Posts

Showing posts from June, 2022

*ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....*

Image
  *ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....* ಹಿತವಾದದ್ದು ಒಳಿತಾದದ್ದು ಅಂತ ಏನಿದೆ ಅದು ಎಂದಿಗೂ ದುರ್ಲಭವೇ. ಅಹಿತವಾದದ್ದು ಕೆಟ್ಟದ್ದು ಅಂತ ಏನೇನಿದೆ ಅದೆಲ್ಲವೂ ಅತ್ಯಂತ ಸುಲಭವೇ.  ಅಂತೆಯೇ ಧರ್ಮ ಅತ್ಯಂತ ದುರ್ಲಭ. ಸತ್ಯ ದುರ್ಲಭ. ದಯೆ ಕ್ಷಮೆ ದುರ್ಲಭವೇ. ಸಹನೆ ಅತೀ ದುರ್ಲಭ. ಜ್ಙಾನ ಇದುವೂ ದುರ್ಲಭವೇ. ಅಧರ್ಮ, ಅಜ್ಙಾನ, ದ್ವೇಶ, ಮಾತ್ಸರ್ಯ, ಮೊದಲಾದ ಎಲ್ಲವೂ ಅತ್ಯಂತ ಸುಲಭವೇ ಆಗಿದೆ ಇಂದಿನ ಕಾಲದಲ್ಲಿ..... ಇಂದಿನ ಕಾಲದಲ್ಲಿ ನಮ್ಮ ಬ್ರಾಹ್ಮಣ ಯುವಕರಿಗೆ ಓದು ದುರ್ಲಭ, ಕೆಲಸ ದುರ್ಲಭ, ಧರ್ಮ ದುರ್ಲಭ, ಮದುವೆ ದುರ್ಲಭ, ಸೌಖ್ಯ ದುರ್ಲಭ, ಹಣ ದುರ್ಲಭ, ಪ್ರತಿಷ್ಠೆ ಕೀರ್ತಿಗಳೂ ದುರ್ಲಭ,  ಶಾಂತಿ ಸಮಾಧಾನ ದುರ್ಲಭ, ಸಂಧ್ಯಾವಂದನೆ ಪೂಜೆ ಮಹಾದುರ್ಲಭ, ಪಾಠ ಉಪನ್ಯಾಸಗಳಂತೂ ಹೇಳತೀರದಷ್ಟು ದುರ್ಲಭ. ಹೀಗೆ ಇಂದಿನ ಯುವಕರು ಪಡೆಯಬೇಕಾದದ್ದು ಏನೇನಿದೆ ಅದೆಲ್ಲವೂ ದುರ್ಲಭವೇ ಆಗಿದೆ. ಉತ್ತಮ ಸ್ನೇಹಿತರು ಸಿಗುವದು ದುರ್ಲಭ. ಸ್ನೇಹ ಬೆಳಿಸಿಕೊಳ್ಳುವದು ಇನ್ನೂ ದುರ್ಲಭ. ಸ್ನೇಹ ಉಳಿಸಿಕೊಳ್ಳುವದಂತೂ ಮಹಾ ದುರ್ಲಭ. ಇದೇರೀತಿ ಬಂಧುಗಳು, ಕುಲ, ಸಮಾಜ, ಕುಲ ಗುರುಗಳು, ಆಪ್ತರು, ಹಿತೈಷಿಗಳು, ಮಾರ್ಗದರ್ಶಕರು, ಪ್ರತಿಯೊಂದೂ ದುರ್ಲಭವೇ..... *ಕೆಟ್ಟದ್ದನ್ನು ಹೇಳುವವರು ನೂರು ಜನರು ಸಿಗಬಹುದು, ಸಿಕ್ಕೇ ಸಿಗುತ್ತಾರೆ. ಒಳಿತನ್ನು ಹೇಳುವವರು ಸಿಗಲ್ಲ. ಸಿಕ್ಕರೂ ಮಾತು ಕೇಳಲು‌ ಮನಸ್ಸೇ ಆಗಲ್ಲ.... ಅನಾಯಾಸೇನ ಅವರನ್ನು ದ್

*ದೃಷ್ಟಿಕೋನ ಸ್ವಲ್ಪ ಬದಲಾಯಿಸಿ ನೋಡೋಣ.......

Image
 *ದೃಷ್ಟಿಕೋನ ಸ್ವಲ್ಪ ಬದಲಾಯಿಸಿ ನೋಡೋಣ....... ನಮ್ಮ ದೃಷ್ಟಿ ಎಂದಿಗೂ ನಮ್ಮ ಮೂಗಿನ ನೇರವೇ. ಈ ದೃಷ್ಟಿಯನ್ನು ಬದಲಾಯಿಸಿಕೊಂಡಾಗ ಕಾಣುವದು ಭವ್ಯ ಮತ್ತು ಅದ್ಭುತವೇ ಆಗಿರುತ್ತದೆ.  ಒಬ್ಬ ಮನುಷ್ಯರನ್ನು ನೋಡಿದಾಗ ಅವನೇನು ಮಹಾ !! ಎಂಬ ಭಾವನೆ ಸಹಜವಾಗಿ ಚಿಮ್ಮುತ್ತದೆ. ಯಾಕೆ ಅಂದರೆ "ನಾನು ಮಹಾನ್ ಅಲ್ಲ, ನನ್ನಲ್ಲಿ ದೋಷಗಳು ತುಂಬಿವೆ, ನನ್ನ ದೃಷ್ಟಿ ನನ್ನ ಮೂಗಿನ ನೇರ, ಹಾಗಾಗಿ ಅವರಲ್ಲಿಯೂ ದೋಷಗಳೇ ಕಾಣುವದು, ದೋಷಗಳೇ ಕಂಡಾಗ ಅವರೇನು ಮಹಾ !!" ಎಂಬ ಉದ್ಗಾರ ಸಹಜ.  ಆದರೆ ನಮ್ಮ ದೃಷ್ಟಿಕೋನ ತುಸು ಬದಲಾದಾಗ *ಅವರೇ ಮಹಾ  !!*  ಎಂಬುವದು ಸುಸ್ಪಷ್ಟವಾಗುತ್ತದೆ.  ಒಂದು ಪುಟ್ಟ ಕಥೆ....  ತಾಯಿ ತನ್ನ ಒಂದು ಬಟ್ಟೆಯಮೇಲೆ ಕೈ ಕಸೂತಿ ಕೆಲಸವನ್ನು ಮಾಡುತ್ತಾ ಇರುತ್ತಾಳೆ. ದೂರದಿಂದ ಓಡಿ ಬಂದ ಮಗ ವಿಚಾರಿಸುತ್ತಾನೆ 'ಅಮ್ಮ ಇದೇನಿದು..... 🙄 ಬರೆ ಬಣ್ಣ ಬಣ್ಣದ ಧಾರಗಳು ಇಳಿಬಿದ್ದಿವೆ....?? ಗದ್ದಲವೋ ಗದ್ದಲ, ಕೆಟ್ಟ ಅಸಹ್ಯವಾಗಿದೆ... ನಂಗೇನೂ ತಿಳಿವಲ್ತು ನೋಡು..... ' ಆಗ ಆ ತಾಯಿ ಎದುರಿಗಿದ್ದ ಮಗನನ್ನ ಕರೆದು ತನ್ನ ತೊಡೆಯಮೇಲೆ ಕುಡಿಸಿಕೊಳ್ಳುತ್ತಾಳೆ *ಇಗೋ ಈಚೆ ನೋಡು.....* ಎಂದು ತೋರಿಸಿದಾಗ, ಆ ಕೂಸಿಗೆ ಆಶ್ಚರ್ಯ.. ವೈವಿಧ್ಯಮಯ ಆರ್ಟ... ಒಳ್ಳೊಳ್ಳೆ ಬಣ್ಣಬಣ್ಣದ ಪಕ್ಷಿಗಳು.... ಆ ಒಂದು ಸುಂದರ ಪ್ಲಾನ್ ... ಅಲ್ಲಿಯ ಶಿಸ್ತು... ಅದನ್ನು ನೋಡಿ ಬೆಪ್ಪಾದ... ಆಶ್ಚರ್ಯಪಟ್ಟ.... ಹಿಗ್ಗಿದ ಸಂತೋಷವಾಯಿತು...  ಅಮ್

*ಆತ್ಮೀಯತೆ ಇರುವಲ್ಲಿಯ ಬಲ, ಕಳೆದುಕೊಂಡಾಗ ಇರುವದಿಲ್ಲ*

Image
 * ಆತ್ಮೀಯತೆ ಇರುವಲ್ಲಿಯ ಬಲ, ಕಳೆದುಕೊಂಡಾಗ ಇರುವದಿಲ್ಲ * ಆತ್ಮೀಯತೆ ಇರುವಲ್ಲಿ ಹೇಗೆಯೆ ಇದ್ದರೂ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಉತ್ಕೃಷ್ಟವಾಗಿಯೇ ಕಾಣುತ್ತದೆ. ಆತ್ಮೀಯತೆ ಮಾಯವಾಯಿತೋ ಎಷ್ಟೇ ಉತ್ಕೃಷ್ಟವಾಗಿದ್ದರೂ ಅದು ಅಸಡ್ಢೆಯಾಗೆ ಕಾಣುತ್ತದೆ. ಆತ್ಮೀಯರ ಪರಸ್ಪರ ಕ್ಷುದ್ರಮಾತುಗಳೂ ಉತ್ತಮ ವಿಚಾರಗಳಾಗಿ ಗೋಚರಿಸಬಹುದು, ಅನಾತ್ಮೀಯರ ಅತ್ಯುತ್ಕೃಷ್ಟ ವಿಚಾರಗಳೂ ಅತೀಕ್ಷುದ್ರವಾಗಿ ಕಣಬಹುದು. ಇದುವೇ ಆತ್ಮೀಯತೆಯ ಬಲ ಸಾಮರ್ಥ್ಯಗಳು.  ಆತ್ಮೀಯತೆ ಇರುವಲ್ಲಿ ಭರವಸೆ ವಿಶ್ವಾಸಗಳು  ಇರುತ್ತವೆ. ಆತ್ಮೀಯತೆ ಕಡಿಮೆ ಆಯಿತೋ ಭರವಸೆ ವಿಶ್ವಾಸಗಳು ಹೋಗಿಬಿಡುತ್ತವೆ. ಭರವಸೆ ವಿಶ್ವಾಸಗಳೇ ಎತ್ತರಕ್ಕೆ ಒಯ್ಯಬಹುದಾದ, ಗೆಲ್ಲಿಸಬಹುದಾದ ಒಂದುತ್ತಮ ಸಾಮಗ್ರಗಳು. ದೇವರು ಇಂದಿಗೂ ನಮಗೆ ಕಂಡಿಲ್ಲ, ಮಾತಾಡಿಲ್ಲ, ಮೀಟಿಂಗ್ ಮಾಡಿಯೇ ಇಲ್ಲ  ಆದರೂ ದೇವರಲ್ಲಿ ಒಂದು ಆತ್ಮೀಯತೆ ಅದರ ಮುಖಾಂತರ ಉಂಟಾದ ವಿಶ್ವಾಸ ಹಾಗೂ ಭರವಸೆ ಇವುಗಳಿಂದಲೇ ನಮ್ಮ ನೂರಾರು ತರಹದ ಸಾವಿರಾರು ಕಷ್ಟಗಳನ್ನೂ ಗೆದ್ದು ಸುಖವಾಗಿ ಇದ್ದೆವೆ. ಅದೇರೀತಿ ಅನೇಕ ಮಿತ್ರರು, ಗುರುಗಳು, ಸಂಬಂಧಿಗಳು ಇತ್ಯಾದಿಗಳಲ್ಲಿ ಇರುವ ಆತ್ಮೀಯತೆ ಹಾಗೂ ವಿಶ್ವಾಸ ಭರವಸೆ ಇವುಗಳಿಂದಲೇ ಇಂದಿನ ಜೀವನದಲ್ಲಿ ಮೇಲುಗೈಯನ್ನು ಪಡೆದಿದ್ದೇವೆ.  ಒಂದು ಪುಟ್ಟ ಕಥೆ..... ರಾಜಸ್ಥಾನದ ಮರಳುಗಾಡಿನಲ್ಲಿ ಒಬ್ಬ ಕುರುಡ ಭಿಕ್ಷುಕ ಸಂಚಾರ ಮಾಡುತ್ತಿರುತ್ತಾನೆ. ದೈವಾನುಗ್ರಹ ಅವನಿಗೆ ಕಣ್ಣಿದ್ದ ಭಿಕ್ಷುಕ ಜೊತೆಗೂಡುತ್ತಾನೆ.

ಸದ್ಗುಣಗಳಿಗೆ ಬೆಲೆ ಇಲ್ಲ, ಹಣಕ್ಕಾಗಿ ಧಾವತಿ ಹೆಚ್ಚಿದೆ.*

Image
    * ಸದ್ಗುಣಗಳಿಗೆ ಬೆಲೆ ಇಲ್ಲ, ಹಣಕ್ಕಾಗಿ ಧಾವತಿ ಹೆಚ್ಚಿದೆ.* ಗುಣವಂತಿಕೆ ಬೆಲೆ ಕಳೆದುಕೊಳ್ಳುತ್ತಿದೆ. ಗುಣವಂತ‌ ಸನ್ಮಾರ್ಗ ಬಯಸುವ. ಸನ್ಮಾರ್ಗ ಇಂದಿನ ಜಗತ್ತಿಗೆ ಬೇಡವಾಗಿದೆ. ಸನ್ಮಾರ್ಗವೇ ಬೇಡವಾದಾಗ ಸನ್ಮಸರ್ಗವನ್ನೇ ಬಯಸುವ ಗುಣವಂತನೂ ಜಗತ್ತಿಗೆ ಬೇಡವಾಗಿದ್ದಾನೆ.  ಸಂಧ್ಯಾವಂದನ ಪೂಜೆ ಜಪ ಮಾಡುವವನಿಗೆ ದೊರೆಯದ ಪ್ರಾಶಸ್ತ್ಯ ಹಣವಂತನಿಗೆ ಇದೆ. ಹಣವಂತನಿಗೆ ಇರುವ ಮಾನ ಸೌಕರ್ಯ ಗುಣವಂತನಿಗೆ ಇಲ್ಲವಾಗಿದೆ. ಗುಣವಂತ ಮನೆಯಲ್ಲಿಯೂ ಮಾನ್ಯನಲ್ಲ, ಸಮಾಜದಲ್ಲಿಯೂ ಅಲ್ಲ. ಹಣವಂತ ಜಗದೆಡೆಯಲ್ಲ ಮಾನ್ಯವಂತ.  ಹಣವಂತ‌ ನೂರು ತಪ್ಪು ಎಸಗಿದರೂ ನಡೆಯುತ್ತದೆ. ಗುಣವಂತನ ಒಂದು ತಪ್ಪೂ ದುಬಾರಿಯಾಗುತ್ತದೆ.  ಎಲ್ಲ ಸಂಬಂಧಗಳೂ ಹಣದವನ್ನೇ ಅವಲಂಬಿಸಿವೆ. ಈ ನಿಯಮಕ್ಕೇ ದೇವರನ್ನೂ ಎಳೆ ತಂದಾಗಿದೆ. ತಿಮ್ಮಪ್ಪನ ಹಣವಂತನಿಗೆ ಸಿಕ್ಕಷ್ಟು ಸುಲಭ ನಿಸ್ಪೃಹನಿಗೆ ಸಿಗುವದಿಲ್ಲ.  ಏನು ಕೆಲಸ ಮಾಡಿದರೂ ಅದರ ಹಿಂದೆ ಹಣದ, ಕೀರ್ತಿಯ ಆಕಾಂಕ್ಷೆ ತುಂಬಿದೆ.ನಿಃಸ್ಪೃಹತೆ ಎನ್ನುವದು ಮಾತಿನಲ್ಲಿ ಇಲ್ಲ. ಒಂದು ಸಣ್ಣ ನಗು smile ಗೂ ಹಣದ ತಾಳಮೇಳ ಇದೆ.  ಹಣ ಮನೆ ಕೀರ್ತಿ ತನ್ನ ವರ್ಚಸ್ಸುಗಳನ್ನು  ಬಳಿಸಿ ಜನರ ಪ್ರೀತಿಯನ್ನು ಪಡೆಯಬೇಕು. ಆದರೆ ಇದಕ್ಕೆ ವಿಪರೀತವಾಗಿ ಇಂದಿನ ಮಾನವ ಬಳಗದವರನ್ನು,  ನೆರೆಹೊರೆಯ ಜನರನ್ನು ಬಳಿಸಿ ಹಣ, ಕೀರ್ತಿ,ಸಂಪತ್ತು ಪ್ರತಿಷ್ಠೆಗಳನ್ನು ಸಂಪಾದಿಸುತ್ತಿದ್ದಾನೆ. ತಂದೆ ತಾಯಿ ಮಕ್ಕಳು, ಅಣ್ಣ ತಮ್ಮ, ಗಂಡ ಹೆಂಡತಿ,  ಶಿಕ್ಷಕ ವಿದ್ಯಾರ್ಥಿಗಳ

*ಭಾಗೀರಥಿ ಜಯಂತಿ

Image
 *ಭಾಗೀರಥಿ ಜಯಂತಿ * ಭಗೀರಥನ ಘೋರ ತಪಸ್ಸಿಗೆ ಒಲಿದು ಬಂದ ಕಾರಣ ಗಂಗೆಗೆ ಭಾಗೀರಥಿ ಎಂದು. ಆ ಭಾಗೀರಥಿ ಭುವಿಗಿಳಿದು ಬಂದ ದಿನ. *ಗಂಗೆಯ ಅವತರಣದ ಹಿನ್ನಲೆ* ಸಗರನ ಮಕ್ಕಳ ಉದ್ಧಾರಕ್ಕಾಗಿ ಗಂಗೆಗೆ ಭೂಮಿಗೆ ಬರಬೇಕಿತ್ತು. ಸಗರ ೧೦ ಸಹಸ್ರ ವರ್ಷ ತಪಸ್ಸು ಮಾಡಿದ. ನಂತರ ಸಗರನ ಮೊಮ್ಮಗ ಅಂಶುಮಾನ್ ಹತ್ತು ಸಹಸ್ರವರ್ಷ, ನಂತರ ಅವನ ಮಗ ದಿಲೀಪ ಹತ್ತು ಸಹಸ್ರವರ್ಷ ನಂತರ ಭಗೀರಥ ಹತ್ತು ಸಹಸ್ರವರ್ಷ ಈ ನಿಟ್ಟಿನಲ್ಲಿ ನಾಲ್ವತ್ತೈದು ಸಾವಿರ ವರ್ಷಗಳ ಸುದೀರ್ಘ ತಪಸ್ಸಿನ ಫಲವಾಗಿ ಭುವಿಗಿಳದ ಮಹಾತಾಯಿ ಭಾಗೀರಥಿ.  ಎಲ್ಲ ತರಹದ ಪಾಪಗಳನ್ನು ಪರಿಹರಿಸುವ ಸಾಮರ್ಥ್ಯವಿರುವದು ಕೇವಲ  ತಪಸ್ಸು ಹಾಗು ಪುಣ್ಯಗಳಿಗೆ. ತಪಸ್ಸಿನಿಮದಲೇ ಬಂದ ಸ್ವಯಂ ಪುಣ್ಯ ಸ್ವರೂಪಿಯಾದ ಕಾರಣದಿಂದಲೇ ಏನೋ ಎಂಬಂತೆ ನಮ್ಮೆಲ್ಲರ ರಾಶಿ ರಾಶಿ ಪಾಪಗಳನ್ನು ಸುಟ್ಟು ಬೂದಿಮಾಡಿಬಿಡವವಳೂ ಕೂಡ. ತ್ರಿವಿಕ್ರಮರೂಪಿ ನಾರಾಣನ ಪಾದವಿಕ್ಷೇಪದಿಂದ ಬ್ರಹ್ಮಾಂಡ ಕಟಾಹ ಸೀಳಿ ಬ್ರಹ್ಮಾಂಡದ ಹೊರ ಇರುವ ಗಂಗೆ ಒಳಗೆ ಬಂದಳು. ಆ ಜಲದಿಂದಲೇ ಬ್ರಹ್ಮದೇವರು ಅದೇ ಪಾದಕ್ಕೆ ನೆ ಅಭಿಷೇಕ ಮಾಡಿದರು. ಆ ಜಲವೇ ಪಾರ್ವತಿಯ ತಂಗಿಯಾಗಿ ಹುಟ್ಟಿ ಶಿವನ ಜಡೆ ಸೇರಿದಳು. ಮುಂದೆ ವಿಯದ್ಗಂಗೆ ಯಾಗಿ ದೇವಲೋಕದಲ್ಲಿ ಹರಿದಳು. ಇತಹ  ಗಂಗೆಯನ್ನೇ ಭುವಿಗೆ ತಂದ ಭಗೀರಥ. ಇದುವೇ ಗಂಗೆಯ ಮಹಾಮಹಿಮೆ... "ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ. ಮುಚ್ಯತೆ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ" ಗಂಗೆಯನ್ನು ನೆ

ಮನಸ್ಸು ಒಂದು ಅದ್ಭುತ....

Image
  ಮನಸ್ಸು ಒಂದು ಅದ್ಭುತ.... ಮನಸ್ಸೇ ಒಂದು ಅದ್ಭುತ. ಮನಸದಸು ಇದ್ದರೆ ಮಾತ್ರ ಜೀವನಿಗೆ ಜೀವ ಎನ್ನಬಹುದು. ಮನಸ್ಸು ಇಲ್ಲದವ ಸತ್ತಂತಯೇ ಸರಿ. ಮನಸ್ಸಿನಲ್ಲಿಯೇ ದೇವ ಕಾಣುವ. ಮನಸ್ಸಿನಿಂದಲೇ ತಮಸ್ಸಾಧನೆಯೂ. ಮನಸ್ಸು ಏನೂ ಮಾಡಲು ಸಮರ್ಥ. ಅಂತೆಯೇ ಮನಸ್ಸು ಒಂದು ಅದ್ಭುತ.  ಈ ಮನಸ್ಸನ್ನು ನಿಯಮಿಸುವವರು ಅನೇಕರು. ಲಕ್ಷ್ಮೀ ಭ್ರಹ್ಮ ಗರುಡ ಶೇಷ ರುದ್ರ ಉಮಾ ಇಂದ್ರ ಕಾಮ ಅನಿರುದ್ಧ ಮುಂತಾದ ಮಹಾ ಘಟಾನುಘಟಿ ದೇವತೆಗಳಲ್ಲರೂ ಸೇರಿ ನಿಯಮಿಸುವವರು. ಆ ಕಾರಣದಿಂದಲೂ  ಅದ್ಭುತ ಪದಾರ್ಥವೇ ಮನಸ್ಸು. ಅನಾದಿಯಿಂದ ಪ್ರತಿಕ್ಷಣದಲ್ಲಿಯೂ ಹೊಸ ಹೊಸ ಕಾರ್ಯಗಳನ್ನು ಮಾಡುತ್ತಾ ಇರುತ್ತವೆ.  ಅದೆಲ್ಲವೂ ಸಂಸ್ಕಾರರೂಪದಲ್ಲಿ ಮನಸ್ಸಿನಲ್ಲಿ store ಆಗಿ ಇರುತ್ತವೆ. ಆ ಎಲ್ಲ ಸಂಸ್ಕಾರಗಳು ಕಾಲಕಾಲಕ್ಕೆ ಅಭಿವ್ಯಕ್ತಿ ಆಗುತ್ತಾ ಇರುತ್ತವೆ. ಮನಸ್ಸಿನಿಂದ ದೂರಾಗುವ ಮರೆಯುವ ವಸ್ತು ಈ ಜಗದಲ್ಲಿ ಯಾವದೂ ಇಲ್ಲ. ಇಂದಿನ ಇಂಟರ್ನೆಟ್ ಕಿಂತಲೂ ನೂರುಪಟ್ಟು ಅಲ್ಲ ಸಾವಿರಪಟ್ಟು ಹೆಚ್ಚು ವೇಗದ ವಸ್ತು ಒಂದಿದೆ ಎಂದರೆ ಅದು ಮನಸ್ಸೇ. *ವಾಯುದೇವರು* ಜೀವ ತಾಯಿಯ ಗರ್ಭದಲ್ಲಿ ಇರುವಾಗ ಹಾಗೂ ಹೊರಬಂದ ಮೇಲೆ ಆರು ತಿಂಗಳವರೆಗೆ ಮನಸ್ಸು ಮೊದಲು ಮಾಡಿ ಎಲ್ಲ ಇಂದ್ರಿಯಗಳನ್ನು ನಿಯಮಿಸುವವರು ವಾಯುದೇವರು. ಆ ಕಾರಣದಿಂದಲೇ ಗರ್ಭದಲ್ಲಿ ಇರುವಾಗ ಈ ಗರ್ಭಾವಸ್ಥೆಯ ದುಃಖಕ್ಕೆ ಕಾರಣವಾದ ಹಿಂದೆ ಮಾಡಿದ ಅನೇಕ ಕರ್ಮಗಳನ್ನು ನೆನಪು ಹಾಕಿ, ಈ ಕರ್ಮಗಳನ್ನು ಮತ್ತೆ ಮಾಡುವದಿಲ್ಲ ಎಂದೆ ಪ್ರತಿಜ್ಙೇ ಮಾ