Posts

Showing posts from March, 2023

ದೇಶದಲ್ಲಿ ಅಲ್ಪರು ಆದರೆ ಮಹಾಸಮರ್ಥರು ಬ್ರಾಹ್ಮಣರು.

Image
  ದೇಶದಲ್ಲಿ ಅಲ್ಪರು ಆದರೆ ಮಹಾಸಮರ್ಥರು ಬ್ರಾಹ್ಮಣರು.   ಬ್ರಾಹ್ಮಣರು ಎಂದಿಗೂ ಶ್ರೀಮಂತಿಕೆಯನ್ನು ಬಯಸಿದವರಲ್ಲ. ಹದಿನಾಲ್ಕು ಲೋಕದಲ್ಲೇ ಅತಿ ಶ್ರೀಮಂತನಾದ ಸ್ವಾಮಿಯನ್ನು ನಂಬಿದವರು. ಅವನದಾಸನಾದರು. ಭಕ್ತಿಯಲ್ಲಿ ಕಟ್ಟಿಹಾಕಿ ಅವನನ್ನೇ ದಾಸನನ್ನಾಗಿ ಮಾಡಿಕೊಂಡರು. ದೇವರನ್ನು ತಮ್ಮವನೆಂದರು, ದೇವರವರಾದರು. ರಾಜಕೀಯ ಅಧಿಕಾರವನ್ನು  ಅತಿದೂರಿರಿಸಿದರು.  ಶ್ರೀಮಂತಿಕೆ ಅಧಿಕಾರಗಳನ್ನು ದೂರಿಟ್ಟರೂ ಎಂದಿಗೂ ದೀನ ದರಿದ್ರರಾಗಲಿಲ್ಲ.  ಇನ್ನೊಬ್ಬರಿಗೆ ಕೈಯೊಡ್ಡಲಿಲ್ಲ, "ಬೇಡಿದರೆ ಎನ್ನ ಒಡೆಯನ ಬೇಡುವೆನೆಂದರು".  ಬಡವರಾಗಿಯೇ ಉಳಿದರು. ಸುಖಕ್ಕೆ ಕಡಿಮೆ ಮಾಡಿಕೊಳ್ಳಲಿಲ್ಲ. "ಚಿನ್ಮಯನಲ್ಲಿ ಮನಸ್ಸು ನೆಟ್ಟಿರುವದರಿಂದ ದುಃಖಕ್ಕೆ ಕಾರಣವಾದ ಚಿಂತೆಯ ಚಿತೆಮಾಡಿ ಸುಟ್ಟು ಹಾಕಿದರು. ನಾನತರಹದ ಕಷ್ಟಗಳ ಅನುಭವಿಸುವ ಮಧ್ಯದಲ್ಲಿಯೇ ಸಿದ್ಧಿಗಳನ್ನು ಪಡೆದರು. ತಮ್ಮ ಕಾಲಮೇಲೆ ನಿಲ್ಲುವ ಶಕ್ತಿಯನ್ನು ಸಂಪಾದಿಸಿಕೊಂಡರು. ತಮ್ಮ ಛತ್ರಛಾಯೆಯಲ್ಲಿ ಅನೇಕರನ್ನು ಸಾಕಿಸಲುಹಿದರು. ಬೌದ್ಧಿಕಮಟ್ಟವನ್ನು ಬೆಳಿಸಿಕೊಳ್ಳವದರಲ್ಲಿ ನಿರಂತರ ಶ್ರಮವಹಿಸಿದರು. ಎಷ್ಟೇ ಶ್ರಮಪಟ್ಟರೂ ಎಂದಿಗೂ ಶ್ರಾಂತರಾಗಲಿಲ್ಲ. ಸೋಲಲಿಲ್ಲ.  ಮಾರ್ಗದರ್ಶಿ ಗುರುವನ್ನು ಸಂಪಾದಿಸಿದರು. ಗುರುಸೇವೆ, ಅವರ ಅನುಗ್ರಹದಿಂದಲೇ ಸಾರಸ್ವತಲೋಕದಲ್ಲಿ ಅತಿಶ್ರೀಮಂತಿಕೆಯನ್ನು ಸಂಪಾದಿಸಿಕೊಂಡರು. ವೈಭವದ ಜೀವನ ನಡೆಸಿದರು. ನಡೆದು ನಡೆಸುವ ದೇವರನ್ನು ಎಂದಿಗೂ ಕಡೆಗಾಣಲಿಲ್ಲ. ಆ ದೇವರು ಎ