Posts

Showing posts from November, 2020

*ಅತ್ತೆ - ಸೊಸೆ - ತಂದೆತಾಯಿ* (ಹಾಗೆ ಸುಮ್ಮನೆ ಕಾಲ್ಪನಿಕ ವಿಚಾರ)

Image
 * ಅತ್ತೆ - ಸೊಸೆ - ತಂದೆತಾಯಿ* (ಹಾಗೆ ಸುಮ್ಮನೆ ಕಾಲ್ಪನಿಕ ವಿಚಾರ) ಈಗಷ್ಟೇ ಮದುವೆ ಆಗಿ ಹೆಣ್ಣು ಗಂಡನ ಮನೆಗೆ ತನ್ನ ಅತ್ತೆಯ ಜೊತೆ ಬಂದಿದ್ದಳು. ಕೆಲವು ದಿನಗಳ ನಂತರ ಅವಳಿಗೆ ತನ್ನ ಅತ್ತೆಯ ಜೊತೆ ಒಂದೇ ಮನೆಯಲ್ಲಿ ಬದುಕಲು ಕಷ್ಟವಾಗುತ್ತದೆ ತನ್ನ ಅತ್ತೆ ಹಳೆಯ ಕಾಲದವರು ಅವರದು ಹಳೆ ಫ್ಯಾಷನ್ ಮತ್ತು ಅವರ ಯೋಚನೆ ಅಭಿಪ್ರಾಯಗಳು ತನ್ನ ಯೋಚನೆ ಅಭಿಪ್ರಾಯಗಳಿಗೆ ತದ್ವಿರುದ್ದವಾಗಿವೆ ಅಂದುಕೊಳ್ಳಲು ಆರಂಭಿಸಿದಳು. ಇದರಿಂದಾಗಿ ಇಬ್ಬರು ಜಗಳ ಆಡಲು ಪ್ರಾರಂಭಿಸಿದರು. ತಿಂಗಳುಗಳು ಕಳೆದವು ಅವಳ ಮತ್ತು ಅತ್ತೆಯ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬರಿ ಜಗಳವೇ ಇತ್ತು . ಅವಳ ಅತ್ತೆಯು ಯಾವುದೇ ಕೆಲಸ ಮತ್ತು ವಿಚಾರದಲ್ಲಿ ಹೇಗೆ ಇರಬೇಕು ಹೇಗೆ ಮಾಡಬೇಕು ಎಂದು ಅಭಿಪ್ರಾಯ ನೀಡುತ್ತಿದ್ದರು. ಇದು ಅವಳಿಗೆ ಸ್ವಲ್ಪಾನು ಇಷ್ಟ ಆಗಿರಲಿಲ್ಲ. ಒಂದು ರಾತ್ರಿ ತನ್ನ ಗಂಡನಿಗೆ ಬೇರೆ ಮನೆ ಮಾಡುವ ವಿಚಾರವನ್ನು ಹೇಳಿ ತನಗೆ ಇಲ್ಲಿ ಇರಲು ಆಗಲ್ಲ ನಿಮ್ಮ ಅಮ್ಮ ಮತ್ತು ನನಗೆ ಸರಿ ಆಗಲ್ಲ ಎಲ್ಲ ವಿಷಯದಲ್ಲೂ ನನ್ನ ಜೊತೆ ಜಗಳ ಆಡುತ್ತಾರೆ ಅಂದಳು. ಆದರೆ ಗಂಡ ಸಹ ತನ್ನ ತಾಯಿಯ ಪರವಾಗಿ ಮಾತಾಡಿ ಬೇರೆ ಮನೆ ಮಾಡುವ ಕನಸು ಕೂಡ ಬೇಡ ಅಂದನು. ಅವಳು ಸಿಟ್ಟಿನಿಂದ ಮರುದಿನ ಮನೆ ಬಿಟ್ಟು ಅವಳ ಮನೆಗೆ ಹೋದಳು. *ಉಗ್ರನಿರ್ಧಾರ* ಅವಳು ತನ್ನ ಮನೆಗೆ ಹೋಗಿ ತಂದೆಯ ಬಳಿ ನಡೆದುದನ್ನೆಲಾ ಹೇಳಿದಳು. ಅವಳ ತಂದೆಯು ಒಬ್ಬ ಆಯುರ್ವೇದ ಪಂಡಿತರು ಜ್ಞಾನಿಯು ಆಗಿದ್ದರು. ಅವಳು ಅಳುತ್

ಲಕ್ಷ್ಯ ಮುಟ್ಟುವವರೆಗೂ ವಿಶ್ರಾಂತಿ ಬೇಡ - ನಮ್ಮನ್ನು ಬದಲಾಯಿಸುವದೇ ನಮ್ಮ ಪ್ರಯತ್ನ

Image
 ಲಕ್ಷ್ಯ ಮುಟ್ಟುವವರೆಗೂ ವಿಶ್ರಾಂತಿ ಬೇಡ - ನಮ್ಮನ್ನು ಬದಲಾಯಿಸುವದೇ ನಮ್ಮ ಪ್ರಯತ್ನ ಮನುಷ್ಯನಿಗೆ ಗುರಿಗಳು ಲಕ್ಷ್ಯಗಳು ಇರಲೇಬೇಕು. ಆ ಗುರಿ ಲಕ್ಷ್ಯ ಸಾಧಿಸುವವರೆಗೂ ವಿಶ್ರಾಂತಿಯನ್ನು ತೆಗೆದುಕೊಳ್ಳಲೇ ಬಾರದು. ಒಂದು ಬಾರಿ ಗುರಿ ತಲುಪಿದ ಎಂದಾದರೆ ಇನ್ನು ಅವನನ್ನು ಹಿಡಿಯುವವರು ಇರುವದಿಲ್ಲ. ಅವನನ್ನು ಮೀರಿಸಿದವರೇ ಬರಬೆಕು. *ಕನಸಗಳೇ ಗುರಿಗಳು....* ಕನಸ್ಸುಗಳನ್ನು ಕಾಣುತ್ತಾನೆ. ಸಹಜ ಸ್ವಭಾವ. ಆ ಕನಸುಗಳೇ ಗುರಿಗಳಾಗಿರುತ್ತವೆ. ಆ ಗುರಿ ತಲುಪವಾದಕ್ಕೆ ಶ್ರಮವಹಿಸಿದಿದ್ದರೆ ಕನನಸುಗಳಾಗಿಯೇ ಉಳಿಯುತ್ತವೆ.  "ಕನಸು ಕಾಣು, ಕಂಡ ಕನಸ್ಸನ್ನು ಗುರಿಯಾಗಿಸು, ಗುರಿ ಸಾಧಿಸುವ ವರೆಗೆ ವಿಶ್ರಾಂತಿ ಬೇಡ, ಲಕ್ಷ್ಯ ತಲುಪಿದ ನಂತರ ನಿನ್ನ ಹುಡುಕಿಕೊಂಡು ಬರುವದು ಜಗತ್ತು" ಇದು ಜಗದ ನಿಯಮ.  ಸಕಲ ಜೀವರಿಗೂ ಕನಸು ಕಾಣುವ ಕಲೆ  ದೇವರು ಕೊಟ್ಟಿದ್ದಾನೆ. ಇದೊಂದು ಅದ್ಭುತ. ಮಾನವನಿಗೆ ತಾ ಕಂಡ ಮನಸ್ಸನ್ನು ಗುರಿ ಮಾಡಿಕೊಳ್ಳುವ ಕಲೆ ಕೊಟ್ಟಿದ್ದಾನೆ ಇದು ಇನ್ನೂ ಅದ್ಭುತ. ಪ್ರಯತ್ನ ಶೀಲ, ದೂರದೃಷ್ಟಿಯ ಪುರುಷರಿಗೆ ಆ ಗುರಿ ಸಾಧಿಸುವ ಶಕ್ತಿಯನ್ನೂ ಕೊಟ್ಟಿದ್ದಾನೆ ಇದು ಪರಮಾದ್ಭುತ ವರ. ದೇವರ ಮಹಾ ಕಾರುಣ್ಯ. ಕನುಸು ಕಾಣುವದಕ್ಕೆ ತಾನು ಸ್ವತಂತ್ರ. ತನ್ನದೇ ಆದ ಹಕ್ಕು. ಯಾರೂ ಇದಕ್ಕೆ ಅಡ್ಡಿಬರಲಾರರು. ಯಾವ ಸರಕಾರವೂ ಶುಲ್ಕ ವಿಧಿಸಲಾರದು. ಹಾಗಿದ್ದರೂ "ಬಾಲಿಶ ಕನಸು ಕಾಣುವದೇನಿದೆ ಇವನ ಹೇಡಿತನವನ್ನೇ ಪ್ರತಿಬಿಂಬಿಸುತ್ತದೆ". ತನ

*ತುಳಸೀ - ಒಂದು ಚಿಂತನೆ*

Image
  *ತುಳಸೀ - ಒಂದು ಚಿಂತನೆ* (ಒದಲೇಬೇಕಾದ ಒಂದು ಲೇಖನ) ಇಂದು ತುಳಸೀಪೂಜೆ. ನಾಳೆ ತುಳಸೀದೇವಿ ಹಾಗೂ ದಾಮೋದರ ರೂಪಿ ಕೃಷ್ಣನ ವಿವಾಹ. ಸೌಭಾಗ್ಯ ಸಮೃದ್ಧಿ ಸತ್ಸಂತತಿ ಸೌಮಾಂಗಲ್ಯಕ್ಕಾಗಿ ಮಾಡುವ ಒಂದು ಉತ್ತಮ ಉತ್ಸವ.  *ತುಳಸಿಯಲ್ಲಿ ಅಧಿಷ್ಠಿತ ದೇವತೆಗಳು* ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: | ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ || ಯಾವ ವೃಕ್ಷದ ಮೂಲದಲ್ಲಿ ಗಂಗಾದಿ ಸಕಲ ತೀರ್ಥಗಳ ಸನ್ನಿಧಿ ಇದೆಯೋ, ಯಾವ ವೃಕ್ಷದ  ಮಧ್ಯಭಾಗದಿ ಎಲ್ಲ ದೆವತೆಗಳು ನೆಲೆಸಿದ್ದಾರೆಯೋ, ಯಾವ ವೃಕ್ಷದ ಅಗ್ರಭಾಗದ ದಲಗಳಲ್ಲಿ ಸರ್ವ ವೇದಗಳು ಇವೆಯೋ ಅಂತಹ ಅಂತಹ ಉತ್ತಮ ವೃಕ್ಷ ಎಂದರೆ  *ತುಲಸೀ ವೃಕ್ಷ*  ಅದಕ್ಕೇನೇ ತುಲಸೀ ಶ್ರೀಕೃಷ್ಣನಿಗೆ ಅತಿಪ್ರಿಯಳು.  *ಪುರಾಣದ ದೃಷ್ಟಿಯಲ್ಲಿ ತುಳಸೀ...* ಪಾಪಾನಿ ಯಾನಿ ರವಿಸೂನುಪದಸ್ಥಿತಾನಿಗೋ ಬ್ರಹ್ಮ ಪಿತೃ ಮಾತೃ ವಧಾದಿಕಾನಿ | ನಶ್ಯಂತಿ ತಾನಿ ತುಲಸೀವಮ ದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ || ಗೋ ವಧ, ಪಿತೃಮಾತೃ ಗುರುವಧ, ಬ್ರಾಹ್ಮಣವಧ, ಇವೆ ಮೊದಲಾದ ಕೋಟಿ ಕೋಟಿ  ಪಾಪಗಳು ನರಕದಲ್ಲಿ ಇವೆಯೋ ಆ ಎಲ್ಲ ಪಾಪಗಳು, ಪಾಪಕ್ಕೆ ಕಾರಣವಾದ ದುಃಖ ಕಷ್ಟಗಳೂ ತುಳಸಿಯ ದರ್ಶನದಿಂದ ಪರಿಹಾರವಾಗುತ್ತವೆ. ಅಷ್ಟೇ ಅಲ್ಲದೇ ನೂರುಕೋಟಿ ಗೋಗಳನ್ನು ಆಕಳನ್ನು ದಾನಮಾಡಿದರೇನು ಫಲವಿದೆ ಆ ಫಲ ತುಳಸಿಯ ದರ್ಶನದಿಂದ ಬರುತ್ತದೆ.  * ಶ್ರೀವಾದಿರಾಜರ ಒಂದು ಕೃತಿ* "ಒಂದು ಪ್ರದಕ್ಷಿಣವನು ಮಾಡಿದವರ ಪೊಂದುಪುದು

ಒಂದು ಸುಳ್ಳು, ಶಾಪ ಹಲವು

Image
"ಒಂದು ಸುಳ್ಳು, ಶಾಪ ಹಲವು" ಸುಳ್ಳು ಹೇಳುವದು ಸುಲಭ. ಒಂದು ಸುಳ್ಳು ಹತ್ತು ರೀತಿಯಿಂದ ತನಗೆ ಶಾಪವಾಗಿ ಬಂದೆರಗುತ್ತದೆ. ಇದು ಅಷ್ಟೇ ನಿಜ. ಅನೇಕ ನಿದರ್ಶನಗಳು ಕಾಣಸಿಗುತ್ತದೆ.  ಸುಳ್ಳುಹೇಳುವವ ತುಂಬ ಬುದ್ಧಿವಂತ. ಆದರೆ ಆ ಬುದ್ದಿಮತ್ತದ ಮಟ್ಟ ತುಂಬ ಕೆಳಸ್ತರದ್ದು. "ಕೀಳು ಬುದ್ಧಿವಂತ" ಎಂದು ಬಿಂಬಿತವಾಗುತ್ತದೆ. ಇದುವೇ ಮೊದಲ ಶಾಪ. ಕೆಲಸಗಳಿಂದ ನುಣುಚಿಕೊಳ್ಳುವವ ಸುಳ್ಳು ಹೇಳುತ್ತಾನೆ. ಅದರಿಂದ ಅವನನ್ನು ಜಗತ್ತು ಗುರುತಿಸುವದು "ಕೆಲಸಗಳ್ಳ (ಕಾಮ್ ಚೋರ್ ) " ಎಂದು. ಇದು ಇನ್ನೊಂದು ಶಾಪ. ಹೇಳಿದ ಸುಳ್ಳಿನ ರಕ್ಷಣೆಗೆ ಮತ್ತೊಂದು ಸುಳ್ಳು,  ಅದರ ರಕ್ಷಣೆಗೆ ಮತ್ತೊಂದು ಸುಳ್ಳು. ಹೀಗೆ ಸುಳ್ಳಿನ ಸರಪಳಿಯನ್ನೇ ನಿರ್ಮಾಣ ಮಾಡುವ ಸುಳ್ಳಿನ ನಿರ್ಮಾತ್ರು ಎಂದಾಗುವ. ಇದು‌ ಮುಗದೊಂದು ಶಾಪ. ಸುಳ್ಳು ಹೇಳಿದಾಗ ಒಂದು ತರಹದ ಆನಂದವಾಗುತ್ತದೆ. ಆ ಆನಂದಕ್ಕಾಗಿ ಪದೇ ಪದೇ ಸುಳ್ಳು ಹೇಳುತ್ತಾನೆ. ಆದರೆ ಆ ಆನಂದ ಕೆಸರಿನಲ್ಲಿಯ ಹುಳ ತಿಂದಾಗಿನ ಆನಂದದಂತಹ ಆನಂದ. ಅಂದರೇ ಅತೀ ಕೆಳಮಟ್ಟದ್ದು. ಇದು ಮತ್ತೊಂದು ಶಾಪ. ಸುಳ್ಳು ಹೇಳಿದಾಗ ತನ್ನ ಬುದ್ದಿವಂತೆಕೆಯ ಮೇಲೆಯೇ ಒಂದು ಮೆಚ್ಚುಗೆಯ ಭಾವ ಮೂಡುತ್ತದೆ. ಈ ಭಾವ ಮಹಾ ಶಾಪವೆ. ಬೆನ್ನು ಬಿಡದ ಬೇತಾಳವಿದ್ದಂತೆಯೇ. ಈ ದಿಕ್ಕಿನಲ್ಲಿ ಇನ್ನೂ ಪ್ರೇರೇಪಿಸುತ್ತದೆ. ಈ ತರಹದ ಮೆಚ್ಚುವಿಕೆಯ ಮೋಹ ಗೋರವಾದ ಶಾಪವೇ.. ಸುಳ್ಳು ತಾತ್ಕಾಲಿಕ ಜಯದ ಭ್ರಾಂತಿ ಹಾಗೂ ಮಹಾ ಹಠಮಾರಿತನವನ್ನು

*ದೇವರಿಗೆ ನಾವು ಕೊಡಬಹುದಾದ ಉಡುಗೊರೆ, ಅಥವಾ ದೇವರೇ ನಮಗೆ ಕೊಟ್ಟ ಉಡುಗೊರೆ*

Image
 * ದೇವರಿಗೆ ನಾವು ಕೊಡಬಹುದಾದ ಉಡುಗೊರೆ,  ಅಥವಾ ದೇವರೇ ನಮಗೆ ಕೊಟ್ಟ ಉಡುಗೊರೆ* ವಿಶೇಷವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಪರಸ್ಪರವಾಗಿ  ಉಡುಗೊರೆ ಕೊಡುವದು ಒಂದು ಸಂಪ್ರದಾಯ.  ಅಂದಿನಿಂದಲೂ ನಡೆಯುತ್ತಾ ಬಂದಿದೆ. ಮುಂದೂ ನಡೆಯುತ್ತಿರುತ್ತದೆ. ದೇವರನ್ನು ಕಾಣುವದಕ್ಜಾಗಿ ದೇವಸ್ಥಾನಗಳಿಗೆ (ಮನೆಗೆ) ನಾವು ಹೋಗಿದ್ದೇವೆ ಎಂದಾದರೆ ದೇವರಿಗೆ ಉಡುಗೊರೆ ಕೊಡಲೇಬೇಕು. ದೇವರೂ ಸಹ ನಮಗೆ ಉಡುಗೊರೆ ಕೊಟ್ಟೇ ಕಳುಹಿಸುತ್ತಾನೆ. ನಾವು ಎಂತಹ ಉಡುಗೊರೆ ಕೊಟ್ಟಿದ್ದೇವೆ ನೋಡಿಕೊಂಡು, ದೇವ ತಾ ಉಡುಗೊರೆ ಕೊಡುತ್ತಾನೆ ಅಷ್ಟೆ.  ಉಡುಗೊರೆ ಕೊಡುವಾಗ  ಅವರ ಉಪಕಾರ  ಯಾವ ಮಟ್ಟದಲ್ಲಿ ಇದೆ, ಎಷ್ಟು ಪ್ರೀತ್ಯಾಸ್ಪದಾರಾಗಿದ್ದಾರೆ,  ನಮಗೆ ಎಷ್ಟರ ಮಟ್ಟಿಗೆ ಬೇಕಾದವರಾಗಿದ್ದಾರೆ, ಎಂದು ನೋಡಿ ತೂಗಿ ಅಳೆದು ಉಡುಗೊರೆಯನ್ನು ಕೊಟ್ಟಿರುತ್ತೇವೆ. ಇದು ಹೀಗೆಯೇ ನಡೆದು ಬಂದಿದೆ. *ದೇವರಿಗೂ ಉಡುಗೋರೆಯನ್ನು ಕೊಡಬೇಕು.......*  ದೇವ ನಮಗೆ ಎಷ್ಟು ಉಪಕಾರ ಮಾಡಿದ್ದಾನೆ, ಎಷ್ಟು ಪ್ರಿಯನಾಗಿದ್ದಾನೆ ಎಂದು ವಿಚಾರ ಮಾಡಿದರೆ ಅಂತ ಕೊನೆ ಕಾಣುವದಿಲ್ಲ. ಗತಿತಪ್ಪಿ ಹೋಗುತ್ತದೆ ಮನಸ್ಸು. ಶಾಸ್ತ್ರ ನೂರು ತರಹದಲ್ಲಿ ವಿವರಿಸುತ್ತದೆ. ಅದರಿಂದ ದೇವರ ಉಪಕಾರ ಅನಂತ ವಿಧವಾಗಿದೆ ಎನ್ನುವದು ಮನವರಿಕೆ ಆಗುತ್ತದೆ.  ೧) ಅದ್ಭುತವಾದ ದೇಹೇಂದ್ರಿಯಮನಸ್ಸುಗಳನ್ನು ಕೊಟ್ಟ.  ೨) ಅದ್ಭುತ ಜಗತ್ತಿನ್ನು ಸೃಷ್ಟಿಸಿದ.  ೩)ನಮ್ಮನ್ನು ಈ ಜಗತ್ತಿನಲ್ಲಿ ಹುಟ್ಟಿಸಿದ.  ೪) ರೂಪ ಲಾವಣ್ಯ ಹಣ ಬುದ್

"ತಪ್ಪುಗಳ ವಿರುದ್ಧ ಪ್ರತಿಭಟನೆ - ತಪ್ಪುಗಳ‌ಮನವರಿಕೆ"

Image
"ತಪ್ಪುಗಳ ವಿರುದ್ಧ ಪ್ರತಿಭಟನೆ - ತಪ್ಪುಗಳ‌ಮನವರಿಕೆ" ತಪ್ಪುಗಳ ವಿರುದ್ಧ ಪ್ರತಿಭಟನೆ ಸೂಕ್ತವೇ ಅಥವಾ ತಪ್ಪುಗಳಮನವರಿಕೆಮಾಡುದು ಸುಕ್ತವೇ... ?? ಎಂಬ ಪ್ರಶ್ನೆ ಕಾಡುತ್ತದೆ. ಮನವರಿಕೆ ಅತ್ಯುತ್ತಮ. ಪ್ರತಿಭಟನೆ  ಜಘನ್ಯ. ಪ್ರತಿಭಟನೆ ಫಲ ಕೊಡಬೇಕಾದರೆ ಮನವರಿಕೆಯಾಗಲೇಬೇಕು. ಹಾಗಾಗಿ ಮೊದಲೇ ಪ್ತಿಭಟನೆಗೆ ಇಳಿಯದೆ ತಪ್ಪುಗಳ ಮನವರಿಕೆ ಮಾಡುವದು ಸರ್ವಶ್ರೇಷ್ಠ ಎಂದು ಹೇಳಬಹುದು. ಅಂತೆಯೇ ಕೃಷ್ಣ ಗೀತಿಯಲ್ಲಿ ಮನವರಿಕೆ ಮಾಡಿದನೆ ಹೊರತು, ಅರ್ಜುನನ ತಪ್ಪುಗಳನ್ನು ಪ್ರತಿಭಟಿಸಲಿಲ್ಲ. ವಿದು ಪ್ರತಿಭಟಿಸಿದ ದುರ್ಯೋಧನ ಒಪ್ಪಿಕೊಳ್ಳಲಿಲ್ಲ.  *ಪ್ರತಿಭಟನೆ  ಮಾಡಬಾರದೇಕೆ .. ?* ತಪ್ಪುಗಳ ವಿರುದ್ಧ ಪ್ರತಿಭಟನೆ ಮಾಡಬಾರದೇಕೆ .. ? ಈ ಪ್ರಶ್ನೆ  ಸಾಮಾನ್ಯರೆಲ್ಲರದ್ದೂ ಆಗಿದೆ. ನಂದೂ ಆಗಿದೆ.  ಉತ್ತರವಿಷ್ಟೆ .. ಪ್ರತಿಭಟಿಸಬಬಾರದು.  ಮೊದಲಿಗೆ "ತಪ್ಪುಗಳ ವಿರುದ್ಧ ಪ್ರತಭಟಿಸಬಾರದು ಏಕೆ.."  ತಪ್ಪುಗಳ ವಿರುದ್ಧದ ಪ್ರತಿಭಟನೆ "ಸಮಾಜದಲ್ಲಿ  ಸಾಮರಸ್ಯಕ್ಕಿಂತಲೂ ಹೆಚ್ಚು ಗೊಂದಲಗಳನ್ನೇ ಹುಟ್ಟು ಹಾಕುತ್ತದೆ" ಆ ಕಾರಣ ತಪ್ಪುಗಳ ವಿರುದ್ಧ ಪ್ರತಿಭಟನೆ ಸಲ್ಲದು.  ತಪ್ಪು ಮಾಡಿದವ ಸಾಮಾನ್ಯ ಒಪ್ಪಿಕೊಳ್ಳಲಾರ. ಪ್ರತಿಭಟನೆ ವ್ಯರ್ಥ ಕಾಲಹರಣ ಅಷ್ಟೆ. ತಪ್ಪು ಮಾಡಿದ ತಪ್ಪಿತಸ್ಥನಿಗೆ, "ತಾನು ಸರಿ" 'ತನ್ನ ಕಾರ್ಯ ಸರಿ' ಎಂದು ಮಾಡಿಕೊಳ್ಳಲು ಏನು ಮಾಡಲೂ ಸಿದ್ಧ. ಆದ್ದರಿಂದ ನಮ್ಮ ಪ್ರತಿಭಟನೆ ಪ್ರತಿಭಟನ

ಬಲಿಪ್ರತಿಪದಾ ಶುಭದಿನದ ಶುಭ ಆಶಂಸನೆಗಳೊಂದಿಗೆ ಒಂದು ಚಿಂತನೆ*

Image
*ಬಲಿಪ್ರತಿಪದಾ ಶುಭದಿನದ ಶುಭ ಆಶಂಸನೆಗಳೊಂದಿಗೆ ಒಂದು ಚಿಂತನೆ* ಶೋಭನ ನಾಮ ಸಂವತ್ಸರದ "ಬಲಿಪ್ರತಿಪತ್" ದಿನವು ಬಲಿಯ ಅನೇಕ ದುರ್ಗುಣಗಳನ್ನು ಹಾಗೂ ದುರ್ವಿಚಾರಗಳನ್ನು ಪರಿಹರಿಸಿದಂತೆ ನಮಗೂ ನಮ್ಮ ದುರ್ಗುಣಗಳನ್ನು ಹಾಗೂ ದುರ್ವಿಚಾರಗಳನ್ನೂ ಪರಿಹರಿಸಿ ತನ್ನ ಪಾದಾರವಿಂದಗಳ ಸನ್ನಿಧಾನವನ್ನು ಒದಗಿಸಿಲಿ.  *ಬಲಿಚಕ್ರವರ್ತಿ* ಬಲಿ ಸ್ವಾಭಾವಿಕ ವಿಷ್ಣುಭಕ್ತ. ಮುಕ್ತಿಯೋಗ್ಯ. ಆದರೆ ಜನ್ಮ ದುಷ್ಟರಲ್ಲಿ.  ಸಹವಾಸ ದುಷ್ಟರದ್ದೇ. ಆ ಎಲ್ಲಾ ದೈತ್ಯರ ಚಕ್ರವರ್ತಿ. ಅನಿವಾರ್ಯವಾಗಿ ದುರ್ಗುಣಗಳನ್ನೇ ರೂಢಿಸಿಕೊಳ್ಳಬೇಕಾಯ್ತು. ದುರ್ವಿಚಾರಗಳೇ ಮೈದೆಳೆದವು.   "ಮುಖವನ್ನು ನೋಡಿ ಮಣಿಹಾಕದ" ಕರುಣಾಮಯಿಯಾದ ದೇವ, ಹಿಂದಿನ ಒಳಗಿನ ಸ್ವಭಾವವನ್ನು ನೋಡಿ, ಓಡಿ ಬಂದು ಆ ಎಲ್ಲ ದುರ್ಗುಣಗಳನ್ನೂ ಕಳೆದ. ದುರ್ವಿಚಾರಗಳಿಂದಲೂ ಮುಕ್ತನನ್ಬಾಗಿಸಿದ. ತುಂಬ ವಿಚಿತ್ರ ದೈತ್ಯರ ಚಕ್ರವರ್ತಿಯಾಗಿ ಇಂದಿಗೂ ದೈತ್ಯರ ಮಧ್ಯದಲ್ಲಿಯೇ ಇದ್ದರೂ ದೈತ್ಯಗುಣಗಳ ದುರ್ವಿಚಾರಗಳ ಪ್ರಭಾವವೂ ಆಗದೇ, ಗಂಧವೂ ಸೋಸದಂತೆ ಮಾಡಿ ತನ್ನ ಪಾದಾರವಿಂದ ಬಲಿಯ ತಲೆಯಮೇಲಿಟ್ಟು, ದ್ವಾರಪಾಲಕನಾಗಿ ನಿಂತ. ಇದು ದೇವರ ಕಾರುಣ್ಯ. ಈ ವಿಶೇಷವಾದ ಕಾರುಣ್ಯ ನಿತ್ಯ ನೆನೆಯಲೇಬೇಕು. ನಾಳೆಯದಿನ ವಿಶೇಷವಾಗಿ ನೆನೆಯೋಣ. ನಮ್ಮ ದುರ್ಗುಣ ದುರ್ವಿಚಾರಗಳಿಂದ ದೂರಾಗೋಣ..... *ವಾಮನ - ತ್ರಿವಿಕ್ರಮ* ಅತ್ಯಂತ ಕರುಣಾಮಯಿ ತಾ ಅವತರಿಸುವದು ತನಗಾಗಿ ಅಲ್ಲ. ಕೇವಲ ನಮಗಾಗಿ. *ದೇರೊಗೋಸ್ಕರ ನಾವೇನು

ಜಲಪೂರ್ಣತೆಯು ಸುಖಪೂರ್ಣತೆಯನ್ನೇ ತಂದುಕೊಡಲಿ*(ಓದಲೇಬೇಕಾದ ಒಂದು‌ಲೇಖನ)

Image
  *ಜಲಪೂರ್ಣತೆಯು ಸುಖಪೂರ್ಣತೆಯನ್ನೇ ತಂದುಕೊಡಲಿ* (ಓದಲೇಬೇಕಾದ ಒಂದು‌ಲೇಖನ) "ಜಲಪೂರ್ಣತೆ ಸುಖಪೂರ್ಣತೆಯನ್ನು" ತಂದೊದಗಿಸುತ್ತದೆ. ಅಂತೆಯೇ "ಜಲ" ಕ್ಕೆ ಇರುವ ಪ್ರಾಶಸ್ತ್ಯ ಇನ್ಯಾವದಕ್ಕೂ ಇಲ್ಲ.  *ಜಲಾಭಿಮಾನಿಗಳು....* "ಆಪೋ ವೈ ಸರ್ವಾ ದೇವತಾಃ" ಎಂಬ ಶೃತಿವಾಕ್ಯ ಇರುವದರಿಂದ ವಾಯುದೇವರಿಂದ ಆರಂಭಿಸಿ ಗಂಗೆಯವರೆಗೆ ಮುಕ್ಕೋಟಿ ದೇವತೆಗಳೂ ನೀರಿಗಭಿಮಾನಿ ದೇವತೆಗಳು. ಅಂತೆಯೇ ನೀರಿನಲ್ಲಿ ಎಲ್ಲ ಪದಾರ್ಥಗಳು ಗುಣಗಳು ಇವೆ. ಅಂತೆಯೇ ಯಾವ ಪದಾರ್ಥದಿಂದಲೂ ಇರದ ತೃಪ್ತಿ, ಕೇವಲ ನೀರಿಗೆ ದೇವರು ಕೊಟ್ಟಿದ್ದಾನೆ. ಅಂತೆಯೇ ನೀರನ್ನು ಮೊದಲು ಸವಿಯುತ್ತಾನೆ. ನೀರು ಕುಡುದೇ ಊಟ ಮುಗಿಸುತ್ತಾನೆ.  *ಪಾಪಕಳೆಯುವ ಶಕ್ತಿ ನೀರಿಗೆ ಇದೆ...* ಈ ನೀರಿಗೆ ಅನೇಕ ಶಕ್ತಿಗಳ ಮಧ್ಯೆಯೇ ಒಂದು ಅಪರೂಪದ ಶಕ್ತಿ ಎಂದರೆ ಪಾಪ ಕಳೆಯುವ ಶಕ್ತಿ. ಗಂಗಾದಿ ತೀರ್ಥಗಳ ಸ್ಮರಣ ದರ್ಶನ ಪಾನ ಇವುಗಳಿಂದ ಪಾಪನಾಶ. "ಆಪೋ ಹಿ ಷ್ಠಾಃ" ಎಂಬ ಮಂತ್ರದಿಂದ ಪ್ರೋಕ್ಷಣೆ ಮಾಡಿಕೊಂಡರೆ ದೇಹ ಇಂದ್ರಿಯ ಮನೋ ಶುದ್ಧಿ. "ಋತಂ ಚ ಸತ್ಯಂ ಚ" ಎಂಬ ಮಂತ್ರದಿಂದ ಪಾಪ ಪುರುಷ ವಿಸರ್ಜನೆ ಈ ನೀರಿನಿಂದಲೇ. "ಸೂರ್ಯಶ್ಚ ಮಾಮುನ್ಯಶ್ಚ" ಎಂಬ ಮಂತ್ರದಿಂದ ನೀರಿನ ಪ್ರಾಶನದಿಂದ ನಾನಾವಿಧ ಪಾಪಗಳ ನಾಶ.  *ನೀರಿನಿಂದಲೇ ಜ್ಙಾನಪ್ರಾಪ್ತಿ - ವಿಷ್ಣುಪ್ರೀತಿ*  ಈ ನೀರೇ ದೇವರ ಪಾದ ಸೋಕಿ ತೀರ್ಥ ಎಂದಾರೆ ಭಗವಂತನ ತೃಪ್ತಿಯನ್ನೇ ತಂದು ಕೊಡುತ