*ಓ ಭಕ್ತಪ್ರಿಯ.... !!!! ನಿನಗೆ ನಮಃ*
*ಓ ಭಕ್ತಪ್ರಿಯ.... !!!! ನಿನಗೆ ನಮಃ*
ಜಗದೊಡೆಯನಾದ ದೇವರನ್ನು *ಭಕ್ತಪ್ರಿಯ* ಎಂದು ಅನೇಕ ಕಡೆ, ಅನೇಕಬಾರಿ ಶಾಸ್ತ್ರ ಕರೆದಿರುವದು ಕಂಡಿದೆ. ಜೀವನದ ನೂರಾರು ಸಾವಿರಾರು ಉದ್ಯೇಶ್ಯಗಳಲ್ಲಿ "ದೇವರಿಗೆ ಪ್ರಿಯನಾಗುವದೇ* ಮಹೋದ್ಯೇಶ್ಯ.
"ಇರಲೇ ಬೇಕಾದ ಗುಣಗಳಲ್ಲಿ ಮೊಟ್ಟಮೊದಲ ಗುಣ *ಭಕ್ತಿ* ಎಂದಾದರೆ, ದೇವರಿಂದ ಸಂಪಾದಿಸುವದರಲ್ಲಿ ಮೊದಲಿಗವಾದ ಗುಣ *ಪ್ರೀತಿ.* ಭಗವದ್ಭಕ್ತಿ - ಭಗವತ್ಪ್ರೀತಿಗಳಿಂದ ಅಭಿವ್ಯಕ್ತವಾದ ಸಂಬಂಧದ ಕುರುಹು ಎಂದರೆ *ಭಕ್ತಪ್ರಿಯ.*
*ಭಕ್ತಿ ತುಂಬ ಶ್ರೆಷ್ಠ ಗುಣವೇ... ???*
ರಾಘವೇಂದ್ರ ಗುರುಸಾರ್ವಭೌಮರು ಶ್ರೀಮದಾಚಾರ್ಯರನ್ನು ಸ್ತೋತ್ರ ಮಾಡುವಾಗ *ಶ್ರೀವಿಷ್ಣುಭಕ್ತ್ಯಾದ್ಯನಂತ ಗುಣಪೂರ್ಣ* ಎಂದು ಕೊಂಡಾಡುತ್ತಾರೆ. ಇದರಿಂದಲೇ ತಿಳಿದು ಬರುತ್ತದೆ ಭಕ್ತಿ ಮೊಟ್ಟಮೊದಲ ಮಹಾಗುಣ ಎಂದು.
ಅಂತೆಯೇ ಶ್ರೀಕೃಷ್ಣಪರಮಾತ್ಮ *ಯೋ ಮದ್ಭಕ್ತಃ ಸ ಮೇಪ್ರಿಯಃ* (ಯಾರು ಭಕ್ತರೋ ಅವರೇ ನನಗೆ ಪ್ರಿಯರು) ಎಂದು ಗೀತೆಯಲ್ಲಿ ಹತ್ತಾರು ಬಾರಿ ಹೇಳುತ್ತಾನೆ. " ಜೊತೆಗೆ *ಭಕ್ತ್ಯಾ ತು ಅನನ್ಯಯಾ ಶಕ್ಯಾ ಅಹಮೇವಂ ವಿಧೋರ್ಜುನ* ಅನನ್ಯವಾದ ಭಕ್ತಿಯಿಂದಲೇ ಇಂತಿಥ ನಾನು ಕಾಣಲ್ಪಡುತ್ತೇನೆ" ಎಂದೂ ಕೃಷ್ಣ ಸಾರುತ್ತಾನೆ.ಭಕ್ತಿ ಎಂಬ ಗುಣ ಹೊಂದಿದ ಕಾರಣ, ಪ್ರಿಯರಾದವರಲ್ಲಿ ಭಗವದ್ರಕ್ಷಣೆಯೂ ತುಂಬ ಕಂಡು ಬರುತ್ತೆ. ಮೋಕ್ಷಾದಿ ಪುರುಷಾರ್ಥಗಳು ದೊರೆಯುವದೂ ಭಕ್ತಿ ಇಂದಲೇ. ಪ್ರಿಯರಾದವರಿಗೇನೇ.
*ಜ್ಙಾನ ಇದು ಉತ್ತಮವಲ್ಲವೇ.....??*
ಜ್ಙಾನ ಉತ್ತಮವೇ ಸಂದೇಹವೇ ಇಲ್ಲ. ಆದರೆ ಭಕ್ತಿ ಅತ್ಯುತ್ತಮ. ಭಕ್ತಿಗೆ ಮೂಲಕಾರಣ ಜ್ಙಾನ. ಕಾರ್ಯವಾದ ಭಕ್ತಿಗಿಂತಲೂ ಕಾರಣವಾದ ಜ್ಙಾನ ಉತ್ತಮ ಎಂದು ತೋರುತ್ತದೆ. ಆದರೆ ಭಕ್ತಿ ಇಲ್ಲದ ಕೇವಲ ಜ್ಙಾನ ಬಕ್ತಿಯನ್ನು ಹುಟ್ಟಿಸದೇ ಅಹಂಕಾರಾದಿ ದೋಷಗಳನ್ನು ಹುಟ್ಟಿಹಾಕಿ ಭಗವಂತನಿಗೆ ಅಪ್ರಿಯನನ್ನಾಗಿಯೂ ಮಾಡಬಹುದು. ಭಕ್ತಿ ಹಾಗೆ ಮಾಡದು. *ಭಕ್ತಿ ಇದ್ದಲ್ಲಿ ಜ್ಙಾನವಿದ್ದೇ ಇದೆ, ಇರುತ್ತದೆಯೂ ಸಹ. ಆದರೆ ಜ್ಙಾನವಿರುವಲ್ಲಿ ಭಕ್ತಿ ಇದ್ದೇ ಇರುತ್ತದೆ ಎಂಬ ಯಾವ ನಿಯಮವೂ ಇಲ್ಲ* ಇದುವೂ ಅಷ್ಟೇ ನಿಜ.
ಇರಲೇಬೇಕಾದ ಗುಣ ಎಂದರೆ ಅದು ಭಕ್ತಿಯೇ. ಭಕ್ತಿಗೋಸುಗ ಜ್ಙಾನ ಸಂಪಾದನೆ ಅನಿವಾರ್ಯ. ಭಕ್ತಿಯ ಸಂಪಾದನೆಯಾಗಿ ಆ ಭಕ್ತಿ ಬೆಳಿಯುತ್ತಾ ಸಾಗಿತು ಎಂದಾದರೆ ಆಗ ದೇವರಲ್ಲಿ ನನ್ನ ಮೇಲೆ ಪ್ರೀತಿ ಹುಟ್ಟುತ್ತಾ ಸಾಗುತ್ತದೆ. ಆಗ ದೇವರು ನನ್ನ ಪಾಲಿಗೆ *ಭಕ್ತಪ್ರಿಯ* ಎಂದು ಆಗುವ.
ಭಕ್ತಿ ಇರುವಲ್ಲಿ ಪ್ರೀತಿ ಇದೆ. ಪ್ರೀತಿ ಇರುವಲ್ಲಿಯೇ ನೂರಾರು ಮುಖಗಳು ಗೋಚರಿಸುತ್ತಾ ಸಾಗುತ್ತವೆ.
ದೇವರ ಪ್ರೀತಿ ನನ್ನಲ್ಲಿ ಇದ್ದಲ್ಲಿ , ನಾನು ದೇವರ ಪ್ರಿಯನಾದಲ್ಲಿ ೧)ದೇವರಲ್ಲಿ ಅಪಾರ ಭರವಸೆ ಮೂಡುತ್ತದೆ, ೨) ಅಚಲ ವಿಶ್ವಾಸ ವೃದ್ಧಿಸುತ್ತದೆ, ೩) ಎಂಥೆಂಥ ಆಪತ್ತುಗಳು ಒದಗಿದರೂ ಆಪದ್ರಕ್ಷಕನಾಗಿ ನಿಲ್ಲುವವ ಪ್ರಿಯನೇ, ೪) ಪ್ರತಿ ಸಮಸ್ಯೆಗಳಿಗೂ ಸಮಾಧಾನ ದೊರುಕಿಸಿಕೊಡುವವ ಪ್ರಿಯನೇ, ೫) ಪ್ರಿಯನಾದವನೇ ನನ್ನ ಸುಖದುಃಖ ಆಲಿಸಲು ಸಿದ್ದನಾಗುವ. ೬) ಸೂಕ್ಷ್ಮಾತಿಸೂಕ್ಷ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವದೂ ಪ್ರಿಯನಮುಂದೆಯೇ, ೭) ಮನಸ್ಸು ಹಗುರಾಗುವದೂ ಪ್ರಿಯನಿರುವಾಗಲೇ. ಹೀಗೆ ಪ್ರಿಯನಾದವು ಒಬ್ಬ ಪಕ್ಕದಲ್ಲಿ ಇರುವಾಗ ಸಿಗುವ ಲಾಭಗಳೇ ನೂರಾರು. ಅಂತೆಯೇ ಯಾರೂ ಪ್ರಿಯನಾದವನನ್ನು ಕಳೆದುಕೊಳ್ಳಲು ಬಯಸರು. ಕಳೆದುಕೊಂಡಿದ್ದಾರೆ ಎಂದರೆ ಅವನು ಪ್ರಿಯನಾಗಿರುವದೇ ಇಲ್ಲ ಎಂದರ್ಥ.
*ಪ್ರಿಯ* ನಾದವನು ಅವರಿವರು ಆಗದೆ ದೇವರೇ ಆಗಿದ್ದರೆ ಮೋಕ್ಷಾದಿಗಳಿಂದ ಕೂಡಿದ ಸಮಗ್ರ ಜಗತ್ತೇ ನಮ್ಮ ಕೈಲಿ ಸಿಕ್ಕ ಹಾಗೆಯೇ. ಆದ್ದರಿಂದ *ಭಗವತ್ಪ್ರಿಯರಾಗೋಣ, ಅದಕ್ಕಾಗಿ ಭಕ್ತಿ ಬೆಳಿಸಿಕೊಳ್ಳೋಣ.* ಈ ಎರಡೂ ಆಗುವದಕ್ಕಾಗಿ ದೇವರನ್ನು *ಭಕ್ತಪ್ರಿಯ* ಎಂದು ಚಿಂತಿಸೋಣ.
*✍🏽✍🏽✍ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ..

Comments