*ದೊಡ್ಡದು ಒಂದನ್ನೇ ನೋಡಿ, ಇವನು ಹೀಗೆಯೇ ಎಂದು ಗುರುತಿಸುವದು ಸರಿಯೇ....???*

*ದೊಡ್ಡದು ಒಂದನ್ನೇ ನೋಡಿ, ಇವನು ಹೀಗೆಯೇ ಎಂದು ಗುರುತಿಸುವದು ಸರಿಯೇ....???*

ಕೇವಲ ಗುಣವಂತ ದೇವರೊಬ್ಬ.  ಕೇವಲ ದೋಷಪೂರಿತ ಕಲಿ ಮಾತ್ರ.  ಉಳಿದವರಲ್ಲಿ ಗುಣ ದೋಷಗಳು ಕೂಡಿ ಇವೆ. ಲಕ್ಷ್ಮೀ ವಾಯುದೇವರುಗಳಲ್ಲಿಯ ದೋಷಗಳು, ಅವರಿಗೆ ಗುಣವಂತಿಕೆಯನ್ನೇ ತಂದುಕೊಟ್ಟಿರುತ್ತವೆ.. ಹಾಗೆಯೇ ಕಾಲನೇಮಿ ವಿಪ್ರಚಿತ್ತಿ ಮೊದಲಾದವರುಗಳಲ್ಲಿಯ ಗುಣಗಳು ಅವರಿಗೆ ದೋಷವನ್ನೇ ತಂದುಕೊಟ್ಟಿರುತ್ತವೆ...

ಅಂತೂ ಸಂಸಾರಿ ಸಕಲ ಜೀವರಾಶಿಗಳಲ್ಲಿ ಗುಣಗಳೂ ಇವೆ. ಅದೇರೀತಿ ದೋಷಗಳೂ ಇವೆ. ಈ ಗುಣ ದೋಷಗಳಲ್ಲಿ ಯಾವುದೋ ಒಂದು ದೊಡ್ಡ ಗುಣವನ್ನೋ ಅಥವಾ ದೋಷವನ್ನೋ ಗುರುತಿಸಿ *ಅವನು ಹೀಗೆ* ಎಂದು ಗುರುತಿಸುವದೇನಿದೆ ಇದು ಸರಿಯೆ..?? ಶುದ್ಧ ತಪ್ಪು ಎಂದೇ ಉತ್ತರ ಹೇಳಬಹುದು.

ನನಗೆ ಒಬ್ಬರು ಎರಡು ಪ್ರಶ್ನೆಗಳನ್ನು  ಕೇಳಿದರು.

ಕುಡಿಯುವದು, ಜೂಜಾಡುವದು, ಸೇದುವದು ತಪ್ಪು ಹೌದೋ ಅಲ್ಲವೋ ಎಂದು. ಅವರು ದೋಷಿಗಳು ತಾನೆ.. ತಪ್ಪು ಹಾಗೂ ಅವರು ದೋಷಿಗಳೆ ಎಂದು ಉತ್ತರಿಸಿದೆ.

 ಪ್ರ..) "ಧರ್ಮರಾಜ ಜೂಜಾಡಿದ" ಹಾಗಾಗಿ ಧರ್ಮರಾಜ ಜೂಜುಗಾರ. ಅವನನ್ನು  *ಗುಣವಂತ* ಎಂದು  ಏಕೆ ಗುರುತಿಸುವದು..?? ಎಂದು.
ಪ್ರ..೨) ಯಾಗ ಜಪ ಇವುಗಳು ಇವು ಗುಣವೇ ತಾನೆ... ?? ಹೌದು. ಹಾಗಾದರೆ ದುರ್ಯೋಧನ ಎಂದೂ ತಪ್ಪಿಸದೆ, ಒಂದು ಮಂತ್ರವನ್ನೂ ಯಾತಯಾಮ ಮಾಡದೆ ಸಾವಿರ ಸಾವಿರ ಮಂತ್ರಗಳನ್ನು ಜಪಿಸಿದ. ಅನ್ನದಾನ ಮಾಡಿದ. ಬ್ರಾಹ್ಮಣರ ಸತ್ಕಾರ ಮಾಡಿದ. ಅನೇಕ ಉತ್ಕೃಷ್ಟಯಾಗಗಳನ್ನೂ ಮಾಡಿದ ಹೀಗಿರುವಾಗ ದುರ್ಯೋಧನ ದುಷ್ಟನ್ಯಾಕೆ...??? ಹೀಗೆ ಎರಡು ಪ್ರಶ್ನೆಗಳನ್ನು ಕೇಳಿದರು.

ಅದಕ್ಕೆ ನನ್ನ ಉತ್ತರ .... ಗುಣವನ್ನೋ ದೋಷವನ್ನೋ ಏನೋ ಒಂದು ಕಾರಣಕ್ಕಾಗಿ, ಅನಿವಾರ್ಯವಾಗಿ ಮಾಡುವ ಪ್ರಸಂಗ ಬಂದಾಗ ಆ ದೊಡ್ಡ ಗುಣವನ್ನೋ ದೋಷವನ್ನೋ ನೋಡಿ ಇವನು ಗುಣವಂತ, ಇವನು ದೋಷಿ ಎಂದು ಗುರುತಿಸುವದೇನಿದೆ ಇದು ಮಹಾ ತಪ್ಪು ಎಂದು. ಹಾಗದರೆ... *ದೊಡ್ಡದಾದ ಒಂದು ಗುಣ ಹಾಗೂ ಒಂದು ದೋಷಗಳ ಜೊತೆಗೆ ಸಣ್ಣ ಪುಟ್ಟ ಗುಣ-ದೊಷಗಳನ್ನು ಗುರುತಿಸಿ, ಇವನು ಗುಣವಂತನೋ ದೋಷಿಯೋ ಎಂದು ಗುರುತಿಸುವದೇನಿದೆ ಇದು ಶಾಸ್ತ್ರಸಮ್ಮತ ಹಾಗೂ ಅತ್ಯಂತ ಸೂಕ್ತ* ಎಂದು.

ದುರ್ಯೋಧನ ಮಾಡಿದ ಜಪ, ಯಜ್ಙ, ಯಾಗ ದೊಡ್ಡಗುಣಗಳೆ ಆದರೆ ಅವನಲ್ಲಿ ಸಣ್ಣಪುಟ್ಟ ಮೊದಲು ಮಾಡಿ ಮಹಾಮಹಾನ್ ಆಗಿರುವವು ದೋಷಗಳೆ ಇವೆ. ಪಾಂಡವರು ಊರಿಗ ಬಂದ ಕ್ಷಣದಿಂದ ಅವರ ಬಗ್ಗೆ ತೋರಿದ ಅನಾಸಕ್ತಿ, ಅನಾದರ, ಅವಮಾನ, ವಿಷಕೊಡುವದು, ಹಾವಿನಿಂದ ಕಚ್ಚಿಸುವದು, ಅಗ್ನಿಯಲ್ಲಿ ಸುಟ್ಟು ಹಾಕುವ ಪ್ರಯತ್ನ, ಮೋಸ, ರಾಜ್ಯ ಕಸೆದುಕೊಳ್ಳುವ ಯತ್ನ, ದ್ರೌಪದಿಯ ಮಾನಭಂಗ, ಕೃಷ್ಣನಕಟ್ಟಿ ಹಾಕಯವ ವಿಚಾರ, ಅಭಿಮನ್ಯುವಿನ ಸಂಹಾರ ಹೀಗೆ ಒಂದೊಂದು ಸಣ್ಣದು ದೊಡ್ಡದನ್ನು ಮೆಲಕು ಹಾಕಿದಾಗ ಅವನಲ್ಲಿ ಕಾಣುವದು ದೋಷಗಳೇ ಹೊರತು, ಗುಣಗಳು ಕಾಣುವದೇ ಇಲ್ಲ. ಇದರಿಂದಲೇ ಗೊತ್ತಾಗುವದು *ದುರ್ಯೋಧನ ದುಷ್ಟ* ಎಂದು.

ಅದೇರೀತಿ ಧರ್ಮರಾಜನನ್ನೂ ವಿಮರ್ಷಿಸಿದಾಗ..... ಜೂಜಾಡುವ ನಿರ್ಧಾರವೇ ತಪ್ಪು. ಜೂಜಾಡಿ ಮಾಹಾ ತಪ್ಪು ಮಾಡಿದ. ಇದರಲ್ಲಿ ಸಂಶಯಬೇ ಇಲ್ಲ. ಆದರೆ ಅವನ ಹುಟ್ಟಿನಿಂದ ವಿಮರ್ಷಿಸುತ್ತಾ ಬಂದರೆ ಧರ್ಮರಾಜನಲ್ಲಿಯ ತಿತಿಕ್ಷಾ, ಸಹನೆ, ದಾನ, ಪರೋಪಕಾರ, ಜ್ಙಾನ, ಧರ್ಮದಲ್ಲಿಯನಿಷ್ಠೆ,  ಭಗವದ್ಭಕ್ತಿ, ತಮ್ಮಂದಿರಲ್ಲಿ ಪ್ರೀತಿ, ಹೆಂಡತಿಯ ಬಗೆ ಇರುವ ಗೌರವ, ಗುರುಗಳ ಹಿರಿಯರ ಮಾತಿಗೆ ಕೊಟ್ಟ ಬೆಲೆ, ರಾಜ್ಯಕಳೆದುಕೊಂಡಾಗಲೂ ಲಕ್ಷ ಲಕ್ಷ ಜನರಿಗೆ ಅನ್ನದಾನ, ಈ ಎಲ್ಲವುಗಳನ್ನು ನೋಡಿದಾಗ ಗೊತ್ತಾಗತ್ತೆ ಧರ್ಮರಾಜ ಗುಣವಂತನೇ ಹೊರತು. ಪಾಪಿಷ್ಠನಲ್ಲ ಎಂದು.

ಅದೇರೀತಿಯಾಗಿ ಇಂದೂ ನಮಗೆ ಪರಿಸ್ಥಿತಿಯ ಅನುಗುಣವಾಗಿ ಕೆಲವೊಮ್ಮೆ ದೊಡ್ಡ ದೊಷವನ್ನೋ, ಅಥವಾ  ಗುಣವನ್ನೋ ರೂಢಿಸಿಕೊಳ್ಳುವಂತಾಗಿರತ್ತೆ. ಅದನ್ನು ಗಮನಿಸಿದ ಯಾರೋ ಬಂದು ಏನನ್ನೋ ಹೇಳಿದ ಮಾತ್ರಕ್ಕೆ ಕಣ್ಣುಮುಚ್ಚಿ  ಅದನ್ನು ಗಮನಿಸಿ *ಇವನು ಗುಣವಂತ - ಇವನು ದುಷ್ಟ* ಎಂದು ಗುರುತಿಸುವದು ಸರ್ವಥಾ ಬೇಡ.  ಅವರವರ ಸಣ್ಣ ಅತಿಸಣ್ಣದರಿಂದ ಆರಂಭಿಸಿ, ದೊಡ್ಡ ದೊಡ್ಡ ಕ್ರಿಯೆಗಳನ್ನು ಕೂಲಂಕುಷವಾಗಿ ಪರುಗಣಿಸಿ "ಹೆಚ್ಚೆಚ್ಚು ದೋಷಗಳೇ ಕಂಡರೆ ಅವನು ದುಷ್ಟ... ಹೆಚ್ಚೆಚ್ಚು ಗುಣಗಳೆ ಕಂಡರೆ ಅವನೊಬ್ಬ ಗುಣವಂತನೆಂದು" ಗುರುತಿಸುವ ಪ್ರಯತ್ನ ನಮ್ಮದಾಗಿಸಿಕೊಳ್ಳೋಣ.....


*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*