*ಭಯ ಬಾಗಿಲು ಬಡಿದಾಗ, ಶ್ರದ್ಧೆ ಬಾಗಿಲು ತೆಗೆಯಬೇಕು.....*
*ಭಯ ಬಾಗಿಲು ಬಡಿದಾಗ, ಶ್ರದ್ಧೆ ಬಾಗಿಲು ತೆಗೆಯಬೇಕು.....*
"ಭಯ" ವೆಂಬುವದು ಮನಸ್ಸಿನ ಒಂದು ವಿಕಾರ. ಈ ಭಯ ಎಲ್ಲರಲ್ಲಿಯೂ ಇರುವದೇ. "ಆತ್ಮರಕ್ಷೆಣೆಗೆ ಭಯ ಅತ್ಯವಶ್ಯಕ." "ಮುಂದಾಲೋಚನೆಗಳನ್ನು ಚುರುಕುಗೊಳಿಸುವದೂ ಭಯವೇ." ಈ ಎರೆಡು ಕಾರ್ಯಗಳಗೆ ಬೇಕಾದ ಭಯ ಎಲ್ಲರಿಗೂ ಅನಿವಾರ್ಯ. ನಮ್ಮಲ್ಲಿ ಇರಲೇ ಬೇಕಾದ ಭಯ. ಈ ಭಯವಿಲ್ಲದಿದ್ದರೆ ಜೀವನ ತುಂಬ ಕಷ್ಟ.
ಇದರೊಟ್ಟಿಗೆ ಮತ್ತೊಂದು ಭಯವಿದೆ, ಅದು ಮನುಷ್ಯನನ್ನು ಅಧೀರನನ್ನಾಗಿ ಮಾಡುತ್ತದೆ. ಮನುಷ್ಯನ ಪ್ರಗತಿಯನ್ನೇ ಕುಂಠಿಸಿಬಿಡುತ್ತದೆ. ದುರ್ಬಲನನ್ನಾಗಿ ಮಾಡಿಬಿಡುತ್ತದೆ. ಹೇಡಿಯಾಗಿಸಿಬಿಡುತ್ತದೆ. ಈ ಭಯ ಹೊಗಲಾಡಿಸಲೇ ಬೇಕು.
ನಿದ್ರಿಸುವಾಗ ಮನುಷ್ಯನ ರಕ್ತ ಹೀರುವ ಒಂದು ಪಿಶಾಚಿ ಇದೆ ಎಂದು ಆಂಗ್ಲರು ನಂಬುತ್ತಾರೆ, ಹಾಗೆ ಹೇಳುತ್ತಾರೆ. ಅದಕ್ಕೆ "ವಾಂಪಾಯರ್" ಎಂದೂ ಕರೆಯುತ್ತಾರೆ. ಆ ಪಿಶಾಚಿ ಮಲಗಿದಾಗ ರಕ್ತ ಹೀರತ್ತೋ ಇಲ್ಲೋ ಗೊತ್ತಿಲ್ಲ, ಭಯವೆಂಬ ಕಲ್ಪನೆಯ ಭೂತ ಎದ್ದಾಗ, ಕುಳಿತಾಗ, ಮಲಗಿದಾಗ ಸ್ವಪ್ನ ಕಾಣುವಾಗ ಎಲ್ಲ ಕಾಲದಲ್ಲಿಯೂ ರಕ್ತ ಹೀರಿ ಮನುಷ್ಯನನ್ನು ದುರ್ಬಲನ್ನನ್ನಾಗಿಸುತ್ತದೆ. ಇದು ಕೇವಲ ಒಂದು ಉದಾಹರಣೆ ಮಾತ್ರ. ಇಂತರ ನೂರು ಭಯಗಳು ನಮ್ಮಲ್ಲಿ ಇವೆ. ನಾವು ಅನುಭವಿಸುತ್ತಾ ಇದ್ದೇವೆ.
ಲಕ್ಷ ಲಕ್ಷ ಜನ ಮೋಬೈಕು ಉಪಯೋಗಿಸುತ್ತಾರೆ. ಆದರೆ ನನಗೇ ಮೋಬೈಕು ಎಂದರೆ ಭಯ. "ಯಾಕೇ ಅಷ್ಟು ಭಯ" ಎಂದರೆ ನನಗೆ ಗೊತ್ತಿಲ್ಲ. ಆ ಭಯ ಇರುವದರಿಂದಲೇ ನಾನು ನೂರುಬಾರಿ ಇನ್ನೊಬ್ಬರನ್ನು ಅವಲಂಬಿಸುವ ಪ್ರಸಂಗ ಬರುತರತದೆ. ನನ್ನ ಕಾರ್ಯದಲ್ಲಿ ಅನೇಕಬಾರಿ ಸೋತೂ ಹೋಗುತ್ತೇನೆ.
ಕೆಲವರಿಗೆ ನೀರು ಎಂದರೆ ಭಯ. ಯಾಕೆ ಭಯ ಗೊತ್ತಿಲ್ಲ. ಅನಾವಶ್ಯಕ ಭಯದಲ್ಲಿ ಸಿಕ್ಕು ಬಿದ್ದಕಾರಣವೋ ಏನೋ ತಿಳಿಯದು. ಸಾವಿರ ಸಾವಿರ ಹಣ ಖರ್ಚು ಮಾಡಿ, ಗಂಗೆಗೆ ಹೋಗಿ, ಆ ಗಂಗೆಯಲ್ಲಿ ಮೀಯದೇ ಬಂದದ್ದೇ ಹೆಚ್ಚಾಗಿರುತ್ತೆ... ಹೀಗೆ ಅನವಶ್ಯಕ, ನಮ್ಮನ್ನು ಕುಗ್ಗಿಸುವ, ಮುಂದೋಡದಂತೆ ಮಾಡುವ ಭಯಗಳು ನೂರಾರು ಅಂದರೆ ತಪ್ಪಾದೀರು ಸಾವಿರ ಸಾವಿರ ಇವೆ...
*ಈ ತರಹದ ಭಯಗಳನ್ನು ಓಡಿಸುವದು ಹೇಗೆ.... ???*
ಭಯ ಬಂದು ಬಾಗಿಲು ಬಡಿತು, ಶ್ರದ್ಧೆ ಬಂದು ಬಾಗಿಲು ತೆರೆದು "ಯಾರಲ್ಲಿ...?" ಎಂದು ಕೇಳಿತು. ಆದರೆ ಅಲ್ಲಿ ಯಾರೂ ಇರಲಿಲ್ಲ. ಶ್ರದ್ಧೆಯ ಸದ್ದನ್ನು ಕೇಳಿ ಭಯ ಪಲಾಯನ ಮಾಡಿತ್ತು. ಇಷ್ಟೇ ಸ್ಪಷ್ಟ ಉತ್ತರ.
ಆತ್ಮ ಶ್ರದ್ಧೆ, ಗುರು ದೇವತಾ ದೇವರುಗಳ್ಲಿಯ ಶ್ರದ್ಧೆ - ಇವುಗಳೇ ಯಶಸ್ಸು, ವಿಜಯಗಳ ಕೀಲಿಕೈ.......
*ಶ್ರದ್ಧೆ ಹೇಗೆ ಭಯವನ್ನು ಓಡಿಸುತ್ತದೆ....?*
ಒಂದು ದಪ್ಪನೆ ಕೋಲು ಇದೆ. ಅದನ್ನು ನೆಲದಲ್ಲಿ ಮಲಗಿಸಿ ಇಟ್ಟಿದ್ದೇನೆ. ಅದರ ಮೆಲೆ ನಡಿದು ತೋರಿಸು ಎಂದರೆ, ಸರಸರನೆ ನಡೆದ ಒಬ್ಬ ಯುವಕ. ಅದೇ ಕೋಲನ್ನು ಸ್ವಲ್ಪ ಎತ್ತರದ ಮೇಲಿಟ್ಟಿದ್ದೇನೆ ಅದರ ಮೇಲೆ ನಡೆ, ನಿನಗೆ ಬಹುಮಾನವಿದೆ ಎಂದರೆ .... ನಡೆಯಲು ಒಂದು ಕಾಲಿಟ್ಟ. ಭಯ ಆವರಿಸಿತು. ಆ ಭಯದಿಂದ ತತ್ತರಿಸಿ ಹೋದ. ಕೈ ಕಾಲುಗಳು ಅದುರಿ ಹೋದವು. ಬಟ್ಟೆ ಒದ್ದೆಯೇ ಆಯಿತು.....
ಆದರೆ ಆ ಯುವಕನಿಗೆ ಕ್ರಮಾವಾಗಿ ಶಿಕ್ಷಣ ಕೊಟ್ಟಾಗ, ಶ್ರದ್ಧೆಯ ಹುಮ್ಮಸ್ಸನ್ನು ಬೆಳಿಸಿದಾಗ, ಸರಸರನೆ ಆ ಕಡೆಯಿಂದ ಈ ಕಡೆ ನಡೆದು ಪ್ರಶಸ್ತಿಯನ್ನೇ ತನ್ನದಾಗಿಸಿಕೊಂಡ. ಇದೇ ಶ್ರದ್ಧೆಯ ಮಹಿಮೆ.
*ಶದ್ಧಾವಾನ್ ಲಭತೆ...* ಶ್ರದ್ಧೆ ಇರುವವ ಅನವಶ್ಯಕವಾಗಿ ಇರುವ ಭಯಗಳನ್ನು ಓಡಿಸಿ, ಅಸಾಧ್ಯವಾದದ್ದೆಲ್ಲವನ್ನೂ ಮುಡುಪೇರಿಸಿಕೊಳ್ಳುವನಾಗುತ್ತಾನೆ.
ಆದ್ದರಿಂದ ಮೊದಲ ಕೆಲಸ, ಗುರುಗಳಲ್ಲಿ, ದೇವತೆಗಳಲ್ಲಿ, ಶಾಸ್ತ್ರದಲ್ಲಿ, ಧರ್ಮ ಕರ್ಮಗಳಲ್ಲಿ, ಸ್ವಯಂ ದೇವರಲ್ಲಿ ಶ್ರದ್ದೆಯನ್ನು ಕ್ರಮವಾಗಿ ಸಿಕ್ಷಣೆಯ ಮುತರ ಬೆಳಿಸಿ ಕೊಳ್ಳೋಣ.
ಕೂತರೆ ಭಯ, ನಿಂತರೆ ಭಯ. ಮಲಗಿದರೆ ಭಯ ಎದ್ದರೆ ಭಯ. ಧರ್ಮ ಮಾಡಿದರೆ ಭಯ, ಬಿಟ್ಟರೆ ಭಯ. ಮಾತಾಡಿದರೆ ಬಯ, ಮಾತು ಬಿಟ್ಟರೆ ಬವಯ. ಉಂಡರೆ ಭಯ, ಉಪವಾಸ ಇದ್ದರೆ ಭಯ. ದೇವರು ಎಂದರೆ ಭಯ, ದೆವ್ವ ಎಂದರೆ ಭಯ ಹೀಗೆ ಯಾವುದೇ ಭಯ ಬಂದು ಆವರಿಸಿದಾಗ ಭಯಗ್ರಸ್ತನಾಗಿ ಕೂಡದೆ, ಅದರ ಎದುರುಗೆ ಶ್ರದ್ಧೆಯನ್ನು ಬಿಡೋಣ. *ಶ್ರದ್ಧೆ ಇರುವಲ್ಲಿ ಭಯವಿಲ್ಲ, ನಿರ್ಭೀತ ಮನುಷ್ಯನಲ್ಲಿ ಸೋಲೇ ಇಲ್ಲ* ಏನಂತೀರಾ.... 😅
*✍🏽✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments