*ದೇವರು ಕೊಟ್ಟದ್ದು ಎಂದು ಎಲ್ಲವನ್ನೂ ಉಣ್ಣುವದು ಸರಿಯೇ..... ???*

ಜಗತ್ಸೃಷ್ಟಿಕಾರಕ ನಾರಾಯಣ. ಜಗತ್ತಿನ ಎಲ್ಲ ಪದಾರ್ಥಗಳೂ ದೇವರು ಕೊಟ್ಟಿರುವದೆ. ರೂಪ ಲಾವಣ್ಯ, ಮನೆ ಮಠ, ವಸ್ತ್ರ ವಸತಿ, ಅನ್ನ ನೀರು, ದೇಹ ಇಂದ್ರಿಯ, ಜ್ಙಾನ ಬುದ್ಧಿ, ನಡತೆ, ಆಸೆ ಸಿಟ್ಟು , ವಿಧಿ ನಿಷೇಧ, ಟೀವಿ ಪುಸ್ತಕ, ಮೋಬೈಲು ಪೂಜೆ, ಗುರು ಶಿಷ್ಯ, ತಂದೆ ತಾಯಿ, ಹೆಂಡತಿ ಮಗ, ಹೀಗೆ ಪ್ರತಿಯೊಂದೂ ದೇವರು ಕೊಟ್ಟಿರುವದೇ.
ಈ ಎಲ್ಲ ಪದಾರ್ಥಗಳೂ ದೇವರು ಕೊಟ್ಟಿದ್ದಾನೆ, ಎಂದು ಬೀಗಿ, ಎಲ್ಲ ಭೋಗ್ಯವಸ್ತುಗಳನ್ನೂ ಭೋಗಿಸುವದು ಸರಿಯೇ ???
ಶಾಸ್ತ್ರ ತುಂಬ ಚೆನ್ಬಾಗಿ ವಿವರಿಸುತ್ತದೆ.
ಎಲ್ಲ ಪದಾರ್ಥಗಳೂ ದೇವರೇ ಕೊಡುವವ, ದೇವರಿಂದಲೇ ಹುಟ್ಟಿದ್ದು, ದೇವರೇ ಕೊಟ್ಟೂ ಇದ್ದಾನೆ ಇದು ನೂರಕ್ಕೆ ನೂರರಷ್ಟು ನಿಜ. ಅಂತ ಹೇಳಿ ದೊರೆತ ಎಲ್ಲವನ್ನೂ ಉಣ್ಣುವೆ, ಭೋಗಿಸುವೆ ಎನ್ನುವದು ಶುದ್ಧತಪ್ಪೇ......
*ಹಿತವಾದದ್ದನ್ನೇ ಭೋಗಿಸು*
*ಕೊಟ್ಟದ್ದು ಸಾವಿರ. ಹಿತವಾದದ್ದು ನೂರು.* ಹಿತಾಹಿತ ವಿವೇಕ ಇರೋದರಿಂದ ಎಲ್ಲವನ್ನೂ ಭೋಗಿಸುವದು ಧಡ್ಡತನದ ಪರಮಾವಧಿ ಎಂದಾಗಬಹುದು. ಅತ್ಯಂತ ದೀರ್ಘಕಾಲೀನವಾಗಿ ಯಾವದು ಅತ್ಯಂತ ಹಿತವೋ ಅದನ್ನೇ ಭೋಗಿಸುವದು ಸೂಕ್ತ.
*ಹಿತವಾಗಿದ್ದರೂ ಮಿತವೇ ಆಗಿರಬೇಕು*
ಹಿತ ಎಂದು ಹೇಳಿ ಎಲ್ಲವನ್ನೂ ಭೋಗಿಸುವದು ಭಾಗವತದ ದೃಷ್ಟಿಯಲ್ಲಿ ತಪ್ಪೂ ಎಂದಾಗಬಹುದು. ಅಂತೆಯೇ ಹಿತವಾದದ್ದರಲ್ಲಿಯೂ ಮಿತವಾಗಿಯೇ ಭುಂಜಿಸು. ಆದ್ದರಿಂದ ಹಿತವಾದದ್ದನ್ನೂ ತ್ಯಜಿಸು. *ತ್ಯಜಿಸುವದೇನಿದೆ ಇದು ಪರಮಸೂಕ್ತ* ಎಂದೇ ಹೇಳುವದು ನಮ್ಮ ಶ್ರೀಮದ್ಭಾಗವತ.
*ಹಿತವೆಂದು ತಿಳಿಯುವದು ಹೇಗೆ ??*
ನೀರು ಕೊಟ್ಟಿದ್ದಾನೆ ಹಾಗೆಯೇ ಬೀರು ಕೊಟ್ಟಿದ್ದಾನೆ. ಅನ್ನ ಕೊಟ್ಟಿದ್ದಾನೆ ಜೊತೆಗೆ ಮಾಂಸವೂ ಕೊಟ್ಟಿದ್ದಾನೆ. ಸಜ್ಜನರನ್ನೂ ಕೊಟ್ಟಿದ್ದಾನೆ ದುಷ್ಟ ಪಿಶಾಚಿಗಳನ್ನೂ ಕೊಟ್ಟಿದ್ದಾನೆ. ಎಂದು ಹೇಳಿ ಎಲ್ಲವನ್ನೂ ಭೋಗಿಸಲು ಸಾಧ್ಯವೇ... ??? ಇಲ್ಲ ತಾನೆ.... ಹಾಗಾದರೆ *ಯಾವದು ಹಿತವೋ ಅವುಗಳನ್ನೇ ಭೋಗಿಸುವದು ತರ ಸೂಕ್ತ* ಎಂದೆನಿಸುತ್ತದೆ.
*ಹಿತವಾದದ್ದೂ ಮಿತವೇ ಆಗಿರಬೇಕು*
ಹಿತವಾಗಿದೆ ಎಂದು ಯಥೇಚ್ಛ ಭೋಗಿಸುವದೂ ತಪ್ಪು. ಯಾಕೆಂದರೆ ಹಿತವಾದದ್ದೂ ಅತಿಯಾದರೆ ಅಜೀರ್ಣವಾಗುವ ಸಂಭವ ಇರತ್ತೆ ಆದ್ದರಿಂದ ಮಿತವಾಗಿಯೇ ಭೋಗಿಸುವದು ಸೂಕ್ತ.
*ಹರಿ ಕೊಟ್ಟಿರುವದೆಲ್ಲ ತ್ಯಜಿಸಲೇ ಹೊರತು ಭೋಗಿಸಲು ಅಲ್ಲವೇ ಅಲ್ಲ.*
ಭೋಗಿಸುವದೇ ಆದರೆ ಹಿತವಾಗಿರಲೇಬೇಕು. ಹಿತವಾದದ್ದೂ ಮಿತವಾಗಿಯೇ ಭೋಗಿಸಬೇಕು. ಆಗ ಸ್ವಲ್ಪವಾದರೂ ಲಾಭವಿದೆ. ಇದುವೇ ಮಧ್ಯಮ ವರ್ಗಕ್ಕೆ ಸಾಧನೆಗೆ ಅನುಕೂಲವೂ ಆಗಿ, ವಿಷ್ಣುಪ್ರೀತಿಗೆ ಸಾಧಕವೂ ಆಗುತ್ತದೆ. ಹಾಗಾದರೆ ಉತ್ತಮವರ್ಗಕ್ಕೆ...
*ಹಿತವಾದದ್ದೂ ಮಿತವಾಗಿಯೂ ಉಣ್ಣದೇ ತ್ಯಜಿಸಬೇಕು.*
ತ್ಯಾಗ ಇದು ಅತ್ಯುತ್ತಮ. ತ್ಯಾಗದಲ್ಲಿ ತುಂಬ ಲಾಭವಿದೆ. ತ್ಯಾಗದ ಹಿಂದೆಯೇ ಭೋಗವೂ ಅಡಗಿದೆ. ಅದು ಹೇಗೆ.... ???
ಯಾವುದೇ ಭೋಗ ಪುಣ್ಯದಿಂದಲೇ ಸಿಗುವಂತಹದ್ದು. ಭೋಗಿಸುವ ಸಮಯದಲಿ ಹಿಂದಿನ ಪುಣ್ಯದ ನಾಶವೂ ಅಡಗಿದೆ. ಮತ್ತೆ ಹೊಸ ಪುಣ್ಯವೂ ಆಗದೂ. ಜೊತೆಗೆ ಪಾಪಗಳೂ ಘಟಿಸುವದುಂಟು. ಹಾಗಾಗಿ ಹಿಂದಿನ ಪುಣ್ಯ ಹೋಯಿತು. ಹೊಸ ಪುಣ್ಯ ಮಾಡಲಿಲ್ಲ. ಅದರಮೇಲೆ ಪಾಪಗಳೂ ಸೇರಿಕೊಂಡರೆ ಮುಂದೆ ಎದುರಾಗುವ ದಿನಗಳು ಘೋರವೇ ಆಗಿರುತ್ತವೆ.
ವೈರಾಗ್ಯವನ್ನೂ ಹರಿ ಕೊಟ್ಟಿರುವದೇ. ಹರಿ ಕೊಟ್ಟ ಭೋಗಗಳನ್ನು ತ್ಯಜಿಸಿದಾಗ, ಹಿಂದಿನ ಪುಣ್ಯಗಳೂ ಉಳಿಯಿತು. ವಿರಕ್ತನಾದಾಗ ಸಾಧನೆಯೂ ಹೆಚ್ಚಾಗಿ ಪುಣ್ಯ ಇನ್ನೂ ಬೆಳೆಯಿತು. ಇದರೊಟ್ಟಿಗೆ ಪಾಪಾಗಳು ಘಟಿಸುವದೂ ಕಡಿಮೆ ಆಯಿತು. ಅಂತೆಯೇ ಮಹ ಮಹಾರಾಜರುಗಳೆಲ್ಲರು ರಾಜ್ಯವನ್ನೂ ತ್ಯಜಿಸಿ, ಭೋಗಗಳನ್ನೂ ಬಿಟ್ಟು ವನಕ್ಕೆ ಹೋದ ನಿದರ್ಶನಗಳು ನೂರಾರು ಇವೆ.
ತ್ಯಾಗದಿಂದ ಪುಣ್ಯ ಉಳಿಯಿತು. ಪಾಪಗಳು ಕಡಿಮೆಯಾದವು, ಭೋಗದ ಸಮಯವೂ ಉಳಿತು. ಆಗ ವಿಷ್ಣುವನ್ನು ಪ್ರೀತಿಸಲು, ವಿಷ್ಣುವಿನಲ್ಲಿ ಭಕ್ತಿ ಮಾಡಲು, ವಿಷ್ಣು ವಿಷಯಕ ಜ್ಙಾನ ಬೆಳಿಸಿಕೊಳ್ಳಲ ಅನುವಾಯಿತು. ಹೀಗೆ ತ್ಯಾಗ ಸಾಧನೆಗೆ ಮೆಟ್ಟಿಲೂ ಆಯಿತು. ಅಂತೆಯೇ *ವಿರಕ್ತಾನಾನಾಮೇವ ಜ್ಙಾನಮ್* ಎಂದಿತು ಶಾಸ್ತ್ರ. *ಜ್ಙಾನೇನೈವ ಪರಂ ಪದಮ್* ಜ್ಙಾನಿಗೇನೇ ಪರಪದವಿಯಾದ ಮೋಕ್ಷ.
ಹಾಗಾಗಿ ದೇವರು ಕೊಟ್ಟಿದ್ದಲ್ಲವನ್ನೂ ಉಣ್ಣುವೇ, ಭೋಗಿಸುವೇ. ದೇವರು ಕೊಟ್ಟಿದ್ದೂ ಭೋಗಿಸಲೆ ಎಂದು ಬೀಗುವದೇನಿದೆ ಅದು ತಪ್ಪು ಎಂದೇ ಅನಿಸುತ್ತದೆ. ಸಾಧ್ಯವಿರುವಷ್ಟು ತ್ಯಜಿಸಿದ ತ್ಯಾಗಿಗಳೇ ಮಹಾ ಮಹಾ ಜ್ಙಾನಿಗಳು ಆಗಿದ್ದಾರೆ. ತ್ಯಾಗಿಗಳೆಲ್ಲರೂ ಮಹಾತ್ಮರೆ ಆಗಿದ್ದಾರೆ. .
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments