Posts

Showing posts from October, 2020

*ದಾನಂ ಧೃವಂ‌ ಫಲತಿ ಪಾತ್ರಗುಣಾನುಕೂಲ್ಯಾತ್*

 *ದಾನಂ ಧೃವಂ‌ ಫಲತಿ ಪಾತ್ರಗುಣಾನುಕೂಲ್ಯಾತ್* ಅಧಿಕಮಾಸ ಸಾಮಾನ್ಯವಾಗಿ ದಾನ ಧರ್ಮ ವ್ರತಗಳನ್ನು ಸ್ವಾಗತಿಸುವ ಮಾಸ.  ಪ್ರತಿಶತಃ ೧೦೦ ರಷ್ಟು ಎಲ್ಲ ಆಸ್ತಿಕ ಆಸಕ್ತ ಜನರೆಲ್ಲ ವಿಷ್ಣು ಪ್ರೀತಿಗೋಸ್ಕರ ನೂರಾರು ತರಹದ, ತಮಗೆ ಅನುಕೂಲವಾದಷ್ಟು ದಾನಗಳನ್ನು ಮಾಡುತ್ತಾರೆ. ಅಂತಹ ಲಕ್ಷಲಕ್ಷ ದಾನಿಗಳು ಇಂದು ಇದ್ದಾರೆ. ಆ ಎಲ್ಲ ಭಗವದ್ಭಕ್ತರೂ ಕೇವಲ ಭಗವತ್ಪ್ರೀತಿಗೋಸ್ಕರವೇ ದಾನದಲ್ಲಿ ತೊಡುಗುತ್ತಾರೆ.  ನಮ್ಮ ನಮ್ಮ ಕುಲಗುರುಗಳಾದ ಅನೇಕ ಯತಿಗಳು,  ಪೀಠಾಧಿಪತಿಗಳು,  ತಮ್ಮ ಶಿಷ್ಯರಿಂದ ದಾನ ಧರ್ಮಗಳನ್ನು ಮಾಡಿಸಿದ್ದಾರೆ. ತಮ್ಮ ತಮ್ಮ ಶಿಷ್ಯವರ್ಗಕ್ಕೆ ಅನುಕೂಲವಾಗುವ ಎಲ್ಲತರಹದಿಂದಲೂ ಮಾಡಿಸಿದ್ದಾರೆ. *ನಮ್ಮ ಗುರುಗಳಂತೂ (ಮಾಹುಲೀ ಆಚಾರ್ಯರು)  ನಿತ್ಯವೂ ಭಾಗವತ ಗೀತಾಭಾಷ್ಯ ಪಾಠಗಳನ್ನು ಹೇಳುವ ಮುಖಾಂತರ,  ಕನಿಷ್ಠ ಐವತ್ತು ಗಂಟೆಗೂ ಹೆಚ್ಚಕಾಲ ದೇಶದ ಮೂಲೆ ಮೂಲೆಯಲ್ಲಿರುವ ಆಸಕ್ತರಿಗೆಲ್ಲ ಜ್ಙಾನದಾನವನ್ನೇ ಮಾಡಿದ್ದಾರೆ. ತಮ್ಮ ಶಿಷ್ಯರೆಲ್ಲರಿಗೂ ಕರುಣಾಪೂರ್ಣವಾದ ಮಹಾ ಅನುಗ್ರಹದ ಸಮುದ್ರವನ್ಬೇ ಹರಿಸಿದ್ದಾರೆ. ತಮ್ಮ ಎಲ್ಲ ಶಿಷ್ಯರಿಂದಲೂ ಮಾಡಿಸಿದ್ದಾರೆ.*     ದೇಶದ ಉದ್ದಗಲದಲ್ಲಿ ವ್ಯಾಪಿಸಿದ ಉತ್ತಮ ಕಾರ್ಯಕ್ಷಮತೆ ಇರುವ ಅನೇಕ ವಿದ್ವಾಂಸರುಗಳು ತಮ್ಮ ಅನೇಕ ಆತ್ಮೀಯ ಗ್ರಹಸ್ಥರ ಸಹಕಾರದೊಂದಿಗೆ ನೂರಾರು ವಿದ್ವಾಸುರುಗಳಿಗೆ ದ್ರವ್ಯದಾನ ಮಾಡಿಸಿದ್ದಾರೆ, ವಿದ್ವಾಂಸರುಗಳಿಂದ ಜ್ಙಾನದಾನ, ಪಾರಾಯಣ, ಹೋಮಹವನ, ಜಪ ತಪ ಗಳನ್ನೂ ಮಾಡಿಸಿದ್ದಾರೆ. *ಈ ವಿದ್ವ