*ಅಸಾಧ್ಯವಾದದ್ದನ್ನೇ ಬಯಸು......*
*ಅಸಾಧ್ಯವಾದದ್ದನ್ನೇ ಬಯಸು......*
"ಅಸಾಧ್ಯವಾದದ್ದನ್ನೇ ಬಯಸು" ಇದು ಭೀಮಸೇನದೇವರ ನೇರ ಹಾಗೂ ದಿಟ್ಟ ಮಾತು. ಯಥಾಸ್ಥಿತವಾದ ಮಾತು.
ಅಸಾಧ್ಯವಾದದ್ದನ್ನು ಬಯಸು ಎಂದರೆ, ಯಾವದು ಅಪ್ರಾಪ್ಯವೋ ಅದನ್ನು ಬಯಸು ಎಂದರ್ಥ. ಪ್ರಾಪ್ಯವಾದದ್ದು ಯಾವುದೋ ಸಾಧ್ಯವಾದದ್ದು ಯಾವದೋ ಅದನ್ನು ಬಯಸಬೇಕು ನಿಜ. ಯಾವದು ಸಿಗಬಹುದೋ ಅದನ್ನು ಏನೆಂದು ಬಯಸುವದು... ??? ಯಾವುದು ಸಿಕ್ಕೇಬಿಡುವದು ಅದನ್ನು ಬೇಡುವದಾದರೂ ಏತಕ್ಕೆ.... ?? ಬೇಡಲೇ ಬೇಕೆಂದರೆ, ಬಯಸಲೇ ಬೇಕೆಂದರೆ ಯಾವದು ಅಸಾಧ್ಯವೋ ಯಾವದು ಅಪ್ರಾಪ್ಯವೋ ಅದನ್ನೇ ಬೇಡಿ ಬಯಸಬೇಕು.
ನಿಮ್ಮ ವಾದ ಬಲು ವಿಚಿತ್ರವಾಗಿದೆ ಅಲ್ವೆ.... ಏಕೆಂದರೆ ಯಾವದು ಸಿಗುವದೇ ಇಲ್ಲ ಅದನ್ನು ಬೇಡುವದರಲ್ಲಿ ಅರ್ಥವೇನಿದೆ ?? ನಿಶ್ಚಿತವಾಗಿಯೂ ಸಿಗದಿರುವದಾಗಿದ್ದರೆ, ಅದನ್ನು ಇಚ್ಛಿಸಿ ಪ್ರಯೋಜನವಾದರೂ ಏನು.. ??
ಎಲ್ಲ ನಿಜ. ನಮ್ಮಿಂದ ಸಾಧಿಸಲ್ಪಡುವಂತಹ ವಸ್ತುಗಳು ಸಾಮಾನ್ಯವಾಗಿ ನಮಗೆ ಸುಲಭ ರೀತಿಯಲ್ಲಿ ಖಂಡಿತವಾಗಿಯೂ ಸಿಗುವಂತಹವುಗಳೇ ಆಗಿರುತ್ತವೆ. ಯಾಕೆಂದರೆ ಅವುಗಳನ್ನು ಪಡೆದುಕೊಂಡೇ ಹುಟ್ಟಿರುತ್ತೇವೆ. ಅನ್ನ ನೀರು ಘಾಳಿ ಸೂರು ಕುಟುಂಬ ರೋಗ ಆರೋಗ್ಯ ಧನ ಕನಕ ಹೆಂಡತಿ ಮಕ್ಕಳು ಇತ್ಯಾದಿ ಇತ್ಯಾದಿ .....
ಯಾವದು ನಮಗೆ ಸಿಗುವದೇ ಇಲ್ಲವೋ ಅದಕ್ಕಾಗಿ ಎಷ್ಟು ಶ್ರಮಪಟ್ಟರೂ ಎಷ್ಟು ಇಚ್ಛಿಸಿದರೂ ಅದು ಸಿಗುವದೇ ಇಲ್ಲ.ಅದು ಅಪ್ರಾಪ್ಯವೇ. ಅದುವೂ ಅಷ್ಟೇ ನಿಶ್ಚಿತ. ಇದರಲ್ಲಿಯೂ ಸಂದೇಹವಿಲ್ಲ. ಬ್ರಹ್ಮ ಪದವಿ ಇಂದ್ರಪದವಿ ಋಷಿಪದವಿ ಸ್ವಾತಂತ್ರ್ಯಾದಿ ಗುಣ ಇತ್ಯಾದಿ ಇತ್ಯಾದಿ....
ಯಾವದು ಸಿಗತ್ತೆ ಅದನ್ನು ಇಚ್ಛಿಸಿ ಏನು ಪ್ರಯೋಜನ, ಯಾವುದು ಸಿಗುವದೇ ಇಲ್ಲ ಅದನ್ನು ಇಚ್ಛಿಸು.. ?? ಈ ಮಾತುಗಳಿಗೆ ಅರ್ಥವೇನು ಉಳಿತು... ?? ಬೆಲೆ ಇಲ್ಲದ ಮಾತು ಬೇಕಿತ್ತಾ... ??
*ಅಸಾಧ್ಯವಾದದ್ದನ್ನೇ ಬಯಸು......* ಈ ಮಾತಿಗೆ ಇಷ್ಟು ಅರ್ಥವಿಷ್ಟೆ.
ಸಾಮಾನ್ಯವಾಗಿ ಯಾವದು ದೊರೆತೇ ತೀರತ್ತೆ ಅದನ್ನು ಬಯಸಿ ಅರ್ಥವಿಲ್ಲ. ಬೇರೆಯವರಿಗೆ ದೊರೆಯಲು ಅಸಾಧ್ಯವಾದ, ಕೇವಲ ನಿನಗೇ ಪಡೆಯಲು ಯೋಗ್ಯವಾದ, ಒಂದರ್ಥದಲ್ಕಿ ನೀನು ಪಡೆದಾದ, ಕೈಗೆ ಇನ್ನೂವರೆಗೂ ದೊರೆಯದ ಅಂತೆಯೇ ಅಸಾಧ್ಯವೆಂದೆನಿಸಿದ ವಸ್ತುವನ್ನು ಬಯಸು.
*ನಾನು ಪಡೆದಿದ್ದೇನೆ... ಕೈಗೆ ಬಂದಿಲ್ಲ ಅಂತಹ ವಸ್ತುಗಳು ಇವೆಯಾ.. ??* ಖಂಡಿತ ನೂರು ಇವೆ.
ದೇವರನ್ನು ನಿನ್ನೊಳಗೇ ಪಡೆದಿದ್ದಿ. ಆದರೆ ಇನ್ನೂ ನಿನ್ನ ಕೈಗೆ ಸಿಕ್ಕಿಲ್ಲ. ಹಾಗೆಯೇ ದೇವತೆಗಳೂ ನಿನ್ನ ಅಂತರ್ಯಾಮಿಯಾಗಿ ಪಡೆದಿದ್ದಿ, ಆದರೆ ನಿನ್ನ ಕೈಗೆ ಇನ್ನೂ ಸಿಕ್ಕಿಲ್ಲ. ಅದೇರೀತಿಯಾಗಿ ಜ್ಙಾನ, ಆನಂದ ಭಕ್ತಿ, ವಿರಕ್ತಿ, ಸಹನೆ, ದಯೆ ಮೊದಲಾದ ಸದ್ಗುಣಗಳು, ನಿನ್ನಲ್ಲಿಯೇ ಸ್ವರೂಪದಲ್ಲಿಯೇ ಪಡೆದಿರುವಿ ಆದರೆ ಕೈಲಿ ಅನುಭವಿಸಲಾರಿ.
ಒಟ್ಟಾರೆಯಾಗಿ *ನಿನ್ನತನ ನಿನ್ನಲ್ಲಿ ಉಂಟು, ಪಡೆಯಲು ಸಾಧ್ಯವಾಗಿಲ್ಲ.* ಅಂತಹ ಅಸಾಧ್ಯವಾದದ್ದನ್ನು ಬಯಸು. ಆ ಬಯಕೆಗೆ ಅರ್ಥವಿದೆ. ಬೆಲೆ ಇದೆ. ಅದನ್ನು ಪಡೆದಾಗ ಸಾರ್ಥಕವೆಂದೆನಿಸುತ್ತದೆ.
*✍🏽✍🏽✍ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.

Comments