Posts

Showing posts from March, 2020

ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!*

Image
*ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!* ಜಗತ್ತಿನ ಹಿತಕ್ಕಾಗಿ ಅನೇಕ ಜ್ಙಾನಿಗಳು ಜಗತ್ತಿನ ಎಲ್ಲ ಜನರಿಗೂ ಅನ್ವಯಿಸುವಂತೆ  ಲಕ್ಷ ಲಕ್ಷ ಆಚಾರ ವಿಚಾರಗಳನ್ನು ರೂಢಿಸಿದರು. ಕಾಲದ ಪ್ರಭಾವದಿಂದ ಆಚಾರ ವಿಚಾರಗಳು ಬ್ರಾಹ್ಮಣರಲ್ಲಿ ಮಾತ್ರ ಉಳಿದುಕೊಂಡವು. ಈಗಿನ ಕಾಲದಲ್ಲಿ ಅನೇಕ ಬ್ರಾಹ್ಮಣರೂ ಆ ಆಚಾರ ವಿಚಾರಗಳನ್ನು ಕಳೆದುಕೊಂಡರು ಎನ್ನುವದಕ್ಕಿಂತ ಹಠ ಮಾಡಿ ಬಿಟ್ಟರು. ಆಚಾರ ವಿಚಾರ ಧರ್ಮಗಳನ್ನು ಬಿಡುವದೇ ಒಂದು fassion ಆಗಿ ಹೋಯಿತು.  *ಆಚಾರವಂತ ಬ್ರಾಹ್ಮಣನ ಅವಸ್ಥೆ.....* ಆಚಾರ ವಿಚಾರ ಮಡಿ ಮೈಲಿಗೆ social distince ಇದು ಇಂದಿನದು  ಅಲ್ಲ. ಅನಾದಿ ಸತ್ಸಂಪ್ರದಾಯದಿಂದ ಬಂದವು. ಈ social distince ಬ್ರಾಹ್ಮಣರು ಮಾಡಿದರೆ ಅನ್ನುವದಕ್ಕೆ, ನಿಂದಿಸಲು, ಅವಮಾನ ಮಾಡಲು ಅದರ ಮಹತ್ವವನ್ನು ಅರಿಯದ, ತಿಳಿಯದ  ನೂರು ಜನ ಸಿದ್ಧ.  *ಅಂದು -- ಇಂದು* ಇಂದು ಇಪ್ಪತ್ತು ಸೆಕೆಂದು ಕೈ ತೊಳಿ ಎಂದು ಹೇಳಿದರೆ ಸಿದ್ಧ. ಹೊರ ಓಡಾಡಿ ಬಂದರೆ ಸ್ನಾನ ಮಾಡಲೂ ಸಿದ್ಧ. ಈ ಎಲ್ಲ ತರಹದ ಆಚಾರಗಳನ್ನೂ  ಅನುಸರಿಸುತ್ತಿದೆ. ಜಗತ್ತು ಒಪ್ಪಿಕೊಂಡಿತು.  ಶುದ್ಧಿಗಾಗಿ ಮೃತ್ತಿಕಾ ಶೌಚ ಮಾಡಿದ ಬ್ರಾಹ್ಮಣನ ಅವಸ್ಥೆ ಬೈಸಿಕೊಳ್ಳುವದೆ ಆಯ್ತು. ಬ್ರಾಹ್ಮಣ ಮುಟ್ಟದೇ ದೂರ ನಡೆದರೆ, ದೂರದಿಂದ ಇಸಕೊಂಡರೆ ಮೂಗು ಮುರಿವ ಜನರೇ....  ಇವತ್ತು ಯಾರನ್ನೂ ಮುಟ್ಟದೆ ದೂರ ದೂರ ಇರುವದು, ದೂರದಿಂದ ಇಸ್ಕೊಳ್ಳುವದು, distince mentio

*corona virus ಕಣ್ಣಿಗೆ ಕಾಣ್ಸಲ್ಲವೇ...??*

*corona virus ಕಣ್ಣಿಗೆ ಕಾಣ್ಸಲ್ಲವೇ...??* "corona virus ಕಣ್ಣಿಗೆ ಕಾಣ್ಸಲ್ಲವೇ...??" ನನ್ನಂತಹ ಪೆದ್ದುಗಳ ಅನೇಕರ ಪ್ರಶ್ನೆ.  ಕಣ್ಣಿಗೆ ಕಾಣಿಸುತ್ತಿಲ್ಲ ಅಂತೆಯೇ ಇಪ್ಪತ್ತೊಂದು ದಿನಗಳ ಕಾಲ ನೂರಮೂವತ್ತು ಕೋಟಿ ಜನರ ದಿಗ್ಬಂಧನ. ಇದರಿಂದ ಎಷ್ಟು ನಷ್ಟವಿದೆ ಎಂದು ಊಹಿಸಲೂ ಅಸಾಧ್ಯ.  ಹೀಗೆ ದಿಗ್ಬಂಧನ ಮಾಡುವದರಿಂದ ಕಣ್ಣಿಗೆ ಕಾಣಿಸಲ್ಲ ಎಂದು ಉತ್ತರ ಹೇಳುವದು ತುಂಬ ಕಷ್ಟ. ಏನಕ್ಕೆ..... "corona virus ಕಣ್ಣಿಗೆ ಕಾಣ್ಸಲ್ಲ ಅಂದ್ರೆ ನಗು ಬರತ್ತೆ......  *ಕೊರೊನಾ ವೃರಸ್ಸಿನ ಅಡ್ರೆಸ್ಸೂ ನಮ್ಮ ದೇಶದ ಕಡೆ ಇದೆ.* ಯಾರು ಹೊರದೇಶದಿಂದ ಬಂದರೋ ಅಂತಹವರಿಂದಲೇ ಈ ವೈರಸ್ಸು ಹರಡಿರುವದು. ಇದು ಆವಿಪಾಲ ಗೋಪಾಲನಿಂದ ಮೊದಲು ಮಾಡಿ ಪ್ರಧಾನಿಯವರೆಗೆ ಎಲ್ಲರಿಗೂ ನಿಶ್ಚಿತ. ಆ ಹತ್ತಿಪ್ಪತ್ತು ಸಾವಿರ ಜನರನ್ನು ಹುಡುಕಿ, ಅವರನ್ನು ದಿಗ್ಬಂಧನಗೊಳಿಸಿ, ಅವರ ಕುಟುಂಬವನ್ನೂ ದಿಗ್ಬಂಧಿಸಿ, ಅವರೆಲ್ಲರ ಸಂಪರ್ಕದಲ್ಲಿ ಬಂದವರನ್ನೂ ಪರೀಕ್ಷೆಗೆ ಒಳಪಡಿಸಿದರೆ ಆಯ್ತು,  ಅವರ ಮನೆಯನ್ನೇ ಹಾಸ್ಪಿಟಲ್ ಮಾಡಿದರೆ ಮುಗಿದೇ ಹೋಗತ್ತೆ. ನಾವೆಲ್ಲ ಅರಾಮವಾಗಿ ಇರಬಹುದು.  *ಕೋತಿ ತಾ ಕೆಡೋದಲ್ಲದೇ ವನವನ್ನೇ ಕೆಡಿಸಿತು ಅಂತೆ* ಈ ಗಾದೆ ಈ ಪ್ರಸಂಗದಲ್ಲಿ ತುಂಬ ಉಪಯೋಗಕ್ಕೇ ಬರತ್ತೆ. ಕೋತಿಗಳನ್ನು ವಿದೇಶದಿಂದ ಸ್ವಾಗತ ಮಾಡಿ, ರೆಡ್ ಕಾರ್ಪೇಟ್ ಹಾಸಿ ಬರಮಾಡಿಕೊಂಡು, ಅವರನ್ನು ಊರೆಲ್ಲ ದೇಶವೆಲ್ಲ ತಿರುಗಲು ಅಂದು ಬಿಟ್ಟ

ನಿನ್ಹೊರೆತು ಪೊರವರನು ನಾನರಿಯೇ ಹರಿಯೇ......*

Image
*ನಿನ್ಹೊರೆತು ಪೊರವರನು ನಾನರಿಯೇ ಹರಿಯೇ......* "ನಿನ್ಹೊರೆತು ಪೊರವರನು ನಾನರಿಯೇ ಹರಿಯೇ" ಎಂದು ದಾಸರ ಪೂರ್ಣವಿಶ್ವಾಸದ ಮಾತು. ನಮಗೆ ಬಂದ ಬರುವ ಸಕಲ ಆಪತ್ತುಗಳಿಗೂ ದೇವರೇ ಬಂದು ರಕ್ಷಿಸಬೇಕು. ದೇವರಿಲ್ಲದ ಗತಿ ಮತ್ತೊಬ್ಬರಿಲ್ಲ. ಅವನೇ ಸ್ವತಂತ್ರ ಕರ್ತಾ. ಈರೀತಿಯಾಗಿ ನಂಬಿದವರೂ ನಾವೆಲ್ಲರು. ರಕ್ಷಿಸುವ ಹೊಣೆ  ದೇವರಿಗೇ ಇದೆ. *ರಕ್ಷಿಸುವ ದೇವರು ಯಾರು....???* ಅನಂತರೂಪಿ ದೇವರು ನಿಜ. ಆದರೆ ಭೂಮಿಗೆ ಬಂದ ಆಪತ್ತುಗಳನ್ನು ಪರಿಹರಿಸಲು ನಮ್ಮನ್ನು ರಕ್ಷಿಸಲು ಎಲ್ಲ ರೂಪಗಳೂ ಬರುವದಿಲ್ಲ.  ರಕ್ಷಿಸುವ ಸಾಮರ್ಥ್ಯ ಎಲ್ಲ ಭಗವದ್ರೂಪಗಳಿಗಿದ್ದರೂ ವಿಶಿಷ್ಟವಾದ ಒಂದು ರೂಪ. ಆ ರೂಪದ ಪ್ರಾರ್ಥನೆಯಿಂದ ಆ ರೂಪವೇ ಭೂಮಿಗೆ ಬಂದು ರಕ್ಷಿಸುತ್ತಾನೆ. ಆ ಭಗವದ್ರೂಪ *ಶ್ವೇತದ್ವೀಪಪತಿ ವಾಸುದೇವ ರೂಪ.*  ದೇವರು ತಾನು ವಾಸಿಸಲು ತಾನಾರಿಸಿಕೊಂಡ ಸ್ಥಾನಗಳು ವೈಕುಂಠ ಅನಂತಾಸನ ಶ್ವೇತದ್ವೀಪ ಎಂದು ಮೂರು ಸ್ಥಾನಗಳು. ಆ ಮೂರು ಸ್ಥಾನಗಳಲ್ಲಿ ಭೂಮಿಗೆ ಸಂಬಂಧ ಪಟ್ಟ ಎಲ್ಲ ದೂರು (complaint) ಗಳನ್ನು ಸಲ್ಲಿಸಲು ಇರುವ ಠಾಣೆ ಎಂದರೆ ಅದು ಕ್ಷೀರಸಾಗರದ ತಟದಲ್ಲಿ ಇರುವ *ಶ್ಚೇತದ್ವೀಪ.* ದೂರು ಅಲಿಸಿ ರಕ್ಷಿಸುವ ರೂಪ, ರಕ್ಷಿಸಲು ಧಾವಿಸಿ ಬರುವ ರೂಪ *ಶ್ವೇತದ್ವೀಪ ಪತಿ ವಾಸುದೇವ.* ಆದ್ದರಿಂದ ಶ್ವೇತದ್ವೀಪ ಪತಿ ವಾಸುದೇವನನ್ನೇ ಅನನ್ಯಗತಿಕವಾಗಿ ಪ್ರಾರ್ಥಿಸೋಣ. *ಯಾವ ಸ್ತುತಿಯಿಂದ ಪ್ರಾರ್ಥಿಸುವದು...??* ಹಿರಣ್ಯಕಶಿ

*ಓ ಶರ್ವರೀಕರ !!!! ನಿನಗೆ ನಮಃ*

Image
*ಓ ಶರ್ವರೀಕರ !!!! ನಿನಗೆ ನಮಃ* ವಿಷ್ಣು ಸಹಸ್ರನಾಮದ ಸಾವಿರ ನಾಮಗಳಲ್ಲಿ ಒಂದು ನಾಮ *ಶರ್ವರೀಕರ* ಎಂಬ ನಾಮ. ಯುಗಾದಕೃತ್ ಆದ ಶ್ರೀಹರಿಯೇ *ಶರ್ವರೀ ನಾಮ ಸಂವತ್ಸರದ* ನಿಯಾಮಕನೂ ಆಗಿರುವ. ಆ ಭಗವದ್ರೂಪದ ಹೆಸರೇ *ಶರ್ವರೀಕರ.* ಶರ್ವರೀಕರ ರಾತ್ರಿ ನಿಮನ ಮಾಡುವ ಚಂದ್ರ. ಚಂದ್ರಾಂತರ್ಯಾಮಿ ಭಗವದ್ರೂಪ ಶರ್ವರೀಕರ. ಚಂದ್ರ ರಾತ್ರಿ ಹೊತ್ತಿನಲ್ಲಿ ತನ್ನ ಕಿರಣಗಳಿಂದ ಓಷಧಿ ವನಸ್ಪತಿಗಳನ್ನು ಬೆಳಿಸುತ್ತಾನೆ. ಆ ಓಷಧಿ ವನಸ್ಪತಿಗಳ ಮುಖಾಂತರ ಆರೋಗ್ಯವನ್ನು ದಯಪಾಲಿಸುತ್ತಾನೆ.  *ಇಂದಿನ ಸ್ಥಿತಿ...* ಕಳೆದ ವರ್ಷದಲ್ಲಿ ಧರ್ಮ ವಿಮುಖರು ಆಗಿರುವದರಿಂದ, ಸಹನೆ ಕಳೆದುಕೊಂಡಂತೆ ಆದ  ವಿಕಾರಿ ಸಂವತ್ಸರ, ಬಹಳ ಮುನಿಸಿಕೊಂಡಂತೆ ದೊಡ್ಡ ಶಿಕ್ಷೆಗೆ ಗುರಿ ಮಾಡಿ ತಾನು ಹೊರಟು ಹೋಗಿದೆ. ಕಳೆದ ವರ್ಷ ಮಾಡಿದ ತಪ್ಪು ಈ ವರ್ಷವೂ ಮಾಡಿದರೆ ಇನ್ನೂ ಘೋರ ಮಾರಿಗಳು ನಮ್ಮ ಬೆನ್ನಿಗೇ ಬಂದು ಬೀಳಲಿವೆ.  *ಪ್ರಾಣಿ ಪಶು ಪಕ್ಷಿಗಳ ಶಾಪ...* ಮಾನವನ ತಂಟೆಗೇ ಬಾರದಂತೆ ಕಾಡಿನಲ್ಲೇ ಇರುವ ಪ್ರಾಣಿ ಪಶು ಪಕ್ಷಿಗಳನ್ನು ಮನಸೋ ಇಚ್ಛೆ ಕೊಂದು ತಿಂದದ್ದರ ಶಾಪ ಇಂದು ಇಪ್ಪೊಂದು ದಿನ ಮನೆಯಲ್ಲಿ ಬೀಳುವ ಪ್ರಸಂಗ ಬಂದಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಪ್ರಾಣಿ ಪಶು ಪಕ್ಷಿಗಳನ್ನು ಕೊಂದು ತಿನ್ನಬೇಕೆರ ಬೇಡವೇ ಎಂದು... ಅದರಂತೆಯೇ ಗಿಡಗಳನ್ನು ಕತ್ತರಿಸುವಾಗಲೂ ಯೋಚಿಸಬೇಕು, ಮುಂದೊಂದು ದಿನ ಹೆಗಲಿಗೆ ಆಮ್ಲಜನಕ (ಆಕ್ಸಿಜನ್) ಹೊತ್ತುಕೊಂಡು ಓಡಾಡುವ ದಿನ 

*ಆತ್ಮೀರೆಲ್ಲರಿಗೂ "ಶಾರ್ವರೀ ನಾಮ" ಸಂತ್ಸರದ ಪ್ರೀತಿಯ ಶುಭಾಷಯಗಳು......🌹🌹*

Image
*ಆತ್ಮೀರೆಲ್ಲರಿಗೂ "ಶಾರ್ವರೀ ನಾಮ" ಸಂತ್ಸರದ ಪ್ರೀತಿಯ ಶುಭಾಷಯಗಳು......🌹🌹* ವಿಕಾರಿ ನಾಮ ಸಂವತ್ಸರ ತನ್ನ ಪೂರ್ಣ ಇರುವಿನಲ್ಲಿ ಅತ್ಯುತ್ತಮ ಸಹಸ್ರ ಸಹಸ್ರ ವಿಕಾರಗಳನ್ನು ಭಕ್ತರಿಗೆ ಭಕ್ತಿ ಮಾರ್ಗ ತೋರಿಸಿ ಭಕ್ತಿ ಮಾರ್ಗದಲ್ಲಿ ಇರಿಸಿ ಆನಂದವಿಕಾರವಾನ್ನು ಮಾಡಿ, ಧಾರ್ಮಿಕರಿಗೆ ಧರ್ಮಬೋಧಿಸಿ ಧಾರ್ಮಿಕತೆಯ ವಿಕಾರ ಒದಗಿಸಿ,  ಕೊನೆಭಾಗದಲ್ಲಿ ದುಷ್ಟರಿಗೆ ಅಧಾರ್ಮಿಕರಿಗೆ ತನ್ನ ಕರಾಳಮುಖದ ಪ್ರಭಾವದ ಮಹಾರೋಗದ  ವಿಕಾರವನ್ನು  ತೋರಿಸಿಕೊಟ್ಟು ಭಯಭೀತರನ್ನಾಗಿ ಮಾಡಿದೆ. ಈಗ ಪುನಃ ಹೊಸ ವರ್ಷವಾದ *ಶಾರ್ವರಿ ನಾಮ ಸಂವತ್ಸರ*  ತನ್ನ ಭಕ್ತಿ ಧರ್ಮ ಜ್ಙಾನ ಶುದ್ಧತೆ ಆರೋಗ್ಯ ಸಮೃದ್ಧಿ ಐಶ್ವರ್ಯ ಇತ್ಯಾದಿಗಳನ್ನು ಒದಗಿಸಿ ನಮ್ಮನ್ನು ನಿರಾಳಗೊಳಿಸಬೇಕಿದೆ.   *ಕರಾಳ ದಿನಗಳಲ್ಲಿಯೂ ನಿರಾಳಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು.....* ರಾಹುವಿನ ಕರಿನೆರಳಿನ ಪ್ರಭಾವದಿಂದ, ಲಕ್ಷಲಕ್ಷ ಕೋಟಿ ಕೋಟಿ ಜನರುಗಳು ತಮ್ಮ ತಮ್ಮ  ಪ್ರಾರಬ್ಧದಿಂದ ಇಂದು ಮಹಾ ಕರಾಳದಿನಗಳನ್ನು ಎದರಿಸುತ್ತಿದ್ದಾರೆ. ನಾವೂ ಎದುರಿಸುತ್ತಿದ್ದೇವೆ.  ನಮ್ಮ ಕಳೆದ ಜೀವನದಲ್ಲಿಯೇ ಈ ತರಹದ ಮರೆಯಲಾರದ ಕರಾಳ ದಿನಗಳನ್ನು ಅನುಭವಿಸಿಲ್ಲ.  ಇಂದು ಅನುಭವಿಸುತ್ತಿದ್ದೇವೆ. *ಓ ಪವಮಾನ !!! ಕರಣಿಸು ದಯೆ ತೋರು...*  "ಸಂಸಾರಾತ್ಪಾವಯಿತ್ವಾ ಯತ್ ಮಹಾನಂದೇ ಮಿನೋತ್ಯಯಂ" ಸಂಸಾರದಲ್ಲಿ ಬರುವ ನೂರಾರು ಸಾವಿರಾರು ದೋಷಗಳೆಂಬ ದುಃಖಗಳೆಂಬ ರುಜಿ

*ಜನವಿದೂರ ಜ್ವರ ವಿದೂರ....*

Image
 *ಜನವಿದೂರ ಜ್ವರ ವಿದೂರ....* ಜನರಿಂದ ದೂರ ಇರುವದು ನಮ್ಮ ಪದ್ಧತಿ. ಜನರಿಂದ ದೂರ ಇದ್ದಷ್ಟು ಜ್ವರ ವಿದೂರ. ಜ್ವರಗಳು ಅನೇಕ ವಿಧ. ಆ ಎಲ್ಲ ತರಹದ ಜ್ವರಗಳಿಗೂ ಜನವಿದೂರತೆಯೇ ಮೊದಲ ಮದ್ದು. ಜ್ವರಗಳು ಎಂದರೆ ರೋಗ.‌ ಆರೋಗಗಳು ದೇಹ ಇಂದ್ರಿಯ ಮನಸ್ಸು ಇವುಗಳಿಗೆ ಬರುವಂತಹದ್ದು.  ಆ ರೋಗಗಳ ಉಪಶಮನ ಎಲ್ಲದರಿಂದ ದೂರಾಗಿ ತಾನಿರುವದರಿಂದಲೇ. "ಪಾಪ" ಎಂಬ ಜ್ವರ ಬರದಿರಲೀ ಎಂಬ ಉದ್ದೇಶ್ಯದಿಂದ ಬ್ರಾಹ್ಮಣ ತಾ ಮಡಿ ಮಡಿ ಎಂದು ಯೋಚಿಸುತ್ತಾ ಇರುತ್ತಾನೆ. ತಾನು ಮಡಿಯಿಂದ ಇರುವಾಗಲೂ, ಅದೇ ಮಡಿಯಲ್ಲಿ ಇದ್ದ ತನ್ನವರನ್ನೂ ತಾ ಮುಟ್ಟಲಾರ. ಪಾಪ ಜ್ವರ ಬರಬಾರದು ಎಂದು. ಇದು ಬ್ರಾಹ್ಮಣರ ಪದ್ಧತಿ. ಈ ಪದ್ಧತಿಗೆ ಬೈದವರೇ ಹೆಚ್ಚು. ಆದರೆ  ಇವತ್ತು ಇದೇ ಸ್ಥಿತಿ ಸಮಸ್ತ ದೇಶಕ್ಕೂ, ದೇಶದ ಜನರಿಗೂ,  ವಿದೇಶದ ಸಕಲರಿಗೂ ಒದಗಿಬಂದಿದೆ.  ತನ್ನವರನ್ನೂ ತಾನು ಮುಟ್ಟದಂತೆ ಒಂದು ಜ್ವರ ತಾನು ಮಾಡಿಟ್ಟಿದೆ. ಈ ಜ್ವರದ ಪರಿಹಾರ "ಯಾರನ್ಬೂ ಮುಟ್ಟದೆ, ಎಲ್ಲದರಿಂದಲೂ ದೂರಾಗಿ ತಾನು ಇರುವದು" ಈ ನಿಯಮವೇ ಅತ್ಯಂತ ಪರಿಪಾಲನೀಯ ಎಂದಾಗಿದೆ. *ಜನವಿದೂರತೆಯೇ ಜನಾರ್ದನನ ಒಲುಮೆಗೆ ಮೆಟ್ಟಲು...* ಜನರ ಎಲ್ಲ ರೋಗಗಳನ್ನು ಅರ್ದನ ಮರ್ದನ ಮಾಡುವ *ಜನಾರ್ದನ* ನ ಆರಾಧನೆಗೆ ಇಂದು ಜನರ ಅಸಡ್ಢೆ. ಅಸಡ್ಢೆ ತೋರಿದ ಎಲ್ಲ ಜಗತ್ತನ್ನೇ ತಲ್ಲಣಿಸಿ ಇಟ್ಟಿದೆ ಸಣ್ಣ ಜ್ವರ. ಈ ಜ್ವರದ ಹರಡುವಿಕೆಯನ್ನು ನಿಲ್ಲಿಸಲು ಜನವಿದೂರತೆ ಬೇಕು. ಜ್ವರವನ್ನು ಕ

*ಓ ಭಯ ಸಂಹರನೇ ನಿನಗೇ ನಮಃ...*

Image
*ಓ ಭಯ ಸಂಹರನೇ ನಿನಗೇ ನಮಃ...* "ಇಂದೂ ಕಾಡುವ ಮುಂದೆಯೂ ಕಾಡದೇ ಬಿಡದ ಒಂದು ವಿಶಿಷ್ಟ ಪದಾರ್ಥ ಎಂದರೆ ಅದು ಭಯಗಳು" ಮಾತ್ರ. ಕೆಲವೊಂದು ಸಲ ಭಯ ನಮ್ಮ ನ್ಯೂನತೆಗಲಿಂದ ಬರುತ್ತವೆ. ಮತ್ತೆ ಹಲವು ಸಲ ನಮ್ಮ ತಪ್ಪಿನಿಂದ ಬರುತ್ತವೆ. ಮತ್ತೆ ಇನ್ಯಾರದೋ ತಪ್ಪಿನಿಂದ ಬರುತ್ತವೆ. ಇನ್ನನೇಕ ಸಲ ಯಾಕೆ ಭಯಗಳು ಬಂದಿವೆ ಎನ್ನುವದೇ ಗೊತ್ತಾಗುವದಿಲ್ಲ ಹಾಗೆ ಭಯಗಳು ನಮ್ಮನ್ನು ಆವರಿಸಿರುತ್ತವೆ. ಭಯಗಳಿಂದ ಮೇಲೆಳಲೇ ಬೇಕು. ನಿರ್ಭೀತ ಮುನ್ನುಗ್ಗಿ ಸಾಧಿಸುತ್ತಾನೆ. ಭಯಭೀತ ಏನನ್ನೂ ಸಾಧಿಸಲಾರ. ಅಂತೆಯೇ ಭಯಗಳು ಪರಿಹರಿಸಿಕೊಳ್ಳಲೇಬೇಕು.  *ಭಯಗಳು ಇದ್ದರೆ ಆಗುವ ಅನರ್ಥಗಳೇನು...??* ಮೊದಲಿಗೆ ಭಯಗಳು ಜೀವನ ಪ್ರಗತಿಗೆ ಮಾರಕ. ಈಗೆ ಭಯ ಪಡುವ ಅಗತ್ಯವಿಲ್ಲದಿದ್ದರೂ ಭಯಗ್ರಸ್ತರಾಗಿಯೇ ಜೀವನ ನಡೆಸುತ್ತಾ ಇದ್ದೇವೆ. ಪ್ರಚಲಿತವಾದ *ಕೊರೋನಾ* ಎಂಬ ರೋಗ. ಈ ರೋಗ ನಮ್ಮತನ ಬಂದಮೇಲೆ ಭಯಪಡುವದು ಒಂದಾದರೆ ನಮ್ಮತನ ಎಲ್ಲಿ ಬರತ್ತೋ ಎಂಬ ಭಯದಲ್ಲಿಯೇ ದಿನ  ಕಳೆಯುವಂತಾಗಿದೆ. ಇನ್ನೊಬ್ಬರು ಖೇಮ್ಮಿದಾಗ ಭಯ ಪಡುವದು ಒಂದಾದರೆ, *ನಾನೇ ಖೆಮ್ಮಿದಾಗಲೂ ನನಗೇ ಎಲ್ಲಿ ಕೊರೊನಾ ಬಂದುಬಿಡ್ತೋ* ಎಂದು  ಭಯಪಡುವ ದಿನ ಇಂದಾಗಿದೆ. ಇದು ಒಂದು ನಿದರ್ಶನ ಇಂತಹ ನೂರಾರು ಸಾವಿರಾರು ಭಯಗಳು.  *ಈ ಭಯಗಳ ಪರಿಹಾರ ಹೇಗೇ....??* ವೈಷ್ಣವರಾದ ನಾವು ನಿತ್ಯ ವಿಷ್ಣು ಸಹಸ್ರನಾಮ ಪಠೀಸುತ್ತೇವೆ. ಈ ವಿಷ್ಣು ಸಹಸ್ರನಾಮವೇ ಎಲ್ಲತರಹದ ಭಯಪರಿಹಾರಗಳಿಗೆ ಮೂಲ.

*ಈ ದುರಿತಗಳ ನಿವಾರಿಸುವರಾರೋ.....*

Image
*ಈ ದುರಿತಗಳ ನಿವಾರಿಸುವರಾರೋ.....* ದಾಸಶ್ರೇಷ್ಠರಾದ ಜಗನ್ನಾಥ ದಾಸರು ಯತಿಪುಂಗವರಾದ *ಶ್ರೀಶ್ರೀವಾದಿರಾಜರನ್ನು* ಕೊಂಡಾಡುವಾಗ "ವಾದಿರಾಜ ಗುರು ನೀ ದಯ ಮಾಡದೇ ಈ ದುರಿತಗಳ ನಿವಾರಿರಾರೋ" ಎಂದು ಮನಬಿಚ್ಚಿ ಭಕ್ತಿ ಇಂದ ಸ್ತುತಿಸುತ್ತಾರೆ.  *ಶ್ರೀವಾದಿರಾಜ ಗುರು ನೀ ದಯಮಾಡದೇ..* ದುರಿತಗಳು ಸಾವಿರಾರು. ಸಾವಿರಾರು ತಹದ್ದು. ಊಟ ನಿದ್ರೆ ಇಂದಾರಂಭಿಸಿ ಎಲ್ಲ ವೈಭವಗಳಿಗೂ ಮೊದಲು ಅಡ್ಡಬರುವವು ದುರಿತಗಳು. ಅಂತೆಯೇ ಅಪೇಕ್ಷೆಪಟ್ಟಿದ್ದೆಲ್ಲ ತಿನ್ನಲು ಆಗಲ್ಲ. ದೇವರ ನೈವೆದ್ಯವನ್ನೇ ತಿನ್ನಲು ಆಗುವದೇ ಇಲ್ಲ. ಸಂತೃಪ್ತಿಯ ನಿದ್ರೆಕಾಣದೆ ಇರುವ ಜನರೇ ಎಲ್ಕರು. ಇದೆಲ್ಲದಕ್ಕೂ ಮೂಲ ದುರಿತಗಳು.  *ದುರಿತದೂರರೇ ದುರಿತಗಳನ್ನು ಪರಿಹರಿಸಲು ಸಮರ್ಥರು* ಶ್ರೀವಾದಿರಾಜರಿಗೆ ದುರಿಗಳು ತುಂಬ ಕಡಿಮೆ. ಅಂತೆಯೇ ನೂರಿಪ್ಪತ್ತು ವರ್ಷಗಳ ಸಂಪೂರ್ಣ ಆಯುಷ್ಯ ಒದಗಿಬಂತು. ಸಂಪೂರ್ಣ ಸುದೃಢ ಆರೋಗ್ಯವೂ ಲಭಿಸಿತ್ತು. ಉಸಿರುವವರೆಗೂ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ, ಮಧ್ವವಾಙ್ಮಯದ ಸಿದ್ಧಾಂತದ ನಿರಂತರ ಸೇವಾ ಸೌಭಾಗ್ಯವೂ ಪೂರ್ಣ ಒದಗಿಬಂತು. (ವೃಂದಾವನ‌ಪ್ರವೇಶದ ಮತರೂ ಕೋಟಿ‌ಕೋಟಿ ಜನರಿಗೆ ಈ ಸೇವಾ ಸೌಭಾಗ್ಯ ನಿಮ್ಮ ಅನುಗ್ರಹದಿಂದಲೇ ಸಿಕ್ಕಿದೆ.) ಒಂದು ಕ್ಷಣವೂ  ಕೃಷ್ಣನ ಹಯಗ್ರೀವರ ಆರಾಧನೆ ತಪ್ಪಿತೂ ಎಂದಾಗಲಿಲ್ಲ. "ಆಡು ಮುಟ್ಟದ ತೊಪ್ಪಲು ಸಿಗಬಹುದು, ಆದರೆ ಶ್ರೀವಾದಿರಾಜರು ಟ್ಟಿಪ್ಪಣಿ ಬರೆಯದ / ಅಧ್ಯಯನ ಮಾ

*ಶ್ರೀ ಶ್ರೀಸತ್ಯಬೋಧ ತೀರ್ಥರು*

Image
(ಶ್ರೀಸತ್ಯಬೋಧ ತೀರ್ಥರಿಂದ ಪ್ರತಿಷ್ಠಾಪಿತ ಪ್ರಾಣದೇವರು @ಗುತ್ತಿ) *ಶ್ರೀ ಶ್ರೀಸತ್ಯಬೋಧ ತೀರ್ಥರು* ಇಂದಿನ ಆರಾಧ್ಯ ದೈವರಾದ ಶ್ರೀಶ್ರೀಸತ್ಯಬೋಧ ತೀರ್ಥ ಶ್ರೀಪಾದಂಗಳವರ ಸನ್ನಿಧಿಗೆ ದೌಡಾಯಿಸುವ ಭಕ್ತಸಮೂಹವನ್ನು ನೋಡುವದೇ ಒಂದು ಆಸಕ್ತಿದಾಯಕ ವಿಷಯ.  ಸವಣೂರು ವಾಸಸ್ಥಾನವಾದರೂ ಕರ್ನಾಟಕ ಆಂಧ್ರ ತಮಿಳುನಾಡು ಮುಂಬಯಿ ಹೀಗೇ ನಾನಾ ಊರು ರಾಜ್ಯಗಳಲ್ಲಿ ಮಹಾಮಹಿಮರ ಆರಾಧನೆ ಜರುಗುತ್ತದೆ. ಇದು ಮಹಾಮಹಿಮರ ಒಂದದ್ಭುತ ಶಕ್ತಿ.  ಶ್ರೀಶ್ರೀಸತ್ಯಬೋಧ ತೀರ್ಥಶ್ರೀಪಾದಂಗಳವರ ಅತ್ಯಂತ ಅಂತರಂಗದ ಶಿಷ್ಯರುಗಳಲ್ಕಿ ನಮ್ಮ ಮಾನವಿ ದಾಸರೆಂದೇ ಪ್ರಸಿದ್ಧರಾದ ಜಗನ್ನಾಥದಾಸರೂ ಒಬ್ಬರು. ಶ್ರೀ ಜಗನ್ನಾಥ ದಾಸರು ಶ್ರೀ ಸತ್ಯಬೋಧತೀರ್ಥರ ಶ್ರೀಪಾದಂಗಳವರ ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.  *ಕಾಮಧೇನು  ಸೂರ್ಯ ಬೆಂಕಿ - ಶ್ರೀಸತ್ಯಬೋಧರು* ಜಗನ್ನಾಥ ದಾಸರು ಶ್ರೀಸತ್ಯಬೋಧರನ್ನು "ಕಾಮಧೇನು ಸೂರ್ಯ ಬೆಂಕಿ" ಇವುಗಳಿಗೆ ಹೋಲಿಸಿ ಇವರುಗಳನ್ನು ಮನೆ ಮನದಲ್ಲಿ ಸಾಕಿಟ್ಟುಕೊಳ್ಳಬೇಕು ಎಂದು ತಿಳಿಸುತ್ತಾರೆ. ಅದು ಹೇಗೇ ???   *ಕಾಮಧೇನು - ಶ್ರೀ ಸತ್ಯಬೋಧರು* ಶ್ರೀಸತ್ಯಬೋಧತೀರ್ಥರು ಭಕ್ತರ ಸಕಲವಿಧ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಆದ್ದರಿಂದ ಶ್ರೀಸತ್ಯಬೋಧರೇ  *ಕಾಮಧೇನು.*  ಶ್ರೀ ಸತ್ಯಬೋಧರೆಂಬ ಕಾಮಧೇನು ನಿರಂತರ ಜ್ಙಾನವನ್ನೇ ಕೊಡುತ್ತದೆ ಆದ್ದರಿಂದ, ಇವರೇ *ನಿಜಕಾಮಧೇನು* ಎಂದು ದಾಸರಾಯರು ವರ್ಣಿಸುತ್ತಾ

*ಮಹಿಳಾ ದಿನಾಚರಣೆಯಂದು ಮಹಿಳೆಯರೆಲ್ಲರಿಗೂ ಶುಭಾಷಯಗಳು*

Image
*ಮಹಿಳಾ ದಿನಾಚರಣೆಯಂದು, ನಮ್ಮ ಮಹಿಳೆಯರೆಲ್ಲರಿಗೂ ಶುಭಾಷಯಗಳು* ಪುರುಷ ಸಾಮಾಜವಾಗಿದ್ದರೂ, ಅತ್ಯುನ್ನತ ಸ್ಥಾನ ಪಡೆದದ್ದು ಮಹಿಳೆ. ಇದು ಇಂದಿನದು ಅಲ್ಲ ಇತಿಹಾಸ ಕಾಲದಿಂದಲೂ ನೋಡುತ್ತಿರುವದು. ರಾಮಚಂದ್ರ ಕೃಷ್ಣ ಪಾಂಡವರು ಮೊದಲಾದ ಮಹನೀಯರುಗಳು ರಾಜ್ಯವಾಳುತ್ತಿದ್ದರೂ ಸೀತೆ ಸತ್ಯಾ ದ್ರೌಪದಿ ಇವರುಗಳಿಗುರುವ ಸ್ಥಾನ ತುಂಬ ವಿಶಿಷ್ಟ ಸ್ಥಾನವೇ ಇತ್ತು. ಸ್ತ್ರೀ ತಾನು ಉನ್ನತಿಗೆ ಏರಲು ಪಟ್ಟ ಸಾಹಸ ಅಷ್ಟಿಷ್ಟಲ್ಲ. ಉನ್ನತಕ್ಕೆರುವ ಅಥವಾ, ತನ್ನವರನ್ನು ಉನ್ನತಕ್ಕೆ ಏರಿಸುವ ಏನೆಲ್ಲ ಗುಣಗಳಿವೆ ಆ ಎಲ್ಲ ಗುಣಗಳು ಸಹಜವಾಗಿಯೇ ಮಹಿಳೆಯಲ್ಲಿ ಹುಟ್ಟಿನಿಂದಲೇ ಅಡಗಿ ಕುಳಿತಿರುತ್ತವೆ.  *ಸಂಯಮ, ತಾಳ್ಮೆ, ಕ್ಷಮಾ, ಶೀಲ, ತ್ಯಾಗ,  ಸೌಜನ್ಯ, ತಿಳುವಳಿಕೆ, ಕಷ್ಟ ಸಹಿಷ್ಣುತಾ, ಪರದುಃಖದುಃಖಿತಾ, ಸ್ನೇಹ, ಪ್ರೀತಿ, ಮಮತಾ,  ನಿರ್ವ್ಯಾಜ್ಯತಾ, ಪಡೆದದ್ದರಲ್ಲೆ ಸುಖ ಕಾಣುವ ಕಲೆ, ಇರುವದರಲ್ಲಿಯೇ ಹೊಂದಿಸುವ ಸರಿಪಡಿಸುವ ಕೌಶಲ, ನಿರಂತರ ಪರಿಶ್ರಮ. ಎಷ್ಟೇ ದುಃಖವಿರಲಿ ನಗುವಿನ ಮುಖ ಹೊತ್ತಿರುವದು. ತನ್ನವರು ಸಮೃದ್ಧವಾಗಿರಲಿ ಎಂಬ ಔದಾರ್ಯ, ಧಾರ್ಮಿಕತಾ, ನಿರಂತರ ನಾಮಸ್ಮರಣೆ, ಕೋಶದ ಆಯವ್ಯದ ಕಡೆ ಸೂಕ್ಷ್ಮ ಗಮನ, ಮಕ್ಕಳ ಪಾಲನೆ ಪೋಷಣೆ ರಕ್ಷಣೆ, ಮನೆಯನ್ನು ನೋಡಿಕೊಳ್ಳುವ ಕಲೆ, ಮನೆಯ ಪರಿಪೂರ್ಣ ಜವಾಬ್ದಾರಿ, ಅತ್ತೆ ಮಾವ ಪತಿ ಮಕ್ಕಳ, ತಂದೆ, ತಾಯಿ, ಅಣ್ಣ ತಮ್ಮ ನಾದನಿ ಅತ್ತಿಗೆ ಭಾವ ಮೈದುನ ಮೊದಲಾದ ಬಂಧುಗಳ ನಿರ್ವಹಣೆ* ಮೊದಲಾದ ನೂರಾರು ಗುಣಗಳ ಗ

*ಕಸ... ರಸ*

Image
*ಕಸ.. . ರಸ* ಕಸ ಮತ್ತು ರಸಗಳು ಕೂಡಿ ಕೂಡಿ ಇರುವಂತಹವುಗಳು. ರಸವಿದ್ದಲ್ಲಿ ಕಸವಿದೆ, ಕಸವಿರುವಲ್ಲಿ ರಸವಿದೆ. ಕಸ ಬಳಿಸಿದಾಗಲೇ ರಸ. ರಸ ಬಳಿಸಿ ಆದಮೇಲೆಯೆ ಕಸ. ಹೀಗೆ ಕಸ ರಸಗಳು ಒಂದಕ್ಕೆ ಒಂದು ಪೂರಕ.  *ಕೈ ಕೆಸರಾದರೆ ಬಾಯಿ ಮೊಸರು.*  ಕನ್ನಡ ಪ್ರಸಿದ್ಧ ನಾಣ್ಣುಡಿ. ಕೈ ಕೆಸರಾಗಬೇಕು ಎಂದರೆ ಕಸ ಇರಬೇಕು. ಕಸವಿದ್ದಲ್ಲೇ ಕೆಸರು. ರಸ ಪಡೆಯಬೇಕು ಎಂದಾದರೆ ಕಸದಲ್ಲಿ ಶ್ರಮಿಸಿ, ಕೆಸರಿನಲ್ಲಿ ದುಡಿದಾಗ ಮುಂದೆ ಬಾಯಿಗೆ ಮೊಸರೆಂಬ ರಸ ಸಿದ್ಧ.  *ತುಂಬ ವಿಚಿತ್ರ ಕೆಲವೊಮ್ಮೆ ರಸಕಾರಣರು ಕಸವಾಗಿಬಿಡುತ್ತಾರೆ..* ಕಷ್ಡದ ದಿನಗಳೆ ಸುನಾಮಿಯಂತೆ ಅಪ್ಪಳಿಸುತ್ತಿರುವಾಗ, ರಸ ತುಂಬ ದೂರದ ಮಾತು. ಕನಸ್ಸಿನ ಕುದುರೆ, ಅಥವಾ ಹಗಲ್ಗನಸು  ಆಗಿರುತ್ತದೆ ರಸ. ಈ ಥರದ ಅವಸ್ಥೇಯಲ್ಲಿ ಮುಣುಗಿದಾಗ, ಕಸದಲ್ಲೇ ನಿಂತು ಕ್ಷಣ ಕ್ಷಣಕ್ಕೆ ಬೆಂಬಲವಾಗಿ ಇದ್ದು, ಉತ್ಸಾಹ ತುಂಬಿ, ಭಯ ಹತಾಶೆಗಳನ್ನು ತೊಡಗಿಸಿ, ಕಾನ್ಫಿಡೆಂಟ್ ತುಂಬಿ, ಅನೇಕ ಉಪಾಯಗಳನ್ನು ತೋರಿ, ವಿಘ್ನಗಳನ್ನು ಪರಿಹರಿಸಿ, ದೈವ ಬಲವನ್ನು ಹೆಚ್ಚಿಸಿ, *ನಮಗೆ ರಸ ಸಿಗಲು, ತಮ್ಮ ಕೈ ಕೆಸರು ಮಾಡಿಕೊಂಡಿರುತ್ತಾರೆ ಕೆಲವರು.* ಆದರೆ ಅಪರೂಪದ, ತುಂಬ ದಿನಗಳಿಂದ ತಡಕಾಡಿದ  ರಸ ನಮಗೆ ಸಿಕ್ಕ ಕ್ಷಣಕ್ಕೆ,  ಆ ಕಸಗಳಲ್ಲಿ ಕೈ ಆಡಿಸಿದ ಎಲ್ಲ ಪರಮ ಹಿತೈಷಿಗಳಾದ, ದೇವರು, ವಾಯು ದೇವರು, ದೇವತೆಗಳು, ಗುರುಗಳು, ತಂದೆ ತಾಯಿಗಳು, ಹಿತೈಷಿ, ಮಿತ್ರ, ಸ್ನೇಹಿತ ಮೊದಲು ಮಾಡಿ ಎಲ್ಲರೂ ರಸಸಿಕ್ಕವ

*ಪ್ರಾರ್ಥನೆ -- ಪಡೆದುಕೊಳ್ಳಲೋ ?? ಕಳೆದುಕೊಳ್ಳಲೋ...??*

*ಪ್ರಾರ್ಥನೆ -- ಪಡೆದುಕೊಳ್ಳಲೋ ?? ಕಳೆದುಕೊಳ್ಳಲೋ...??*  ಬೇಡುವವರೇ ನಾವು ಆಗಿದ್ದೇವೆ ಕೊಡುವವರು ಅಲ್ಲ, ಆದ್ದರಿಂದ  "ನಾವು ಪ್ರಾರ್ಥನಾ ಸಮಾಜದಲ್ಲಿ ಬರುವಂತಹವರು." ಪ್ರಾರ್ಥಿಸುವವರೇ ಬೇಡುವವರೇ.  ಪಡೆಯುವವನಿಗೆ ಪ್ರಾರ್ಥನೆಕಿಂತಲೂ ಮಿಗಿಲಾದಶಕ್ತಿ ಮತ್ತೊಂದು ಇಲ್ಲ ಎಂದು ಹೇಳುತ್ತದೆ ಶಾಸ್ತ್ರ. ಅಂತೆಯೇ  ಪ್ರಾರ್ಥನೆಯಲ್ಲಿ ಮುಣುಗಿ ಹೋಗಿರುತ್ತೇವೆ.  ಏನು ಪಡೆಯಬೇಕಿದೆ ಅದೆಲ್ಲ ಪ್ರಾರ್ಥನೆಯಲ್ಲಿಯೇ ಅಡಗಿದೆ.  ಪ್ರಾರ್ಥನೆಯನ್ನು ಬೇಡುವದನ್ನು ಕಣ್ಣಿಗೆ ಕಂಡ ಅಥವಾ ಪ್ರತಿಷ್ಠಾಪಿತ, ದೇವರು ಗುರುಗಳಲ್ಲಿ ಮಾತ್ರವಲ್ಲದೆ, ಅರಿಷಿಣ ಕುಂಕುಮ ಹಚ್ಚಿದ ಗುಂಡುಕಲ್ಲು ಕಂಡರೂ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿರುತ್ತೇವೆ. ತುಂಬ ವಿಚಿತ್ರ.  ಕೊಡುವಷ್ಟು ಉದಾರಿಯಂತೂ ಅಲ್ಲವೇ ಅಲ್ಲ.  ಬೇಡಿದರೆ ತನ್ನತನ ಕುಗ್ಗಬಹುದು ಎಂಬ ವಿಚಾರವೂ ಇಲ್ಲದಷ್ಟು ಪ್ರಾರ್ಥನೆಯಲ್ಲಿಯೇ ರತರಾಗಿರುತ್ತೇವೆ. *ಪ್ರಾರ್ಥನೆಗೆ ಅರ್ಹನಾರು...??.* ಸ್ವಾಮಿ ದಾಸ್ಯಭಾವ ಅಡಗಿರಬೇಕು. ತುಂಬ ಸೇವೆ ಮಾಡಿರಬೇಕು. ಯಜಮಾನನು ಸಂತುಷ್ಟನೂ ಆಗಿರಬೇಕು. ಭಕ್ತಿಯ ಭಾವ ತುಂಬಿರಬೇಕು. ಪ್ರೀತಿ ಅಂತಃಕರಣಗಳ ಸೆಳವು ತುಂಬಾ ಇದೆ ಎಂದಾಗಿರಬೇಕು. ದೇವರನ್ನು ಸಂತೋಷಗೊಳಿಸುವ ಹಪಹಪಿ ಇರಬೇಕು. ಉಪಕಾರದ ಸ್ಮರಣೆ ಇರಲೇಬೇಕು. ಇವೆಲ್ಲ ಇದ್ದರೆ ಪ್ರಾರ್ಥನೆಗೆ ತುಂಬ ಮಹತ್ವ. ಫಲಕಾರಿಯೂ ಆಗುತ್ತದೆ. ಇಲ್ಲವಾದಲ್ಲಿ ಪ್ರಾರ್ಥನೆಯಾಗಿಯೇ ಉಳಿದು ಹುಸಿಹೋಗಿ ಬಿಡುತ್