಆದರೆ ನಾನಗೆ ಮಾತ್ರ ಯಾವದು ನನ್ನದಲ್ಲವೋ ಆ ವಸ್ತುಗಳೇ ಚೆನ್ನಾಗಿ ಕಾಣತ್ತೆ.  ಅಂತೆಯೇ ಇನ್ನೊಂದರಿಂದ ಸಂತೋಷ ಪಡಲು ಹಂಬಲಿಸುತ್ತೇನೆ.  "ಅದು ನನ್ನೊಟ್ಟಿಗೆ ಬರಲ್ಲ. ನಂದು ಸೇರಲ್ಲ" ಕೊನೆಗೆ ನೆಮ್ಮದಿ ಸಿಗಲ್ಲ. ಹಾಗೆಯೇ ಇದೆ ಇಂದಿನ ಎನ್ನ ಸ್ಥಿತಿ. "ನೀನು ಸ್ವಾಮಿ, ನಾನು ದಾಸ" ಎಂಬ ತಿಳುವಳಿಕೆಯೇ ಮುಕ್ತಿಗೆ ಮೂಲ. ಅದನ್ನು ನಾನು ಒಪ್ಪಿಕೊಳ್ಳಲ್ಲ.  (ನಾನೇ ಸ್ವಾಮಿ  ಎಂದು ಬೀಗುತ್ತೇನೆ) ಹಾಗಾಗಿ ನನ್ನದಲ್ಲದ ಸ್ವಾಮಿತ್ವವನ್ನೇ ಒಪ್ಪಿಕೊಂಡು ಅಪ್ಪಿಕೊಳ್ಳುವದಕ್ಕೆ ಹೋಗುತ್ತೇನೆ. "ನಾನು ಸ್ವಾಮಿ ಆಗಲ್ಲ,  ಹೊಂದಬಹುದಾದ  ಮುಕ್ತಿ ಪಡೆಯುವದಿಲ್ಲ." ಇದು ಇಂದಿನ ಸಂಸ್ಥಿತಿ ಆಗಿದೆ. *ಹೇ ಶ್ರೀನಾಥ....!!!!!* ಲಕ್ಷ್ಮೀದೇವಿಯವರಿಗೇ ಒಡೆಯನಾದ, ...