Posts

Showing posts from July, 2022

ಕೆಡಿಸುವವನು ನೀನೆ, ಇಡಿಸುವವನು ನೀನೆ, ಕೊಡಿಸುವವನು ನೀನೆ, ಹಿಡಿಸುವವನು ನೀನೇ"*

Image
  " ಕೆಡಿಸುವವನು ನೀನೆ, ಇಡಿಸುವವನು ನೀನೆ, ಕೊಡಿಸುವವನು ನೀನೆ, ಹಿಡಿಸುವವನು ನೀನೇ"* ಕೊಡಿಸುವದು, ಕೆಡಿಸುವದು, ಇಡಿಸುವದು, ಹೀಡಿಸುವದು ಈ ನಾಲಕು ಬಿಟ್ಟು ಮತ್ತೊಂದಿಲ್ಲ. ಎಲ್ಲವೂ ಈ ನಾಲಕರಲ್ಲೇ.  ಯಾವುದೇ ಪದಾರ್ಥಗಳಾಗಿದ್ದರೂ ಈ ನಾಲಕರಲ್ಲೇ ಇರಬೇಕು. ಈ ನಾಲಕನ್ನೂ ನನ್ನಿಂದ ಪಡೆಯಲಾಗುವದಿಲ್ಲ. ಅದು ನನಗೆ ಅನುಭವ ಸಿದ್ಧ. "ನೀನೇ ಕೊಡಬೇಕು ನಿನ್ನಿಂದಲೇ ಆಗುವದು ನಿನ್ನಿಂದಲೇ ಸಿಗುವದು" ಎಂದು ಗೋಪಾಲದಾಸರ ಮಾತು.  ಹಣ ಹೊನ್ನು ಜ್ಙಾನ ಪ್ರೀತಿ ಸ್ನೇಹ ಹೊಲ ಮನೆ ಜನ್ಮ ಗುರು ದೇವರು ಏನೇ ಇದ್ದರೂ  ಇನ್ನೊಬ್ಬರು ಕೊಟ್ಟರೇ ಉಂಟು. ಅದು ನನ್ನಲ್ಲಿ ಇಲ್ಲ. ನಾನು ಪಡೆಯಬೇಕು ಎಂದರೂ ಇನ್ನೊಬ್ಬರೇ ಕೊಡಬೇಕು. ನಾನು ಪಡೆದಿದ್ದೇನೇ ಎಂದರೆ ಇನ್ನೊಬ್ಬರಿಂದಲೇ ಇದು ಸತ್ಯ.  ಯೋಗ್ಯವಾದ ಪದಾರ್ಥಗಳನ್ನು ಕೊಡಬೇಕು. ಅದೂ ಇನ್ನೊಬ್ಬರಿಂದಲೇ ಕೊಡಿಸಬೇಕು.  ಹಿತವಾದದ್ದನ್ನು ಇಡಬೇಕು. ಪಡೆದವುಗಳನ್ನು ಶಾಶ್ವತವಾಗಿ ಎನ್ನಿಂದ ಹಿಡಿಸಿಕೊಳ್ಳಬೇಕು.  ಇಷ್ಟೆಲ್ಲ ನಾನು ಮಾಡಿಕೊಂಡು ಪಡೆಯಲಾರೆ. ಎನಗೆ ಯಾವದು ಯೋಗ್ಯ ತಿಳಿದಿಲ್ಲ. ಹಿತ ಯಾವದು ಗೊತ್ತಿಲ್ಲ. ಯಾವದನ್ನು ಇಟ್ಟುಕೊಳ್ಳಬೇಕು ಯಾವದನ್ನು ಕೆಡಿಸಿಕೊಳ್ಳಬೇಕೂ ಅದೂ ಗೊತ್ತಿಲ್ಲ. ಈ ಅವಸ್ಥೆ ಎನ್ನದು. ಹೇ ದಯಾನಿಧೆ !!! ಯಾವದು ಯೋಗ್ಯವಾಗಿದೆ, ನನಗೆ ಯಾವದು ಹಿತ ಅದನ್ನು ನೆಲೆ ಊರುವಂತೆ ಮಾಡಿ ಎನ್ನಲ್ಲಿ ಇಡಿಸು. ಆ ಪದಾರ್ಥಗಳನ್ನೇ ಎನ್ನವರಲ್ಲಿ ಪ್ರೇರಿಸಿ ಅವರ ಮುಖಾಂತರ ಎನಗೆ ಕರುಣ

*ಹತ್ತಿರ ಬಂದವರಿಗೆ ಎಲ್ಲವನ್ನೂ ಸುರಿಸು, ದೂರ ಹೋದವರಿಗೆ ಎಲ್ಲವನ್ನೂ ಹರಿಸು*

Image
  *ಹತ್ತಿರ ಬಂದವರಿಗೆ ಎಲ್ಲವನ್ನೂ ಸುರಿಸು, ದೂರ ಹೋದವರಿಗೆ ಎಲ್ಲವನ್ನೂ ಹರಿಸು* "ಪರೋಪಕಾರಾರ್ಥಮಿದಂ ಶರೀರಮ್" ಈ ನಮ್ಮ ಶರೀರ ಪರೋಪಕಾರಕ್ಕಾಗಿ. ಪರೋಪಕಾರ ಜೀವನದ ಅನೇಕ ಧ್ಯೇಯಗಳಲ್ಲಿ ಒಂದು.  "ಪರೋಪಕಾರಃ ಪುಣ್ಯಾಯ" *ಪರೋಪಕಾರ ಇರುವದೇ ಮಹಾ ಪುಣ್ಯಕ್ಕಾಗಿ. ಪರೋಪಕಾರ ಅತೀಶ್ರೇಷ್ಠ ಸಾಧನೆ.  ಪುಣ್ಯ ಪಾಪಗಳ ಬಂಧ ಇಲ್ಲ. ಸ್ವಾರ್ಥ ಶೂನ್ಯ. ಯಾವ ಕೊರತೆಗಳೂ ಇಲ್ಲ. ಹಾಗಿದ್ದರೂ ನಿರಂತರ ಅನಂತಾನಂತ ಉಪಕಾರದಲ್ಲಿ ತೊಡಗುವ ನಮ್ಮ ಸ್ವಾಮಿ ಶ್ರೀಹರಿ. ಇದು ಅವನ ಕಾರುಣ್ಯ.  ಹಾಗೆಯೇ ದೆವತೆಗಳು, ಋಷಿಗಳು, ಮುನಿಗಳು, ಎಲ್ಲರೂ ತಮ್ಮ ನಂಬಿದ ಜನರಿಗೆ ಸಾಧ್ಯವಿರುವಷ್ಟು ಉಪಕಾರವನ್ನೇ ಮಾಡುತ್ತಾರೆ. ಉಪಕಾರ ಮಾಡುವದೇ ಅವರ ಉಸಿರು.  ಇಂದು ನಮ್ಮ ಪರಮ ಗುರುಗಳ ಜೀವನದಲ್ಲೂ ಅನೇಕ ನಿದರ್ಶನಗಳನ್ನು ಕೇಳುತ್ತೇವೆ. "ಜ್ಙಾನಕಾಗಿ ಅವರ ಶಿರವು, ದಾನಕಾಗಿ ಅವರ ಕರವು, ದಯೆಗಾಗಿ ಅವರ ದೃಷ್ಟಿಯು" ಎಂದು. ಹೀಗೆ ಸಜ್ಜನರ ಸಾತ್ವಿಕರ ಒಂದು ಧ್ಯೇಯ ಸಾಧ್ಯವಿರುವಷ್ಟು ಉಪಕಾರ ಮಾಡುವದೇ.  ನಮ್ಮವರಾಗಿ ನಮ್ಮ ಹತ್ತಿರ ಇದ್ದರಂತೂ ಉಪಕಾರ ಮಾಡುವದೇ. ಮಾತಿನಿಂದ , ಹಣದಿಂದ, ಜ್ಙಾನದಿಂದ, ಧರ್ಮದಿಂದ, ಧೈರ್ಯ ಹೇಳಿ, ಇತ್ಯಾದಿ ಇತ್ಯಾದಿ..  ನಮ್ಮವನಾದ ವ್ಯಕ್ತಿ ಕಾರಣಾಂತರಗಳಿಂದ ದೂರಾದರೂ ಅವನಿಗೆ *ಎಲ್ಲ ರೀತಿಯಿಂದ ಒಳ್ಳೆಯದಾಗಲಿ* ಎಂದಾದರೂ ಹರಿಸುವದೇ. ಹಾಗಾದಾಗ ಮಾತ್ರ ಅವನು ಸಜ್ಜನ. ಗುರು- ಶಿಷ್ಯ. ಶಿಷ್ಯ ಮಹಾ ಗುರು ಭಕ್ತ. ನಿರಂತರ ಅಧ್