*"ನಾನು - ಅಲ್ಲ, ನಾವು"*

*"ನಾನು - ಅಲ್ಲ, ನಾವು"*

"ನಾನು" ಇದು ಅಹಂಕಾರದ ಸಂಕೇತ ಆದರೆ, "ನಾವು" ಇದು ವಿನಯದ ಸಂಕೇತ. ವಿನಯವಂತನಿಗೆ ಇರುವ ಬೆಲೆ ಇನ್ನೆಲ್ಲಿ ಇಲ್ಲ. ವಿದ್ಯಾವಂತನಿಗೂ, ಧನವಂತನಿಗೂ, ಕುಲವಂತನಿಗೂ ಇಲ್ಲ ಬೆಲೆ ವಿನಯವಂತನಿಗೆ ಇದೆ.  ವಿನಯವಂತಿಕೆ ಅರಳುವದೇ "ನಾವು" ಎಂಬ ಭಾವ ಇರುವಲ್ಲಿ.

"ನಾನು" ಎನ್ನುವದರಲ್ಲಿ ಭೋಗವಿದೆ. ಹಾಗಾಗಿ ಲಕ್ಷ್ಯ  target ನಾನೇ. ಸುಖಕ್ಕೆ ನಾನೇ ಭಾಗಿ, ನಿದ್ರೆ ನಾನೇ ಮಾಡಬೇಕು, ಮಾತು ನಾನೇ ಆಡಬೇಕು, ನನ್ನನ್ನು ಕುರಿತೇ ಮಾತಾಡಬೇಕು,  ಕ್ಷಮೆ ನನಗೇ ಕೇಳಬೇಕು, ಒಳಿತು ನನ್ನದೇ ಇದೆ, ಹೀಗೆ ನಾನಾತರಹದ ಭಾವಗಳ ಅಭಿವ್ಯಕ್ತಿಗೊಳಿಸುವದೇ ನಾನು.  *ಇದರಲ್ಲಿ ತಾನು ಏನನ್ನೂ ಪಡೆಯಲಾರ. ಕಳೆದು ಕೊಳ್ಳುವದೇ ಹೆಚ್ಚು.* ಇದು ಎಲ್ಲರ ಅನುಭವದ ಮಾತು. 

"ನಾವು" ಎನ್ನುವದೇನಿದೆ ಇದರಲ್ಲಿ ತ್ಯಾಗವಿದೆ. ಹಾಗಾಗಿ ಲಕ್ಷ್ಯ target ನಮ್ಮವರೆಲ್ಲರೂ. ಮೊದಲು ನಮ್ಮವರದು, ನಂತರ ನನ್ನದು. ನಮ್ಮವರ ಖುಶಿಯಲ್ಲಿಯೇ ತನ್ನ ಖುಶಿ.

"ನಾವು" ಎನ್ನುವ ಭಾವದಲ್ಲಿ ನಮ್ಮವರೆಲ್ಲರು ಇದ್ದಾರೆ. ಮೊದಲು ನಮ್ಮವರು ಇರುತ್ತಾರೆ. *ಇತರರಿಗಾಗಿ ಹೆಚ್ಚೆಚ್ಚು ಯಾರು ದುಡಿಯುವವರೋ ಅವರೇ ಹೆಚ್ಚು ಸುಖಿಗಳು.*  ಇತರರಿಗಾಗಿ ದುಡಿಯುವವರಲ್ಲಿ, ಇತರರ ಬಗ್ಗೆ ಇರುವ  ಭಾವ "ನಾವು" ಎಂಬುವದೇ.

ಸುಖ, ತೃಪ್ತಿ, ಶಾಂತಿ, ನೆಮ್ಮದಿ ಸಮಾಧಾನ ನನಗೆ ಬೇಕು.  ಇನ್ನೊಬ್ಬರಿಗೋಸ್ಕರ ನಾನು..  ಇದ್ಯಾವ ನೀತಿ...??? ಈ ನೀತಿ ರೂಢಿಸಿಕೊಳ್ಳದವನ ಭಾವ  ಎಂದಿಗೂ "ನಾನು" ಎಂದೇ ಇರುತ್ತದೆ.. ಈ ನೀತಿಯನ್ನು ಅಳವಡಿಸಿಕೊಂಡವನ ಭಾವ *ನಾವು* ಎಂದೇ ಇರುತ್ತದೆ.

ಸ್ವಲ್ಪವಿವರಣೆ....

ತಾಯಿ ಇದ್ದಾಳೆ.... ಅವಳಿಗೆ ತಾನು ತನ್ನದು ಎನ್ನುವದಕ್ಕಿಂತಲೂ ಹೆಚ್ಚೆಚ್ಚು "ತಾವು ತನ್ನವರು" ಎಂಬುವದೇ ಇದೆ. ಅಂತೆಯೇ ಅವಳು ಪ್ರಶಾಂತ ಮೂರುತಿ. ಶಾಂತಿಯ ಸ್ವರೂಪಿಣಿ. ನೆಮ್ಮದಿಯ ಗಣಿ.

ಗುರುಗಳು ಇದ್ದಾರೆ...
ಗುರುಗಳಿಗೆ "ನಾನು" "ನನ್ನ ಉದ್ಧಾರ" ಎಂಬುವದೇ ಲಕ್ಷ್ಯವಿದ್ದಿದ್ದರೆ ಶಿಷ್ಯರ್ಯಾರೂ ತಯಾರು ಆಗ್ತಾನೇ ಇರ್ಲಿಲ್ಲ. "ನಾವು, ನಮ್ಮವರು, ನಮ್ಮ‌ ಸಮಾಜ" ಎಂಬ ಭಾವನೇ ಇರುವದರಿಂದಲೇ ಶಿಷ್ಯ ಪರಂಪರೆ ಅಂದಿನಿಂದ ಇಂದಿನ ವರೆಗೂ ಉಳಿದು ಬಂದಿದೆ. ಶಿಷ್ಯರಲ್ಲಿಯೇ ಎಲ್ಲವನ್ನೂ ಕಂಡರು. "ಪಾಠವಾದರೆ ತೃಪ್ತಿ, ಪಾಠವಾದರೆ ಜೀವನ ಸಾರ್ಥಕ, ಪಾಠವಾದರೆ ಅಪರೋಕ್ಷ, ಪಾಠವೇ ಶಾಸ್ತ್ರಾಪರೋಕ್ಷ" ಹೀಗೆ ಶಿಷ್ಯರ ಪಾಠದಲ್ಲಿಯೇ ಎಲ್ಲವನ್ನೂ ಬಗೆಬಗೆಯಾಗಿ ಕಂಡರು. ಆನಂದದ ಸೊಬಗನ್ಬೇ ಹರಿಸಿಕೊಂಡರು.

ದೇವತೆಗಳು....
ದೇವತೆಗಳ ಜೀವನ ನಮಗಾಗಿಯೇ. ಇಂದ್ರಿಯಪ್ರೇರಕರಾಗಿ, ಮನೋ ಪ್ರೇರಕಾರಾಗಿ, ನಾವು ಮಾಡುವ ತೊಡುವ ಕರ್ಮಸಾಕ್ಷಿಗಳಾಗಿ, ಸೂರ್ಯ ಅಗ್ನಿ ಯಮ ಇಂದ್ರ ವರುಣ ಅಶ್ವಿನಿ ನವಗ್ರಹ ಮೊದಲಾದ ಎಲ್ಲ ದೇವತೆಗಳೂ ನಮಗಾಗಿಯೇ ಹೊರತು, ತಮಗಾಗಿ ಎಂದಾಗಿಯೇ ಇಲ್ಲ. ಅಂತೆಯೇ ನಮ್ಮೆಲ್ಲರಗಿಂತಲೂ ಕೋಟಿ‌ಕೋಟಿ ಪಟ್ಟು ಹೆಚ್ಚಿನ ಆನಂದ ಸೌಖ್ಯ ಅವರಿಗುಂಟು. ನಿತ್ಯ ಅನುಭವಿಸುತ್ತಾರೆ. 

ವಾಯುದೇವರು.....
ವಾಯುದೇವರು ನಮ್ಮಲ್ಲಿ ನಮ್ಮಂತಹ ಅನಂತಾನಂತ ಜೀವರಾಶಿಗಳಲ್ಲಿ ನಿಂತು ಮಾಡುವ ಶ್ವಾಸೋಚ್ಛ್ವಾಸವೇ ದೇವರ ಸಂತೃಪ್ತಿ ಎಂದು ಭಾವಿಸುದರು. ಅವರೂ "ನಾನು" ಎಂದು ಕೊಂಡಿದ್ದರೆ ನಮ್ಮ ಬದುಕೇ ಇರಲಿಲ್ಲ. ಅಂತೆಯೇ ಅಂತಪಟ್ಟು ಹೆಚ್ವಿನ ಆನಂದ ಅನುಭವಿಸುವವರು ವಾಯುದೇವರು.

ದೇವರು.....
ಕಿಂಚಿತ್ತೂ ಸ್ವಾರ್ಥವಿಲ್ಲ. ದೇವತೆಗಳಿಗೆ ಮೋಕ್ಷಬೇಕು. ವಾಯುದೇವರಿಗೆ ದೇವರ ಪ್ರೀತಿಬೇಕು. ದೇವರಿಗೇನು ಬೇಕು... ?? ಏನೂ ಇಲ್ಲವೇ ಇಲ್ಲ.  ಹಾಗಿದ್ದರೂ ಜಗತ್ತಿನ  ಸೃಷ್ಟಿ ಸ್ಥಿತಿ ಲಯ ನಿಮನ ಜ್ಙಾನ ಅಜ್ಙಾನ ಬಂಧ ಮೋಕ್ಷ ಇತ್ಯಾದಿಗಳನ್ಮು ಕೊಡುತ್ತಾನೆ ಅಲ್ವೆ... ?? ಇದೆಲ್ಲ ಏನಕ್ಕೆ.. ದೇವರಲ್ಲಿಯ ಭಾವ "ನಾವು ನಮ್ಮದು" ಎಂದು. ಅಂತೆಯೇ ದೇವ ಆನಂದ ಪೂರ್ಣ....

*ನಾನು- ಬೇಡವೇ ಬೇಡ, "ನಾವು" ಎಂಬ ಭಾವ ಎಲ್ಕಡೆ ಹರಡಿಬರಲಿ*  ಯಾವರೀತಿಯಾಗಿ ತಾಯಿ, ಗುರುಗಳು, ದೇವತೆಗಳು ವಾಯುದೇವರು, ದೇವರು, ತಾರತಮ್ಯಾನುಸಾರವಾಗಿ  ಇವರುಗಳೆಲ್ಲರ ಪ್ರತಿ ಕಾರ್ಯವೂ ನಮ್ಮವರಿಗಾಗಿಯೇ ಎಂದು ಇದೆಯೋ, ಅದೇ ರೀತಿಯಾಗಿ ನಮ್ಮ ಮಾತು, ಪ್ರೀತಿ, ಹಣ, ಧನ, ಕನಕ, ಸುಖ, ಎಲ್ಲವೂ "ನಾವು -  ನಮ್ಮರು" ಎಂದು ಬಂದರೆ  ಆಗ ದೊರೆಯುವ ಆನಂದ. ಸೌಖ್ಯ, ಶಾಂತಿ, ಸಮೃದ್ಧಿಗಳೂ ಊಹಾತೀತ. ಅಂತೆಯೇ ನಮ್ಮ ಸಿದ್ಧಾಂತದಲ್ಲಿ "ನಾನು" ಎನ್ನುವದಕ್ಕೆ ಆಸ್ಪದವೇ ಕೊಡಲಿಲ್ಲ. ನಾವಾದರೂ "ನಾನು" ವಿಗೆ ಆಸ್ಪದ ಕೋಡಬೇಕು ಏನಕ್ಕೆ.....

*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*