Posts

Showing posts from August, 2020

*ತರುಣ(ಉಪ) ಕುಲಾಧಿಪತಿ - ಪಂ ವಿಶ್ವಪ್ರಜ್ಙಾಚಾರ್ಯ*

*ತರುಣ(ಉಪ) ಕುಲಾಧಿಪತಿ -  ಪಂ ವಿಶ್ವಪ್ರಜ್ಙಾಚಾರ್ಯ* ಎಂಭತ್ತು ವರ್ಷಗಳ ಅತ್ಯಂತ ಪ್ರಾಚೀನವಾದ ವಿದ್ಯಾಪೀಠವೆಂದರೆ ಅದು *ಸತ್ಯಧ್ಯಾನ ವಿದ್ಯಾಪೀಠ.*  1937 ರಲ್ಲಿ *ವಾಣೀ ವಿಹಾರ ವಿದ್ಯಾಲಯ* ಎಂಬ ಹೆಸರಿನಿಂದ ಆರಂಭವಾದ ವಿದ್ಯಾಲಯ, ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆ. ಈ ವಿದ್ಯಾಲಯ ಎಂಟು ವಿದ್ಯಾರ್ಥಿಗಳಿಂದ ಹಾಗೂ ಎಂಟು ರೂಪಾಯಿಗಳಿಂದ ಆರಂಭವಾದ ವಿದ್ಯಾಲಯ. ಒಂದುವರೆ ಲಕ್ಷಕ್ಕೂ ಹೆಚ್ಚಾದ ಪುಸ್ತಕಗಳಿಂದ ಒಳಗೊಂಡ ಮಹಾ ವಿದ್ಯಾಲಯ.  ಈ ಮಹಾವಿದ್ಯಾಲಯದ  ಸಂಸ್ಥಾಪಕರು ಪಂಡಿತರಾಜ, ಪಂಡಿತರತ್ನ ಇತ್ಯಾದಿ ಅನೇಕ ಬಿರಿದು ಭೂಷಿತರಾದ  *ಪರಮಪೂಜ್ಯ ಪಂ. ಮಾಹುಲೀ ( ಪಂ. ಮಾಹುಲೀ ಗೋಪಾಲಾಚಾರ್ಯರು) ಪರಮಾಚಾರ್ಯರು.* *ಸತ್ಯಧ್ಯಾನ ವಿದ್ಯಾಪೀಠ* "ವಾಣೀ ವಿಹಾರ ವಿದ್ಯಾಲಯವೇ" ಮುಂದೆ ಕೆಲವೇ ವರ್ಷಗಳಲ್ಲಿ, ಜಗದ್ಗುರುಗಳಾದ, ತಮ್ಮ ಸ್ವರೂಪೋದ್ಧಾರಕ ಗುರುಗಳೂ ಆದ, ವಿಭೂತಿ ಪುರುಷರೂ ಆದ  ಪರಮಪೂಜ್ಯ "ಶ್ರೀಶ್ರೀ ಸತ್ಯಧ್ಯಾನ ತೀರ್ಥರ" ಹೆಸರಿನಿಂದ 1975 ರ ಸುಮಾರಿಗೆ ಮುಲುಂಡಿನಲ್ಲಿ *ಸತ್ಯಧ್ಯಾನ ವಿದ್ಯಾಪೀಠ* ಎಂದಾಯ್ತು.  ನೂರಾರು ವಿದ್ಯಾರ್ಥಿಗಳು ಸೇರಿದರು.  ಆ ಎಲ್ಲ ವಿದ್ಯಾರ್ಥಿಗಳಿಗೂ ಅನ್ನ ವಸತಿ ವಸ್ತ್ರಗಳನ್ನೊದಗಿಸಿ, ಮನೆಯ ವಾತಾವರಣವನ್ನೇ ನಿರ್ಮಿಸಿ,  ಪ್ರಾಚೀನ ಪದ್ಧತಿಯಂತೆ ಗುರುಸೇವೆ, ವಿದ್ಯಾಪೀಠ ಸೇವೆ, ಸಮಾಜ ಸೇವೆ ಇವುಗಳನ್ನೊಳಗೊಂಡು ಹದಿನೈದು ವರ್ಷಗಳಕಾಲ ನಿರಂತರ ನಾನಾ ಶಾಸ್ತ್ರಗಳ ವಿದ್ಯೆಯನ್ನ

ಗುರುಗಳಿಗೆ ಗುರುಗಳು ನಮ್ಮ ಮಹಾ ಗುರುಗಳು.....*

Image
*ಗುರುಗಳಿಗೆ ಗುರುಗಳು ನಮ್ಮ    ಮಹಾ ಗುರುಗಳು.....* ಉಚ್ಚ ವಿಚಾರ,  ದೃಢ ಸಂಕಲ್ಪ, ಸಾಧಿಸುವ ಛಲ, ಅದಕ್ಕಾಗಿ ಮಹಾಪ್ರಯತ್ನ, ಈಶಾನುಗ್ರಹ , ಸ್ವಯಂ ದೊಡ್ಡ ಯೋಗ್ಯತೆ ಇವುಗಳು ಇದ್ದಂತಹ ವ್ಯಕ್ತಿಗಳು ಉತ್ತುಂಗದ ಶಿಖರದಲ್ಲಿ ಬ್ರಾಜಮಾನರಾಗುತಾರೆ. ಪ್ರತಿಕೂಲ ವಾತಾವರಣಗಳೆಂಬ tsunami ಗಳು ಅಪ್ಪಳಿಸಿದರೂ ಅವುಗಳೆಲ್ಲವನ್ನು ಮೆಟ್ಟಿ ನಿಂತು ಮೆಲೇಳುತಾರೆ. ಇದಕ್ಕೆ ಉದಾಹರಣೆ ಇಂದಿನ ಆರಾಧ್ಯ ಗುರುಗಳಾದ *ಪರಮಾಚಾರ್ಯರು.*  "ಪ್ರತಿಕೂಲವಾತಾವಣಗಳನ್ನು ಮೆಟ್ಟಿನಿಂತರೆ ಉತುಂಗ, ಪ್ರತಿಕೂಲ ವಾತವರಣಗಳೆ ನಮ್ಮನ್ನು ಮೆಟ್ಟಿನಿಂತರೆ ಪಾತಾಳ" ನಾವು ಮೆಟ್ಟಿನಿಲ್ಲಲು ಬೇಕು ಮೇಲೆ ಹೇಳಿದ ೭ ಗುಣಗಳು. ಮುಖದಲ್ಲಿ ಸೂಸುವ ಉಚ್ಚವಿಚಾರ ಮಹಾ ಕನಸನ್ನು ಹೊತ್ತ,  ಕೃಷ್ಣಾ ತೀರದ ಬ್ರಾಹ್ಮಣ ಉತ್ಕೃಷ್ಟ ವ್ಯಾಸಂಗಕ್ಕಾಗಿ  ಶ್ರೀಮತ್ ಶ್ರೀಸತ್ಯಧ್ಯಾತೀರ್ಥರ ಬಳಿ ತೆರಳಿದರು. ಸತ್ಯಧ್ಯಾನತೀರ್ಥರ ಸನ್ನಿಧಿಗೆ ಹೋಗುವಾಗಲೇ ಲೌಕಿಕವಾದ BA,  bed ಮುಗಿಸಿ, ಉನ್ನತ ಮಟ್ಟದಲ್ಲಿ ಆಂಗ್ಲಭಾಷೆಯಲ್ಲಿ ಪ್ರವೀಣರಾಗಿದ್ದರು.  ಮಹಾಗುರುಗಳ ಸನ್ನಿಧಿಯಲ್ಲಿ ಶಾಸ್ತ್ರಭಿಕ್ಷೆಯನ್ನು ಬೇಡಿದರು. ಗುರುಗಳು ಕೇಳಿದರು BA, Bed ಆಗಿದೆ ಎಂದು ಹೇಳಿತ್ತೀ, ಆಂಗ್ಲಭಾಷೆಯಲ್ಲಿ ಪ್ರವೀಣ ಎಂದು ಹೇಳುವ ನೀ ಉತಮವಾದ ಕೆಲಸ ನೋಡಿ ಕೈ ತುಂಬ ಹಣ ಸಂಪಾದಿಸ ಬೇಡವೆ... ?? ಎಂದು.  ಲೌಕಿಕ ವಿದ್ಯೆಯಿಂದ ಸಂಪಾದಿಸಿದ ಹಣದಿಂದ ನನ್ನ ಒಂದು ಕುಟುಂಬ ಪೋಷಣೆಯೂ ದುರ್ಧರ

*ವಿಶ್ವೋಪಾಸಕನೇ ಸನ್ಮನದಿ ವಿಜ್ಙಾಪಿಸುವೆ - ಭಕ್ತಿ ಜ್ಙಾನವ ಕೊಟ್ಟು ಸಲಹುವದು*

Image
*ವಿಶ್ವೋಪಾಸಕನೇ ಸನ್ಮನದಿ ವಿಜ್ಙಾಪಿಸುವೆ - ಭಕ್ತಿ ಜ್ಙಾನವ ಕೊಟ್ಟು ಸಲಹುವದು*  ಇಂದು ಗಣೇಶ ಚತುರ್ಥಿ. ಸಂಪೂರ್ಣ ಭಾರತದಲ್ಲಿ ಸಂಭ್ರಮ. ಊರೂರುಗಳಲಿ, ಓಣಿಓಣಿಗಳಲ್ಲಿ, ಮನೆಮನೆಗಳಲ್ಲಿ, ಮನಮನಗಳಲ್ಲಿ ಒಂದು ಮಹಾಹಬ್ಬದ ಉತ್ಸವದ ವಾತಾವರಣ.  *ಗಣಪತಿಗೆ "ಗಜಮುಖ" ಬಂತು ಏಕೆ...* ಭಗವಂತನನ್ನು ಹೇಗೆ ಉಪಾಸನೆ ಮಾಡುವವರೋ ಹಾಗೆ ದೇವ ಫಲಕೊಡುತ್ತಾನೆ. ಆಕಾಶತತ್ವಕ್ಕೆ ಅಭಿಮಾನಿಯಾದ ಗಣಪತಿಯ ಆರಾಧ್ಯ ದೈವ "ವಿಶ್ವಂಭರರೂಪೀ" ಹರಿ. ಆ ವಿಶ್ವಂಭರನ ಧ್ಯಾನದಿಂದ *ಗಣಪತಿಯು ಗಜಮುಖನು ಆದನು.* *ವಿಶ್ವಂಭರನು ಯಾರು..?? ಹೇಗಿದಾನೆ..??* ವಿಶ್ವ ಜಗತ್ತನ್ನು ಭರಣೆ ಮಾಡುವ ಒಂದು ಅದ್ಭುತರೂಪ‌ ವಿಶ್ವಂಭರರೂಪ. ವಿಶ್ವದ ಆದಿಕಾಲದಲ್ಲಿ ಪ್ರಾದುರ್ಭಾವಗೊಂಡ ರೂಪಗಳು ಆದ "ವಿಶ್ವ, ತೈಜಸ, ಪ್ರಾಜ್ಙ, ತುರ್ಯ, ಆತ್ಮ, ಅಂತರಾತ್ಮ, ಜ್ಙಾನಾತ್ಮ, ಪರಮಾತ್ಮ" ಎಂಬ "ಸೃಷ್ಟಿ, ಸ್ಥಿತಿ, ನಿಯಮನ, ಜ್ಙಾನ, ಅಜ್ಙಾನ, ಬಂಧ, ಮೋಕ್ಷ" ಪ್ರದವಾದ ಎಂಟು ರೂಪಗಳು. ಈ ಎಂಟು ರೂಪಗಳೇ "ಪ್ರಣವ" ಮಂತ್ರದ ಅಷ್ಟಾಕ್ಷರಗಳ, ಹಾಗೂ "ನಾರಾಯಣ" ಮಂತ್ರದ ಅಷ್ಟಾಕ್ಷರಗಳ ಪ್ರತಿಪಾದ್ಯರೂಪ.  "ವಿಶ್ಚಾದಿ ಎಂಟು ರೂಪಗಳಲ್ಲಿ" ಮೊದಲನೇಯದಾದ *ವಿಶ್ವರೂಪ* ವೇ ಇಂದಿನ *ವಿಶ್ವಂಭರ ರೂಪ.* ಈ ವಿಶ್ವಂಭರನ ಉಪಾಸನೆ ಧ್ಯಾನ ಇವುಗಳಿಂದಲೇ ಗಣಪತಿಯು *ಗಜಮುಖನು ಆದನು.* *"ವಿಶ್

*ಧನ್ವಂತರಿ ಜಯಂತಿ*

Image
(ನಮ್ಮ ತಂದೆಯವರು ಗಂಡಿಕೀ ನದಿಯಿಂದ ತಂದ ಅಪರೂಪದ ಅನೇಕ ಸಾಲಿಗ್ರಾಮಗಳಲ್ಲಿ ಒಂದಾದ * ಧನ್ವಂತ್ರಿ ಸಾಲಿಗ್ರಾಮ....🙏🏽🙏🏽🙏🏽 *) *ಧನ್ವಂತರಿ ಜಯಂತಿ* ಸಾಧನೆಗೆ ಅಡ್ಡಿಮಾಡುವ ನಮ್ಮ ಕರ್ಮಾನುಸಾರಿಯಾದ ಮಾನಸಿಕವಾದ, ಇಂದ್ರಿಯಸಂಬಧೀಯಾದ, ದೈಹಿಕವಾದ ರೋಗಗಳು ಅಜ್ಙಾನ, ಮಿಥ್ಯಾಜ್ಙಾನ, ಭ್ರಾಂತಿ, ಅಹಂಕಾರ, ಆಲಸ್ಯ, ಕಾಮ, ಕ್ರೋಧ, ದೇವರನ್ನು ನೋಡದ ಕೇಳದ ಮುಟ್ಟದ, ವಿಚಾರಿಸದ ಇಂದ್ರಿಯಗಳು, ದೈಹಿಕ ನಾನಾವಿಧವಾದ ನೋವುಗಳು, ಇದಾದಮೇಲೆ ನಮಗೆ ತಿಳಿಯದ ಆಧಿ ವ್ಯಾಧಿಗಳು, ಇವುಗಳನ್ನು ಮೆಟ್ಟಿನಿಂತು ಸಾಧನೆ ಮಾಡುವದು ತುಂಬ ಕಠಿಣ. ಇವುಗಳು ಸಾಧನೆ ವಿರೋಧಿಗಳೇ ಆಗಿವೆ. ರೋಗಗಳೆಂಬ ವಿರೋಧಿಗಳನ್ನು ಮೆಟ್ಟಿನಿಂತು, ನಾವು ನಿರೋಗಿಗಳಾಗಬೇಕಾದರೆ ಅದಕ್ಕೆ ಉತ್ತಮನಾದ ಕಾಮಕ್ರೋಧಗಳಿಲ್ಲದ ಕರುಣಾಮಯಿಯಾದ  ಮಾರ್ಗದರ್ಶಿ ವೈದ್ಯ ಅನಿವಾರ್ಯವಾಗಿ ಬೇಕು... ಆ ವೈದ್ಯ ಭಕ್ತರಾದ ನಮಗಾಗಿಯೇ ನಮ್ಮ ನಾಡಿಗೆ, ನಮ್ಮೂರಿಗೆ, ನಮ್ಮ ಮನಸ್ಸಿಗೆ ಅವತರಿಸಿ ಬಂದ ಪರಮ ಮಂಗಳ ದಿನ ಇಂದಿನ ದಿನ. ಆ ವೈದ್ಯನಾರು...  ??  ಆ ವೈದ್ಯ ಮತ್ತಿನ್ನಾರೂ ಅಲ್ಲ "ಪರಮಕರುಣಾಳು, ಭಕ್ತಹಿತಕಾರಿ, ಭಕ್ತರ ಎಲ್ಲ ಪಾಪಗಳನ್ನು ಸುಟ್ಟುಹಾಕುವ, ದಯಾನಿಧಿಯಾದ, ನಾಮಸ್ಮರಣೆ ಮಾಡುವದರಿಂದಲೇ ಅನೇಕ ರೋಗಗಳನ್ನು ಪರಿಹಾರಮಾಡುವ, ಮುಕ್ತಿಯೋಗ್ಯ ಅನಂತ ಜೀವರಾಶಿಗಳ ಸಂಸಾರವೆಂಬ ರೋಗವನ್ನು ಬೀಜಸಹಿತ ಕಿತ್ತಿಬಿಸಾಡುವ, ಅಪಾರ ಸಾಮರ್ಥ್ಯವುಳ್ಳ, ಕ್ಷೀರಮಥನದ ಸಮಯದಲ್ಲಿ ಪ್ರಾದುರ್ಭ

*ಶ್ರೀಕೃಷ್ಣಃ ಶರಣಂ ಮಮ*

Image
*ಶ್ರೀಕೃಷ್ಣಃ ಶರಣಂ ಮಮ* ಹೇ ಭಗವನ್ ಕೃಷ್ಣರೂಪಿನ್ !! ನೀನೆ ಎನಗೆ ಶರಣು.  ಭಾರವಾದ ಹೃದಯ, ಕಠೋರವಾದ ಮನಸ್ಸುಗಳಿಂದ  ಭಾರ ಹೊತ್ತು ಮುಂದಡಿ ಇಡಲಾಗದ ಎನಗೆ ನೀನೇ ಶರಣು. ಭಾರವಿಳುಹಿಸು. ಮುಂದಡಿ ಇಡಿಸು. *ಓ ಭಾರ ಇಳುಹುವ ದೇವ* ಭೂಮಿಯ, ನಿನ್ನ ಭಕ್ತರ ಭಾರವಿಳುಹಲು ಭೂಮಿಗೆ ಅವತರಿಸಿದ ನಿನ್ನ ಕರುಣೆ ಅದ್ಭುತ. ನೀನು ಪರಮಾದ್ಭುತ. *ಜೀವರಾಶಿಗಳೆಲ್ಲರು ತಮಗಾಗಿ ಸ್ವಾರ್ಥಕ್ಕಾಗಿ ಭುವಿಗಿಳಿದು ಬಂದರೆ, ನೀನು ಮಾತ್ರ ಜೀವರಾಶಿಗಳಿಗಾಗಿ ಜೀವರಾಶಿಗಳ ದುಃಖಕಳಚಿ ಅವರ ಭಾರವೆಲ್ಲ ಕಳಚಲು ಭುವಿಗಿಳಿದು ಬಂದ ಹೆದ್ದೊರೆ.* *ಭುವಿಯಲ್ಲಿ ಬಂದು ಮಾಡುವ ಎಲ್ಲ ಕರ್ಮಗಳು ತಮಗೋಸ್ಕರ ಮಾಡಿಕೊಂಡರೆ, ನೀನು ಮಾಡುವ ಎಲ್ಲ ಕರ್ಮಗಳು ನಮಗೋಸ್ಕರ.* ಇದರಿಂದೇ  ತಿಳಿದು ಬರುತ್ತದೆ ನಾ ಎಂತಹ *ಸ್ವಾರ್ಥಿ* ಎನ್ನುವದು. ನಿನೆಂತಹ *ಕರುಣಾಳು* ಎಂದು. ನನಗೋಸ್ಕರ ನಾನು ಎಂದಾದರೆ ನಾನು ಎಂದಿಗೂ ಮುಂದಡಿ ಇಡಲಾರೆ. ಏಕೆಂದರೆ ನನಗೋಸ್ಕರ *ನನ್ನದು ಎಂಬ ಅನೇಕ ಪದಾರ್ಥಗಳು ಹಾಗೂ ನನ್ನವರು ಎಂಬ ಅನೇಕರು* ಅವಶ್ಯವಾಗಿ ಬೇಕು. ಅವರೆಲ್ಲರಲ್ಲಿಯ ಅಭಿಮಾನವೇ ಎನಗೆ ಭಾರ. ಆಗ ನಾನು ಗುರು ಭಾರನಾದೆ. ನನ್ನದು ನನ್ನವರು ಎಂಬವುಗಳು ಇಲ್ಲದೇ ನಾನು ಇಲ್ಲ. *ನನಗಾಗಿ ನಾನು* ಆಗಬೇಕಾದರೆ ನನ್ನದು ನಮ್ಮವರುಗಳು ಬೇಕು. ಯಾರು ನನ್ನವರು, ಯಾವದು ನನ್ನದು ಎಂದು ಗೊತ್ತಾಗದೆ *ಎಲ್ಲವನ್ನೂ ನನ್ನದು, ಎಲ್ಲರೂ ನಮ್ಮವರು* ಎಂದು  ಎಲ್ಲವನ್ನೂ ಜೊತೆ ಹೊತ್ತರೆ, ಅ