Posts

Showing posts from June, 2020

*ಯೋಗ ದಿನ- ಯೋಗೀಶವಂದ್ಯನಿಗೆ ಯೋಗದ ಮುಖಾಂತರ ಕೋಟಿ ಕೋಟಿ ಪ್ರಣಾಮಗಳು*

Image
*ಯೋಗ ದಿನ- ಯೋಗೀಶವಂದ್ಯನಿಗೆ ಯೋಗದ ಮುಖಾಂತರ ಕೋಟಿ ಕೋಟಿ ಪ್ರಣಾಮಗಳು* ಮಾನಸಿಕ ದೈಹಿಕ ಆರೋಗ್ಯಕ್ಕೆ ಯೋಗ್ಯಾಭ್ಯಾಸ ಅತ್ಯಂತ ಸದುಪಯುಕ್ತವಾಗಿರುವದು. ಸಕಾರಾತ್ಮಕ ವಿಚಾರಗಳಿಗೆ ಯೋಗ ಶ್ರೇಷ್ಠವಾದ ಉಪಾಯವೇ ಆಗಿದೆ. ಏಕಾಗ್ರತೆಗೆ ಯೋಗ ಮುಖ್ಯ. ಆಧ್ಯಾತ್ಮಿಕ ಅಲೌಕಿಕ ಜೀವನದಲ್ಲಿ ಯೋಗ ಅತ್ಯಂತ ಪ್ರಮುಖವಾದ ಅಂಗವೇ ಆಗಿದೆ. ಅಂತೆಯೇ ಅಂದಿನ ಕಾಲದ ಋಷಿ‌ಮುನಿಗಳು ಯೋಗಾಭ್ಯಾಸವನ್ನು ಎಂದಿಗೂ ಕಡೆಗಾಣಿಸಲಿಲ್ಲ. ಇಂದಿನ ಜ್ಙಾನಿಗಳೂ ಬಿಟ್ಟಿಲ್ಲ.  ಅನಾರೋಗ್ಯ, ಕ್ರಿಯಾಶೀಲತೆ ಇಲ್ಲದಿರುವದು, fitness ಸಮಸ್ಯೆ, ಕಫ ಪಿತ್ತ  ವಾತಗಳಿಂದ ಉಂಟಾಗುವ acidity, ತಲೆಶೂಲಿ ಮುಂತಾದ ನಾನಾತರಹದ ಸರ್ವೆ ಸಾಮಾನ್ಯವಾದ ದೈಹಿಕ ರೋಗಗಳಿಂದ ತುತ್ತಾಗಿರುವ ಕಾರಣ ಒಂದು ಹತ್ತು ನಿಮಿಷ ಬಿಡದೆ  ಸುಖಾಸನದಲ್ಲೂ ಕೂಡಲು ಆಗದ ಪರಿಸ್ಥಿತಿ.   ಚಿಂತೆ, ನಕಾರಾತ್ಮಕ ಭಾವನೆ, ಅಸಂತೃಪ್ತಿ, ಅಶಾಂತಿ, ಮಾನಸಿಕ stress, ದಗುಡ, tension, ಕಂಡದ್ದರ ವಿಚಾರ, ಮುಂತಾದ ಮಾನಸಿಕ ಅನಾರೋಗ್ಯ ಎಲ್ಲರಿಗೂ ಇರುವಂತಹದ್ದು. ಅಂತೆಯೇ ಕಣ್ಣುಮುಚ್ಚಿ ಏಕಾಗ್ರವಾಗಿ ನೂರು ಗಾಯತ್ರೀ ಜಪಮಾಡದ ಪರಿಸ್ಥಿತಿ. ಯೋಗದಿಂದ ಮಾತ್ರ ಪರಿಹಾರ  ಯಮ ನಿಯಮ ಆಸನ  ಪ್ರಾಣಾಯಮ ಪ್ರತ್ಯಾಹಾರ ಧಾರಣ ಧ್ಯಾನ  ಈ ರೀತಿಯಾಗಿ ಎಂಟು ತರಹದ್ದು ಆಗಿದೆ ಯೋಗ. ಪ್ರಾಣಾಯಾಮ ಆಸನ ಧ್ಯಾನಗಳಾದರೂ ಇಂದು ಅತ್ಯಂತ ಆವಷ್ಯಕ. ಆಸನ - ಪ್ರಾಣಾಯಾಮ ಪ್ರಾಣಾಯಾಮದಿಂದ ಏಕಾಗ್ರತೆ ಹಾಗೂ ಆರೋಗ್ಯಪೂ

*ನಾನು ಸಂತೋಷದಿಂದಿರಲು ಏನು ಮಾಡಬೇಕು...??*

Image
*ನಾನು ಸಂತೋಷದಿಂದಿರಲು ಏನು ಮಾಡಬೇಕು...??* ನಾನು ಸಂತುಷ್ಟನಾಗಿರಬೆಕು ಎಂಬ ದೃಢವಾದ ಬಯಕೆ ಇದ್ದರೆ ಮೊಟ್ಟ ಮೊದಲು, ಸಂತುಷ್ಟನಾಗಿ ಇರಬೇಕೆಂಬ ಆಸೆಯನ್ನು ತೊರೆಯಬೇಕು. ಆಸೆಯಿರುವ ವ್ಯಕ್ತಿ ಸಂತುಷ್ಟನಾಗಿ ಇರಲಾರ. ಅಂತೆಯೇ ದಾಸರಾಯರ ಒಂದು ನುಡಿ.... *ಇಷ್ಟು ದೊರಕಿದರೆ ಮತ್ತಷ್ಟುಬೇಕೆಂಬ ಆಸೆ, ಮತ್ತಷ್ಟು ದೊರಕಿದರೆ ಇನ್ನಷ್ಟರಾಸೆ.....* ಹೀಗೆ ಆಸೆ ಇರುವವ ಮತ್ತೊಂದರ ಆಸೆಗೆ ಬಾಯಿಬಿಡುವ. ಹಾಗಾಗಿ ಸಂತೋಷ ಅವನಿಗೆ ದೂರದ ಮಾತೇ.... ಆಸೆ ತೊರೆದವ ಬಂದದ್ದರಲ್ಲಿ ಇದ್ದರಲ್ಲಿ ಸಂತುಷ್ಟನಾಗಿಯೇ ಇರುತ್ತಾನೆ.  ೨) ಇನ್ನೊಬ್ಬರ ಜೊತೆಗೆ ಹೋಲಿಸಿಕೊಳ್ಳವದನ್ನು ಬಿಡಬೇಕು...... ಸ್ವಗತವನ್ನು ಬಿಟ್ಟು ಅವರು ಹಾಗಿದ್ದಾರೆ... ಇವರು ಹೀಗಿದ್ದಾರೆ.... ಅಯ್ಯೋ ನಾ ಹೀಗಿದ್ದೇನೆ.... ಈ ರೀತಿಯಾಗಿ ಇನ್ನೊಬ್ಬರೊಟ್ಟಿಗೆ ಹೊಲಿಸಿಕೊಳ್ಳುವದು ಬಿಟ್ಟ ದಿನ ತಾನು ಸಂತುಷ್ಟನಾಗಿ ಇರುವ.  ಜಗತ್ತಿನ ಎಲ್ಲ ಜೀವರಾಶಿಗಳೂ ಒಬ್ಬರ ಹಾಗೆ ಇನ್ನೊಬ್ಬರಿಲ್ಲ. ಒಬ್ಬರ ಹವ್ಯಾಸ ಗುಣಗಳು ಮತ್ತೊಬ್ಬರಿಗೆ ಬಂದಿಲ್ಲ. ಆ ಎಲ್ಲರೊಟ್ಟಿಗ ತನ್ನನ್ನು ತಾನು ಹೋಲಿಸಿಕೊಳ್ಳುತ್ತಾ ಸಾಗಿದರೆ ದುಃಖವಲ್ಲದೇ ಇನ್ನೇನು. ಇನ್ನೊಬರೊಟ್ಟಿಗೆ ಹೊಲಿಸಿಕೊಳ್ಳುವದನ್ನು ಬಿಟ್ಟು ತನ್ನಲ್ಲಿಯೇ ಇರುವ ನಾನಾವಿಧಗುಣಗಳ, ವಿಚಿತ್ರವಾದ  ಶಕ್ತಿ ಮೊದಲಾದವುಗಳನ್ನು ಅನುಭವಿಸುತ್ತಾ ಇದ್ದರೆ ಆನಂದವನ್ನು ಅನುಭವಿಸಲು ಸಾಧ್ಯ... ೩) ಸಂತುಷ್ಟರಾದ ವ್ಯಕ್ತಿಗಳ ಸಹವಸದಲ್ಲಿ ಇರಲು

*ದೃಷ್ಟಿಕೋನ ಬದಲಾಯಿಸಿ ನೋಡೋಣ......*

Image
*ದೃಷ್ಟಿಕೋನ ಬದಲಾಯಿಸಿ ನೋಡೋಣ......* ನಮ್ಮ ದೃಷ್ಟಿ ಎಂದಿಗೂ ನಮ್ಮ ಮೂಗಿನ ನೇರವೇ. ಈ ದೃಷ್ಟಿಯನ್ನು ಬದಲಾಯಿಸಿಕೊಂಡಾಗ ಕಾಣುವದು ಭವ್ಯ ಮತ್ತು ಅದ್ಭುತವೇ ಆಗಿರುತ್ತದೆ.  ಒಬ್ಬ ಮನುಷ್ಯರನ್ನು ನೋಡಿದಾಗ ಅವನೇನು ಮಹಾ !! ಎಂಬ ಭಾವನೆ ಸಹಜವಾಗಿ ಚಿಮ್ಮುತ್ತದೆ. ಯಾಕೆ ಅಂದರೆ "ನಾನು ಮಹಾನ್ ಅಲ್ಲ, ನನ್ನಲ್ಲಿ ದೋಷಗಳು ತುಂಬಿವೆ, ನನ್ನ ದೃಷ್ಟಿ ನನ್ನ ಮೂಗಿನ ನೇರ, ಹಾಗಾಗಿ ಅವರಲ್ಲಿಯೂ ದೋಷಗಳೇ ಕಾಣುವದು, ದೋಷಗಳೇ ಕಂಡಾಗ ಅವರೇನು ಮಹಾ !!" ಎಂಬ ಉದ್ಗಾರ ಸಹಜ.  ಆದರೆ ನಮ್ಮ ದೃಷ್ಟಿಕೋನ ತುಸು ಬದಲಾದಾಗ *ಅವರೇ ಮಹಾ  !!*  ಎಂಬುವದು ಸುಸ್ಪಷ್ಟವಾಗುತ್ತದೆ.  ಒಂದು ಪುಟ್ಟ ಕಥೆ....  ತಾಯಿ ತನ್ನ ಒಂದು ಬಟ್ಟೆಯಮೇಲೆ ಕೈ ಕಸೂತಿ ಕೆಲಸವನ್ನು ಮಾಡುತ್ತಾ ಇರುತ್ತಾಳೆ. ದೂರದಿಂದ ಓಡಿ ಬಂದ ಮಗ ವಿಚಾರಿಸುತ್ತಾನೆ ಅಮ್ಮ ಇದೇನಿದು..... 🙄 ಬರೆ ಬಣ್ಣ ಬಣ್ಣದ ಧಾರಗಳು ಇಳಿಬಿದ್ದಿವೆ, ಗದ್ದಲವೋ ಗದ್ದಲ, ಕೆಟ್ಟ ಅಸಹ್ಯವಾಗಿದೆ... ನಂಗೇನೂ ತಿಳಿವಲ್ತು ನೋಡು.....  ಆಗ ಆ ತಾಯಿ ಎದುರಿಗಿದ್ದ ಮಗನನ್ನ ಕರೆದು ತನ್ನ ತೊಡೆಯಮೇಲೆ ಕುಡಿಸಿಕೊಳ್ಳುತ್ತಾಳೆ *ಇಗೋ ಈಚೆ ನೋಡು.....* ಎಂದು ತೋರಿಸಿದಾಗ, ಆ ಕೂಸಿಗೆ ಆಶ್ಚರ್ಯ.. ವೈವಿಧ್ಯಮಯ ಆರ್ಟ... ಒಳ್ಳೊಳ್ಳೆ ಬಣ್ಣಬಣ್ಣದ ಪಕ್ಷಿಗಳು.... ಆ ಒಂದು ಸುಂದರ ಪ್ಲಾನ್ ... ಅಲ್ಲಿಯ ಶಿಸ್ತು... ಅದನ್ನು ನೋಡಿ ಬೆಪ್ಪಾದ... ಆಶ್ಚರ್ಯಪಟ್ಟ.... ಹಿಗ್ಗಿದ ಸಂತೋಷವಾಯಿತು...  ಅಮ್ಮನ

ಬಸುರಿಯ ಹೊಟ್ಟೆಗೆ, ಪಟಾಕೆ ತಿನಿಸಿದರಾ ನೀಚರು.....*

Image
*ಬಸುರಿಯ ಹೊಟ್ಟೆಗೆ,  ಪಟಾಕೆ ತಿನಿಸಿದರಾ ನೀಚರು.....* ಕೃತಯುಗದಲ್ಲಿ ಯಾವ ಆನೆಯನ್ನು ಸ್ವಯಂ ದೇವರು ಬಂದು ರಕ್ಷಿಸಿದನೋ, ಇಂದು ದೇವರನ್ನು ಮರೆತ ನಾವು ಈ ಕಲಿಯುಗದಲ್ಲಿ ಒಂದಾನೆಯನ್ನು ಉಳಿಸಿಕೊಳ್ಳಲಾಗಲಿಲ್ಲ.   ಕಾಡಲ್ಲೇ ಇರುವ ಪ್ರಾಣಿಗಳಿಗೆ ಆಶ್ರಯವಾದ ಕಾಡನ್ನು ನಾಶ ಮಾಡಿದೆವು. ನಾಶ ಮಾಡುವಾಗ ಸರ್ಕಾರವೇ ಯೋಚಿಸಲಿಲ್ಲ. ಅನುಮತಿಯನ್ನೂ ಕೊಟ್ಟಿತು. ಅನ್ನವಿಲ್ಲದ ಮನುಷ್ಯ ಅನ್ನಕ್ಕಾಗಿ ಈ ದೇಶ ಬಿಟ್ಟು ಹೋರ ಹೋಗಿ ಬದುಕಿದ. ಅನ್ನ ರುಚಿಯದೆಯೋ ಇಲ್ಲೋ ತಿಳುವಿಕೆ ಇದ್ದವ ಕೆಟ್ಟ ಅನ್ನ ದುಷ್ಟ ಅನ್ನ ತಿಂದು ಹಾಳಾದ. ಆದರೆ ಈ ಮುಗ್ಧ ಪ್ರಾಣಿ.. ?? ಏನು ಮಾಡಬೇಕು..??  ಆಶ್ರಯ ಕಾಡು ಹೋಯಿತು. ತಿನ್ನಲು ಅನ್ನವಿಲ್ಲ. ಜೊತೆಗೆ ಎರಡು ಹೊಟ್ಟೆಗೆ ಆಗುವಷ್ಟು ಅನ್ನಬೇಕು. ಸಣ್ಣ ಹೊಟ್ಟೆಯಲ್ಲ. ಹಸಿದ ಹೊಟ್ಟೆ ತಣ್ಣಗೆ ಮಾಡಿಕೊಳ್ಳಲು ನಾಡಿಗೆ ಬಂದರೆ, ಒಂದು ಮುಗ್ಧ ಬಸುರಿ ಆನೆಗೆ ಅನ್ನ ಕೊಡದಷ್ಟು ಹೊಲಸು ಜನರು ಒಂದೆಡೆ  ಆದರೆ...  ಅನ್ನದಲ್ಲಿ ಹಣ್ಣಿನಲ್ಲಿ ಪಾಟಾಕಿ ಇಡುವ ನೀಚರು ಮತ್ತೊಂದೆಡೆ. *ಹಣ್ಣನಲ್ಲಿ ಪಟಾಕಿ ಇಟ್ಟರೆ ನೀಚರು...* ಅನ್ನ ಕೊಡುವಷ್ಟು ಒಳ್ಳೆಯವರಾಗದಿದ್ದರೂ ಪರವಾಗಿಲ್ಲ, *ಹಣ್ಣಿನಲ್ಲಿ ಪಟಾಕಿ ಇಡುವಷ್ಟು ನೀಚರಾಗಿದ್ದಾರೆ* ಈ ನರ ಹಂತಕರು ಎನ್ನುವದು ಊಹಿಸಲೂ ಜೀರ್ಣಿಸಿಕೊಳ್ಳಲೂ ಆಗುತ್ತಿಲ್ಲ. ಆದರೆ ಇದು ಸತ್ಯ. *ಪಾಟಾಕಿಯ ವಾಸನೆಯೇ ತಡಿಯದ ನಾವು, ಪಟಾಕಿಯನ್ನೇ ನುಂಗಿದ ಆನೆಯ ದುಃಖ ಊಹಿಸಿಕೊಳ್ಳಬೇಕು...* ಹಣ್ಣಿನಲ್ಲಿ ಪಟಾ