*ಶ್ರೀ ಶ್ರೀ ಯಾದವಾರ್ಯರ ಆರಾಧನಾ ಮಹೋತ್ಸವ

*ಶ್ರೀ ಶ್ರೀ ಯಾದವಾರ್ಯರ ಆರಾಧನಾ ಮಹೋತ್ಸವ*

ಜ್ಙಾನಿಶ್ರೇಷ್ಠರಾದ, ವಿರಕ್ತಶಿಖಾಮಣಿಗಳಾದ, ವೇದವ್ಯಾಸದೇವರನ್ನೇ ಒಲಿಸಿಕೊಂಡ, ಪೀಠಾಧಿಪತಿಗಳಿಂದಲೂ ವಂದ್ಯರಾದ, ಮಹಾನ್ ಟಿಪ್ಪಣೀಕಾರರಾದ, *ಶ್ರೀ ಶ್ರೀಯಾದವಾರ್ಯರ* ಆರಾಧನಾ ಮಹೋತ್ಸವ ಇಂದು.

ಒಂದು ಕಾಲದ ಭಂಗಾರದ ದೊಡ್ಡವ್ಯಾಪರಸ್ಥರು ಅಂತೆಯೇ ಚಿನಿವಾರರು ಎಂದೇ ಪ್ರಸಿದ್ಧರು.  ಯಾದವಾರ್ಯರ ಪೂರ್ವಾಶ್ರಮದ ಅಣ್ಣಂದಿರು ಮಹಾಜ್ಙಾನಿಗಳು, ಟಿಪ್ಪಣೀಕಾರರು, ವಿರಕ್ತಪುರುಷರು *ಶ್ರೀವೇದೇಶತೀರ್ಥರು.*  ಆ ವೇದೇಶತೀರ್ಥರಲ್ಲಿ ಅಧ್ಯನ ಮಾಡಿದ ಮಹಾನ್ ಮೇಧಾವಿಗಳು ಶ್ರೀ ಯಾದವಾರ್ಯರು.

*ಶ್ರೀಮನ್ಯಾಯಸುಧಾ ವ್ಯಾಖ್ಯಾತೃಗಳು*

ಶ್ರೀಮನ್ಯಾಯಸುಧ ಗ್ರಂಥಕ್ಕೆ ನಾಲಕನೆಯ ಅಥವಾ ಐದನೆಯ ವ್ಯಾಖ್ಯಾನವೇ *ಯಾದುಪತ್ಯ.* ಶ್ರೀಗುರುಸಾರ್ವಭೌಮರಾದ ರಾಯರ ಸಮಕಾಲೀನರು ಯಾದವಾರ್ಯರು. ಶ್ರೀರಾಯರು ಪರಿಮಳ ಸಹಿತ ಶ್ರೀಮನ್ಯಾಯಸುಧಾ ಮಂಗಳ ಮಾಡುವಾಗ *ಯಾದಪ್ಪ ಇದ್ದಿದ್ರೆ ಚೊಲೊ ಆಗ್ತಿತ್ತು* ಎಂದು ಹೇಳಿದರು. ಆಗ ದೂರದಲ್ಲಿ ಕಂಬಲ ಹೊದ್ದು ಕುಳಿತ ವ್ಯಕ್ತಿ *ನಿಮ್ಮ ಯಾದಪ್ಪ  ಇಲ್ಲೇ ಇದ್ದಾನೆ* ಎಂದು ಕೈ ಎತ್ತಿ ಉತ್ತರಿಸಿದರು ಅಂತೆ ಕಥೆ ಕೇಳ್ತೇವೆ. ಇದು ಯಾದುಪತ್ಯ ಟಿಪ್ಪಣಿಯ ಒಂದು ವೈಭವ.

*ಶ್ರೀಮದ್ಭಾಗವತ ಟೀಕಾ*

ಶ್ರೀಮದ್ಭಾಗವತಕ್ಕೆ ವಿಜಯಧ್ವಜರತೀರ್ಥರ ತರುವಾಯ ಟೀಕೆ ಬರೆದ ಮಹಾನುಭಾವರು ಯಾದವಾರ್ಯರು. ಕೇವಲ ಐದು ಸ್ಕಂಧಗಳಿಗೆ ಬರೆದರೂ, ಸಮಗ್ರ  ಭಾಗವತ ಹೇಗೆ ಅಧ್ಯಯನ ಮಾಡಬಹುದು ಎನ್ನುವ ಮಾರ್ಗವನ್ನೆ ತೋರಿಸಿಕೊಟ್ಡ ಮಹಾನ ಗ್ರಂಥ *ಯಾದುಪತ್ಯ.* ಅತ್ಯಂತ ಪುಟ್ಟ ಸ್ಕಂಧ ದ್ವಿತೀಯ ಸ್ಕಂಧ. ಅತೀಕಠಿಣ ಸ್ಕಂಧ ದ್ವಿತೀಯಸ್ಕಂಧವೇ. ಮತ್ತು ತೃತೀಯ ಪಂಚಮ ಸ್ಕಂಧಗಳು. ಇವೆಲ್ಲದಕ್ಕೂ ತಾತ್ಪರ್ಯಕ್ಕೆ ಅನುಗುಣವಾಗಿ, ಸಮಗ್ರತತ್ವಗಳನ್ಮೂ ಅರುಹಿ ಅನುಗ್ರಹಿದ ಮಹಾನ್ ಗ್ರಂಥ *ಭಾಗವತ ಯಾದುಪತ್ಯ*.

*ವಿರಕ್ತ ಶಿಖಾಮಣಿಗಳು*

ಏಳೇಳು ಹಂಡೆ ಹಂಡೆಯ ತುಂಬ ನಿಧಿಸಿಕ್ಕರೆ ಊರೆ ಬಿಟ್ಟು ತೊಲಗಿ ಹೋದ ವಿರಕ್ತರು ನಮ್ಮ ಯಾದವಾರ್ಯರು. ಸಮಗ್ರ ಜೀವನದಲ್ಲಿ *ಯಾವನಾಳಾದುವಾಸ* ಎಂದು ಹೇಳಿದಂತೆ ಜೋಳದ ನುಚ್ಚು ಮಾತ್ರ ತಿಂದು ಜೀವಿಸಿದ, ವಿರಕ್ತ ಶಿಖಾಮಣಿ.

*ವೇದವ್ಯಾಸರನ್ನೇ ಒಲಿಸಿಕೊಂಡ ಪುಣ್ಯಾತ್ಮ*

ಸ್ವಯಂ ತಾವು ಅನೇಕ *ಜ್ಙಾನ ಅಭಯಯುಕ್ತ* ಪರಮ ಸುಂದರ *ಶ್ರೀವೇದವ್ಯಾಸ ದೇವರ ಮೂರ್ತಿಯನ್ಮು* ಮಾಡಿ ಮಾಡಿಸಿ *ವಾಸಿಷ್ಠ ಕೃಷ್ಣ ಮಮ ದೇಹಿ ಕರಾವಲಂಬಮ್* ಎಂದು ಸ್ತೋತ್ರ ಮಾಡಿದರೆ, ಸ್ತುತಿಗೆ ಹಿಗ್ಗಿ ಒಲಿದ ಶ್ರೀವೇದವ್ಯಾಸದೇವರು ಕೈಕೊಟ್ಟು ಕರಾವಲಂಬನ ಮಾಡುತ್ತಾರೆ. ಇದು ಭಕ್ತಿಯ ಒಂದು ವೈಭವ.

*ತಪೋಮೂರ್ತಿಗಳು*

ಕಡು ದಾರಿದ್ರ್ಯ. ಮನಿತುಂಬ ಶಿಷ್ಯರು. ಪೂಜೆಗೆ ಕುಳಿತಿದಾರೆ. ನೈವೇದ್ಯ ಎಂದು ಆಜ್ಙಾಪಿಸಿದರು. ಮನೆಯಲ್ಲಿ ಏನೂ ಇಲ್ಲ. ಅವರ ಧರ್ಮಪತ್ನಿ *ಬುಟ್ಟಿ ಮಣ್ಣು ತುಂಬಿ ಕಳಿಸಿದರೆ* ಇವರ ಜಲಪ್ರೋಕ್ಷಣೆಯ ಪ್ರಭಾವದಿಂದ ಘಮಘಮಸುವ *ಶಿರಾ* ಆಯಿತು ಎಂದು ಕೇಳುತ್ತೇವೆ.

*ಜ್ಙಾನದಲ್ಲಿಯ ದೀಕ್ಷೆ*

ದಿನಕ್ಕೆ ಕನಿಷ್ಠ ಎಂಟರಿಂದ ಹದಿನಾಲ್ಕು ಗಂಟೆಯ ವರೆಗೂ ಅಧ್ಯಯನ ಪಾಠ ಪ್ರವಚನ ಗ್ರಂಥಲೇಕನ ಮೊದಲಾದವುಗಳು ಆಗಲೇಬೇಕು. ಶ್ರಿಷ್ಯರಾದ ಶ್ರೀನಿವಾಸತೀರ್ಥರು *ಹೊಸ ದೀಪಾವಳಿ- ಅಳಿಯತನಕ್ಕೆ*  ಹೋದರಾಗ ಬರುವದು ಒಂದೇ ದಿನ ತಡವಾದ ಮಾತ್ರಕ್ಕೆ ಸ್ವಯಂ ತಾವೇ ತೆರಳಿ *ಎರಡು ಬಿಗಿದು ಅಧ್ಯಯನಕ್ಕೆ* ಹಚ್ಚಿದ ಜ್ಙಾನದ ದೀಕ್ಷೆ ಶ್ರೀ ಯಾದವಾರ್ಯರದ್ದು.

*ಗುರ್ವಾಜ್ಙಾ ಪರಿಪಾಲನೆ*

ವೇದೇಶತೀರ್ಥ ಗುರುರಾಜ ಧುರಂಧರೋಸೌ
ಸ್ವಾತ್ಮಾವಸಾನ ಸಮಯೇ ಯದಶೀಕ್ಷಯನ್ ಮಾಮ್ |
ಕಾಲೋಯಮೀರಸುತ ಶಾಸ್ತ್ರ ವಿಚಾರ ಹೀನಾಃ
ನೀಚೋಚ್ಛ್ರಯಃ ಗ್ರಸಿತ ಸಾಧು ಗುಣೋದಯಶ್ಚ ||
ತಸ್ಮಾತ್ತ್ವಮದ್ಯ ಮರುದಾತ್ಮಜ ದಿವ್ಯಶಾಸ್ತ್ರ ವ್ಯಾಖ್ಯಾನಮೇವ ಸತತಂ ಕುರು ಮಾ ತ್ಯಜೇತಿ ||

ಈ ಕಾಲ ಶ್ರೀಮದಾಚಾರ್ಯರ ಶಾಸ್ತ್ರಾಧ್ಯನದಿಂದ ವಿಮುಖರಾದವರೇ ಆಳುವ  ಮಹಾಕಾಲ. ಪರಮ ನೀಚರಿಗೇ ಉಚ್ಛ್ರಾಯ ಸ್ಥಿತಿ. ಗುಣಗಳಿಗೆ ಅಥವಾ ಗುಣವಂತರಿಗೆ ಉಳಿಗಾಲವಿಲ್ಲದ ಸ್ಥಿತಿ. ಆದ್ದರಿಂದ ಇಂದು ನೀವು ಶ್ರೀಮದಾಚಾರ್ಯರ ಶಾಸ್ತ್ರ ಸತತವಾಗಿ ಓದಲೇಬೇಕು. ಅತ್ಯದ್ಭುತ ವ್ಯಾಖ್ಯಾನಗಳನ್ನು  ಮಾಡಿ  ಸಾಧಿಸಿಲೇಬೇಕು" ಎಂಬ ಆಜ್ಙಾಯನ್ನು ಕೊನೆಯ ಉಸಿರುರುವವರೆಗೂ ಸಾಧಿಸಿದ ಮಹಾನ್ ಗುರುಭಕ್ತರು ಯಾದವಾರ್ಯರು.

ಇಂತಹ ಗುರುಗಳ ಪರಮಪಾವನ ಜೀವನ ನಮ್ಮ ಪಾಲಿಗೆ ಆದರ್ಶಮಯವಾಗಿದೆ. ಪಾಪ ಪರಿಹಾರಕವೂ ಆಗಿದೆ. ಪುಣ್ಯಪ್ರದವೂ ಆಗಿದೆ. ಜ್ಙಾನಾದಿ ಸದ್ಗುಣಪ್ರದವೂ ಆಗಿದೆ. 

ವೇದೇಶಮುನಿಸತ್ಪಾದಪೂಜಾ ಸಂಪ್ರಾಪ್ತವೈಭವಾನ್ | 
ಯಾದವಾರ್ಯಾನ್ ವರಸುಧಾಟೀಕಾಕಾರಾನ್ ವಯಂ ನುಮಃ

ಆ ಮಹಾನ್ ಗುರುಗಳ ಯಥಾಮತಿ ಸಂಸ್ಮರಣ ಮಾಡಿ, ಮೇಲಿನ ಚರಮಶ್ಲೋಕವನ್ನು ಕನಿಷ್ಠ ೧೦೮ ಬಾರಿಯಾದರೂ ಜಪಿಸಿ ಮುಖಾಂತರ  ಆ ಯಾದವಾರ್ಯರ ಅಡೆದಾವರೆಗಳಲ್ಲಿ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾ *ಶ್ರೀಮದ್ಭಾಗವತ ಯಾದುಪತ್ಯ* ನಿರಂತ ಕ್ಷಣಬಿಡದೆ  ಅಧ್ಯಯನ‌ ಮಾಡಿಸಿ, ಜ್ಙಾನಕೊಟ್ಟು , ಭಕ್ತಿ ಬೆಳಿಸಿ , ಗುರು ದೇವತಾ ದೇವರುಗಳಿಗೆ ಪ್ರಿಯನನ್ನಾಗಿ ಮಾಡಿ, ಮೋಕ್ಷಾದಿ ಪುರುಷಾರ್ಥಗಳನ್ನು ದಯಪಾಲಿಸಿ ಎಂದು ಪ್ರಾರ್ಥಿಸುವೆ.

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Anonymous said…
ಪರಮ ಸುಂದರ ಮಹಾ ಅನುಗ್ರಹ

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*