Posts

Showing posts from October, 2018

*ಗುಣಗಳ ಗಣಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು*

*ಗುಣಗಳ ಗಣಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು* ಪಡೆಯಲೇ ಹುಟ್ಟಿದವರು ನಾವು. ಪಡೆಯಲು ಇರಬೇಕು, ಪಡೆಯುವ ಪದಾರ್ಥದ ಮೇಲೆ ಪ್ರೀತಿ. ಪ್ರೀತಿ ಇದ್ದರೆ ಪಡೆಯುವ ಹಂಬಲ. ಪಡೆಯುವ ಪದಾರ್ಥದ ಮೇಲೆ ಪ್ರೀತಿ ಹುಟ್ಟುವದು ತುಂಬ ವಿರಳ. ಪ್ರೀತಿ ಹುಟ್ಟುವದು ದೃಢವಾಗುವದು  *ತಾಳ್ಮೆ* ಇರುವಲ್ಲಿ ಮಾತ್ರ.  *ತಾಳ್ಮೆ* ಪ್ರೀತಿಗೊಂದೇ ತವರು ಅಲ್ಲ, ಎಲ್ಲ ಗುಣಗಳಿಗೂ ತವರು *ತಾಳ್ಮೆ* ಎಂದರೆ ತಪ್ಪಾಗದು.  ತಾಳ್ಮೆ ಇಲ್ಲದವನಿಗೆ ಪ್ರೀತಿಸಲಾಗದು, ಪ್ರೀತಿಯೇ ಇಲ್ಲದಿರೆ ಪಡೆಯುವ ಮನಸ್ಸೇ ಬರದು. ಪಡೆಯುವದಂತೂ ದೂರದ ಮಾತು.  "ಪ್ರೀತಿಯಿಲ್ಲದ ವಸ್ತು ನಮ್ಮಲ್ಲಿ ಇದ್ದರಷ್ಟೆ, ಇಲ್ಲದಿದ್ದರೂ ಅಷ್ಟೆ." ತಾಳ್ಮೆ ಇರುವಲ್ಲಿ ಪ್ರೀತಿಯಿದೆ. ಪ್ರೀತಿ ಯಾವದೆಲ್ಲದರ ಮೇಲಿದೆಯೋ ಅದೆಲ್ಲದಕ್ಕೂ ನಾನು ಒಡೆಯನೆಂದೆನಿಸಿಕೊಳ್ಳವಹುದು. *ಪಡೆಯಲು ಇಚ್ಛೆ ಇದ್ರೆ ಸಾಲದೆ... ??* ಒಬ್ಬ ವ್ಯಕ್ತಿಯಲ್ಲಿ Athletic ಓಟಗಾರ ಆಗುವ  ಬೇಕಾದ ಶಕ್ತಿಯೂ ಇದೆ. ಅಂತೆಯೇ ಓಟಗಾರನಾಗಲು ಇಚ್ಛೇ ಪ್ರಬಲವಾಗಿದೆ.  ಇಚ್ಛೆ ಇದ್ರೆ ಸಾಲದು. ಅಪಾರ ಇಚ್ಛೆ ಶಕ್ತಿ ಇದೆ ಎಂದ ಮಾತ್ರಕ್ಕೆ "ಅಂಬೆಗಾಲು ಇಡುವದಕ್ಕೂ ಮೊದಲೇ, ಇಪ್ಪತ್ತು ಮೈಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲವಷ್ಟೆ."  ಮೊದಲು ನಿಲ್ಲಬೇಕು, ಮೇಲೆರಬೇಕು, ನಡಿಯಬೇಕು. ಈಗಿನ ಸಾಮರ್ಥ್ಯವೇನು ?? ಇನ್ನೆಷ್ಟು ಪ್ರಗತಿ ಸಾಧಿಸಬೇಕು...?? ಇಷ್ಟೆಲ್ಲ ಯೋಚಿಸದೆ ಧುಮಕಿದರೆ ಕೈಕಾಲು ಮುರಿದುಕೊಂ

*"ನಾನು - ಅಲ್ಲ, ನಾವು"*

Image
*"ನಾನು - ಅಲ್ಲ, ನಾವು"* "ನಾನು" ಇದು ಅಹಂಕಾರದ ಸಂಕೇತ ಆದರೆ, "ನಾವು" ಇದು ವಿನಯದ ಸಂಕೇತ. ವಿನಯವಂತನಿಗೆ ಇರುವ ಬೆಲೆ ಇನ್ನೆಲ್ಲಿ ಇಲ್ಲ. ವಿದ್ಯಾವಂತನಿಗೂ, ಧನವಂತನಿಗೂ, ಕುಲವಂತನಿಗೂ ಇಲ್ಲ ಬೆಲೆ ವಿನಯವಂತನಿಗೆ ಇದೆ.  ವಿನಯವಂತಿಕೆ ಅರಳುವದೇ "ನಾವು" ಎಂಬ ಭಾವ ಇರುವಲ್ಲಿ. "ನಾನು" ಎನ್ನುವದರಲ್ಲಿ ಭೋಗವಿದೆ. ಹಾಗಾಗಿ ಲಕ್ಷ್ಯ  target ನಾನೇ. ಸುಖಕ್ಕೆ ನಾನೇ ಭಾಗಿ, ನಿದ್ರೆ ನಾನೇ ಮಾಡಬೇಕು, ಮಾತು ನಾನೇ ಆಡಬೇಕು, ನನ್ನನ್ನು ಕುರಿತೇ ಮಾತಾಡಬೇಕು,  ಕ್ಷಮೆ ನನಗೇ ಕೇಳಬೇಕು, ಒಳಿತು ನನ್ನದೇ ಇದೆ, ಹೀಗೆ ನಾನಾತರಹದ ಭಾವಗಳ ಅಭಿವ್ಯಕ್ತಿಗೊಳಿಸುವದೇ ನಾನು.  *ಇದರಲ್ಲಿ ತಾನು ಏನನ್ನೂ ಪಡೆಯಲಾರ. ಕಳೆದು ಕೊಳ್ಳುವದೇ ಹೆಚ್ಚು.* ಇದು ಎಲ್ಲರ ಅನುಭವದ ಮಾತು.  "ನಾವು" ಎನ್ನುವದೇನಿದೆ ಇದರಲ್ಲಿ ತ್ಯಾಗವಿದೆ. ಹಾಗಾಗಿ ಲಕ್ಷ್ಯ target ನಮ್ಮವರೆಲ್ಲರೂ. ಮೊದಲು ನಮ್ಮವರದು, ನಂತರ ನನ್ನದು. ನಮ್ಮವರ ಖುಶಿಯಲ್ಲಿಯೇ ತನ್ನ ಖುಶಿ. "ನಾವು" ಎನ್ನುವ ಭಾವದಲ್ಲಿ ನಮ್ಮವರೆಲ್ಲರು ಇದ್ದಾರೆ. ಮೊದಲು ನಮ್ಮವರು ಇರುತ್ತಾರೆ. *ಇತರರಿಗಾಗಿ ಹೆಚ್ಚೆಚ್ಚು ಯಾರು ದುಡಿಯುವವರೋ ಅವರೇ ಹೆಚ್ಚು ಸುಖಿಗಳು.*  ಇತರರಿಗಾಗಿ ದುಡಿಯುವವರಲ್ಲಿ, ಇತರರ ಬಗ್ಗೆ ಇರುವ  ಭಾವ "ನಾವು" ಎಂಬುವದೇ. ಸುಖ, ತೃಪ್ತಿ, ಶಾಂತಿ, ನೆಮ್ಮದಿ ಸಮಾಧಾನ ನನಗೆ ಬೇಕು.  ಇನ್

*ದೊಡ್ಡದು ಒಂದನ್ನೇ ನೋಡಿ, ಇವನು ಹೀಗೆಯೇ ಎಂದು ಗುರುತಿಸುವದು ಸರಿಯೇ....???*

Image
*ದೊಡ್ಡದು ಒಂದನ್ನೇ ನೋಡಿ, ಇವನು ಹೀಗೆಯೇ ಎಂದು ಗುರುತಿಸುವದು ಸರಿಯೇ....???* ಕೇವಲ ಗುಣವಂತ ದೇವರೊಬ್ಬ.  ಕೇವಲ ದೋಷಪೂರಿತ ಕಲಿ ಮಾತ್ರ.  ಉಳಿದವರಲ್ಲಿ ಗುಣ ದೋಷಗಳು ಕೂಡಿ ಇವೆ. ಲಕ್ಷ್ಮೀ ವಾಯುದೇವರುಗಳಲ್ಲಿಯ ದೋಷಗಳು, ಅವರಿಗೆ ಗುಣವಂತಿಕೆಯನ್ನೇ ತಂದುಕೊಟ್ಟಿರುತ್ತವೆ.. ಹಾಗೆಯೇ ಕಾಲನೇಮಿ ವಿಪ್ರಚಿತ್ತಿ ಮೊದಲಾದವರುಗಳಲ್ಲಿಯ ಗುಣಗಳು ಅವರಿಗೆ ದೋಷವನ್ನೇ ತಂದುಕೊಟ್ಟಿರುತ್ತವೆ... ಅಂತೂ ಸಂಸಾರಿ ಸಕಲ ಜೀವರಾಶಿಗಳಲ್ಲಿ ಗುಣಗಳೂ ಇವೆ. ಅದೇರೀತಿ ದೋಷಗಳೂ ಇವೆ. ಈ ಗುಣ ದೋಷಗಳಲ್ಲಿ ಯಾವುದೋ ಒಂದು ದೊಡ್ಡ ಗುಣವನ್ನೋ ಅಥವಾ ದೋಷವನ್ನೋ ಗುರುತಿಸಿ *ಅವನು ಹೀಗೆ* ಎಂದು ಗುರುತಿಸುವದೇನಿದೆ ಇದು ಸರಿಯೆ..?? ಶುದ್ಧ ತಪ್ಪು ಎಂದೇ ಉತ್ತರ ಹೇಳಬಹುದು. ನನಗೆ ಒಬ್ಬರು ಎರಡು ಪ್ರಶ್ನೆಗಳನ್ನು  ಕೇಳಿದರು. ಕುಡಿಯುವದು, ಜೂಜಾಡುವದು, ಸೇದುವದು ತಪ್ಪು ಹೌದೋ ಅಲ್ಲವೋ ಎಂದು. ಅವರು ದೋಷಿಗಳು ತಾನೆ.. ತಪ್ಪು ಹಾಗೂ ಅವರು ದೋಷಿಗಳೆ ಎಂದು ಉತ್ತರಿಸಿದೆ.  ಪ್ರ..) "ಧರ್ಮರಾಜ ಜೂಜಾಡಿದ" ಹಾಗಾಗಿ ಧರ್ಮರಾಜ ಜೂಜುಗಾರ. ಅವನನ್ನು  *ಗುಣವಂತ* ಎಂದು  ಏಕೆ ಗುರುತಿಸುವದು..?? ಎಂದು. ಪ್ರ..೨) ಯಾಗ ಜಪ ಇವುಗಳು ಇವು ಗುಣವೇ ತಾನೆ... ?? ಹೌದು. ಹಾಗಾದರೆ ದುರ್ಯೋಧನ ಎಂದೂ ತಪ್ಪಿಸದೆ, ಒಂದು ಮಂತ್ರವನ್ನೂ ಯಾತಯಾಮ ಮಾಡದೆ ಸಾವಿರ ಸಾವಿರ ಮಂತ್ರಗಳನ್ನು ಜಪಿಸಿದ. ಅನ್ನದಾನ ಮಾಡಿದ. ಬ್ರಾಹ್ಮಣರ ಸತ್ಕಾರ ಮಾಡಿದ. ಅನೇಕ ಉತ್ಕೃಷ್ಟಯಾಗಗಳನ್ನ

*ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....*

Image
*ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....* ಆರೈಕೆ ಮನುಷ್ಯನ ಸಹಜವಾದ ಒಂದು ಸ್ವಭಾವ. "ಮೆಚ್ಚಿದವರ ಪ್ರೀತಿಸಿದವ ಆರೈಕೆಯಲ್ಲಿ ಮನುಷ್ಯ ತಾನೂ ಅರಳುತ್ತಾನೆ. ಎಂದಿಗೂ ಬಾಡುವದಿಲ್ಲ. ಸದಾ ಹಸನ್ಮುಖಿ. ಅವನ ಉತ್ಕರ್ಷಕ್ಕೆ ಮಿತಿ ಇರದು. ಅಂತೆಯೇ ಆರೈಕೆ ಮಾಡುತ್ತಾ ಇರುತ್ತಾನೆ. ಪಕ್ಕದಲ್ಲಿ ಇದ್ದರೆ ಸಹಾಯಕ್ಕೆ ನಿಲ್ಲುತ್ತಾನೆ. ದೂರದಲ್ಲಿ‌ ಇದ್ರೆ ಮನೋಬಲವನ್ನು ಹೆಚ್ಚಿಸುತ್ತಾನೆ. ದೇವಸ್ಥಾನಗಳಲ್ಲಿ  ಇದ್ದರೆ ದೈವೀಬಲವನ್ನು ಬೆಳೆಯುವಂತೆ ಬೇಡಿಕೊಳ್ಳುತ್ತಾನೆ. ತೀರ್ಥಯಾತ್ರೆಯಲ್ಲಿ ಇದ್ದರೆ ಪುಣ್ಯ ಅಭಿವೃದ್ಧಿಸುವಂತೆ ಮಾಡುತ್ತಾನೆ. ನಿತ್ಯದ ಕೆಲಸಗಳಲ್ಲಿ ನಮ್ಮದೂ ಒಂದು ಪಾಲು ಇಟ್ಟಿರುತ್ತಾನೆ. ಈ ಎಲ್ಲ ತರಹದ ಆರೈಕೆಯಲ್ಲಿಯೇ ತಾನೂ ಅರಳುತ್ತಾ ಸಾಗುತ್ತಾನೆ. ಸಂತೃಪ್ತಿಯನ್ನೇ ಅನುಭವಿಸುತ್ತಾನೆ. ಆ ಆನಂದ ಅನುಭವಿಸಿದವನಿಗೇ ಗೊತ್ತು. *ಈ ತರಹದ ಅರಳುವಿಕೆ ಸಿಗುವದೆಲ್ಲಿ....??* ಬಹಳ ವಿಚಿತ್ರ ಕೆಲವೊಮ್ಮೆ ಯಾರ ಆರೈಕೆ ಮಾಡಬೇಕು ಎಂಬುವದೇ ಜೀವನ ಕಳೆದರೂ ಗೊತ್ತಾಗುವದೇ ಇಲ್ಲ.  ಯಾರು ನಮ್ಮ ಹಿತೈಷಿಗಳು.... ನಮಗಾಗಿ ನಮ್ಮ ಹಿತಕ್ಕಾಗಿ ತಡಬಡಿಸುವವರು ಯಾರು ಎಂಬುವದೇ ಕೊನೆವೆರೆಗೂ ತಿಳಯಲಾಗುವದಿಲ್ಲ. ಆರೈಕೆ ನನ್ನ ಸ್ವಭಾವ. ಪ್ರೀತಿ ಬತ್ತಿದ ಸ್ವಾರ್ಥಿಗಳ ಆರೈಕೆಯಲ್ಲಿ ತೊಡಗಿ ಸೊರಗುವದಂತೂ ನಿಶ್ಚಿತ. ಅಲ್ಲಿ ಅರಳಲು ಏನಿರುವದಿಲ್ಲ. ಒಂದು ಒಳ್ಳೆಯ ಹಿತ ಮಾತೂ ಸಿಗುವದಿಲ್ಲ. ಮೆಚ್ಚುಗೆಯ ಮಾತಂತೂ ದೂರದ ಕನಸೇ...... *ಆರೈಕೆ ಎಲ್ಲಿ

*ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸಖಿ.....*

Image
*ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸಖಿ.....* ಬ್ರಹ್ಮದೇವರಿಂದ ಆರಂಭಿಸಿ ಅನಂತಾನಂತ ಜೀವರಾಶಿಗಳ "ಬುಧ್ಧಿ"ಗೆ ಅಭಿಮಾನಿ ಮಹಾಲಕ್ಷ್ಮೀದೇವಿ. ಮನಸ್ಸು ತನಗೆ ರುಚಿಸಿದ್ದನ್ನು ಹಾಗೂ ತನಗೆ ಆಕರ್ಷಿಸಿರುವದನ್ನೇ ಯೋಚಿಸಿದರೆ,  "ಬುದ್ಧಿ" ಯಾವದು ಹಿತ ಯಾವುದು ಅಹಿತ, ಯಾವದು ಸೂಕ್ತ ಯಾವದು ಸೂಕ್ತವಲ್ಲ, ಇದನ್ನೇ ಮಾಡಬೇಕು ಇದನ್ನಲ್ಲ,  ಇತ್ಯದಿಯಾಗಿ ನಿರ್ಣಯ ತೆಗೆದುಕೊಳ್ಳುತ್ತದೆ. ಮನಸ್ಸು ಇರುವದು ಎಲ್ಲ ಪ್ರಣಿಗಳಿಗೂ, ಮಾನವನಿಗೂ ಸಮಾನ.  *ಬುದ್ಧಿವಂತ* ಎಂಬುವ ಗೌರವ ಇರುವದು ಬುದ್ಧಿ ಇರುವವನಿಗೆ ಮಾತ್ರ. ಅಂತಹ ಅಮೋಘವಾದ "ಬುದ್ಧಿ" ಗೆ ನಿಯಾಮಕಳು, ಅಭಿಮಾನಿಯು, ಪ್ರೇರಕಳು, ಪ್ರಚೋದಕಳು, ಮಹಾಲಕ್ಷ್ಮೀ ದೇವಿ. "ಅನಂತಸೌಭಾಗ್ಯಪ್ರದ" ಳು ಲಕ್ಷ್ಮೀ ದೇವಿ. ಅಂತಹ ಲಕ್ಷ್ಮೀದೇವಿಯ ಸನಿಹ ತೆರಳಿ ಬಿಡಿಕಾಸು ಬೇಡುವದು ಏನಿದೆ ಲಕ್ಷ್ಮೀದೇವಿಗೆ ಮಾಡುವ ದೊಡ್ಡ ಅವಮಾನವಿದ್ದಂತೆಯೇ ಸರಿ.... ಲಕ್ಷ್ಮೀದೇವಿ ವಿಷ್ಣು ಪ್ರೀತಿಯನ್ನೇ ಕೊಡುವವಳು, ಮಹಾಜ್ಙಾನವನ್ನೀಯುವವಳು, ಭಕ್ತಿ ವಿರಕ್ತಿಗಳನ್ನು ಕೊಡುವವಳು, ನನ್ನದೇ ಆದ ಆನಂದ ಜ್ಙಾನ ಸುಖ ಸಹನೆ ದಯೆ ಪ್ರೀತಿ ವಿಶ್ವಾಸ ಸ್ನೇಹ ಮೊದಲಾದ ಗುಣಗಳ ಮೇಲೆ ಶಾಶ್ವತ ಐಶ್ವರ್ಯ ಶಾಶ್ವತವಾದ ಒಡೆತನ ಕೊಡುವವಳು. ಮೋಕ್ಷವನ್ನೇ ದಯಪಾಲಿಸುವವಳು ಲಕ್ಷ್ಮೀದೇವಿ. ಇಂತಹ ಲಕ್ಷ್ಮದೇವಿಯಲ್ಲಿ ಬಿಡಿಕಾಸು ಬೇಡಿದರೆ ನಾನೆಷ್ಟು ಪೆದ್ದು ಎನ್ಮುವದನ್ನೂ ತೋರಿಸಿಕೊ

*ಯುದ್ಧ ನಡೆಯುವದು ಮೊದಲು ಅಂತರಂಗದಲ್ಲಿ, ನಂತರ ರಣರಂಗದಲ್ಲಿ*

*ಯುದ್ಧ ನಡೆಯುವದು ಮೊದಲು ಅಂತರಂಗದಲ್ಲಿ, ನಂತರ ರಣರಂಗದಲ್ಲಿ* ಯುದ್ಧಕ್ಕೆ ನೇರ ಕಾರಣ ದ್ವೇಷ ಅಸೂಯೆ, ವೈರ ಮನೋಭಾವನೆ. ಅಂದರೆ ಪ್ರೀತಿಯ ಕೊರತೆಯೇ ಯುದ್ಧಕ್ಕೆ ಮೂಲ‌ಕಾರಣ. ಪಾಂಡವರ ಹಾಗೂ ದರ್ಯೋಧನಾದಿಗಳ ಘನಘೋರ ಯುದ್ಧವಾಯಿತು. ಈ ಯುದ್ಧದ ಹಿಂದಿನ ಐವತ್ತು ಆರವತ್ತು ವರ್ಷಗಳನ್ನು ಸ್ವಲ್ಪ ಹಿಂದುರಿಗಿ ನೋಡಿದಾಗ ಒಂದು ಸ್ಪಷ್ಟವಾಗತ್ತೆ ಪಾಂಡವರಲ್ಲಿ ಪ್ರೀತಿ ಇಲ್ಲದಿರುವದೇ ಮೂಲ ಎಂದು. ಪ್ರೀತಿ ಇಲ್ಲದಾದಾಗ ಕ್ಷಣ ಕ್ಷಣದಲ್ಲಿಯೂ ದ್ವೇಶ ಹಗೆತನ ವೃದ್ಧಿಸುತ್ತಾ ಸಾಗತ್ತೆ. ಪ್ರೀತಿ ಇಲ್ಲದಿರುವದರಿಂದಲೇ, ಅಥವಾ ಕ್ಷೀಣಿಸಿರುವದರಿಂದಲೇ ಏನೋ ಮೊದಲಿಗೆ ಅಂತರಂಗದಲ್ಲಿ ಅವನೊಟ್ಟಿಗೆ ಯುದ್ಧ ಸಾರುತ್ತಾನೆ. ಆ ಯುದ್ಧ  ರಣರಂಗದಲ್ಲಿ ಕೊನೆಯಾಗತ್ತೆ. *ದ್ವೇಶ ಅಸೂಯೆ ವೈರ ಇವುಗಳಿಗೆ ಕಾರಣವೇನು....??* ದ್ವೇಶ ಅಸೂಯೆ ವೈರ ಇವುಗಳಿಗೆ ಮೂಲ ಕಾರಣ *ಪ್ರೀತಿಯ ಕೊರತೆಯೇ,* ಅದರಿಂದಾಗಿಯೇ ಮನದಲ್ಲಿ ಕಿಡಿ ಏಳತ್ತೆ. ಹೃದಯವನ್ನೇ ಸುಡತೊಡಗುತ್ತದೆ. ಪರಸ್ಪರ ಅಸೂಯ, ಅಶಾಂತಿ, ಅಸಮಾಧಾನಗಳು ಭುಗಿಲೇಳುತ್ತವೆ. ಕ್ರೋಧ ತಾಂಡವ ಆಡುತ್ತದೆ. ಪೂರ್ವಾಪರ ವಿವೆಕ ಕಣ್ಮರೆಯಾಗುತ್ತದೆ. ಈ ಅವಸ್ಥೆಯೇ ಯುದ್ಧದ ಸಿದ್ಧತೆ.... *ಪ್ರೀತಿಯ ಕೊರೆತೆಯಿಂದ ಏನೆಲ್ಲ ಅನರ್ಥಗಳಿವೆ... ??* ಪ್ರೀತಿ ಕಣ್ಮರೆ ಆಯಿತು ಎಂದರೆ, ಆಗದವನ ರೀತಿ ನೀತಿ, ಅಂದ ಆಯು, ಆಚಾರ ವಿಚಾರ, ಅಲಂಕಾರ ವ್ಯವಹಾರ, ಮಾತು ಮೌನ ಇವೆಲ್ಲವೂ ಅಸಹನೀಯವಾಗುತ್ತವೆ. ಆ ಬಗ್ಗೆ  ಮನಸ್ಸು ರೋಸಿಹೋಗಲು ಆ

*ಮುನ್ನಡೆಯಬೇಕೇ.......*

*ಮುನ್ನಡೆಯಬೇಕೇ.......* ಮುನ್ನಡೆಯುವದು, ಮೇಲೇರುವದು, ಸರ್ವತೋಮುಖವಾಗಿ ಪ್ರಗತಿಯಾಗುವದು ಜೀವನ ಒಂದು ಉದ್ಯೇಶ್ಯ.  ಈ ಉದ್ದ್ಯೇಶ್ಯದ ಈಡೇರಿಕೆಗೆ *ಹಲವು ಬಿಡಬೇಕು, ಕೆಲವುಗಳನ್ನು ಹಿಡಿಯಬೇಕು*  ಇದು ನಿಶ್ಚಿತ. ಮುನ್ನಡೆಯಲು, ಪ್ರಗತಿ ಸಾಧಿಸಲು ಮೊದಲು "ಉತ್ತಮ ಆಸೆಗಳು ಇರಲೇಬೆಕು." ಆಸೆಗಳು ಇರಬೇಕು ಎಂದ ಮಾತ್ರಕ್ಕೆ ಅತಿ ಆಸೆಯೋ ಅಥವಾ ದುರಾಸೆಗಳೊ ಸರ್ವಥಾ ಸಲ್ಲ. ಆಸೆಗಳು ಫಲಕೊಟ್ಟೇ ಕೊಡುತ್ತವೆ, ಅತಿ ಆಸೆಗಳಾಗಲಿ ಅಥವಾ ದುರಾಸೆಗಳಾಗಲಿ ಕೆಲವೊಮ್ಮೆ ಮಹಾಫಲದಾಯಕವಾಗಿವೆ.  ಆದರೆ ಆಸೆಗಳು ಋಷಿ ಮುನಿಗಳನ್ನು ಮುಂದೋಯ್ದರೆ, ಅತಿ ಆಸೆ ದುರಾಸೆಗಳು ರಾವಣ ಕುಂಭಕರ್ಣರ ಹಾಗೆ ದುರಂತಕ್ಕೆ ಎಡೆಮಾಡುತ್ತವೆ. *ಹೆದರದಿರು ನಿನ್ನ ಆಸೆ ಈಡೇರುತ್ತದೆ* ಆಸೆಗಳು ಇರಬೇಕು. ಇರುವ ಆಸೆಗಳು ಈಡೇರಬೇಕು. ಆಸೆಗಳನ್ನು ಮಾಡುವದು ನನ್ನ ಕೆಲಸವಾದರೆ, ಈಡೇರಿಸುವದು ದೇವರ ಕೆಲಸ. ದೇವರ ಮೂರ್ತಿಗಳನ್ನು ನೋಡುತ್ತೇವೆ. ಮೂರ್ತಿಗಳ ಕೈಗಳು ಅನೇಕ ಭಂಗಿಗಳಲ್ಲಿ ಇರುತ್ತವೆ. ಹೆಚ್ಚಾಗಿ "ಅಭಯ ಹಸ್ತ, ವರದ ಹಸ್ತ"ಗಳುಳ್ಳದ್ದಾಗಿಯೇ ಇರುತ್ತವೆ. ವರದ ಹಸ್ತ ಅಸೆಪಡು, ವರಪಡೆ" ಎಂದು ಸೂಚಿಸಿದರೆ. ಅಭಯ ಹಸ್ತ "ನನ್ನ ಆಸೆ ಈಡೇರತ್ತೋ ಇಲ್ಲೊ ಎಂಬ ಭಯಗ್ರಸ್ತನಾಗಬೇಡ" ಎಂದು ಸೂಚಿಸುತ್ತವೆ. ಆಸೆ ಇಲ್ಲದವ, ಭಯಭೀತನಾದವ ಏನನ್ನೂ ಪಡೆಯಲಾರ. *ಆಸೆ ಈಡೇರಿಸುವ ದೇವರ ಹಸ್ತಗಳನ್ನು ಚಿಂತಿಸು. ಪ್ರಗತಿ ಸಾಧಿಸು. ಮುಂದೆ ಸಾಗು. ಉತ

*ಮಧ್ವ ಜಯಂತಿ*

*ಮಧ್ವ ಜಯಂತಿ* ಅನಾದಿಯಿಂದ ಶುದ್ಧಪರಂಪಾರ ಪ್ರಾಪ್ತವಾದ, ನಿತ್ಯಸಿದ್ಧವಾದ, ಮೋಕ್ಷಾದಿ ಪುಷಾರ್ಥಗಳನ್ನು ಕೊಡುವ, ಜೀವ ಪರಮಾತ್ಮರಿಗೆ ಭೇದ ಪ್ರತಿಪಾದಿಸಿವ ಮುಖಾಂತರ ಈಶನೊಬ್ವನೇ ಸರ್ವೋತ್ತಮ, ಆ ಈಶ ಅನಂತಾನಂತ ಗುಣಪೂರ್ಣ, ಸರ್ವಥಾ ಪಾರತಂತ್ರ್ಯಾದಿ ದೋಷ ವಿದೂರ, ಉಳಿದ ಅನಂತ ಜೀವರಾಶಿಗಳೂ ಪರತಂತ್ರರು, ಈ ಎಲ್ಲ ಜೀವರಲ್ಲಿಯೂ ತಾರತಮ್ಯವಿದೆ, ಇತ್ಯಾದಿ ಶ್ರೀಮದ್ವೈಷ್ಣವ ಸತ್ಸಿದ್ಧಾಂತವನ್ನು ಅತ್ಯಂತ ಪ್ರಾಮಾಣ ಹಾಗೂ ಯುಕ್ತಿಗಳಿಂದ  ಪ್ರತಿಪಾದಿಸಿರುವ, ಅಂತೆಯೇ  ನಮ್ಮ ಆದಿ ಗುರುಗಳಾದ *ಶ್ರೀಮಧ್ವಾಚಾರ್ಯರ ಜಯಂತೀ ಮಹೋತ್ಸವ* ಇಂದು. ಶ್ರೀಮದಾಚಾರ್ಯರ ಸರ್ವಮೂಲ ಶಾಸ್ತ್ರಗಳನ್ನು ಓದುತ್ತಾ ಸಾಗಿದ ಹಾಗೆ ಅವರ ಉಪಕಾರ ಕ್ಷಣಕ್ಷಣಕ್ಕೂ ಹೆಮ್ಮರವಾಗಿ ಬೆಳಿಯುತ್ತಾ ಸಾಗುತ್ತದೆ.  ಬ್ರಹ್ಮಸೂತ್ರಗಳಿಗೆ ನಾಲಕು ವ್ಯಾಖ್ಯಾನ ಗ್ರಂಥಗಳು, ಉಪನಿಷತ್ತುಗಳಿಗೆ ಹತ್ತು ವ್ಯಾಖ್ಯಾನ ಗ್ರಂಥಗಳು, ಮಹಾಭಾರತಕ್ಕೆ ಒಂದು, ಗೀತೆಗೆ ಎರಡು, ಋಗ್ವೇದಕ್ಕೆ ಒಂದು,  ಭಾಗವತಕ್ಕೆ ಒಂದು, ತಂತ್ರಸಾರಕ್ಕೆ ಒಂದು, ಹತ್ತು ಪ್ರಮೇಯ ಗ್ರಂಥಗಳು ಇತ್ತ್ಯಾದಿಯಾದ  ಸರ್ವಮೂಲ ಗ್ರಂಥಗಳು  *ದೇವಾದೀನಾಮಗಮ್ಯಂ* ದೇವತೆಗಳಿಗೂ ಸಾಕಲ್ಯೇನ ತಿಳಿಯಲು ಅಸಾಧ್ಯ ಎಂದೇ ತಿಳಿಸುತ್ತಾರೆ ಅಂರಹ ಅತ್ಯದ್ಭುತ ಸಿದ್ಧಾಂತ ಸ್ಥಾಪನೆ ಶ್ರೀಮದಾಚಾರ್ಯರದ್ದು. ದೇವತೆಗಳಿಗೆ ಓದಲು ತಿಳಿಯಲು ಅಸಾಧ್ಯ ಎಂದರೆ ನಾವು ಅಧ್ಯಯನ ಮಾಡುವದೇ ಬೇಡವೇ... ?? *ಬಾಲಸಂಘಮಪಿ ಬೋಧಯದ್ದೃಶಮ್* ಬಾಲ ಬುದ್ಧಿ ಇರುವ,ಅತ

*ವಿಜಯದಶಮೀ ಹಬ್ಬದ ಹೃತ್ಪೂರ್ವಕ ಶುಭಾಷಯಗಳು 🌿🌿🌿🌹🌹*

Image
*ವಿಜಯದಶಮೀ ಹಬ್ಬದ ಹೃತ್ಪೂರ್ವಕ ಶುಭಾಷಯಗಳು 🌿🌿🌿🌹🌹* ಇಂದು ದಸರಾ ಹಬ್ವದ ಕೊನೇಯದಿನ. ನಾವೆಲ್ಲರೂ ನಮ್ಮ ಕುಲದ ಹೆದ್ದೈವನಾದ *ಶ್ರೀ ಭೂ ಸಹಿತ ಶ್ರೀಶ್ರೀನಿವಾಸ ದೇವರ* ಆರಾಧನಾ ರೂಪದ ನವರಾತ್ರೋತ್ಸವ ಶ್ರೀನಿವಾಸನ ಪ್ರೀತ್ಯರ್ಥಕವಾಗಿ, ಅನುಗ್ರಹಕ್ಕಾಗಿ ಯಥಾ ಶಕ್ತಿ ವ್ರತ ಉಪವಾಸಾದಿಗಳನ್ನು ಮಾಡಿದ್ದೇವೆ. ಆ ಸೇವಿಗಳಿಂದ ಸಂತೃಪ್ತನೇ ಆಗಿದ್ದರೆ ನಮನಮಗೆ ಜ್ಙಾನ ಕೊಡಲಿ, ಭಕ್ತಿ ಬೆಳಿಸಲು, ಧರ್ಮ ಮಾಡಿಸಲಿ, ಗುರು ದೇವತೆಗಳ ಆರಾಧನೆ ಹೆಚ್ಚು ಹೆಚ್ಚಾಗಿ ಮಾಡಿಸಲಿ. ಜಪ ಅಧ್ಯಯನ ಅಧ್ಯಾಪನ ಹೆಚ್ಚಿಸಲಿ ಎಂದು ಪ್ರಾರ್ಥಿಸಿಕೊಳ್ಳೋಣ. ಸೋಲುಗಳೇ ಜೀವನ ನಮ್ಮದು. ಗೆಲುವ ಮರುಮರೀಚಿಕೆಯಾಗಿಯೇ ಉಳಿದಿದೆ. ಹಾಗಾಗಿ  "ಅಪಜಯಗಳು ದೂರಾಗಲಿ, ಜಯಗಳು ನಮ್ಮದಾಗಲಿ" ಎಂದು ಆಶಿಸೋಣ. ದುಃಖ, ದುಮ್ಮಾನ, ego , ಅಸೂಯೆ, ಮಾತ್ಸರ್ಯಗಳು ಸೋತು ಹೋಗಲಿ. ನಿರ್ವ್ಯಾಜ  ಪ್ರೀತಿ ಮಮತೆ ಸ್ನೇಹಗಳಿಗೆ ಜಯ ಸಿಗಲಿ. ಚಿಂತೆ ಸಂತೆ ಸಂತಾಪಗಳು ಪಲಾಯನ ಮಾಡಲಿ. ಸುಖ , ಶಾಂತಿ, ಸಮೃದ್ಧಿಗಳು ಮನೆಯಲ್ಲಿ, ಮನದಲ್ಲಿ ಮನೆ ಮಾಡಿರಲಿ. ಅಹಿತವನ್ನೇ ಬಯಸುವ, ಸ್ವಾರ್ಥಕ್ಕಾಗಿ ಬಳಿಸಿಕೊಳ್ಳುವ, ನಮ್ಮವರಲ್ಲದವರು ಓಡಿ ಹೋಗಲಿ. ಹಿತೈಷಿಗಳೇ ಆದ, ನಮಗಾಗಿ ಪರಿತಪಿಸುವ, ತಮ್ಮದೆಲ್ಲವನ್ನೂ ನಮಗೆ ಧಾರೆಯೆರೆಯಲು ಸಿದ್ಧರಾದ, ಅಂತೆಯೇ ನಮ್ಮವರೆಂದಾದವರು ನಿರಂತರ ನಮ್ಮ ಬಳಿಯೇ ಉಳಿಯುವಂತಾಗಲಿ. ಅಧರ್ಮವನ್ನು ಮೆಟ್ಟಿ ನಿಲ್ಲುವ, ಎದುರಿಸುವ  ದಾರ

*ಭಯ ಬಾಗಿಲು ಬಡಿದಾಗ, ಶ್ರದ್ಧೆ ಬಾಗಿಲು ತೆಗೆಯಬೇಕು.....*

Image
*ಭಯ ಬಾಗಿಲು ಬಡಿದಾಗ, ಶ್ರದ್ಧೆ ಬಾಗಿಲು ತೆಗೆಯಬೇಕು.....* "ಭಯ" ವೆಂಬುವದು ಮನಸ್ಸಿನ ಒಂದು ವಿಕಾರ. ಈ ಭಯ ಎಲ್ಲರಲ್ಲಿಯೂ ಇರುವದೇ. "ಆತ್ಮರಕ್ಷೆಣೆಗೆ ಭಯ ಅತ್ಯವಶ್ಯಕ."  "ಮುಂದಾಲೋಚನೆಗಳನ್ನು ಚುರುಕುಗೊಳಿಸುವದೂ ಭಯವೇ." ಈ ಎರೆಡು ಕಾರ್ಯಗಳಗೆ ಬೇಕಾದ ಭಯ ಎಲ್ಲರಿಗೂ ಅನಿವಾರ್ಯ. ನಮ್ಮಲ್ಲಿ ಇರಲೇ ಬೇಕಾದ ಭಯ. ಈ ಭಯವಿಲ್ಲದಿದ್ದರೆ ಜೀವನ ತುಂಬ ಕಷ್ಟ.  ಇದರೊಟ್ಟಿಗೆ ಮತ್ತೊಂದು ಭಯವಿದೆ, ಅದು ಮನುಷ್ಯನನ್ನು ಅಧೀರನನ್ನಾಗಿ ಮಾಡುತ್ತದೆ. ಮನುಷ್ಯನ ಪ್ರಗತಿಯನ್ನೇ ಕುಂಠಿಸಿಬಿಡುತ್ತದೆ. ದುರ್ಬಲನನ್ನಾಗಿ ಮಾಡಿಬಿಡುತ್ತದೆ. ಹೇಡಿಯಾಗಿಸಿಬಿಡುತ್ತದೆ. ಈ ಭಯ ಹೊಗಲಾಡಿಸಲೇ ಬೇಕು. ನಿದ್ರಿಸುವಾಗ ಮನುಷ್ಯನ ರಕ್ತ ಹೀರುವ ಒಂದು ಪಿಶಾಚಿ ಇದೆ ಎಂದು ಆಂಗ್ಲರು ನಂಬುತ್ತಾರೆ, ಹಾಗೆ ಹೇಳುತ್ತಾರೆ. ಅದಕ್ಕೆ "ವಾಂಪಾಯರ್" ಎಂದೂ ಕರೆಯುತ್ತಾರೆ. ಆ ಪಿಶಾಚಿ ಮಲಗಿದಾಗ ರಕ್ತ ಹೀರತ್ತೋ ಇಲ್ಲೋ ಗೊತ್ತಿಲ್ಲ, ಭಯವೆಂಬ ಕಲ್ಪನೆಯ ಭೂತ ಎದ್ದಾಗ, ಕುಳಿತಾಗ, ಮಲಗಿದಾಗ ಸ್ವಪ್ನ ಕಾಣುವಾಗ ಎಲ್ಲ ಕಾಲದಲ್ಲಿಯೂ ರಕ್ತ ಹೀರಿ ಮನುಷ್ಯನನ್ನು  ದುರ್ಬಲನ್ನನ್ನಾಗಿಸುತ್ತದೆ. ಇದು ಕೇವಲ ಒಂದು ಉದಾಹರಣೆ ಮಾತ್ರ. ಇಂತರ ನೂರು ಭಯಗಳು ನಮ್ಮಲ್ಲಿ ಇವೆ. ನಾವು ಅನುಭವಿಸುತ್ತಾ ಇದ್ದೇವೆ. ಲಕ್ಷ ಲಕ್ಷ ಜನ ಮೋಬೈಕು ಉಪಯೋಗಿಸುತ್ತಾರೆ. ಆದರೆ ನನಗೇ ಮೋಬೈಕು ಎಂದರೆ ಭಯ. "ಯಾಕೇ ಅಷ್ಟು  ಭಯ"  ಎಂದರೆ ನನಗೆ

*ಪಾಲಿಗೆ ಬಂದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಅಭ್ಯಾಸವನ್ನು ಗಳಿಸಿಕೊಳ್ಳಬೇಕು...*

Image
*ಪಾಲಿಗೆ ಬಂದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಅಭ್ಯಾಸವನ್ನು ಗಳಿಸಿಕೊಳ್ಳಬೇಕು...* "ಉದ್ಯೊಗಂ ಪುರುಷ ಲಕ್ಷಣಮ್" ಎಂದು ತಿಳಿದಂತೆ ಉದ್ಯೋಗ ಪುರುಷನ ಒಂದು ಲಕ್ಷಣ. "ಇಂಥಹದೇ ಉದ್ಯೋಗ ನಾನು ಮಾಡುವೆ" ಎನ್ನುವದು ತಪ್ಪು. ಅದು ಅಸಾಧ್ಯವೂ ಹೌದು. "ದೊರೆತ ಉದ್ಯೋಗವನ್ನು ಹೀಗೆಯೇ ಮಾಡುತ್ತೇನೆ" ಎನ್ನುವದು ಸುಸಾಧ್ಯ. "ಉದ್ಯೋಗ" ಹೊಟ್ಟೆ ಹೊರೆದುಕೊಳ್ಳುವ ಒಂದು ದುಡಿಮೆ ಸರ್ವಥಾ ಅಲ್ಲ. ಪ್ರತಿಯೊಬ್ಬನ ಆಂತರ್ಯದಲ್ಲಿ ಹುದುಗಿದ ಆನಂದವನ್ನು ತಡೆದು ಹಿಡಿದ, ತಡೆಗೋಡೆಯಂತಿರುವ ಅಡ್ಡಗೋಡೆಯನ್ನು ದೂರಕ್ಕೆ ಎಸೆಯುವ ಒಂದು ಉಪಾಯವೇ *ಉದ್ಯೋಗ* ಎಂದರೆ ತಪ್ಪಾಗಲಾರದು. *ಉದ್ಯೋಗ* ದೇವರುಕೊಟ್ಟದ್ದು.  ದೇವರಿಗೆ ಪ್ರೀತಿಯಾಗುವಂತೆಯೇ ಮಾಡುವದು ಎನ್ನ ಕರ್ತವ್ಯವೂ ಹೌದು. ಕರ್ತವ್ಯಪಾಲನೆಯಲ್ಲಿ ಎಂದಿಗೂ ಹಿಂದುಳಿದ ಮನುಷ್ಯ ಈ ಕರ್ವ್ಯದಲ್ಲಿಯೂ ಅಷ್ಟೆಯೇ ಹಿಂದುಳಿದಿದ್ದಾನೆ. ತಾ ಮಾಡಿದ ಉದ್ಯೋಗ ಕೆಲಸದಿಂದ ತನಗೂ ತನ್ನವರಿಗೂ ಸಂತೃಪ್ತಿಯಿಲ್ಲ. ದೇವರಿಗಂತೂ ದೂರದ ಮಾತೆ.... ಇಂದಿನ ಉದ್ಯೋಗದ ಒಂದು ಫಲವೇನೆಂದರೆ ದುಡ್ಡು ಸಂಪಾದನೆಯ ಮುಖಾಂತರ bank balance ಎಷ್ಟು ಬೆಳೆದಿದೆ ಎಂದು ನೋಡುತ್ತಾ ಕುಳಿತಿರುವದು ಒಂದಾದರೆ, ಎಷ್ಟು lone ತೆಗೆಸಿದ್ದೇನೆ ಎನ್ನುವದು ಮತ್ತೊಂದು ಆಗಿದೆ. ಈ ಎರಡರ ಮಧ್ಯದಲ್ಲಿ ಮನೆಯ ಶಾಂತಿ,  ನೆಮ್ಮದಿ, ತೃಪ್ತಿ,  ಸಂತೋಷ ಇವುಗಳು ಕಾಣೆಯಾಗಿ ಹೋಗಿವೆ.

*ಅಪೇಕ್ಷಗಳನ್ನಿಟ್ಟುಕೊಂಡವ ಅಪೇಕ್ಷೆಗಳಿಗೆ ಸ್ಪಂದಿಸಲಾರ....*

Image
*ಅಪೇಕ್ಷಗಳನ್ನಿಟ್ಟುಕೊಂಡವ ಅಪೇಕ್ಷೆಗಳಿಗೆ ಸ್ಪಂದಿಸಲಾರ....* ಅಪೇಕ್ಷೆಗಳಿರುವದು ಸಹಜ. ಎಲ್ಲರಲ್ಲಿಯೂ ಇರುವಂತಹದ್ದೇ. ಆದರೆ ಯಾರು ಅಪೇಕ್ಷೆಗಳನ್ನು ಹೆಚ್ಚೆಚ್ಚು ಬಯಸುತ್ತಾರೆ, ಅವರು ಸಾಮಾನ್ಯವಾಗಿ ಇನ್ನೊಬ್ಬರ ಅಪೇಕ್ಷೆಗಳಿಗೆ ಸ್ಪಂದಿಸಲಾರರು. ತಮ್ಮವರ ಅಪೇಕ್ಷೆಗಳಿಗೆ ಸ್ಪಂದಿಸದ ಕಾರಣವೇ ಅನೇಕ ಬಾರಿ ತಮ್ಮವರನ್ನೇ ಕಳೆದುಕೊಳ್ಳವ ಪರಿಸ್ಥಿತಿ ಎದುರುಮಾಡಿಕೊಂಡಿರುತ್ತಾರೆ. ಯಾರಿಗೆ ಯಾರಿಂದಲೂ ಏನನ್ನೂ ಅಪೇಕ್ಷೆ ಇಟ್ಟುಕೊಂಡಿರುವದಿಲ್ಲವೋ ಅವರು ಸಾಮಾನ್ಯವಾಗಿ ಎಲ್ಲರ ಅಪೇಕ್ಷೆಗಳಿಗೂ ಸ್ಪಂದಿಸಿರುತ್ತಾರೆ. ಎಲ್ಲರ ಅಥವಾ ತನ್ನವರ ಅಪೇಕ್ಷೆಗಳಿಗೆ ಸ್ಪಂದಿಸುವವರು ತನ್ನ ಎಲ್ಲ ಅಪೇಕ್ಷೆಗಳನ್ನೂ ಬಿಟ್ಟವರೇ ಆಗಿರುತ್ತಾರೆ. ಅಂತೆಯೇ ತನ್ನವರನ್ನು ಎಂದಿಗೂ ಕಳೆದುಕೊಳ್ಳುವದೂ ಇಲ್ಲ. ದೇವರಿಂದ ನಮಗೆ ನೂರು ಅಪೇಕ್ಷೆಗಳಿವೆ. ನಿತ್ಯವೂ ದೇವರಿಂದ ಅಪೇಕ್ಷೆಪಡುತ್ತೇವೆ.  ಆದರೆ ದೇವರ ಯಾವ ಅಪೇಕ್ಷೆಗಳಿಗೂ ಕಿಂಚಿತ್ತೂ ಸ್ಪಂದಿಸುವದಿಲ್ಲ. ಆ ಕಾರಣದಿಂದಲೇ ದೇವರು ನಮ್ಮವನಾಗಿ ಉಳಿದಿಲ್ಲ. *ನಮ್ಮ ಅಪೇಕ್ಷೆಗಳಿಗೇ ದೇವರು ಸ್ಪಂದಿಸಲಿ, ನಾನು ಮಾತ್ರ ದೇವರ ಯಾವ ಅಪೇಕ್ಷೆಗಳಿಗೂ ಸ್ಪಂದಿಸುವದಿಲ್ಲ. ನನ್ನಿಂದ ಅವನು ಏನೂ ಅಪೇಕ್ಷಿಸಬಾರದು* ಎಂಬ ಹಠವಿರುವದರಿಂದಲೇ ನಾವು ಇಂದು ಸರ್ವ ಸಮರ್ಥ, ಪರಮಾಪ್ತ, ಅತ್ಯಂತಪ್ರಿಯತಮ  ದೇರಿಂದ ತುಂಬದೂರಾಗಿದ್ದೇವೆ. ಒಂದರ್ಥದಲ್ಲಿ ಅವನನ್ನು ಕಳೆದೂಕೊಂಡಿದ್ದೇವೆ. ಕೇವಲ ದೇವರನ್ನು ಮಾತ್ರವಲ್ಲ, ನನ್ನವರಾದ, ನನ್

*ಶ್ರೀಹರಿಯ ಪಾದಾಶ್ರಯನಿಗೆ ಭೀತಿಯೇ ಇರುವದಿಲ್ಲ*

Image
*ಶ್ರೀಹರಿಯ ಪಾದಾಶ್ರಯನಿಗೆ ಭೀತಿಯೇ ಇರುವದಿಲ್ಲ* ಯಾರಿಗೂ ಅಂಜದೇ, ಯಾರಿಗೂ ಅಂಜಿಕೆಯನ್ನುಂಟು ಮಾಡದಿರುವದೇ ಭಗವತ್ಪಾದಾಶ್ರಯನ ಒಂದು ಲಕ್ಷಣ.  ಭಗವತ್ಪಾದಾಶ್ರಯನೇ ಮಹಾತ್ಮ. ಮಹಾನ್ ಆದ ಭಗವಂತನನ್ನು ಪಾದಾರವಿಂದವನ್ನು ಆಶ್ರಯಿಸಿದವರೇ, ಪಾದಾರವಿಂದವನ್ನು  ಸಾಕ್ಷಾತ್ಕರಿಸಿಕೊಂಡವರೇ ಮಹಾತ್ಮರು. ಮಹಾತ್ಮರ ಸನಿಹ ಬಂದ ಪ್ರಾಣಿ ಪಶು ಪಕ್ಷಿಗಳಿಗೇ ಭಯವಿರುವದಿಲ್ಲ. ಮಹಾತ್ಮರಿಗೇ ಭಯವಿಲ್ಲ ಎಂದು ಹೇಳುವದೇನು.... *ಭಗವತ್ಪಾದಾಶ್ರಿತ ಮಹಾತ್ಮನಿಗೇನು ಕೋಡು ಬಂದಿದೆಯಾ... ??* ಖಂಡಿತವಾಗಿಯೂ *ದೈವಕೃಪೆಯ ಕಾವಲು* ಎಂಬ ದೊಡ್ಡ ಕೋಡೇ ಬಂದಿದೆ ಅಂದರೆ ತಪ್ಪಾಗ್ಲಿಕ್ಕಿಲ್ಲ. ಅಪಾಯದ ಸನ್ನಿವೇಶಗಳು ನಮಗೆ ಹೇಳಿಕೇಳಿ ಬರುವದಿಲ್ಲ. ಅಕಸ್ಮಾತ್ ಘಟಿಸಿದಾಗ ಅವುಗಳನ್ನು ಎದುರಿಸುವ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವದು ಏನಿದೆ ಸುಲಭಸಾಧ್ಯವಲ್ಲ.  ಇಂಥಹ ಗಂಡಾಂತರಗನ್ನು ಎದುರಿಸುವದು ಹೇಗೆ..?? ಇಂಥಹ ಸಂದರ್ಭಗಳಲ್ಲಿ ಭಯವಿಹ್ವಲರಾಗದಿರಲು ಸಾಧ್ಯವೇ... ??  ಖಂಡಿತಾ ಸಾಧ್ಯವಿದೆ. ಅಲೆಮಾರಿ, ಆದರೆ ದೇವರನ್ಬೇ ನಂಬಿದ, ದೇವರ  ಪಾದಗಳನ್ನೇ  ಆಶ್ರಯಿಸಿದ ಒಬ್ಬ ಬಡ ಬ್ರಾಹ್ಮಣ. ನಿರಂತರ ದೇವರ ಧ್ಯಾನ, ಜಪ ಪಾರಾಯಣ ಇವುಗಳಲ್ಲೇ ರತ. ಜೀವನಕ್ಕಾಗಿ ಊರೂರು, ಮನೆ ಮನೆ ತಿರುಗುವದು, ಅನ್ಮವನ್ನು ಬೇಡಿ ಬೇಡಿ ತಿನ್ನುವದು. ಮತ್ತೆ ಜಪ ಪಾರಾಯಣಗಳಲ್ಲಿ ತೊಡಗುವದು ಇವನ ಕಾಯಕ. ಒಮ್ಮೆ ಇಡೀ ನಾಡಿಗೇ ಬರಗಾಲ.  ಆ ಪ್ರಸಂಗದಲ್ಲಿ ಯೋಚಿಸಿದ ಈ ಬ್ರಾಹ್ಮಣ. ತಮ್ಮ

*ಓಡಬೇಡ....‌ಎದುರಿಸು*

Image
*ಓಡಬೇಡ....‌ಎದುರಿಸು* ಆಪತ್ತುಗಳು, ದುಃಖಗಳು, ಕಷ್ಟಗಳ ಎಲ್ಲರಿಗೂ ಸಹಜ. ಆದರೆ ಕೆಲವೊಮ್ಮೆ ಬಂದ ಆಪತ್ತುಗಳನ್ನು ನೋಡಿ ಪಲಾಯನ ಮಾಡುವದೇ ನಮ್ಮ ಮನೆಮಾತಾಗಿರತ್ತೆ. ಹೇಡಿಯಾಗಿ ಪಲಾಯನ ಮಾಡುವದಲ್ಲ, ಎದುರಿಸಿ ಶೂರನಾಗುವದೇ ಲೇಸು. *ಇಂದಿನ ನಮ್ಮ ಸ್ಥಿತಿ* ದೊಡ್ಡ ಆಪತ್ತುಗಳು ಎದುರಾದಾಗ ಅತ್ಮಹತ್ಯೆ ಮೊದಲಾದವುಗಳಿಗೇ ಕೈ ಹಾಕುತ್ತಾನೆ ಒಂದೆಡೆ ಇರಲಿ. ಕ್ಷುದ್ರ ಆಪತ್ತುಗಳು ಬಂದಾಗಲೂ ಪಲಾಯನ ಮಾಡುತ್ತಾನೆ. ಇದುವೇ ವಿಚಿತ್ರ. ಸಣ್ಣ ತಲೆ ಶೂಲೆ ಬಂದಿದೆ. ಎದಿರಿಸುವ ಶಕ್ತಿಯೂ ಇಲ್ಲ. ಧೈರ್ಯವೂ ಇಲ್ಲ. ಎದುರಿಸದೇ ಪಲಾಯನ ಔಷಧಿ ಮಾರ್ಗ ಹಿಡಿಯುವ. ಜ್ವರ ಬಂದರಂತೂ ವೈದ್ಯರೇ ಬೇಕು... *ಅಂದಿನ ಸ್ಥಿತಿ* ಇಂದು ಎಲ್ಲರೂ ಕೇಳಿರಬಹುದಾದ ಒಂದು ಘಟನೆ. ಜನಕರಾಜನಿಗೆ ತನ್ನ ಎಂಭತ್ತು ಸಾವಿರ ವರ್ಷದ ಸುದೀರ್ಘ ಜೀವನದಲ್ಲೇ ಕಾಣದ ಆಪತ್ತು ದುಃಖ ಒಮ್ಮೆಲೆ ಅಪ್ಪಳಿಸಿತು. ದುಃಖಗಳು ಆಪತ್ತುಗಳು ಎದುರಾದಾಗಲೂ ಆಧ್ಯಾತ್ಮಿಕ ಬಲದ ಧೈರ್ಯದಿಂದ, ಅತ್ಯಂತ ವಿಶ್ವಾಸದಿಂದ ಪಲಾಯನ ಮಾಡದೇ ಎದುರಿಸಿದ. ಅಧ್ಯಾತ್ಮಿಕ ಬಲದ ಪ್ರಭಾವದಿಂ ಗೆದ್ದೂ ಬಂದ. " ಆಪತ್ತುಗಳನ್ನು ಎದುರಿಸುವದನ್ನು  ರೂಢಿಸಿಕೊಂಡಾಗ ಕಷ್ಟಗಳೇ ಪಲಾಯನ ಮಾಡುತ್ತವೆ. ಆಪತ್ತುಗಳೇ ದೂರೋಡುತ್ತವೆ. ದುಃಖಗಳು ಮಾಯವಾಗುತ್ತವೆ." ಇದು ನಿಶ್ಚಿತ.  ಅಂತೆಯೇ ಜನಕರಾಜ  ಶೂರ ಯಶಸ್ವೀ ಪುರುಷ  ಎಂದಾದ.... *ಒಂದು ಕಥೆ* ರಾಮ ಓಣಿಯಲ್ಲಿ ನಡಿಯುತ್ತಾ ಸಾಗಿದ್ದ. ಓಣಿಯ ನಾಯಿಗಳು ಬೆಂಬ

*ನಾಳೆಯಿಂದ ನವರಾತ್ರೋತ್ಸವ...*

Image
*ನಾಳೆಯಿಂದ ನವರಾತ್ರೋತ್ಸವ...* ಕುಲಸ್ವಾಮಿಯ ಆರಾಧನಾ ರೂಪವಾದ ಈ ನವರಾತ್ರೋತ್ಸವ  ಸಾಧನೆಗೆ ಯೋಗ್ಯ, ಆಪತ್ತುಗಳ‌ಪರಿಹಾರಕ್ಕೆ ಸೂಕ್ತ,  ಕಷ್ಟಕಳೆದುಕೊಳ್ಳಲು ಸುಲಭ, ಇಷ್ಟಾರ್ಥಗಳೀರೇಡಿಸಿಕೊಳ್ಳಲು ಉಚಿತ, ಜ್ಙಾನ‌ಭಕ್ತಿ ಬೆಳಿಸಿಕೊಳ್ಳಲು ಸಾಧಕ ನಮ್ಮೆಲ್ಲರ  ಕುಲದ ಹೆದ್ದೈವನಾದ *ಶ್ರೀಭೂ ಸಹಿತ ಶ್ರೀಶ್ರೀನಿವಾಸನ  ನವಾರಾತ್ರೋತ್ಸವ.* *ಇಷ್ಟಾರ್ಥಪ್ರದ ಶ್ರೀಶ್ರೀನಿವಾಸ* ಸ್ತಂತಂತ್ರ, ಗುಣಪೂರ್ಣ, ಸಚ್ಚಿದಾನಂದ ವಿಗ್ರಹನಾದ, ವೈಕುಂಠದಿಂದೇ ಭುವಿಗೆ ಇಳಿದುಬಂದ, ವರದಹಸ್ತನಾಗಿ ನಿಂತಿರುವ ಶ್ರೀನಿವಾಸ ತನ್ನ ಬಳಿ ಬಂದವರ, ತನ್ನನ್ನು ಸ್ತುತಿಸಿ ಕೊಂಡಾಡಿದವರ, ತನ್ನ ಭಕ್ತರ, ತನ್ನನ್ನು ವೈಭವದಿಂದ ಪೂಜಿಸುವವರ,  ತನ್ನವರ ಇಷ್ಟಾರ್ಥಗಳನ್ನು ಈಡೇರಿಸುವ ಹೆದ್ದೊರೆ ಶ್ರೀಶ್ರೀನಿವಾಸ.  ಜ್ಙಾನಕೊಟ್ಟು, ಭಕ್ತಿ ಬೆಳಿಸಿ, ಮೋಕ್ಷಕೊಡುವ ಹೆದ್ದೊರೆ ಶ್ರೀಶ್ರೀನಿವಾಸ. *ಅನಿಷ್ಟ ನಿವಾರಕಳು ದುರ್ಗೆ* ಅನಿಚ್ಟನಿವಾರಕಳು ದುರ್ಗೆ, ಇಷ್ಟಾರ್ಥಗಳಿಗಿರುವ ವಿಘ್ನಗಳನ್ನು ನಿವಾರಿಸವವಳು ದುರ್ಗೆ, ಅಂತೆಯೇ ಶರನ್ನವರಾತ್ರಿಯ ಈ ಪ್ರಸಂಗದಲ್ಲಿ ನಾನಾರೂಪಳಾದ ದುರ್ಗಾದೇವಿಯ ಅತ್ಯಂತ ವೈಭವದ ಪೂಜೆ ದೇಶದೇಶಗಳಲ್ಲಿ, ರಾಜ್ಯಗಳಲ್ಲಿ, ಉರೂರುಗಳಲ್ಲಿ, ಮನೆಮನೆಗಳಲ್ಲಿ ನಡೆಯುತ್ತದೆ. ನಾನಾ ತರಹದ ವ್ರತೋಪವಾಸಗಳೂ ಜರುಗುತ್ತವೆ. ಉದ್ಯೇಶ್ಯ ದುರ್ಗೆ ಪ್ರಸನ್ನಳು ಆಗಿರಲಿ ಎಂಬುವದೇ.  ಜ್ಙಾನಕ್ಕೆ, ಧರ್ಮಕ್ಕೆ, ಸೌಖ್ಯಕ್ಜೆ, ಸಮೃದ್ಧಿಗೆ, ವೈಭವಕ್ಕೆ, ದಾನಕ್ಕೆ, ಸ

*ಎಂಥ ವ್ಯಕ್ತಿ ಎಂದು ಮನಸ್ಸಿನ ಆಳದಲ್ಲಿ ಚಿತ್ರಿಸಿಕೊಂಡಿರುತ್ತೆವೇಯೋ ಅದಕ್ಕನುಗುಣವಾಗಿಯೇ ವರ್ತಿಸುತ್ತೇವೆ.....*

*ಎಂಥ ವ್ಯಕ್ತಿ ಎಂದು  ಮನಸ್ಸಿನ ಆಳದಲ್ಲಿ ಚಿತ್ರಿಸಿಕೊಂಡಿರುತ್ತೆವೇಯೋ ಅದಕ್ಕನುಗುಣವಾಗಿಯೇ ವರ್ತಿಸುತ್ತೇವೆ.....* ನಾವು ಮಾಡಲೇಬೇಕಾದ ಅರಿಯಲೇಬೇಕಾದ  ಮೊಟ್ಟಮೊದಲ ಕಾರ್ಯ ಎಂದರೆ ನಾವು "ಏನಿದ್ದೇವೆ... ಹೇಗಿದ್ದೇವೆ" ಎನ್ನುವದನ್ನು ಅರಿತುಕೊಳ್ಳವದು. ಈ ಅರಿಕೆ ಮನವರಿಕೆಯಾದಂತೆಯೇ ನಮ್ಮ ವ್ಯಕ್ತಿತ್ವದ ಅನಾವರಣೆ ಆಗುತ್ತಾ ಸಾಗುತ್ತದೆ. ನಾನೊಬ್ಬ ಜ್ಙಾನಿ, ರಾಜ, ಸ್ನೇಹಿ, ಪರಿಸರಪ್ರೇಮಿ, ಸಾಧಕ, ಇತ್ಯಾದಿ ಇತ್ಯಾದಿ "ಏನಿದ್ದೇನೆ" ಎಂಬ  ಅರಿವು ಸದಾ ಅತ್ಯಗತ್ಯ.  ನಮ್ಮ ತನದ ಅರಿವಿನಲ್ಲಿಯೇ ನಮ್ಮ ವ್ಯಕ್ತಿತ್ವದ ಅರಳುವಿಕೆ ಅಡಗಿದೆ. *ನಾನು ಏನಿದ್ದೇನೆ ಎಂಬ ಅರಿವು ಮೂಡುವದು ಹೇಗೆ.... ???* ಈ ಅರಿವು ಮೂಡುವದು, ಮೂಡಿದ ಅರಿವು ಮನದಲ್ಲಿ ತಳವೂರಿನಿಲ್ಲುವದೂ ತುಂಬ ಕಠಿಣವೇ. ವ್ಯಕ್ತಿತ್ವದ ಅಭಿವ್ಯಕ್ತಿ ತುಂಬ ಕಷ್ಟವೇ ಸರಿ. ಆದರೆ ದೇವರ ಪಾರ್ಶದರಾದ ಗುರುಗಳ ಸಾನ್ನಿಧ್ಯವಿದ್ದರೆ ಕಷ್ಟವಾದದ್ದು,  ಕಠಿಣವೆಂಬವದೂ ಯಾವದೂ ಇರದು. ಆದರೆ ಗುರುಶಿಷ್ಯರ ತುಂಬ ಶ್ರಮಬೇಕು. ಒಂದು ಸುಂದರ ಕಥೆ.... ವಿಷಘಳಿಗೆಯಲ್ಲಿ ರಾಜನಿಗೆ ಒಂದು ಮಗು ಆಯಿತು. ಆ ಮಗುವಿನಿಂದ ನಿನಗೆ ಹಿತವಿಲ್ಲ ಎಂದರು ಭವಿ಼ಷ್ಯಗಾರರು. ಹುಟ್ಟಿದ ಆ ಮಗುವನ್ನು ಕಾಡಿನಲ್ಲಿ ಗಿಡದ ಕೆಳೆಗೆ ಮಲಗಿಸಿ, ಹಣವನ್ನೂ ಇರಿಸಿ ಬಂದರು ರಾಜಭಟರು. ಆ ಕೂಸನ್ನು ಮಕ್ಕಳೇ ಇಲ್ಲದ ಒಬ್ಬ ಅಗಸ ತಂದು ಸಾಕಿದ. ಸಲುಹಿದ. ಬೆಳಿಸಿದ. ಅವನ ನಾಮಕರಣ ಮಾಡಿದರು ಕಟ್ಯಪ

*ಆ ನಾಮದಲ್ಲಿ ಸರ್ವಶಕ್ತಿಯೂ ಅಡಗಿದೆ.....*

Image
*ಆ ನಾಮದಲ್ಲಿ ಸರ್ವಶಕ್ತಿಯೂ ಅಡಗಿದೆ.....* ಸರ್ವವನ್ನೂ ತಿಳಿಯಲು ನನಗಾಗದು. ಸರ್ವವನ್ನೂ ತಿಳಿಯಲು ತೀಕ್ಷ್ಣ ಮತಿವಂತರೇ ಆಗಿರಬೇಕು. ತೀಕ್ಷಮತಿ ಎನಗಿಲ್ಲ. ಇರುವ ತೀಕ್ಷ್ಣತೆಯನ್ನು ಮಂಡು ಮಾಡಿಕೊಂಡವನು ನಾನು. ಅಂತೆಯೇ ದುರ್ಬಲ. ಹೇಡಿ. ದೀನ. ಇಂತಹ ನನಗೂ ಅನುಕೂಲವಾಗುವಂತಹದ್ದು ಏನಾದರೂ ಇದೆಯಾ.... ??? ಆಪತ್ತುಗಳ ಸರಮಾಲೆ, ಕಷ್ಟಗಳ ಸುರಿಮಳೆ, ದುಃಖದ ಅಲೆಗಳು,  ಅವಮಾನದ ಬೇಗುದಿ, ಅಭಿಮಾನ ಮೋಹಗಳ ಸುಳಿ, ಇವೆಲ್ಲವೂ ಏಕಕಾಲಕ್ಕೆ ಎಲ್ಲಿಯಾದರೂ ಅಪ್ಪಳಿಸಿದ ನಿದರ್ಶನವಿದೆ ಎಂದರೆ ಅದು ನಾನೇ ಆಗಿರಬಹುದು. ಈ ಎಲ್ಲದರಿಂದ ಹೊರಬರಲು ಉಪಾಯವೇನಾದರೂ ಇದೆಯಾ.. ?? ಸರ್ವ ಸಮರ್ಥ, ಸಕಲಶಕ್ತ, ಸಕಲಾಭೀಷ್ಟಪ್ರದ  ಆ ನಾಮವೇ *ಕೃಷ್ಣ* ನ ನಾಮ. ಎಲ್ಲದಕ್ಕೂ ಉತ್ತರ. ಅಂತೆಯೇ  "ಕೃಷ್ಣನ್ನ ನೆನದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣಾ ಎನಬಾರದೆ"  ಎಂದರು ದಾಸರುಗಳು. *ಕೃಷ್ಣನ ನಾಮದಲ್ಲಿ ಆ ಶಕ್ತಿ ಉಂಟೇ....????* ಕೃಷ್ಣನ‌ ನಾಮದಲ್ಲಿ ಸಕಲವಿಧ ಆಪತ್ತುಗಳನ್ನೂ ಖಂಡಿಸುವ ಮಹಾನ್ ಶಕ್ತಿ ಇದ್ದೇ ಇದೆ. ಅಂತೆಯೇ ಕೃಷ್ಣನ ನಾಮದ ಬಲದಿಂದ ದ್ರೌಪದಿ ಅವಮಾನದಿಂದ ಪಾರಾದಳು. ಗಜೇಂದ್ರ ಅಪಮೃತ್ಯುವಿನಿಂದ ಪಾರಾದ. ಅಜಾಮಿಳ ಪಾಪ ಕಳೆದುಕೊಂಡ. ಪರೀಕ್ಷಿತ ಮೋಕ್ಷವನ್ನೇ ಪಡೆದ. ಇತಿಹಾಸ ಪುರಾಣಗಳಲ್ಲಿ ಇಂತಹ ಕೋಟಿ ನಿದರ್ಶನಗಳನ್ನು ಕಾಣಬಹುದು. *ನಾವೂ ನಿತ್ಯ ಈ ನಾಮವನ್ನೇ ಕೂಗ್ತೇವೆ ಮತ್ತು ಜಪಿಸುತ್ತೇವೆ ಅಲ್ವೆ.... ?? ಫಲವೇನು ಸಿಕ್ಕಿದೆ.. ??*

*ಅನ್ಯಾಯವ ಮಾಡಿ ಹರಿ ನಿನ್ನ‌ ಮೊರೆಹೊಕ್ಕೆ......*

*ಅನ್ಯಾಯವ ಮಾಡಿ ಹರಿ ನಿನ್ನ‌ ಮೊರೆಹೊಕ್ಕೆ......* ಹೇ ಹರಿಯೇ ... !! ನೀನು ಸರ್ವಜ್ಙ. ಸರ್ವಸಾಕ್ಷೀ. ಸರ್ವಪ್ರೇರಕ. ನನಗೇ ನೀನೇ ಗತಿ. ನಿನ್ನ ಆಜ್ಙಾ ಪಾಲನೆಯೇ ನನಗೆ ಅಂತಿಮ. ಇದುವೇ ನಿಶ್ಚಿತ. ಇದು ನನಗೂ ಸ್ಪಷ್ಟ. ಆದರೆ.......... ನ್ಯಾಯ ಮಾರ್ಗದಲ್ಲಿ ಎಂದೂ ಬರಲಿಲ್ಲ. ಅನ್ಯಾಯ ಮಾರ್ಗ ಎಂದಿಗೂ ಬಿಡಲಿಲ್ಲ. ಅನ್ಯಾಯ ಮಾರ್ಗದಲ್ಲಿ ಇದ್ದರೂ, ನಿನಗೆ ನಿರಂತರ ಅನ್ಯಾಯ ಮಾಡಿದರೂ ನಿನಗೆ ಮೊರೆಹೋಗುವದು ಬಿಡಲಿಲ್ಲ. ಇಂದು ನಿನ್ನ ಆಜ್ಙೆ ಒಂದೂ ಕೇಳುವದಿಲ್ಲ. ನೀ ಹೇಳಿದ್ದು ಮಾಡುವದಿಲ್ಲ. ನಿನ್ನ ವಿರುದ್ಧವೇ ಎನ್ನ ವರ್ತನೆ. ಹೀಗಿದ್ದರೂ ಇಂದು ನಾ ನಿನಗೆ ಮೊರೆ ಬರುವೆ. ಇಂದು ನಾ ಮಾಡುವ ಮಾಡಿದ ಧರ್ಮಗಳು ತೊಂಭತ್ತು ಪ್ರತಿಶತಃ ನನಗಾಗಿಯೇ ಇವೆ. ಎನ್ನ ಸ್ವಾರ್ಥಕ್ಕೇ ಇದೆ. ನಿನಗೋಸ್ಕರ ನಿನ್ನ ಪ್ರೀತಿಗೋಸ್ಕರ ಎಂಬುದು ಇಲ್ಲವೇ ಇಲ್ಲ. *ಗಂಧ ಅಕ್ಷತೆ ಹಚ್ಚಿಕೊಳ್ಳುವವರು ಎಷ್ಟಿದ್ದಾರೆ ನೋಡಿ ತೇಯ್ತೇನೆಯೇ ಹೊರತು ನಿನಗೋಸ್ಕರ ಗಂಧ ತಗೆಯಲಾರೆ* ಇದು ಇಂದಿನ ನನ್ನ ಸ್ಥಿತಿ. ಹೀಗಿದ್ದರೂ ನಿನಗೆ ಮೊರೆಬಂದಿದ್ದೇನೆ. ನೀನು ಹೇಳಿದ ಯಜ್ಙ , ದಾನ, ಜ್ಙಾನ,  ತಪ, ನಾನಾವಿಧ ಕರ್ಮಗಳು, ಧರ್ಮಗಳು, ಪಾಠಪ್ರವನಗಳು, ಪರೋಪಕಾರ, ಸಂಧ್ಯಾವಂದನೆ ಪೂಜೆಗಳು, ಪ್ರದಕ್ಷಿಣೆ ನಮಸ್ಕಾರಗಳು, ಅತಿಥಿ ಆಭ್ಯಾಗತರ ಸತ್ಕಾರ, ತಂದೆ ತಾಯಿಗಳ ಸೇವೆ, ಗುರುಸೇವೆ, ಮೊದಲಾದ ಯಾವ ಧರ್ಮವೂ ಮಾಡದೆ ಹರಿಯೇ ನಿನಗೆ ಮೊರೆ ಬಂದಿದ್ದೇನೆ.... ನಾನು ಯಾರಿಗಾದರೂ ನನ್ನದೇ ತಪ

*ದೇವನೊಬ್ಬನು ಇದ್ದಾನೆ ಎನ್ನುವದನ್ನು ಮರೆಯಬೇಡ......*

Image
*ದೇವನೊಬ್ಬನು ಇದ್ದಾನೆ ಎನ್ನುವದನ್ನುಮರೆಯಬೇಡ......* ಅನುಪಯುಕ್ತ ಜಗತ್ತಿನ ಎಲ್ಲ ವಸ್ತುಗಳೂ ನೆನಪಿನಲ್ಲಿ ಇರುತ್ತವೆ, ಆದರೆ ಅತ್ಯುಪಯುಕ್ತ ಸರ್ವಶಕ್ತ ದೇವರು ಮಾತ್ರ ನೆನಪಿನಲ್ಲಿ ಇರುವದೇ ಇಲ್ಲ.  ಎಲ್ಲಿ ಶಾಶ್ವತ ಪರಿಹಾರ ಸಿಗದೋ ಅಲ್ಲಿ ನಮ್ಮ ದುಃಖ ತೋಡಿಕೊಳ್ಳುತ್ತೇವೆ, ಪರಿಹಾರ ಸಿಕ್ಕೇ ಸಿಗುವ ದೇವರೆದುರಿಗೆ ಮಾತ್ರ ಒಂದಿನವೂ ನಮ್ಮ ದುಃಖ ತೋಡಿಕೊಂಡಿಲ್ಲ. ಅವನನ್ನು ಅತ್ಯಾಪ್ತನನ್ನಾಗಿ ಮಾಡಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಆಪ್ತರು ರಕ್ಷೆಣೆಗೆ ಬಾರರು, ರಕ್ಷೆಣೆಗೆ ಬರುವ ದೆವ ಆಪ್ತನಲ್ಲ. *ದೇವನಿಗೆ ಕಠಿಣವೆನ್ನುವದು ಯಾವದಿಲ್ಲ* ಶತ್ರುವಿಗೆ ಮತ್ತೊಬ್ಬ ಶತ್ರು ಕಠಿಣವೆನಿಸ ಬಹುದು ಆದರೆ, ದೈವಕ್ಕೆ  *ನ ದೈವಸ್ಯಾತಿಭಾರೋಸ್ತಿ* ದೇವನಿಗೆ ಕಠಿಣವಾದದ್ದು ಎನ್ನುವದು ಇಲ್ಲವೇ ಇಲ್ಲ.  ಎಂದು ಮಹಾಭಾರತ ಸ್ಪಷ್ಟು ನುಡಿಗಳಲ್ಲಿ ನೂರಾರು ಬಾರಿ ಸಾರಿ ಸಾರಿ ಹೇಳುತ್ತದೆ. "ಕಡುದರಿದ್ರ ಹೊತ್ತು ಕಳೆಯುವದರಲ್ಲಿಯೇ ಶ್ರೀಮಂತನಾಗಬಹುದು, ಸಿರಿವಂತ ಕ್ಷಣದಲ್ಲಿಯೇ ಕಡು ದರಿದ್ರನಾಗಬಹುದು" ಏನೂ ಆಗಬಹುದು. ಯಾವದೂ ಕಠಣವಲ್ಲ. ಅಸಾಧ್ಯವೆಂಬುವದು ಇಲ್ಲವೇ ಇಲ್ಲ. "ಏನಿದೆ ಏನಾಗ್ತಿದೆ ಎಲ್ಲವೂ ದೈವಾಧೀನವೇ." *ದೈವ ಎಷ್ಟು ಪ್ರಬಲ....??* "ದೈವ ಎಷ್ಟು ಪ್ರಬಲ" ಎಂದು ಹೇಳಲು ಸಾಧ್ಯವೇ ಇಲ್ಲ.  ಒಂದು ಸತ್ತ ನಾಯಿಯನ್ನು ಒಬ್ಬ ಚಾಂಡಾಲಿ ಹೇಗೆ ಎಳೆದೊಯ್ಯಬಹುದೋ ಹಾಗೆಯೇ ದೈವ ಎಲ್ಲರನ್ನೂ ಎಳೆದೊಯ