*ಹೀಗಾಗಲೇಬೇಕು, ಇದು ಅತ್ಯಾವಶ್ಯಕ....*

*ಹೀಗಾಗಲೇಬೇಕು, ಇದು ಅತ್ಯಾವಶ್ಯಕ....*

ಇಲ್ಲಿಯವರೆಗೆ ಸಾಕಷ್ಟು ಕತ್ತಲೆಯಲ್ಲಿ ಇದ್ದದ್ದು ಆಯಿತು. ಮುಚ್ಚಿಕೊಂಡು ಇದ್ದಿದ್ದೂ ಆಯಿತು. ಯಾವುದೇ ತರಹದ ದುರ್ಘಟನೆ ಆಗದಿರಲಿ ಎಂಬಂತೆಯೋ ಏನೋ ಇಲ್ಲಿಯ ವರೆಗೆ ನಾನು ಮುಚ್ಚಿಕೊಂಡಿಯೇ ಇದ್ದೆ. ಆಂರತರ್ಯದ ಮಮರ್ಸ್ಥಾನವನ್ನು ತೆರದಿಟ್ಟರೆ ಯಾರಾದರೂ ಅದನ್ನು ಹಾಳು ಮಾಡಬಹುದೆಂದು, ಏನಾದರೂ ಕೆಟ್ಟದ್ದು ಒ್ರವೇಶಿಸದಿರಲೀ ಎಂದು ನನ್ನ ಹೃದಯವನ್ನು ಮುಚ್ಚಿಟ್ಟಿದ್ದೆ. ಎಲ್ಲ ತರಹದಲ್ಲಿಯೂ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ನನ್ನನ್ನು ಒಳಗಿರಿಸಿದ್ದೆ. "ಅನಿಸುತ್ತುದೆ ಇದೇ ನನ್ನ ದೊಡ್ಡ ತಪ್ಪು ಎಂದು......" ಕಾಲ ಮಿಂಚಿಲ್ಲ...

ಏಕಾಕಿಯಾಗಿ ಇದ್ದೆ. ಒಬ್ಬನೇ ತುಂಬ ದಿನ, ತುಂಬ ಖುಶಿಯಿಂದಿರಲು ಸಾಧ್ಯವಿಲ್ಲ. ಎನ್ನೊಡನೆ ನೀನು ಬಾ.

ಹೇ ಭಗವನ್....!!!!!! ನೀನು ಎನ್ನ ಅಂತರ್ಗೃಹಕ್ಕೆ ಬಂದು ಬಿಡು. ನಾನು ನಿನ್ನ ಮಂದಿರನಾಗುವೆ. ನಾನು ನಿನ್ನ ಸೇವಕನಾಗಿರುವೆ.  ನಾನು ನಿನ್ನ ದಾಸನಾಗುವೆ. "ನೀನು ಕುಣಿಸಿದಂತೆ ನಾನು ಕುಣಿವೆ."

ನಾನು ಯಾವಾಗ ನಿನ್ನೊಟ್ಟಿಗೆ ರಾಜಿಯಾಗುವೆ, ಆಗ ನೀನೂ ಸಹ ಕೊಡಲು ಉತ್ಸುಕನಾಗುತ್ತೆ. ಎಲ್ಲಿಯವರೆಗೆ ನಾನು ಮುದಡಿ ಕೂತಿರುವೆ, ಅಲ್ಲಿಯ ವರೆಗೆ ಕೊಡುಗೈವೀರರಂತೆ ಇರುವ ನಿನ್ನ ಕೈಗಳೂ ಕೊಡಲು ಮುಂದು ಬಾರದು.

ಕೊಡುವ ಕೈ ಕೊಡಲು ಹಾತೊರೆಯುತ್ತೆ, ಆದರೆ ತೆಗೆದುಕೊಳ್ಳುವವ ನಾನು ಮುದುಡಿ ಹೋಗಿದ್ದೇನೆ. ಕೊಡುವ ಮಾರ್ಗವಿಲ್ಲವಷ್ಟೇ. ನಾನು ನನ್ನ ಹೃದಯದ ಬಾಗಿಲು ತೆರದಿದ್ದೇನೆ. ಹೃದಯವನ್ನು ವಿಕಾಸಮಾಡಿದ್ದೇನೆ. *ಏನನ್ನೇ ಯಾರಿಂದಲೇ ಪಡೆಯಲು ಎನ್ನ ಹೃದಯ ವಿಕಾಸ ಆಗಲೇಬೇಕು. ಇದು ಅತ್ಯಾವಶ್ಯಕವೂ ಸಹ.*  ಹೃದಯವೈಶಾಲ್ಯವನ್ನು ಪಡೆಯುವೆ.

ತೆರೆದ ಹೃದಯ ಕಲಿಕೆಗೆ ಯೋಗ್ಯ. ಕಲಿಕೆಯನ್ನು ಕೊಡುವವರೇ ಗುರುಗಳು. ಗುರುಗಳಲ್ಲಿ ಯಾರು ಪರಮ ಆತ್ಮನನ್ನು ಕಂಡರೋ, ಅವರ ಹೃದಯ ವಿಶಾಲವಾಗಿದೆ, ತೆರದಿದೇ ಎಂದರ್ಥ. "ಕಲ್ಲಿನ ಮೂರ್ತಿಯಲ್ಲಿ ಪರಮಾತ್ಮನ್ನು ಕಾಣಬಹುದು, ಆದರೆ ಗುರುಗಳಲ್ಲಿ ಕಾಣುವದು ತುಂಬ ಕಷ್ಟ" ಗುರುಗಳಲ್ಲಿ ಪರಮಾತ್ನನನ್ನು ಕಾಣುವ ಬಯಕೆ ಇದ್ದರೆ ಹೃದಯ ವಿಶಾಲವಾಗಿರಲೇಬೇಕು.

*ಕೋಡುವವ ದೇವರು, ಪಡೆಯುವವ ನಾನು, ಮಧ್ಯೆ ಗುರು ಏನಕ್ಕೆ....*

"ಅಪ್ಯಚ್ಯುತೋ ಗುರುದ್ವಾರಾ ಪ್ರಸಾದಕೃತ್" ದೇವರದೊಂದು ನಿಯಮ. ನಾನು ಸರ್ವಸಮರ್ಥ. ಅಂತೆಯೇ ತಿನಿಸು ಉಣಿಸು ಮನೆ ಮಠ ಹಣ ಹೊನ್ನು ನಾನೇ ಕೊಡುತ್ತೇನೆ. ಆದರೆ ವಿಶೇಷವಾಗಿ  ಕೊಡುವದು ಎಂದೇನಿದೆ ಅದು ಗುದ್ವಾರಾನೆ ಕೋಡುತ್ತೇನೆ.

ಹೃದಯ ವಿಶಾಲವಾಗಿ ತೆರೆದು ಕೊಳ್ಳಲೇಬೇಕು. ಗುರುಗಳಲ್ಲಿ ಪರಮಾತ್ನನನ್ನು ಕಾಣಲೇಬೇಕು. ಇದು ಅತ್ಯಂತ ಆವಶ್ಯಕ. ಈ ಮಹತ್ಕಾರ್ಯಕ್ಕೆ ಕೋಟಿ ಕೋಟಿ ವಿಘ್ನಗಳೂ ಸಹಜ. ಆ ಎಲ್ಲ ವಿಘ್ನಗಳ ಪರಿಹಾರಕ್ಕೆ ನಾಡದ್ದು ಗಣಪತಿಯ ವಿಶೇಷ ಸೇವೆಯನ್ನು ಮಾಡಿ ಅನುಗ್ರಹ ಪಡೆಯೋಣ....

*✍🏽✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*