*ಮನಸ್ಸನ್ನು ಧ್ಯಾನದ ಚಾಪೆಯಲ್ಲಿ ಸ್ಥಾಪಿಸಿ.....*

*ಮನಸ್ಸನ್ನು ಧ್ಯಾನದ ಚಾಪೆಯಲ್ಲಿ ಸ್ಥಾಪಿಸಿ.....*

ಸ್ವಯಂ ಚಂಚಲ, ಸ್ಥಿರ ಹಿತೈಷಿಯಾದ ಬುದ್ಧಿಯ ಮಾತೂ ಕೇಳದು, ಅಂತಹದ್ದೊಂದು ಪದಾರ್ಥ ಅಂದರೆ ಅದುವೇ ಮನಸ್ಸು. ಈ ಮನಸ್ಸಿನ ಜೊತೆಗೆ ಇರುವಾಗ ತಾಳ್ಮೆ ತುಂಬ ಮಹತ್ವ. ಮನಸ್ಸಿನ ಸಂಘರ್ಷಗಳು ಸಾವಿರಾರು. ಸಂಘರ್ಷದಿಂದ ವಿಷವೂ ಹುಟ್ಟಬಹುದು. ಅಮೃತವೂ ಹುಟ್ಟಬಹುದು. ಆರೋಗ್ಯಪೂರ್ಣ ಧನ್ವಂತರಿಯೂ ಹುಟ್ಟಬಹುದು. ಸುಖಪೂರ್ಣ ಲಕ್ಷ್ಮಿಯೂ ಹುಟ್ಟಬಹುದು.

*ಮನಸ್ಸಿಗೊಂದು ಗುರಿ ಇರಬೇಕು....*

ಗುರಿ ಇದ್ದರೆ ಕೆಲಸ ಮಾಡತ್ತೆ. ಇಲ್ಲವೋ ಕೆಟ್ಟ ಆಲಸಿ. ಬೇಗ ಏಳಲು ನಿರ್ದಿಷ್ಟ ಕಾರಣಗಳಿಲ್ಲದಿದ್ದರೆ, ಹನ್ನೊಂದಾದರೂ ಏಳಲು ಮನಸ್ಸೇ ಮಾಡದು. ಅಂತಹ ಆಲಸಿ ಮನಸ್ಸು. ಆ ಮನಸ್ಸಿಗೆ ಆತರಹದ ಟ್ರೈನಿಂಗ ಅಂತೂ ನಾವೇ ಕೊಟ್ಟಿದ್ದೇವೆ ಅಂದರೆ ತಪ್ಪಾಗದು.

*ಈ ಆಲಸೀ ಮನಸದಸನ್ನು ಬದಲಾಯಿಸುವದು ಹೇಗೆ.... ???*

ವ್ಯೋಮನೌಕೆ ಇಡೀ ಭೂಮಿಯನ್ನು ಸುತ್ತಲು ಬೇಕಾದ ಇಂಧನವನ್ನು ಪಯಣದ ಆರಂಭದ ನಿಮಿಷಗಳಲ್ಲಿ ಬಳಿಸುತ್ತದೆ.  ಏಕೆಂದರೆ ಆರಂಭದಲ್ಲಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಧಿಕ್ಕರಿಸಿ  ಮೇಲೇರಲು ಹೆಚ್ಚೆಚ್ಚು ಶಕ್ತಿ ಬೇಕಾಗುತ್ತದೆ. ಒಂದುಬಾರಿ ಮೇಲೇಹೋದರೆ ಯೃಏಚ್ಛ ವಿಹಾರ ಮಾಡುತ್ತದೆ.  ಹಾಗೇಯೇ....

ಮನಸ್ಸನಲ್ಲೂ ಸಹ. ಬದಲಾವಣೆಯ ಪ್ರಕ್ರಿಯೆ ಆರಂಭದಲ್ಲಿ ತುಂಬ ಕಷ್ಟ. ಅದು ಒಂದೇ ದಿನದಲ್ಲಿ ಸಂಭಿವಿಸದು. *ಹಳೆಯ ಅಭ್ಯಾಸದ ಸೆಳೆತವನ್ನು ಧಿಕ್ಕರಿಸಿ ಕೆಕ್ಕರಿಸಿ ಮೇಲೇಳಲು ಸಾಕಷ್ಟು ಸಮಯ ಬೇಕಾಗುತ್ತದೆ.* ಆದರೆ ಗುರಿ ಇಟ್ಟುಕೊಂಡು ನಾವು ಇಚ್ಛಿಸಿದರೆ ನಾಲಕುವಾರ ಕಳೆಯುವದರಲ್ಲಿಯೇ ತುಂಬ ಬದಲಾವಣೆಗಳನ್ನು ನಾವೇ ಸ್ವತಃ ಅನುಭವಿಸಿರುತ್ತೇವೆ. 

ನಮ್ಮ ಗುರುಗಳು ಯಾವಾಗಲೂ ಒಂದು ಮಾತು ಹೇಳುತ್ತಿರಬೇಕು *ಹೊಸದಾದ ಹಿತವಾದ ಅಭ್ಯಾಸವನ್ನು ಸ್ಥಾಪಿಸಿಕೊಳ್ಳಲು ನಿಮಗೆ ನೀವೇ ಮೂವತ್ತುದಿನಗಳ ಕಾಲಾವಕಾಶವನ್ನು ನೀಡಿಕೊಳ್ಳಿ* ಎಂದು.

*ಮೂವತ್ತು ನಿಮಿಷ ಬೇಗ ಏಳುವ ಹವ್ಯಾಸ ತುಂಬ ಸೂಕ್ತ....*

ಕೆಲವರಿಗೆ ಎದ್ದೇನು ಮಾಡಬೇಕು...?? ಎಂಬ ಚಿಂತೆ ಹೆಚ್ಚು. "ತಡವಾಗಿ ಏಳುವದರ ಅಸರ ಪರಿಣಾಮ ಬೀಳುವದೇ ಧರ್ಮಕ್ಕೆ." ಸ್ಕೂಲು ಕಾಲೇಜು ಓಫೀಸ್ ಎಲ್ಲಿಗೇ ಹೋಗುವದಾದರೂ ಅದರ ಸಮಯ ನಿಶ್ಚಿತ.  ಅಲ್ಲಿ ತಡವಾಗುವ ಹಾಗಿಲ್ಲ. ಏಳುವದು ತಡ. ಅಲ್ಲಿಗೆ ಮುಟ್ಟುವದು ಸರಿ ಸಮಯ. ಮಧ್ಯೆ ಸಮಯ ಅತ್ಯಲ್ಪ. ಸ್ನಾನ, ಸಂಧ್ಯೆ, ಪೇಪರ್, ಜಪ, ಹರಟಿ, ಟೀ, ಕಾಫಿ,  ಉಪಹಾರ, ಪಾರಾಯಣ, ಪೂಜೆ,  ಇಷ್ಟೆಲ್ಲ ಆಗಬೇಕು. ಅಷ್ಟು ಸಮಯವಿಲ್ಲ... ಹಾಗಾಗಿ  ಇವುಗಳಲ್ಲಿ ಸಂಧ್ಯೆ, ಜಪ, ಪೂಜೆ, ಪಾರಾಯಣ ಇವುಗಳಿಗೇ ಬ್ರೆಕ್ ಬಿದ್ದಿತು. ಮೂವತ್ತು ನಿಮಿಷ ಬೇಗ ಏಳುವದೇನಿದೆ ಇದು ಅತ್ಯಂತ ಸೂಕ್ತ.

*ಸಂಧ್ಯೆ, ಜಪ, ಪೂಜೆ ಮೊದಲಾದವುಗಳನ್ನು  ನಾವು ತಪ್ಪಿಸುವದೇ ಇಲ್ಲ. ನಾವೇಕೆ ಬೇಗ ಏಳಬೇಕು.....??*

ದೇವರ ಕಾರುಣ್ಯದಿಂದ ಧರ್ಮ ನಾಡಲು ಸಮಯವಿದೆ. ಆದರೆ ಮೂವತ್ತು ನಿಮಿಷ ಬೇಗ ಎದ್ದರೆ ಧ್ಯಾನ ಮಾಡಲೂ ಸಮಯ ಸಿಗತ್ತೆ. ಅಂತೆಯೇ *ನಮ್ಮ ಚಂಚಲ ಮನಸ್ಸನ್ನು  ಧ್ಯಾನದ ಚಾಪೆಯಲ್ಲಿ ಸ್ಥಿರವಾಗಿರಿಸಲು* ಬೇಗ ಏಳುವದು ಅನಿವಾರ್ಯ. ೧೦ ನಿಮಿಷ ಮಲಗಿದಲ್ಲಿಯೇ ಧ್ಯಾನ ಮಾಡಿದರೆ ಸಾಕು. ಭಗವಂತ ಕುಳಿತು ಕೇಳುವ. ಧ್ಯನದಿಂದ ಆಗುವ ಲಾಭ ತುಂಬ.  ಸಮಗ್ರ ದಿನದಲ್ಲಿ ಮನಸ್ಸು ವ್ಯಗ್ರವಂತೂ ಆಗುವದೆ ಇಲ್ಲ. ಪ್ರಶಾಂತವಾಗಿಯೇ ಇರುತ್ತದೆ. ಇದು ನನ್ನ ಅನುಭವ, ಇದು ಧ್ಯಾನ ಮಾಡುವವರೆಲ್ಲರ ಅನುಭವ.

*ಏನು ಧ್ಯಾನ ..... ????*

ಶ್ರೀಹರಿ ಗುಣಪೂರ್ಣ. ಅನಂತ. ಪರಮೋಪಕಾರಿ. ಚಿಂತೆ ಸಂತಾಪ ಮೊದಲಾದ ದೋಷ ವಿದೂರ. ಸ್ವತಂತ್ರ. ವಾಯುದೇವರ ಅಂತರ್ಯಾಮಿ. ನನ್ನ ಬಿಂಬ. ನನ್ನ ಪರಮಹಿತೈಷಿ.  ನನ್ನ ಕಾಳಜೀ ವಹಿಸುವ ದೊರೆ. ನನ್ನ ಸ್ವಾಮಿ. ನನ್ನ ಪ್ರೇರಕ. ನನ್ನ ನಿಯಾಮಕ ಇತ್ಯಾದಿ ಇತ್ಯಾದಿ ಇತ್ಯಾದಿ ಗುಣಗಳ ಚಿಂತನೆ ಧ್ಯಾನ ಮಾಡುವದು ಅತ್ಯಂತ ಸೂಕ್ತ.

*ಮನಸ್ಸೇ ಒಂದೆಡೆ ನಿಲ್ಲದು.....???*

ಉಪಾಯಗಳು ನೂರು ಇವೆ. ಸಮಸ್ಯೆಗಳು ಬರಬೇಕು ಅಷ್ಟೆ. ಭಾಗವತ ತಿಳಿಸುತ್ತದೆ ವಾಯುದೇವರನ್ನು *ವಿವರಪ್ರಸೂತಿಃ* ಎಂದು ಚಿಂತಿಸಬೇಕು ಅಂತೆ.  ಮನೋಭಿಮಾನಿಗಳಾದ ಗರುಡ ಶೇಷ ರುದ್ರ ದೇವರ ಸೃಷ್ಟಿಗೆ ಕಾರಣರಾದ, ಅತ್ಯಂತ ಸ್ಥಿರಸ್ವರೂಪಿಗಳಾದ, ಆಖಣಾಷ್ಮಸಮರಾದ ವಾಯುದೇವರ ಅತ್ಯಂತ ಸೂಕ್ಷ್ಮರೂಪ ನಮ್ಮ ಮನಸ್ಸಿನಲ್ಲಿದೆ ಎಂದು ಎಂದು ಚಿಂತಿಸಿದರೆ ಸಾಕು ಮನಸ್ಸು ಸ್ಥಿರವಾಗಿ ಉಳಿಯತ್ತೆ. ಸ್ಥಿರವಾಗಿ ಉಳಿಯುವಂತೆ ವಾಯುದೇವರು ಪ್ರೇರಿಸುತ್ತಾರೆ. ಮನಸ್ಸು ಅಹಿತದ ಕಡೆ ವಾಲುವದೇ ಇಲ್ಲ. 

*ಒಂದಂತೂ ನಿಜ.......*

ಪೂಜ್ಯ ಆಚಾರ್ಯರ  ಮಾತು ನೆನಪಾಗತ್ತೆ *ಸತ್ತಮೇಲೆ ನಿದ್ದೆ ಮಾಡಲು ಬೇಕಾದಷ್ಟು ಸಮಯವಿದ್ದೇ ಇರುತ್ತದೆ.....* ಎಂದು. ಈ ಮಾತು ನೆನಪಿಟ್ಟು ಕೊಂಡವ ನಿಜ ಜಾಣ ಮನುಷ್ಯ. 😃😂😄

ಮೂವತ್ತು ನಿಮಿಷ ಬೇಗ ಏಳುವ ಹವ್ಯಾಸಕ್ಕೆ ಒಂದಾರು ಗುರಿಗಳು ಇಟ್ಟುಕೊಂಡು , ಕೆಲ ಹೊತ್ತಾದರೂ ಧ್ಯಾನದ ಚಾಪೆಯಲ್ಲಿ ಮನಸ್ಸನ್ನು ಸ್ಥಿರಗೊಳಿಸಿ, ಆನಂದದಿಂದ ದಿನ ವರ್ಷ ಜೀವನ ಕಳೆಯೋಣ.....


* ✍🏽✍🏽✍ನ್ಯಾಸ.....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*