*ದೇವರಲ್ಲಿ ನಂಬಿಕೆ, ವಿಶ್ವಾಸಗಳಿದ್ದರೆ ಭಕ್ತಿ ಸಾರ್ಥಕ..*
ದೇವರ ಅಸ್ತಿತ್ವವನ್ನು ಒಪ್ಪಿಕೊಂಡವ ಆಸ್ತಿಕ. ಅಂತೆಯೇ ದೇವರನ್ನು ನಂಬದವರಿಗಿಂತಲೂ ನಂಬಿದವ ಅತ್ಯಂತ ಯೋಗ್ಯ. ನಂಬಿಕೆಗೆ ಮೂಲ ವಿಶ್ವಾಸ. ವಿಶ್ವಾಸಕ್ಕೆ ಯೋಗ್ಯ ನಂಬಿಕೆ.
ಆಸ್ತಿಕರಾದ ನಾವು ಭಕ್ತಿ ಇಂದಲೇ ದೇವರ ಪೂಜೆ ಮಾಡುತ್ತೇವೆ. ಆದರೆ ಏನನ್ನೂ ಪಡೆಯಲು ಆಗುವದಿಲ್ಲ. "ಈ ದೇವರಲ್ಲಿ ಯಾಕಪ್ಪಾ ಭಕ್ತಿ ಮಾಡಿದೆ" ಎಂದು ಹತಾಶನಾಗುವ ಸಂಭವ ಹೆಚ್ಚಾಗಿ ಕಾಣುತ್ತದೆ. ಅನುಭವಿಸುದ್ದೇವೆ. ಹತಾಶೆ ಭಕ್ತಿಯನ್ನು ಕ್ಷೀಣಿಸುತ್ತದೆ.
*ಭಕ್ತಿಯ ರಕ್ಷಣೆ ಹೇಗೆ... ?? ಭಕ್ತಿ ದೃಢವಾಗಲು ಏನು ಮಾಡಬೇಕು... ??*
ಭಕ್ತಿ ದೃಢವಾಗಲು ಮೂಲ ನಂಬಿಕೆ ವಿಶ್ವಾಸಗಳೇ. *ದೇವ ರಕ್ಷಣೆ ಮಾಡುವ* ಎಂಬ ನಂಬಿಕೆ ಇಲ್ಲದೇ ಇರುವದರಿಂದಲೋ ಏನೋ, ದೇವರಿಗೆ ಬೇಡುತ್ತೇವೆ. ಅಥವಾ ನಮ್ಮ ರಕ್ಷಣೆಗೆ ನಾವೇ ಹೊಣೆಗಾರರು ಎಂಬಂತೆ ಹೋರಾಡುತ್ತೇವೆ.
ಶ್ರೀಮದ್ಭಾಗವತ ತಿಳಿಸುತ್ತದೆ *ನಿಯತಾರ್ಥೋ ಭಜೇತ* ಮಾಡುವ ಭಗವತ್ಕಾರ್ಯದಲ್ಲಿ ರಕ್ಷಣೆ ಮಾಡಿಯೇ ಮಾಡುತ್ತಾನೆ, ಫಲ ಸಿದ್ಧ ಎಂದು ದೃಢವಾದ ವಿಶ್ವಾಸದಿಂದಲೇ ಪೂಜೆ ಮಾಡು ಎಂದು.
*ಕ್ಷುದ್ರವಿಷಯಗಳಲ್ಲಿಯೇ ನಂಬಿಕೆ ಹೆಚ್ಚು.....*
ತುಂಬ ವಿಚಿತ್ರ ಬೆಕ್ಕು ಅಡ್ಡ ಹೋದರೆ ಎಷ್ಟು ನಂಬುತ್ತೇವೆ, ಅಷ್ಟು ಬೇಡ, ಆ ನಂಬಿಕೆಯ ಶತಾಂಶ " *ದೇವರ ನಾಮ* ಈ ತರಹದ ಅಪಶಕುನಗಳಿಂದ ಸೂಚಿತವಾದ ಎಲ್ಲಾ ದೋಷಗಳನ್ನು ಪಾಪಗಳನ್ನೂ ಪರಿಹರಿಸುತ್ತದೆ" ಎಂದು ವಿಶ್ವಾಸವೂ ಇಡುವದಿಲ್ಲ, ನಂಬುವದಂತೂ ದೂರದ ಮಾತೇ.
Whatsapp, fb, news paper, news ಇವುಗಳಲ್ಲಿ ಬಂದ ವಿಷಯಗಳನ್ನು ಕಣ್ಣುಮುಚ್ಚಿ ನಂಬುವಂತೆ, ಶಾಸ್ತ್ರ, ದರ್ಮ, ಉಪನಿಷತ್ತು, ಋಷಿ, ಮುನಿಗಳು, ಜ್ಙಾನಿಗಳು, ದೇವತೆಗಳು, ಸ್ವಯಂ ದೇವರು ಹೇಳಿದ ಮಾತು ನಂಬಲು ಆಗುವದೇ ಇಲ್ಲ.
*ಹೀಗೇಕೆ ಆಗುವದು.....??*
ಉತ್ತರ ಸಹಜ WhatsApp, fb ಮುಂತಾದವುಗಳನ್ನು ಪ್ರೀತಿಸುವಷ್ಟು ದೆವರನ್ನು ಪ್ರೀತಿಸುವದಿಲ್ಲ. ಸ್ನೇಹವಿರುವಲ್ಲಿಯೇ ಇರುವವುಗಳು ನಂಬಿಕೆ ಹಾಗೂ ವಿಶ್ವಾಸಗಳು. ಸ್ನೇಹ ಶಿಥಿಲವಾದಂತೆ ನಂಬಿಕೆ ವಿಶ್ವಾಸಗಳು ಕಳಚಿ ಬೀಳುತ್ತವೆ.
*ದೇವರಲ್ಲಿ ಸ್ನೇಹ ಪ್ರೀತಿಗಳು ಬರಲು ಏನು ಮಾಡಬೇಕು..??*
ದೇವರ ನಾನಾವಿಧವಾದ ಮಹಿಮಾಜ್ಙಾನವನ್ನು ಮಾಡಿಕೊಳ್ಳಬೇಕು. ಮಹಿಮಾ ಜ್ಙಾನ ಬೆಳೆದಂತೆ ಬೆಳೆದಂತೆ ಸ್ನೇಹ ಪ್ರೀತಿಗಳು ಬೇಳೆಯುತ್ತವೆ. ಮಹಿಮಾ ಜ್ಙಾನ ಪೂರ್ವಕ ಮಾಡುವ ಸ್ನೇಹಕ್ಕೇನೇ *ಭಕ್ತಿ* ಎಂದು ಹೇಳುವದು. ಸ್ನೇಹ ಪ್ರೀತಿಗಳ ಪರಿಪಾಕವಾದ ಭಕ್ತಿ ದೃಢವಾದಂತೆ ನಂಬಿಕೆ ವಿಶ್ವಾಸಗಳು ಅರಳುತ್ತವೆ.
*ವಿಶ್ವಾಸಃ ಫಲದಾಯಕಃ* ಎಂದು ಹೇಳಿದಂತೆ ನಂಬಿಕೆ ವಿಶ್ವಾಸಗಳು ಅರಳಿದಾಗ ನಿಷ್ಫಲತೆ ಎಂಬುವದೇ ಇರದು.
ಜ್ಙಾನಪೂರ್ವಕ ಸ್ನೇಹ ಮಾಡಿದ್ದರಿಂದಲೇ ಸಾಧಕ ದೇವರನ್ನು ನಂಬಿದ್ದಾನೆ ಆದ್ದರಿಂದ ದೇವರಲ್ಲಿ ವಿಶ್ವಾಸವಿದೆ. ವಿಶ್ವಾಸ ಮಾಡಿದ್ದಾನೆ ಆದ್ದರಿಂದಲೇ ಅಪೇಕ್ಷಿತ ಫಲ ಸಿದ್ಧ. ಫಲಸಿಕ್ಕಾಗ ಮಾಡಿದ *ಭಕ್ತಿ* ಸಾರ್ಥಕ ಎಂದೆನಿಸಿ ಇನ್ನೂ ಹೆಚ್ಚಿನ ಭಕ್ತಿಯಲ್ಲಿ ಉದ್ಯುಕ್ತನಾಗುತ್ತಾನೆ ಸಾಧಕ.
ಸ್ನೇಹವಿರುವಲ್ಲಿ ನಂಬಿಕೆ ಇದೆ. ನಂಬಿಕೆ ಇರುವಲ್ಲಿ ವಿಶ್ವಾಸವಿದೆ. ವಿಶ್ವಾಸಿಕನಿಗೆ ಎಂದಿಗೂ ಫಲಸಿಕ್ಕಿಲ್ಲ ಎಂದಾಗುವದೇ ಇಲ್ಲ. ಎಲ್ಲ ಅಪೇಕ್ಷಿತ ಫಲಗಳೂ ಸಿದ್ಧ. ಅಪೇಕ್ಷಿತ ಫಲಗಳೆಲ್ಲವೂ ಸಿದ್ಧಿಸಿದಾಗ *ಭಕ್ತಿ ಹ್ರಾಸವಾಯಿತು - ಕಗಷೀಣಿಸಿತು* ಎಂಬ ಮಾತೇ ಬರುವದಿಲ್ಲ. ಕ್ಷಣ ಕ್ಷಣಕ್ಕೂ ಬೇಳೆಯುತ್ತಾ ಸಾಗುತ್ತದೆ.....
*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments