Posts

Showing posts from October, 2023

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*

Image
 *ಪಾಪ ಪರಿಹರಿಸಿಕೊಳ್ಳಲು ಪುಣ್ಯಘಳಿಸಲು  ಒಂದು ಸದವಕಾಶ* ಜೀವನ ಸರ್ವಸ್ವಕ್ಕೆ ಕಾರಣ ಪುಣ್ಯಪಾಪಗಳು. ನಿತ್ಯ ಪುಣ್ಯ ಸಂಪಾದಿಸಬೇಕು. ಪಾಪಗಳನ್ನು ಪರಿಹರಿಸಿಕೊಳ್ಳಬೇಕು. ಆದರೆ..... ಒತ್ತಡವೋ, ಆಲಸ್ಯವೋ, ತಾತ್ಸಾರವೋ, ಅನಾಸಕ್ತಿಯೋ, ಅವಿಶ್ವಾಸನೋ ತಿಳಿಯದು ಅಂತೂ ನಿತ್ಯ ಪುಣ್ಯ ಸಂಪಾದನೆಯಾಗುವದಿಲ್ಲ ಇದು ಅತ್ಯಂತ ನಿಶ್ಚಿತ.  ಪಾಪದಲ್ಲಿ ಅಭಿರುಚಿಯೋ, ತೃಪ್ತಿಸಿಗತ್ತೆ ಎಂಬ ಸಂತೋಷವೋ, ಪಾಪ ಮಾಡಿದರೆ ಏನಾಗತ್ತೆ ಎಂಬ ಭಂಡ ಧೈರ್ಯವೋ ಅತ್ಯಂತ ಅನಾಯಾಸವಾಗಿ ನಿತ್ಯವೂ ಪಾಪಗಳು ಘಟಿಸುತ್ತಾ ಹೋಗುತ್ತವೆ ಇದುವೂ ಅಷ್ಟೇ ನಿಶ್ಚಿತ.  ನಿತ್ಯವೂ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾ ಪುಣ್ಯ ಸಂಪಾದನೆಯ ಮಾರ್ಗವನ್ಬು ಅವಲಂಬಿಸಿದಿದ್ದರೂ ಕನಿಷ್ಠ ಕೆಲವೊಂದು ದಿನವಾದರೂ ಅನುಸರಿಸಲಿ, ಅಂದು ದುಪ್ಪಣ್ಯಕೊಡುವೆ ಎಂಬುವದು ದೇವರ ಸಂಕಲ್ಪವೋ ಏನೋ ಕೆಲವೊಂದು ದಿನಗಳನ್ನು ಮೀಸಲು ಇಟ್ಟಿದ್ದಾನೆ.  ಆ ದಿನಗಳು ಎಂದರೆ *ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶೀ ಉಪವಾಸಗಳು, ಪ್ರತಿ ತಿಂಗಳಿನ ಸಂಕ್ರಮಣಗಳು, ಆರು ತಿಂಗಳಿಗೊಮ್ಮೆ ಬರುವ ೨ ಮುಖ್ಯ ಸಂಕ್ರಮಣಗಳು, ಆಗಾಗ ಬರುವ ಪರ್ವಕಾಲಗಳು, ಗ್ರಹಣ, ಮಗು ಜನಿಸುವಕ್ಷಣದ ಕಾಲ, ಗುರುಗಳ ಆರಾಧನೆಯ ಪ್ರಸಂಗ, ಹಬ್ಬ ಹರಿದಿನಗಳು* ಇತ್ಯಾದಿಯಾಗಿ ಮೀಸಲು ಇಟ್ಟಿದ್ದಾನೆ. ಆ ಆ ದಿನಗಳಂದು ಮಾಡುವ ಸಾಧನೆ ನೂರಾರುಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮಹಾಮಹಾ ಪಾಪಗಳ ನಾಶವೂ ಆಗುತ್ತದೆ.  ಈಗ ಪ್ರಕೃತ ಇಂದು ರಾತ್ರಿ ಚಂದ್ರಗ್ರಹಣವಿದ