*ಓಡಬೇಡ....‌ಎದುರಿಸು*

*ಓಡಬೇಡ....‌ಎದುರಿಸು*



ಆಪತ್ತುಗಳು, ದುಃಖಗಳು, ಕಷ್ಟಗಳ ಎಲ್ಲರಿಗೂ ಸಹಜ. ಆದರೆ ಕೆಲವೊಮ್ಮೆ ಬಂದ ಆಪತ್ತುಗಳನ್ನು ನೋಡಿ ಪಲಾಯನ ಮಾಡುವದೇ ನಮ್ಮ ಮನೆಮಾತಾಗಿರತ್ತೆ. ಹೇಡಿಯಾಗಿ ಪಲಾಯನ ಮಾಡುವದಲ್ಲ, ಎದುರಿಸಿ ಶೂರನಾಗುವದೇ ಲೇಸು.

*ಇಂದಿನ ನಮ್ಮ ಸ್ಥಿತಿ*

ದೊಡ್ಡ ಆಪತ್ತುಗಳು ಎದುರಾದಾಗ ಅತ್ಮಹತ್ಯೆ ಮೊದಲಾದವುಗಳಿಗೇ ಕೈ ಹಾಕುತ್ತಾನೆ ಒಂದೆಡೆ ಇರಲಿ. ಕ್ಷುದ್ರ ಆಪತ್ತುಗಳು ಬಂದಾಗಲೂ ಪಲಾಯನ ಮಾಡುತ್ತಾನೆ. ಇದುವೇ ವಿಚಿತ್ರ.

ಸಣ್ಣ ತಲೆ ಶೂಲೆ ಬಂದಿದೆ. ಎದಿರಿಸುವ ಶಕ್ತಿಯೂ ಇಲ್ಲ. ಧೈರ್ಯವೂ ಇಲ್ಲ. ಎದುರಿಸದೇ ಪಲಾಯನ ಔಷಧಿ ಮಾರ್ಗ ಹಿಡಿಯುವ. ಜ್ವರ ಬಂದರಂತೂ ವೈದ್ಯರೇ ಬೇಕು...

*ಅಂದಿನ ಸ್ಥಿತಿ*

ಇಂದು ಎಲ್ಲರೂ ಕೇಳಿರಬಹುದಾದ ಒಂದು ಘಟನೆ. ಜನಕರಾಜನಿಗೆ ತನ್ನ ಎಂಭತ್ತು ಸಾವಿರ ವರ್ಷದ ಸುದೀರ್ಘ ಜೀವನದಲ್ಲೇ ಕಾಣದ ಆಪತ್ತು ದುಃಖ ಒಮ್ಮೆಲೆ ಅಪ್ಪಳಿಸಿತು. ದುಃಖಗಳು ಆಪತ್ತುಗಳು ಎದುರಾದಾಗಲೂ ಆಧ್ಯಾತ್ಮಿಕ ಬಲದ ಧೈರ್ಯದಿಂದ, ಅತ್ಯಂತ ವಿಶ್ವಾಸದಿಂದ ಪಲಾಯನ ಮಾಡದೇ ಎದುರಿಸಿದ. ಅಧ್ಯಾತ್ಮಿಕ ಬಲದ ಪ್ರಭಾವದಿಂ ಗೆದ್ದೂ ಬಂದ. " ಆಪತ್ತುಗಳನ್ನು ಎದುರಿಸುವದನ್ನು  ರೂಢಿಸಿಕೊಂಡಾಗ ಕಷ್ಟಗಳೇ ಪಲಾಯನ ಮಾಡುತ್ತವೆ. ಆಪತ್ತುಗಳೇ ದೂರೋಡುತ್ತವೆ. ದುಃಖಗಳು ಮಾಯವಾಗುತ್ತವೆ." ಇದು ನಿಶ್ಚಿತ.  ಅಂತೆಯೇ ಜನಕರಾಜ  ಶೂರ ಯಶಸ್ವೀ ಪುರುಷ  ಎಂದಾದ....

*ಒಂದು ಕಥೆ*

ರಾಮ ಓಣಿಯಲ್ಲಿ ನಡಿಯುತ್ತಾ ಸಾಗಿದ್ದ. ಓಣಿಯ ನಾಯಿಗಳು ಬೆಂಬೆತ್ತಿದವು. ಅನಿರೀಕ್ಷಿತ ಈ ಆಪತ್ತಿನಿಂದ ಪಾರಾಗಲು ಕಾಲಿಗೆ ಕೆಲಸ ಹಚ್ಚಿದ ರಾಮ.

ಓಡುವ ರಾಮನನ್ನು ನೋಡಿದ ನ್ಯಾಸ... ಓಯ್  ರಾಮ !! ನಿಲ್ಲು ಎಂದು ಜೋರಾಗಿ ಕಿರುಚಿದ.

ರಾಮ..) ನಾಯಿಗಳು ಬೆಂಬೆತ್ತಿವೆ. ನಿಂತರೆ ಹೇಗೆ... ?? ನಾಯಿಗಳಿಂದ ತಪ್ಪಿಸಿಕೊಳ್ಳಬೇಕಾದರೆ ಓಡಲೇಬೇಕಲ್ಲವೇ... ??

ನ್ಯಾಸ...) ಓಯ್ !! ಪಲಾಯನ ಮಾಡಿ ಓಡುವದೇನಿದೆ ಹೆಡಿಗಳ ಲಕ್ಷಣ. ಹೇಡಿಗಳನ್ನು ಕಾಡುವ ರಣಹೇಡಿಗಳು ನೂರು ಇರುತ್ತವೆ. ಒಂದು ಕ್ಷಣ ನಿಲ್ಲು.... ನಿಂತು ನೋಡು.. ಹಿಂತಿರುಗು...

ರಾಮ..) ಧೈರ್ಯ ಮಾಡಿ ಕ್ಷಣ ನಿಂತ. ಹಿಂತುರಿಗಿ ನೋಡಿದ. ಬೆಂಬತ್ತಿದ ನಾಯಿಗಳೂ ನಿಂತಿದ್ದವು. ಹಿಂದು ತಿರುಗಿದ. ಧೈರ್ಯ ಇಮ್ಮಡಿ ಆಗಿತ್ತು.  ಆ ಬೆಂಬತ್ತಿದ ನಾಯಿಗಳನ್ನು ಎದುರಿಸಿದ.

ಧೈರ್ಯತಾಳಿದ ರಾಮ‌ನ ಎದುರಿಸುವ   ಕಲೆಯನ್ನು ನೋಡಿ ಬೆಂಬತ್ತಿದ ಆ ನಾಯಿಗಳೇ ಓಡಿ‌ಹೋದವು. ನಿಟ್ಟಿಸಿರಿಟ್ಟ ರಾಮ...

ನ್ಯಾಸ...) ಓಡಿದರೆ ಹೇಡಿಯೆಂದು ನಾಲಕು ಜನ ನಕ್ಕಾರು, ಎದುರಿಸಿನೋಡು ಪರಾಕ್ರಮಿ ಶೂರ ಎಂದಾಗಿ ನಿನ್ನ ಕೀರ್ತಿ ಜಗತ್ತಿಗೇ ಹರಡುತ್ತದೆ. ಇನ್ನು ನೀ ಹೊರಡಬಹುದು........

ಕಷ್ಟಗಳು ಆಪತ್ತುಗಳು ಬರುವದು ಸಹಜ. ಎದುರಿಸಿದರೆ ಅವುಗಳೇ ಹೇಡಿಗಳಂತೆ ಓಡಿಹೋಗುತ್ತವೆ. ನಾವೇ ಹೇಡಿಗಳಂತೆ ಪಲಾಯನ ಮಾಡಿದರೆ ಆ ಕಷ್ಟಗಳು ನಮಮೆಲೆಯೇ ಸವಾರಿ ಮಾಡುತ್ತವೆ.

ಜನಕರಾಜರಂಥ ಕಷ್ಟಗಳು ನಮಗೆ ಬಂದಿಲ್ಲ, ಬರುವದೂ ಇಲ್ಲ. ಇರುವ ಸಣ್ಣ ಪುಟ್ಟ ಕಷ್ಟಗಳಿಗೆ ಹೇಡಿಗಳಂತೆ ಪಲಾಯನ ಮಾಡುವದು ಏನಕ್ಕೆ... ಎದುರಿಸೋಣ. ಅಧ್ಯಾತ್ಮಮ ಬೆಳಿಸಿಕೊಳ್ಳೋಣ.

*✍🏽✍🏽✍ನ್ಯಾಸ....*
ಗೋಪಾಲ‌ದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*