Posts

Showing posts from February, 2022

*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ*

Image
 *ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ* ವಿಷ್ಣು ಸಹಸ್ರನಾಮ ದಲ್ಲಿ ಬರುವ ಒಂದು ನಾಮ *ಪ್ರೀತಿ ವರ್ಧನಃ* ಎಂದು. ಪ್ರೀತಿಯನ್ನು ನಿರಂತರ ಬೆಳಿಸುವ, ಉಳಿಸುವ ಭಗವಂತನ ಒಂದು ನಾಮ.  ದೇವರು ಕೊಟ್ಟ ಅಮೂಲ್ಯವಸ್ತುಗಳಲ್ಲಿ ಪ್ರೀತಿಯೂ ಒಂದು. ಮರೆಯುವಂತಹದ್ದು ಅಲ್ಲವೇ ಅಲ್ಲ. ಪ್ರೀತಿ ಯೊಂದು ಇರಲಿಲ್ಲ ಎಂದಾಗಿದ್ದರೆ ಜಗತ್ತೇ ಇರುತ್ತಿರಲಿಲ್ಲ. ಎಂದೋ ನಾಶವಾಗಿ ಹೋಗುತ್ತಿತ್ತು. ಜಗತ್ತಿನ ನಾಶವಾಗಿಲ್ಲ, ನಾನುಬದುಕಿ ಇದ್ದೇನೆ ಎಂದರೆ ಅದಕ್ಕೆ ಮೂಲ *ಪ್ರೀತಿ.* *ಪ್ರೀತಿ ಎಂಬ ವಸ್ತುವನ್ನೇ ದೇವರು ಸೃಷ್ಟಿಸಿರಲಿಲ್ಲ ಎಂದಿದ್ದರೆ ಏನಾಗ್ತಿತ್ತು.....???* ಇವತ್ತು ಭಾನುವಾರ ಅಲ್ವೇ ಮಾರ್ಕೇಟಿಗೋ ಮಾಲ್ ಗಳಿಗೋ ಹೋಗ್ತೆವೆ. ಸಾವಿರ ಸಾವಿ ವಸ್ತುಗಳನ್ನು ಕಾಣುತ್ತೇವೆ ಕೆಲವೇ ವಸ್ತಗಳನ್ನು ಖರೀದಿ ಮಾಡುತ್ತೇವೆ ಸರಿ ನಾ. ಹೀಗಿರುವಾಗ ಎಲ್ಲ ವಸ್ತುಗಳನ್ನು ನಾನೇಕೆ ತೆಗೆದು ಕೊಳ್ಳಲಿಲ್ಲ.. ?? ಎಂದರೆ ಆ ಎಲ್ಲ ವಸ್ತುಗಳ ಮೇಲೆ ನನಗೆ ಪ್ರೀತಿ ಹುಟ್ಟಲಿಲ್ಲ. ಯಾವ ವಸ್ತುವಿನ ಮೇಲೆ ಪ್ರೀತಿ ಹುಟ್ಟಿತೋ ಆ ವಸ್ತುವನ್ನು ನಾನು ಖರೀದಿಸಿದೆ. ಎಲ್ಲ ವಸ್ತುಗಳ ಮೇಲೆಯೂ ಪ್ರೀತಿ ಹುಟ್ಟಿದ್ದರೆ.... ಅಥವಾ ನೋಡಿದ ಯಾವೆಲ್ಲ ವಸ್ತುಗಳಿವೆ ಅದೆಲ್ಲದರ ಮೇಲೆ "ದ್ವೇಶವೇ" ಹುಟ್ಟಿದ್ದರೆ ಏನಾಗ್ತಿತ್ತೋ...... ನಾವೇ ಏಕಾಂತದಲ್ಲಿರುವಾಗ ವಿಚಾರಿಸಬೇಕು. ಉಡುವ ಬಟ್ಟೆ, ಉಣ್ಣುವ ಆಹಾರ, ಸಂಬಂಧ ಬೆಳಿಸಿಕೊಳ್ಳವ ಜನರು, ಘಳಿಸುವ ಹಣ, ಇರುವ ಮನೆ, ಗುರುಗಳು,  ಈ ದೇಹ

*ಉಪನಯನ - ಒಂದು ಆಯಾಮ*

Image
  * ಉಪನಯನ - ಒಂದು ಆಯಾಮ* ಉಪನಯನ ಸಾದನೆಗೆ ಮೆಟ್ಟಲು. ಸಿದ್ಧಿಗೆ ಅವಕಾಶ. ವೇದ ಅಧ್ಯಯನಕ್ಕೆ ಅಧಿಕಾರ. ಉತ್ತಮ ಸಂಸ್ಕಾರ. ಶಾಸ್ತ್ರಾಧ್ಯಯನಕ್ಕೆ ಮೆಟ್ಟಲು. ಗುರುಸೇವೆಯ ತವಕ.ದೇವತಾರಾಧನೆ. ಧೃಮಜಾಗೃತಿ.  ಅಚ್ಛ ಮಮತೆ ಅಭಿಮಾನಗಳ ತ್ಯಾಗ. ಪರಿಶ್ರಮಕ್ಕೆ ನಾಂದಿ. ಭದ್ರಜೀವನಕ್ಕೆ ಬುನಾದಿ. *೧. ಸಂಸ್ಕಾರ* ಸಂಸ್ಕಾರ ಅನಿವಾರ್ಯ. ಯಾವತರಹದ ಸಂಸ್ಕಾರವೋ ಆ ತರಹದ ವ್ಯಕ್ತಿತ್ವ. ಸಂಸ್ಕಾರವಿಲ್ಲವೋ ಪಶುವಿಗೆ ಸಮ. ಪಶುವಿಗೂ ಒಂದು ಸಂಸ್ಕಾರಬೇಕು. ಜಡಕ್ಕೂ ಸಂಸ್ಕಾರ ಬೇಕೆಬೇಕು. ಸಂಸ್ಕಾರವಿದ್ದರೆ ಬೆಲೆ. ಇಲ್ಲವಾದರೆ ಕಾಲ್ಗಸ. *೨. ಸಾಧನೆಗೆ ಮೆಟ್ಟಲು.* ಈ ಜೀವನ ಸಾಧನ ಜೀವನ. ಸಾಧನ ಶರೀರ. ಸಾಧಿಸದೇ ಇರಲಾಗದು. ಎಂಬ ತಿಳುವಳಿಕೆ ಉಪನಯನದ ಪ್ರಸಂಗದಲ್ಲೇ ಜಾಗೃತವಾಗುವದು. ಸಾಧನ ಸೋಪಾನದಂತೆ ಆಗುವದು ಉಪನಯನ. *೩. ಸಿದ್ಧಿಗೆ ಅವಕಾಶ.* ಸಾಧನೆಯ ಬುದ್ಧಿ ಬಂತು ಎಂತಾದರೆ, ಸಿದ್ಧಿಗಾಗಿ ಹಂಬಲ ಆರಂಭ. ಸಿದ್ಧಿ ಎಲ್ಲದಕ್ಕೂ ಮಿಗಿಲು. ಸಿದ್ಧಿ ಶಸ್ತ್ರಗಳಿಂದ ಇದ್ದರೆ ಎಲ್ಲೆಡೆ ಗೆಲವು. ಸೃವೋತ್ತಮ ಸಿದ್ಧಿ "ಗಾಯತ್ರೀ" ಸಿದ್ಧಿ. ಈ ಸಿದ್ಧಿಯನ್ನು ಪಡೆದವ ಎಲ್ಲವನ್ನೂ ಪಡೆದಂತೆಯೇ. ಗಾಯತ್ರೀ ಮೊದಲು ಮಾಡಿ ಎಲ್ಲ ಮಂತ್ರಗಳು ಸಿದ್ಧಿಗೆ ಇದೊಂದು ಅವಕಾಶ. *೪. ವೇದಾಧ್ಯಯನಕ್ಕೆ ಅಧಿಕಾರ.* ಅಪೌರುಷೇಯವಾದುದರಿಂದ ವೇದಗಳು. ಭಗವಂತನನ್ನೇ ಕೊಂಡಾಡುವ ಶಾಸ್ತ್ರ ವೇದ. ಜಗತ್ತಿಗೆ ಬುನಾದಿಯಾಗಿ ನಿಂತದ್ದು ವೇದ. ವೇದ ಎಂಬ ತಂತಿಯಿಂದಲೇ ಅನಂತ ಜೀವರನ್ನು ಸಂಸಾರದಲ್ಲ