*ಮೌನ......*

*ಮೌನ......*

ಆಡುವ ಮಾತು ಒಂದೇ ಅರ್ಥವನ್ನು ತಿಳಿಸುತ್ತದೆ, ಬಹಳಾದರೆ ಎರಡು ಅರ್ಥಗಳನ್ನು ತಿಳಿಸಬಹುದು. ಆದರೆ *ಮೌನ* ಹಾಗಲ್ಲ ಸಾವಿರಾರು ಅರ್ಥರಗಳನ್ನೂ ಹುಟ್ಟು ಹಾಕಬಹುದು. ಜೊತೆಗೆ ನೂರಾರು ಉಪಯೋಗಗಳನ್ನೂ ಒದಗಿಸುತ್ತದೆ *ಮೌನ.*

*ಹಿಂದು -  ಇಂದು*

 ಪ್ರೀತಿ, ಪ್ರೇಮ, ಕಾರುಣ್ಯ, ಅಭಿಮಾನ, ಅಂತಃಕರಣ, ವಾತ್ಸಲ್ಯಗಳೇ ತುಂಬಿದಂತಹ ಕೃತಯುಗಕ್ಕೆ ಸಮನಾದ ಒಂದು ಕಾಲವಿತ್ತು. ಆಗ ಆಡುವ ಮಾತುಗಳೆಲ್ಲ ಸುಮಧುರವಾಗಿರುತ್ತಿದ್ದವು. ಕೇಳಲು ಇಂಪಾಗಿರುತ್ತಿತ್ತು. ಅಂತೆಯೇ ಮಾತುಗಳದ್ದೇ ಸಾಮ್ರಾಜ್ಯ ಇರುತ್ತಿತ್ತು.  ಆದರೆ ಇಂದು ಹಾಗಿಲ್ಲ ಸ್ವಾರ್ಥ, ಮಾತ್ಸರ್ಯ, ಅಸಹನೆ, ದ್ವೇಶ, ವ್ಯವಹಾರ,  ಇವುಗಳಿಂದಲೇ ಕೂಡಿದ ವಾತಾವರಣ ಇರುವದರಿಂದ ಮೌನವೇ ಅತ್ಯಂತ ಸೂಕ್ತ ಎಂದೆನಿಸುತ್ತದೆ. ತಪ್ಪಿ ಬಾಯಿಂದ ಬಂದ ಸಣ್ಣ ಮಾತೂ, ದೊಡ್ಡ ಕಂದಕವನ್ನೇ ಸೃಷ್ಟಿಸವಹುದು,  ಮಹಾ ಹೆಮ್ಮರವಾಗಬಹುದು, ದೊಡ್ಡ ಚೈನಾ ವಾಲ್ ನಿರ್ಮಿಸಬಹುದು.

*ಮಾತಾಡಿ ಕೆಟ್ಟಯೋ....*

ಮಾತಿನಿಂದ ಆಪ್ಯಾಯತೆಗಿಂತಲೂ ಅಸಾಮಾಧಾನವೇ ಹೆಚ್ಚು. ಮನಸ್ಸಿರದೆ ಮಾತಾಡುವದರಿಂದ ಅಪಾರ್ಥವೇ ಹೆಚ್ಚು.   "ಮಾರಿ ಯಾಕ ಹರ್ಕೋಬೇಕು ಸುಮ್ ಹಾಯ್ ಬಾಯ್ ಹೇಳಿದ್ರಾಯ್ತಲಾ" ಎಂಬ ಭಾವನೆ ಇರುವದರಿಂದಲೇ ಇಂದು ಮಾತಾಡುವದರಿಂದ ಝಗಳವೇ ಹೆಚ್ಚಾಗುತ್ತದೆ. ಮೌನ ತಾಳುವದರಿಂದ ಪ್ರಶಾಂತವಾಗಿ ಇರದಿದ್ದರೂ ತಮ್ಮಷ್ಟಕ್ಕೆ ತಾವು ಏಕಾಕಿಯಾಗಿಯಾದರೂ ಇರಬಹುದು.

*ಮೌನವೇ ಅತ್ಯಂತ ಸೂಕ್ತ.....*

ಸಿಟ್ಟು, ಝಗಳ, ದ್ವೇಶ, ಇವುಗಳನ್ನು ಸಾಧಿಸಲು ಇರುವ ತಾಳ್ಮೆ ಸಮಯ ಹಠ ಇವುಗಳು ಸಂಬಂಧ ಉಳಿಸಿಕೊಳ್ಳಲೋ, ಅಥವಾ ಬೆಳಿಸಿಕೊಳ್ಳಲೋ ಇಲ್ಲದರಿವದರಿಂದಲೇ ಇಂದು *ಮೌನ* ಅತ್ಯಂತ ಸೂಕ್ತ ಎಂದೆನಿಸುತ್ತದೆ.

*ಮೌನದ ಮುಖಗಳು ಅನೇಕ....*

ಪ್ರಶಾಂತತೆಯ ಸಂಕೇತ ಮೌನವಾದರೆ, ಆನಂದದ ಸಂಕೇತವೂ ಮೌನವೇ. ತಾತ್ಸಾರದ ದೃಷ್ಟಿಯೂ ಮೌನದಲ್ಲಿ ಕಾಣಬಹುದು. ಸಂಬಂಧ ಕಡಿದುಕೊಳ್ಳುವಿಕೆಯಲ್ಲಿಯೂ ಮೌನದ ಪಾತ್ರವಿದೆ. ನನಗೆ ಕೋಪವಿದೆ ಅಸಮಾಧಾನವಿದೆ ಎಂದು ತೋರಿಸಲೂ ಮೌನ ಆವಶ್ಯಕ. ತನ್ನ ಪ್ರಗತಿಯನ್ನು ತಾನು ಸಾಧಿಸಿಕೊಳ್ಳಲೂ ಮೌನ ಬೇಕು. ಬರುವ ಆಪತ್ತುಗಳ ಪರಿಹಾರಕ್ಕೆ ಮೌನ ಸೂಕ್ತ. ಬಂದ ಆಪತ್ತುಗಳ ಹರಡದಿರುವದಕ್ಕೂ ಮೌನ ಸೂಕ್ತ. ಸಮ್ಮತಿ ಸೂಚಿಸಲೂ ಮೌನ ಆವಶ್ಯಕ. ಸೌಹಾರ್ದತೆ ಇದ್ದಲ್ಲೇ ಉಳಿಸಿಕೊಳ್ಳಲೂ ಮೌನ. ದ್ವೇಶ ಹೆಚ್ಚಾಗದಿರಲೂ ಮೌನ ಆವಶ್ಯಕ. ಗೂಢ ದ್ವೇಶಸಾಧಿಸಲೂ ಮೌನ ಬೇಕು. ಅಗಾಧ ಪ್ರೀತಿ ತೋರಿಸಲೂ ಮೌನಬೇಕು.

*ಮೌನದ ಲಾಭಗಳು ಅನೇಕ....*

ಮೌನಿಯಾದವನಿಗೇ ಜ್ಙಾನ. ಮೌನಿಯಾದರೆ ಸಮಾಧಾನ. ಮೌನಿಯಾದರೇ ಶಾಂತಿ. ಮೌನಿಗೇ ದೇರಕಡೆ ಗಮನ ಕೊಡಲು ಸಾಧ್ಯ.  ಮೌನಿಗೇ ದೇವರು ಒಲಿವ. ಕೇಳಿದ ಕೋಟಿ ಕೋಟಿ ವಿಷಯಗಳನ್ನು ಮನನ ಮಾಡಲು ಬೇಕು ಮೌನ. ಮಂತ್ರ ಜಪಗಳ ಸಿದ್ಧಿಗೆ ಬೇಕು ಮೌನ. ಪುಣ್ಯ ಉಳಿಸಿಕೊಳ್ಳಲು ಬೇಕು ಮೌನ. ಪಾಪಮಾಡದಿರಲು ಬೇಕು ಮೌನ.  ಧ್ಯಾನಕ್ಕೆ ಬೇಕು ಮೌನ. ದೇವರನ್ನು ಕಾಣಲು ಬೇಕು ಮೌನ. ಹೀಗೆ ಮೌನದ ಮುಖಗಳೂ ನೂರಾರು. ಮೌನದ  ಉಪಕಾರಗಳೂ ನೂರಾರು.

*ಮೌನದ ವೈಶಿಷ್ಟ್ಯ....*

*ಮಾತಾಡುವವ ಮಾಡಲಾರ, ಮಾಡುವವ ಎಂದಿಗೂ ಮಾತಾಡಲಾರ* ಇದು ಸಾಮಾನ್ಯವಾದ ಗಾದೆ ಮಾತು. ಮಾಡುವ ಸಿದ್ಧಪುರುಷನೇ. ಇದುವೇ ಮೌನದ ವೈಶಿಷ್ಟ್ಯ.

ಮೌನವನ್ನು ಯಾವೆಲ್ಲತರಹದಿಂದ ನೋಡಿದರೂ ಇಂದಿನ ಈ ಸ್ಥಿತಿಗೆ ಮಾತಾಡುವದಕ್ಕಿಂತಲೂ *ಮೌನ* ಅತ್ಯಂತ ಸೂಕ್ತ ಎಂದು ತೋರಿಸಿ ಕೊಡಲೋ ಏನೋ *ಶ್ರೀಮದಾಚಾರ್ಯರಿಂದ ಆರಂಭಿಸಿ ಎಲ್ಲ ಮಹನೀಯರೂ ಕಾಷ್ಠ ಮೌನ ವ್ರತವನ್ನು ಆಚಾರಿಸಿದರು.*  ನಾವು ಯಾಕೆ ದಿನಕ್ಕೆ ಕೆಲಹೊತ್ತು ಆದರೂ ಮೌನಾಚರಣೆಯಲ್ಲಿರಬಾರದು...??

ದಿನಕ್ಕೆ ಕೆಲಹೊತ್ತು, ವಾರಕ್ಕೆ ಒಂದು ಒಪ್ಪತ್ತು ಭಾವಾರದ ಅರ್ಧದಿನ.  ಹದಿನೈದು ದಿನಕ್ಕೆ ಏಕಾದಶಿ ಒಂದು ದಿನ. ವರ್ಷಕ್ಕೆ ಕೆಲ ದಿನಗಳನ್ನಾದರೂ ಮೌನದಿಂದರಲು ಆಚರಿಸಲು ಆರಂಭಿಸೋಣ. ದೇವರು ಆ ಮನಸ್ಸು ಶಕ್ತಿ ನನಗೆ ಕೊಡಲಿ ಎಂದು ಓದಿದ ತಾವೆಲ್ಲರೂ ನನ್ನ ಪರವಾಗಿ ಪ್ರಾರ್ಥಿಸಿ. 🙏🏽🙏🏽🙏🏽

*✍🏽✍🏽✍🏽ನ್ಯಾಸ.....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
೯೪೪೯೬೪೪೮೦೮

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*