*ಬಂದ ವಿಘ್ನ ಕಳಿಯೋ ಗಣನಾಥ.....*
*ಬಂದ ವಿಘ್ನ ಕಳಿಯೋ ಗಣನಾಥ.....*
ಹೇ ಗಣನಾಥ !!!!! ಸಾಧನೆಗೆ ಬಂದ, ಬರುವ ಸಕಲ ವಿಘ್ನಗಳನ್ನು ಪರಿಹರಿಸೋ.
ಏಕೆ ಪರಿಹರಿಸಬೇಕು.... ??
*ನೀನು ಎನ್ನ ಸ್ವಾಮಿ, ನಾನು ನಿನ್ನ ದಾಸ* ಹೀಗಿರುವಾಗ ವಿಘ್ನಗಳ ಪರಿಹರಿಸುವ ಜವಾಬ್ದಾರಿ ಯಾರದು... ??? ದಾಸರಿಗೆ ಬಂದ ಆಪತ್ತುಗಳನ್ನು, ವಿಘ್ನಗಳನ್ನು ನೀ ಪರಿಹರಿಸದಿರೆ ಇನ್ನಾರು ಪರಿಹರಿಸುವವರು.... ??? ಆದ್ದರಿಂದ ಕರುಣೆ ಮಾಡಿ, ದಯೆತೋರಿ ನೀನೇ ವಿಘ್ನಗಳನ್ನು ಪರಿಹರಿಸಲೇಬೇಕು.
ಸಾಮಾನ್ಯವಾಗಿ *ಪೂಜೆಗೆ ಕೇಂದ್ರ ಪೂಜ್ಯನಾದ ದೇವರೋ ದೇವತೆಯೋ ಆಗದೆ, ಪೂಜಕನಾದ ನಾನೇ ಆಗಿರುತ್ತೇನೆ.* ಅಂತೆಯೇ ಪೂಜೆಯ ಆದಿಯಿಂದ ಆರಂಭಿಸಿ ಪೂಜೆಯ ಸಮಾಪ್ತಿಯವರೆಗೆ ನನ್ನ ಸಮಯ, ನನ್ನ ಓಫೀಸ್, ನನ್ನ ಉಡುಗೆ, ನನ್ನ ತೊಡುಗೆ, ನನ್ನ ಮಡಿ, ನನ್ನ ಬೆಳ್ಳಿ ಭಂಗಾರದ ಪಾತ್ರೆಗಳು ಇವುಗಳ ಕಡೆಯೇ ಹೆಚ್ಚೆಚ್ಚು ಗಮನ ಹೋಗಿರುತ್ತದೆ. ನಾನು ಏನೆಲ್ಲ ಬೇಡುವದಿತ್ತು, ಏನೆಲ್ಲ ಬೇಡಿಕೊಂಡೆ ಇದು ಕೊನೆಯಾಗಿ ಮುಗಿದಿರುತ್ತದೆ. ಇಷ್ಟಾಗುವದರಲ್ಲಿ ಪೂಜೆ ಮುಗಿದೇ ಹೋಗಿರುತ್ತದೆ. (ಎಲ್ಲರದ್ದೂ ಅಲ್ಲ, ನಂದಂತೂ ಹೀಗಾಗಿರತ್ತೆ)
*ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೆ*
ಪೂಜೆಯ ಉದ್ದೇಶ್ಯ *ದೇವರ ಹಾಗೂ ದೇವತೆಯ ಅಂತರ್ಗತನಾದ ದೇವರ ಪ್ರೀತಿಯೇ.* ನಾಳೆ ಬರುವ ಗಣಪತಿ ಪೂಜೆಯ ಉದ್ದೇಶ್ಯ *ಗಣಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ವಿಶ್ವಂಭರ ರೂಪೀ ಭಗವಂತನ ಪ್ರೀತಿಯೇ ಉದ್ದೇಶ್ಯವಾಗಿಟ್ಟುಕೊಳ್ಳೋಣ.* ಒಂದು ಬಾರಿ ಆ ಭಗವಂತ ತೃಪ್ತನಾದನೋ ನಾವು ಧನ್ಯ. ನಮ್ಮ ಪೂಜೆ ಅತ್ಯಂತ ಸಾರ್ಥಕ.
ನಮ್ಮ ಅಂತರ್ಯಾಮಿ, ಗಣಪತಿಯ ಅಂತರ್ಯಾಮಿ, ಸಮಗ್ರ ಜಗತ್ತಿನ ಅಂತರ್ಯಾಮಿ ಒಬ್ಬನೇ. ಇದರಲ್ಲಿ ಯಾವ ಸಂದೇಹವೂ ನಮಗ್ಯಾರಿಗೂ ಇಲ್ಲ. ಗಣಪತ್ಯಂತರ್ಗತ ಭಗವಂತ ವಿಶ್ವಂಭರನನ್ನು ಸಂತೋಷಗೊಳಿಸಿಬಿಟ್ಟರೆ, ನಮ್ಮ ಅಂತರ್ಯಾಮಿಯೂ ತೃಪ್ತ. ಜಗತ್ತಿನ ಸಮಗ್ರ ಪದಾರ್ಥಗಳ ಅಂತರ್ಯಾಮಿಯೂ ತೃಪ್ತ.
ಹೀಗೆ ಭಗವಂತ ಒಬ್ಬ ತೃಪ್ತನಾಗಿಬಿಟ್ಟರೆ, ಅವನ ಪ್ರತಿಬಿಂಬನಾದ ನಮಗೆ ಅತೃಪ್ತಿಯ ಭಾವವೇ ಬರುವದಿಲ್ಲ. ನಮಗೆ ಸಿಕ್ಕ ಸಿಗುವ ಯಾವ ವ್ಯಕ್ತಿ ಹಾಗೂ ಪದಾರ್ಥಗಳಿಂದಲೂ ಅತೃಪ್ತಿ ಅಶಾಂತಿಯೂ ಇರುವದಿಲ್ಲ. ಆ ಒಬ್ಬ ಶ್ರೀಹರಿ ಪ್ರಸನ್ನಾಗಿಬಿಟ್ಟರೆ ಸಿಗದಿರುವದು ಅಸಾಧ್ಯವಾದದ್ದು ಎಂಬುವದೇ ಇರುವದಿಲ್ಲ. ಎಲ್ಲವೂ ಸಿಕ್ಕಿತು ಎಂದೇ ಆಗಿರುತ್ತದೆ.
ಆದ್ದರಿಂದ ನಾಳೆ ಮಾಡುವ ಗಣಪತಿ ಪೂಜೆಯಲ್ಲಿ ಗಣಪತ್ಯಂತರ್ಗತ ದೇವರನ್ನು ಸಂತೋಷಗೊಳಿಸುವತ್ತ ಗಮನ ಹರಿಸೋಣ.
ಕೆಲವರ ಮನೆಯಲ್ಲಿ ಒಂದು ದಿನ, ಮೂರು ದಿನ, ಐದು ದಿನ, ಹನ್ನೊಂದು ದಿನ, ಕೆಲಮನೆಯಲ್ಲಿ ವರ್ಷಪೂರ್ಣ ಹೀಗೆಲ್ಲ ಸಂಪ್ರದಾಯಗಳು ಇವೆ. ಆ ಆ ದಿನಗಳಲ್ಲಿ ಕನಿಷ್ಠ *ಇಪ್ಪತ್ತೊಂದು ಬಾರಿಯಾದರೂ ವಿಘ್ನೇಶ್ವರ ಸಂಧಿಯನ್ನು ಪಾರಾಯಣ ನಿತ್ಯ ಮಾಡೋಣ. ಜೊತೆಗೆ ಪೂಜಿಸುವಾಗ ನೂರೆಂಟು ನಾಮಗಳನ್ನೂ ಪಠಿಸಿ ಆ ಗಣಪತಿಯನ್ನೂ ಮೆಚ್ಚಿಸೋಣ.* ಆ ಸ್ತೋತ್ರದಲ್ಲಿ ಬರುವ ಒಂದೊಂದು ಗಣಪತಿಯನ್ನು ಸಂತೋಷಗೊಳಿಸಲು ಒಂದೊಂದು ಮಹಿಮೆಯೂ ಅದ್ಭುತವಾಗಿವೆ. ಅವುಗಳನ್ನು ತಿಳಿದುಕೊಳ್ಳೋಣ. ಇಲ್ಲವೋ ಬೇಡುವವರೇ ಆದ ನಮಗೆ ಏನು ಬೇಡಬೇಕು ಹೇಗೆ ಬೇಡಬೇಕು ಎನ್ನುವದನ್ನೂ ತಿಳುಹಿಸಿಕೊಟ್ಟಿದ್ದಾರೆ ಆ ಪ್ರಕಾರದಲ್ಲಿಯಾದರೂ ಬೇಡೋಣ.
ಅತಿ ಮುಖ್ಯವಾಗಿ ಗಣಪತ್ಯಂತರ್ಗತ ವಿಶ್ವಂಭರರೂಪಿಯನ್ನು ಸಂತೋಷ ಪಡಿಸುವ ಮುಖಾಂತರ ಪಾರಿತ್ರಿಕ ಎಲ್ಲ ಸಾಧನೆಗಳಿಗೆ ಹಾಗೂ ಐಹಿಕ ವೈಭವಗಳಿಗೆ ಅಡ್ಡಿಗಳಾದ ಎಲ್ಲ ವಿಘ್ನಗಳನ್ನು ಕಳೆದುಕೊಳ್ಳೋಣ ಎಂದು ಲೇಖನವನ್ನು ಓದಿದ ಎಲ್ಲರಲ್ಲಿಯೂ ವಿಜ್ಙಾಪನೆಯನ್ನು ಮಾಡಿಕೊಳ್ಳುವೆ.
(ಸೂಃ-) ಗಣಪತಿ ಸಂಧಿಯಲ್ಲಿ ಬಂದ *ಅಪೂರ್ವವಾದ ನಾಮಾವಳಿಗಳ* PDF fill attach ಮಾಡಲಾಗಿದೆ. ಅದನ್ನು ಸ್ತ್ರೀಯರು, ಬಾಲಕರು, ಪುರುಷರು ಎಲ್ಲರೂ ಕೂಡಿ ಪಠಿಸುವಂತಾಗಲಿ. ಎಷ್ಟೆಷ್ಟು ಸಾಧ್ಯವಿದೆ ಅಷ್ಟು ನಮ್ಮವರಿಗೆಲ್ಲ ತಲುಪಿಸೋಣ.)
*✍🏽✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments