*ನಾಥನು ನೀನು, ಅನಾಥನು ನಾನಯ್ಯ*
*ನಾಥನು ನೀನು, ಅನಾಥನು ನಾನಯ್ಯ*
"ಮಮ ಸ್ವಾಮೀ ಹರಿರ್ನಿತ್ಯಂ ಸರ್ವಸ್ಯಪತಿರೇವ ಚ" ಶ್ರೀಮದಾಚಾರ್ಯರು ತಿಳಿಸಿದಂತೆ ಶ್ರೀಹರಿಯೇ ಎನ್ನ ನಾಥ, ಎನ್ನೊಡೆಯ, ಎನ್ನ ಸ್ವಾಮಿ.
ಇದ್ದದ್ದನ್ನು ಬಿಟ್ಟು ಇಲ್ಲದ್ದನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಸ್ವಭಾವ ನನ್ನದು. ಅಂತೆಯೇ ನಾನೇ ನಾಥ, ಒಡೆಯ, ಸ್ವಾಮಿ ಎಂದು ಬೀಗುತ್ತೇನೆ. ಆದರೆ ನಿಜವಾಗಿಯೂ ನಮ್ಮೊಟ್ಟಿಗೆ ಬರುವದು ಎಂದರೆ ಏನಿದೆಯೋ ಅದೇ ಹೊರತು, ಇನ್ಯಾವದೂ ಅಲ್ಲ.
ನನ್ನ ಆಭರಣ, ನನ್ನ ಒಡವೆ, ನನ್ನ ವಸ್ತ್ರ, ನನ್ನ ಕಾರು, ನನ್ನ ಸುಖ, ನನ್ನ ಸಂತೋಷ ಇವುಗಳು ನನ್ನೊಟ್ಟಿಗೇ ಇರುವಂಥವುಗಳು. ಆದರೆ ನಾನಗೆ ಮಾತ್ರ ಯಾವದು ನನ್ನದಲ್ಲವೋ ಆ ವಸ್ತುಗಳೇ ಚೆನ್ನಾಗಿ ಕಾಣತ್ತೆ. ಅಂತೆಯೇ ಇನ್ನೊಂದರಿಂದ ಸಂತೋಷ ಪಡಲು ಹಂಬಲಿಸುತ್ತೇನೆ. "ಅದು ನನ್ನೊಟ್ಟಿಗೆ ಬರಲ್ಲ. ನಂದು ಸೇರಲ್ಲ" ಕೊನೆಗೆ ನೆಮ್ಮದಿ ಸಿಗಲ್ಲ.
ಹಾಗೆಯೇ ಇದೆ ಇಂದಿನ ಎನ್ನ ಸ್ಥಿತಿ.
"ನೀನು ಸ್ವಾಮಿ, ನಾನು ದಾಸ" ಎಂಬ ತಿಳುವಳಿಕೆಯೇ ಮುಕ್ತಿಗೆ ಮೂಲ. ಅದನ್ನು ನಾನು ಒಪ್ಪಿಕೊಳ್ಳಲ್ಲ. (ನಾನೇ ಸ್ವಾಮಿ ಎಂದು ಬೀಗುತ್ತೇನೆ) ಹಾಗಾಗಿ ನನ್ನದಲ್ಲದ ಸ್ವಾಮಿತ್ವವನ್ನೇ ಒಪ್ಪಿಕೊಂಡು ಅಪ್ಪಿಕೊಳ್ಳುವದಕ್ಕೆ ಹೋಗುತ್ತೇನೆ. "ನಾನು ಸ್ವಾಮಿ ಆಗಲ್ಲ, ಹೊಂದಬಹುದಾದ ಮುಕ್ತಿ ಪಡೆಯುವದಿಲ್ಲ." ಇದು ಇಂದಿನ ಸಂಸ್ಥಿತಿ ಆಗಿದೆ.
*ಹೇ ಶ್ರೀನಾಥ....!!!!!*
ಲಕ್ಷ್ಮೀದೇವಿಯವರಿಗೇ ಒಡೆಯನಾದ, ಜಗತ್ತಿಗೆ ದೊರೆಯಾದ, ಅಂತೆಯೇ ನನ್ನ ನಾಥನೂ ಆದ ಹೇ ಹರೇ..!! ನನಗೆ ನನ್ನದೇ ಆದ, ನನ್ನೊಡನೇ ಬರುವ, ನನ್ನೊಡನೇ ಇರುವ ದಾಸ್ಯಭಾವವನ್ನೇ ಒಪ್ಪಿಕೊಳ್ಳುವಂತೆ ಮಾಡು.
*ಅನಾಥ ಎಂದರೆ ಏನರ್ಥ...*
ನಾಥ ಸ್ವಾಮಿ, ಅನಾಥ ಎಂದರೆ ಸ್ವಾಮಿಯಲ್ಲದವ ಎಂದು ಒಂದರ್ಥವನ್ನು ಹೇಳಬಹುದು. ಜೊತೆಗೆ ಇನ್ನೊಂದರ್ಥವನ್ನು *ಶ್ರೀಹರಿಯನ್ನೇ ನಾಥ ಸ್ವಾಮಿಯನ್ನಾಗಿ ಯಾರು ಪಡೆದಿದ್ದಾರೆಯೋ ಅವರೇ ಅನಾಥರು* ಹೀಗೂ ತಿಳಿದುಕೊಳ್ಳಬಹುದು.
*ಅನಾಥರಿಗೇನು ಲಾಭ...?*
ಕಾಯಾ ವಾಚಾ ಮನಸಾ ಸರ್ವಾತ್ಮಾನಾ "ದೇವರೇ ಎನ್ನ ಸ್ವಾಮಿ, ನಾನೂ ದೇವರ ದಾಸ" ಎಂದು ತಿಳಿದುಕೊಳ್ಳುವದರಿಂದ ನಾಥರಂತೆ, ಸ್ವಾಮಿಯಂತೆ, ಒಡೆಯನಂತೆ ಇರುವ ಸೌಭಾಗ್ಯವಂತೂ ಬಂದೇ ಬರುತ್ತದೆ.
ವಾಯುದೇವರು ದೇವರನ್ನು ಸರ್ವಾತ್ಮನಾ ನಾಥ ಸ್ವಾಮಿ ಎಂದು ತಿಳಿದ ಕಾರಣ, ಎಲ್ಲದೇವತೆಗಳೂ ಕಿಂಕರರಾಗಿ ಸೆವೆ ಮಾಡುತ್ತಾರೆ. ಲಕ್ಷ್ಮೀ ನಾರಾಯಣರ ತರುವಾಯ ಸಮಗ್ರ ಜಗತ್ತಿಗೆ ಒಡೆಯರೂ ಆಗಿದ್ದಾರೆ. ನಮ್ಮ ನಮ್ಮ ಯೋಗ್ಯತಾನುಸಾರ ಮಹಾಫಲ ಸಿಗುತ್ತದೆ ಎಂದು ಹೇಳಬಹುದು.
ಆದ್ದರಿಂದ ನನ್ನದೇ ಆದ ದಾಸ್ಯಭಾವವೇ ನನಗೆ ಹಿತ. ಇನ್ನೊಂದರದ್ದು ಆದ ನಾಥ ಸ್ವಾಮಿಭಾವ ಸರ್ವಥಾ ಬೇಡ, ಇನ್ನೊಂದರಿಂದ ಏನು ಬೇಡ. ಅಪೇಕ್ಷೆಯಂರೂ ಸರ್ವಥಾ ಬೇಡ. *ನೀನೆ ಎನ್ನ ಸ್ವಾಮಿ ನಾಥ, ನಾನೇ ನಿನ್ನ ದಾಸ ಅನಾಥ* ಎಂಬುವ ನನ್ನದೇ ಆದದ್ದನ್ನೇ ನನಗೆ ಕೊಟ್ಟು ಕರುಣಿಸು. ದಯೆಪಾಲಿಸು. ನಿನಗೆ ನಮಃ, ಕೋಟಿ ಕೋಟಿ ನಮನಗಳು. ಅನಂತ ಅನಂತ ವಂದನೆಗಳು.
*✍🏽✍🏽✍🏽ನ್ಯಾಸ.......*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments