*ಅಂತರಂಗದ ಅನಾವರಣೆಯಾಗಬೇಕು.....*

*ಅಂತರಂಗದ ಅನಾವರಣೆಯಾಗಬೇಕು.....*

ನಮ್ಮ ಅಂತರಂಗ ನಮಗೆ ಗೊತ್ತಿದೆಯಾ... ?? ಸರ್ವಥಾ ಇಲ್ಲ. ಏಕೆಂದರೆ ಅನೇಕ ಧೂಳುಗಳಿಂದ ಆವರಿತವಾಗಿದೆ ಅಂತರಂಗ, ಆದ್ದರಿಂದ ನಮ್ಮ ಅಂತರಂಗ ಹೇಗಿದೆ ಎಂವುವದು ತಿಳಿಯಲಾಗಿಲ್ಲ.

ಶಾಪಿಂಗ ಮಾಲ್ ಗೆ ಹೋಗಿದ್ದೆ. ಅಲ್ಲಿ ತುಂಬ ರಿಚ್ ರಿಚ್ ಜನ. ಗ್ರಾಹಕರ ಗಮನ ವಸ್ತುಗಳ ಕಡೆಯೇ. ಅಂತರಂಗದೆಡೆ ಇರಲೆ ಇಲ್ಲ ಎಂದರೆ ತಪ್ಪಾಗದು. ಸೊಗಸಾದ ಉಡುಗೆ, ತೊಡುಗೆ ತೊಟ್ಟಿದ್ದರು. ತೋರಿಕೇಯೇ ಸರ್ವಸ್ವ ಎಂದು ಸ್ಪಷ್ಟವಾಗಿ ತೋರುತ್ತಿತ್ತು.

ಅಂಗಡಿಗಳು ಗ್ರಾಹಕರ ಹುಚ್ಚಿಗೆ ಬೇಕಾದ ಎಲ್ಲ ಸವಲತ್ತುಗಳನ್ನೂ ಒದಗಿಸಿಕೊಟ್ಟಿದ್ದರು. ಅಲ್ಲಿ ನೋಡುವ ಪ್ರತಿ ವಸ್ತುವೂ ಅತ್ಯಗತ್ಯ ಎಂದೇ ಪ್ರತಿಬಿಂಬಿಸುತ್ತಿದ್ದವು. ಅವುಗಳನ್ನು ತೆಗೆದುಕೊಂಡೇ ತೀರಬೇಕು ಎಂಬ ಭಾವನೆ ಅಚ್ಚೊತ್ತುವ ಹಾಗೆ ಜೊಡಿಸಿಟ್ಟಿದ್ದರು. "ಜನ ಮರುಳೋ ಜಾತ್ರೆ ಮರುಳೋ" ಎಂದಾಗಿತ್ತು.

ಆ ಮಾರುಕಟ್ಟೆಯ ಬ್ರಾಂಡ್ ಗೆ  ಜನ ಮರುಳಾಗಿ ಉಪಯುಕ್ತವೋ ಅನುಪಯುಕ್ತವೋ ಎಂದು ಕ್ಷಣ ಯೋಚಿಸದೆಯೇ ತೆಗೆದುಕೊಳ್ಳುತ್ತಾ ಹೋಗುತ್ತಿದ್ದರು.

ಎಷ್ಟು ವಿಚಿತ್ರಾ ಎಂದರೆ ತಾನು ತೆಗೆದುಕೊಳ್ಳುವ ಉಡುಗೆ ತೊಡಿಗೆ ಇನ್ನೊಬ್ಬರು "ಡಬ್ಬಾ ಇದೆ" ಎಂದು ಬಿಸಾಡಿ ಹೋಗಿರುವಂತಹದ್ದೆ. ಆ ತರಹದ ವಸ್ತುವನ್ನು ಮನೆಗೆ ತಂದರೆ ಕೆಲವರಿಗೆ ಸಂತೋಷ, ಮತ್ತೆ ಕೆಲವರಿಗೆ ಆ ಪದಾರ್ಥ "ಕೆಟ್ಟ ಡಬ್ಬಾ." ನನಗೂ ದುಡ್ಡು ತೆತ್ತಿದ್ದಕ್ಕೆ  ಖುಶಿ ಅಷ್ಟೆ..... ಸಂತೃಪ್ತಿ ಸರ್ವಥಾ ಇಲ್ಲ.

ಸಂತೃಪ್ತಿಗೆ ಬೇಕು ಅಂತರಂಗದ ಅನಾವರಣೆ. ಅಂತರಂಗದ ಕದ ತೆಗೆದಾಗ ಹೊರ ಆಡಂಬರಗಳು ಕಣ್ಣಿಗೆ ಕಾಣದು. ಒಳಗಿನದೇ ಆದ ಸೌಂದರ್ಯ, ಪ್ರಕಾಶ, ತೇಜಸ್ಸು,  ಖಳೆ, ಸಂತೃಪ್ತಿ, ಸೌಖ್ಯ, ಇತ್ಯಾದಿಗಳು ಒಂದಾಂದಾಗಿ ಅನಾವರಣಗೊಳ್ಳುತ್ತಾ ಪ್ರಕಾಶಕ್ಕೆ ಬಂದೊದಗುತ್ತವೆ.

ವಿಚಾರಶಕ್ತಿ ತೀಕ್ಷ್ಣವಾಗುತ್ತದೆ. ಯಾವದು ಸಾರ್ವಕಾಲಿಕ ಹಿತ ಎಂದು ಯೋಚಿಸುತ್ತದೆ. ಅಂಗಡಿಗಳಿಗೆ ಮರುಳಾಗಿ ವಾರಕ್ಕೊಮ್ಮೆ ತೆಗೆದು ಕೊಳ್ಳುವ ಬಟ್ಟೆ ಬರೆಗಳು ಹಿತವೋ, ಅಥವಾ ಅಥವಾ ಇರುವ ವಸ್ತುಗಳನ್ನೇ ನೀಟಾಗಿ ಇಟ್ಟುಕೊಳ್ಳುವ ಕಲೆ ಶ್ರೇಷ್ಠವೋ ಎಂದು ಯೋಚಿಸಲು ಅನುವಾಗುತ್ತದೆ.

*ಸಾದಾ ತೊಡಿಗೆ, ಉಚ್ಚ ವಿಚಾರ* ಎಂಬ ಮಾತು ಸಾಬೀತಮಾಡಲು ಬೇಕು ಅಂತರಂಗದ ಅನಾವರಣ. ಅಂತರಂಗದ ಅನಾವರಣ ಮಾಡಿಕೊಂಡವರಿಗೆ ಮಾತ್ರ ಈ ತರಹದ ವಿಚಾರಗಳನ್ನು ರೂಢಿಸಿಕೊಳ್ಳಲು ಸಾಧ್ಯ.

ಅಂತರಂಗದ ಅನಾವರಣ ಯಾರು ಮಾಡಿಕೊಂಡಿದಾರೆಯೋ ಅವನೇ ನೈಜ ಕಲಾವಿದ. ಕಲಾವಿದ "ಮುಖ ನೋಡಿ ಮಣೆ ಹಾಕ." ಮೆದುಳು ಹೃದಯಗಳಿಂದ ವಿಕಸಿತವಾದ ಕೈ ಕರ್ಮಗಳನ್ನು ನೋಡುವವ.

ಕೃಷ್ಣ ಪರಾಮಾತ್ಮ ಹೇಳುವ ಬಹಳ ಸುಂದರ ಮಾತು. ಹೃದಯ ಮೆದಳುಗಳಿಂದ ಕೂಡಿದ ಕೈ ಸಂತೃಪ್ತಿಯಹಾದಿಯಲ್ಲೇ ಸಾಗಿರುತ್ತದೆ. "ಮೆದಳುವಿನಿಂದ ಯೋಚಿಸಿ ಮಾಡು. ಮಾಡುವ ಕೆಲಸ ಹೃದಯದಿಂದ ಪ್ರೀತಿಸಿ ಮಾಡು" ಆ ಕೆಲಸವೇ ನಿನಗೇ ಶ್ರೇಯಸ್ಕರ.

ಅಂತರಂಗದ ಅನಾವರಣೆ ಹೇಗೆ ?? ಅಧ್ಯಾತ್ಮಿಕ ಬಲ ಹೆಚ್ಚಿದ ಹಾಗೆ ಅಂತರಂಗದ ಅನಾವರಣೆ ತಾನಾಗಿಯೇ ಆಗುತ್ತಾ ಸಾಗುತ್ತದೆ. ಅಂತೆಯೇ ಅಧ್ಯಾತ್ಮ ಬಲವುಳ್ಳವರು ಶಾಪಿಂಗ ಮಾಲ್ ಗಳಲ್ಲಿ ಕಾಣಸಿಗರು. ಅವರ ಮುಖದ ಪ್ರಸನ್ನತೆಯೇ ನಮಗೊಂದು ಶಾಂತತೆಯನ್ನು ತಂದೊಡ್ಡುತ್ತದೆ. ಆದ್ದರರಿಂದ *ಅಧ್ಯಾತ್ಮಬಲವನ್ನು ಅಭಿವೃದ್ದಿಸಿಕೊಂಡು, ಅಂತರಂಗವನ್ನು ಅನಾವರಣಮಾಡಿಕೊಳ್ಳೋಣ.* 

ಜೈ ಶ್ರೀಕೃಷ್ಣ, ಜೈ ರಾಧೆ ಶ್ಯಾಮ, ಜೈ ಅರ್ಜುನ ಸಖ, ಜೈ ಬಾಲಗೋಪಾಲ....

*✍🏽✍🏽✍ನ್ಯಾಸ...*
ಗೋಪಾಲ ದಾಸ
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*