*ಶ್ರೀಹರಿಯ ಪಾದಾಶ್ರಯನಿಗೆ ಭೀತಿಯೇ ಇರುವದಿಲ್ಲ*

*ಶ್ರೀಹರಿಯ ಪಾದಾಶ್ರಯನಿಗೆ ಭೀತಿಯೇ ಇರುವದಿಲ್ಲ*

ಯಾರಿಗೂ ಅಂಜದೇ, ಯಾರಿಗೂ ಅಂಜಿಕೆಯನ್ನುಂಟು ಮಾಡದಿರುವದೇ ಭಗವತ್ಪಾದಾಶ್ರಯನ ಒಂದು ಲಕ್ಷಣ.  ಭಗವತ್ಪಾದಾಶ್ರಯನೇ ಮಹಾತ್ಮ. ಮಹಾನ್ ಆದ ಭಗವಂತನನ್ನು ಪಾದಾರವಿಂದವನ್ನು ಆಶ್ರಯಿಸಿದವರೇ, ಪಾದಾರವಿಂದವನ್ನು  ಸಾಕ್ಷಾತ್ಕರಿಸಿಕೊಂಡವರೇ ಮಹಾತ್ಮರು. ಮಹಾತ್ಮರ ಸನಿಹ ಬಂದ ಪ್ರಾಣಿ ಪಶು ಪಕ್ಷಿಗಳಿಗೇ ಭಯವಿರುವದಿಲ್ಲ. ಮಹಾತ್ಮರಿಗೇ ಭಯವಿಲ್ಲ ಎಂದು ಹೇಳುವದೇನು....

*ಭಗವತ್ಪಾದಾಶ್ರಿತ ಮಹಾತ್ಮನಿಗೇನು ಕೋಡು ಬಂದಿದೆಯಾ... ??*

ಖಂಡಿತವಾಗಿಯೂ *ದೈವಕೃಪೆಯ ಕಾವಲು* ಎಂಬ ದೊಡ್ಡ ಕೋಡೇ ಬಂದಿದೆ ಅಂದರೆ ತಪ್ಪಾಗ್ಲಿಕ್ಕಿಲ್ಲ.

ಅಪಾಯದ ಸನ್ನಿವೇಶಗಳು ನಮಗೆ ಹೇಳಿಕೇಳಿ ಬರುವದಿಲ್ಲ. ಅಕಸ್ಮಾತ್ ಘಟಿಸಿದಾಗ ಅವುಗಳನ್ನು ಎದುರಿಸುವ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವದು ಏನಿದೆ ಸುಲಭಸಾಧ್ಯವಲ್ಲ. 

ಇಂಥಹ ಗಂಡಾಂತರಗನ್ನು ಎದುರಿಸುವದು ಹೇಗೆ..?? ಇಂಥಹ ಸಂದರ್ಭಗಳಲ್ಲಿ ಭಯವಿಹ್ವಲರಾಗದಿರಲು ಸಾಧ್ಯವೇ... ??  ಖಂಡಿತಾ ಸಾಧ್ಯವಿದೆ.

ಅಲೆಮಾರಿ, ಆದರೆ ದೇವರನ್ಬೇ ನಂಬಿದ, ದೇವರ  ಪಾದಗಳನ್ನೇ  ಆಶ್ರಯಿಸಿದ ಒಬ್ಬ ಬಡ ಬ್ರಾಹ್ಮಣ. ನಿರಂತರ ದೇವರ ಧ್ಯಾನ, ಜಪ ಪಾರಾಯಣ ಇವುಗಳಲ್ಲೇ ರತ. ಜೀವನಕ್ಕಾಗಿ ಊರೂರು, ಮನೆ ಮನೆ ತಿರುಗುವದು, ಅನ್ಮವನ್ನು ಬೇಡಿ ಬೇಡಿ ತಿನ್ನುವದು. ಮತ್ತೆ ಜಪ ಪಾರಾಯಣಗಳಲ್ಲಿ ತೊಡಗುವದು ಇವನ ಕಾಯಕ.

ಒಮ್ಮೆ ಇಡೀ ನಾಡಿಗೇ ಬರಗಾಲ.  ಆ ಪ್ರಸಂಗದಲ್ಲಿ ಯೋಚಿಸಿದ ಈ ಬ್ರಾಹ್ಮಣ. ತಮ್ಮ ಮನೆಯ ಜನರಿಗೇ ಊಟಕ್ಕಿಲ್ಲ. ಅಂಹದ್ರಲ್ಲಿ ನನಗೆ ಹೊಂದಿಸಿ ಕೊಡುತ್ತಾರೆ. ಪಾಪ ಇವರಿಗೇಕೆ ಕಷ್ಟ ಕೊಡುವದು.  ನಾನು ನಂಬಿದ ನನ್ನ ಸ್ವಾಮಿ ಅಂತೂ ಬಡವ ದರಿದ್ರನಲ್ಲ. ಕಾಡಿಗೆ ಹೋಗಿ ಧ್ಯಾನಕ್ಕೆ ಕುಳಿತರಾಯಿತು ಎಂದು ಕಾಡಿಗೇ ಹೊರಟ.

ಎರಡು ದಿನವಾಯಿತು. ಊಟವಿಲ್ಲ. ಮೂರನೆಯ ಬೆಳಗಿನ ಝಾವ, ಕಣ್ಣು ತರೆದು ನೋಡಿದರೆ ಹಸಿದ ಸಿಂಹ ಎದುರಿಗೇ ನಿಂತಿದೆ. ಆಗ ಯೋಚಿಸಿದ ಬ್ರಾಹ್ಮಣ, *ನನಗಂತೂ ಆಹಾರ ಸುಗಲಿಲ್ಲ,  ಹಸಿದವನಿಗೆ ನಾನು ಆಹಾರನಾದೆನಲ್ಲ* ಅದುವೇ ನನಗೆ ಖುಶಿ ಎಂದು ಯೋಚಿಸುತ್ತಾ ಧ್ಯಾನಸಕ್ತನಾಗಿ ಕುಳಿತ. ಮಧ್ಯ ಮಧ್ಯದಲ್ಲಿ ನನ್ಮ ಮೇಲೆ ಯಾವಾಗಲೂ ಎರಗಬಹುದು ಎಂದು ಯೋಚಿಸುತ್ತಾ ಕಣ್ಣು ಬಿಟ್ಟೂ ನೋಡುತ್ತಿದ್ದೆ.

ಆ ಹಸಿದ ಸಿಂಹ ಅಪರೂಪದಿಂದ ಸಿಕ್ಕ ನನ್ನ ಮೇಲೆ ಎರಗದೇ, ಕಾಡಿನ ದಾರಿ ಹಿಡಿದು ಆಚೆ ಸಾಗ್ತಾ ಇತ್ತು. ಆಗ ಆ ಬ್ರಾಹ್ಮಣನಿಗೆ ಒಂದನಿಸಿತು  *ಆಶ್ಚರ್ಯವೂ ಆಯಿತು, ದೇವ ನನ್ನನ್ನು ರಕ್ಷಿಸುತ್ತಿದ್ದಾನೆ ಎಂಬ ಅರಿವು ಗಾಢವಾಯಿತು, ನನ್ನಲ್ಲಿ ನಿರ್ಭೀತಿಯ ವಾತಾವರಣ ಇನ್ನೂ ಹೆಚ್ಚಾಗಿ ಬೆಳೆಯಿತು.*  "ಮಾಡಬೇಕಾದ ಕೆಲಸಗಳು ತುಂಬ ಇವೆ, ಅಲ್ಲಿಯ ವರೆಗೆ ಈ ಜಗದಿಂದ ಬಿಡುಗಡೆಯಿಲ್ಲ" ಎಂಬುವದೂ ಅರಿವಾಯಿತು.

ಈ ರೀತಿಯಿಂದ ಯೋಚಿಸುತ್ತಾ ನಿರ್ಭೀತನಾಗಿ ಆ ದೇವನ ಅಡೆದಾವರೆಗಳನ್ನು ಚಿಂತಿಸುತ್ತಾ ಇರುವಾಗಲೇ, ಬೇಟೆಯಾಡಲು ಬಂದ ರಾಜ ನನ್ನನ್ನು ನೋಡಿ, ನನ್ನ ನಿರ್ಭೀತ ಪ್ರಶಾಂತ ಮುಖವನ್ನು ನೋಡಿ, ತನ್ನ ಅರಮನೆಗೇ  ಕರೆದೊಯ್ದು, ನನ್ನನ್ನು ರಾಜಗುರುವನ್ನಾಗಿಯೇ ಮಾಡಿಕೊಂಡ. ಆಗ ಒಂದು ಮಾತು ಉದ್ಗರಿಸಿದ ಆ ಬ್ರಾಹ್ಮಣ *ದೇವರು ನನ್ನನ್ನು ರಕ್ಷಿಸುತ್ತಿದ್ದಾನೆ* ಎಂದು.

ಶರಣರನ್ನು ಭಗವಂತ ವಿಶೆಷ ಕಾಳಜಿಯಿಂದ  ರಕ್ಷಿಸುತ್ತಾನೆ ಎಂಬುವದು ಎಂದಿಗೂ ಸತ್ಯ ಸತ್ಯ. ಈ ವಿಶ್ವಾಸ ಇರುವವನು ಹೆದರುತ್ತಾನೆಯಾದರೂ ಏನಕ್ಕೆ....

ಯಾರನ್ನೇ ಆಗಲಿ, ಎಂಥವರನ್ನೇ ಆಗಲಿ, ಎಂಥ ಪರಿಸ್ಥಿತಿಯಲ್ಲೇ ಇರಲಿ ದೇವರಿಗೆ  ರಕ್ಷಿಸುವ ಸಾಮರ್ಥ್ಯ ಇದ್ದೇ ಇದೆ...... ತನ್ನ‌ನಂಬಿದವರನ್ನಂತೂ ಮೊದಲು ರಕ್ಷಿಸಲು ಓಡಿ ಬರುವ. ಎಂಥೆಂಥ ಉಪಾಯಗಳನ್ನೂ ಮಾಡಲು ಸಿದ್ಧ.  ರಕ್ಷಿಸಿಲ್ಲ ಎಂದರೆ ಅದಕ್ಕೆ ಬೆರೆಯದೇ ಆದ ಉದ್ದೇಶ್ಯಗಳಿವೆ ಎಂದೇ ಅರ್ಥ. 

 ಇತಿಹಾಸ ಪುರಾಣಗಳಲ್ಲಿ  ನೂರಾರು ನಿದರ್ಶನಗಳು ಸಿಗುತ್ತವೆ. ಒಂದಂತೂ ನಿಜ. ಭಗವತ್ಪಾದಾಶ್ರಿತರ ಮಾತೇ ಸಾರುತ್ತದೆ *ಭಯವುಂಟೇ ಹರಿಯ ಭಕುತರಿಗೆ - ಎಲ್ಲೂ ಭಯಗಳು ಹರಿಯ ಭಕುತರಿಗೆ ಇಲ್ಲ* ಇತ್ಯಾದಿ ಇತ್ಯಾದಿ...


*✍🏽✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*