Posts

Showing posts from May, 2022

*ಏನಿದೆ ಅದನ್ನೇ ಅಭಿವ್ಯಕ್ತಗೊಳಿಸುವದು ಮನಸ್ಸು*

Image
 *ಏನಿದೆ ಅದನ್ನೇ ಅಭಿವ್ಯಕ್ತಗೊಳಿಸುವದು ಮನಸ್ಸು*  ಮನಸ್ಸು ಇದೊಂದು ಅಮೂಲ್ಯವಾದ ಪದಾರ್ಥ. ಒಂದು ಬಾರಿ ಮನಸ್ಸಿನಲ್ಲಿ ಏನೋ ಒಂದು ವಿಷಯ, ಯಾವುದೋ ರೀತಿಯಲ್ಲಿ ಒಳ ಸೇರಿತೋ ಅದು ಮನಸ್ಸಿನಲ್ಲಿ  ಸಂಸ್ಕಾರ ರೂಪದಿಂದ ಶಾಶ್ವತವಾಗಿ ಉಳಿದು ಬಿಡುತ್ತದೆ. ಆಗಾಗ ಅಭಿವ್ಯಕ್ತಗೊಳಿಸುತ್ತಾ ಇರುತ್ತದೆ. ಮನಸ್ಸಿನಲ್ಲಿ ಒಮ್ಮೆ ಒಂದು ವಿಷಯ ಸೇರಿತು ಎಂದಾದರೆ ಆ ವಿಷಯವೆಂಬ ಹುಳ ಒಳಗೆ ಕೊರೆಯಲು ಆರಂಭಿಸುತ್ತದೆ.  ಆ ವಿಷಯವನ್ನು ಒಳಗೇ ಇಟ್ಟು ಕೊಳ್ಳುತ್ತೇನೇ ಎಂಬುವದೂ ಅಸಾಧ್ಯದ ಮಾತೆ. ಒಂದಿಲ್ಲ ಒಂದು ರೂಪದಿಂದ ಅಭಿವ್ಯಕ್ತವಾಗಲೇ ಬೇಕು. ಆಗಿಯೇ ಆಗುತ್ತದೆ. ಸಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಸೇರಿದ್ದರೆ, ಸಾಕಾರಾತ್ಮಕ ವಿಚಾರಗಳೇ ಹೊರಬರುತ್ತವೆ. ನಕಾರಾತ್ಮಕ ವಿಷಯಗಳು ಸೇರಿದ್ದರೆ ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗುವದು.  ಗುರು ದೇವತಾ ದೇವರುಗಳ, ಧರ್ಮ ಶಾಸ್ತ್ರ, ತಂದೆ ತಾಯಿ ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ, ಆತ್ಮೀಯರು ಹಿತೈಷಿಗಳು ಇತ್ಯಾದಿ ಅಂತರಂಗದ ಅಥವಾ ಬಹಿರಂಗದ ವ್ಯಕ್ತಿಗಳ ವಿಷಯಕ ಸಕಾರಾತ್ಮಕ positive ವಿಷಯಗಳು ಸೇರಿದ್ದರೆ ಸಕಾರಾತ್ಮಕವಾಗಿಯೇ ಮಾತಾಡುವ. ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ. ನಕಾರಾತ್ಮಕ negative ಆಗಿದ್ದರೆ ನಕಾರಾತ್ಮಕವಾಗಿಯೇ. ಒಂದಂತೂ ನಿಶ್ಚಿತ ಅಭಿವ್ಯಕ್ತಗೊಳಿಸದೇ ಇರಲಾರ.  ಒಂದು ಸುಂದರ ಉದಾಹರಣೆ. ಒಂದು ಹಣ್ಣು ಚಿಕ್ಕು ತೆಗೆದುಕೊಂಡು ಅದನ್ನು ಹಿಂಡೋಣ , ಹಿಂಡಿದಾಗ ಬರುವ ರಸವೇನು ?? ಸಿಹಿಯಾದ ಚಿ

*ನಗುವೇ ಒಂದು ಸಂಪತ್ತು...*

Image
 *ನಗುವೇ ಒಂದು ಸಂಪತ್ತು...* ಮನಸ್ಸು ಹಾಗೂ ದೇಹ ಅರೋಗ್ಯಪೂರ್ಣವಾಗಿರಲು ಮೂಲ ಕಾರಣ *ಮನಸ್ಸು ಬಿಚ್ಚಿ ನಗುವದು.* ನಗು ಇದು ಒಂದು ದೊಡ್ಡ ಸಂಪತ್ತು. ಯಾರು ನಗುನಗುತ್ತಾ ನಕ್ಕು ನಗಿಸುತ್ತಾರೆಯೂ, ಅವರು ನಿಜವಾಗಿಯೂ ಸಂಪದ್ಭರಿತರೆ.   ಒಂದು ದೊಡ್ಡ ಸಮಸ್ಯೆ....  ಜಗತ್ತಿನಲ್ಲಿ ಅತ್ಯಂತ ಉಚಿತವಾದದ್ದು ನಗು. ಆ ನಗಲಿಕ್ಕೂ ಆಗದಷ್ಟು ಬ್ಯುಸಿ ನಾವಾಗಿದ್ದೇವೆ. ಒಬ್ಬನೇ ನಕ್ಕರೆ ಅವ ಹುಚ್ಚ. ನಾಲ್ಕು ಜನರ ಮಧ್ಯದಲ್ಲಿ ಸೇರಿ ನಗಲು ಹೇಸಿಗೆ.  ನನ್ನ ನಗು ಹೇಳಿಕೊಂಡರೆ ಎಲ್ಲಿ ಕಣ್ಣು ಬಿಡುತ್ತಾರೆಯೋ ಎಂಬ ಹೆದರಿಕೆ.‌ ಅನೇಕರಿಗೆ ನಗುನೇ ಬರುವದಿಲ್ಲ. ನಗುವದು ಎಂದರೆ ನಾಲ್ಕು ಜನ ಸೇರಿದಾಗಲೇ ಎಂದಾಗಿದೆ.  ಹಾಗಾಗಿ ನಗುವೇ ಕನಸಾಗಿದೆ........ ಅಪರೂಪದ್ದು ಯಾವದೋ ಅದರ ನೆನೆಪಿಗಾಗಿ ಚಿತ್ರ (photo)  ತೆಗೆಯುವದು ರೂಢಿ ಹೌದು ತಾನೆ.... *ಇಂದು ನಗು ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಗೊಳ್ತೀವಿ ಎಂದರೆ, ಇದರಿಂದಲೇ ಗೊತ್ತಾಗುತ್ತದೆ ನಗು ಎಷ್ಟು ಅಪರೂಪದ್ದು ಆಗಿರಬಹುದು ಎಂದು..... 🤔🤔* ನಗುವಿನಿಂದ ತುಂಬ ದೂರ ಹೋಗುವದು ಬೇಡ.  ದೊಡ್ಡ ಕುಟುಂಬ. ಹಾಸ್ಯಮಯ ಪ್ರವೃತ್ತಿ.  ಕೂತು ಹರಟೆ ಹೊಡೆಯಲು, ನಕ್ಕು ನಗಿಸಲು ತುಂಬ ಸಮಯವಿರುತ್ತಿತ್ತು. ಜನ ಎಂಥದ್ದೇ ಕಷ್ಟ ದಾರಿದ್ರ್ಯ ಇದ್ದರೂ ನಗುತ್ತಾ ಸಂಪದ್ಭರಿತರೇ ಆಗಿರುತ್ತಿದ್ದರು. *ಹಣವಿರುತ್ತಿರಲಿಲ್ಲ, ನಗು ಕಡಿಮೆ ಆಗುತ್ತಿರಲಿಲ್ಲ.* ಈಗಿನ ಕಾಲ ತುಂಬ ವಿಚಿತ್ರ *ತುಂಬಿ ತುಳುಕುವಷ್ಟು, ಹೇಗೆ ಖರ್ಚು ಮಾಡಲಿ ಎ