Posts

Showing posts from August, 2019

*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....*

Image
*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....* ಎರಡು ದಿನದಲ್ಲಿ ನಮ್ಮ ನೆಚ್ಚಿನ ದೇವತೆ ಗಣಪ್ಪ ಬರುವವನಿದ್ದಾನೆ. ಮುಂದಿನ ಸಂಪೂರ್ಣ ಒಂದು ವಾರ ಗಣಪತಿಯ ಹಬ್ಬದ ಉತ್ಸವದ ವಾರ. "ಗಣಪತಿ ಒಬ್ಬ ದೇವತೆ" ಎನ್ನುವದನ್ನು ಇಂದಿನ ಜನತೆ ಮರೆತಂತೆ ಇದೆ. ಗಣಪತಿ ಆಕಾಶಕ್ಕೆ ಅಭಿಮಾನಿ. ದೇವರಿಗೆ ಅತ್ಯಂತ ಪ್ರಿಯ. ನಮ್ಮ ವಿಘ್ನನಿವಾರಕ ಸ್ವಾಮಿ. ಎಂದೂ ಮರೆಯುವಂತಿಲ್ಲ.  *ಗಣಪತಿ ದೇವತೆ ಎನ್ನುವದನ್ನು ನಾವೆಲ್ಲಿ ಮರೆತಿದ್ದೇವೆ... ??* ಗಣಪತಿ ದೇವತೆ ಎನ್ನುವದನ್ನು ನಾವು ಮರೆತಿಲ್ಲ ನಿಜ. ನಮ್ಮ ವೃತ್ತಿ ಮಾತ್ರ ಮರೆತಂತೆ ತೋರಿಸುತ್ತದೆ. ದೇವತೆ ಎಂಬ ಭಾವ ನೆನಪಿದ್ದರೆ ದೇವತೆಗೆ ಅವಮಾನವಾಗುವ ಯಾವ ಕ್ರಿಯೆಯೂ ಆಗುತ್ತಿರಲಿಲ್ಲ.  *ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....* ಹಾಲಿನ ಅಂಗಡಿಯಲ್ಲಿ ಮೊಸರು ಇಟ್ಟರೆ ಶೋಭೆ. ಶ್ರೀಖಂಡ ಬಾಸುಂದಿ ಫೇಡೆ ಮೊದಲಾದ ಹಾಲಿನ ಪದಾರ್ಥಗಳನ್ನೇ ಇಟ್ಟರೆ ಆ ಅಂಗಡಿಗೂ ಯಜಮಾನನಿಗೂ ಕೀರ್ತಿ ಜೊತೆಗೆ ತೃಪ್ತಿ. ಜೊತೆಗೆ ಹಾಲಿನ ಅಂಗಡಿಯಲ್ಲಿ "ಹೆಂಡವನ್ನೂ ಇಟ್ಟರೆ" ಹಾಲಿನ ಅಂಗಡಿಗೇ ಅವಮಾನ. ಹಾಗೆಯೆ ಇಂದು ಮಹಾನ್ ದೊಡ್ಡ ದೇವತೆಯಾದ, ವಿಷ್ಣುಪ್ರಿಯನೂ ಆದ, ನಮ್ಮೆಲ್ಲರ ನೆಚ್ಚಿನ ದೊರೆಯಾದ ಗಣಪತಿಯ ಎದರು ವೇದಮಂತ್ರಗಳನ್ನು ಅಂದರೆ ಮಹಾ ತೃಪ್ತಿ. ಪುರಂದರ ವಿಜಯ ಕನಕದಾಸರುಗಳು - ಮೀರಾಬಾಯಿ - ಕಬೀರದಾಸ - ಅನ್ನ

*ನಾವು ಕರೆದರೆ ದೇವನು ಏಕೆ ಬರುವದಿಲ್ಲ..... ಎಂಬ ಪ್ರಶ್ನೆ ಉಚಿತವೇ??*

*ನಾವು ಕರೆದರೆ ದೇವನು ಏಕೆ ಬರುವದಿಲ್ಲ..... ಎಂಬ ಪ್ರಶ್ನೆ ಉಚಿತವೇ..??* "ಭಕ್ತಪ್ರಿಯಂ" ಭಕ್ತರಿಗೆ ಅತ್ಯಂತ ಪ್ರಿಯ ಎಂದು ಶ್ರೀಮದ್ಬಾಗವತ ದೇವರನ್ನು ಕರೆಯುತ್ತದೆ. ಭಕ್ತರಮೇಲೆ ಅಷ್ಟು ಪ್ರೀತಿಸುವ ದೇವ ಭಕ್ತರಾದ ನಾವು ಕರೆದರೆ ಓ ಎನ್ನುವದಿಲ್ಲವೇಕೆ.. ?? ಬರುವದಂತೂ ದೂರದ ಮಾತು ಅಲ್ಲವೆ... ?? ಎಂದು ಅನೇಕ ಬಾರಿ ಅನಿಸಿದ್ದು ಇದೆ.  ಕರದರೆ ಬಾರದಷ್ಟು ದುಷ್ಟನು ದೇವನಲ್ಲ. ಹೇಗೆ ಕರಿಯಬೇಕೋ ಹಾಗೆ ಕರೆದರೆ, ಹೆಂಡತಿಯನ್ನೂ ಪಕ್ಕಕ್ಕಿರಿಸಿ ಓಡಿ ಬರುವಷ್ಟು ಕರುಣಿಯಾಗಿದ್ದಾನೆ ದೇವ. ಕರಿಯುವ ಪ್ರಕಾರದಲ್ಲಿ ಕರಿಯಬೇಕಷ್ಟೆ...  "ನಾರಾಯಣ ಅಖಿಲ ಗುರೋ ಭಗವನ್ನಮಸ್ತೆ" ಎಂದು ಗಜೇಂದ್ರ ಕರೆದ, ಓಡಿಬಂದ ದೇವ. ಪ್ರಹ್ಲಾದ ಕರೆದ ಓಡಿಬಂದ ದೇವ. ದ್ರೌಪದಿ ಕರೆದಳು ಓಡಿಬಂದ ದೇವ. ಇವರೆಲ್ಲರು ಹೇಗೆ ಕರೆದರೋ ಹಾಗೆ ನಾವು ಕರೆದರೆ ಓಡಿಬರದೇ ಇರಲಾರ.  *ದ್ರೌಪದೀ ಗಜೇಂದ್ರ ಪ್ರಲ್ಹಾದ ಇವರು ಹೇಗೆ ಕರೆದರು....* ದ್ರೌಪದೀ ಗಜೇಂದ್ರ ಪ್ರಲ್ಹಾದ ಈ ಎಲ್ಲ ಭಕ್ತರು ದೆವನನ್ನು ಕರೆಯುವದಕ್ಕೂ ಪೂರ್ವದಲ್ಲಿ ದೇವರಿಗೋಸ್ಕರ ತನ್ನನ್ನು ತಾವು ಪರಿಪೂರ್ಣ ಸಮರ್ಪಿಸಿಕೊಂಡವರು. ತಮ್ಮ ಸಮಯವನ್ನು ದೇವರಿಗೋಸ್ಕರ ಮೀಸಲು ಇಟ್ಟವರು. ತಮ್ಮ ದೇಹ ಇಂದ್ರಿಯ ಮನಸ್ಸು ಕುಟುಂಬ ಹಣ ಧನ ಕನಕ ಮನೆ ಎಲ್ಲವನ್ನೂ  ದೇವರಿಗೆ ಸಮರ್ಪಿಸಿದವರು ಇವರು. ದೇವರಾಜ್ಙಾ ರೂಪ ಧರ್ಮಪಾಲನೆಯಲ್ಲಿ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳದವರು ಇವ

*ಓ ಸಿಟ್ಟು ಕೊಲ್ಲುವ ದೇವ ನಿನಗೆ ನಮಸ್ಕಾರ*

Image
*ಓ ಸಿಟ್ಟು  ಕೊಲ್ಲುವ ದೇವ ನಿನಗೆ ನಮಸ್ಕಾರ* "ಕ್ರೋಧಘ್ನೇ ನಮಃ" ಎಂದು ವಿಷ್ಣುಸಹಸ್ರ ನಾಮದಲ್ಕಿ ಬಂದ ಒಂದು ಅತ್ಯುತ್ತಮ ರೂಪ. ಕ್ರೋಧವನ್ನು ಸಿಟ್ಟನ್ನು ನಾಶ ಮಾಡುವ ದೇವರ ರೂಪ. ನಿತ್ಯ ಚಿಂತನೆಗೆ ಯೋಗ್ಯವೂ ಆದ ರೂಪ.  *ಸಿಟ್ಟು ಯಾಕೆ ಬರತ್ತೆ......??* ಸಿಟ್ಟು ಯಾಕೆ ಬರತ್ತೆ..?? ಎಂದು ಕೇಳಿದರೆ ನಿರ್ದಿಷ್ಟ ನಿಖರ ಕಾರಣಗಳನ್ನು ಹೇಳುವದು ಕಷ್ಟ ಎಂದು ಅನೇಕರು ಹೇಳುವದಿದೆ. ಆದರೆ ಶ್ರೀಕೃಷ್ಣ ಪರಮಾತ್ಮ *ಕಾಮಾತ್ ಕ್ರೋಧೋಭಿಜಾಯತೇ* ಎಂದು ಗೀತೆಯಲ್ಲಿ ತಿಳಿಸಿದಂತೆ "ತನ್ನ ಇಚ್ಛೆಗಳು ಈಡೇರದಿರುವಾಗ ಸಿಟ್ಟು ಬರುವದು" ಎಂದು ತಿಳಿಸಿಕೊಡುತ್ತಾನೆ.  ಹಸಿದವನಿಗೆ ಸಿಟ್ಟು ಬರತ್ತೆ ಇಲ್ಲೆಲ್ಲಿ ಅವನ ಇಚ್ಛೆ ವಿಫಲವಾಗಿದೆ ?? ಎಂದು ಪ್ರಶ್ನೆ ಬರಬಹುದು. ತಾನೊಂದು ಇರಿಸಿಕೊಂಡ ಸಮಯಕ್ಕೆ ಊಟವಾಗಿಲ್ಲ. ಹಾಗಾಗಿ ಸಿಟ್ಟೇ ಹೊರತು. ಹಸಿವೆ ಸಿಟ್ಟಿಗೆ ಕಾರಣವಲ್ಲ. ಏಕಾದಶಿ ಕೃಷ್ಣಾಷ್ಟಮಿ ಸಿಟ್ಟಿನಲ್ಲೇ ಕೊಳೆಯಬೇಕಾಗುತ್ತಿತ್ತು.  *ಕ್ರೋಧಘ್ನೇ ನಮಃ* ನನ್ನ ಮಾತು ಕೇಳಿಲ್ಲ ಹಾಗಾಗಿ ನಮ್ಮವರ ಮೇಲೆ ಸಿಟ್ಟು.  ಧರ್ಮ ತಾನು ನಾನು ಬಯಸಿದ ಫಲ ಕೊಟ್ಟಿಲ್ಲ ಹಾಗಾಗಿ ಧರ್ಮದಮೇಲೆ ಸಿಟ್ಟು. ದೇವರ ವಿಷಯಕವೂ ಹೀಗೆಯೇ. ಎದ್ದರೆ ಸಿಟ್ಟು, ಕೂಡೆಂದರೆ ಸಿಟ್ಟು, ಮಲಗಿದರೆ ಸಿಟ್ಟು, ಊಟವಾದರೆ ಸಿಟ್ಟು, ಮಾತಾಡಿದರೆ ಸಿಟ್ಟು, ಹೀಗೆ ಎಲ್ಲದರ ಮೇಲೇ ಸಿಟ್ಟು ಮಾಡಿಕೊಳ್ಳಲಿಕ್ಕೆ ಸಿಟ್ಟನ್ನೇನು ನಾವು ಖರೀದಿ ಮಾಡಿಲ್ಲ

*ಚಿಣ್ಣರಿಗೆ ಕೃಷ್ಣನ ಸವಿನುಡಿಗಳು....*

Image
*ಚಿಣ್ಣರಿಗೆ ಕೃಷ್ಣನ ಸವಿನುಡಿಗಳು....* ಕೃಷ್ಣನಿಗೆ ಚಿಣ್ಣರೆಂದರೆ ಬಲುಪ್ರೀತಿ. ಚಿಣ್ಣರನ್ನು ಬದಲು ಮಾಡಲು ತುಂಬ ಅಭಿರುಚಿ. ಚಿಣ್ಣರಿಂದಲೇ ಹೊಸಬದುಕಿನ ಆಸಕ್ತಿ. ಸಮೃದ್ಧ ಜೀವನದ ನಿರ್ಮಾಣಕ್ಕೋಸ್ಕರವೇ ಚಿಣ್ಣರ ಅಭಿವ್ಯಕ್ತಿ. ಅಂತೆಯೇ ಕೃಷ್ಣನಿಗೆ ಚಿಣ್ಣರೂ ಎಂದರೆ ಎಲ್ಲಿಲ್ಲದ ರುಚಿ.  *ಶ್ರೀಕೃಷ್ಣ ಪ್ರೀತಿಸುವಷ್ಟು ಚಿಣ್ಣರಲ್ಲಿ ಏನಿದೆ ...* ಇವತ್ತು ಸೃಷ್ಟಿಗೆ ಬರುವ ಜೀರು ಅನಂತ ಅನಂತ. ಆ ಎಲ್ಲ ಜೀವರಾಶಿಗಳಿಗೂ ತಮ್ಮ ಜೀವನದ ಉದ್ದೇಶ್ಯ ಗೊತ್ತಾಗುವದರೊಳಗೇ ಜೀವನದ ಕೊನೆಯ ಉಸಿರು ಬಂದಾಗಿರುತ್ತದೆ. "ಸ್ಪಷ್ಟ ಉದ್ದೇಶ್ಯ ತಿಳಿಸಿ ಉದ್ದೇಶ್ಯ ಸಿದ್ದಿಗೆ ಕ್ರಿಯಾಶೀಲನನ್ನಾಗಿಸುವ ಸರಿಯಾದ ಸಮಯ ಎಂದರೆ ಅದು ಬಾಲ್ಯಾವಸ್ಥೆ" ಹಾಗಾಗಿ ಅರಳುವ  ಚಿಣ್ಣರೂ ಎಂದರೆ ಕೃಷ್ಣನಿಗೆ ಪ್ರೀತಿ.  *ಶೈಶವಾವಸ್ಥೆ ಅಂತಹದ್ದೇನಾಗಿದೆ....* ಶೈಶವ ಅವಸ್ಥೆಯಲ್ಲಿ ಏನಿಲ್ಲ. "ಹೊಟ್ಟೆ ತುಂಬ ಊಟ, ಕಣ್ಣು ತುಂಬ ನಿದ್ರೆ, ಮುಖದ ತುಂಬಿ ನಗು" ಇಷ್ಟಿದೆ ಎಂದೆ ನಮ್ಮ ತಿಳುವಳಿಕೆ. ಕೃಷ್ಣನ ವಿಚಾರವೇ ಬೇರೆ. ಹೆಮ್ಮರವಾಗಿ ಬೆಳೆಯುವ ಈ ಗಿಡವನ್ನು ಹೇಗೆ ಬೆಳಿಸಬೇಕು ಎಂದು ತಿಳಿಸುವ ಬೆಳೆಸುವ ಸಮಯ ಅಂದರೆ ಅದು ಶೈಶವ ಅವಸ್ಥೆ.  *ಉದ್ದೇಶ್ಯಗಳ ಅರಿವು ಮೂಡಿಸುವದು ಮೊದಲ ಕಾರ್ಯ* ಸಾಧನೆಗೋಸ್ಕರ ಬಂದವರು ನಾವು. ನಾಳೆ ಮಾಡಿದರಾಯ್ತು ಎಂದು ಸಾಧನೆಯನ್ನು ಮುಂದೂಡುವವರೂ ನಾವೇ.  ಕೃಷ್ಣ ಭೂಮಿಗೆ ಬರುವ ಉದ್ದ್ಯೇಶ್

*ಮನ ಮನೆಯಲ್ಲಿ ಹುಟ್ಟಿ ಮತ್ತೆ ಹುಟ್ಟಿ ಬಾ ಕೃಷ್ಣ...!!*

Image
*ಮನ ಮನೆಯಲ್ಲಿ ಹುಟ್ಟಿ ಮತ್ತೆ ಹುಟ್ಟಿ ಬಾ ಕೃಷ್ಣ...!!* ಐದು ಸಾವಿರ ವರ್ಷದ ಹಿಂದೆ ಧರ್ಮ ರಕ್ಷಣೆ ಹಾಗೂ ದುಷ್ಟ ಶಿಕ್ಷೆಗೆ ಹುಟ್ಟಿ ಬಂದ ಕೃಷ್ಣ, ಇಂದು ಪುನಃ ನಮ್ಮ ಮನೆ ಮನಗಳಲ್ಲಿ ಹುಟ್ಟಿ ಬರಬೇಕಾಗಿದೆ. ಅದಕ್ಕೋಸ್ಕರ ನಾಳೆಯ ಕೃಷ್ಣಾಷ್ಟಮಿ ಆಚರಣೆ... ಕಲಿಯ ರಾಜ್ಯದಲ್ಲಿ ಮನಸ್ಸಿಗೆ ಅಭಿಮಾನಿ ಕಾಲನೇಮಿ. ಒಂದರ್ಥದಲ್ಲಿ ಗೃಹ ಮಂತ್ರಿ ಇದ್ದ ಹಾಗೆ. ಈ ಕಾಲನೇಮಿ ಮನೆಯಲ್ಲೋ ಅಥವಾ ಮನದಲ್ಲಿಯೋ ಕೃಷ್ಣ ನಿದ್ದಾಗ ಇರಲಾರ. ಕೃಷ್ಣ ಬಂದರೆ ಸಂಹಾರ ಮಾಡಿಯೇ ಬಿಡುವ.  *ಮನೆ ಹಾಗೂ ಮನದಲ್ಲಿ ಕೃಷ್ಣನಿಲ್ಲವೆ...* ಮನೆ ವಿಸ್ತಾರವಿದೆ. ಮನಸ್ಸು ತುಂಬ ವಿಶಾಲವಿದೆ. ಆದರೆ ಕೃಷ್ಣನಿಗೆ ಮಾತ್ರ ಸ್ಥಳಾವಕಾಶ ಇಲ್ಲವೇ ಇಲ್ಲ. ಆದ್ದರಿಂದಲೇ ಮನೆ ಒಂದು ದಿಕ್ಕಿಗೆ ಮನ ಮತ್ತೊಂದು ದಿಕ್ಕಿಗೆ ಹೊಗುತ್ತಿವೆ.  ಹೀಗಾಗಿ ಮನೋಭಿಮಾನಿ ಕಾಲನೇಮಿ ಕಂಸ ಮನೆಯಲ್ಲೆಲ್ಲ ಮನಸ್ಸಿನಲ್ಲೆಲ್ಲ ವ್ಯಾಪಿಸಿ ಕುಳಿತುಕೊಂಡಿದ್ದಾನೆ. ಈ ಕಾಲನೇಮಿ ಕಂಸ  ಹೆಚ್ಚು ಸಮಯ ಧರ್ಮದಿಂದ ದೂರ ಇರುವಂತೆ ನೋಡಿಕೊಳ್ಳುತ್ತಾನೆ. ಅಧರ್ಮದಲ್ಲಿ ರುಚಿ ಹಚ್ಚಿಸುತ್ತಾನೆ. ಅಧರ್ಮದಲ್ಲಿ ಪ್ರೇರೇಪಿಸುತ್ತಾ ಇರುತ್ತಾನೆ.  *ಕೃಷ್ಣನನ್ನು ಮನೆ ಮನಕ್ಕೆ ಕರದಿಲ್ಲವೆ....* ಮನೆಗೆ ನೂರಾರು ಬಂಧು ಬಾಂಧವರನ್ನು ಗೆಳೆಯರನ್ನು ಕರೆತರುತ್ತವೆ ಹಾಗೆ "ಕೃಷ್ಣ ನೀ ಬೇಗನೇ ಬಾರೋ" ಎಂದು ಕರಿಲಿಕ್ಕೆ ಸಾಧ್ಯವಿಲ್ಲ. ತಪ್ಪಿ ಕೃಷ್ಣನನ್ನು  ಕರದರೆ ಮೈಮೇಲೆ ಬರತ್ತೆ....  ದೇ

*ನೆನಪಿನ ಶಕ್ತಿ*

Image
*ನೆನಪಿನ ಶಕ್ತಿ* ದೇವರು ಕೇಳದೇ ಕೊಟ್ಟ ನೂರಾರು ಪದಾರ್ಥಗಳಲ್ಲಿ ಅತ್ಯಮೂಲ್ಯಪದಾರ್ಥ ಅದು "ನೆನಪಿನಶಕ್ತಿ" ಎಂದರೆ ತಪ್ಪಾಗಲಿಕ್ಕಿಲ್ಲ.  ಹುಟ್ಟಿದಾಗಿನಿಂದ ಸಾಯುವವರೆಗೆ ಒಟ್ಟು ಬದುಕಿನಲ್ಲಿ ಹತ್ತು ಕೋಟಿ ಕೋಟಿ ವಿಷಯಗಳನ್ನು ನೆನಪನಲ್ಲಿ ಇಟ್ಟುಕೊಳ್ಳತ್ತದೆ ಎಂದು ಒಂದು ಅಂದಾಜು.  ತಾಯಿಯನ್ನು ನೋಡಿ ಗುರುತು ಹಿಡಿಯುವದು, ಅಮ್ಮಾ ಎಂದು ತಾಯಿ ಹೇಳುತ್ತಿದ್ದಂತೆ ಪುನಃ ಹೇಳುವದು, ಹೆಸರಿಟ್ಟು ಕರೆದಾಕ್ಷಣ ತಿರುಗಿ ನೋಡುವದು ಹೀಗೆ ಒಂದೊಂದನ್ನೂ ನೆನಪಿನಲ್ಲಿಟ್ಟುಕೊಳ್ಳುವ ಕೆಲಸ ಮೆದುಳಿನ ಕೆಲಸಗಳು. ಈ ರೀತಿ ಒಬ್ಬ ವ್ಯಕ್ತಿ ಬದುಕಿನಲ್ಲಿ ನೆನಪಿಟ್ಟುಕೊಂಡ ಪದಗಳು ಆಲೋಚನೆಗಳು, ವಸ್ತುಗಳು, ವಿಷಯಗಳು ಎಲ್ಲವನ್ನೂ ಒಂದೆಡೆ ಕ್ರೋಡೀಕರಿಸಿ ಬರೆದರೆ ಹತ್ತುಕೋಟಿ ಐವತ್ತುಲಕ್ಷ ಮೈಲು  ಆಗುತ್ತದೆ ಎಂದು ಒಂದು ಅಂದಾಜು ಅಷ್ಟೆ.  ಇಷ್ಟು ಅಗಾಧವಾದ ಶಕ್ತಿ ಒಂದು ಕಿಲೋಗ್ರಾಮಿನ ಮೆದುಳಿಗೆ ದೇವರುಕೊಟ್ಟಿದ್ದಾನೆ. ಈ ಒಂದು ಮೆದುಳಿಗೆ ಸಹಾಯಕವಾಗಿ  ಲಕ್ಷಕೋಟಿ ನರಗಳು ಅನುಕ್ಷಣವೂ ಬಿಡದೆ ಕೆಲಸ ಮಾಡುತ್ತಿರುತ್ತವೆ.  ಒಂದು ಕಿಲೊ ಗ್ರಾಂ ಅಷ್ಟಿರುವ ಮೆದಳಿನಲ್ಲಿ ಅಂದಾಜು ಲಕ್ಷ ಕೋಟಿ‌ ನರಗಳು ಇರುತ್ತವೆ ಎಂದರೆ ಎಷ್ಟು ಸೂಕ್ಷ್ಮವಾಗಿ ಇರುತ್ತವೆ ಎಂದು ಯೋಚಿಸಬೇಕು.  "ಒಂದು ದೊಡ್ಡ ಕಾಂಪ್ಯುಟರ್ ಆಫೀಸಿನ ಹಾಲಿನಲ್ಲಿ ಕೋಟಿಜನ ತಲೆ ಎತ್ತದೆ ಕೆಲಸ ಮಾಡುತ್ತಿರುತ್ತಾರೆ" ಎನ್ನುವದನ್ನು ಊಹಿಸಿ ನೋಡಿದಾಗ "ಈ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

Image
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ಗುರುಸಾರ್ವಭೌಮರಾದ ಶ್ರೀಶ್ರೀರಾಘವೇಂದ್ರ ಪ್ರಭುಗಳ ಆರಾಧನಾ ಮಹೋತ್ಸವ. ಆ ಮಹಾಮಹಿಮರ ಚರಮಶ್ಲೋಕದ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡೋಣ.  *ಪೂಜ್ಯಾಯ* - ಶ್ರೀಮಟ್ಟೀಕಾಕೃತ್ಪಾದರು ವ್ಯಾಸರಾಜರು ಶ್ರೀರಘೂತ್ತಮರ ತರುವಾಯ ಜಗತ್ತಿನಲ್ಲಿಯೇ ಪರಮಪೂಜ್ಯರಾದ. *ಸತ್ಯ ಧರ್ಮರತಾಯ ಚ* - ಸತ್ಯ ಹಾಗೂ ಭಾಗವತಧರ್ಮಗಳಲ್ಲೇ ರತರಾದ. *ಭಜತಾಂ ಕಲ್ಪವೃಕ್ಷಾಯ* - ಸೇವೆ ಮಾಡುವ ಸದ್ಭಕ್ತರಿಗೆ ಕಲ್ಪವೃಕ್ಷದಂತೆ ಸರ್ಸ್ವವನ್ನೂ ಕೊಡುವ. *ನಮತಾಂ ಕಾಮಧೇನವೇ* - ನಮಸ್ಕಾರ ಮಾಡುವ ಭಕ್ತರಿಗೆ ಕಾಮಧೇನುವಿನಂತಿರುವ. *ರಾಘವೇಂದ್ರಾಯ* ಶ್ರೀರಾಘವೇಂದ್ರ ಪ್ರಭುಗಳಿಗೆ. *ನಮಃ* - ನಮಸ್ಕಾರಗಳು.  ವಿವರಣೆ..... ಹಿರಿಯರು ಎಂದಿಗೂ ನಮಗೆ ಆದರ್ಶ ಪುರುಷರೇ. ತಮ್ಮ ನಡೆ ನುಡಿಗಳಿಂದ ನಮಗೂ ಮಾರ್ಗ ತೋರಿಸಿಟ್ಟಿರುತ್ತಾರೆ. ಅತ್ಯುತ್ತಮರಾದ ರಾಯರೂ ಮಹಾನ್ ಆದರ್ಶರೇ ಮಾರ್ಗದರ್ಶಕರೇ.  *ರಾಯರು ಪೂಜ್ಯರು ಏಕೆ  ಹೇಗೇ.....* ಪೂಜ್ಯತೆಗೆ ಕಾರಣ ಒಂದು ಧರ್ಮಾಚರಣೆ ಇನ್ನೊಂದು ನಿಸ್ವಾರ್ಥ ಪರೋಪಕಾರ. ರಾಯರಲ್ಲಿ ಈ ಎರಡೂ ಗುಣಗಳು ನಿಸ್ಸೀಮವಾಗಿದ್ದವು. ಅಂತೆಯೇ ಇಂದಿಗೂ ಎಂದೆಂದಿಗೂ ಪೂಜ್ಯರೆ. *ಧರ್ಮಪರಾಯಣರು ರಾಯರು...* ಭಾಗವತ ಧರ್ಮಗಳನ್ನು ರೂಢಿಸಿಕೊಂಡವರು ರಾಯರು. ಎಲ್ಲ ಧರ್ಮಗಳೂ ಅವರ ನರನಾಡಿಗಳಲ್ಲಿ ಇದ್ದವು. ಆ ಎಲ್ಲ ಧರ್ಮಗಳೂ ಬಹಳೇ ಸೂಕ

ಸಾವಧಾನದಿಂದರೂ ಮನವೇ - ರಾಯರು ಕೊಟ್ಟಾರು ಕೊಟ್ಟಾರು ಕೊಟ್ಟಾರು*

Image
* ಸಾವಧಾನದಿಂದರೂ ಮನವೇ - ರಾಯರು ಕೊಟ್ಟಾರು ಕೊಟ್ಟಾರು ಕೊಟ್ಟಾರು* ಬೇಡುವ ನಮಗೆ ಕೊಡುವ ರಾಯರೇ ಗತಿ. "ಕೊಡುವವರಿಗೆ ಒಂದೆಚ್ಚರ ಇರತ್ತೆ ಯಾವಾಗ ಕೊಡಬೇಕು, ಹೇಗೆ ಕೊಡಬೇಕು ಎನ್ನುವದು." ಸಮಯ ಬಂದಾಗ ಕೊಡದೇ ಇರರು. ವ್ಯಾಮೋಹಕ್ಕೆ ಬಿದ್ದು ಎಂದಿಗೂ ಕೊಡಲಾರರು.  *ವ್ಯಾಮೋಹಕ್ಕೆ ಬಿದ್ದು ಕೊಡಬಾರದು ಏತಕೆ....???* ಶಿಷ್ಯ ವ್ಯಾಮೋಹ, ಭಕ್ತ ವ್ಯಾಮೋಹ ರಾಯರಿಗೆ ಇದ್ದೇ ಇದೆ. ಪುತ್ರವತ್ಪರಿರಕ್ಷಿಸುವವರು ರಾಯರೇ. ಆದರೆ....  ತಂದೆ ತಾ ತುಂಬ ಕಠಿಣ ಪರಿಶ್ರಮದಿಂದ ಮೇಲೆದ್ದು ಬಂದಿರುತ್ತಾರೆ. ಪ್ರತಿಷ್ಠೆಯನ್ನೂ ಪಡೆದಿರುತ್ತಾರೆ. ಆದರೆ ವ್ಯಾಮೋಹಕ್ಕೆ ಬಿದ್ದು ಮಗನಿಗೇನಾದರೂ ಪ್ರತಿಷ್ಠೆಯನ್ನೋ ಪದವಿಯನ್ನೋ ಕೊಟ್ಟರೂ ಎಂದಾದರೆ ಆ ಮಗ ತಾನು ಎಂದಿಗೂ ಮೇಲೇದ್ದು ಬರಲಾರ. "ಸಿಗುವದು ಸಿಕ್ಕಾಗಿದೆ ಯಾಕೆ ಪರಿಶ್ರಮಬೇಕು..." ಎಂಬ ಭಾವದಲ್ಲಿ ಅವನಷ್ಟು ಆಲಸಿ ಮತ್ತಬ್ಬರು ಸಿಗಲಾರರು ಹಾಗೆ ದೂರ ಕ್ರಮಿಸಿಬಿಡುತ್ತಾನೆ.  ಇದಕ್ಕೆ ನೂರಾರು ಸಾವಿರಾರು ನಿದರ್ಶನಗಳು ಸಿಗುತ್ತವೆ ಹಾಗಾಗಿ ಹೆಚ್ಚು ವಿಸ್ತಾರ ಮಾಡಲಾರೆ. *ಸಮಯವರಿತು ಪಾಲಿಪ ಪುಣ್ಯ ಪುರುಷ....* ಆ ಆ ಯೋಗ್ಯ ಸಮಯ ನೋಡಿ ಎಲ್ಲವನ್ನೂ ಸುರಿಸುವವರು ರಾಯರು. ಎಲ್ಲವನ್ನೂ ಕೊಡಲು ಅವರೇನು ದೇವರಾ ?? ದೇವರಲ್ಲವೇ ಅಲ್ಲ. ನಿಶ್ಚಿತ ಮಾತು. ಎಲ್ಲವನ್ನು ಎಲ್ಲರಿಗೂ ಕೊಡಲು ಬೇಕಾದ ಪುಣ್ಯ ಅವರಲ್ಲಿ ಇದೆ ಅಂತೆಯೇ *ರಾಯರು ಪುಣ್ಯಪುರುಷ.* *ಕೊಡುವ ರಾಯ

*ಅನು ಬಂಧದ ಸಂಕೇತ ರಕ್ಷಾಬಂಧನ.....*

Image
*ಅನು ಬಂಧದ ಸಂಕೇತ ರಕ್ಷಾಬಂಧನ.....* ರಕ್ಷಾ ಬಂಧನ ಒಂದು ಉತ್ತಮ ಬಾಂಧವ್ಯದ ಸಂಕೇತ. ವಿಶಿಷ್ಟ ಬಾಂಧವ್ಯ ದ್ಯೋತಕ. ನಿರ್ಮಲ ಅಂತಃಕರಣ ಸೂಚಕ. ನಿರಂತರ ರಕ್ಷಣೆಯ ಕಳಕಳಿ. ಪ್ರೀತಿ ಅಂತಃಕರಣದ ಮಹಪೂರ. ವಿಶ್ವಾಸ ಭರವಸೆಯ ಆಗರ.  ನಿರ್ವ್ಯಾಜ ಹಾಗೂ ನಿಷ್ಕಲ್ಮಷ  ಪ್ರೀತಿಯ ಓಕುಳಿ ತುಂಬಿದೆ . ಅನುಬಂಧಗಳ ಅಲೆಗಳಿಗೆ ಭದ್ರವಾದ ಆಣೆಕಟ್ಟು ಇದಾಗಿದೆ.  "ರಕ್ಷಾ ಬಂಧ ಅಪಜಯಗಳು ಅಧರ್ಮಗಳು ದುಷ್ಟ ವಿಚಾರಗಳು ಸುಳಿಯದಿರಲಿ, ಜಯ ಸದ್ವಿಚಾರ ಧರ್ಮಗಳೇ ಒಲಿದು ಬರಲಿ"  ಎಂಬ ಉದ್ದೇಶ್ಯದಿಂದ ಈ ಹಬ್ಬವನ್ನು ಆಚರಿಸುವದು.  ಒಂದು ಪುಟ್ಟ ಇತಿಹಾಸ ಇದರಹಿಂದೆ ಅಡಗಿದೆ. ದೇವಾಸುರರ ಸಂಗ್ರಾಮ ಯುದ್ಧ ಸದಾ ಇರುವದೇ. ತಾತ್ಕಾಲಿಕವಾಗಿ ಜಯ ಅಸುರರಿಗೆ ಸಿಗುವದು ನಿಶ್ಚಿತ. ಹಾಗೆಯೇ ಕೊನೆಗೆ ಸಿಗುವ ಜಯ ದೇವತೆಗಳಿಗೆ ಇದು ಅಷ್ಟೇ ನಿಶ್ಚಿತ.  ಒಂದು ಬಾರಿ ದೇವಾಸುರರ ಯುದ್ಧ ನಡೀತಾಯಿದೆ ಜಯ ಯಾರಿಗೂ ಸಿಗುತ್ತಿಲ್ಲ. ಒಂದು ದಿನದ ಮೇಲುಗೈ ಅಸುರರದು ಆದರೆ, ಮತ್ತೊಂದು ದಿನ ದೇವತೆಗಳದು. ಹೀಗೆ ೧೨ ವರ್ಷಗಳ ಕಾಲ ಉರುಳಿತು. ಜಯ ಮಾತ್ರ ಇಬ್ಬರಿಗೂ ಮರೀಚಿಕೆಯೇ ಆಗಿ ಉಳಿತು.  ಹೀಗಿರುವಾಗ ಜಯ ಸಿಗುವದಕ್ಕಾಗಿ ದೇವತೆಗಳಿಂದ ಅನೇಕ ವ್ರತ ಜಪ ಪೂಜೆ ಸಾಗುತ್ತಾ ಇತ್ತು. ಒಂದು ದಿನ ದೆವೇಂದ್ರನ ಮಾಡದಿಯಾದ ಶಚೀ ದೇವಿ ವಿಚಾರ ಮಾಡುತ್ತಾಳೆ. ಹಿಂದೆ ದೈತ್ಯ ಚಕ್ರವರ್ತಿಯಾದ "ಬಲಿ ಚಕ್ರವರ್ತಿ" ತನ್ನ ಜಯಕ್ಕಾಗಿ ಯಾವ ರಕ್ಷಾ ಕವಚ ರೂಪವಾಗಿ

*ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ನಮ್ಮ ಹಸ್ತ ಮುಂದಿರಲಿ.......*

Image
*ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ನಮ್ಮ ಹಸ್ತ ಮುಂದಿರಲಿ.......* ಈ ವಾರದಲ್ಲಿ ಪ್ರಕೃತಿ ವಿಕೋಪದ ಪ್ರವಾಹದಿಂದ ಅನೆಡಕ ಊರುಗಳ ಸಾವಿಸಾವಿರ ಜನರಿಗೆ ತುಂಬ ತೊಂದರೆ ಆಗಿದೆ. ನಮ್ಮ ಸಹಾಯ ಹಸ್ತ ಮುಂದಿರಲಿ.  ಬರುವ ವಾರ ಪ್ರತಿ ಊರು ನಗರ ಪಟ್ಟಣ ಇವುಗಳಲ್ಲಿ  "ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಆರಾಧಾನಾ ಸಂಭ್ರಮ" ವಿರುತ್ತದೆ. ಆ ಸಂಭ್ರಮದಲ್ಲಿ ನಾವೆಲ್ಲರೂ ಭಾಗವಹಿಸುವವರು ಆಗಿದ್ದೇವೆ.  ಗುರುಸಾರ್ವಭೌಮರ ಆರಾಧನೆ "ರಾಯರನ್ನು ಪ್ರೀತಿಗೊಳಿಸಲೇ ಆಗಲಿ. ಆ ರೀತಿಯಲ್ಲಿ ವೈಭವದಿಂದ ಮಾಡೋಣ. ಈ ಬಾರಿ ಹೊಸಕ್ರಮದಲ್ಲಿ ಆಚರಿಸುವ ಹೊಸ ಹೆಜ್ಜೆ ಇಡೋಣ.  *ಪೂರ್ಣಾಯುಃ -  ಪೂರ್ಣಸಂಪತ್ತಿಃ* ಗುರುಸಾರ್ವಭೌಮರಾದ ರಾಯರ " ಶ್ರೀರಾಘವೇಂದ್ರ ಸ್ತೋತ್ರ"ದ ಜಪ ಪಾರಾಯಣ ಪ್ರಭಾವದಿಂದ ಭಕ್ತ ಸಂಪದ್ಭರಿತನೂ ಆಯುಷ್ಯ ಪೂರ್ಣನೂ ಆಗುವ. ಆಯುಷ್ಯದ ಸಾರ್ಥಕತೆ ಸಂಪತ್ಫೂರ್ಣತೆ ರಾಯರ ಅನುಗ್ರಹಗಳಲ್ಲಿ ಒಂದಾಗಿವೆ. ಈ ನಿಟ್ಟಿನಲ್ಲಿ ಯಾರಿಗೆ ಸಂಪತ್ತಿನ ಕೊರತೆ ಇದೆ ಅವರನ್ನು ಸಂಪದ್ಭರಿತರನ್ಬಾಗಿ ಮಾಡಿದರೆ ರಾಯರಿಗೆ ತುಂಬ ಪ್ರೀತಿ.  ಪ್ರಕೃತ ಪ್ರಕೃತಿ ವಿಕೋಪದ ಪ್ರಭಾವದಿಂದ ಮಹರಾಷ್ಟ್ರದ ಮುಂಬಯಿ ಸಾಂಗಲಿ ಕೊಲ್ಹಾಪುರ ಮೀರಜ ಮೊದಲು ಮಾಡಿ   ಅನೇಕ ಊರುಗಳಲ್ಲಿ ಹಾಗೂ ಕರ್ನಾಟಕದ ಅಥಣಿ ಗೋಕಾಕ್ ಬೆಳಗಾವ ಜಿಲ್ಲೆ, ಧಾರವಾಡ ಜಿಲ್ಲೆ,  ಲಿಂಗಸ್ಗೂರು ಕೊಪ್ಪರ ರಾಯಚೂರು ಜಿಲ್ಲೆ ಹೀಗೆ ನೂರಾರು ಊರ

*ಬಾರೆ ಭಾಗ್ಯದ ನಿಧಿಯೇ...*

Image
*ಬಾರೆ ಭಾಗ್ಯದ ನಿಧಿಯೇ...* ಇಂದು ವರ ಕೊಡುವ ಮಹಾತಾಯಿತಾದ ಮರಮಹಾ ಲಕ್ಷ್ಮೀದೇವಿಯ ವ್ರತ ಮಹೋತ್ಸವ.  *ವರಮಹಾಲಕ್ಷ್ಮೀ ಪೂಜೆ* ಸಾಮಾನ್ಯವಾಗಿ ಎಲ್ಲರೂ ಮಾಡಿದ್ದೇವೆ. ಮಾಡುತ್ತಾ ಇರುತ್ತೇವೆ. ಮುಂದೂ ಮಾಡುತ್ತೇವೆ. ಲಕ್ಷ್ಮೀದೇವಿಯ ಕೆಲ‌ಮಹಿಮೆಗಳನ್ನು ತಿಳಿದು ಪೂಜಿಸೋಣ.  *ಕೆಲ ಮಹಿಮೆಗಳು....* ಪ್ರಕೃತಿಗೆ ಅಭಿಮಾನಿ ಹಾಗೂ ನಿಯಾಮಕಳಾಗಿ ಇದ್ದು ಪ್ರಕೃತ್ಯಾತ್ಮಕ ಇಪ್ಪತ್ತುನಾಲಕು ತತ್ತ್ವಗಳನ್ನು ಪ್ರೇರಿಸುವವಳು ಲಕ್ಷ್ಮೀ ದೇವಿ.  ಅವಳ ಕರುಣೆಗೆ ಪಾತ್ರರೂ ಆಗಿದ್ದರೆ ಉತ್ತಮವಾಗಿ ಪ್ರೇರಿಸುವವಳು. ಇಲ್ಲವಾದಲ್ಲಿ ತುಂಬ ಕಷ್ಟ. ಲಕ್ಷ್ಮೀದೇವಿಯ ಇಚ್ಛೆ ಅತ್ಯಂತ ಪ್ರಮುಖ. ಅವಳ ಕೃಪಾಕಟಾಕ್ಷೆಯೂ ಅತೀಪ್ರಮುಖ. "ಯಸ್ಯಾಃ ಕಟಾಕ್ಷಮಾತ್ರೇಣ ಬ್ರಹ್ಮರುದ್ರೇಂದ್ರಪೂರ್ವಕಾಃ. ಸುರಾಃ ಸ್ವೀಯಾಃ ಪದಾನ್ಯಾಪುಃ"  ಯಾವ ಲಕ್ಷ್ಮೀದೇವಿಯ ಕೃಪಾಕಟಾಕ್ಷವಿದ್ದರೇ ಬ್ರಹ್ಮ ರುದ್ರಾದೇವತೆಗಳು ತಮ್ಮ  ತಮ್ಮ ಪದವಿಪಡೆಯಲು ಅರ್ಹತೆಯನ್ನು ಪಡೆಯುತ್ತಾರೆ. ಅವಳ ಇಚ್ಛೆಯಿದ್ದರೆ ರುದ್ರ ರುದ್ರರು ಆಗುವವರು. ಬ್ರಹ್ಮ ಬ್ರಹ್ಮರು ಆಗುವವರು. ನಾವು ನಾವಾಗಿಯೇ ಉಳಿಯಲು ಬೇಕು ಲಕ್ಷ್ಮೀದೇವಿಯ ಇಚ್ಛೆ.  *ಪೂಜೆ ಏನಕೆ.....* ಪೂಜೆ *ಇಷ್ಟೇಲ್ಲ ಕೊಟ್ಟಿದ್ದಕ್ಕಾಗಿ, ಇಷ್ಟೆಲ್ಲ ಕೊಡು ಎಂದಾಗಿಯೋ ಅಥವಾ ಪೂಜ್ಯ ದೇವತೆಯ ಪ್ರೀತಿಗೊಸ್ಕರ* ಈ ಮೂರು ಕಾರಣಕ್ಕಾಗಿಯೇ ಇರುತ್ತದೆ.  *ಇಷ್ಟು ಕೊಡಲೇಬೇಕು* ಎಂದು ಪೂಜಿಸುವವರು ನಾವು ಆದರೆ

*ದೇವ ತನ್ನ ಇರುವಿನ ಅರಿವು ಆಗಾಗ ಮೂಡಿಸುತ್ತಾ ಇರುತ್ತಾನೆ......*

Image
*ದೇವ ತನ್ನ ಇರುವಿನ ಅರಿವು ಆಗಾಗ ಮೂಡಿಸುತ್ತಾ ಇರುತ್ತಾನೆ......* ಸೃಷ್ಟಿಯಿಂದ ಆರಂಭಿಸಿ ಮುಕ್ತಿಯ ವರೆಗೆ ಎಲ್ಲವೂ ಈಶನ ಅಧೀನ. ಈಶನಿಲ್ಲದೆ ಒಂದು ಕಾರ್ಯವೂ ಆಗದು. ಕಣ ಕಣಗಳಲ್ಲಿ ಪ್ರೇರಕ. ಜೀವವೀಜರ ಕರ್ಮಪ್ರೇರಕ. ಕರ್ಮ ಸಾಕ್ಷಿ. ಅದಕ್ಕನುಗುಣವೇ ಸಕಲ ಕಾರ್ಯ. ಅಂತೂ ದೇವನಿಲ್ಲದೇ ಒಂದು ಪದಾರ್ಥದ ಅಸ್ತಿತ್ವವೂ ಇರದು.  *ತತ್ತತ್ ಶಕ್ತೀ ಪ್ರಬೋಧಯನ್....* ಸೂರ್ಯ ಪರ್ಜನ್ಯ ವರುಣ ಇಂದ್ರ ಮೊದಲಾದ ಎಲ್ಲ ದೇವತೆಗಳಿಂದ ಆರಂಭಿಸಿ ಪಂಚ ಮಹಾಭೂತ ಪಂಚಜ್ಙಾನೇಂದ್ರಿಯ ಪ್ರಕೃತಿ ಎಲ್ಲದರ ಶಕ್ತಿ ಪ್ರೇರಕ ವಿಷ್ಣುವೇ. ವಿಷ್ಣುವಿನ ನಿತರಾಂ ಅಧೀನ ಎಲ್ಲವೂ...  *ಏಕ ಏವ ಮಹಾಶಕ್ತಿಃ ಕುರುತೇ ಸರ್ವಮಂಜಸಾ...* ಪ್ರಕೃತಿ ಮಹತ್ ಅಹಂಕಾರ ಮನಸ್ಸು ಇವುಗಳಿಂದ ಆರಂಭಿಸಿ ಎಲ್ಲ ಪದಾರ್ಥಗಳ ಶಕ್ತಿ ದೇವರ ಶಕ್ತಿಯ ಪ್ರತಿಬಿಂಬವೇ. ದೇವರಲ್ಲಿಯೇ ಎಲ್ಲ ಶಕ್ತಿಗಳೂ ಅಡಗಿವೆ. ಅಂತೆಯೇ ಅವನೊಬ್ಬನೇ ನಿಜ ಶಕ್ತಿಮಾನ್.  *ಇಂದಿನ ದುರವಸ್ಥೇ.....* ಎಲ್ಲ ಪದಾರ್ಥಗಳನ್ನು ತನ್ಮೊಶದಲ್ಲಿ ಇಟ್ಟುಕೊಂಡು, ತಾನೇ ಸಕಲ ಪದಾರ್ಥಹಳನ್ಮೂ ಪ್ರೇರಿಸಿ ಪ್ರಚೋದಿಸುವ ದೇವನನ್ನು ಮರೆತಿದ್ದೇವೆ. ಅಂತೆಯೇ ನಮ್ಮ ಅತಿಘೋರ ದುರವಸ್ಥೆ ಆಗಾಗ ತಪ್ಪದೇ ಬಂದೊದಗುತ್ತದೆ.  *ಪ್ರಕೃತಿ ವಿಕೋಪ....*  ನಮ್ಮ ಸಮೃದ್ಧಿಯ ಅಭಿವೃದ್ಧಿಯ ಸಮಾಜಕ್ಕೆ "ಪ್ರತಿ ಅಭಿವೃದ್ಧಿಯೂ ನಾನೇ ಮಾಡುತ್ತೇನೆ" ಎಂಬ ಭಾವ ಘಟಗಟ್ಟಿಯಾಗಿ ತಳವೂರಿದ ಕಾರಣ" &q

*ದಾರಿಯಲ್ಲಿ ಸಿಗುವಂತಹದ್ದು ಅಲ್ಲ ಗೆಳೆತನ ....*

Image
*ದಾರಿಯಲ್ಲಿ ಸಿಗುವಂತಹದ್ದು ಅಲ್ಲ ಗೆಳೆತನ ....* ಅತ್ಯಂತ ಅಪರೂಪದ, ಸಕಾರಾತ್ಮಕಶಕ್ತಿ ಬೆಳೆಸುವ, ಉತ್ಸಾಹಭರಿತನನ್ನಾಗಿಸುವ, ಆಪತ್ತಿಗೊದಗುವ, ಹತಾಶೆಯಲ್ಲಿ ಸ್ಪೂರ್ತಿಯನ್ನೊದಗಿಸುವ, ಸಮಾಧಾನದ ಅನುಬಂಧವನ್ನುಂಟು ಮಾಡುವ,  ಮಾರ್ಕೆಟ್ ಅಲ್ಲಿ ಸಿಗದ,  ಹಣತೆತ್ತರೂ ದೊರೆಯದ, ವರ್ಷ ವರ್ಷ ಜೊತೆಗೆ ಕಳೆದರೂ ಬರದ , ಆಸ್ತಿ ಅಂತಸ್ತುಗಳಿಂದ ದೂರಾದ ಪದಾರ್ಥ ವೆಂದರೆ ಅದು ಕೇವಲ ಗೆಳೆತನ.  *ಗೆಳೆತನಕ್ಕೆ ಮೂಲ ಯಾವುದು.. ??* ಸರ್ವ ಸಮರ್ಪಣಾಭಾವ ಪೂರ್ಣ ಭರವಸೆಯೇ ಗೆಳೆತನದ ಮೂಲ. ಗೆಳೆತನ  ಚಿಗರೊಡಿಯುವದು, ಅಭಿವೃದ್ಧಿಯಾಗುವದು ಕೇವಲ  ಸಮರ್ಪಣೆ ಇಂದ ಮಾತ್ರ. ಸಕಾರಾತ್ಮಕ ಯೋಚನೆಗಳಿಂದಲೇ ಬೆಳಿಯುವದು.  *ಪ್ರೀತಿಯೂ ಒಂದು ಗೆಳೆತನಕ್ಕೆ ಕಾರಣ....*  ಆಕರ್ಷಣೆಯಿಂದ ಉಂಟಾದ ಪ್ರೀತಿ , ಆಕರ್ಷಣೆ ಹೋಯಿತು ಎಂದಾದರೆ ಪ್ರೀತಿ ಮೂಲೆಗುಂಪಾಗುತ್ತೆ ಅಲ್ಲಿ ಗೆಳತನ ಕಷ್ಟ. ಈ ಪ್ರೀತಿ ಸಮರ್ಪಣಾ ಮೂಲಕವಾಗಿದ್ದರೆ ಮಾತ್ರ ದೃಢವಾಗಿ ಬೇರೂರಿ ಶಾಶ್ವತವಾಗಿ ನಿಲ್ಲತ್ತದೆ.  ಆದ್ದರಿಂದ ಗೆಳೆತನಕ್ಕೆ ನಿಷ್ಕಲ್ಮಷ ಪ್ರೀತಿಯೂ ಒಂದು ಮೂಲವೇ.  *ಯಾರಲ್ಲಿ ಸಮರ್ಪಣಾಭಾವ ಉಚಿತ ....* ಸಮರ್ಪಣಾಭಾವ ದೇವರಿಂದ ಮೊದಲು ಮಾಡಿ ತನ್ನ ವರೆಗೆ ಇರಲೇಬಾಕಾಗಿ ಇರುವಂತಹದ್ದು  ಸಮರ್ಪಣಾಭಾವ. "ಎಷ್ಟು ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ ಅಷ್ಟು ದೃಢವಾಗುತ್ತದೆ ಗೆಳೆತನ."  ನಾನು ಇತರರಿಗಾಗಿ ಎಷ್ಟು "ವಾಕ್ ಮನ ಇಂದ್ರಿಯಗಳ

*ವರದೋ ವಾಯುವಾಹನಃ*

Image
*ವರದೋ ವಾಯುವಾಹನಃ* *ವಾಯುವಾಹನನು ಆಗಿಯೇ ವರವ ಕೊಡುವ ಓ  ವರದನೇ...!!! ನಿನಗೆ ಎನ್ನ ಅನಂತ ವಂದನೆಗಳು* ಬೇಡುವವರು ನಾವು. ಬೇಡಿದವರಿಗೆ ನೀಡುವ ದೊರೆ ವರದ ನಾಮಕ ಶ್ರೀಹರಿ. ಬಳಿ ಬಂದು ಬೇಡಿದವರನ್ನು ಎಂದಿಗೂ ನಿರಾಸೆ ಮಾಡದವನು ಆದ ಕಾರಣ ಶ್ರೀಹರಿಯು ನಿಜವಾಗಿಯೂ ವರದನೇ. ಅವನೇ ಬ್ರಹ್ಮಕರಾರ್ಚಿತ ಅತ್ತೀ ವರದ.  *ಬೇಡುವವರು ಮೂರುತರಹದವರು.....* ೧) ರುದ್ರಾದಿ ದೇವತೆಗಳು... ೨) ನಮ್ಮಾದಿ ಮಾನವರುಗಳು....  ೩) ಕಲ್ಯಾದಿ ದೈತ್ಯರು... ಶ್ರೀಹರಿಯ ಬಳಿ ಬೇಡಲು ಬಂದ ಈ ಮೂರೂ ತರಹದ ಜನರೂ ಎಂದಿಗೂ ನಿರಾಶರಾಗರು. ಹಾಗೆ ಸಮೃದ್ಧವಾಗಿಯೇ ಈಯುವವನು. ಆದ್ದರಿಂದಲೆ  ನಮ್ಮ ದೊರೆ  ಶ್ರೀಹರಿ *ವರದ* ಎಂದು ಕರೆಸಿಕೊಳ್ಳುವವ.  ಭಕ್ತಿಯನ್ನೇ ಮಾಡುವವರು ರುದ್ರಾದಿಗಳು .. ವ್ಯವಹಾರ ಮಾಡುವವರು ಮಾನವರು... ದ್ವೇಶವನ್ಬೇ ಮಾಡುವವರು ದೈತ್ಯರು ಈ ಮೂರೂ ಜನರಿಗೂ ವರಕೊಡುವವನು ಕೊಡುವವನು ದೇವರೊಬ್ವನೆ. ಹಾಗಾದರೆ ಭಕ್ತಿ ವ್ಯವಹಾರ ದ್ವೇಶ ಈ ಮೂರುಗಳಿಗೆ ವ್ಯತ್ಯಾಸವೇನು ಬಂತು... ??  ವಿಷ್ಣು ಸಹಸ್ರನಾಮದಲ್ಲಿ ಕೇವಲ ಕೇವಲ *ವರದಃ* ಎಂದು ಕೊಂಡಾಡದೇ *ವರದೊ ವಾಯುವಾಹನಃ* ಎಂದು ಸೇರಿಸಿಯೇ ಕೊಂಡಾಡಿದ್ದಾರೆ. ಈ ತಿಳುವಳಿಕೆಯೇ ಎಲ್ಲರಲ್ಲಿಯೂ ವ್ಯತ್ಯಾಸವನ್ನು ತಂದುಕೊಡುತ್ತದೆ. ಮೇಲೇ ತಿಳಿದ ಮೂರೂ ಜನರಿಗೂ ಕೊಡುವದು ಸಮನಾಗಿದ್ದರೂ, ಕೊಟ್ಡ ದೇವ ಒಬ್ಬನೇ ಆಗಿದ್ದರೂ ಕೊಟ್ಟದ್ದರ ಫಲವೇನಿದೆ ವಿಷಮವೇ ಆಗಿದೆ. ದ್ವ

*ಭಾಗ್ಯದಾ ಲಕ್ಷ್ಮೀ ಬಾರಮ್ಮ....*

Image
*ಭಾಗ್ಯದಾ ಲಕ್ಷ್ಮೀ ಬಾರಮ್ಮ....* ನಾರಾಯಣ ಲಕ್ಷ್ಮೀದೇವಿಯಿಂದ ಆರಂಭಿಸಿ ಅನೇಕ ದೇವತೆಗಳ ಹಾಗೂ ಗುರುಗಳ ಆರಾಧಿಸುವ ಮಾಸ ಶ್ರಾವಣ ಮಾಸ. ಈ ಸಲದ ಶ್ರಾವಣ ಶುಕ್ರವಾರದಿಂದಲೇ ಆರಂಭಿಸಿದ ಕಾರಣ ಮೊದಲು ಲಕ್ಷ್ಮೀದೇವಿಯನ್ನೇ ಕರೆಯೋಣ. ಆರಾಧಿಸೋಣ ನಂತರ ಎಲ್ಲ ದೇವತಾ ದೇವರುಗಳ ಆರಾಧನೆಯಲ್ಲಿ ತೊಡಗಿಕೊಳ್ಳೋಣ.  *ಸೌಭಾಗ್ಯದ ಲಕ್ಷ್ಮೀ ಬಾರಮ್ಮ* ಅನಾದಿ ಕಾಲದಿಂದ ಅನಂತಜೀವರಾಶಿಗಳಿಗೆ ಐಶ್ವರ್ದಿಂದ ಆರಂಭಿಸಿ ಮೋಕ್ಷದ ವರೆಗೆ ಇರುವ ಎಲ್ಲ ಭಾಗ್ಯಗಳೂ ಲಕ್ಷ್ಮೀದೆವಿಯ ಅಧೀನ.  ಅಂತೆಯರೆ "ಸೌಭಾಗ್ಯದ ದೇವತೆ ಲಕ್ಷ್ಮೀದೇವಿ." ಲಕ್ಷ್ಮೀದೇವಿಯ ಕೃಪಾಕಟಾಕ್ಷವಿದ್ದರೆ ಸೌಭಾಗ್ಯ. ಇಲ್ಲದಿರೆ ದೌರ್ಭಾಗ್ಯ.  *ಶುಕ್ರವಾರದ ಪೂಜೆಯ ವೇಳೆಗೆ..* ನಿತ್ಯವೂ ನೀನು ಬರಬೇಕು ಅಲ್ಲ ನಿತ್ಯವೂ ನೀನಿರಬೇಕು. ಮನಸ್ಸಿನಲ್ಲಿ ಮನೆಯಲ್ಲಿ ನಿನ್ನ ಪಾದಪದ್ಮಗಳನ್ನು ತಳವೂರಿ ಇಟ್ಟು ಇಲ್ಲೇ ನಿಂತಿರಬೇಕು. "ನಿಲ್ಲೆ ನಿಲ್ಲೇ ಕೊಲ್ಹಾಪುರ ದೇವಿ ಇಲ್ಲೆ ಬಾರೆ ಗೆಜ್ಜೆ ಘಲ್ಲೆನುತ" ಎಂದು ದಾಸರು ಕೊಂಡಾಡಿದಂತೆ ಇಲ್ಲೇ ಬಂದು ವಾಸ ಮಾಡಲಿ ಬೇಕು. ನೀನು ಎನ್ನಲ್ಲಿ ವಾಸಮಾಡಲಿಕ್ಕಾಗಿಯೇ *ಶುಕ್ರವಾರದ ಪೂಜೆ* ಇಟ್ಟುಕೊಂಡಿದ್ದೇನೆ. ಆದ್ದರಿಂದ ನೀನು ಎನ್ನ ಪೂಜೆಯ ವೇಳೆಗೆ ಬಾ.  *ಯಾರ ಮನ ಮನೆಗೆ ಬರುತ್ತಾಳೆ - ಯಾರ ಮನ ಮನೆಯಲ್ಲಿ ನಿಲ್ಲುತ್ತಾಳೆ* ಯಾರು ಮನೆಗೆ ಬರುವವರು ಇರುತ್ತಾರೆ ಅವರು ಇರಲು ಯೋಗ್ಯ ವಾತಾವರಣ ನಿರ್ಮಿಸಿದರೆ