*ಪಡೆದು ಮರೆಯುವರು ಆಗದೆ, ಕೊಟ್ಟು ಮರೆಯುವರು ಆಗಬೇಕು.....*

*ಪಡೆದು ಮರೆಯುವರು ಆಗದೆ, ಕೊಟ್ಟು ಮರೆಯುವರು ಆಗಬೇಕು.....*

ಮರೆವು ಸಾಮಾನ್ಯ. ಮರೆವುನಲ್ಲಿಯೂ ಮನುಷ್ಯ ತಾ ಎಡವಟ್ಟು ಮಾಡಿಕೊಳ್ಳತ್ತಾನೆ. "ಹೆಚ್ಚು ಪಡೆದೇ ಮರೀತಾನೆ. ಅದಾಗದೆ ಕೊಟ್ಟು ಮರೀಬೇಕು."

ಕೊಟ್ಟದ್ದು ನೆನಪು ಉಳಿಸಿಕೊಳ್ಳುತ್ತಾನೆ. ನಾ ಅದು ಕೊಟ್ಟೆ. ಇದು ಕೊಟ್ಟೆ ಹೀಗೆ. ಕೊಟ್ಟಿದ್ದೇನಾದರೂ ಬಹಳಷ್ಟಿದೆಯಾ... ??? ಅದೂ ಇರದು. ಒಂದು ಸೀರೆ ಧೋತ್ರ ಕೊಟ್ಟಿರುತ್ತಾನೆ. ಅದನ್ನು ನೆನಪಿಟ್ಟು ಕುಳಿತರೆ, ಆಧೊತ್ರ ಸೀರಿ ಇಷ್ಟರಲ್ಲಿ ಎಷ್ಟು ಕೈ ಬದಲಾಗಿರುತ್ತದೆಯೋ ಆ ಭಗವಾನ್ ಜಾನೆ.... ಆದರೆ ನಾ ಕೊಟ್ಟೀನಿ ನಾ ಕೊಟ್ಟೀನಿ ಅಂತ ಮಾತ್ರ ಇದ್ದೇ ಇರುತ್ತದೆ.

ತುಂಬ ಚಿಕ್ಕವರು. ಒಂದು ಪ್ರಸಿದ್ಧ ಕ್ಷೇತ್ರಕ್ಕೆ ಹೊಗಿದ್ದೆವು. ಅಲ್ಲಿ ನಮ್ದೆಲ್ಲ  ಏನೋ ಜೋರು ಖಾರುಬಾರು ನಡದಿತ್ತು. ಆಗ ಒಬ್ಬರು ಬಂದು "ಏ ಮರಿಗಳೆ ಈ ಬಿಲ್ಡಿಂಗ್ ಅದಲಾ, ಅದನ್ನ ನಾನೇ ಕಟ್ಲಿಕ್ಕ ಹಣ ಕೊಟ್ಟಿದ್ದು" ಎಂದು. ನಮಗೋ ಆಶ್ಚರ್ಯ.. ಗೌರವ.. ಇವರಿಗೆ ನಮ್ಮಿಂದೇನರೆ ಅಪಚಾರವಾಯಿತೋ ಏನೋ ಎಂದು ಭಯ...

ಅಷ್ಟರಲ್ಲಿ ವ್ಯವಸ್ಥಾಪಕರು ಬಂದರು. ನಾವು ಹೋಗಿ ಕೇಳಿದೆವು, ಬಿಲ್ಡಿಂಗ್ ಕಟ್ಟಲು ಪೂರ್ಣ ಹಣ ಅವರೇ ಕೊಟ್ಟಿದಾರೆ ಅಂತ ಅಲಾ... ನಮ್ಮಿಂದ ಏನರೆ ಅವಮಾನ ಆಯ್ತೇನೋ ಅಂತ ಘಾಬರಿಯಿಂದ ಹೇಳಿದವು. ಆಗ ವ್ಯವಸ್ಥಾಪಕರು ಹೇಳಿದರು, "ಅವರು ಅಂದು ಕೊಟ್ಟಿದ್ದು ಕೇವಲ ೦೫ ರೂ ಗಳನ್ನು ಮಾತ್ರ" ಎಂದು. ಒಂದೇ ಕ್ಷಣದಲ್ಲಿ ವ್ಯಕ್ತಿಯ ಬಗ್ಗೆ ಇರುವ ಗೌರವ ಭಯ ಜರ್ರ ಎಂದು ಇಳಿದು ಹೋಯ್ತು. ಅಂದು ಅವರು ಕೊಟ್ಟಿದ್ದು ಹೆಚ್ಚೇ.... ಆದರೆ ಅಂದೇ ಅಥವಾ ಇಂದು ಲಕ್ಷ ಲಕ್ಷ ಕೊಡುವವರನ್ನೂ ಕಂಡಿರುತ್ತೇವೆ.

ಇಷ್ಟ್ಯಾಕೆ ವಿವರಿಸಲು ಹೋದೆ ಎಂದರೆ 'ನಾವು  ಕೊಟ್ಟದ್ದೇ ಅಲ್ಪ, ಹೆಚ್ಚೇ ಕೊಟ್ಟಿದ್ದರೂ ನಮಗಿಂತಲೂ ದುಪ್ಪಟ್ಟು ಹೆಚ್ಚು ಕೊಟ್ಟವರು ನೂರು ಮಂದಿ, ಕೊಟ್ಟದ್ದು ನೆನಪಿಟ್ಟು ನಾ ಕೊಟ್ಟೆ ನಾಕೊಟ್ಟೆ ಅನಕೊತ ಕೂತರೆ ಇರುವ ಕೀರ್ತಿಯೂ ನಾಶವಾಗುತ್ತದೆ. ಗೌರವ ಆದರಗಳೂ ದೂರಾಗುತ್ತವೆ" ಆದರೆ.....

ಪಡೆದದ್ದು ಮಾತ್ರ ನೆನಪಿಡು.....
ಪಡೆದದ್ದು ಅತ್ಯಲ್ಪವಾಗಿದ್ದರೂ ಅದನ್ನು ನೆನಪಿಟ್ಟು ನಿರಂತರ ಸ್ಮರಿಸು. ಇದರಿಂದ ಕೊಟ್ಟವರು ನಿರಂತರ ಖುಶಿಯಿಂದ ಇರುತ್ತಾರೆ. ಕೊಟ್ಟದ್ದು ಸಾರ್ಥಕವಾಯ್ತು ಅಂತ ನಿಟ್ಟುಸಿರು ಬಿಡುತ್ತಾರೆ.  ಆಪತ್ತು ಬಂದಾಗ ಮತ್ತೆ ಕೊಡಲು ಮುಂದೆ ಬರುತ್ತಾರೆ. ಅದು ದೇವರೇ ಇರಬಹುದು, ಮತ್ತಿನ್ನಾರೂ ಇರಬಹುದು.

ಕೊಟ್ಟದ್ದನ್ನು ದೇವರೇ ನೆನಸಲ್ಲ. ಅವ ಪಟ್ಟಿ ಮಾಡಿದ್ದರೆ ನಮ್ಮಿಂದ ತೀರಿಸಲೇ ಆಗದು. ದೇವರು ಗುರುಗಳು ನಮಗೆಷ್ಟು ಕೊಟ್ಟಿದ್ದಾರೆ, ಅಷ್ಟಂತೂ ನಾವು ಕೊಟ್ಟಿಲ್ಲ. ಹಾಗಿದ್ದಾಗೆ ಕೊಟ್ಟಿದ್ದನ್ನು ನೆನಪಿಟ್ಟುಕೊಳ್ಳಬೇಕು ಯಾಕೆ... ?? ಅದೇರೀತಿಯಾಗಿ ನಮ್ಮಲ್ಲಿ ಏನೆಲ್ಲ ಇವೆ ದೇಹ ಇಂದ್ರಿಯ ಮನಸ್ಸು ಮನೆ ಹಣ ಧನ ಅನ್ನ ವಸ್ತ್ರ ಮಾನ ಕೀರ್ತಿ ಜ್ಙಾನ  ಅದೆಲ್ಲವೂ ಪಡೆದಿರುವದೇ. ಪಡೆದದ್ದನ್ನು ಮರೆಯುವದು ಏತಕ್ಕೆ..... ???? ಕಾರಣವೇನು... ??

*ಪಡೆದದ್ದನ್ನು ಮರೆತು ಮತ್ತೆ ಎಡವಟ್ಟು ಮಾಡಿಕೊಳ್ಳುವದು ಬೇಡ....*

ಹಿಂದಿನಿಂದ ಪಡೆದದ್ದು ಅಪಾರ. ಆ  ಪಡೆದದ್ದಲ್ಲವನ್ನೂ ಮರೆತಿರುವದಕ್ಕೇನೇ ಹಿಂದಿನ ಯಾವ ವೈಭವವನ್ನು ಇಂದು ನಾವು ಪಡೆದಿಲ್ಲ. ಪಡೆಯಲು ಆಗುವದೂ ಇಲ್ಲ. ಪರೆತಿರುವದಕ್ಕೆ ಕೊಡುವವ ಮುನಿಸಿಕೊಂಡಿದ್ದಾನೆ.  ಅವನ ಮುಂದೆ ನಾ ತುಂಬ ಕೀಳಾಗಿದ್ದೇನೆ.

*ಕೊಟ್ಟದ್ದನ್ನು ಮರೆತವ ದೊಡ್ಡವ, ಪಡೆದದ್ದನ್ನು ನೆನಿಸುವವ ಜಗತ್ತಿಲ್ಲೆ ಮಾನ್ಯ* ಅಂತೆಯೇ "ಬಲಗೈಯಿಂದ ಕೊಟ್ಟದ್ದು ಎಡಗೈಗೂ ಗೊತ್ತಾಗಬಾರದು" ಎಂದು ನಾಣ್ಣುಡಿ ಬಂದದ್ದೇ ಈ ಕಾರಣಕ್ಕೆ ಇರಬಹುದು.

*ನನ್ನಷ್ಟೋ, ನನ್ಕಿಂತಲೂ ಹೆಚ್ಚೋ ಅಂತೂ ಕೊಡುವವರು ನೂರುಜನ ಸಿಕ್ಕಾರು. ಪಡೆದದ್ದು ಮಾತ್ರ ನಾ ಒಬ್ಬನೇ* ಆದ್ದರಿಂದ.....

 "ಕೊಟ್ಟದ್ದು ಮರೆತು, ಪಡೆದಿದ್ದು ನೆನಸ್ತಾ" ಜೀವನ ಸಾಗಿದರೆ ಜಗತ್ತಿನಲ್ಲಿ  ದೊಡ್ಡವನೂ ಹೌದು, ಮಾನ್ಯನೂ ಹೌದು. ಮೊಟ್ಟ ಮೊದಲ ನಿದರ್ಶನ ಸ್ವಯಂ ದೇವರೇ... ನಂತರ ವಾಯುದೇವರು ಮೊದಲಾದ ದೇವತೆಗಳು.... ಗುರುಗಳು ತಂದೆತಾಯಿಗಳವರೆಗೆ ನೂರಾರಾರು ಸಾವಿರಾರು ನಿದರ್ಶನಗಳು ಸಿಗುತ್ತವೆ. ಇದುವೇ ಒಂದು ಆದರ್ಶ ಎಂದೂ ಸ್ವೀಕರಿಸಬಹುದು.

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*