Posts

Showing posts from August, 2023

ನಾಗ ಸ್ತೋತ್ರಮ್

 *ನಾಗ ಸ್ತೋತ್ರಮ್* ಬ್ರಹ್ಮ ಲೋಕೇ ಚ ಯೇ ಸರ್ಪಾಃ  ಶೇಷನಾಗಃ ಪುರೋಗಮಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೧॥ ವಿಷ್ಣು ಲೋಕೇ ಚ ಯೇ ಸರ್ಪಾಃ  ವಾಸುಕೀ ಪ್ರಮುಖಾಶ್ಚ ಯೇ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೨॥ ರುದ್ರ ಲೋಕೇ ಚ ಯೇ ಸರ್ಪಾಃ  ತಕ್ಷಕ: ಪ್ರಮುಖಸ್ತಥಾ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೩॥ ಖಾಂಡವಾಸ್ಯ ತಥಾ ದಾಹೇ  ಸ್ವರ್ಗೇ ಚ  ಸಮಾಶ್ರಿತಾಃ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೪॥ ಸರ್ಪ ಸತ್ರೇ ಚ ಯೇ ಸರ್ಪಾಃ  ಆಸ್ತಿಕೇನಾಭಿ ರಕ್ಷಿತಃ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥5॥ ಪ್ರಲಯೇ ಚೈವ್ ಯೇ ಸರ್ಪಾಃ  ಕಾರ್ಕೋಟಕ ಪ್ರಮುಖಶ್ಚಯೇ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥6॥ ಧರ್ಮ ಲೋಕೇ ಚ ಯೇ ಸರ್ಪಾಃ  ವೈತರಣ್ಯಾಂ ಸಮಾಶ್ರಿತಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೭॥ ಯೇ ಸರ್ಪಾಃ ಪರ್ವತೇ ಯೇಷು  ಧಾರಿ ಸಂಧಿಷು ಸಂಸ್ಥಿತಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೮॥ ಗ್ರಾಮೇ ವಾ ಯದಿ ವಾರಣ್ಯೇ  ಯೇ ಸರ್ಪಾಃ ಪ್ರಚಾರಂತಿ ಚ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೯॥ ಪೃಥಿವ್ಯಾಂ ಚೈವ್ ಯೇ ಸರ್ಪಾಃ  ಯೇ ಸರ್ಪಾಃ ಬಿಲ ಸಂಸ್ಥಿತಾಃ |  ನಮೋಸ್ತು ತೇಭ್ಯಃ ಸುಪ್ರೀತಾಃ   

*ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್"*

Image
 *ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್" * ಅಧಿಕಮಾಸ ಇದು ಮಲಮಾಸ ಎಂದು ಪ್ರಸಿದ್ಧ. ಮಲಮಾಸದಲ್ಲಿ ಮಲ ಪಾಪಗಳನ್ನು,  ಕಷ್ಟ ದಾರಿದ್ರ್ಯ ಕಾರ್ಪಣ್ಯ  ಮುಂತಾದವುಗಳನ್ನು ಪರಿಹರಿಸಿಕೊಳ್ಳುವ ಮುಖಾಂತರ ಎಲ್ಲ ವಿಧ ಸೌಖ್ಯ ಸೌಭಾಗ್ಯಗಳನ್ನು ಪಡೆಯಲುಭೆಕಾದ ಸಾಧನೆಗಳನ್ನು ಮಾಡಿಸುವದಲ್ಲದೇ ವಿಷ್ಣುಭಕ್ತಿ ದ್ವಾರಾ ಮೊಕ್ಷಾದಿ ಪುರುಷಾರ್ಥಗಳನ್ನು ಕೊಡಿಸುವದರಲ್ಲೂ ಸಮರ್ಥವಾಗಿದೆ.  ಈ ಮಲ ಮಾಸದಲ್ಲಿ ವಿಹಿತವಾದವುಗಳು ಎಂದರೆ "ಯಜ್ಙ ದಾನ ತಪಸ್ಸು" ಇವುಗಳೇ.  ಯಜ್ಙ ವೈಶ್ವಾನರ ಯಜ್ಙ ಹಾಗೂ ಪವಮಾನ ಹೋಮ ಮೊದಲಾದ ಯಜ್ಙಗಳು ಹೀಗೆ ಎರಡು ವಿಧ. ಅನ್ನದಾನ ರೂಪವಾದ ವೈಶ್ವಾನರ ಯಜ್ಙವನ್ನು ಮಾಡುವದರಿಂದ ನನ್ನ (ದಾನಿಯ) ನೂರನೇಯ ತಲೆಮಾರಿನವರೆಗೂ ನೈವೇದ್ಯ ವೈಶ್ವದೇವದ ಅನ್ನವೇ ಹೊಟ್ಟೆಗೆ ಬೀಳುವಂತೆ ಮಾಡುತ್ತದೆ.  ಪವಮಾನ ಮೊದಲಾದ ಎಲ್ಲಯಾಗಗಳೂ ಬ್ರಹ್ಮಹತ್ಯೆ ಸುರಾಪಾನ ಸ್ವರ್ಣಸ್ತೇಯ ಅಭಕ್ಷ್ಯಭಕ್ಷಣ ಬಾಲಹತ್ಯೆ ಶಿಷುಹತ್ಯೆ ಬ್ರೂಣಹತ್ಯೆ ಸ್ತ್ರೀಹತ್ಯೆ ಮೊದಲಾದ ಎಲ್ಲ ಪಾಪಗಳನ್ನೂ ಪರಿಹರಿಸಲು ಸಮರ್ಥವಾಗಿದೆ. ದಾನ ಈ ದಾನವೂ ಎರಡು ವಿಧವಾಗಿದೆ. ಒಂದು ಅಪೂಪದಿಂದ ಆರಂಭಿಸಿ ಸ್ವರ್ಣ ರಜತ ಭೂ ತಿಲ ದೀಪ ಮೊದಲಾದ ನಾನಾತರಹದ ದಾನಗಳು. ಈ ಎಲ್ಲ ತರಹದ ದಾನಗಳಿಂದ ಒಂದು ದ್ರವ್ಯಶುದ್ಧಿ. ಶತ್ರುಪರಿಹಾರ. ತತ್ವಜ್ಙಾನ ಪ್ರಾಪ್ತಿ ಒಬ್ಬ ಬ್ರಾಹ್ಮಣನಿಗಾದರೂ ಉಪಯೋಗ ಹೀಗೆ ನಾನಾತರಹದ ಫಲಗಳು ಒಳಗೊಂಡಿವೆ.  ತಪಸ್ಸು  ಈ ತಪವೂ ಮೂರುವಿಧ. ಒಂದು ದೇಹದಂಡನೆ ರೂಪವಾ

ಗೆಳೆತನ ತುಂಬ ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.

Image
 *ಗೆಳೆತನ ತುಂಬ  ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ. ಒಳ್ಳೆಯ ಗೆಳಯರು ಸಿಗುವದೇ ಕಠಿಣ. ಸನ್ಮಾರ್ಗ ತೋರುವವರು, ಸಾಧನೆ ಮಾಡಿಸುವವರು ತುಂಬ ವಿರಳ. ಸನ್ಮಾರ್ಗ ತೋರುವ ಅಥವಾ ಮೆಲೆತ್ತರಕ್ಜೆ ಬೆಳಿಸುವ ಗೆಳೆಯ ಸಿಕ್ಕಾಗ ಆ ಗೆಳೆತನ ಉಳಿಸಿಕೊಳ್ಳುವದು ತುಂಬ ಕಠಿಣ.  ಗೆಳತನದಲ್ಲಿ ತಗ್ಗು ಬಗ್ಗುವಿಕೆಗಳು ಇವೆ. ನಾನು ನನ್ನದು ಎಂಬವುಗಳಿಗೆ ಅಲ್ಲಿ ಆಸ್ಪದವಿಲ್ಲ. ನನ್ನದೇ ಆಗಬೇಕು ಎಂಬ ದರ್ಬಾರವೂ ಇಲ್ಲ.  ಅಂದರೆ ದುಃಖವಿಲ್ಲ. ಹೊಗಳಿದರೆ ಹುಮ್ಮಸ್ಸಿಲ್ಲ. ಮೊದಲೇ ಮಾತಾಡಬೇಕು ಎಂಬ ಬಿಗುಮಾನವಿಲ್ಲ. ಆಡುವ ಮಾತುಗಳಲ್ಲಿ ಚುಚ್ಚುವಿಕೆ ಇಲ್ಲ. ಆಡುವ ಮಾತು ಚೇತೋಹಾರಿ ಮಾತುಗಳೇ. ಗೆಳೆತನದ ಗಟ್ಟಿತನದಮುಂದೆ ಎಂತಹ ಕಷ್ಟ ಆಪತ್ತುಗಳ ಸರಣಿಗಳು ಬಂದರೂ ತುಂಡು ತುಂಡು ಆಗಿಹೋಗುತ್ತವೆ.  ಗೆಳತನದಲ್ಲಿ ಆಸೆ ಆಕಾಂಕ್ಷೆಗಳಿಗೆ ಆಸ್ಪದವಿಲ್ಲ. ತ್ಯಾಗ ಅಡಗಿದೆ. ಸಹನೆ ತುಂಬಿದೆ. ಪೂರ್ಣ ಸಮರ್ಪಣಾಭಾವ ನರನಾಡಿಗಳಲ್ಲಿ ಹೊಕ್ಕಿರುತ್ತದೆ. ವಿಶ್ವಾಸ ಪೂರ್ಣ. ಸ್ನೇಹ ಪ್ರೇಮ ನಿರಂತರ ಇಂಪಾದ ಶೃತಿಗಾನವಾಗಿರುತ್ತದೆ.  ಗೆಳೆತನದಲ್ಲಿ ಕ್ಷಣದ ಮೌನ ಭರ್ಚಿಯಂತೆ ಚುಚ್ಚತ್ತೆ. ಅತಿ ಪುಟ್ಟ ಸಂಶಯ ದೃಢ ಬಾಂಧವ್ಯವನ್ಬೇ ಅಲುಗಾಡಿಸಿಬಿಡತ್ತೆ.  ಗೆಳೆತನದಲ್ಲಿ ಒಂದುಬಾರಿ ತಪ್ಪು ತಿಳುವಳಿಕೆ ಉದಯಿಸಿತೋ ಅದು ಕೆಲ ದಿನಗಳಲ್ಲಿ ಹೆಮ್ಮರವಾಗಿ ಗೆಳೆತನಕ್ಜೆ ಅಡ್ಡವಾಗಿ ಮಾಹಾ ಗೋಡೆಯಂತೆ ಬೆಳದು ನಿಲ್ಲತ್ತೆ.  ಆಪತ್ತಿನಲ್ಲಿ ಗೆಳೆಯ. ದುಃಖದಲ್ಲಿ ಗೆಳೆಯ. ಕಷ್ಟಗಳು ಎದುರಾದಾಗ ಗೆಳೆಯ.