*ದೈವೀ ಭಕ್ತಿಯ ದಿವ್ಯ ಮೂರ್ತಿ.....*

*ದೈವೀ ಭಕ್ತಿಯ ದಿವ್ಯ ಮೂರ್ತಿ.....*

ಇಂದು ನಮ್ಮ ಪರಮಗುರುಗಳಾದ ಪರಮಪೂಜ್ಯ  *ಮಾಹುಲೀ (ಪಂ. ಪೂ. ಗೋಪಾಲಾಚಾರ್ಯ ಮಾಹುಲೀ) ಪರಮಾಚಾರ್ಯರ* ಸಂಸ್ಮರಣ ದಿನ..

  *ಉತ್ತುಂಗ* ಎಂಬ ಗ್ರಂಥದಲ್ಲಿಯ ಒಂದು ಮಹಾನ್ ವಿಷಯ.

"ಭಕ್ತಿ" ಜೀವಿಸುವ ಜೀವನ ಒಂದು ಅದ್ಭುತವಾದ ಪರಮುಖ್ಯವಾದ ಒಂದಂಶ. ಭಕ್ತಿಯಿಲ್ಲದವ ಭಾಗವತನಾಗಲಾರ. ಭಕ್ತಿ ಇರುವವ ಅವೈಷ್ಣವನಾಗಲಾರ. ಅತ್ಯಲ್ಪ ಭಕ್ತಿಗೂ ಮುಕ್ತಿಗೆ ನೇರ ಕಾರಣ. ಚುಟುಕು ಭಕ್ತಿಯಿದ್ದರೂ ಸಾಕು ಅವ ಮುಕ್ತಿಯೋಗ್ಯ. 

ಇರಲೇಬೇಕಾದ ಮೊಟ್ಟ ಮೊದಲ ಗುಣ *ಭಕ್ತಿ* ಆದರೆ, ಪಡೆಯಲೇ ಬೇಕಾದ ಅತಿದೊಡ್ಡ ಮತ್ತು ಶ್ರೇಷ್ಠಫಲ *ವಿಷ್ಣುಪ್ರೀತಿ.*

ಪರಮಪೂಜ್ಯ ಪರಮಾಚಾರ್ಯರ ಎಲ್ಲ ಕಾರ್ಯದ ಹಿನ್ನಲೆಯಲ್ಲಿಯೂ ವಿಷ್ಣು ಭಕ್ತಿ ಘಟ್ಟಿಯಾಗಿ ನಿಂತಿದೆ.
ಮಾಡುವ ಕರ್ತವ್ಯ, ಪಡುವ ಕಷ್ಟ, ಹೊಂದಿದ ಸಂಪತ್ತು, ಘಳಿಸಿದ ಕೀರ್ತಿ, ಪಡೆದ ಮರ್ಯಾದೆ, ಮಾಡಿದ ಉಪಕಾರ, ನೀಡಿದ ದಾನ, ಭೋಗಿಸಿದ ರೋಗ, ಅನುಭವಿಸಿದ ಆಪತ್ತು, ಆಚರಿಸಿದ ಧರ್ಮ, ನಡೆಸಿದ ಪಾಠ ಪ್ರವಚನ, ನೆರವೇರಿಸಿದ ಉತ್ಸವಗಳು ಇದೆಲ್ಲದಕ್ಕೂ ವಿಷ್ಣು ಭಕ್ತಿಯೇ ಬುನಾದಿಯಾಗಿತ್ತು.

ಪೂ. ಪರಮಾಚಾರ್ಯರ ಮಾತುಗಳಲ್ಲಿಯೇ ಅವರಿಗಿದ್ದ ವಿಷ್ಣುಭಕ್ತಿಯ ಆಳ, ಹರಹು, ಸಾಂದ್ರತೆಯನ್ನು ತಿಳಿಯೋಣ.

೧) *ವಿಷ್ಣುಭಕ್ತಿ* ಜೀವನದ ಎಲ್ಲ ಕಾರ್ಯಗಳಿಗೆ ಹಿರಿದಾದ ಉದ್ಯೇಶ್ಯವನ್ನು, ಉನ್ನತ ಧ್ಯೇಯವನ್ನು ತಂದು ಕೊಡುತ್ತದೆ.  ಕರ್ತವ್ಯಕರ್ಮಗಳನ್ನು ಮಾಡಲು ಬಲಿಷ್ಠ, ಉತ್ತಮ, ಧೈರ್ಯವಂತರನ್ನಾಗಿ ಮಾಡುತ್ತದೆ.

೨) ದೇವರ ಅರಿವು ಜೀವನ ಸೌಭಾಗ್ಯ. ದೇವರ ಎಚ್ಚರ ಜೀವನ ಸಂಪತ್ತು. ದೇವರ ನಿರಂತರ ಸ್ಮರಣೆ ಜೀವನ ವೈಭವ. ಇವುಗಳನ್ನು ತಂದು ಕೊಡುವದೇ *ವಿಷ್ಣುಭಕ್ತಿ.*

೩) ಭಕ್ತ ದೇವರನ್ನು ಗಾಢವಾಗಿ ನಂಬಿದವ. ಅವನ ಕಾಲಿಗೆ ಬಿದ್ದವ. ಶರಣು ಎಂದವ. ಸ್ವಂತ ಅಸ್ತಿತ್ವ ಇಲ್ಲವೆಂದೇ ತಿಳಿದವ.

"ಭಕ್ತ ನಿರಾಶನಾಗುವ ಅವಷ್ಯಕತೇ ಇಲ್ಲ." ದೇವರ ಬಲವೇ ಅವನ ಬಲ. ದೇವರ ಜ್ಙಾನ ಭಕ್ತನ ದಾರಿದೀಪ. ದೇವರ ಸಂತಸ ಭಕ್ತನಿಗೆ ಸಂತೃಪ್ತಿ.

೪) ದೇವರ ಭಕ್ತಿಯಿಂದ ಜೀವನ ಸುಖಮಯವಾಗುವದು. ಶ್ರಮದ ಕಹಿ ಸಿಹಿಯಾಗುದು. ವಿಪತ್ತು ಸಂಪತ್ತು ಆಗುವದು. ಇದು ಇಂದಿಗೂ ಅನೇಕರ ಅನುಭವದ ಮಾತೂ ಆಗಿದೆ.

೫) ದೇವರ ಭಕ್ತಿಯಿಂದ ಜೀವ ಮುಕ್ತನಾಗುವ. ನಿರ್ಭಯನಾಗುವ. ಅಸಾಧ್ಯವಾದದ್ದು ಎಂಬುವದು ಇರುವದೇ ಇಲ್ಲ.

 ಮನಸ್ಸಿನಲ್ಲು ಹುಮ್ಮಸ್ಸು ತುಂಬುವದು. ಭಕ್ತಿ.  *ಆಸೆ, ಕಾಮನೆ, ಮನೋರಥ, ಸಂಕಲ್ಪಗಳೆಲ್ಲ ಈಡೇರುವದು ದೇವರ ದಯೆಯಿಂದಲೇ ಎಂದು ದೃಢವಾಗಿ ನಂಬಿದವ*  ಭಕ್ತ.

೬) *ಆಪತ್ತು, ವಿಪತ್ತು, ಅತಂಕ, ವಿರೋಧ, ರೋಗ, ಕಷ್ಟ, ದಾರಿದ್ರ್ಯ, ಅಪಕೀರ್ತಿ, ಅಪವಾದ, ಎಡರು ತೊಡರುಗಳು ಬಂದರೂ ದೇವಭಕ್ತ ಹಿಂಜರಿಯದೇ ಮುನ್ನುಗ್ಗುವವ.*

೭) ಭಕ್ತ ತನ್ನನ್ನು ತಾನು ದೇವರಿಗೆ ಸಮರ್ಪಿಸಿಕೊಳ್ಳಬೇಕು. *ದೇವರ ಸಂಕಲ್ಪವೇ ಜಯಿಸಲಿ ಎನ್ನಬೇಕು.*  ಅವನ ಸಂಕಲ್ಪಕ್ಕೆ ತನ್ನನ್ನು ಮಾರಿಕೊಳ್ಳಬೇಕು. ದೇವರ ಸಂಕಲ್ಪವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಇದುವೇ ಮಹಾಸಾಧನೆ ಎಂದಾಗುವದು.

೮) ದೇವರ ನಿಜವಾದ ಭಕ್ತ ಕೀರ್ತಿ, ಯಶಸ್ಸುಗಳನ್ನು ಬಯಸುವದಿಲ್ಲ. ಸಮೃದ್ಧಿ ಸಂಪತ್ತುಗಳನ್ನು ಆಶಿಸುವದಿಲ್ಲ. ಸ್ಥಾನ ಪ್ರತಿಷ್ಠೆಗಳನ್ನು ಕಾಮಿಸುವದಿಲ್ಲ.

ದೇವರ ಭಕ್ತಿಯೇ ಆತನ ಸಂಪತ್ತು. ದೇವರ ಭಜನೆಯೇ ಕೀರ್ತಿ. ದೇವರ ಆರಾಧನೆಯೆ ಪ್ರತಿಷ್ಠೆ ಎಂದೇ ನಂಬಿದವ.

೯) ದೇವರನ್ನು ಪ್ರೀತಿಸುವದೇ ಮಾನವನ ಬದುಕು. ದೇವರನ್ನು ಪ್ರೀತಿಸಲಿಲ್ಲ ಎಂದಾದರೆ ಮಾನವನು ಬದುಕು ವ್ಯರ್ಥ ಭದುಕು. ಆ ಬದುಕು ಹಿಟ್ಟುಕುಟ್ಟಿದಂತೆಯೇ.

೧೦) *ಪ್ರಾರ್ಥನೆಯ ಪೂರ್ವ ವಿನಯದಲ್ಲಿ ನೆಲಕ್ಕುರಳಿರಬೇಕು. ಪಶ್ಚಾತ್ತಾಪದಲ್ಲಿ ಬೆಂದಿರಬೇಕು. ದೈವ ವಿಶ್ವಾಸವನ್ನು ದೃಢವಾಗಿ ನೆಚ್ಚಿರಬೇಕು.* ಅಂದರೆ ಮಾತ್ರ ಪ್ರಾರ್ಥನೆ ಪ್ರಾರ್ಥನೆ ಎಂದಾಗುತ್ತದೆ. ಅದು ಭಕ್ತಿಪೂರ್ವಕವಾಗಿದ್ದರೆ ಮಾತ್ರ ಹೀಗೆ ಆಗಿರುತ್ತದೆ.

ಈ ತರಹದ  ಭಕ್ತಿಗೇ ಸಂಬಂಧಪಟ್ಟ ಆಳವಾದ ನೂರಾರು ಯಾಕೆ ಸಾವಿರಾರು ವಿಚಾರಗಳು ಆ ಮಹಾತ್ಮರಿಂದ ಬರುತ್ತವೆ ಎಂದರೆ ಆ ಮಹಾತ್ಮರು ಎಂಥ ಭಕ್ತರಾಗಿರಬಹುದು ಎಂದು ಅಲ್ಪರಾದ ನಮಗೆ ಊಹಿಸಲೂ ಆಗುವದಿಲ್ಲ. ಇಲ್ಲಿ ಕೆಲವುಮಾತ್ರ ಸಂಗ್ರಹಿಸಿದ್ದೇನೆ.

ಇಂದು ಮಹಾತ್ಮರಾದ ನನ್ನ ಪರಮಗುರುಗಳಾದ, ಆದರ್ಶಗಳ ಗಣಿಗಳೇ ಆದ, ಪರಮಪೂಜ್ಯ ಗುರುಗಳ ಸಂಸದಮರಣ ದಿನ. ಆ ಮಹಾತ್ಮರನ್ನು ನೆನೆಸುವೆ. ಆ ಮಹಾತ್ಮರಿಗೇ ಕೋಟಿ ಕೋಟಿ ವಂದನೆಗಳನ್ನು ಸಲ್ಲಿಸುವೆ. ಆ ಮುಖಾಂತರ ಬೇಡೋಣ ನಿಮ್ಮ ಈ ಭಕ್ತಿಯ ಲೇಶವಾದರೂ ಎಮಗೆ ದಯಪಾಲಿಸಿ ಎಂದು. 🙏🏼🙏🏼🙏🏼🙏🏼🙏🏼

*✍🏼✍🏼✍🏼ನ್ಯಾಸ......*
ಗೋಪಾಲದಾಸ.
ವಿಜಯಾಶ್ರಮ ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*