Posts

Showing posts from April, 2022

*ಹನುಮಜ್ಜಯಂತೀ ಮಹೋತ್ಸವ*

Image
 *ಹನುಮಜ್ಜಯಂತೀ ಮಹೋತ್ಸವ* ಚೈತ್ರ ಶುಕ್ಲ ಪೂರ್ಣಿಮೆಯ ದಿನದಂದು ಪರಿಪೂರ್ಣ ಜ್ಙಾನ ಭಕ್ತಿ ವಿರಕ್ತಿ ಧರ್ಮ ಧೈರ್ಯ ಸ್ಥೈರ್ಯ ಪರಮೈಶ್ವರ್ಯ ಇತ್ಯಾದಿ ಅನಂತ ಗುಣಗಳ ಗಣಿಯಾದ ಹನುಮಂತದೇವರ ಅವತಾರದ ಮಹಾ  ಸುದಿನ. ಈ ಗುಣವಂತ ಜ್ಙಾನವಂತ ಭಕ್ತಿವಂತನಾದ ಹನುಮಂತ ನಮ್ಮಲ್ಲಿ ಹಾಗೂ ನಮ್ಮೆಲ್ಲರ ಮನದಲ್ಲಿ ಜನಿಸಲೇಬೇಕು.  *ಜನನ* ಸಂತಾನ ಸಹಜ. ಅತ್ಯಂತ ಯೋಗ್ಯ ಸಂತನಕ್ಕೆ ತಪಸ್ಸೇ ಮೂಲ. ಅಂತೆಯೇ ಸಾವಿರಾರು ವರ್ಷಗಳ ತಪಸ್ಸಿನ ಪ್ರಭಾವದಿಂದ ಕೇಸರಿ ಮತ್ತು ಅಂಜನಾದೆವಿಯಲ್ಲಿ ಜನಿಸಿದ ಧೀರ ಹನುಮಂತ. ಅಂಜನೆಯಂತೆ ತಪಸ್ಸು ಮಾಡೋಣ. ಆಂಜನೇಯನನ್ನೇ ಪಡೆಯೋಣ. *ಜ್ಙಾನಿ* ಹುಟ್ಟಿದ ವ್ಯಕ್ತಿಗೆ ಜ್ಙಾನ ಮೂಲ. ಜ್ಙಾನವಿದ್ದರೆ ಅವನು ಅವನಾಗಿ ಉಳಿಯುವ. ಜ್ಙಾನವಿಲ್ಲ ಎಂದಾದರೆ ಅವ ಜಡಕ್ಕೆ ಸಮ. ಹಾಗಾಗಿ ಹುಟ್ಟಿದ ವ್ಯಕ್ತಿಯ ಹಪಹಪಿ ಜ್ಙಾನಕ್ಕಾಗಿಯೇ ಇರಬೇಕು. ಇನ್ಯಾವದಕ್ಕೂ ಇರುವದು ತರವಲ್ಲ. ಜ್ಙಾನದ ನಂತರವೇ ಉಳಿದದ್ದೆಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಹನುಮಂತ. ಹುಟ್ಟಿದೊಡನೆಯೇ ಸೂರ್ಯನ ಸನಿಹಕ್ಕೇ ನೆಗೆದು, ಸೂರ್ಯಾಂತರ್ಯಾಮಿ ನಾರಾಯಣನಿಂದ ಸಮಗ್ರ ವ್ಯಾಕರಣವನ್ನು ಅಧ್ಯಯನ ಮಾಡಿದ ಮಹಾಜ್ಙಾನಿ ಹನೂಮಾನ್. ತನ್ನ ಹೆಸರಲ್ಲೇ "ಪೂರ್ಣಜ್ಙಾನೀ" ಎಂದು ಪ್ರಸಿದ್ಧಿ ಪಡೆದ ಹನೂಮಾನ್. *ಸೇವೆ* ನಾನು ಎಂದಿಗೂ ಸ್ವಾಮಿಯಲ್ಲ. ನಾ ಏನಿದ್ದರೂ ದಾಸನೇ. ದಾಸನ ಸೌಭಾಗ್ಯ ಸ್ವಾಮಿಯ ಸೇವೆಯೇ. ನಿರಂತರ ಸೇವೆಯೇ ನನ್ನ ಉಸಿರು ಎಂದೇ ಭಾವಿಸಿ ನಿರಂತರ ಸೇವಾಧುರಂಧರನಾದವ

ಜಲ ಜಲ ಜಲ...

Image
 ಜಲ ಜಲ ಜಲ ... ನೀರಿಲ್ಲದೆ ಜೀವನವಿಲ್ಲ. ನೀರು ಅಮೃತಕ್ಕೆ ಸಮಾನ. ನೀರಿದ್ದರೆ ದೇವತೆಗಳು ಇದ್ದ ಹಾಗೆಯೇ ಅಮರರಾಗಿ ಜೀವಿಸಬಹುದು. ಅಭಿವೃದ್ಧಿಯ ಜೀವನಕ್ಕಾಗಿ ಮಾಡಿಕೊಂಡ ಉಪಾಯಗಳಿಂದಲೇ ಇಂದು ಅನುಭವಿಸುವ ಜಲಜ್ಷಾಮ. ೧) dam ಗಳನ್ನು ಕಟ್ಟಿ ಎಲ್ಲೆಡೆ ನೀರಿನ ಸಮೃದ್ಧಿಯನ್ನು ನಿಲ್ಲಿಸಿದರು. ೨) ನದಿ ಹರಿಯುವ ಎಲ್ಲೆಡೆ ಅಂತರ್ಜಲ ಕ್ಷೀಣಿಸಲು ಇದುವೂ ಒಂದು ಕಾರಣವಾಯಿತು. ೩) ನದಿ ದಡದ ಎಲ್ಲ ವೃಕ್ಷಗಳು ಒಣಗಿದ ಹೋದವು. ಆ ಒಂದೊಂದು ವೃಕ್ಷಗಳೂ ಮೇಘಗಳನ್ನು ಹಿಡಿದಿಡುವಷ್ಟು ಸಮರ್ಥವಾದವುಗಳು ಎನ್ನುವದನ್ನು ಮರೆಯುವದು ಬೇಡ. ೪) ಎಂದೆಂದೂ ಒಣಗದ ಅನೇಕ ನದಿಗಳು ದಿನ ದಿನಕಳೆದರೆ ಸಾಕು ಒಣಗಲು ಪ್ರಾರಂಭಿಸಿದವು. ೫)  ಒಣಗಿದರೂ ನೀರನ್ನು ಹಿಡಿದುಡುವ ಸಾಮರ್ಥ್ಯವಿರುವ ಮರಳನ್ನು (ಉಸುಕು) ಒಣ ನದಿಗಳಲ್ಲಿ ಲೂಟಿ ಮಾಡಿದರು. ಚಿಲುಮಿಗಳಲ್ಲಿ ಸಿಗುವ ಅಲ್ಪ ಸ್ವಲ್ಪ ನೀರೂ ಹೋಯಿತು.  ೬) Correntಇಲ್ಲದ ಜೀವನ ಘೋರವೇನಾಗಿರಲಿಲ್ಲ. (ನಾವೆಲ್ಲರೂ ಆ ಸ್ಥಿತಿಯನ್ನು ಅನುಭವಿಸಿದ್ದೇವೆ) ಜೀವನಕ್ಕೆ ಅತ್ಯುಪಯುಕ್ತವಾಗದ corrent ಉತ್ಪಾದನೆಗೆ ಅತಿ ಮಹತ್ವ ಕೊಟ್ಟು ನದಿಗಳ ಅರ್ಧದಷ್ಟು ನೀರನ್ನು ಪೋಲು ಮಾಡಿದೆವು.  ಈ ವಿದ್ಯುತ್ತಿನ ಸರಿಯಾಗಿ ಬಳೆಸಲು fridge,  air condition ಮುಂತಾದ ಅನೇಕ ಪದಾರ್ಥಗಳನ್ನು ಬಳಿಸಿ ಜಗತ್ತಿನ ತಾಪಮಾನವನ್ನು ನಾವೇ  ಬೆಳಿಸಿದೆವು . ಹೊರಗಿನ ತಂಪು ನಾಶವಾಗಿಯೇ ಹೋಯಿತು. ಸಾವಿರಾರು ಜನರಿಗೆ ಅತ್ಯುಪಯುಕ್ತವಾಗಿದ್ದವು ಹಿಂದಿನ ಕೆರೆ ಭಾ

*ಇಂದು ಮೂರ್ಖರ ದಿನಾಚರಣೆ*

Image
 * ಇಂದು ಮೂರ್ಖರ ದಿನಾಚರಣೆ * ಏನಿದೆಯೋ ಅದನ್ನು ಬಿಟ್ಟು ಇನ್ನೇನೋ ತಿಳಿದುಕೊಳ್ಳುವವ ಮೂರ್ಖ. ಮೂರ್ಖರು ಯಾರು... ???  ಯಾರಿದ್ದಾರೆಯೋ ಇಲ್ಲೋ ತಿಳಿಯದು, ನಾನಂತೂ ಮಹಾ ಮೂರ್ಖನೆ ಸರಿ.  ನಾನು ಯಾಕೆ ಮೂರ್ಖ.... ??  ೧) ಎಲ್ಲವೂ ನಾನು ಎಂದು ಹೆಳಿಕೊಳ್ಳುತ್ತೇನೆ ಅದುವೇ ಮೂರ್ಖರ ಲಕ್ಷಣ, ೨) ಏನೆಲ್ಲ ಮಾಡಿದ್ದೇನೆ ಅದೆಲ್ಲವೂ ನಾನೆ ಮಾಡಿದ್ದೇನೆ ಎಂದೇ ಬೊಗುಳುತ್ತೇನೆ ಆದ್ದರಿಂದಲೇ ನಾನು ಶತ ಮೂರ್ಖ.  ವಿವೇಕಭರಿತ  ಕಾರ್ಯವನ್ನು ಬಿಟ್ಟು, ಯೋಚನಾಪೂರ್ಣ ವಿಚಾರ ಹವ್ಯಾಸಗಳನ್ನು ಜರಿದು, ಕ್ಷುಲ್ಲಕ ಕ್ಷುದ್ರ ವಿಚಾರಗಳನ್ನು ಕಾರ್ಯಗಳನ್ನು ಅಪ್ಪಿಕೊಳ್ಳುವ ನನಗೆ ಮೂರ್ಖ ಅನ್ನದೆ ಇನ್ನೇನು ಅನ್ನಬೇಕು..  ನಾನು ಮೂರ್ಖನಲ್ಲ ಎಂದೇ ಗುರುತಿಸಬೇಕಾದರೆ ಏನು ಮಾಡುವದು.... ???? ನಾನು ಎನ್ನುವದನ್ನು ಕಳೆದುಕೊಂಡಾಗ ಅಥವಾ ಬಿಟ್ಟಾಗ ನಾನು ಬುದ್ಧಿವಂತನು ಎಂದಾಗುವೆ. ಅಂತೆಯೇ "ನಾನು ಹೋದರೆ ಹೋದೇನು" ಎಂದು ಉದ್ಗಾರ ತೆಗೆದರು ಕನಕದಾಸರು. ಯೋಚನಾಭರಿತ ಉಚ್ಚವಿಚಾರಗಳನ್ನು ಸುದೀರ್ಘಕಾಲದಲ್ಲಿಯೂ ಹಿತವೇ ಆಗುವ ಕಾರ್ಯವನ್ನು ಅರಿಸುವವ ಬುದ್ಧಿವಂತ.  ನಾನು ನಾನೇ ಆಗಿದ್ದೇನೆಯೇ ಹೊರತು ನಾನು ಮತ್ತೇನೂ ಆಗಿಲ್ಲ. ಮತ್ತೇನೂ ಆಗದ ನಾನು, ಎಲ್ಲವೂ ನಾನೇ ಎಂದು ಹೇಳಿಕೊಂಡರೆ ಮೂರ್ಖನೇ ತಾನೆ.....  ನಾನು ಏನು ಮಾಡಿದ್ದೇನೆ ಎಲ್ಲವೂ ಎನ್ನಲಿ ನಿಂತ ದೇವರೇ ಮಾಡಿಸಿದ್ದಾನೆ. ಎಲ್ಲವನ್ನೂ ಮಾಡಿಸಿರುವದು ದೇವರು. ನಾನು ತಿಳಿದು ಕೊಂಡಿದ್ದು "ನಾನು ಮಾಡಿ