Posts

Showing posts from May, 2023

ಓ!! ವಿವೇಕಾತ್ಮನೇ ವಿವೇಕವನ್ನೀಯು...*

Image
  ಓ!! ವಿವೇಕಾತ್ಮನೇ ವಿವೇಕವನ್ನೀಯು...* ಆತ್ಮ‌ಮನಸ್ಸು, ಮನಸ್ಸಿನಲ್ಲಿ ವಿವೇಕತೆಯ ಜಾಲ ಹರಡಿಸುವವನು ಶ್ರೀಹರಿ. ಅವನೇ ವಿವೇಕಾತ್ಮ.‌ ಶ್ರೀಹರಿ ಬಿಂಬ. ನಾವು ಪ್ರತಿಬಿಂಬರು. ಪ್ರತಿಬಿಂಬರು ಸರ್ವಥಾ ಬಿಂಬನ ಅಧೀನ. "ನಡದು ನಡೆಸುವ, ನುಡಿದು ನಿಡಿಸುವ" ಇತ್ಯಾದಿ ಇತ್ಯಾದಿ...  ದೇವರನ್ನು ಕಾಣುವದು ಬಾಹ್ಯ ಇಂದ್ರಿಯಗಳಿಗೆ ಸಾಮರ್ಥ್ಯವಿರದು. ಕೇವಲ ಮನಸ್ಸಿಗೆ ಮಾತ್ರ ಸಾಧ್ಯವಿದೆ. ಬಾಹ್ಯ ಪದಾರ್ಥಗಳನ್ನು ನೋಡುವದು ಕಣ್ಣು. ಆದರೆ ಆ ಕಣ್ಣಿನಗೆ ನೂರಾರು ಪದಾರ್ಥಗಳ ಗೊಂದಲವುಂಟು ಮಾಡಿದರೆ, ತೋರಿಸುವ ಕಣ್ಣು ಕಾಣಿಸಲು ಅಸಮರ್ಥವಾಗುತ್ತದೆ. ಹಾಗೆಯೇ ದೇವರನ್ನೇ ಕಾಣುವ ಮನಸ್ಸಿಗೆ ಕೋಟಿ ಕೋಟಿ ಪದಾರ್ಥಗಳ ಸಂಬಂಧಗಳನ್ನು ಹಚ್ಚಿಸಿದಾಗ, ಗೊಂದಲವೋ ಗೊಂದಲವಾಗಿ ಯಾವದನ್ನು ಕಾಣಬೇಕೋ ಅದನ್ನು ಬಿಟ್ಟು ಕಂಡದ್ದು ಕಾಣಲು ತೊಡಗುತ್ತದೆ.  *ನಮ್ಮೊಳಗೆ ದೇವನಿದ್ದಾನೆ. ಪ್ರೇರಕನಾಗಿ ನಿಂತಿದಾನೆ. ನಮ್ಮ ಪರಮ ಹಿತೈಷಿಯಾಗಿಯೇ ಇದ್ದಾನೆ.  ಆ ದೇವರನ್ನು ಕಾಣುವ ನಮ್ಮ ಮನಸ್ಸು ಗದ್ದಲದಿಂದ ತುಂಬಿರುವದರಿಂದ ಅವನ ದಿವ್ಯ ಧ್ವನಿ ಕೇಳದಾಗಿದೆ, ಚುರುಕು ಓಡಾಟ ಕಾಣದಾಗಿದೆ......  ಯಾವದು ಹಿತ, ಯಾವದು ಅಹಿತ ಎಂಬ ವಿವೇಕ ಪೂರ್ಣನಾಗಿ ಯೋಚಿಸಿ, ಮೌನವೆಂಬ  ಝರಡಿ ಹಿಡಿದಾಗ  ಒತ್ತಡಗಳೆಂಬ ಎಲ್ಲ ಅಲೋಚನೆಗಳೂ ಕಸದ ಬುಟ್ಟಿಗೆ ಸೇರುತ್ತವೆ. ಆಗ ಧ್ಯಾನ. ಆ ಧ್ಯಾನದಲ್ಲಿ ದೇವರೇ ದೇವರು .. ನೀನೇ ನೀನು. ಕೇಳುವದು, ನೋಡುವದು, ಮೂಸುವದು, ಸ್ಪರ್ಶಿಸುವದು ಎಲ್ಲವೂ ದೇವರನ

*ಕನ್ನಡಿಯಲ್ಲಿ ಕಂಡ ಮುಖ..!!*

Image
  ಕನ್ನಡಿಯಲ್ಲಿ ಕಂಡ ಮುಖ..!!* ಕನ್ನಡಿಯಲ್ಲಿ ಕಾಣುವ ಮುಖ ಸಾಮಾನ್ಯವಾಗಿ ನೈಜ ಮುಖವನ್ನು ಮುಚ್ಚಿಟ್ಟದ್ದೇ ಆಗಿರುತ್ತದೆ. ಅದಾಗುವದು ಇನ್ನೊಬ್ಬರಗಿಂತಲೂ ನಾನು ಭಾರೀ ಎಂದು ತೋರಿಸಲೋ ಅಥವಾ ತಮ್ಮದರ ಮೇಲಿನ ಅಸಂತೃಪ್ತಿಯೋ.....  ನಾನು ಭಾರೀ ಎಂದು ತೋರಿಸುವದೇನಿದೆ ಅದು ಒಂದು ಸ್ಪರ್ಧೆ. ಸ್ಪರ್ಧೆ ಜಗತ್ತಿಗೆ ಹಿತವನ್ನುಂಟು ಮಾಡುವದೇ.. ಆದರೆ ಅಸಂತೃಪ್ತಿ ಏನಿದೆ ಕುಗ್ಗಿಸಿ ಹಾಕುವಂತಹದ್ದೇ.. ಇತರರು ಸಂತೋಷದಿಂದ ಇರುವದನ್ನು ನೋಡಿದಾಗ ಕೆಲವರಿಗೆ ಸಹಿಸಲೇ ಆಗುವದಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಅನುಭವಕ್ಕೆ ತಂದು ಕೊಂಡಿರುತ್ತಾರೆ.  ಬಾಡಿಗೆ ಮನುಷ್ಯ ಏಸಿ, ಫ್ರಿಡ್ಜ ಮೊದಲಾದದ್ದನ್ನು ತಂದ ಎಂದರೆ, ಮಾಲೀಕ ಮನೆ ಬಾಡಿಗೆ ಏರಿಸಿಯೇ ಬಿಡುತ್ತಾನೆ. ಬಾಡಿಗೆಯ ಮಕ್ಕಳು ಉತ್ತೀರ್ಣರಾದರೂ ಎಂದಾದರೆ, ರಾತ್ರಿ ಹತ್ತಕ್ಕೇ ಲೈಟ್ ಆರಿಸಬೇಕು ಎಂದು ಫರ್ಮಾನು ಹೂಡುತ್ತಾನೆ. ಅಚ್ಚುಕಟ್ಟು ಮಡಿ ಮಾಡುವ ಮನುಷ್ಯ ಇದ್ದ ಎಂದರೆ ನೀರೇ ಬಿಡುವದಿಲ್ಲ... ಹೀಗೆ ಅನೇಕ... ಇದು ಕೇವಲ ದೃಷ್ಟಾಂತ... (ಯಾರ ವೈಯಕ್ತಿಕವೂ ಅಲ್ಲ.)  ಹೀಗೆ ಮತ್ಸರದ ಕೆಂಡದಲ್ಲಿ ಬೆಂದು ಬಳಲಿಹೋದ ಮಂದಿಯು  ಮನಸ್ಥಿತಿ ಹೇಗಿರಬಹುದು ಎಂದು ತಿಳಿಯಲು ಒಂದು ಸುಂದರ ಕಥೆ....  ಒಂದು ಓಫೀಸ್. ಅನೇಕರು ಕೆಲಸಗಾರರು. ಒಬ್ಬ ಸ್ಟೋರ್ ಕೀಪರ್ ಗೆ ಅಲ್ಲೊಂದೇನೋ ಕವರ್ ಸಿಗತ್ತೆ. ತಂದು ಮೆನೆಜರ್ ಕೈಲಿ ಕೊಡುತ್ತಾನೆ. ನೋಡಿದ ಮೇನೆಜರ್ ಎತ್ತಿ ಬಿಸಾಡಿ ಬಿಡ್ತಾನೆ.  ಅಷ್ಟರಲ್ಲಿಯೇ ಆ ಕವರ್ ಅನ್ನು ಇನ್ನೊ