Posts

Showing posts from August, 2021

*ಧರ್ಮ ಅಧರ್ಮಗಳ ಯುದ್ಧ*

 *ಧರ್ಮ ಅಧರ್ಮಗಳ ಯುದ್ಧ* ಧರ್ಮಾಧರ್ಮಗಳ ಯುದ್ಧ ಇಂದಿನದು ಅಲ್ಲ ಅನಾದಿಯಿಂದ ಇರುವಂತಹದ್ದು. ಅನಾದಿಯಿಂದ ವೇದಗಳಿವೆ. ವೇದೋಕ್ತವಾದವುಗಳೇ ಧರ್ಮಾಧರ್ಮಗಳು. ಹಾಗಾಗಿ ಅನಾದಿಯಿಂದ ಘರ್ಷಣೆ ಇರುವಂತಹದ್ದೇ.  ದೈವೀಶಕ್ತಿ ಹೆಚ್ಚಾದಾಗ, ಧರ್ಮಜಾಗೃತಿ ಪಸರಿತವಾದಾಗ ಧರ್ಮಕ್ಕೇ ಗೆಲುವು. ದುಷ್ಟಶಕ್ತಿ ಹೆಚ್ಚಾದಾಗ, ಆಧಾರ್ಮಿಕತೆಗೇ ಬೆಂಬಲ ಹೆಚ್ಚಾದಾಗ ಅಧರ್ಮಕ್ಕೇ ಗೆಲವು. ಆದರೆ ಕೊನೆಗೆ ಹಾಗೂ ಶಾಶ್ವತವಾಗಿ ಇರುವ ಗೆಲವು ಎಂದರೆ ಅದು ಧರ್ಮಕ್ಜೇನೇ.  *ಧರ್ಮ ನೇರ ಹಾಗೂ ನಿಷ್ಠುರ* ಧರ್ಮ ಎಂದಿಗೂ ತುಂಬ ನೇರ ಹಾಗು ಬಲು ನಿಷ್ಠುರ. ಅಂತೆಯೇ ವಿರೋಧಿಗಳು ತುಂಬ. ಈ ವಿರೋಧಿಗಳು ಒಂದಾದಾಗ ಧರ್ಮಕ್ಕೆ ಪರಾಭವ. ಈ ಎಲ್ಲ ವಿರೋಧಿಗಳನ್ನು ಸೆದೆಬಡೆಯಲು ಬೇಕು ಧಾರ್ಮಿಕ ಶಕ್ತಿ, ದೈವೀ ಶಕ್ತಿ. ಅವೆರಡೂ ಬಂದಾಗ ಬಲಿಷ್ಠ ಧರ್ಮ. ಆಗ ವಿರೋಧಿಗಳು ನೂರು ಇದ್ದರೂ ಅನಾಯಾಸೇನ ಅಧರ್ಮವನ್ನು ಚಂಡಾಡಿ ಧರ್ಮ ಸ್ಥಾಪನೆಯಾಗುತ್ತದೆ.  *ಕೆಲ ಧಾರ್ಮಿಕರ compromise* ನಿಷ್ಠುರರಲ್ಲದ ಕೆಲ ಧಾರ್ಮಿಕರು ಇರುತ್ತಾರೆ. ಅವರ ಸ್ವಭಾವ ಕೆಲೊಮ್ಮೆ ಹೊಂದಾಣಿಕಯನ್ನು ಮಾಡಿಕೊಂಡಿರುತ್ತಾರೆ. ನಿಷ್ಠುರರು ಅಲ್ಲ. ನೇರವಾಗಿಯೂ ಇರುವದಿಲ್ಲ. ಆದರೆ ನಿಷ್ಠುರವಾದ ಹಾಗೂ ನೇರವಾಗಿ ಇರುವ ಧರ್ಮ ಹೊಂದಾಣಿಕೆಯ ಧಾರ್ಮಿಕರನ್ನು ಅವಮಾನಿಸಿತೂ ಎಂದಾದರೆ, ಆಗ ಆ ಹೊಂದಾಣಿಕೆಯ compromise ಧಾರ್ಮಿಕರು ಅಧರ್ಮಕ್ಕೆ ಒಲ್ಲದ ಮನಸ್ಸಿನಿಂದಲೇ ಸಪೋರ್ಟ್ ಮಾಡುವ ಸ್ಥಿತಿಗೆ ಬಂದಿಳಿದು ಬಿಡುತ್ತಾರೆ. ಕಾಲ ಅವರನ್ನು