*"ಇಲ್ಲವೆಂದು" ನಿರಾಕರಿಸಲೂ ಕಲಿಯಬೇಕು*

*"ಇಲ್ಲವೆಂದು" ನಿರಾಕರಿಸಲೂ ಕಲಿಯಬೇಕು*

ಪ್ರತಿಬಾರಿಯೂ ಯಾವುದೋ ಅಮುಖ್ಯ ವಿಷಯಕ್ಕೆ "ಹು" ಎಂದು ಒಪ್ಪಿಗೆ ಕೊಟ್ಟಿರುತ್ತೇವೆ. ಮತ್ಯಾವುದೋ ಮುಖ್ಯ ವಿಷಯಕ್ಕೆ "ಉಹು" ಆಗಲ್ಲ ಎಂದೂ ನಿರಾಕರಿಸಿರುತ್ತೇವೆ. ಜಗತ್ತಲ್ಲಿ ಹು ಹೌದು ಹೌದಪ್ಪ ಹೌದಮ್ಮಗಳು ಯಾವ ಸಾಧನೆಯನ್ನೂ ಮಾಡಿವೆಯೊ ಬಿಟ್ಟಿವೆಯೋ ಗೊತ್ತಿಲ್ಲ, ಆದರೆ ಸಾಧನೆಯ ಹಂಬಲ ಇದ್ದವನಿಗೆ *ಊಹು* ಎಂದು ಹೇಳಲು ಮಾತ್ರ ಬಹಳ ದಮ್ ಇರಬೇಕು.

ಒಳ್ಳೆಯ ಕಾರ್ಯಕ್ಕೆ ಹೂ ಅನ್ನದ ವ್ಯಕ್ತಿ ಅಪದ್ದಕಾರ್ಯಕ್ಕೆ ಹು ಎಂದು ಒಪ್ಪಿಗೆ ಕೊಟ್ಟೇಬಿಡುತ್ತಾನೆ. ಇದು ಸಾಮಾನ್ಯ....

ಟೀ ಕುಡಿಯಲು ಬರ್ತೀಯಾ  ಓಕೆ... ಟೀಕೆ ಟಿಪ್ಪಣಿಗೆ ಬರ್ತೀಯಾ ಖಂಡಿತ....  ಸಿನೆಮಾಗೆ ಬರ್ತೀಯಾ ಓಕೆ... ಎಂದು ಹೇಳವ ಬದಲು ಧೈರ್ಯದಿಂದ ಆಗಲ್ಲ ಊಹು ಎಂದು ಹೇಳಲು ಕಲಿಯಲೇಬೇಕು.

*ಅಮುಖ್ಯ ಅಪದ್ಧ  ವಿಷಯಗಳಿಗೆ ಒಪ್ಪಿಗೆ ಕೊಟ್ಟಾಗ, ಒಂದು ಅತೀ ಮುಖ್ಯವಿಷಯಕ್ಕೆ ಅಸಮ್ಮತಿ ಕೊಟ್ಟಿರುತ್ತೇವೆ* ಇದು ನೂರರಷ್ಟು ಖಚಿತ.

ಸಾಯಂಕಾಲ ಸಿನೆಮಾಕ್ಕೆ ಹೋಗಲು, ಧಾರವಾಹಿ ನೋಡಲು ಒಪ್ಪಿಗೆ ಕೊಟ್ಟಿದ್ದೀವು ಎಂದರೆ  ಮುಖ್ಯವಾದ ಓದಿಗೆ, ಅತ್ಯಂತ ಮುಖ್ಯವಾದ ಸಂಧ್ಯಾವಂದನ ಪಾರಾಯಣಗಳಿಗೆ ಕೈ ಕೊಟ್ಟಿದ್ದೇವೇ ಎಂದೇ ಅರ್ಥ.  ಹೆಚ್ಚೊತ್ತು ಮಲಗಲು ಒಪ್ಪಿಗೆ ಕೊಟ್ಟಿದ್ದೇವೆ ಎಂದರೆ, ಪೂಜೆಗೆ ಕೈ ಕೊಟ್ಟಿದ್ದೇವೆ ಎಂದೇ ಅರ್ಥ.

ಎಲ್ಲರಿಗೂ ಬೇಕಾದ ಎಲ್ಲವನ್ನೂ ಮಾಡಲು ಎಲ್ಲರಿಂದಲೂ ಸಾಧ್ಯವೇ ಇಲ್ಲ. ಇದು ಯಶಸ್ವೀ ಪುರುಷರಿಗೆ ಸ್ಪಷ್ಟವಾಗಿ ಗೊತ್ತು. ಆದರೆ ನಮ್ಮ ಆದ್ಯತೆಗೆಳೇನು, ನಮ್ಮ ಗುರಿಯಾವದು, ಏನನ್ನು ಸಾಧಿಸುವದಿದೆ, ಎನ್ನುವದು ಸ್ಪಷ್ಟವಾಗಿ ಗೊತ್ತಿರಲೇಬೇಕಾದ ಅಂಶ.

ಜೊತೆಗೆ, ಈ ವಾರದಲ್ಲಿ, ಈ ತಿಂಗಳಲ್ಲಿ, ಈ ವರ್ಷದಲ್ಲಿ, ನನ್ನ ಈ ಜೀವನದಲ್ಲಿ ಏನೇನು ಸಾಧಿಸಿದರೆ ಸಾರ್ಥಕ ಎನ್ನುವದನ್ನು ಖಚಿತ ಮಾಡಿಕೊಂಡಿರಬೇಕು. ಮತ್ತು ಯಾವದು ದೀರ್ಘಕಾಲಕ್ಕೂ ಹಿತ, ಯಾವದು ಅಹಿತ ಎಂಬುವದೂ ದೃಢವಾಗಿರಲೇಬೇಕು.

ನಿಶ್ಚಯಮಾಡಿಕೊಂಡ ಉದ್ಯೇಶ್ಯ ಸಿದ್ಧಿಗೆ, ಉಪಯುಕ್ತವಾದವುಗಳಿಗೆ ಖಂಡಿವಾಗಿಯೂ *ಹು* ಎಂಬೋಣ. ಅವುಗಳಿಗೆ ವಿರುದ್ಧವಾದ, ಅಹಿತವಾದ ಎಲ್ಲದಕ್ಕೂ ಭಿಡೆ ಇಟ್ಟುಕೊಳ್ಳದೆ *ಊಹು ಇಲ್ಲ* ಎಂಬುವದನ್ನು ಹೇಳಲು ಕಲಿಯೋಣ.

*ಊಹೂ* ಎಂದು ಹೇಳುವದರಿಂದ ಕೆಲವರಿಗೆ ಖಂಡಿತಾ ಬೇಸರ ಆಗುತ್ತದೆ, ಆದರೆ ಇನ್ನೊಬ್ಬರ ತೃಪ್ತಿಗೋಸ್ಕರ ನಮ್ಮ ಹಿತ ಕಳೆದುಕೊಳ್ಳುವದು ಸರ್ವಥಾ ಸೂಕ್ತವಲ್ಲವೇ ಅಲ್ಲ.

ನಮ್ಮ ಮನಸ್ಸಮಾಧಾನಕ್ಕೆ-  ನಮ್ಮ ಸುಖದುಃಖಗಳಿಗೆ- ಅನುವಾದವರಿಗೆ, ನಮ್ಮ ಅತ್ಯಂತ ಸೂಕ್ತ ಮಾರ್ಗದರ್ಶಕರಿಗೆ, ಅತ್ಯಂತ ಹಿತೈಷಿಗಳಿಗೆ *ಒಪ್ಪಿಗೆ - ಹು*  ಇದ್ದೇ ಇರಲಿ. ಆದರೆ ನನ್ನ ಮನಸ್ಸಿಗೆ ಸ್ಪಂದಿಸದ, ನನ್ನ ಸರಿ ಮಾರ್ಗದರ್ಶಕರಲ್ಲದ, ನನ್ನ ಮನಸ್ಸನ್ನು ಹಾನಿಯಾದರೂ ತಲೆಕೆಡಿಸಿಕೊಳ್ಳದ, ನನ್ನ ಸುಖದುಃಖಗಳಿಗೆ ಭಾಗಿಯಾಗದ ಯಾರಿದ್ದರೂ *ಊಹು* ಎನ್ನುವದೇ ಸೂಕ್ತ.

ಒಂದಂತೂ ನಿಶ್ಚಿತ *ಊಹು* ಎಂದು ಹೇಳಲು ಧೈರ್ಯವಂತೂ ಬೇಕೆಬೇಕು.  *ಊಹು* ಎಂದು ಹೇಳಲು ಇಂದಾಗದಿರಬಹುದು, ಮುಂದೊಂದು ದಿನ ಹೇಳಲೇ ಬೇಕು.  ಇಂದಿಲ್ಲ ನಾಳೆಗೆ ಕಲಿಯಲೇಬೇಕು. ಇಂದೇ ಕಲಿಯೋಣ..... 😀🌸🌷💐

*✍🏽✍🏽✍🏽ನ್ಯಾಸ.....*
ಗೋಪಾಲ ದಾಸ,
ವಿಜಯಾಶ್ರಮ ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*