*ಮಧ್ವ ಜಯಂತಿ*

*ಮಧ್ವ ಜಯಂತಿ*

ಅನಾದಿಯಿಂದ ಶುದ್ಧಪರಂಪಾರ ಪ್ರಾಪ್ತವಾದ, ನಿತ್ಯಸಿದ್ಧವಾದ, ಮೋಕ್ಷಾದಿ ಪುಷಾರ್ಥಗಳನ್ನು ಕೊಡುವ, ಜೀವ ಪರಮಾತ್ಮರಿಗೆ ಭೇದ ಪ್ರತಿಪಾದಿಸಿವ ಮುಖಾಂತರ ಈಶನೊಬ್ವನೇ ಸರ್ವೋತ್ತಮ, ಆ ಈಶ ಅನಂತಾನಂತ ಗುಣಪೂರ್ಣ, ಸರ್ವಥಾ ಪಾರತಂತ್ರ್ಯಾದಿ ದೋಷ ವಿದೂರ, ಉಳಿದ ಅನಂತ ಜೀವರಾಶಿಗಳೂ ಪರತಂತ್ರರು, ಈ ಎಲ್ಲ ಜೀವರಲ್ಲಿಯೂ ತಾರತಮ್ಯವಿದೆ, ಇತ್ಯಾದಿ ಶ್ರೀಮದ್ವೈಷ್ಣವ ಸತ್ಸಿದ್ಧಾಂತವನ್ನು ಅತ್ಯಂತ ಪ್ರಾಮಾಣ ಹಾಗೂ ಯುಕ್ತಿಗಳಿಂದ  ಪ್ರತಿಪಾದಿಸಿರುವ, ಅಂತೆಯೇ  ನಮ್ಮ ಆದಿ ಗುರುಗಳಾದ *ಶ್ರೀಮಧ್ವಾಚಾರ್ಯರ ಜಯಂತೀ ಮಹೋತ್ಸವ* ಇಂದು.

ಶ್ರೀಮದಾಚಾರ್ಯರ ಸರ್ವಮೂಲ ಶಾಸ್ತ್ರಗಳನ್ನು ಓದುತ್ತಾ ಸಾಗಿದ ಹಾಗೆ ಅವರ ಉಪಕಾರ ಕ್ಷಣಕ್ಷಣಕ್ಕೂ ಹೆಮ್ಮರವಾಗಿ ಬೆಳಿಯುತ್ತಾ ಸಾಗುತ್ತದೆ.  ಬ್ರಹ್ಮಸೂತ್ರಗಳಿಗೆ ನಾಲಕು ವ್ಯಾಖ್ಯಾನ ಗ್ರಂಥಗಳು, ಉಪನಿಷತ್ತುಗಳಿಗೆ ಹತ್ತು ವ್ಯಾಖ್ಯಾನ ಗ್ರಂಥಗಳು, ಮಹಾಭಾರತಕ್ಕೆ ಒಂದು, ಗೀತೆಗೆ ಎರಡು, ಋಗ್ವೇದಕ್ಕೆ ಒಂದು,  ಭಾಗವತಕ್ಕೆ ಒಂದು, ತಂತ್ರಸಾರಕ್ಕೆ ಒಂದು, ಹತ್ತು ಪ್ರಮೇಯ ಗ್ರಂಥಗಳು ಇತ್ತ್ಯಾದಿಯಾದ  ಸರ್ವಮೂಲ ಗ್ರಂಥಗಳು  *ದೇವಾದೀನಾಮಗಮ್ಯಂ* ದೇವತೆಗಳಿಗೂ ಸಾಕಲ್ಯೇನ ತಿಳಿಯಲು ಅಸಾಧ್ಯ ಎಂದೇ ತಿಳಿಸುತ್ತಾರೆ ಅಂರಹ ಅತ್ಯದ್ಭುತ ಸಿದ್ಧಾಂತ ಸ್ಥಾಪನೆ ಶ್ರೀಮದಾಚಾರ್ಯರದ್ದು.

ದೇವತೆಗಳಿಗೆ ಓದಲು ತಿಳಿಯಲು ಅಸಾಧ್ಯ ಎಂದರೆ ನಾವು ಅಧ್ಯಯನ ಮಾಡುವದೇ ಬೇಡವೇ... ??

*ಬಾಲಸಂಘಮಪಿ ಬೋಧಯದ್ದೃಶಮ್* ಬಾಲ ಬುದ್ಧಿ ಇರುವ,ಅತ್ಯಲ್ಪಭಾಗ್ಯವಂತೆಅದ ನಮಗೂ ಅತ್ಯಂತ ಸುಲಭರೀತಿಯಿಂದ ತಿಳಿಯುವ, ಮಹಾಜ್ಙಾನಿಗಳಾದ ದೇವತೆಗಳಿಗೂ ತಿಳಿಯಲು ಅಸಾಧ್ಯವಾದ ಸರ್ವಮೂಲ ಗ್ರಂಥಗಳು. ನಮಗೆ ನಮ್ಮ ಯೋಗ್ಯತಾನುಸಾರ ಅವಸ್ಯವಾಗಿ ತಿಳಿದೇ ತೀರುತ್ತದೆ, ಹಾಗಾಗಿ ಅವಶ್ಯವಾಗಿ ಅಧ್ಯಯನ ಮಾಡಲೇಬೇಕು. ಮುಕ್ತಿ ಅಇಗಬೇಕಾದರೆ ಆಚಾರ್ಯರಗ್ರಂಥಗಳ ಸಾಕ್ಷಾತ್ಕಾರ ಅನಿವಾರ್ಯ.

ಮೋಕ್ಷಕ್ಕಾಗಿ ಅಧ್ಯಯನ, ಅಧ್ಯಯನಕ್ಕಾಗಿ ಶ್ರೀಶ್ರೀಮದಾಚಾರ್ಯರ ಆರಾಧನೆ, ಆರಾಧನೆ ಮಾಡುವ ಮಹಾ ಸುದಿನ ಎಂದು ನಮಗೆ ದೊರೆತು ಬಂದಿದೆ.

ಆಪತ್ತಿಗೆ ಇರುತ್ತಾರೆ ಎಂಬ ಭರವಸೆಯಲ್ಲಿಯೇ, ಅತ್ಯಂತ ಆತ್ಮೀಯರೆಂದು ಭಾವಿಸಿ, ಹಿತೈಷಿಗಳೆಂದು ತಿಳಿದು  ಸಂಸಾರದಲ್ಲೇ ಇಡುವ ಮಕ್ಕಳ, ಬಂಧುಗಳ, ಗೆಳೆಯ, ಗೆಳತಿಯರುಗಳ, ತಂದೆ ತಾಯಿಗಳ ಹುಟ್ಟು ಹಬ್ಬವನ್ನು  ಅತ್ಯಂತ ವಿಜೃಂಭಣೆಯಿಂದ ಸಾವಿರ ಸಾವಿ ಖರ್ಚುಮಾಡಿ ಮಾಡುತ್ತೇವೆ...

ನಮ್ಮ ಸಕಲವನ್ನೂ ತನ್ನ ಅಧೀನದಲ್ಲಿಟ್ಟುಕೊಂಡವ ಶ್ರೀಹರಿ‌. ಆ ಶ್ರೀಹರಿಯ ಸನ್ನಿಸದಿಯಲ್ಲಿ  *ದೀನನಾದ, ದೂನನಾದ, ಅನಾಥನಾದ, ಶರಣುಬಂದ , ಈ ಜೀವನನ್ನು ಉದ್ಧರಿಸು ಉದ್ಧರಿಸು  ಎಂದು ಅತ್ಯ.ಮತ ಭಕ್ತಿಯಿಂದ ನಿರಂತರ ಪ್ರಾರ್ಥಿಸುವವರು* ಶ್ರೀಮದಾಚಾರ್ಯರು.

ಜ್ಙಾನಕೊಟ್ಟು, ಭಕ್ತಿ ಬೆಳಿಸಿ, ಸಂಸಾರದಿಂದ ಬೇರ್ಪಡಿಸಿ, ಲಿಂಗಭಂಗಗೊಳಿಸುವ ಮುಖಾಂತರ  ಮೋಕ್ಷಕೊಡುವ ಜೀವೋತ್ತಮರಾದ, ಸರ್ವಥಾ ದೋಷರಹಿತರಾದ, ಅನಂತ ಗುಣ ಪೂರ್ಣರಾದ,ಅನಂತ ವೇದಪ್ರತಿಪಾದ್ಯರಾದ, ನಮ್ಮ ಶ್ವಾಸೋಚ್ಛ್ವಾಸ ಪ್ರವರ್ತಕಾರಾದ *ಶ್ರೀಮದಾಚಾರ್ಯರ ಹುಟ್ಟು ಹಬ್ಬವನ್ನು ಎಷ್ಟು ವಿಜೃಂಭಣೆಯಿಂದ* ನೆರವೇರಿಸಬೇಕು ಎಂದು ಯೋಚನೆ ಮಾಡುವದು ಇಂದಿನ ಸ್ಥಿತಿಗೆ ಅನಿವಾರ್ಯವಾಗಿದೆ.

ಕನಿಷ್ಠ ಇಂದು ಒಂದೇ ಗಂಟೇಯಾದರೂ ಎಲ್ಲ ಪುರುಷರೂ *ಬಳಿತ್ಥಾ ಸೂಕ್ತ, ಸುಂದರಕಾಂಡ, ವಾಯುಸ್ತುತಿ, ಸುಮಧ್ವವಿಜಯ* ಮಂತ್ರಸದೃಶವಾದ  ಈ ಗ್ರಂಥಗಳನ್ನು ಪಾರಾಯಣ ಮಾಡೋಣ.  ಸ್ತ್ರೀಯರೆಲ್ಲರೂ *ಮಧ್ವನಾಮ, ಸುಳಾದಿಗಳು, ಹಾಡುಗಳು* ಮುಂತಾದವುಗಳನ್ನು ಅವಶ್ಯವಾಗಿ ಪಾರಾಯಣ ಮಾಡಲೇಬೇಕು ಎಂದು ಆಗ್ರಹ.

ಎಲ್ಲರೂ ಸೇರಿ ಪ್ರದಕ್ಷಿಣೆ, ನಮಸ್ಕಾರ, ಮಹಿಮಾ ಶ್ರವಣ, ಅಮೋಘ ಮಾಹಾತ್ಮ್ಯಗಳ ಕೇಳುವದು, ಅಭಿಷೇಕ, ಮುಂತಾದವುಗಳನ್ನು ಮಾಡಿ ಆ ಮಧ್ವಾಚಾರ್ಯರ ಮಹಾ ಅನುಗ್ರಹಕ್ಕೆ ಪಾತ್ರರಾಗೋಣ....

*ಮಧ್ವ ನವರಾತ್ರೋತ್ಸವ ಹಾಗೂ ಮಧ್ವಜಯಂತೀ ದಿನದ ಹೃತ್ಪೂರ್ವಕ ಶುಭ ಹಾರೈಕೆಗಳೊಂದಿಗೆ* ತಮ್ಮ ಪ್ರೀತ್ಯಾಸ್ಪದ.....

*ನ್ಯಾಸ.......*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*