Posts

Showing posts from December, 2018

ತೀರ್ಥಯಾತ್ರೆ ಸುಲಭ... ಅತ್ಯಂತ ದುರ್ಲಭ ಭಕ್ತಿ ವಿಶ್ವಾಸಗಳು*

Image
*ತೀರ್ಥಯಾತ್ರೆ ಸುಲಭ... ಅತ್ಯಂತ ದುರ್ಲಭ ಭಕ್ತಿ ವಿಶ್ವಾಸಗಳು* ತೀರ್ಥಯಾತ್ರೆಗೆ ಹಣ ಅತ್ಯಲ್ಪ ಕಷ್ಟ ಸಹಿಷ್ಣುತೆ ಇವುಗಳು ಇದ್ದರೆ ಅತ್ಯಂತ ಸುಲಭ. ಈಗಿನ ಕಾಲದಲ್ಲಿ ಅನುಕೂಲವೂ ಇದೆ. ಕೈತುಂಬ ಹಣವೂ ಇದೆ. ಅನೇಕ ಸೂಟಿಗಳೂ ಸಿಗುತ್ತವೆ. ಮನಸ್ಸು ಮಾಡಬೇಕು. ಸ್ವಲ್ಪ ಕಷ್ಟಗಳನ್ನು ಸಹಿಸಿಕೊಳ್ಳಬೇಕು. ತೀರ್ಥಯಾತ್ರೆ ಮುಗಿಯತ್ತೆ. ಆದರೆ...... ...... ತೀರ್ಥಕ್ಷೇತ್ರಸ್ಥ ದೇವರಲ್ಲಿಯೋ, ದೇವತೆಗಳಲ್ಲಿಯೋ, ತೀರ್ಥಾಭಿಮಾನಿಗಳಲ್ಲಿಯೋ ಭಕ್ತಿ ವಿಶ್ವಾಸಗಳು ಬರುವದು ತುಂಬ ಕಠಿಣ.  ಬದರಿ ಮೊದಲಾದ ಕ್ಷೇತ್ರಗಳಿಗೆ ಹೋದವರು ತುಂಬ ಜನ ಇದಾರೆ. ಅನೇಕ ತೀರ್ಥಗಳಿಗೆ ಸಂಚಾರ ಮಾಡಿದವರು ಅನೇಕರುಂಟು. ಆವರುಗಳಲ್ಲಿ ಭಗವದನುರಾಗಿಗಳು ಎಷ್ಟು ಜನ... ?? ವೈರಾಗ್ಯ ಸಾಧಿಸಿಕೊಂಡವರೆಷ್ಟು ಜನ... ?? ಮನಃಶ್ಶೋಧನೆ ಮಾಡಿಕೊಂಡವರೆಷ್ಟು ಜನ.. ?? ಇದ್ದಾರೆ ನಾಲ್ಕಾರು ಜನ ಇರಬಹುದು ಅಷ್ಟೆ.  ಅಧ್ಯಾತ್ಮ‌ಮಾರ್ಗ ತುಂಬ ಕಠಿಣ ಮಾರ್ಗ. ಜೀವಂತ ಆದರ್ಶಗಳು ಇಲ್ಲದವರಿಗೆ ಈ ಮಾರ್ಗದಲ್ಲಿಯ ಸಂಚಾರ ತುಂಬ ಕಠಿಣವೇ. ದೈವ ವಶಾತ್ ಆದರ್ಶ ಮಾನವನ ಸಂಬಧವಾದರೆ ಸ್ವಲ್ಪಮಟ್ಟಿಗೆ ಅಧ್ಯಾತ್ಮ ಮಾರ್ಗದಲ್ಲಿ ಪ್ರಗತಿ ಸಾಧಿಸಿಕೊಳ್ಳಬಹುದು. ಇಲ್ಲದೇ ಹೋದರೆ ಅಧ್ಯಾತ್ಮ ಮಾರ್ಗವೇ ದುಸ್ಸಾಧ್ಯ. ಪ್ರಗತಿ ಕನಸೇ ಆಗಿ ಉಳಿಯಬಹುದು.  ಅಧ್ಯಾತ್ಮ ಮಾರ್ಗವೇ ದುಸ್ಸಾಧ್ಯ ಎಂದಾದಮೇಲೆ *ಭಕ್ತಿ ವಿಶ್ವಾಸಗಳಿಗೆ* ಆಸ್ಪದವೇ ಇರದು.  ಇಂದಿಗೆ ಯಾತ್ರೆಯಲ್ಲಿ ತಾನು ಕೇಂದ್ರನಾಗುವ.

ಅಕ್ಷೋಭ್ಯತೀರ್ಥರು (ಮಳಖೇಡ)

Image
* ಅಕ್ಷೋಭ್ಯತೀರ್ಥರು *  ಕ್ಷೋಭೆಗಳೇ ಇಲ್ಲದ ಶ್ರೀಮದಾಚಾರ್ಯರಿಂದ ದೀಕ್ಷೆ ಪಡೆದ ಕಾರಣ ಒಂದಾದರೆ, ಜಗತ್ತಿಗೇ ಕ್ಷೋಭೆ ಬರದಂತೆ ಮಾಡುವ ಶಾಸ್ತ್ರ ರಚನೆ ಮಾಡಿದ, ಶ್ರೀಮಟ್ಟೀಕಾಕೃತ್ಪಾದರ ಗುರುಗಳು ಆದ ಕಾರಣ ಈ ಮಹಾಮುನಿಗಳ ನಾಮ *ಅಕ್ಷೋಭ್ಯತೀರ್ಥರು* ಎಂಬುವದು ಅತ್ಯಂತ ಸಾರ್ಥಕ ಎಂದೆನಿಸುತ್ತದೆ. ಈ ಮಹಾ ಗುರುಗಳನ್ನು ನೆನೆಸುವ, ಸ್ಮರಿಸುವ, ವಂದಿಸುವವರು ಪಾಮರರು ಎಂದೇ ಆಗಲಾರರು. ಅವರುಗಳಿಗೆ ಸರ್ವಥಾ ಮನಃಕ್ಷೋಭೆ ಇರದು.  *ವಾದಿಮಾರ್ತಾಂಡ* ವಿದ್ಯಾರಣ್ಯರಂಥ ಮಹಾ ಪಂಡಿತರನ್ನು ವಾದದಲ್ಲಿ ಪರಾಭವಗೊಳಿಸಿದ ಧಿರ. ಅದರ ಕುರುಹು  ಇಂದಿಗೂ ಮುಳಬಾಗಿಲಿನ ಪರ್ವತಸ್ಥಾನದಲ್ಲಿ ವಿಜಯಸ್ಥಂಭವನ್ನು ನೋಡುತ್ತೇವೆ.  *ಮಹಾಗುರು* *ಶುಕವತ್ ಶೀಕ್ಷಿತಸ್ಯ ಮೇ* ಎಂದು ಸ್ವಯಂ ಶ್ರೀಮಟ್ಟೀಕಾಕೃತ್ಪಾದರು ಹೇಳಬೇಕು ಎಂದರೆ ಶ್ರೀಮಟ್ಟೀಕಾಕೃತ್ಪಾದರಿಗೆ ಎಷ್ಟು ಅದ್ಭತ ರೀತಿಯಿಂದ ಪಾಠ ಮಾಡಿರಬಹುದು ಎಂಬುವದನ್ನು ಊಹಿಸಲೂ ಅಸಾಧ್ಯ.  *ಅಪಾರ ದೂರದೃಷ್ಟಿ* ಶ್ರೀಮದಾಚಾರ್ಯರ ಗರಡಿಯಲ್ಲಿ ತಯಾರು ಆದ, ಅಥವಾ ಶ್ರೀಮದಾಚಾರ್ಯರ ಸಾಕ್ಷಾತ್ ಪ್ರಶಿಷ್ಯರಾದಂಥ ಮಹಾ ಮಹಾ ವಿದ್ವಾಂಸರುಗಳು ನೂರಾರು ಜನ ಇರಬಹುದು. ಆ ಎಲ್ಲರನ್ನೂ ಬಿಟ್ಟು ಒಬ್ಬ ಈಗತಾನೆ ಎರಡೆರಡು ಮದುವೆಗಳನ್ನು ಮಾಡಿಕೊಂಡ *ರಾಜಕುಮಾರ* ನನ್ನು ಹುಡಕಬೇಕು, ಆರಿಸಬೇಕು ಎಂದರೆ ಆ ಮಹಾ ಮುನಿಗಳ ದೂರದೃಷ್ಟಿ ಆಗಾಧವೇ.  *ಮಾತಿನಲ್ಲಿ ಸರಸ್ವತಿ* *ಕಿಂ ಪಶುಃ ಪೂರ್ವ ದೇಹೇ* ರಾಜಕ

ಓ ಗುಣಪೂರ್ಣನೇ !! ಎನ್ನನು ಪೂರ್ಣನನ್ನಾಗಿಸು

Image
*ಓ ಗುಣಪೂರ್ಣನೇ !! ಎನ್ನನು ಪೂರ್ಣನನ್ನಾಗಿಸು* ಸ್ವಾಮಿಯಾದ ಶ್ರೀಹರಿ ಎನ್ನ ಬಿಂಬ. ನಾನು ಆತನ ಪ್ರತಿಬಿಂಬ. ಅನಂತಗುಣಪೂರ್ಣನಾದ ದೇವರ ಒಂದೊಂದು ಗುಣಗಳೂ ಸ್ವಯಂ ಬಿಂಬವಾಗಿವೆ. ಜಗತ್ತಿನ ತೃಣಮೊದಲು ಮಾಡಿ ಬ್ರಹ್ಮ ಲಕ್ಷ್ಮೀ ಪರ್ಯಂತ ಇರುವ ಎಲ್ಲ ಜೀವರ ಗುಣಗಳೂ ಭಗವದ್ಗುಣಗಳ ಪ್ರತಿಬಿಂಬವಾಗಿವೆ. *ಏ ಏ ಗುಣಾನ್ ವಿಜಾನಂತಿ ತಾನ್ ತಾನ್ ಅವಿಶನ್ ಮರುತ್* ಎಂದು ತಿಲಿಸಿದಂತೆ ವಾಯುದೇವರ ಹಾಗೂ ದೇವರ ಯಾವೆಲ್ಲ ಗುಣಗಳನ್ನು ತಿಳಿದುಕೊಳ್ಳುತ್ತಾರೆಯೋ ಆ ಎಲ್ಲ ಗುಣಗಳಿಂದ ವಾಯುದೇವರು ಹಾಗೂ ದೇವರು ಉಬ್ಬರೂ ನಮ್ಮಲ್ಲಿ ಪ್ರವೇಶಿಸುತ್ತಾರೆ ಹಾಗೂ ಗುಣವಂತರನ್ನಾಗಿಸುತ್ತಾರೆ.  *ಸ್ವಾಮಿನ್ ನಿರ್ದೋಷ ಮದ್ದೋಷಾನ್ ವಿರೇಚಯ* ಎಂದು ಹೇಳಿದಂತೆ ನಿರ್ದುಷ್ಟನಾದ, ಯಾವ ದೋಷಗಳೂ ಇಲ್ಲದ ಭಗವಂತನೇ ನಮ್ಮ ದೋಷಗಳನ್ನು ಕಳೆದು ನಮ್ಮನ್ನೂ ನಿರ್ದುಷ್ಟನನ್ನಾಗಿ ಮಾಡುವ. ಹಾಗೆಯೇ.... *ಸ್ವಾಮಿನ್ !! ಗುಣಪೂರ್ಣ !!* ಗುಣಪೂರ್ಣನಾದ ಸರ್ವಸ್ವಾಮಿಯಾದ ನೀನೇ ನನ್ನನ್ನು,  ನನ್ನ ಯೋಗ್ಯತಾನುಸಾವಾಗಿ ಗುಣಪೂರ್ಣನನ್ನಾಗಿಸಲು ಸಮರ್ಥ. ಅಂತೆಯೆ ನಿನಗೆ ದುಂಬಾಲು ಬಿದ್ದಿರುವೆ.  ಪ್ರತಿಬಿಂಬದಲ್ಲಿ ಪೂರ್ಣತೆ ಬರಬೇಕಾದರೆ ಕನ್ನಡಿ ಸ್ವಚ್ಛವಾಗಿರಬೇಕು. ಕನ್ನಡಿಯನ್ನು ಸ್ವಚ್ಛಗೊಳಿಸಬೇಕು. ನೀನು ಬಿಂಬ ನಾನು ಪ್ರತಿಬಿಂಬ. ನಿನ್ನ ಗುಣಗಳು ಬಿಂಬ, ಎನ್ನ ಗುಣಗಳು ಪ್ರತಿಬಿಂಬ. ನೀನು ನಿನ್ನ ಗುಣಗಳು ಪರಿಪೂರ್ಣ. ಆದರೆ ನಾನೋ ಅಥವಾ ನನ್ನ ಗುಣಗಳೋ ಅಪೂರ್ಣ. ನನ

*ಇದ್ದಂತೆಯೇ ಒಪ್ಪಿಕೊಳ್ಳಬೇಕು.....*

Image
*ಇದ್ದಂತೆಯೇ ಒಪ್ಪಿಕೊಳ್ಳಬೇಕು.....* ಸಕ್ಕರೆಯನ್ನು ಸಿಹಿಯಾಗಿಯೇ, ಮೆಣಸಿನಕಾಯಿಯನ್ನು ಖಾರವಾಗಿಯೇ ಒಪ್ಪಿಕೊಳ್ಳಬೇಕು. ಸ್ವಭಾವಿಕವಾಗಿ ಸಿಹಿಯಾದ ಸಕ್ಕರೆಯನ್ನು  ಖಾರವಾಗಿ ಮಾರ್ಪಾಡು ಮಾಡಲಾಗದು. ಅದೇರೀತಿಯಾಗಿ ಮೆಣಸಿನಕಾಯಿಯನ್ನೂ  ಸಹ ಸಿಹಿಯಾಗಿ ಮಾಡಲಾಗದು. ಹಾಗೆಯೇ ಎದುರಿನ ವ್ಯಕ್ತಿಯನ್ನು ಇದ್ದ ಹಾಗೆಯೇ ಇರುತ್ತಾನೆ. ಅವರನ್ನು ಬದಲಾಯಿಸುವ ಪ್ರಯತ್ನ ಬೇಡ.  ಬದಲಾವಣೆಯ ಅಪೇಕ್ಷೆ ಒಟ್ಟಾರೆಯಾಗಿ ಇಟ್ಟುಕೊಳ್ಳಲೂ ಬಾರದು. ಬದಲಾವಣೆಯ ಅಪೇಕ್ಷೆ ಇಟ್ಟುಕೊಳ್ಳುವದೂ ಎಂದರೆ ಮೆಣಸಿನಕಾಯಿಯನ್ನು ಸಕ್ಕರೆಯಂತೆ ಸಿಹಿ ಮಾಡುವ ಪ್ರಯತ್ನವಿದ್ದಂತೆಯೇ ಸರಿ. ಪ್ರಾಕೃತಿಕವಾಗಿ ಇರುವ ವಸ್ತುವನ್ನು ಮಾರ್ಪಾಡುಮಾಡುವದಾಗಲಿ, ಬದಲು ಮಾಡುವ ಪ್ರಯತ್ನವಾಗಲಿ ನಮ್ಮದಾದರೆ, ಆ ಕಾರ್ಯದಲ್ಲಿ ನಾವು ಸೋಲುವದು ನಿಶ್ಚಿತ.  ಬದಲಾವಣೆಯ ಅಪೇಕ್ಷೆಯೇ ತಪ್ಪಾ ??  ಸರ್ವಥಾ ತಪ್ಪು ಅಲ್ಲ...  *ಬದಲಾವಣೆಗಿಂತಲೂ ಹೊಂದಾಣಿಕೆ ತುಂಬ ಮಹತ್ವ.*  ಬದಲಾವಣೆಗೆ ಪರರ ಅಹಂ ಬಗ್ಗಿಸಬೇಕು. ಹೊಂದಾಣಿಕೆಗೆ ನನ್ನ ಅಹಂ ಬಗ್ಗಿಸಬೇಕು. *ಇನ್ನೊಬ್ಬರ ಅಹಂ ಬಗ್ಗುಸುವದಕ್ಕಿಂತಲೂ, ನನ್ನ ಅಹಂ ನಾನು ಬಗ್ಗಿಸಿಕೊಳ್ಳುವದು ತುಂಬ ಸುಲಭ.* ಮೆಣಸಿನಕಾಯಿಯನ್ನೇ ಸಿಹಿ ಮಾಡುವದಕ್ಕಿಂತಲೂ ಮೆಣಸಿನಕಾಯಿಯ ಜೊತೆ ಸಕ್ಕರೆ ಅಥವಾ ಬೆಲ್ಲವನ್ನು ಬೆರಿಸಿಬಿಟ್ಟರೆ, ಹೊಂದಾಣಿಕೆ ಮಾಡಿಕೊಂಡು ಬಿಟ್ಟರೆ ರುಚಿ ರುಚಿಯಾದ *ರಂಜಕ*ವನ್ನೇ ಜಗತ್ತಿಗೆ ಕೊಡಬಹುದು.  ಇದ್ದಂತೆ ಸ್ವೀಕರಿಸಿಬಿಟ್

*ಅಶ್ವವಾಹನದಲ್ಲಿ ಮೆರೆದು ಬರುತ್ತಿರುವ ಅಮ್ಮನವರು*

Image
*ಅಶ್ವವಾಹನದಲ್ಲಿ ಮೆರೆದು ಬರುತ್ತಿರುವ ಅಮ್ಮನವರು* ತಿರುಚಾನೂರುನಲ್ಲಿ *ಪದ್ಮಾವತೀ ದೇವಿಯ ವೈಭವದ ಬ್ರಹ್ಮೋತ್ಸವ* ಇಂದಿಗೆ ಮುಕ್ತಾಯವಾಯಿತು. ಅನೇಕ ಉತ್ಸವಗಳಿಂದ ಕೂಡಿದ ಕಾರ್ತೀಕ ಬ್ರಹ್ಮೋತ್ಸವ. ಕೊನೆಯ ಉತ್ಸವ *ಆಶ್ವವಾಹನ* ತುಂಬ ಮನೋಹರವಾದ ಅತ್ಯದ್ಭುತವಾದ ಉತ್ಸವ. ಈ ಆಶ್ವವಾಹನ  ಉತ್ಸವದಲ್ಲಿ ನನಗೂ ಪುಟ್ಟ ಸೇವೆಯು ದೊರೆತಿತ್ತು. ಪುಟ್ಟ ವಿವರವನ್ನು ತಿಳೊಯುವ ಪ್ರಯತ್ನ ಮಾಡೋಣ. *ಆಶ್ವಾರೂಢ* ನಾಗಿ ಶ್ರಿಹರಿ ಮೆರೆದು ಬರುವದು ಕಲ್ಕಿ ಅವತಾರದಲ್ಲಿ. ಸ್ವಯಂ ಆಶ್ವನಾಗುವದು  ಹಯಗ್ರೀವನಾದಾಗ. ಅಶ್ವವನ್ನೇ ಆಹುತಿಯಾಗಿ ಭೋಗಿಸುವದು *ಆಶ್ವಮೇಧ* ದಲ್ಲಿ. ಆಶ್ವಕ್ಕೆ ಸಂಬಂಧಿಸಿದಂತೆ ಈ ಮೂರು ಕಾರ್ಯಗಳನ್ನು ದೇವರು ಮಾಡುತ್ತಾನೆ. ಇಂತಹ ನೂರು ಸಾವಿರ ಕೋಟಿ ಅನಂತ ರೂಪಗಳು, ಕಾರ್ಯಗಳೂ ಇವೆ. *ಕಲ್ಕೀ ಕಲೇ ಕಾಲಮಲಾತ್ ಪ್ರಪಾತು* ಎಂದು ಹೇಳಿದಂತೆ ಕಲ್ಕಿ ಅವತಾರದ ಭಗವತ್ಸ್ಮರಣೆಯಿಂದ  ಕಲಿಕಾಲದ ಪ್ರಭಾವದಿಂದ ಉಂಟಾದ ಎಲ್ಲ ದೋಷಗಳನ್ನು ಕಳೆಯುತ್ತಾನೆ, ಆ ದೋಷಗಳ ಪ್ರಭಾವ ಆಗದಿರುವ ಹಾಗೆಯೂ ಸಂರಕ್ಷಿಸುತ್ತಾನೆ. ೨) ಸ್ವಯಂ ಕುದುರೆಯೇ ಆಗಿ ಹಯಗ್ರೀವನಾದಾಗ ಋಗ್ವೇದ ಯಜುರ್ವೇದ ಸಾಮವೇದ, ಪಂಚರಾತ್ರ ಮೊದಲಾದ ಅನಂತ ವೇದ ಉಪನಿಷತ್ತು ಪಂಚರಾತ್ರ ಮೊದಲಾದವುಗಳನ್ನು ನಿರಂತರ ತನ್ನ ಮುಖದಿಂದ ಉಚ್ಚಾರಣೆ ಮಾಡುತ್ತಾ ಬ್ರಹ್ಮಾದಿ‌ಮುಕ್ತಿಯೋಗ್ಯ ಜಗತ್ತಿಗೆ ಜ್ಙಾನವನ್ನು ಸುರಿಯುತ್ತಾನೆ. ಆ ಕಾರ್ಯ ಇಂದಿಗೂ ನಡೆಯುತ್ತಿದೆ.  ೩) ಬ್ರಹದೇವರೇ ಒಂದು ರೂಪದಿಂದ

*ಈ ಗತಿ !! ಅವನತಿ !!*

Image
*ಈ ಗತಿ !! ಅವನತಿ !!* ಮಾನವ ನಿರಂತರ ಗಮನಶೀಲ. ಗಮನಶೀಲ‌ ಮಾನವನಿಗೆ ಗಮ್ಯಸ್ಥಾನದ ಗುರಿಯೂ ಇರುತ್ತದೆ. ಗಮ್ಯಸ್ಥಾನವನ್ನು ತಲುಪುವ ಭರದಲ್ಲಿ *ಉನ್ನತಿ- ಅವನತಿ* ಗಳ ಕಡೆ ಗಮನ ಕಡಿಮೆಯಾಗಿರುತ್ತದೆ.  ನಾವಾರಿಸಿಕೊಂಡ ಮಾರ್ಗದ ಮುಖಾಂತರ ನಾವು ಪಡೆದದ್ದನ್ನು ನಮ್ಮ ಉನ್ನತಿಯ ಮಾರ್ಗವಾಗದೆ, ಅವನತಿಯತ್ತ ಸಾಗಿದ್ದರೂ ಉನ್ನತಿಯ ಮಾರ್ಗ ಎಂದೇ ನಾವು ಪ್ರತಿಪಾದಿಸಲೇಬೇಕು, ಸಮರ್ಥಿಸುತ್ತೇವೆಯೂ ಸಹ. ಅದು ಅನಿವಾರ್ಯ. ಯಾಕೆಂದರೆ ಆ ಮಾರ್ಗವನ್ನು ಆರಿಸಿದವ ನಾನು, ಹೊರಟವ ನಾನು. ನಾನೇ ಸಮರ್ಥಿಸಿಕೊಳ್ಲಬೇಕು.  *ಸಿಹಿಯಾದ ಹಣ್ಣನ್ನು, ಕೊಳಚೆಯಿಂದ ಮುಚ್ಚಿಡುವ ಪ್ರಯತ್ನ* ನಮ್ಮ ಗಮ್ಯ ಸ್ಥಾನ  ಸುಖ, ಶಾಂತಿ, ಸಮೃದ್ಧಿ, ಆನಂದ, ತ್ಯಾಗ,  ನೆಮ್ಮದಿ ಮತ್ತು ಸಮಾಧಾನ ಇವುಗಳೆ. ಇವುಗಳು ಇರುವದು ನಮ್ಮಲ್ಲಿಯೇ. ಇವುಗಳನ್ನು ಕೊಡುವವ ನಮ್ಮೊಳಗಿರುವ ದೇವರೇ. ಇವುಗಳನ್ನು ಪಡೆಯುವದೇ ನಿಜವಾದ ಗತಿ. ಇವುಗಳನ್ನು ಪಡೆಯುವದಕ್ಕಾಗಿ ಹೊರಡುವ ಮಾರ್ಗ ಎಂದರೆ "ಕೊಡುವ ದೇವರ ಆರಾಧನೆ" ಯೊಂದೇ ಉತ್ತಮ ಮಾರ್ಗ. ಸುಖ ಶಾಂತಿ ಸಮೃದ್ಧಿ ನೆಮ್ಮದಿಗೋಸ್ಕರ ನಾವು ಇಂದು ಆರಿಸಿಕೊಂಡ ಮಾರ್ಗ ಕೇವಲ ಧನಮಾರ್ಗ. ಧನ ಸಂಪಾದಿಸಿದರೆ ಸುಖ ಶಾಂತಿಯನ್ನು ಪಡೆಯಬಹುದು ಎಂಬ ಭಾವನೆಯಿಂದ ಆ ಮರ್ಗವನ್ನು ಆರಿಸಿದ್ದೇವೆ.  ನಾವು ಆರಿಸಿದ ಮಾರ್ಗದಲ್ಲಿ ತುಂಬ ಎತ್ತರದಲ್ಲಿ ಸಾಗಿದ್ದೇವೆ. ಹತ್ತಿಪ್ಪತ್ತು ಐವತ್ತು ನೂರು ಲಕ್ಷ ಹಣ ಕಳೆದು ಕೊಂಡರೂ ಅದೊಂದು ಸಮಸ್ಯ

*ಶ್ರೀ ಶ್ರೀ ಪದ್ಮನಾಭ ತೀರ್ಥರು.... 3*

Image
*ಶ್ರೀ ಶ್ರೀ ಪದ್ಮನಾಭ ತೀರ್ಥರು* ರಮಾನಿವಾಸೋಚಿತವಾಸಭೂಮಿಃ  ಸನ್ಯಾಯರತ್ನಾವಲಿ ಜನ್ಮಭೂಮಿಃ | ವೈರಾಗ್ಯಭಾಗ್ಯೋ ಮಮ‌ ಪದ್ಮನಾಭ- ತೀರ್ಥಾಮೃತಾಬ್ಧಿಃ ಭವತಾತ್ ವಿಭೂತ್ಯೈ || ಶ್ರೀ ಶ್ರೀ ಪದ್ಮನಾಭತೀರ್ಥರ ಉತ್ತರ ಆರಾಧನಾ ಮಹೋತ್ಸವ. ಆದಿಟೀಕಾಕಾರರೆಂದೇ ಪ್ರಸಿದ್ಧರಾದವರು ಶ್ರೀಪದ್ಮನಾಭತೀರ್ಥರು. ಅವರು ರಚಿಸಿದ ಟೀಕೆಗಳೂ ಅದ್ಭುತವೇ...  ಸೂತ್ರಭಾಷ್ಯಕ್ಕೆ ಸತ್ತರ್ಕದೀಪಾವಲಿ, ಅನುವ್ಯಾಖ್ಯಾನಕ್ಕೆ ಸನ್ಯಾಯರತ್ನಾವಲಿ, ಖಂಡನತ್ರಯಗಳಿಗೆ ಟೀಕೆ, ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯಗಳಿಗೆ ಟೀಕೆ, ತತ್ವದ್ಯೋತ ತತ್ವನಿರ್ಣಯ ತತ್ವಸಂಖ್ಯಾನ ಕರ್ಮನಿರ್ಣಯಗಳಿಗೆ ಟೀಕೆ, ಹೀಗೆ ಶ್ರೀಮದಾಚಾರ್ಯರ ಅನೇಕ ಮೂಲಗ್ರಂಥಗಳಿಗೆ ಟೀಕೆಯನ್ನು ಬರೆದ ಮಹಾತ್ಮರಿವರು.  *ಸೌಭಗ್ಯವಂತರೋ ಇವರು* ಸತ್ಸಿದ್ಧಾಂತವಾದ ವಾಯುದೇವರ ಶಾಸ್ತ್ರವಾದ ದ್ವೈತಸಿದ್ಧಾಂತವನ್ನು ಓದಿದರೇ ಮೋಕ್ಷಾದಿ ಪುರುಷಾರ್ಥಗಳು ಎಂದು ನಂಬಿರುವಾಗ, ಸ್ವಯಂ ವಾಯುದೇವರ ಅವತಾರಿಗಳಾದ ಶ್ರೀಮದಾಚಾರ್ಯರಿಂದಲೇ ನೇರವಾಗಿ ಸರ್ವ ಶಾಸ್ತ್ರಗಳನ್ನು ಓದುವ ಸೌಭಾಗ್ಯ ಪಡೆದ ಅನೇಕರಲ್ಲಿ ಅತ್ಯುತ್ತಮರು ಶ್ರೀ ಪದ್ಮನಾಭತೀರ್ಥರು.  *ಸ್ಪರ್ಶನಾತ್ ಭಗವತೋತಿ ಪಾವನಾತ್ ಸನ್ನಿಧಾನಪದತಾಂ ಗತಾಂ ಹರೇಃ* ಎಂದು ನಾರಾಯಣ ಪಂಡಿತಾಚಾರ್ಯರು *ಉಡುಪಿಯ ಶ್ರೀಕೃಷ್ಣ ಹಾಗೂ ಆರಾಧಕ ಶ್ರೀಮದಚಾರ್ಯರ ದಿವ್ಯ ಮಹಿಮೆ* ತಿಳಿಸಿದಂತೆ ಯೋಚಿಸಿದಾಗ, ಸರಿಯಾಗಿ ಎಂಭತ್ತು ವರ್ಷಗಳ ಕಾಲ ನಿರಂತರ ಪೂಜಿಸ

ಶ್ರೀ ಶ್ರೀ ಪದ್ಮನಾಭತೀರ್ಥರು

Image
*ಶ್ರೀ ಶ್ರೀ ಪದ್ಮನಾಭತೀರ್ಥರು* ಶ್ರೀಮಧ್ವಸಂಸೇವನ ಲಬ್ಧಶುದ್ಧವಿದ್ಯಾ- ಸುಧಾಂಭೋ ನಿಧಯೋ ಅಮಲಾ ಯೇ | ಕೃಪಾಲವಃ ಪಂಕಜನಾಭತೀರ್ಥಾಃ ಕೃಪಾಲವಃ ಸ್ಯಾನ್ಮಯಿ ನಿತ್ಯಮೇಷಾಮ್ || ಶ್ರೀಶ್ರೀ ಪದ್ಮನಾಭತೀರ್ಥರ ದಿವ್ಯ ಮಧ್ಯ ಆರಾಧನಾಹೋತ್ಸವ.  ಶ್ರೀಮದಾಚಾರ್ಯರ ನೆಚ್ಚಿನ ಶಿಷ್ಯರು ಉಡುಪಿಯ ಅಷ್ಟಮಠಾಧೀಶರುಗಳು ಮತ್ತು ಪದ್ಮನಾಭತೀರ್ಥರು ನರಹರಿತೀರ್ಥರು ಮಾಧವತೀರ್ಥರು ಹಾಗೂ ಅಕ್ಷೋಭ್ಯತೀರ್ಥರು ಹೀಗೆ ಹನ್ನೆರಡು ಜನ.  ಈ ಎಲ್ಲರಿಗೂ ಒಂದೊಂದು ಉತ್ಕೃಷ್ಟ ಜವಾಬ್ದಾರಿಗಳನ್ನಿ ಶ್ರೀಮದಾಚಾರ್ಯರು ವಹಿಸಿಕೊಡುತ್ತಾರೆ. ೧)ಅಷ್ಟ ಮಠಾಧೀಶರುಗಳಿಗೆ ನಿರಂತರ ಕೃಷ್ಣನ ಆರಾಧನೆಯನ್ನು ವಹಿಸಿಕೊಡುತ್ತಾರೆ. ೨) ನರಹರಿ ತೀರ್ಥರಿಗೆ ಶ್ರೀಮನ್ಮೂಲರಾಮ ಸೀತಾದೇವಿಯರನ್ನು ತರಲು ಆದೇಶಿಸುತ್ತಾರೆ. ೩) ಮಾಧವತೀರ್ಥರಿಗೆ ದೇಶದುಗ್ವಿಜಯ ಮಾಡಿ ನಮ್ಮ ಸಿದ್ಧಾಂತ ಸ್ಥಾಪನೆಯ ಜವಾಬ್ದಾರಿ ಕೊಟ್ಟರೆ, ೪) ಅಕ್ಷೋಭ್ಯತೀರ್ಥರಿಗೆ ಅನಾದಿ ಭವ್ಯ ಪರಂಪರೆಗೆ ಅತ್ಯುತ್ತಮ ಉತ್ತಾರಾಧಿಕಾರಿಯನ್ನು ತಂದು ಕೂಡಿಸುವ ದೊಡ್ಡ ಜವಾಬ್ದಾರಿಗಳನ್ನು ವಹಿಸುತ್ತಾರೆ. ಈ ಎಲ್ಲರೂ ಆ ಕಾರ್ಯದಲ್ಲಿ ಯಶಸ್ವಿಗಳೂ ಆಗುತ್ತಾರೆ.  ಈ ಎಲ್ಲ ಮಹನೀಯರುಗಳ ಮೇಲೆ, ಇಂದಿನ ಕಥಾನಾಯಕರಾದ ಶ್ರಿ ಶ್ರೀ ಪದ್ಮನಾಭತೀರ್ಥರಿಗೆ *ಯಃ ಕರ್ನಾಟಕ ಪೂರ್ವಸಜ್ಜನ ಗುರುಃ* ಎಂದೇ ಮುಂದಿನ ಜನಾಂಗ ಹೇಳುವಂತೆ ಸಮಗ್ರ ದೇಶದ ಸಕಲ‌ಮಾಧ್ವ ಪೀಠಾಧಿಪತಿಗಳಿಗೆ ಹಾಗೂ ಸಕಲ ವೈಷ್ಣರಿಗೆ  *ಜಗದ್ಗುರುಗಳನ್ನಾ

*ಪದ್ಮನಾಭತೀರ್ಥರ ಆರಾಧನೆ...*

Image
*ಪದ್ಮನಾಭತೀರ್ಥರ ಆರಾಧನೆ...* ಪೂರ್ಣಪ್ರಜ್ಙಕೃತಂ ಭಾಷ್ಯಂ ಆದೌ ತದ್ಭಾವ ಪೂರ್ವಕಮ್ | ಯೋ ವ್ಯಾಕರೋನ್ನಮಸ್ತಸ್ಮೈ  ಪದ್ಮನಾಭಾಖ್ಯ ಯೋಗಿನೆ || ಮಹಾ ಜ್ಙಾನಿಗಳು, ದೇವಾಂಶ ಸಂಭೂತರು, ವಾದಿಮಾರ್ತಾಂಡರು ಶ್ರೀ ಪದ್ಮನಾಭತೀರ್ಥರು.  ಸಮಗ್ರ ವೇದ ವೇದಾರ್ಥಗಳ ಜ್ಙಾನವನ್ನು ತಿಳಿದಿಕೊಂಡವರು, ಸಕಲ ಶಾಸ್ತ್ರಾರ್ಥ ಪ್ರವೀಣರು,  ಅದ್ವೈತದಲ್ಲಿ ನಿಷ್ಣಾತರೂ, ಪ್ರಚಂಡ ಬುದ್ಧಿವಂತರು, ಮಹಾನ್ ವಿದ್ವಾಂಸರೂ ಆದವರು ಶೋಭನಭಟ್ಟರು.  ವಾಯುದೇವರ ಅವತಾರಿಗಳಾದ, ಕರುಣಾಳುಗಳಾದ, ನಮ್ಮ ಉದ್ಧಾರಕ್ಕಾಗಿಯೇ ಭುವಿಗಿಳಿದು ಬಂದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಅನೆಕ ಗ್ರಂಥಗಳನ್ಬು ರಚಿಸಿ ವಾದಿಗಳನ್ನು ನಿಗ್ರಹಿಸಿ ಅನುಗ್ರಹಿಸಿದರು.  ಮೂವತ್ತಾರು ಸರ್ವಮೂಲ ಗ್ರಂಥಗಳಲ್ಲಿ ಗ್ರಂಥ ರಾಜ *ಸೂತ್ರಭಾಷ್ಯ* ವೇ. ಶ್ರೀವೇದವ್ಯಾಸರಿಂದ ರಚಿತವಾದ ಬ್ರಹ್ಮಸೂತ್ರಗಳಿಗೆ ಇರುವ ಇಪ್ಪತ್ತೊಂದು ಕುಭಾಷ್ಯಗಳನ್ನು ಖಂಡಿಸಿ *ಬ್ರಹ್ಮಸೂತ್ರಭಾಷ್ಯ* ವನ್ನು ರಚಿಸಿ,  ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಶ್ರೀಮದ್ವೈಷ್ಣವ ಸಿದ್ಧಾಂತ ಪ್ರತಿಷ್ಠಾಪನೆಯನ್ನು ಮಾಡುತ್ತಾ ದೇಶ ದಿಗ್ವಿಜಯ ಮಾಡುತ್ತಿರುತ್ತಾರೆ.  *ಪೀಠೇ ರತ್ನೋಪಕ್ಲೃಪ್ತೇ* ಎಂದು ಹೇಳಿದಂತೆ ಎತ್ತರದ ಸಿಂಹಾಸನದಲ್ಲಿ ಶ್ರೀಮದಾಚಾರ್ಯರು ಆಸೀನರಾಗಿದ್ದಾರೆ. *ವೈದಿಕಾದ್ಯಾ ಹಿ ವಿದ್ಯಾಃ ಸೇವಂತೆ ರಮಂತೇ* ಎಂದು ಸಾರಿದಂತೆ ಅನೇಕ ಮಹಾನ್ ಜ್ಙಾನಿಗಳೂ ಆದ,ದೇವಾಂಶ ಸಂಭೂತರೂ ಆದ ವಿದ್

*ಉಡುಗೊರೆ....*

*ಉಡುಗೊರೆ....* ಉಡುಗೊರೆ ಕೊಡುವದು ತೆಗೆದುಕೊಳ್ಳುವದು ಭಾರತೀಯ ಸಮಾಜದ ಒಂದು ಸಂಪ್ರದಾಯ. ಅದೊಂದು ಸುಂದರ ಕಲ್ಪನೆ.  ಕೊಡುವ ಉಡುಗೊರೆ ದೊಡ್ಡದಾಗಿರಬಹುದು, ಬೆಲೆಬಾಳುವಂತಹದ್ದೂ ಆಗಿರಬಹುದು, ಸಾಮಾನ್ಯದ್ದೂ ಆಗಿರಬಹುದು. ಅದರ ಹಿನ್ನಲೆ ಹಾಗೂ ಉದ್ದೇಶ್ಯ ಪ್ರೀತಿ ಅಭಿಮಾನಗಳ ಹಂಚಿಕೆಯ ಮುಖಾಂತರ ಬಾಂಧವ್ಯದ ದೊಡ್ಡ  ಬೆಸುಗೆಯೇ ಇದೆ.  ಇಂದು ಕೊಡುವ ಉಡುಗೋರೆಗಳು ನಮ್ಮ ಅಧಿಕಾರ status ಅಂತಸ್ತುಗಳ ಪ್ರಭಾವ ಬೀರುವದಕ್ಕಾಗಿ ಎಂದಾಗಿದೆ. ಅದಾಗದೆ ಅಂತಃಕರಣದ ಪ್ರಭಾವ ಬೀರುವದಕ್ಕಾಗಿ ಎಂದಾಗಬೇಕು. ಹಿಂದೆ ಅದೇರೀತಿಯಾಗಿಯೇ ಇತ್ತು.  *ಉಡುಗೋರೆಯಿಂದ ಉತ್ಕೃಷ್ಟತೆ* ಆತ್ಮೀಯರ ಮನೆಗೆ ಹೋದಾಗ ಉಡುಗೋರೆಗಳ ಆದಾನ ಪ್ರದಾನಗಳು ನಡೆಯುತ್ತವೆ. ಹಿಂದೆ ಹೂ,  ಹಣ್ಣುಗಳು, ಬಟ್ಟೆ ಬರೆಗಳು, ಕೊಡುವದು ತೆಗೆದುಕೊಳ್ಳುವದು ಇತ್ತು. ಆದರೆ ಇಂದು ಚೊಕಲೇಟ್ ಹರಿದ ಹುರಿದ ಹೊರಗಿನ ತಿನಸುಗಳನ್ನು ಕೊಡುವದಿದೆ. ಹೂ ಹಣ್ಣು ಬಟ್ಟೆ ಬರೆಗಳಿಂದು ಕೊಡುವ ಉಡುಗೋರೆಯಲ್ಲಿ ಪ್ರೀತಿ ಎಷ್ಟು ತುಂಬಿರುತ್ತಿತ್ತೋ ಇಂದು ಅದಕ್ಕೆ ವ್ಯತಿರಿಕ್ತವಾಗಿ ನಾವು ಕೊಡುವ ಸ್ವೀಕರಿಸುವ ಉಡುಗೋರೆಯಲ್ಲಿ ಪ್ರೀತಿ ಅಭಿಮಾನಕ್ಕಿಂತಲೂ ಹಣದ ಪ್ರಭಾವವಿದೆ ಎಂದರೆ ತಪ್ಪಾಗದು.... ಅದರಿಂದ ಹುಡಗರೂ ದುರಭ್ಯಾಸಕ್ಕೆ ಒಳಗಾಗುವವರು. ಕೊಟ್ಟವನ ಮಹತ್ವವೂ ಇರದು. ಸಾಧನೆಯಂತೂ ಇರುವದೇ ಇಲ್ಲ....  *ಕೊಡುವ ಉಡುಗೋರೆ ಎಂತಹದ್ದಿರಬೇಕು....* ಪ್ರೀತಿ ಅಭಿಮಾನಗಳನ್ನು ಬೆಳಿಸಿ,

*ಅಮೂಲ್ಯ ವಜ್ರವನ್ನು ತೌಡಿನಿಂದ ಮುಚ್ಚುವದೇಕೆ....*

Image
*ಅಮೂಲ್ಯ ವಜ್ರವನ್ನು ತೌಡಿನಿಂದ ಮುಚ್ಚುವದೇಕೆ....* "ಅತ್ಯಮೂಲ್ಯವಾದ ಅನ್ಯೋನ್ಯ ಸಂಬಂಧಗಳಲ್ಲಿ ನಯವಿನಯಗಳ ಸಮ್ಮಾರ್ದವವೇ ಒಂದು ಅದ್ಭುತ. ಸ್ವಗುಣ - ಪರಗುಣಗಳ ಸಮ್ಮಿಶ್ರ ಕ್ರಾಂತಿಯೇ ಒಂದು ದೊಡ್ಡ ಮಾನವನ ಸೊಬಗು."  ಜೀವನ ಅತ್ಯಮೂಲ್ಯವಾದ ವಜ್ರದಂತಹ ಅದ್ಭುತವಾದ ಗುಣಗಳು  ಇಂದಿನ ಈ ಯಾಂತ್ರಿಕತೆಯ ತೌಡಿನಲ್ಲಿ ಮುಚ್ಚಿಹೋಗಿವೆ.  ಜೀವನದಲ್ಲಿ  *ಅನ್ಯೋನ್ಯತೆ* ಅನ್ಯೋನ್ಯತೆಯ ಸಮೃದ್ಧಿಗೆ ಕಾರಣವಾದ  *ಗುಣಗ್ರಹಿಕೆ* ಗಳ ಸೊಬಗು  ಇಂದು ಮರೀಚಿಕೆಯಾಗಿವೆ.  ಹೃದಯ ಹೃದಯಗಳ ಮೇಲನದಿಂದ ಆಗುವ ಕಾರ್ಯಗಳೆಲ್ಲವೂ ಇಂದು ಯಂತ್ರಗಳಿಂದ ಆಗುತ್ತಿವೆ. ಯಂತ್ರಗಳು ನಮ್ಮೆಲ್ಲ ಗುಣಗಳನ್ನು ಮುಚ್ಚಿ ಹಾಕುತ್ತಿವೆ. ಮನುಷ್ಯನ ಸ್ಥಾನಕ್ಕೆ ಯಂತ್ರಗಳು. ಆ ಯಂತ್ರಗಳ ಮೂಲಕವೇ ಎಲ್ಲ ಕಾರ್ಯ ನಿರ್ವಹಣೆ.  ಒಂದು ವಿವಾಹ ಪತ್ರಿಕೆ ಬರೆಯುವದಿದೆ, ಅಂದು ಬರೆಯುವ ಪತ್ರಿಕೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿರುತ್ತಿತ್ತು. ಕೈಯಿಂದ ಪತ್ರ ಬರೆಯುವಾಗ ಮನಸದಸು, ಉದ್ದೇಶ್ಯದಲ್ಲಿ ಇರುವ ವ್ಯಕ್ತಿಯ ಯೋಗ್ಯತೆ, ಆ ತನಿಗೆ ಸಲ್ಲಲೇ ಬೇಕಾದ ಪ್ರೀತಿ ಗೌರವ ಇತ್ಯಾದಿಗಳನ್ನು ನೆನಿಸಿಯೇ ಕೈ ಕದಲಿಸುತ್ತಿತ್ತು.  ಪ್ರತ್ಯೇಕತೆಯಲ್ಲಿ *ಗುಣಗಳನ್ನು ಗುರುತಿಸುವ ಸೌಭಗ* ಎದ್ದು ಕಾಣುತ್ತಿತ್ತು. ಅಂತೆಯೇ ಪರಸ್ಪರ ಅನ್ಯೋನ್ಯತೆ persnl touch  ದೃಢವಾಗಿ ಇರುತ್ತಿತ್ತು. ಸಮಯದ ಉಳಿತಾಯದ ನೆಪದಲ್ಲಿ ಇಂದಿನ ಈ ಯಂತ್ರ  ನಮ್ಮವರ ಗುಣ ಗುರುತಿಸುವಿಕೆಯನ್ನೇ ನಿಲ್ಲಿ