*ಆವರೀತಿಯಿಂದ ನೀ ಎನ್ನ ಸಲಹುವಿ....... ???????*

ಶ್ರೀಹರಿ ಜಗದ್ರಕ್ಷಕ. ಅವನೇ ಜಗತ್ಸಂಹಾರಕ. ಕಾಯುವ ದೇವ ಶ್ರೀಹರಿ, ಕೊಲ್ಲುವ ಸ್ವಾಮಿಯೂ ಅವನೆ. *ರಕ್ಷಿಸಲು ಅನಂತ ಉಪಾಯಗಳು ಅವನಲ್ಲಿ ಇವೆ, ಕೊಲ್ಲಲೂ ಅನಂತ ಉಪಾಯಗಳು ಅವನಲ್ಲಿ ಉಂಟು* ಅಂತೆಯೇ ಅವನು ಯೋಗೇಶ್ವರ.
ಶ್ರೀಹರಿಯು ಜಗತ್ತನ್ನು ಕಾಯಲು ಅಥವಾ ಕೊಲ್ಲಲು ಮಾಡುವ ಉಪಾಯ ನೀತಿ ರೀತಿಗಳನ್ನು ನಾವು ಅರಿತುಕೊಳ್ಳಬೇಕು. ಅರಿತುಕೊಂಡಾಗಲೇ ಆ ಹರಿಯ ನಿಜವಾದ ಅರಿವು ಆಗುವದು. ಅವನಲ್ಲಿ ಭಕ್ತಿ ವಿಶ್ವಾಸಗಳು ದೃಢವಾಗುವವು.
ನಮ್ಮ ಹಿತಕ್ಕಾಗಿ ಕೆಲವನ್ನು ನಾವು ಆರಿಸಿಕೊಂಡಿರುತ್ತೇವೆ. ಹರಿ ಅದನ್ನು ಕಸಿದುಕೊಂಡು ಬಿಡುತ್ತಾನೆ, ಅಂತಹ ಪ್ರಸಂಗದಲ್ಲಿ ಕೆಲ ಸಲ ಬೇಸರವಾಗುತ್ತದೆ. ಸಿಟ್ಟು ಬರುತ್ತದೆ. ಹತಾಶನಾಗುತ್ತೇನೆ. ಹೀಗಾಗುವದು *ಕಸಿದುಕೊಂಡಿರುವದು ನಮಗೆ ಹಿತ ಎಂಬ ಅರಿವು ಇಲ್ಲದಾಗ ಮಾತ್ರ.*
ಒಂದು ಸುಂದರ ಕಥೆ.
ಒಂದು ನಾವು. ನಾವಿನಲ್ಲಿ ತುಂಬ ಜನರು. ನಿತ್ಯ ಸಮುದ್ರದಲ್ಲಿ ಓಡಾಡುವದೇ ಅವರ ಕಸುಬು. ವಾತಾವರಣದ ಬದಲಾವಣೆಗಳ ಉತ್ತಮ ಅರಿವು ಇದೆ.
ಆ ನಾವು ಸ್ವರ್ಗಕ್ಜೆ ಮಿಗಿಲು ಎಂದು ಹೇಳಬಹುದು. ಎಲ್ಲ ವೈಭವಗಳೂ ಅಲ್ಲಿವೆ. ನಾವಿಕ ದೇವರ ಮಹಾನ್ ಭಕ್ತ. ಆ ವೈಭವದ ನಾವಿನಲ್ಲಿ ದೂರದ ದೇಶದ ಸಂಚಾರಕ್ಕಾಗಿ ದುರ್ದೈವವಶಾತ್ ಅನೇಕ ದುಷ್ಟರೇ ಅಂದು ಸೇರಿಕೊಳ್ಳುತ್ತಾರೆ.
ಆ ದುಷ್ಟರ ನಡೆ, ಅವರ ನುಡಿ, ಅವರ ವ್ಯವಹಾರಗಳಿಗೆ ಬೇಸತ್ತ ನಾವಿಕ, ಎಂದರೆ ತಲುವ ಗಮ್ಯ ಪ್ರದೇಶ ತಲುಪಿಸಿ ಇವರಿಂದ ಮುಕ್ತನಾವೆನೋ ಎಂದು ಕಾಯ್ತಾ ಕೂತಿರುವ.
ಆ ದುಷ್ಟರ ಅಟ್ಟಹಾಸ ನೆತ್ತಿಗೇರಿತು. ಹೇ ಭಗವನ್ !! ಇವರನ್ನು ಕೊಂದು ಹಾಕಪ್ಪ ಇಂಥ ದುಷ್ಟರು ಭೂಮಿಗೆ ಇರುವದು ಬೇಡ. ಇವರು ಜಗತ್ತನ್ನು ನಾಶ ಮಾಡಲು ಹೊರಟಿದ್ದಾರೆ. ಇವರು ಉಳಿಯುವದು ಬೇಡ ಎಂದು ಪರಿ ಪರಿ ಬೇಡಿಕೊಂಡ.
ಆ ಬೇಡಿಕೆಗೆ ಮೆಚ್ಚಿದನೋ ಎಂಬತೆ ದೇವರು ಕ್ಷಣದಲ್ಲಿ ಮಹಾ ಬಿರುಗಾಳಿ ಬೀಸಿದ. ನಾವು ದಾರಿ ತಪ್ಪಿತು. ಎಂದೂ ಕಾಣದ ಆಳೆತ್ತರದ ಅಲೆಗಳು. ನಾವು ಆಯ ತಪ್ಪಿತು. ಯಾವಾಗಲಾದರೂ ಮುಣುಗುವ ಸಂಭವ ಹೆಚ್ಚಾಯ್ತು. ಅಷ್ಟರಲ್ಲಿ ನಾವು ಒಂದು ದೊಡ್ಡ ಬಂಡೆಗಲ್ಲಿಗೆ ಅಪ್ಪಳಿಸಿತು. ನಾವು ಸೀಳಿತು ಎಲ್ಲರೂ ನೀರು ಪಾಲು. ದುಷ್ಟರೆಲ್ಲರೂ ಸತ್ತೆ ಹೋದರು.
"ನಾವಿಕ ಭಕ್ತ ಬೇಡಿಕೊಂಡ ಅವರನ್ನೇನೊ ಕೊಂದು ಹಾಕಿದಿ. ರಾಜ್ಯ ಉಳಿಸಿದಿ. ಇದು ನಿನ್ನ ಅನಂತ ಉಪಕಾರ." ಆದರೆ ನನ್ನನ್ನೂ ನೀರಿಗೆ ಹಾಕಿ ಕೊಂದು ಹಾಕ್ತಿಯಲ್ಲೋ ಮಾರಾಯ.. ಎನ್ನನು ರಕ್ಷಿಸು ಎಂದು ಮೊರೆ ಇಟ್ಟ.
ಆಷ್ಟರಲ್ಲಿಯೇ ಎಲ್ಲಿಂದ ಬಂತೋ ಒಂದು ದೊಡ್ಡದಾದ ತೊಲೆ ತೇಲುತ್ತಾ ಬಂತು. ಸಂತೋಷ ಪಟ್ಟ. ಅದನ್ನು ಆಶ್ರಯಿಸಿ *ಬದುಕಿದೆಯಾ ಬಡ ಜೀವವೆ* ಎಂದು ಕೊಂಡು ಹೊರಟ. ಅದು ಎಲ್ಲೊಲ್ಲೋ ತೇಲಿ ಒಂದು ನಡುಗಡ್ಡೆ ಸೇರಿತು.
ಆ ನಡುಗಡ್ಡೆಯಲ್ಲಿ ಉಪವಾಸ ಹಾಕಲಿಲ್ಲ ಅವನು ನಂಬಿದ ದೇವರು. ಮೀನು ಗಡ್ಡೆ ಗೆಣಸು ಏನೆಲ್ಲ ಆಹಾರ ಕೊಟ್ಟ. ಒಂದು ಪುಟ್ಟ ಆಶ್ರಯ ಝೋಪಡಿಯನ್ನೂ ಕೊಟ್ಟ.
ಕಟ್ಟಿಗೆಗಳನ್ನು ತಿಕ್ಕಿ ಸ್ವಲ್ಪ ಬೆಂಕಿ ಹಚ್ಚಿಸಿಕೊಂಡ. ಬೆಳಕೂ ಆಯಿತು. ಅಂತೂ ಇಂತೂ ಇವನು ದೇವರನ್ನು ನಂಬಿದಕ್ಕೆ, ಅವನೂ ರಕ್ಷಿಸು ಪಣ ತೊಟ್ಟಿರುವದಕ್ಕೆ ಎರಡೂ ಕೂಡಿ ಯಶ್ವಿಯಾಗಿ ಸಾಗಿತು.
ಒಬ್ಬನೇ ಒಬ್ಬ . ನಿರ್ಜನ ಪ್ರದೇಶ. ನಾಲಕು ಕಡೆ ಸಮುದ್ರ. ಆ ಸಮುದ್ರದ ಭೋರ್ಗರೆತ. ಆ ಪ್ರದೇಶಕ್ಕೆ ಜನ ಬರುವ ಆಸೇಯೇ ಇಲ್ಲ. ಎಷ್ಟೋ ದಿನಗಳು ಉರುಳಿದವು.
ಒಂದು ದಿನ ಆಹಾರವನ್ನು ಅರಿಸಲು ಅಲೆದಾಡಿದ. ಒಂದೂ ಆಹಾರ ಸಿಗಲಿಲ್ಲ. ಹೀಗೆಯೇ ಎರಡು ದಿನಗಳು ಉರುಳಿತು. ರಾತ್ರಿ ಆದ ಹಾಗೆ ಬೆನ್ನಡಗಿಸುವ ಛಳಿ. ಬೇಳಿಗ್ಗೆ ಬೆಳೆದ ಹಾಗೆ ಚರ್ಮ ಸುಡುವ ಬಿಸಿಲು. ಸಮುದ್ರದ ಭೋರ್ಗರೆತ. ಇಷ್ಟೆಲ್ಲದರ ನಡುವೆ ಹೊಟ್ಟೆ ತಳಮಳ.
"ಏನೋ ಸ್ವಾಮಿ! ನಾನು ನಿನ್ನ ಭಕ್ತ. ನನ್ನ ಅವಸ್ಥೆ ಎಲ್ಲಿಗೆ ತಂದೀಯೋ ಮಹರಾಯಾ .....
ಸಮೃದ್ಧದ ನಾವು ಹೋಯಿತು. ಶ್ರೀಮಂತಿಕೆ ಹೋಯಿತು. ಸೌಖ್ಯ ಹೋಯಿತು. ಊಟವಿಲ್ಲ. ಪ್ರಾಣ ಹೋಗುವ ಸಮಯ ಬಂತು. ಏನಿದು ನನ್ನ ಅವಸ್ಥೆ" ಎಂದು ಅಲವತ್ತುಕೊಂಡ.
ಕಾಯುವ ಕರುಣಾಮಯ ಭಕ್ತರ ಪೋಶಿಸುವ ಹರಿ ವಿಚಾರವೇ ಇಲ್ಲ. ತಾಳ್ಮೆ ನಮಗೆ ಬೇಕು ಅಷ್ಟೆ. ಆ ನಾವಿಕ ಕಾಡಿನಲ್ಲಿ ಅಲೆದಾಡುವಾಗ ಅವನಿಗೆ ದೊಡ್ಡ ನಿಧಿಯೇ ದೊರಕಿತು. ನಿಧಿಯನ್ನು ಕಂಡ ನಾವಿಕ ಹಿಗ್ಗಿಬಿಟ್ಟ . ಮತ್ತೆ ದೇವರನ್ನು ನೆನಿಸಿದ. ನಿಧಿ ದೊರೆತ ಸುಖದಲ್ಲಿ ಅಷ್ಟೇ ಬೇಗ ಮರೆತೂ ಬಿಟ್ಟ. *ಕಷ್ಟಗಳನ್ನು ಹೇಳಿಕೊಳ್ಳಲೇ ದೇವರ ಹಾಗೂ ಗೇಳೆಯರ ನೆನಪು, ಸುಖದ ಸಮಯ ಬಂದರೆ ದೇವರೂ ಬೇಡ ಗೆಳೆಯನೂ ಬೇಡ* ಎಲ್ಲಿ ಏನಾಗತ್ತೋ ಎಂಬ ಹೆದರಿಕೆ.
ಅಷ್ಟರಲ್ಲಿಯೇ ಮತ್ತೆ ಬಿರಗಾಳಿ ಆರಂಭಿಸಿತು. ಆ ಪುಟ್ಟ ಗುಡಿಸಲು ತಾ ಹಚ್ಚಿದ ಬೆಂಕಿಗೆ ಧಗ ಧಗ ಉರಿಯಿತು. ಸುಟ್ಟ ಭಸ್ಮವಾಯಿತು..
ನಾವಿಕ.... ದುಷ್ಟರನ್ನು ಕೊಂದಿ, ನನ್ನ ಜೀವನಾಡಿಯಾದ ನಾವೂ ತೊಗೊಂಡಿ. ಕಟ್ಟಿಗೆಯ ತೊಲೆಕೊಡುವ ಮುಖಾಂತರ ಬದುಕು ಕೊಟ್ಟಿ. ಅನ್ನ ನೀರು ಕಸಿದುಕೊಂಡಿ. ಮಹಾ ನಿಧಿಕೊಟ್ಟಿ. ಹಸಿವು ನೀಗಿಸಲಿಲ್ಲ. ಈಗ ಇರುವ ಗುಡಿಸಲೂ ಕಸಿದಿಕೊಂಡಿ... ಏನೋ ನಿನ್ನಾಟ..... ನಗುನೂ ಬಂತು ಸಿಟ್ಟೂ ಬಂತು.
ಸಿಟ್ಟಿನಿಂದ ಹತಾಶನಾಗಿ ಜೋರಾಗಿ ಕಿರುಚಿ ಅತ್ತು ಅಲವತ್ತುಕೊಂಡು ಮೂರ್ಛೇ ಹೋದ ಆ ನಾವಿಕ.
ಸ್ವಲ್ಪ ಸಮಯ ಉರುಳಿತು. ಎಚ್ಚರಗೊಂಡ. ಸುತ್ತ ನೋಡುತ್ತಾನೆ ತಮ್ಮವರೇ ಆದ ಎಂಟು ಕಾಡುಜನ ನಿಂತಿದಾರೆ. ಆಶ್ಚರ್ಯವಾಯಿತು. ಕನಸೋ ನನಸೋ ಗೊತ್ತಾಗಲಿಲ್ಲ.
ಯಾರು ನೀವು.. ?? ಇಲ್ಲಿಗೆ ಹೇಗೆ ಬಂದಿರಿ..?? ಎಂದು ನೂರು ಪ್ರಶ್ನೆ ಕೇಳಿದ.
ಅವರ ಉತ್ತರ ಇಷ್ಟಿತ್ತು *ಬೆಂಕಿ ಹತ್ತಿತ್ತು. ಅದರ ಹೊಗೆ ಆವರಿಸಿತ್ತು. ನಮ್ಮವರು ಇಲ್ಲಿ ಇರಬಹುದು ಎಂದು ಬಂದೆವು. ನೀನು ಸಿಕ್ಕಿ ಸಂತೋಷ ಆಯ್ತು. ನಡೆ ನಾಡಿಗೆ ಹೊರಡೋಣ* ಎಂದು.
ಕಾಯುವ ದೇವರು ಹೇಗಾದರೂ ಕಾಯುವ ಎಂಬ ಅವನ ನಂಬಿಗೆ ನೂರ್ಮಡಿ ದೃಢವಾಯಿತು. ಕಣ್ಣೀರಿಟ್ಟ. ನಿನ್ನ ನೀತಿ ರೀತಿ ತಿಳಿಯುದಿಲ್ಲವೋ ಎಂದ. ಅಂಗಲಾಚಿದ.
*ಯಾವೆಲ್ಲರೀತಿಯಿಂದಾದರೂ ಸಲಹುತ್ತೇನೆ ಕೇಳುವವ ನೀನಾರು... ?? ನನ್ನ ನಂಬು ನನ್ನಲ್ಲಿ ಭಕ್ತಿ ಮಾಡು. ಒಳ್ಳೆಯ ವಿಚಾರಗಳಿಗೆ ನನ್ನ ನೆನಸು. ಸಾಕು*
ಏಳೆಂಟು ಹಂಡೆಗಳ ತುಂಬ ಇರುವ ನಿಧಿಯೊಂದಿಗೆ ನಾಡಿಗೆ ತೆರಳಿದ. ದೊಡ್ಡ ರಾಜನೆಂತೆ ಮೆರೆದ. ಮಹಾ ಸೌಭಾಗ್ಯವಂತನಾಗಿ ಬಾಳಿದ.
ಇದು ಕಾಯುವ ದೇವರ ನೀತಿ ರೀತಿಗಳು. *ಹರಿಯನ್ನು ಅರಿಯದೆ ಜರಿದರೆ ಒಳಿತಿಲ್ಲ. ಕಾಯುವ ಹರಿ ಕಾಯದೇ ಬಿಡ. ಇದುವೇ ಸತ್ಯ. ಇದಕ್ಕೆ ಬೇಕು ಭಕ್ತಿ ವಿಶ್ವಾಸಗಳ ದಾರ್ಢ್ಯತೆ.* ಇದುವೇ ಭಕ್ತರ ಕಸುಬು.
ನಮ್ಮನ್ನೂ ಭಕ್ತರನ್ನಾಗಿ ಮಾಡಿಕೋ ಎಂದು ಇಂದು ಮೊರೆ ಇಡುವೆ.... ಮುಂದಿನದು ನಿನ್ನ ವಿಚಾರ.
*✍🏼✍🏼👌🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments