Posts

Showing posts from July, 2020

*ವಿಜಯದಾಸರ ದೃಷ್ಟಿಯಲ್ಲಿ "ಶ್ರೀಮಟ್ಟೀಕಾಕೃತ್ಪಾದರು"*

Image
*ವಿಜಯದಾಸರ ದೃಷ್ಟಿಯಲ್ಲಿ "ಶ್ರೀಮಟ್ಟೀಕಾಕೃತ್ಪಾದರು"* ಜ್ಙಾನ ಹಾಗೂ ಭಕ್ತಿ ಮಾರ್ಗಗಳನ್ನು  ತೋರಿದ, ಅನಾದಿ ಸತ್ಸಂಪ್ರದಾಯಪರಂಪರಾ ಪ್ರಾಪ್ತವಾದ ಭವ್ಯವಾದ ದ್ವೈತಸಿದ್ಧಾಂತವನ್ನು ಸ್ಥಾಪಿಸಿದ ಪ್ರತಿಷ್ಠಾಪಿಸಿದ ಮಹಾಮಹಿಮರು ನಮ್ಮ  ಶ್ರೀಮದಾಚಾರ್ಯರು. ಶ್ರೀಮದಾಚಾರ್ಯರು ರಚಿಸಿದ ಮೂಲಗ್ರಂಥಗಳನ್ನು ವ್ಯಾಖ್ಯಾನಿಸಿ,  ಟೀಕಾರಚಿಸಿ ಸಾಮಾನ್ಯ ಜನರಿಗೆ ತಿಳಿಸಿ, ಈ ಭವ್ಯ ಸಿದ್ಧಾಂತಕ್ಕೆ *ಶ್ರೀಮನ್ಯಾಯಸುಧಾ ತತ್ವಪ್ರಕಾಶಿಕಾ* ಮೊದಲಾದ ಉದ್ಗ್ರಂತಗಳನ್ನು ರಚಿಸಿ ಭವ್ಯವಾದ ಕೊಟೆಗೊಡೆಯನ್ನು ನಿರ್ಮಿಸಿ, ಕೊಟೆಗೋಡೆಯ ರಕ್ಷಣೆಗೆ ನಿಂತ ಸೇನಾಧಿಪತಿ ಎಂದೆನಿಸಿದವರು ಇಂದಿನ ಆರಾಧ್ಯ ಪುರುಷರಾದ, ಮಲಖೇಡ ನಿವಾಸಿಗಳಾದ *ಶ್ರೀಮಟ್ಟೀಕಾಕೃತ್ಪಾದರು.*  ಶ್ರೀ ವ್ಯಾಸತೀರ್ಥರು ಶ್ರೀಶ್ರೀಪಾದರಾಜರು ಶ್ರೀವ್ಯಾಸರಾಜರು ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು ಶ್ರೀರಾಘವೆಂದ್ರ ಪ್ರಭುಗಳು, ಶ್ರೀವೇದೇಶತೀರ್ಥರು, ಶ್ರೀವಿಷ್ಣುತೀರ್ಥರು,  ಶ್ರೀಯಾದವಾರ್ಯರಿಂದಾರಂಭಿಸಿ ಸಕಲ ಜ್ಙಾನಿಗಳೂ, ಪುರಂದರದಾಸ ವಿಜಯದಾಸಾದಿ ಸಕಲ ದಾಸ ವರೇಣ್ಯರೂ " ಜ್ಙಾನಿಗಳು" ಎಂದಾಗಿದ್ದು *ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ, ಟೀಕಾ ಗ್ರಂಥಗಳ ಆಮೂಲಾಗ್ರ ಅಧ್ಯಯನ* ಇವುಗಳಿಂದಲೇ. ಇದರಲ್ಲಿ ಕಿಂಚಿತ್ತೂ ಸಂಶಯ ಆ ಜ್ಙಾನಿಗಳಿಗೂ ಇಲ್ಲ. ನಮಗೂ ಇಲ್ಲ.  ಇದೆಲ್ಲವೆನ್ನು ಸೂಕ್ಷ್ಮವಾಗಿ ಗಮನಿಸಿಯೇ ವಿಜಯದಾಸರು *ಸೃಷ್ಟಿಯೊಳಗೆ ಇವರ ದ

*ನಮ್ಮ ಭಾಗ್ಯದ ದೇವರಿಗೆ - ಅನಂತ ನಮನಗಳು*

Image
*ನಮ್ಮ ಭಾಗ್ಯದ ದೇವರಿಗೆ - ಅನಂತ ನಮನಗಳು* "ಅಸಾಧ್ಯವಾದದ್ದನ್ನು ಕೊಡುವ ದಿವ್ಯ ಸಾಮರ್ಥ್ಯ ಇರುವದು ಗುರುಗಳಿಗೆ ಮಾತ್ರ. ಅಪರಿಹಾರ್ಯವಾದದ್ದನ್ನು ಪರಿಹರಿಸುವ ಶಕ್ತಿ ಇರುವದೂ ಗುರುಗಳಿಗೆ ಮಾತ್ರ." ಅಂತಹ ಗುರುಗಳನ್ನು ಕ್ಷಣ ಬಿಡದೆ ಸ್ಮರಿಸುವ ಕರ್ತವ್ಯ ಎಮ್ಮದು.  *ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ* ಈ ಜಗದಲ್ಲಿ ಎಲ್ಲರೂ ಆಪ್ತರೆ ನಿಜ. ಆ ಎಲ್ಲ ಆಪ್ತತೆಯ ಹಿಂದೆ ಒಂದಿಲ್ಲ ಒಂದು ಸ್ವಾರ್ಥ ಅಡಗಿರತ್ತೆ. ಅತ್ಯಾಪ್ತರಾದ ಈ ಗುರುಗಳಲ್ಲಿ *ನನ್ನ ಹಿತ* ಮಾತ್ರ ಅಡಗಿರುತ್ತದೆ. ಅಂತೆಯೇ ಶಿಷ್ಯಹಿತದ ಉದ್ಯೆಶ್ಯದಿಂದಲೇ ಇಂದಿಗೂ ಕರೆದು ನಿತ್ಯವೂ ಪಾಠ ಹೇಳುವದು, ಗೂಢ ಪ್ರಮೇಯಗಳ  ಉಪದೇಶ, ಮಂತ್ರಗಳ ಜಪದ ಅಧ್ಯಾದೇಶ, ಧರ್ಮಕರ್ಮಗಳಿಗೆ ದೀಕ್ಷೆಯ ಬದ್ಧತೆ, ಗುರು ದೇವತೆಗಳಲ್ಲಿಯ ವಿಶ್ಚಾಸವೃದ್ಧಿಯ ಭದ್ರಬುನಾದಿ ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ಲಕ್ಷಲಕ್ಷ ಮಾರ್ಗಗಳನ್ನು ದಾರಿಗಳನ್ನು ಸ್ವಯಂ ತಾವು ಮಾಡಿ, ಆ  ಮಾರ್ಗದಲ್ಲಿ ನಮ್ಮನ್ನು ಇರಿಸುತ್ತಾರೆಲಾ ಅಂತಹ ನಮ್ಮ ಪೂಜ್ಯ ಆಚಾರ್ಯರೇ ಅತ್ಯಾಪ್ತರು ನಮಗೆ. "ನಾ ಕಟ್ಟಿದ ಮನೆಯಲ್ಲಿ ನಮ್ಮವರನ್ನುಳಿದು ಇನ್ಯಾರನ್ನೂ ಇರಿಸಲು ಬಿಡುವದಿಲ್ಲ. ನನ್ನ ಮೋಬೈಲನ್ನು ನನ್ನವರಿಗೂ ತೋರಿಸುವದಿಲ್ಲ ಅಂತಹ ಪ್ರಪಂಚ ಎದುರಿರುವಾಗ, ತಾವು ಮಾಡಿದ ಮಾರ್ಗದಲ್ಲಿ, ತಮ್ಮನ್ನು ನಂಬಿದ ಎಲ್ಲ ಶಿಷ್ಯರನ್ನು ಇರಿಸಿವದು, ಸ್ವಯಂ ತಾವು ಹಿಂದೆ ಇದ್ದು,  ನಮ್ಮನ್ನು ಮುಂದೆ ನಡೆಸುವದು&