Posts

Showing posts from June, 2018

ಶ್ರೀ ಶ್ರೀ ಸತ್ಯಪೂರ್ಣತೀರ್ಥರ ಆರಾಧನಾ ಮಹೋತ್ಸವ @ ಕೋಲ್ಪೂರು.

(ಶ್ರೀ ಶ್ರೀ ಸತ್ಯಪೂರ್ಣತೀರ್ಥರ ಆರಾಧನಾ ಮಹೋತ್ಸವ @ ಕೋಲ್ಪೂರು. ) *ಅಕ್ಷೋಭ್ಯ !! ಎನ್ನ ಒಂದನೆಗಳು* ಕ್ಷೋಭೆ ಇಲ್ಲದ ಭಭಗವಂತನಿಗೆ ಅಕ್ಷೋಭ್ಯ ಎಂದು ಕರಿಯುವದು ಶಾಸ್ತ್ರ. ಕ್ಷೊಭೆಗೆ ತುತ್ತಾದ ಅಂತೆಯೇ ಪ್ರಕ್ಷುಬ್ಧನಾದ ವ್ಯಕ್ತಿಗೆ ಸಾರಾಸಾರ ವಿವಿಕವೇ ಇರದು. ಸರಿಯಾದ ನಿರ್ಣಯ ತೆಗೆದುಕೊಳ್ಳಲೇ ಆಗದು. ಪ್ರಶಾಂತ‌ಮನಸ್ಕನ ವಿಚಾರಧಾರೆಗಳು,  ನಿರ್ಣಯಗಳು ಸರಿಯಾದ ಮಾರ್ಗದಲ್ಲಿಯೇ ಇರುತ್ತದೆ. ಹೊಸ ಮನೆಯ ವಾಸ್ತುಶಾಂತಿ ಹತ್ತಿರಬಂದಿರತ್ತೆ ಆದರೆ ಮನೆ ಹೇಗಿರಬೇಕು ಎಂಬುವ ಸ್ಪಷ್ಟತೆ ಕೆಲವರಿಗೆ ಇರುವದೇ ಇಲ್ಲ. ಏಕೆಂದರೆ ಅವನ ಮನಸ್ಸು ಪ್ರಶಾಂತವಾಗಿರದೆ ಪ್ರಕ್ಷುಬ್ಧವಾಗಿದೆ ಆದ್ದರಿಂದ. ಪ್ರಕ್ಷುಬ್ಧವಾದ ಅಥವಾ ಕುದಿಯುವ ನೀರಿನಲ್ಲಿ ನಮ್ಮ ಮುಖ ಕಾಣುವದಿಲ್ಲ, ಹಾಗೆಯೇ ಕಲುಶಿತ ಅಥವಾ ಪ್ರಕ್ಷುಬ್ಧವಾದ ಮನಸ್ಸಿದ್ದರೆ ಏನೂ ತೋಚದು. ಪ್ರಕ್ಷುಬ್ಧತೆ ಬರುವದೆಲ್ಲಿ... ?? "ತುಂಬಿದ ಕೊಡ ತುಳಕದು" ಎಂಬುದೊಂದು ಗಾದೆ, ಹಾಗೆಯೇ ಪೂರ್ಣನಾದ ವ್ಯಕ್ತಿ ಎಂದಿಗೂ ಪ್ರಕ್ಷುಬ್ಧನಾಗಲಾರ. ಪರಿಪೂರ್ಣತೆ ಇಲ್ಲದ ವ್ಯಕ್ತಿಯ ಮನಸ್ಸು ಎಂದಿಗೂ ಪ್ರಕ್ಷುಬ್ಧವಾಗಿಯೇ ಇರುವಂತಹದ್ದು.. ಶ್ರೀಹರಿಯ ಮೂಲ ರೂಪವೂ ಪೂರ್ಣ, ನಮ್ಮಲ್ಲಿಯ ರೂಪವೂ ಪೂರ್ಣ, ಪೂರ್ಣವಾದ ಮೂಲ ರೂಪದಿಂದ ಅಭಿವ್ಯಕ್ತವಾದ ರಾಮಕೃಷ್ಣಾದಿ ರೂಪಗಳೂ ಪೂರ್ಣ. ಎಲ್ಲ ಮೂಲರೂಪಗಳನ್ನು ತನ್ನಲ್ಲಿಯೇ ಐಕ್ಯಮಾಡಿಕೊಂಡು ಕೊನೆಗೆ ಉಳಿಯುವ ರೂಪವೂ ಪೂರ್ಣ... ಹೀಗೆ  ಶ್ರೀಹರಿ ಪೂರ್ಣ. ಪೂರ್ಣ

*ಶ್ರೀಪಾದರಾಜರ ಆರಾಧನಾ ಮಹೋತ್ಸವ

Image
*ಶ್ರೀಪಾದರಾಜರ ಆರಾಧನಾ ಮಹೋತ್ಸವ *ನಾಯಮಾತ್ಮಾ ಬಲಹೀನೇನ ಲಭ್ಯಃ* ಈ ಭತವಂತ ಬಲಹೀನರಿಗೆ ಹಾಗೂ ಬಲಹೀನತೆಗಳನ್ನು ಪಕ್ಕದಲ್ಲಿ ಇರಿಸಿಕೊಂಡು, ಬಲಹೀನತೆಗಳ ದಾಸನಾದವರಿಗೆ ದೊರೆಯುವದಿಲ್ಲ. ಬಲ ಎಂದರೆ ಯುಕ್ತಿ, ವಿಚಾರಗಳು. ಯಾರು ವಿಚಾರಹೀನರೋ ಅಥವಾ ವಿಚಾರ ಹೀನರ ದಾಸರೋ ಅಂತಹವರಿಗೆ ದೇವರೂ ಸಿಗಲ್ಲ, ದೇವತಾ  (ಸೌಖ್ಯ, ಸಮೃದ್ಧಿ, ಕೀರ್ತಿ, ಹಣ, ಯಶಸ್ಸು, ಗುಣವಂತಿಕೆ, ಜ್ಙಾನ ಭಗವದ್ಭಕ್ತಿ,) ಸ್ವಭಾವವೂ ಉಳಿಯುವದಿಲ್ಲ. ಬಲಹೀನತೆಗಳು ಮೊದಲು  ತಾವು ಬೆಳೆಯುವದಕ್ಕಾಗಿ ಆಕರ್ಷಣೀಯವಾಗಿ ಕಾಣುತ್ತವೆ. ಕಾಲು ಹಿಡಿಯುತ್ರವೆ. ಕಾಲೆಳದು ತನ್ನ ಸಮಾನವಾಗಿ ತರುತ್ತವೆ. ನಂತರ ನಮ್ಮ ತಲೆಯಮೇಲೆ ಕುಳಿತು ತಾಂಡವ ಆಡುತ್ತವೆ. ಈ ತೆರದಲ್ಲಿ ನಮ್ಮನ್ನು ದುರ್ಬಲನನ್ನಾಗಿ ಮಾಡುತ್ತವೆ. ಈ ತೆರದಲ್ಲಿ ನಾವೂ ಬಲಹೀನರೇ  ಆದರೆ ನಮ್ಮ ಅವಸ್ಥೆ ಗೋವಿಂದ.... ಹಾಗಾಗಿ ನಾವು ಬಲಿಷ್ಠರಾಗಲೇಬೇಕು.  ಬಲಹೀನತೆಗಳಿಂದ ದೂರೋಡಬೇಕಾ... ?? ಬಲಹೀನತೆಗಳನ್ನು ದೂರಮಾಡಬೇಕು. ಇಲ್ವೇ ನಾವಾದರೂ ದೂರ ಹೋಗಲೇಬೇಕು. ಆದರೆ ಕೆಲ ಬಲಹೀನತೆಗಳನ್ನು ಪಕ್ಕದಲ್ಲಿಯೇ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಬರತ್ತೆ, ಅನಿವಾರ್ಯತೆ ಇರತ್ತೆ. ಆಗ ನಾವು ಬಲಿಷ್ಠರಾದರೆ ಸಾಕು. ಬಲಹೀನತೆಗಳೆಲ್ಲ ಹೀನವಾಗಿಯೇ, ಹಡೆ ಬಿಚ್ಚದಹಾಗೆಯೇ ಕುಳಿತುಕೊಳ್ಳುತ್ತವೆ. ಬಲಹೀನತೆಗಳನ್ನೇ ದಾಸರನ್ನಾಗಿ ಮಾಡಿಕೊಂಡ ಒಂದಾದರೂ ನಿದರ್ಶನ ಸಿಗಬಹುದೆ... ?? ಸ್ವಯಂ ಬಲಿಷ್ಠರು ಶ್ರೀ

Vishnu nyasa

*ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....* ಹಿತವಾದದ್ದು ಒಳಿತಾದದ್ದು ಅಂತ ಏನಿದೆ ಅದು ಎಂದಿಗೂ ದುರ್ಲಭವೇ. ಅಹಿತವಾದದ್ದು ಕೆಟ್ಟದ್ದು ಅಂತ ಏನೇನಿದೆ ಅದೆಲ್ಲವೂ ಅತ್ಯಂತ ಸುಲಭವೇ. ಅಂತೆಯೇ ಧರ್ಮ ಅತ್ಯಂತ ದುರ್ಲಭ. ಸತ್ಯ ದುರ್ಲಭ. ದಯೆ ಕ್ಷಮೆ ದುರ್ಲಭವೇ. ಸಹನೆ ಅತೀ ದುರ್ಲಭ. ಜ್ಙಾನ ಇದುವೂ ದುರ್ಲಭವೇ. ಅಧರ್ಮ, ಅಜ್ಙಾನ, ದ್ವೇಶ, ಮಾತ್ಸರ್ಯ, ಮೊದಲಾದ ಎಲ್ಲವೂ ಅತ್ಯಂತ ಸುಲಭವೇ ಆಗಿದೆ ಇಂದಿನ ಕಾಲದಲ್ಲಿ..... ಇಂದಿನ ಕಾಲದಲ್ಲಿ ನಮ್ಮ ಬ್ರಾಹ್ಮಣ ಯುವಕರಿಗೆ ಓದು ದುರ್ಲಭ, ಕೆಲಸ ದುರ್ಲಭ, ಧರ್ಮ ದುರ್ಲಭ, ಮದುವೆ ದುರ್ಲಭ, ಸೌಖ್ಯ ದುರ್ಲಭ, ಹಣ ದುರ್ಲಭ, ಪ್ರತಿಷ್ಠೆ ಕೀರ್ತಿಗಳೂ ದುರ್ಲಭ,  ಶಾಂತಿ ಸಮಾಧಾನ ದುರ್ಲಭ, ಸಂಧ್ಯಾವಂದನೆ ಪೂಜೆ ಮಹಾದುರ್ಲಭ, ಪಾಠ ಉಪನ್ಯಾಸಗಳಂತೂ ಹೇಳತೀರದಷ್ಟು ದುರ್ಲಭ. ಹೀಗೆ ಇಂದಿನ ಯುವಕರು ಪಡೆಯಬೇಕಾದದ್ದು ಏನೇನಿದೆ ಅದೆಲ್ಲವೂ ದುರ್ಲಭವೇ ಆಗಿದೆ. ಉತ್ತಮ ಸ್ನೇಹಿತರು ಸಿಗುವದು ದುರ್ಲಭ. ಸ್ನೇಹ ಬೆಳಿಸಿಕೊಳ್ಳುವದು ಇನ್ನೂ ದುರ್ಲಭ. ಸ್ನೇಹ ಉಳಿಸಿಕೊಳ್ಳುವದಂತೂ ಮಹಾ ದುರ್ಲಭ. ಇದೇರೀತಿ ಬಂಧುಗಳು, ಕುಲ, ಸಮಾಜ, ಕುಲ ಗುರುಗಳು, ಆಪ್ತರು, ಹಿತೈಷಿಗಳು, ಮಾರ್ಗದರ್ಶಕರು, ಪ್ರತಿಯೊಂದೂ ದುರ್ಲಭವೇ..... *ಕೆಟ್ಟದ್ದನ್ನು ಹೇಳುವವರು ನೂರು ಜನರು ಸಿಗಬಹುದು, ಸಿಕ್ಕೇ ಸಿಗುತ್ತಾರೆ. ಒಳಿತನ್ನು ಹೇಳುವವರು ಸಿಗಲ್ಲ. ಸಿಕ್ಕರೂ ಮಾತು ಕೇಳಲು‌ ಮನಸ್ಸೇ ಆಗಲ್ಲ.... ಅನಾಯಾಸೇನ ಅವ