*ವೈಭವದ ನವರಾತ್ರೋತ್ಸವ ಹಾಗೂ ಪ್ರೋಷ್ಠಪದೀ ಶ್ರೀಮದ್ಭಾಗವತ*
*ವೈಭವದ ನವರಾತ್ರೋತ್ಸವ ಹಾಗೂ ಪ್ರೋಷ್ಠಪದೀ ಶ್ರೀಮದ್ಭಾಗವತ*
ಭೂ ವೈಕುಂಠಕ್ಷೇತ್ರವಾದ ಶ್ರೀತಿರುಮಲ ಕ್ಷೇತ್ರದಲ್ಲಿ, ಸರ್ವೋತ್ತಮ, ಸರ್ವವೇದಪ್ರತಿಪಾದ್ಯ, ಅನಂತಗುಣಪೂರ್ಣ, ಅನಂತ, ಸತ್ ಚಿದಾನಂದ ಮೂರ್ತಿಯಾದ *ಶ್ರೀಭೂ ಸಹಿತ ಶ್ರೀಶ್ರೀನಿವಾಸದೇವರ ದಿವ್ಯ ಸನ್ನಿಧಿಯಲ್ಲಿ,* ವೇದಕ್ಕೆ ಸಮವಾದ ಅಂತೆಯೇ ಗ್ರಂಥರಾಜವಾದ ಶ್ರೀಮದ್ಭಾಗವತದ ಪಾಠರೂಪದ ಉಪನ್ಯಾಸ ದಿನಕ್ಕೆ ಕನಿಷ್ಠ ಎಂಟು ಗಂ... ಯಂತೆ ಅತ್ಯಂತ ವೈಭವೋಪೇತವಾಗಿ, *ಅಭಿನವ ಯಾದವಾರ್ಯರಂದೇ ಪ್ರಸಿದ್ಧರಾದ, ಪರಮ ಪೂಜ್ಯ ಮಾಹುಲೀ (ಪಂ.ವಿದ್ಯಾಸಿಂಹಾಚಾರ್ಯ) ಪರಮಾಚಾರ್ಯ* ರಿಂದ ಶ್ರೀಮದುತ್ತರಾದಿಮಠದಲ್ಲಿ ಜರುಗಿತು.
*ಶ್ರೀಮದ್ಭಾಗವತ*
ವಿಜಯಧ್ವಜೀಯ, ಯಾದುಪತ್ಯ, ಶ್ರೀನಿವಾಸತೀರ್ಥೀಯ ಮುಂತಾದ ಅನೇಕ ಟಿಪ್ಪಣೀ ವಿಷಯಗಳಿಂದ ಯುಕ್ತವಾದ, ಶ್ರೀಮಟ್ಟೀಕಾಕೃತ್ಪಾದರು ಟೀಕಾಗ್ರಂಥಗಳಲ್ಲಿ ಸೂಚಿಸಿದ ಮಾರ್ಗದಲ್ಲಿ, ಶ್ರೀಮದ್ಭಾಗವತ ತಾತ್ಪರ್ಯ ಸಹಿತವಾಗಿ ಶ್ರೀಮದ್ಭಾಗವತದ ಉಪನ್ಯಾಸದ ವೈಭವ, ಊಹೆಗೆ ನಿಲುಕದು. ನನಗೆ ಹೇಳಲು ಅಸಾಧ್ಯ ಇಷ್ಟು ನಾನು ಹೇಳಬಹುದು.
*ಉಪನ್ಯಾಸದ ವೈಭವ*
ಪೂ ಆಚಾರ್ಯರ ಜ್ಙಾನದಾನೋದ್ಯಶ್ಯಕವಾದ ಈ ಜ್ಙಾನಸತ್ರ ಕೆಳುಗರಿಗೆ *ಒಂದು ದಿವ್ಯ ಜ್ಙಾನ ಹಬ್ಬದಂತೆ* ಇತ್ತು. ಬಂದ ಪ್ರಮೇಯಗಳು ಕನಿಷ್ಠ ಸಾವಿರಾರು. ಸಾವಿರಾರು ಭಗವದ್ಗುಣಗಳು. ಅನೇಕಾನೇಕ ಭಗವನ್ಮಹಿಮೆಗಳು ಅದಲ್ಲದೇ ಭಗವದ್ಭಕ್ತರಾದ ದೇವತೆಗಳ, ಋಷಿಮುನಿಗಳ, ಚಕ್ರವರ್ತಿಗಳ ಸಂಬಂಧಿಸಿದ ಒಂದೊಂದು ಮಹಿಮೆಗಳು, ವಿಷಯಗಳು, ಅಲ್ಲಲ್ಲಿ ಬಂದ ಉಪದೇಶಗಳು, ಸ್ತೋತ್ರಗಳು, ಕಥೆಗಳು ಕೇಳುಗರಿಗೆ ಮೈ ಮರೆಸುವಂತಿತ್ತು. *ಜ್ಙಾನಬೆಳಿಸುವಂತೆ ಇತ್ತು. ಭಕ್ತಿ ಬೆಳೆಯುವಂತೆ ಆಯ್ತು. ಭರವಸೆ ದೃಢವಾಗುವಂತೆ ಸಾಗಿತು. ನಾವೂ ವಿಷ್ಣು ಭಕ್ತರೇ ಎಂಬ ಭಾವನೆ ಮೂಡಿಸುವಂತಾಗಿತ್ತು.* ಬಂದ ವಿಷಯಗಳನ್ನು ಗ್ರಹಿಸಲು ಆಗದವನ ಬಾಯಲ್ಲಿ ಇಷ್ಟೇ ಹೇಳಬಹುದು. ಬಂದ ವಿಷಯಗಳಿಗೆ ಲೆಕ್ಖವಿಲ್ಲ.
*ಏನು ಪೇಳಲೀ ಇವರ ಮಹಿಮೆ*
ಅತ್ಯಂತ ಪುಟ್ಟದು, ಅಷ್ಟೇ ಕಠಿಣ, ಸಾಧಕನಿಗೆ ಅಷ್ಟೇ ಅತ್ಯುಪಯುಕ್ತ ದ್ವಿತೀಯ ಸ್ಕಂಧ. ಮತ್ತು ಅಗಾಧವಾದ ಜ್ಙಾನಭಾಂಡಾರದಂತೆ ಇರುವ ತೃತೀಯ ಏಕಾದಶ ಸ್ಕಂಧಗಳು. ಇವುಗಳಿಂದ ಸಹಿತವಾದ ಸಂಪುರ್ಣ ಶ್ರೀಮದ್ಭಾಗವತ. ಈ ಸ್ಕಂಧಗಳಲ್ಲಿ ಬಂದ ಸೃಷ್ಟಿ, ಅದರಲ್ಲೂ ಮಹತ್ತತ್ವದ ಸೃಷ್ಟಿ, ಲಯ, ರಕ್ಷಣೆ ಮುಂತಾದ ಅನೇಕ ವಿಷಯಗಳು. ಭಾಗವತ ಧರ್ಮಗಳು, ಅಲ್ಲಿಬಂದ ಭಗವನ್ಮಹಿಮೆಗಳನ್ನು ಅತ್ಯಂತ ಸುಲಲಿತವಾಗಿ ಅತ್ಯಂತ ಕಳಕಳಿಯಿಂದ ಶಿಷ್ಯರಾದ, ಭಕ್ತರಾದ, ನಮಗೆ ಅರುಹಿ, ಉಪದೇಶಿಸಿ, ಉಪನ್ಯಾಸ ಮಾಡಿದ ಪೂಜ್ಯ ಆಚಾರ್ಯರಿಗೆ *ಭೂಯಿಷ್ಠಾಂ ತೆ ನಮ ಉಕ್ತಿಂ ವಿಧೇಮ* ಅನಂತ ನಮಸ್ಕಾರಗಳು ಎಂದಿಷ್ಟು ಹೇಳದೆ ಇನ್ನೇನು ಸಾಧ್ಯವಿಲ್ಲ. ಪೂ. ಆಚಾರ್ಯರದ್ವಾರಾ ಜ್ಙಾನೋಪದೇಶಿಸಿದ *ಶ್ರೀಶ್ರೀನಿವಾಸ* ಕಾಂಚಾಣ ಬ್ರಹ್ಮನಾಗದೇ ಜ್ಙಾನಬ್ರಹ್ಮನೇ ಆಗಿದ್ದ. ಅವನಿಗೆ ಅಧಿಷ್ಠಾನರು ನಮ್ಮ ಗುರುಗಳು ಆಗಿದ್ದರು.
*ನವರಾತ್ರೋತ್ಸವ*
ನಿತ್ಯ ಬೆಳಗಾದರೆ ಜಪ ಪೂಜೆ ಧ್ಯಾನಗಳಲ್ಲಿ ನಿರತ ವಿದ್ವಾಂಸರುಗಳ ದರ್ಶನ. ನಂತರ ಪೂ ಆಚಾರ್ಯರಿಂದ ಭಾಗವತಾಮೃತಪಾನ. ನಂತರ ದೇವರ ವೈಭವದ ನಿತ್ಯ ಒಂದು ಹೊಸದಾದ ವಾಹನದಲ್ಲಿ ಝಗಝಗಿಸುವ ಉತ್ಸವದ ದರ್ಶನ. ಶ್ರೀಮನ್ಯಾಯಸುಧಾ ಹಾಗೂ ಚಂದ್ರಿಕಾ ಮೊದಲಾದ ಗ್ರಂಥಗಳ ಪಾಠ. ನಂತರ ಶ್ರೀನಿವಾಸ ಪ್ರಸಾದ. ಸ್ವಲ್ಪ ವಿಶ್ರಾಂತಿ. ಪುನಃ ರಾತ್ರಿ ಎಂಟುವರೆ ವರೆಗೆ ಭಾಗವತ ಹಾಗೂ ವೆಂಕಟೇಶಕಲ್ಯಾಣಗಳ ಉಪನ್ಯಾಸ. ನಂತರ ರುಚಿರುಚಿ ಯಾದ ಭೋಜನ. ನಂತರ ದೇವರ ಉತ್ಸವ. ಇದಾದ ತರುವಾಯ ನಿತ್ಯ ರಾತ್ರಿ ಕನಿಷ್ಠ ೧೨ ಗಂಟೆಯ ವರೆಗೆ ನಿತ್ಯ ಗುರುಗಳ ಸ್ಮರಣೆ, ಸಂಪ್ರಾದಯದ ವಿಚಾರ, ದೇವರ ದೇವತೆಗಳ ಕಾರುಣ್ಯಬೋಧಕ, ದರ್ಮದಲ್ಲಿ ಆಚಾಎ ವಿಚಾರಗಳಲ್ಕಿ ಸ್ರದ್ಧೆ ಮೂಡಿಸುವ, ಸದ್ವಿಚಾರ ಭೋಧಿಸುವ, ನುರಾರು ತರಹದ ದಿವ್ಯ ಹರಟೆ. ಕೊನೆಗೆ ಶ್ರೀನಿವಾಸನ ಏಕಾಂತ ಸೇವೆಯ ನಾದವನ್ನು ಅಲಿಸಿಯೇ ದಿನ ಕೊನೆಗಾಣುವದು. ಹೀಗೆಯೇ ಒಂಭತ್ತೂ ದಿನಗಳಲ್ಲಿ ನಿತ್ಯದ ದಿನಚರಿಯಾಗಿತ್ತು..
*ಅನ್ನದಾನ*
ಭಾಗವಹಿಸಿದ ವಿದ್ವಾಂಸರು ನೂರಾರುಜನ. ನೂರು ಜನ ವಿದ್ಯಾರ್ಥಿಗಳು. ನೂರಾರುಜನ ಆಸಕ್ತ ಸದ್ಗೃಹಸ್ಥರು. ಈ ಎಲ್ಲರಿಗೂ ಊಟ ವಸತಿ ನೀರು ಮೊದಲು ಮಾಡಿ ಎಲ್ಲವನ್ನೂ ಈ ಓಂಭತ್ತು ದಿನಗಳ ವ್ಯವಸ್ಥೆಯನ್ನು ನೋಡಿದರೆ ಅಬ್ಬಬ್ಬಾ ಅನಿಸದೆ ಇರದು.
ಉತ್ತರಾದಿ ಮಠದಿಂದ ನಡೆದ, *ಪಂ.ಪಾಂಡುರಂಗಾಚಾರ್ಯರು* ನಡೆಸಿದ, ನಿತ್ಯವೂ ಅತ್ಯಂತ ರುಚಿಕರವಾದ, ವೈಭವದ ಅನ್ನದಾನ ನೋಡಿದರೆ ಒಂದಂತೂ ಅನಿಸಿತು ಶ್ರೀನಿವಾಸ ಕಾಂಚಾಣ ಬ್ರಹ್ಮನಾಗದೆ *ಶ್ರೀಶ್ರೀನಿವಾಸ ಅನ್ನ ಬ್ರಹ್ಮನೂ* ಆಗಿದ್ದಾನೆ ಎಂದು..
*ದಾನ ದಕ್ಷಿಣೆಗಳ ವೈಭವ*
ಈ ಒಂಭತ್ತೂ ದಿನಗಳಲ್ಲಿ ನಡೆದ ವೈಭವದ ಎಲ್ಲತರಹದ, ಭಾಗವಹಿಸಿದ ಎಲ್ಲರೂ ಮಾಡಿದ ನಾನಾತರಹದ *ದಾನ* ನೋಡಿದರೆ, ದಾನದ ಒಂದು ವೈಭವವೇ ಬೆರೆಯದೇ ಆಗಿತ್ತು. ನಿತ್ಯದಲ್ಲೂ ಜಗದ್ಧಿತಕ್ಕೆ ನಡೆಯುವ ಬೃಹತೀ ಸಹಸ್ರ, ಮನ್ಯುಸೂಕ್ತ, ಧನ್ವಂತ್ರಿ ಮೊದಲಾದ ಹೋಮಗಳು, ತನ್ನಿಮಿತ್ತ ನಡೆಯುವ ದಾನಗಳು ಎಲ್ಲವೂ ಒಂದೊಂದು ವೈಭವವೇ. ಈ ದಿನಗಳು ದ್ವಾಪರಯುಗದಂತೆ ಕಂಗೊಳಿಸಿದವು.
*ಧನ್ಯರೋ ಮಾನ್ಯರೋ*
ಈ ಎಲ್ಲ ತರಹದ ಭವ್ಯ ಕಾರ್ಯಕ್ರಮಗಳಲ್ಲಿ, ಮುಖ್ಯವಾಗಿ *ಶ್ರೀಶ್ರೀನಿವಾಸನ ನವರಾತ್ರೋತ್ಸವದಲ್ಲಿ* ಭಾಗಿವಹಿಸಿದ ಎಲ್ಲರೂ ಗುರುಗಳ ಅನುಗ್ರಹದಿಂದ ಅಪಾರ ಪುಣ್ಯ ಸಂಪಾದನೆ ಮಾಡಿಕೊಂಡಿದ್ದಕ್ಕೆ *ಧನ್ಯರು.* ಗುರ್ವನುಗ್ರಹದ್ವಾರಾ *ಭಗವತ್ತತ್ವ ಜ್ಙಾನ* ಸಂಪಾದಿಸಿಕೊಂಡಿದ್ದಕ್ಕೆ *ಮಾನ್ಯರು* ಎಂದರೆ ತಪ್ಪಾಗದು.
ಈ ಮಹಾ ಸೌಭಾಗ್ಯ ಒದಗಿಸಿಕೊಟ್ಟ ಶ್ರೀಶ್ರೀಸತ್ಯಾತ್ಮತೀರ್ಥರ, ಪೂಜ್ಯ ಆಚಾರ್ಯರ ಅಡೆದಾವರೆಗಳಲ್ಲಿ ಅನಂತ ಅನಂತ ನಮಸ್ಕಾರಗಳನ್ನು ಸಮರ್ಪಿಸುತ್ತಾ, ಪಂ ಪಾಂಡುರಂಗಾಚಾರ್ಯರಿಗೂ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾ *ಮಹಾಕಾರುಣಿಕನಾದ ಶ್ರೀಶ್ರೀನಿವಾಸನಿಗೆ ಅನಂತಾನಂತ ಒಂದನೆಗಳಂದಿಗೆ ಈ ತರಹದ ಸೌಭಾಗ್ಯ ಪುನಃ ಪುನಃ ಕರುಣಿಸು ದಯಪಾಲಿಸು.* ಎಂದು ಪ್ರಾರ್ಥಿಸುವ.....
*✍🏽✍🏽✍ನ್ಯಾಸ.....
ಗೋಪಾಲದಾಸ.
ವಿಜಯಾಶ್ರಮ. ಸಿರವಾರ .
Comments