Posts

Showing posts from May, 2020

*ದಾನವೇ ಜಯಕೆ ದಿವ್ಯ ಉಪಾಯ..*

Image
*ದಾನವೇ ಜಯಕೆ ದಿವ್ಯ ಉಪಾಯ..* ಸೋಲಿಗೆ ಕಾರಣವಾದ ಕಷ್ಟಗಳನ್ನು ಎತ್ತಿಕಟ್ಟಿ,  ಅಪಜಯವನ್ನು ಸೊಳಿಸಿ,  ಅಪಮೃತ್ಯುವನ್ನು ಓಡಿಸಿ, ರೋಗಗಳನ್ನು ಹೆಣ ಎತ್ತಿ, ಪಾಪಗಳನ್ನು ಕಳಚಿ, ಗೆಲವು ನಮ್ಮದಾಗಿಸಲು ಒಂದು ಸುಂದರ ಉಪಾಯ *ಅದು ದಾನ.* ಅಂತೆಯೇ ಹಿಂದಿನ ರಾಜಾಧಿರಾಜರುಗಳು ನಿತ್ಯವೂ ದಾನ ಮಾಡುತ್ತಿದ್ದರು. ಇಂದಿನ ರಾಜಸ್ಥಾನದಲ್ಲಿ ಇದ್ದು ವಿದ್ವಾಂಸರ ಪೋಶಿಸುವ ಜವಬ್ದಾರಿ ಪೆತ್ತ ಅನೇಕ ಯತಿಗಳು, ಆಚಾರ್ಯರುಗಳು, ಸದ್ಗೃಹಸ್ಥರು ನಿತ್ಯ, ಮಾಸಿಕ, ವಾರ್ಷಿಕ  ವಿಭಾಗಗಳನ್ಬು ಮಾಡಿಕೊಂಡು ದಾನಮಾಡುವ ಪಾರಿಪಾಕವನ್ನು ಉಳಿಸಿದ್ದಾರೆ. *ಇಂದಿನ ಆಪತ್ತಿನಲ್ಲಿ ದಾನ...*  ಅನ್ನ ಮತ್ತು ಹಣ ಇಂದು ಅನಿವಾರ್ಯ. ಇಂದಿನ ಈ ಸ್ಥಿತಿಯಲ್ಲಿ ಹಣ ಸಂಪಾದನೆ ನಿಂತಿದೆ. ತುತ್ತಿನ ಅನ್ನಕ್ಕೆ ಕಷ್ಟವಾಗಿದೆ. ಈ ಪರಿಸ್ಥಿತಯಲ್ಲಿಯ "ಒಂದು ರೂಪಾಯಿಯ ದಾನ, ಒಂದು ತುತ್ತಿನ ದಾನ ಮಹಾಮೇರುವಿಗೆ ಸಮ" ಎಂದರೆ ತಪ್ಪಾಗದು.  *ದಾನಂ ಧೃವಂ ಫಲತಿ* ಯೋಗ್ಯರಿಗೆ ಪಾತ್ರರಿಗೆ ಕೊಡುವ ದಾನ ಶೀಘ್ರದಲ್ಲಿ ಸ್ಥಿರವಾದ ಫಲ ತಂದು ಕೊಡತ್ತೆ.  ಯೋಗ್ಯರಾದ , ವಿಷ್ಣು ಭಕ್ಯರಾದ , ತಪೋನಿಷ್ಠರಾದ, ಸದಾಚಾರಿಗಳಾದ, ನಿರಂತರ ಪಾಠಪ್ರವಚನ ದೀಕ್ಷಾಬದ್ಧರಾದ, ನಮ್ಮ ಕರ್ನಾಟಕ ಆಂಧ್ರ ತೆಲಂಗಾನಾ ಮಹಾರಾಷ್ಟ್ರ ತಮಿಳುನಾಡು ಈ ಪ್ರಾಂತಗಳಲ್ಲಿ ನೂರಾರು ವಿದ್ವಾಂಸರು, ಪುರೋಹಿತರು, ಪೂಜಾದಿಗಳಲ್ಲಿಯೇ ರತರಾದ ಸದ್ಗೃಹಸ್ಥರು ಸಿಗುತ್ತಾರೆ. ಆ ಎಲ್ಲ ಮಹನೀಯರುಗಳನ್

*ಮಾಡಿದ್ದೇ ಉಣ್ಣುವದು...*

Image
* ಮಾಡಿದ್ದೇ ಉಣ್ಣುವದು...* ಉಣ್ಣುವದು ಎನ್ನುವದೇನಿದೆ ನಾವು ಮಾಡಿದ್ದೇ. ನಾನು ಮಾಡದಿರುವದು ನನ್ನಿಂದ ಉಣ್ಣುವದಾಗುವದಿಲ್ಲ. ಇನ್ನೊಬ್ಬರು ಮಾಡಿದ್ದೂ ನಾನು ಉಣ್ಣುವದಾಗುವದಿಲ್ಲ.  ಏನು ಉಣ್ಣುವ ಹೆಬ್ಬಯಕೆ ಇದೆ ಅದೇ ಮಾಡುವದು ಶ್ರೇಷ್ಠ.  *ಒಂದು ಸುಂದರ ಕಥೆ...* ಸೋಮಕ ರಾಜ. ಆ ರಾಜನಿಗೆ ನೂರು ಜನ ಹೆಂಡತಿಯರು. ಒಬ್ಬರಿಗೂ ಸಂತಾನವಿರಲಿಲ್ಲ. ಕೊನೆಗೆ ಮುಪ್ಪು ಬರುವ ಹಂತ ಬಂದಾಗ ಒಂದು ಸಂತಾನವಾಗುತ್ತದೆ. "ಜಂತು" ಎಂದು ನಾಮಕರಣ ಮಾಡುತ್ತಾರೆ.  ಹೀಗಾದ ಪ್ರಸಗದಲ್ಲಿ ಒಬ್ಬ ದುಷ್ಟ ಪುರೋಹಿತ ಬಂದು ಹೇಳುವ ಈ "ಜಂತು"ವನ್ನು ಹೋಮದಲ್ಲಿ ಬಲಿಯಾಗಿಸಿ ಅವನ ಹವನದ ಹೊಗೆಯನ್ನು ನಿನ್ನ ನೂರು ಜನ ಹೆಂಡತಿಯರು ಸ್ವೀಕರಿಸಿದರೆ ನಿನಗೆ ನೂರು ಜನ ಮಕ್ಕಳಾಗುತ್ತಾರೆ ಎಂದು. ಉತ್ಸಾಹಿತನಾದ ರಾಜ ಆ ಕ್ರಮದಲ್ಲಿಯೇ ಯಾಗ ಮಾಡಿ, ಹಿರೆಯ ಮಗನನ್ನು ಕೊಂದು, ಯಾಗಪೂರ್ಣ ಗೊಳಿಸಿ, ತಾನೂ ನೂರು ಜನ ಮಕ್ಕಳನ್ನು ಪಡೆಯುತ್ತಾನೆ.  *ಪುತ್ ನರಕದಿಂದ ರಕ್ಷಿಸುವವ ಪುತ್ರ* ಪುತ್ ಎಂಬ ನರಕದಿಂದ ಪಾರು ಮಾಡುವ ಮಗ ಹಿರೆಯ ಮಗ. ಅವನನ್ನೇ  ಸಂಹರಿದ್ದಕ್ಕೆ ಮಹಾ ಘೋರ ನರಕ ರಾಜನಿಗೆ. ಸಂಹಾರಕ್ಕೆ ಪ್ರೇರಕ ಗುರುವಿಗೂ ಘೋರ ನರಕ.  *ಇಬ್ಬರಿಗೂ  ನರಕದಲ್ಲಿ ಭೆಟ್ಟಿ...* ನರಕದ ದುಃಖದಲ್ಲಿ ಮುಳುಗಿದ ಗುರುವಿನ ಘೋರ ದುಃಖವನ್ನು ಕಂಡು ಮರುಗಿದ ರಾಜ. ನನಗಾಗಿ  ಯಾಗ ಮಾಡಿಸಿದ್ದಾರೆ  ಗುರು. ಹಾಗಾಗಿ ್ಉರುವಿನ ದುಃಖ 

*ಸತ್ಯಸಂಧತೀರ್ಥ ಸದ್ಗುರುಂ ಭಜೇನಿಶಮ್*

Image
*ಸತ್ಯಸಂಧತೀರ್ಥ ಸದ್ಗುರುಂ ಭಜೇನಿಶಮ್* ಜ್ಙಾನಿಕುಲಚಕ್ರವರ್ತಿಗಳಾದ ಶ್ರೀಶ್ರೀ ೧೦೦೮ ಶ್ರೀ ಸತ್ಯಸಂಧತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ.  ಶಾಪಾನುಗ್ರಹ ಶಕ್ತರು, ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಹೆದ್ದೊರೆ, ಅಯೋಗ್ಯನಾದ ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಂತೆ ಮಾಡಿದ ಕರುಣಾಳು, ಇಂದಿಗೂ ಲಕ್ಷ ಲಕ್ಷ ಭಕ್ತರಿಗೆ ಅನುಗ್ರಹ ಮಾಡುತ್ತಿರುವ ಕಾಮಧೇನು. ಕುನ್ನಿಯಾದ ಎನ್ನ ಮೆಲೆಯೂ ನಿರಂತರ ಅನುಗ್ರಹಿಸಿ ಹರಿಸುತ್ತಿರುವ ಮಹಾಗುರು *ಶ್ರೀಶ್ರೀ ಸತ್ಯಸಂಧ ತೀರ್ಥ ಶ್ರೀಪಾದಂಗಳವರು.*  ಕಳೆದ ಅನೇಕ ವರ್ಷಗಳಿಂದ ತಪ್ಪದೇ ಕರೆಸಿಕೊಳ್ಳುತ್ತಿದ್ದರು. ಈ ಬಾರಿ ಹೋಗುವದು ನನ್ನಿಂದ ಆಗಲಿಲ್ಲ ಎಂಬ ದುಃಖವಂತೂ ಇದ್ದೇ ಇದೆ. ಮನೆಯಲ್ಲಿಯೇ ವಿಶೇಷವಾಗಿ ಆರಾಧನೆ ಮಾಡುವ ಪ್ರಯತ್ನ ನಾವೆಲ್ಲರೂ ಮಾಡೋಣ.  *ಸತ್ಯಭೋಧರ ಅಂತರಂಗರು...* ಶ್ರೀಸತ್ಯಬೋಧತೀರ್ಥ ಶ್ರೀಪಾದಂಗಳವರಿಂದ ಇಪ್ಪತ್ತು ವರ್ಷ ಆಯುಷ್ಯವನ್ನು ಪಡೆದರು. ಭಗವತ್ಪ್ರೀತಿ ಸಾಧನ ಮಹಾ ವಿದ್ಯೆಯನ್ನು ಪಡೆದರು. ಮಹಾ  ಸಂಸ್ಥಾನವನ್ನೂ ಕರುಣಿಸಿದರು. ಮುಂದೇ ಸರ್ವಸ್ವವನ್ನೂ ಪಡೆದುಕೊಂದರು. ನಮ್ಮ ಇಂದಿನ ಆರಾಧ್ಯ ಮುನಿಗಳಾದ   *ಮಹಿಷಿ ಸ್ವಾಮಿಗಳು.*  *ಅಷ್ಟೈಶ್ವರ್ಯಂ ಸತ್ಯಸಂಧಂ ನಮಾಮಿ* ಪಂಢರ ಪುರಕ್ಕೆ ಹೋಗುವ ಮಾರ್ಗಮಧ್ಯದಿ ಪಂಢರಪುರೀಶನಿಗೆ ಮುದ್ರೆ ಕೊಟ್ಟ ಧೀರವಿಠ್ಠಲರಿವರು. ಉತ್ತರದ ಸಂಚಾರದಲ್ಲಿರುವಾಗ ಗಯಾ ಕ್ಷೇತ್ರದಲ್ಲಿ ವಿಷ್ಣುಪಾದವನ್ನೇ ಒಲಿಸಿಕ

ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ

Image
*|| ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ ||* ಅನೈಶ್ಚರ ಜಯಂತೀ ಅಂಗವಾಗಿ ಎಲ್ಲ ವಿಷ್ಣುಭಕ್ತರೂ ವಿಶೇಷವಾಗಿ ಇಂದು ಈ ಸ್ತೋತ್ರವನ್ನು ಪಾರಾಯಣ ಮಾಡಲೇಬೇಕು. ಶನೈಶ್ಚರಾಂತರ್ಯಾಮಿ, ವಾಯ್ವಂತರ್ಯಾಮಿ ನರಸಿಂಹದೇವರ ಕೃಪೆಗೆ ಪಾತ್ರರಾಗೋಣ. ನಮ್ಮೆಲ್ಲರ ಕಷ್ಟ ಆಪತ್ತು ವಿಘ್ನ ಸಮಸ್ಯೆ ಎಲ್ಲದರಿಂದಲೂ ಪಾರಾಗೋಣ. ಸುಲಭೋ ಭಕ್ತಿ ಯುಕ್ತಾನಾಂ ದುರ್ದರ್ಶೋ ದುಷ್ಟ ಚೇತಸಾಮ್ | ಅನನ್ಯ ಗತಿಕಾನಾಮ್ ಚ ಪ್ರಭುಃ ಭಕ್ತೈಕ ವತ್ಸಲಃ | ಪ್ರಣಮ್ಯ ಸಾಷ್ಟಂಗಮಶೇಷ ಲೋಕ ಕಿರೀಟ ನೀರಾಜಿತ ಪಾದಪದ್ಮಮ್ || || ಶ್ರೀ ಶನಿರುವಾಚ || ಯತ್ಪಾದಪಂಕಜ ರಜಃ ಪರಮಾದರೇಣ ಸಂಸೇವಿತಂ ಸಕಲ ಕಲ್ಮಷರಾಶಿನಾಶಮ್ |  ಕಲ್ಯಾಣ ಕಾರಕ ಮಶೇಷ ನಿಜಾನುಗಾನಂ  ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೧|| ಸರ್ವತ್ರ ಚಂಚಲತಯಾ ಸ್ಥಿತಯಾಹಿ ಲಕ್ಷ್ಮ್ಯಾ ಬ್ರಹ್ಮಾದಿವಂದ್ಯಪದಯಾ ಸ್ಥಿರಯಾನ್ಯ ಸೇವಿ | ಪಾದಾರವಿಂದ ಯುಗಲಂ ಪರಮಾದರೇಣ ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೨|| ಯದ್ರೂಪಮಾಗಮ ಶಿರಃ ಪ್ರತಿಪಾದ್ಯ ಮಾದ್ಯ ಆಧ್ಯಾತ್ಮಿಕಾದಿ ಪರಿತಾಪಹರಂ ವಿಚಿಂತ್ಯಮ್ | ಯೋಗೀಶ್ವರೈರಪಗತಾಖಿಲ ದೋಷ ಸಂಘೈಃ ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೩|| ಪ್ರಹ್ಲಾದ ಭಕ್ತವಚಸಾ ಹರಿರಾವಿರಾಸ ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ | ಊರ್ವೋರ್ನಿದಾಯ ತದುರೋ ನಖರೈರ್ದದಾರ ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೪|| ಯ

*"ನೀನು ಕತ್ತೆ" ಎಂದು ಬಯ್ದಾಗ ಕತ್ತೆಯೇ ಆಗಿಬಿಡುತ್ತೇನೆಯಾ....??*

Image
*"ನೀನು ಕತ್ತೆ"  ಎಂದು ಬಯ್ದಾಗ  ಕತ್ತೆಯೇ ಆಗಿಬಿಡುತ್ತೇನೆಯಾ....??* ಯಾವುದೇ ವಸ್ತುವಿನ ಸ್ವೀಕಾರವಾಗುವುದು ಯಾವಾಗ ಅಂದರೆ ಆ ವಸ್ತುವಿನಲ್ಲಿ "ನನ್ನದು" ಎಂಬ ಭಾವನೆ ಇದ್ದಲ್ಲಿ ಮಾತ್ರ. "ನನ್ನದು" ಎನ್ನವದು ಇಲ್ಲವೆಂದಾದಾಗ ಯಾವದನ್ನೂ ನಾನು  ಸ್ವೀಕರಿಸುವದಿಲ್ಲ. ಹೀಗಿರುವಾಗ  "ನನ್ನದು" ಎಂದು ಸ್ವೀಕರಿಸುವಾಗ ಮಾತ್ರ ಸ್ವಲ್ಪ ಏಕಾಗ್ರತೆವಹಿಸಿ ಯೋಚನಾಪೂರ್ಣವಾಗಿ ಸ್ವೀಕರಿಸುವದು ಅನಿವಾರ್ಯ. "ಪ್ರತಿಶತಃ ಅನೇಕಬಾರಿ ಯಾವದನ್ನು ನಾನು ನನ್ನದು ಎಂದು ಸ್ವೀಕರಿಸುತ್ತೇನೆ, ಅದು ನಾನೇ ಆಗಿರುತ್ತೇನೆ". ಏಕೆಂದರೆ  ಅದರಲ್ಲಿ "ನನ್ನದು" ಎಂಬ ಭಾವನೆ ಇದೆ ಆದ್ದರಿಂದ. ಈ ಶರೀರವನ್ನು ನಾನು "ನನ್ನದು" ಎಂದು ತಿಳಿದಿದ್ದೇನೆ ಆದ್ದರಿಂದ ಈ ಶರೀರಕ್ಕೆ ಏನು ಆದರೂ "ನನಗೇ ಆಯಿತೋ ಎಂಬಂತೆ ಫೀಲ್ ಆಗುತ್ತೇನೆ." ಇದು ಉದಾಹರಣೆ ಮಾತ್ರ. ಹಾಗೆಯೇ ಪ್ರತಿಯೊಂದರಲ್ಲಿಯೂ ....  ಇಂದು ಒಂದು ಉಪನ್ಯಾಸ ಕೇಳುತ್ತಿದ್ದೆ. ಅಲ್ಲಿ ತುಂಬ ಸುಂದರವಾಗಿ ಒಂದು ಕಥೆ ಹೇಳುತ್ತಿದ್ದರು. *ನೀನು ಕತ್ತೆ* ಎಂದು ಬಯ್ದರೆ ಅವನು ಕತ್ತೆ ಯಾಗುತ್ತಾನೆಯಾ... ?? ಸರ್ವಥಾ ಇಲ್ಲ ತಾನೆ....  *ನೀನು ಕತ್ತೆ* ಎಂದು ಬಯ್ದಾಗ ಅವನು ಕತ್ತೆಯಾಗುವ ಎಂದೇ ನಾನು ಉತ್ತರಿಸುತ್ತೇನೆ. ಅದು ಹೇಗೇ ಸ್ವಾಮಿ...... ???? ಯಾರೋ ಏನೋ ಬಯ್ದ ಮಾತ್ರಕ್ಕೆ ಅದು ಅವನೇ ಆಗುವದು ಹ

*"ಅಹಂ" ಎಂಬ ಚಕ್ರವ್ಯೂಹ.......*

Image
*"ಅಹಂ" ಎಂಬ ಚಕ್ರವ್ಯೂಹ.......* ಜೀವನ ಇದು ಶಿಕ್ಷೆ ಅಲ್ಲ. ಶಿಕ್ಷೆ ಎಂದು ಆಗಲೇ ಬಾರದು. ಜೀವನ ಪಾಠವೇ ಪ್ರತಿದಿನವೂ ಹೊಸಪಾಠ ಆಗಬೇಕು. ಪ್ರತಿವ್ಯಕ್ತಿಗಳೂ ಹೊಸ ಗುರುವೇ ಆಗಬೇಕು.  ಜೀವನ ಕಲಿಸುವ ಯಾವ ಪಾಠಗಳಲ್ಲಿಯೂ ಪುಸ್ತಕಗಳು ಇರುವದಿಲ್ಲ. ಗುರುಗಳು ಶಿಷ್ಯರು ಮಾತ್ರ ಬಂದು ಹೋಗುತ್ತಿರುತ್ತಾರೆ....  ನಮ್ಮ ನಾನಾ ತರಹದ  ಸಂಬಂಧಗಳಲ್ಲಿ ಸಾಮರಸ್ಯ ಇರುವಾಗ, ಜೀವನದಲ್ಲಿಯೂ ಸಾಮರಸ್ಯವಿರುತ್ತದೆ. ಇಲ್ಲವಾದಲ್ಲಿ ಇಲ್ಲ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಂಡುಕೊಳ್ಳುವ ಕಲೆಯನ್ನು "ಬಾಗಿದ ಮನಸ್ಸು" ನಮಗೆ ಕಲಿಸಿಕೊಟ್ಟರೆ, ಸಾಮರಸ್ಯಕೆಡುವಂತಹ ಕಲೆಯನ್ನು "ಅಹಂ" ಕಲಿಸುತ್ತದೆ.   *ಶಿಷ್ಯ ಗುರುಗಳ ಬಳಿ ಬಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಬಗೆ...*  "ಅಹಂ" ಹೇಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ. ತುಂಬ ವಿಚಿತ್ರ. ಒಂದು ಸುಂದರ ಕಥೆ.  ಶಿ..) ಗುರುಗಳೇ !!  "ನಾನು ದುಷ್ಟರ ಸಹವಾಸದಿಂದ ನಾನೊಬ್ಬನೇ  ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದೇನೆ" ಬೇಸರದ ಸಂಗತಿ ಏನೆಂದರೆ ಅವರೆಲ್ಲರೂ ನಿಮ್ಮ ಶಿಷ್ಯರೇ....!! ನಿಮ್ಮ ಯಾವ ಉಪದೇಶವನ್ನೂ ಪಾಲಿಸುತ್ತಿಲ್ಲ....  ತಿಳಿಸಿ ಬುದ್ಧಿ ಹೆಳಿ.  ಗುರು) ಶಿಷ್ಯೋತ್ತಮ ಯಾವ ಉಪದೇಶವನ್ನು ನನ್ನ ಶಿಷ್ಯರು ಪಾಲಿಸುತ್ತಿಲ್ಲ... ?? ಸ್ವಲ್ಪ ಬಿಡಿಸಿ ಹೇಳುತ್ತೀಯಾ... ಶಿಷ್ಯ..) ಓಹ್ ಗುರುಗಳೇ !!

*"ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ"*

Image
*"ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ"*  ರಕ್ಷಕನಾದ ದೇವನೊಬ್ಬನು ಇದ್ದಾನೆ. ನಮ್ಮನ್ನು ಎಡಬಿಡದೇ ರಕ್ಷಿಸುತ್ತಾನೆ ಎಂಬ ಪೂರ್ಣ ಭರವಸೆ ಇರಲೇಬೇಕು. ಇಂದಿನ ದಿನಗಳಲ್ಲಿ "ಹಣವೇ ನಮ್ಮನ್ನು ರಕ್ಷಿಸುವದು" ಎಂಬ ಭ್ರಾಂತಿ ಹೋಗಿ, ದೇವರೇ ನಮ್ಮನ್ನು ರಕ್ಷಿಸುತ್ತಾನೆ ಎಂಬ ಭರವಸೆ ಮೂಡಿಸುವ ದಿನಗಳು.  *ನಾನೂ ಒಂದು ಸಾಕ್ಷಿ....* ಬೆಂಗಳೂರಿನಲ್ಲಿ ಆರವತ್ತು ದಿನಗಳ ವರೆಗೆ ಸಿಕ್ಕು ಹಾಕಿಕೊಂಡೆ.‌ ಹೇಗೆ ನನ್ನ ರಕ್ಷಣೆ ಎಂದು ಸ್ವಲ್ಪ ಗಲಿಬಿಲಿ ಇತ್ತು. ಆದಾಯ ಇಲ್ಲ. ಮನೆ ಇಲ್ಲ. ಏನೂ ಇಲ್ಲ ಎಂಬ ಟೆನ್ಶೆನ್ ಇತ್ತು. ಆದರೆ ದೇವ ಹೇಗೆ ರಕ್ಷಿಸಿದ ಎನ್ನುವದು ಗೊತ್ತೇ ಆಗಲಿಲ್ಲ. ಈ ರಕ್ಷಣೆಯಲ್ಲಿ  ಕೈಚಾಚಿ  ರಕ್ಷಿಸಿದ ಅನೇಕ  (ಪಂ. ಕಟ್ಟಿ ಆಚಾರ್. ಪಂ ವಿದ್ಯಾಧೀಶಾಚಾರ್. ಪಂ ನರಸಿಂಹಾಚಾರ್. ಪಂ. ಆಲೂರು ಶ್ರೀನಿವಾಸಾಚಾರ್. ಪಂ ವಾದಿರಾಜಾಚಾರ್. ಪಂ. ವಸಿಷ್ಠಾಚಾರ್. ಪಂ ಸರ್ವೋತ್ತಮಾಚಾರ್. ಹಾಗೂ ಇನ್ನೂ ಅನೇಕ ಪಂಡಿತರುಗಳು, ಆತ್ಮೀಯರು, ಮಿತ್ರರು. )  ಮಹನೀಯರುಗಳು ಇದ್ದಾರೆ. ಈ  ಎಲ್ಲ ಮಹನೀಯರುಗಳ ಮುಖಾಂತರ ರಕ್ಷಿಸಿದ.  ಆಸ್ಚರ್ಯಮಾಡಿಕೊಳ್ಳಲೂ ಸಮಯಸಿಗದ ಹಾಗೆ, ತಿಳಿಯದ ಹಾಗೆ ಅತ್ಯಂತ ಸುಲಭ ರೀತಿಯಲ್ಲಿ ಆರವತ್ತು ದಿನಗಳನ್ನು ಕಳೆದು, ಸುಸೂತ್ರ ನನ್ನ ಮನೆಗೆ ಕಳುಹಿಸಿದ. ನಮ್ಮ ದೇವ. ಹೀಗೆ ನೆನೆಯಲು ಕೌಶಲ ಕೊಟ್ಟವರು ನಮ್ಮ ಹಿರಿಯರು ಹಾಗೂ ಗುರುಗಳು. ಈ ಸೌಅಗ್ಯ ಸಿಕ್ಕಿದ್ದು ಪೂಜ್ಯ ಆಚಾರ್ಯರು ನನ

*ಕನ್ನಡಿಯಲ್ಲಿ ಕಂಡ ಮುಖ..!!*

Image
*ಕನ್ನಡಿಯಲ್ಲಿ ಕಂಡ ಮುಖ..!!* ಕನ್ನಡಿಯಲ್ಲಿ ಕಾಣುವ ಮುಖ ಸಾಮಾನ್ಯವಾಗಿ ನೈಜ ಮುಖವನ್ನು ಮುಚ್ಚಿಟ್ಟದ್ದೇ ಆಗಿರುತ್ತದೆ. ಅದಾಗುವದು ಇನ್ನೊಬ್ಬರಗಿಂತಲೂ ನಾನು ಭಾರೀ ಎಂದು ತೋರಿಸಲೋ ಅಥವಾ ತಮ್ಮದರ ಮೇಲಿನ ಅಸಂತೃಪ್ತಿಯೋ.....  ನಾನು ಭಾರೀ ಎಂದು ತೋರಿಸುವದೇನಿದೆ ಅದು ಒಂದು ಸ್ಪರ್ಧೆ. ಸ್ಪರ್ಧೆ ಜಗತ್ತಿಗೆ ಹಿತವನ್ನುಂಟು ಮಾಡುವದೇ.. ಆದರೆ ಅಸಂತೃಪ್ತಿ ಏನಿದೆ ಕುಗ್ಗಿಸಿಸಿ ಹಾಕುವಂತಹದ್ದೇ..  ಇತರರು ಸಂತೋಷದಿಂದ ಇರುವದನ್ನು ನೋಡಿದಾಗ ಕೆಲವರಿಗೆ ಸಹಿಸಲೇ ಆಗುವದಿಲ್ಲ. ಇತರರ ಗುಣ ಮೆಚ್ಚುವದು ದೂರದ ಮಾತು, ಇನ್ನೊಬ್ವರು ಮೆಚ್ಚಿದಾಗಲಂತೂ ಕಾಯಿಸಿದ ಸೀಸ ಕಿವಿಗೆ ಹಾಕಿದಂತೆ ಆಗುತ್ತದೆ. ಬಾಡಿಗೆಗೆ ಇರುವ ಮನುಷ್ಯ ಏಸಿ, ಫ್ರಿಡ್ಜ ಮೊದಲಾದದ್ದನ್ನು ತಂದ ಎಂದರೆ, ಮಾಲೀಕ,  ಮನೆ ಬಾಡಿಗೆ ಏರಿಸಿಯೇ ಬಿಡುತ್ತಾನೆ. ಬಾಡಿಗೆಯ ಮಕ್ಕಳು ಉತ್ತೀರ್ಣರಾದರೂ ಎಂದಾದರೆ, ರಾತ್ರಿ ಹತ್ತಕ್ಕೇ ಲೈಟ್ ಆರಿಸಬೇಕು ಎಂದು ಫರ್ಮಾನು ಹೂಡುತ್ತಾನೆ. ಅಚ್ಚುಕಟ್ಟು ಮಡಿ ಮಾಡುವ ಮನುಷ್ಯ ಇದ್ದ ಎಂದರೆ ನೀರೇ ಬಿಡುವದಿಲ್ಲ... ಹೀಗೆ ಅನೇಕ... ಇದು ಕೇವಲ ದೃಷ್ಟಾಂತ... (ಯಾರ ವೈಯಕ್ತಿಕವೂ ಅಲ್ಲ.)  ಹೀಗೆ ಮತ್ಸರದ ಕೆಂಡದಲ್ಲಿ ಬೆಂದು ಬಳಲಿಹೋದ ಮಂದಿಯು  ಮನಸ್ಥಿತಿ ಹೀಗೇ ಇರುತ್ತದೇ. ಮತ್ಸರಿ ಇನ್ನೊಬ್ಬರ ದೋಷಗಳನ್ನು ರುಚಿರುಚಿಯಾಗಿ, ಕಣ್ಣಿಗೆ ಕಟ್ಟುವಂತೆ, ಬಣ್ಣಬಣ್ಣವಾಗಿ ವರ್ಣಿಸುತ್ತಾನೆ. ಆದರೆ ಅದೇ ವ್ಯಕ್ತಿಯ ಗುಣವನ್ನು ಮತ್ಸರಿಯ ಮುಂದೆ ಹೇಳ

*ಹೇ ದೇವ !!! ಅನ್ನ ಪಾನವನ್ನು ಬಿಟ್ಟವರನ್ನು ನನ್ನವರೆಂದು ಹೇಳಿಕೊಳ್ಳುವಿ, ಅನ್ಯ ವಿಷಯ ಹರಟುವವರನ್ನು ಕಡೆ ನೂಕುವಿ... ಏನಿದೋ ನಿನ್ನ ವ್ಯವಸ್ಥೆ*

Image
*ಹೇ ದೇವ !!! ಅನ್ನ ಪಾನವನ್ನು ಬಿಟ್ಟವರನ್ನು ನನ್ನವರೆಂದು ಹೇಳಿಕೊಳ್ಳುವಿ, ಅನ್ಯ ವಿಷಯ ಹರಟುವವರನ್ನು ಕಡೆ ನೂಕುವಿ... ಏನಿದೋ ನಿನ್ನ ವ್ಯವಸ್ಥೆ* ಅನ್ನ ಪಾನ ಬಿಟ್ಟು, ಅಥವಾ ಅನ್ನ ಪಾನಗಳಿಲ್ಲದೆ (ದಾರಿದ್ರ್ಯದಿಂದ) ನಿರಂತರ ತಪಸ್ಸು ಮಾಡಿದವರನ್ನು ನಿನ್ನವರೆಂದು ಸ್ವೀಕರಿಸುವ ನಿನ್ನ ಮಹಿಮೆ ಅದ್ಭುತವೇ ಸರಿ. ದಾರಿದ್ರ್ಯಾನುಭವ ಅದು ತಪಸ್ಸೇ ಆಗಿರತ್ತೆ. ಅಂತೆಯೇ "ಯಸ್ಯಾನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಮ್" ಯಾರಿಗೆ ಅನುಗ್ರಹ ಮಾಡಲು ಬಯಸುವೆಯೋ ಅವರಿಗೆ ದಾರಿದ್ರ್ಯವನ್ನೇ ಕೊಡುವೆ" ಇದು ನಿನ್ನ ನೀತಿ.  "ಹಸಿದವನಿಗೆ ಹಳಿಸಿದ ಅನ್ನವೂ ರುಚಿ. ಉಂಡವನಿಗೆ ಪರಮಾನ್ಮವೂ ವಿಷವೇ"  ಹಸಿದವ ದೇವರನ್ನು ನೆನೆಯುತ್ತಾನೆ. ಉಂಡವ ದೇವರನ್ನು ಮರೆತು ನಿದ್ರೆಗೆ ಜಾರುತ್ತಾನೆ. ಇಲ್ಲವೋ ಹಾಳು ಹರಟೆಯಲ್ಲಿ ತೊಡಗುತ್ತಾನೆ. ಆದ್ದರಿಂದಲೇ ಹಸಿದವ ದೇವರಿಗೆ ಬಲುಪ್ರೀತಿ. ಬಿಟ್ಟವನ ಮೇಲೆ ದೇವರಿಗೆ ಹೆಚ್ಚಿನಮಟ್ಟದ ಪ್ರೀತಿ. ಹಸಿದ ವ್ಯಕ್ತಿ ಅನ್ನ ದಾನ ಮೊದಲಾಗಿ ಏನು ಪಡೆದರೂ ಕೈ ಮುಗಿದು ಸ್ವೀಕರಿಸುತ್ತಾನೆ, ತಿಂದು ತೇಗಿದವ ಎಲ್ಲವನ್ನೂ ಅಲ್ಲಿಯೇ ಬಿಸಟು ಬರುತ್ತಾನೆ.  ಅನ್ಯವಿಷಯದಲ್ಲಿ ಇಳಿದ ವ್ಯಕ್ತಿ ದೇವರಿಂದ ಬಲುದೂರ. ದೇವರ ಹಾಗೂ ದೇವತಾ ಸ್ವಭಾವದವರ ಗುಣ ಮೆಚ್ಚಿದರೆ ಹೊಟ್ಟೆ ಉರಿದುಕೊಳ್ಳುವ.  ದೇವರನ್ನೇ ಕಡೆ ಮಾಡಿಬಿಡುತ್ತಾನೆ. ಅನ್ಯವಿಷಯ ಎಂದರೆ ದೇವರು, ದೇವರವರು, ಶಾಸ್ತ್ರ , ಇವುಗಳನ್ನು ಬ

*ಹೇ ಕೂರ್ಮನೇ ನಿನಗೆ ಎನ್ನ ಅನಂತ ವಂದನೆಗಳು

Image
*ಹೇ ಕೂರ್ಮನೇ ನಿನಗೆ ಎನ್ನ ಅನಂತ ವಂದನೆಗಳು * ಶ್ರೀಹರಿಯ ಅನಂತ ಅವತಾರಗಳು.  ಆ ಎಲ್ಲ ಅವತಾರಗಳಲ್ಲಿ ಅಜಾದಿ ಬಹು, ೧೦೦೮ ವಿಶ್ವಾದಿಗಳು. ನಾರಾಯಣ ನರ ಮೊದಲಾದ ೧೦೦ ಅವತಾರಗಳು. ಅಜಾದಿ ೫೪ ಅವತಾರಗಳು. ಕೇಶವಾದಿ ೨೪. ಮತ್ಸ್ಯಾದಿ ೧೦.  ವಿಶ್ವಾದಿ ೮. ಕೃದ್ಧೋಲ್ಕಾದಿ, ಅನಿರುದ್ಧಾದಿ ೫ ಹೀಗೆ ಅನೇಕ ವ್ಯೂಹಗಳನ್ನು ಪೊತ್ತು ಭುವಿಗಿಳಿದು ಬರುತ್ತಾನೆ ಶ್ರೀಹರಿ.  *ಕೂರ್ಮಾವತಾರ....* ಇಂದು ದಶಾವತಾರ ಗಳಲ್ಲಿ ಎರಡನೇಯದಾದ ಕೂರ್ಮರೂಪಿ ಭಗವಂತ ಅವತಾರ ಮಾಡಿದ ದೊಡ್ಡದಿನ. ಈಗಾಗಲೇ ನರಸಿಂಹ ಜಯಂತಿ ಹಾಗೂ  ವೇದವ್ಯಾಸ ಜಯಂತಿಗಳು ನಿನ್ನೆ ಆಗಿವೆ.  ಇಂದು *ಕೂರ್ಮಜಯಂತಿ.* ನಾನಾತರಹದ ವಿಘ್ನಗಳ ಪರಿಹಾರಕ್ಕೆ ನರಸಿಂಹದೇವರು, ಜ್ಙಾನಕೊಟ್ಟು ಮೊಕ್ಷಕೊಡಲು ಶ್ರೀವೇದವ್ಯಾಸರು ಇರುವವರು. ಹೀಗೆ ಮಹಾನ್ ಉಪಕಾರಗಳು ಈ ಎರಡು ರೂಪಗಳದ್ದು ಒಂದುಕಡೆಯಾದರೆ ಕೂರ್ಮರೂಪಿಯದು ವಿಭಿನ್ನವೇ.  *ಕೂರ್ಮೋ ಹರಿಃ ಮಾಂ ನಿರಯಾದಶೇಷಾತ್ ಪಾತು* ನಿತ್ಯ ಕ್ಷಣಕ್ಷಣಕೂ ಮಾಡಿದ, ಮಾಡುವ ಕರ್ಮ ತುಂಬ. ಮಾಡಿದ ಕರ್ಮಗಳಲ್ಲಿ ಕೆಲವೇ ಪುಣ್ಯಪ್ರದವಾದರೆ, ಉಳಿದ ಎಲ್ಲಕರ್ಮಗಳೂ ಪಾಪಕರ್ಮಗಳೆ. ಆ ಎಲ್ಲ ಪಾಪಕರ್ಮಗಳಿಂದ ಸಿಗುವ ಫಲ ನರಕ...  ಸಂಧ್ಯಾವಂದನೆ ಬಿಟ್ಟರೆ ಪಾಪವಿದೆ, ಸರಿಯಾದ ಸಮಯಕ್ಕೆ ಸಂಧ್ಯಾವಂದನೆ ಮಾಡದಿದ್ದರೆ ಬೇರೆಯದಾದ ಪಾಪವಿದೆ, ಮಂತ್ರೋಚಾರಣೆ ಬಿಟ್ಟರೆ ಪಾಪ. ಸರಿಯಾಗಿ ಮಂತ್ರಗಳನ್ನು ಉಚ್ಚರಿಸಿದಿದ್ದರೆ ಬೇರೆ ಪಾಪ. ಹೀಗೆ ಪ್ರತಿಯೊಂದು

ಸ ತ್ವಂ ನೃಸಿಂಹ ಮಮ ದೇಹಿ ಕೃಪಾವಲೋಕಮ್...*

ಸ  ತ್ವಂ ನೃಸಿಂಹ ಮಮ ದೇಹಿ ಕೃಪಾವಲೋಕಮ್... * ಇಂದು ನರಸಿಂಹದೇವರು ದುಷ್ಟನಾದ ಹಿರಣ್ಯನನ್ನು ಸೆದೆಬಡೆಯಲು ಅವತರಿಸಿದ ಮಹಾ ಸುದಿನ.  ಈ ನರಸಿಂಹ ಎಮ್ಮ ಮನದಲ್ಲಿಯೂ ಅವತರಿಸಬೇಕು.  ಮನದಲ್ಲಿಯ ಎಲ್ಲ ದುಷ್ಟರನ್ನೂ ಸಂಹರಿಸಬೇಕು. ದುಷ್ಟ ಭಾವನೆಗಳನ್ನೂ ಸಂಹರಿಸಬೇಕು. ಹಿರಣ್ಯ ಕಶಿಪುವನ್ನು ಸಂಹರಿಸಲು ಅವತರಸಿದ್ದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ನಮ್ಮೆಲ್ಲರ ಹಿತಕ್ಕಾಗಿ ,  ನಮ್ಮ ಸಮಗ್ರ ಪಾಪಪರಿಹರಿಸಿ , ಎಲ್ಲ ವಿಧ ಮಂಗಳ ಉಂಟು ಮಾಡುವದಕ್ಕಾಗಿಯೇ ಅವತಾರ ಮಾಡಿದ್ದು. ನೃಸಿಹ ದೆವರ ಮಹಿಮೆ ಪರಮಾದ್ಭುತ. ಶಕ್ತಿ ಬಲ ಅನಂತ.  ಶ್ರೀಮದಾಚಾರ್ಯರು ತಿಳಿಸುವಂತೆ ನರಸಿಂಹದೇವರ ನೇತ್ರದ ಮಹಿಮೆಯೇ ಅತ್ಯದ್ಭುತ. ನೇತ್ರದಲ್ಲಿ ಅನಂತ ಅಗ್ನಿಗಳಿಗೆ ಸಮವಾದ, ಈ ಎಲ್ಲ ಅಗ್ನಿಗಳ ಜನಕವಾದ, ಸಂಪೂರ್ಣ ಬ್ರಹ್ಮಾಂಡವನ್ನೇ ಸುಟ್ಟು ಹಾಕುವ ಭಗವಂತನದೇ ಆದ *ಅಗ್ನಿ* ಎಂಬ ರೂಪವಿದೆ.  ಅಪಾರ ಬಲವಿರುವ  ಬ್ರಹ್ಮ ರುದ್ರ ಮೊದಲಾದ ದೇವತೆಗಳನ್ನು ಸುಟ್ಟು ಹಾಕುವ ಮಹಾ ಸಾಮರ್ಥ್ಯ ಕೇವಲ ಆ ನೇತ್ರದ ಅಗ್ನಿಯ ಒಂದು ಕಿಡಿಗೆ ಇದೆ.  ಅನಂತ ಸಾಮರ್ಥ್ಯ ಇರುವ  ನೇತ್ರಾಗ್ನಿಯ ಒಂದು ಕಿಡಿಯ ಚಿಂತನೆ ಸ್ತೋತ್ರ ಜಪ ನಮಸ್ಕಾರ ಹಾಗೂ ಆ ಕಿಡಿಯ ದಯೆ ಇಂದಿಗೂ ನಮ್ಮನ್ನು ಪೀಡಿಸುವ ದುಷ್ಟರನ್ನು ಶಿಕ್ಷಿಸುವದು. ನಮ್ಮನ್ನು ನಿರ್ದುಷ್ಟನನ್ನಾಗಿ ಮಾಡುವದು. ನಮ್ಮಂತಹ ಅನಂತ ಜನರನ್ನು ರಕ್ಷಿಸುವದು. ಕಿಡಿಗೇ ಇಷ್ಟು ಸಾಮರ್ಥ್ಯವಿದ್ದರೆ ಸಂಪೂರ್ಣ ನೇತ

*ಹೃದಯಂಗತ - ಪಂ. ಜಯತೀರ್ಥಾಚಾರ್ಯ ಪುರಾಣಿಕ್*

Image
*ಹೃದಯಂಗತ - ಪಂ. ಜಯತೀರ್ಥಾಚಾರ್ಯ ಪುರಾಣಿಕ್* ಪಂ. ಪುರಾಣಿಕ ಜಯತೀರ್ಥಾಚಾರ್ಯರು ಪರಮಪೂಜ್ಯ ಮಾಹುಲೀ ಆಚಾರ್ಯರರಲ್ಲಿ ಅದ್ಯಯನಮಾಡಿದ ಶ್ರೇಷ್ಠ ಪಂಡಿತರು.  ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಉತ್ತಮ ವಿದ್ವಾಂಸರುಗಳಲ್ಲಿ ಅವರಿಗೂ ಒಂದು ವಿಶಿಷ್ಟ ಸ್ಥಾನ. ಪೂಜ್ಯ ಮಾಹುಲೀ ಆಚಾರ್ಯರ ಆದರ್ಶಗಳ ಪಾಲಿಸುವವರು,  ಅಡವಳಿಸಿಕೊಂಡವರು.  ಅವರ ವಿದ್ವತ್ತು, ಅಧ್ಯಯನ, ಪಾಠ ಪ್ರವಚನ, ಗುರುಭಕ್ತಿ, ದೇವರಲ್ಲಿ ವಿಶ್ವಾಸ,  ನಿಸ್ಪೃಹತೆ, ಜಪ ಪೂಜೆ, ದಾನ, ಅನ್ನದಾನ, ಶಾಸ್ತ್ರ ನಿಷ್ಠೆ ಈ ಒಂದೊಂದು ಗುಣಗಳನ್ನು ನೋಡಿದಾಗಲೂ ತಮ್ಮ ಗುರುಗಳಾದ ಪೂಜ್ಯ ಮಾಹುಲೀ ಆಚಾರ್ಯರರನ್ನೇ ಅನುಸರಿಸುತ್ತಿದ್ದರು ಎಂದು ಸನಿಹ ಇದ್ದವರೆಲ್ಲರಿಗೂ ಅನಿಸುತ್ತಿತ್ತು.  *ನಿರಂತರ ಅಧ್ಯಯನ....* ಎಂಟನೇಯ ವಯಸ್ಸಿಗೆ ವ್ಯಾಪಕ ಉದಾತ್ತ ಗುರಿಯೊಂದಿಗೆ ಮಾಹುಲೀ ಆಚಾರ್ಯರ ಉಡಿಸೇರಿದರು. "ಆಚಾರ್ಯರ ಉಡಿ ಸೇರಿದ ಪ್ರತೀ ಕಾಳೂ ಸಾರ್ಥಕತೆಯನ್ನು ಪಡೆಯಲೇ ಬೇಕು." ಸಾರ್ಥಕತೆಯ ಮಾರ್ಗದಲ್ಲಿಯೇ ಹದಿನಾರು ವರ್ಷಗಳ ಸುದೀರ್ಘ ಅಧ್ಯಯನ ಸಾಗಿತು. ಸರ್ವಮೂಲ, ಸುಧಾ, ತತ್ವಪ್ರಕಾಶಿಕಾ, ನ್ಯಾಯಾಮೃತಾದಿ ವ್ಯಾಸತ್ರಯ, ತರ್ಕ ವ್ಯಾಕರಣ, ಮೀಮಾಂಸಾ, ಅದ್ವೈತ, ವಿಶಿಷ್ಟಾದ್ವೈತ,  ಜ್ಯೋತಿಷ, ಸಾಹಿತ್ಯ, ಧರ್ಮಶಾಸ್ತ್ರ English  ಇತ್ಯಾದಿ ಎಲ್ಲ ಶಾಸ್ತ್ರಗಳಲ್ಲಿಯೂ ಒಂದು ಅದ್ಭುತ ಪರಿಣತಿ ಪಡೆದ ಧೀರಯೋಗಿ ನಮ್ಮ ಜಯತೀರ್ಥಾಚಾರ್ಯರು.  *ಮಹಾ ಗುರುಭಕ್ತ...* ಪರಮಪೂಜ

ಓ ಆಪದ್ಬಾಂಧವ...... ನಿನಗೆ ಎಷ್ಟು ನಮನಗಳು ಸಲ್ಲಿಸಿದರೂ ಕಡಿಮೆಯೇ.. ಅನಂತ ನಮಗಳು*

Image
*ಓ ಆಪದ್ಬಾಂಧವ...... ನಿನಗೆ ಎಷ್ಟು ನಮನಗಳು ಸಲ್ಲಿಸಿದರೂ ಕಡಿಮೆಯೇ.. ಅನಂತ ನಮಗಳು* ಆಪತ್ತುಗಳು ಕಷ್ಟಗಳು ಬಂದಾಗೆಲ್ಲ ಬಾಂಧವನಾಗಿ ಬೆನ್ನಿಗೆ ನಿಲ್ಲುವವ ಶ್ರೀಹರಿ. ಇಂದಿನ ಈ ನಾಲ್ವತ್ತು ದಿನಗಳ ಘೋರ ಆಪತ್ತಿನಲ್ಲಿಯೂ ನನ್ನನ್ನು ಹಾಗೂ ನನ್ನ ಅಣ್ಣನಂತಿರುವ ಪಂ ರಾಘವೇಂದ್ರಾಚಾರ್ಯರನ್ನೂ ಹಾಗೂ ಅಸಂಖ್ಯ  ನನ್ನವರನ್ನು ಕಾಯ್ದವನೂ ನೀನೆ.  *ಆಪತ್ತುಗಳು ಕಷ್ಟಗಳು ಸ್ವಾಭಾವಿಕವಾಗಿ ಸುಖಕ್ಕಿಂತಲೂ ತುಂಬ ಒಳ್ಳೆಯದು.*  ಕಳೆದು ಹೋದ ಸುಖ ನೆನೆಸಿಕೊಂಡಾಗ ನೆನಪಾದಾಗಲೊಮ್ಮೆ ಕಣ್ಣೀರು ಉದರತ್ತೆ. ಕಸಿವಿಸಿಯಾಗತ್ತೆ. ಕರುಳಿನಾಳದಲ್ಲಿ ನರಳಿಕೆ ಹುಟ್ಟತ್ತೆ..... ಅದೆ ಕಳೆದು ಹೋದ ಒಂದು ಕಷ್ಟ ನೆನಿಸಿಕೊಂಡು ನೋಡಿ...??? ತುಟಿಯಂಚಿನಲ್ಲಿ ಸಣ್ಣ ನಗುವಿನ ಮಂದಹಾಸದ ಮುತ್ತುಗಳು ಉದುರುತ್ತವೆ. ಕಷ್ಣವನ್ನು ಅನುಭವಿಸುವಾಗ "ಸಾಕಪ್ಪ ಈ ಜನುಮ" ಎಂದೆನಿಸರಬಹುದು. ನೆನಪು ಮಾಡಿಕೊಂಡರೆ ಮುಖ ಕಮಲ ಅರಳುವದಂತೂ ಸಹಜ. *ಸುಖದ ನೆನೆಪು ಕಣ್ಣೀರನ್ನು, ಆಪತ್ತುಗಳ ನೆನಪು ನಗುವನ್ನು ಉಂಟು ಮಾಡುವದು ಎಷ್ಟು ಸೋಜಿಗ ಅನಿಸುವದಿಲ್ಲವೆ....* ನಗು ತರಿಸುವ ವ್ಯಕ್ತಿಯೇ ಬಾಂಧವ. ಅವನೇ ಸಖ. ಹಿತೈಶಿ.  ಕಷ್ಟವೆಂಬುವದು ಸ್ವಭಾವತಃ ಸುಖಕ್ಕಿಂತ ಒಳ್ಳೆಯದೇ ನಗು ತರಿಸುತ್ತದೆ ಆದ್ದರಿಂದ. ತಾನು ಎದುರಿದ್ದಾಗ ಮಾತ್ರ ಕಾಡುತ್ತದೆ ಆದ್ದರಿಂದಲೂ ಒಳ್ಳೆಯದೆ.  ಸುಖ ಹಾಗಲ್ಲ...... ಕೈಗೆ ಸಿಗುವ ತನಕ ಕಷ್ಟ, ಸಿಕ್ಕನಂತರ ಉಳಿಸಿಕೊಳ್ಳುವ

*ಶ್ರೀಮದ್ವೇಂಕಟ ಭೂಧರೇಂದ್ರರಮಣಃ ಕುರ್ಯಾತ್ಸದಾ ಮಂಗಲಮ್*

Image
*ಶ್ರೀಮದ್ವೇಂಕಟ ಭೂಧರೇಂದ್ರರಮಣಃ ಕುರ್ಯಾತ್ಸದಾ ಮಂಗಲಮ್* ಜಗದೊಡೆಯನಾದ ನಮ್ಮ ಕುಲಸ್ವಾಮಿಯೂ ಆದ ಶ್ರೀಶ್ರೀನಿವಾಸನ ಕಲ್ಯಾಣ ಮಂಗಲಮಹೋತ್ಸವ ಇಂದಿನದಿನವೇ ಜರುಗಿರುವಂತಹದ್ದು. ನಾರಾಯಣನ ನಾನಾವತಾರಗಳ ಜಯಂತೀ ಹಾಗೂ ಕಲ್ಯಾಣೋತ್ಸವಗಳನ್ನು ಕ್ಷೇಮಾಭಿವೃದ್ಧಿಯ ಅಪೇಕ್ಷೆ ಇರುವವರು ಶ್ರೀಶ್ರೀನಿವಾಸನ ಪ್ರೀತಿಯನ್ನು ಬಯಸುವವರು  ಎಲ್ಲರೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಇಂದು ವೈಭವಾಚರಣೆ ಅಸಾಧ್ಯವಾದದ್ದರಿಂದ ಒಂದೆರಡು ಮಹಿಮೆಯನ್ನು ಗುಣಗಳನ್ನು ತಿಳಿಯುವ ಪ್ರಯತ್ನ ಮಾಡೋಣ. *ಶ್ರೀಮನ್ನಾರಾಯಣನ ಉತ್ಸವಗಳು ಏತಕ್ಕೇ...* ಶ್ರೀಮನ್ನಾರಾಯಣನ ನಾನಾ ಅವತಾರಗಳು, ವಿವಾಹಗಳು ಇತ್ಯಾದಿಗಳೆಲ್ಲವೂ ನಮ್ಮ ವೈಭವಕ್ಕಾಗಿ. ಜನ್ಮಗಳ ನಾಶಕ್ಕಾಗಿ ಜಯಂತೀ ಆಚರಿಸಿದರೆ, ವಿವಾಹಾದಿ ಸಕಲ ಸೌಭಾಗ್ಯಕ್ಕಾಗಿ ದೇವರ ಕಲ್ಯಾಣವನ್ನು ಯಥಾಶಕ್ತಿ ಆಚರಿಸುವದು. ಮತ್ತು ಶ್ರೀಮನ್ನಾರಾಯಣನ ಸಂತೃಪ್ತಿ. ಜೊತೆಗೆ ಮನೆಯಲ್ಲಿ ಸದ್ಭಾವನ, ಉತ್ತಮ ವಾತಾವರಣ, ಮಕ್ಕಳಿಗೆ ಆಸ್ತಿಕತೆಯ ಸಂಸ್ಕಾರ, ವೃದ್ಧರಿಗೆ ಮನಸ್ಸಿಗೆ ನೆಮ್ಮದಿ, ಬ್ರಾಹ್ಮಣ ಭೋಜನ, ಅನ್ನಸಂತರ್ಪಣ, ದಾನ ಇತ್ಯಾದಿ ಇತ್ಯಾದಿ ನಾನಾಕಾರಣಗಳಿಂದ ಉತ್ಸವಗಳ ಆಚರಣೆ ನಮ್ಮಲ್ಲಿ ಬಂದಿರುವದು. ಸಂಕ್ಷಿಪ್ತ ಕಥಾ ಶ್ರೀರಾಮಾವತಾರದಲ್ಲಿ ಸೀತೆ ವನದಲ್ಲಿ ಇರುವಾಗ ರಾವಣ ಅಪಹಾರ ಮಾಡುವ ಪ್ರಯತ್ನಮಾಡುತ್ತಾನೆ. ಆ ಕಾಲದಲ್ಲಿ ಶ್ರೀಸೀತಾದೇವಿಯು ತನ್ನ ಸುಂದರ ಪ್ರತಿಕೃತಿಯನ್ನು ನಿರ್ಮಿಸಿ, ಆ ಪ್ರತಿಕೃತಿಯಲ್ಲಿ ಅ

*ಭಯದ ಸುಳಿಯಲ್ಲಿಯೇ ಜೀವನ....*

Image
*ಭಯದ ಸುಳಿಯಲ್ಲಿಯೇ ಜೀವನ....* ಭಯ ಇಲ್ಲದ ಕ್ಷಣವಿಲ್ಲ. ಭಯಭೀತನಿಗೆ ಸೌಲಭ್ಯಗಳಿಲ್ಲ. ಭಯಭೀತ ಸನ್ಮರ್ಗದಲ್ಲಿ ಇರುವ. ಭಯಗ್ರಸ್ತ ಪರಪ್ರಕಾಶನಾಗಿ ದುರ್ಮಾರ್ಗಿಯಾಗುವ.  ಮಾಡಿದ ತಪ್ಪುಗಳ ಭಯ ಒಂದೆಡೆ ಆದರೆ, ಮತ್ತೆ ತಪ್ಪುಗಳನ್ನೇ ಮಾಡಿ ಇನ್ನೂ ಕೆಳಬೀಳುವ ಭಯ ಮತ್ತೊಂದೆಡೆ. ಹೀಗಾಗಿ ಭಯಗಳು  ತನ್ನ ಸುಳಿಯಲ್ಲಿ ನರನನ್ನು ಮೇಲೇಳದ ಹಾಗೆ ಬಂಧಿಸಿ ಇಟ್ಟಿವೆ... . ಭಯದ ಸುಳಿಗಳೇ ಹಾಗೆ....  *ಭಯಗಳು ಎಷ್ಟು ವಿಧ* ಭಯಗಳು ನಾನಾವಿಧ. ಕೆಲವು ಭಯಗಳು ಜೀವನನ್ನು ಎತ್ತರ ಮಟ್ಟಕ್ಕೆ ಒಯ್ದರೆ, ಇನ್ನು ಕೆಲಭಯಗಳು ಮೇಲೇಳದಂತೆಯೇ ಮಾಡುತ್ತವೆ. ಕೆಲ ಭಯಗಳು ಒಳಗೊಳಗೆ ಕುಗ್ಗಿಸಿದರೆ, ಮತ್ತೆ ಹಲವು ಭಯಗಳು‌ ಸರಿದಾರಿಯಲ್ಲಿ ಇಡುತ್ತವೆ.  *ಬೆಂಬಿಡದ ಭೂತ "ಭಯ..."* ಮೊದಲಿಗೆ ಹಾದಿಗೆ ಬಿಟ್ಟು ಏಳೇ ಭಯ ಆವರಿಸಿರುತ್ತದೆ. ಸ್ಕೂಲಿನ ಭಯ... ಪರೀಕ್ಷೆಯ ಭಯ. ಕೆರಿಯರ್ ಭಯ. ಸೆಟ್ಲ ಆಗುವ ಭಯ. ನೌಕರಿಯ ಭಯ. ಪ್ರೇಮ - ವಿವಾಹಗಳ ಭಯ. ಮಕ್ಕಳ ಭಯ. ಸಣ್ಣ ಬೆನ್ನು ನೋವಿನ ಭಯ. ಶುಗರ್ ಮೊದಲಾದ ರೋಗಗಳ ಭಯ. ಮನೆ ಕಟ್ಟುವ ಭಯ. ಕೊನೆಗೆ ಬಿಳಿ ಕೂದಲಿನ ಭಯ... ಹೀಗೆ ಭಯಭೀತನಿಗೆ ಭಯಗಳು ಪೆಡಂಭೂತವಾಗಿ ಬೆನ್ನುಹತ್ತೇ ಇರುತ್ತವೆ. ಮಕ್ಕಳ ಮದುವೆ ಭಯ. ಅವನ ಸೆಟ್ಲಮೆಂಟಿನ ಭಯ. ಮಕ್ಕಳನ್ನು ಬಿಟ್ಟಿರಬೇಕಲ್ಲ ಎಂಬ ಭಯ. ವೃದ್ಧಾಪ್ಯದ ಭಯ. ರೋಗ ರುಜಿನಗಳ  ಕೊನೆಗೆ ಸಾವು ಬಂತಲ್ಲ ಎಂಬ ಭಯ. ಹೀಗೆ ಒಂದಿಲ್ಲ ಒಂದು ಭಯ ಕಾಡುವದು ಸ