*ಪ್ರೀತಿಯಲ್ಲಿರುವ ಶಕ್ತಿ.....*

*ಪ್ರೀತಿಯಲ್ಲಿರುವ ಶಕ್ತಿ.....*


ಮನುಷ್ಯ ಪ್ರೀತಿಸುವದನ್ನು ಎಂದು ಕಲಿಯುತ್ತಾನೆಯೋ ಅಂದೇ ಅವ ಮಾನವ ನಾಗುತ್ತಾನೆ. ಕೃಮಿ ಕೀಟಗಳಿಂದ ಆರಂಭಿಸಿ ಎಲ್ಲ ಜೀವಗಳಲ್ಲೂ ಇರುವಂತಹದ್ದು ಪ್ರೀತಿ. ದೇವರಲ್ಲೂ ಪ್ರೀತಿ ತುಂಬ ಇದೆ.

ಪ್ರೀತಿ ಎಷ್ಟು ಸಮೃದ್ಧವಾಗಿರುತ್ತದೆಯೋ ಅಷ್ಟೇ ಪ್ರೀತ್ಯಾಸ್ಪದರ ಸಣ್ಣ ಪುಟ್ಟ ಸಮಸ್ಯೆಗಳೂ ಹೆಮ್ಮರವಾಗಿ ಕಾಣುತ್ತವೆ. ಆ ಸಮಸ್ಯೆ ಬಗೆಹರಿಸಲು ನಾನೇ ಇರಬೇಕು ಎಂಬ ಭಾವನೆಯೂ ಮೂಡುತ್ತದೆ. ಅದೇ ಪ್ರೀತಿ ಕಡಿಮೆ ಆಯಿತು ಎಂದಾದರೆ ದೊಡ್ಡ ಸಮಸ್ಯೆ ಆಪತ್ತುಗಳಲ್ಲಿ ಸಿಲುಕಿದರೂ ಅದು ಅವರಿಗೆ ಬಂದ ಆಪತ್ತು ಎಂದನಿಸುವದೇ ಇಲ್ಲ.

*ಪ್ರೀತಿ ಇದು one wey ಅಲ್ಲ. ಕೊಟ್ಟು ತೆಗೆದು ಕೊಳ್ಳುವಂತಹದ್ದೇ ಪ್ರೀತಿ.* ಕೊಡಲು ಹಿಂಜರಿಯುವ ವ್ಯಕ್ತಿಗೆ ಪ್ರೀತಿ ಸಿಗದು.

*ಪ್ರೀತಿಯೇ ಅತ್ಯುತ್ತಮ ಭಾವನೆ...*

ಇಂದು ಒಂದು ಮನೆ, ಅನ್ನ, ಬಟ್ಟೆ, ಬೈಕು, ಮೊಬೈಲು, ಪುಸ್ತಕ, ಧರ್ಮ, ಜ್ಙಾನ, ಗದ್ದಲ, ಝಗಳ, ದೇವರು, ವ್ಯಕ್ತಿ, ಸಹನೆ, ಕ್ಷಮ, ಕೋಪ, ತಾಪ, ಸಿಡುಕು, ಸಿಟ್ಟು, ದೀರ್ಘಸೂತ್ರಿ (ಸಣ್ಣದಾದ್ದನ್ನು ಎಳೆದುಕೊಳ್ಳುತ್ತಾ ಹೋಗುವದು), ಹೀಗೆ ಯಾವದನ್ನು ಆಲಂಗಿಸುವದೇನಿದೆ  ಅವುಗಳಮೆಲೆ ಪ್ರೀತಿ ಇದೆ ಎಂದರ್ಥ.

*ಪ್ರೀತಿಯಲ್ಲಿ ನಿಸ್ವಾರ್ಥತೆ ಹೆಚ್ಚಿರುತ್ತದೆ*

ಪ್ರೀತಿ ತುಂಬಿದ ಮರ. ತಾನು ಸ್ವಯಂ ಬಿಸಲಿನಲ್ಲಿ ನಿಂತಿದ್ದರೂ ಪಕ್ಷಿಗಳಿಗೆ ಮನೆಯಾಗಿದೆ, ದಾರಿಹೋಕರಿಗೆ ನೆರಳು ನೀಡುತ್ತದೆ, ಹಸಿದವರಿಗೆ ಹಣ್ಣು ಕೊಡುತ್ತದೆ ಇಷ್ಟೆಲ್ಲ ತಾನು ಬದುಕಿದಾಗ ಮಾಡುತ್ತದೆ. ತಾನು ಸತ್ತಮೇಲೆಯೂ ಮನೆಗೆ ತೊಲೆಯಾಗಿ ಉಳಿಯುತ್ತದೆ. ಅಡಿಗೆಗೆ ಕಟ್ಟಿಯಾಗಿ ಬರುತ್ತದೆ. ಅದೇ ರಿತಿಯಾಗಿ ಪ್ರೀತಿಪಾತ್ರರಾದ  ಸಜ್ಜನರೂ ಸಹ. ನಮ್ಮ ಎಲ್ಲತರಹದ ಆಪತ್ತುಗಳಿಗೂ ತಮ್ಮ ಉಪಸ್ಥಿತಿ ಇಲ್ಲದಿದ್ದರೂ ನಮ್ಮ‌ ಸಹಾಯಕ್ಕೆ ಮಾತ್ರ ಬರುತ್ತಾರೆ. ಸ್ವಯಂ ಕಷ್ಟದ ಸುಳಿಯಲ್ಲಿ ಸಿಕ್ಕುಬಿದ್ದಿದ್ದರೂ ನಮಗೆ ಸಹಾಯ ಮಾಡುವದಕ್ಕೆ ಹಿಂಜರಿಯರು. ದೂರದಲ್ಲಿ ಇದ್ದರೂ ಜಪ, ಪಾರಾಯಣ, ಉತ್ತಮ ಹಾರೈಕೆ, ಭರವಸೆಯ ಮಾತುಗಳನ್ನು ಹೇಳಿ, ಸಕಾರಾತ್ಮಕ ವಿಚಾರ ಬೋಧಿಸಿ, ಪ್ರೋತ್ಸಾಹದಾಯಕ ಹುಮ್ಮಸ್ಸು ಬೆಳಿಸಿ, ತಮ್ಮೆಲ್ಲ ಅನುಭವ ಸುರಿಸಿ,  ಉತ್ತಮ ಹರಿಕೆಗಳ ಮುಖಾಂತರ ನಮಗೆ ಬೆಂಬಲವಾಗಿ ನಿಲ್ಲುತ್ತಾರೆ. ತಾವು ಸತ್ತಮೆಲೆಯೂ ನೆನೆದವರ ಮನದಲ್ಲಿ   ಬಂದು ಪುಣ್ಯಕೊಟ್ಟು ಆಪತ್ತು ಕಳೆದು, ಮನಸದಸಿಗೆ ಸಮಾಧಾನಕೊಟ್ಟು ಹೋಗುತ್ತಾರೆ.

ಇಷ್ಟೆಲ್ಲ ಯಾಕೆ ಮಾಡುತ್ತಾರೆ .. ??

ಯಾಕೆ ಅಂದರೆ ಮರದಲ್ಲಿ, ಹಾಗೂ ಪ್ರೀತಿಪಾತ್ರರಾದ ಸಜ್ಜರಲ್ಲಿ ಅಷ್ಟು ನಿಷ್ಕಲ್ಮಷ ನಿರ್ವ್ಯಾಜ ಪ್ರೀತಿ ತುಂಬಿದೆ.

ನಾವು ಮಾಡುವ, ಮಾಡುತ್ತಿರುವ ಎಲ್ಲದರಲ್ಲಿಯೂ ಪ್ರೀತಿ ಇರಲಿ. ಆದರೆ ಜನರು ಪ್ರೀತಿಗೆ ಕಾರಣವೇನಿರಬಹುದು ಎಂದು ಯೋಚಿಸುತ್ತಾರೆ. ಅದು ಅವರ ಸಮಸ್ಯೆ. ಕಾರಣವಿಲ್ಲದ ಷರತ್ತಿಲ್ಲದ ಪ್ರೀತಿಯನ್ನು ನಮ್ಮ ಮನಸ್ಸಿಗೆ ಕಲಿಸಿಕೊಟ್ಟರೆ ಜೀವನದಲ್ಲೇ ದೊಡ್ಡ ಶಿಖರವನ್ನು ಏರಿದಂತಾಗುತ್ತದೆ.

*ಪ್ರೀತಿಯ ಉಳಿಯುವಿಕೆಯಲ್ಲಿ ಕೃತಜ್ಙೆತಯ ಪಾತ್ರವೂ ಮುಖ್ಯ*

ಪ್ರೀತಿ ಹುಟ್ಟಿಸಿಕೊಳ್ಳುವದು ನಮ್ಮಿಂದ ಸಾಧ್ಯ. ಹುಟ್ಟಿದ ಪ್ರೀತಿ ಬೆಳೆಯುವದು ಅಥವಾ ಬೆಳಿಸುವದೆನಿದೆ ಅದು ಪ್ರೀತ್ಯಾಸ್ಪದರ ಜವಾಬ್ದಾರಿ. ಬೆಳೆದ ಪ್ರೀತಿ ದೃಢವಾಗಿ ಉಳಿಯುವದು ಕೃತಜ್ಙೆತೆಯಿಂದ ಮಾತ್ರ. 

*ಕೃತಜ್ಙತೆಯ ಇನ್ನೊಂದು ಮುಖ್ಯ ಭಾವನೆ*

"ತನ್ನಲ್ಲಿಲ್ಲದ ಪದಾರ್ಥಗಳ ಬಗ್ಗೆ ಗೊಳಾಡುವ ಬದಲು, ತನ್ನಲ್ಲಿ ಇರುವ ಪದಾರ್ಥಗಳ ಬಗ್ಗೆ ಕೃತಜ್ಙನಾಗಿರಬೇಕು." 

*ಕೃತಜ್ಙತೆ ಇಲ್ಲದ ಮನುಷ್ಯ ಅಸುಖಿಯೇ.*

ತನ್ನಲ್ಲಿ ಇರುವ ಅಮೂಲ್ಯ ಪದಾರ್ಥಗಳ ಅರಿವು ಇಲ್ಲ. ಅಂತೆಯೇ ಕೃತಜ್ಙನಾಗಿಲ್ಲ. ಇರುವ ಪದಾರ್ಥಗಳ ಅರಿವೇ ಇಲ್ಲದಾದಾಗ ಪ್ರೀತಿ ಹುಟ್ಟಲೂ ಸಾಧ್ಯವಿಲ್ಲ. ಪ್ರೀತಿ ಹುಟ್ಟದಾದಾಗ ಅವುಗಳನ್ನು ಸ್ವೀಕರಿಸುವದೂ ದುಸ್ಸಾಧ್ಯ. ಇರುವ ಪದಾರ್ಥಗಳ ಅರಿವು ಕಡಿಮೆಯಾಗಿದೆ ಎಂದರೆ ಇಲ್ಲದ ಪದಾರ್ಥಗಳ ಅರಿವು ಹೆಚ್ಚಾಗಿದೆ ಎಂದೇ ಅರ್ಥ. ಇಲ್ಲದ ಸಲ್ಲದ ಪದಾರ್ಥಗಳ ಮೇಲಿನ ಅರಿವು ಅಥವಾ ಪ್ರೀತಿ ಎರಡೂ ಸುಖವನ್ನು ತಂದು ಕೊಡದು. ಆದ್ದರಿಂದ ಅವನು ಅಸುಖಿಯೇ. ಆದ್ದರಿಂದ ಕೃತಜ್ಙತಾ ತುಂಬ ಮುಖ್ಯ. ಹೀಗೆಲ್ಲ ಪ್ರೀತಿಯ ಶಕ್ತಿಗಳು ಇವೆ.

*ಪ್ರೀತಿ ಹುಟ್ಟುವ ಬಗೆ ಹೇಗೆ..??*

*ಪ್ರೀತಿ ವರ್ಧನ* ನಾಮಕ ದೇವರೇ ಪ್ರೀತಿಯನ್ನು ಹುಟ್ಟಿಸಬೇಕು. ಆ ದೇವರನ್ನು *ಪ್ರಿಯಃ* *ಪರಮ ಪ್ರಿಯಃ* *ಪ್ರೀತ್ಯಾಸ್ಪದಃ*  *ಪ್ರೇಷ್ಠಃ* *ಪ್ರೇಷ್ಠಃ ಪ್ರೇಷ್ಠತಮಃ*  ಇತ್ಯಾದಿಯಾಗಿ ಚಿಂತಿಸಿದಾಗ ಮಾತ್ರ ದೇವರು ಯಾವದು ಯೋಗ್ಯ, ಯಾವದು ಹಿತಕಾರಿ, ಯಾವದು ಉಪಕಾರಿ ಅವುಗಳಲ್ಲಿಯೇ ಪ್ರೀತಿ ಹುಟ್ಟಿಸುತ್ತಾನೆ.

ಆ ದೇವರಲ್ಲಿ ಬೇಡೋಣ ನಾವು ಮಾಡುವ ಮಾಡುತ್ತಿರುವ, ನೋಡಿದ ನೋಡುವ, ಕೇಳಿದ ಕೇಳುವ, ನಿನ್ನವರಲ್ಲಿ, ನಿನ್ನ ಸಂಬಂಧಿಗಳಲ್ಲಿ, ನಿನ್ನಿಂದ ಅಧಿಷ್ಠಿತವಾದ ಸಕಲ ಪದಾರ್ಥಗಳಲ್ಲಿಯೂ ನಿರ್ವಾಜ ನಿಷ್ಕಲಷ ಪ್ರೀತಿಯನ್ನು ಒದಗಿಸು. ಎಲ್ಲರಿಗೂ ನನ್ನನ್ನು ಪ್ರಿಯನನ್ನಾಗಿಸು🙏🏽🙏🏽🙏.

*✍🏽✍🏽✍ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ,  ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*