*ಪಾಲಿಗೆ ಬಂದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಅಭ್ಯಾಸವನ್ನು ಗಳಿಸಿಕೊಳ್ಳಬೇಕು...*
*ಪಾಲಿಗೆ ಬಂದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಅಭ್ಯಾಸವನ್ನು ಗಳಿಸಿಕೊಳ್ಳಬೇಕು...*
"ಉದ್ಯೊಗಂ ಪುರುಷ ಲಕ್ಷಣಮ್" ಎಂದು ತಿಳಿದಂತೆ ಉದ್ಯೋಗ ಪುರುಷನ ಒಂದು ಲಕ್ಷಣ. "ಇಂಥಹದೇ ಉದ್ಯೋಗ ನಾನು ಮಾಡುವೆ" ಎನ್ನುವದು ತಪ್ಪು. ಅದು ಅಸಾಧ್ಯವೂ ಹೌದು. "ದೊರೆತ ಉದ್ಯೋಗವನ್ನು ಹೀಗೆಯೇ ಮಾಡುತ್ತೇನೆ" ಎನ್ನುವದು ಸುಸಾಧ್ಯ.
"ಉದ್ಯೋಗ" ಹೊಟ್ಟೆ ಹೊರೆದುಕೊಳ್ಳುವ ಒಂದು ದುಡಿಮೆ ಸರ್ವಥಾ ಅಲ್ಲ. ಪ್ರತಿಯೊಬ್ಬನ ಆಂತರ್ಯದಲ್ಲಿ ಹುದುಗಿದ ಆನಂದವನ್ನು ತಡೆದು ಹಿಡಿದ, ತಡೆಗೋಡೆಯಂತಿರುವ ಅಡ್ಡಗೋಡೆಯನ್ನು ದೂರಕ್ಕೆ ಎಸೆಯುವ ಒಂದು ಉಪಾಯವೇ *ಉದ್ಯೋಗ* ಎಂದರೆ ತಪ್ಪಾಗಲಾರದು.
*ಉದ್ಯೋಗ* ದೇವರುಕೊಟ್ಟದ್ದು. ದೇವರಿಗೆ ಪ್ರೀತಿಯಾಗುವಂತೆಯೇ ಮಾಡುವದು ಎನ್ನ ಕರ್ತವ್ಯವೂ ಹೌದು. ಕರ್ತವ್ಯಪಾಲನೆಯಲ್ಲಿ ಎಂದಿಗೂ ಹಿಂದುಳಿದ ಮನುಷ್ಯ ಈ ಕರ್ವ್ಯದಲ್ಲಿಯೂ ಅಷ್ಟೆಯೇ ಹಿಂದುಳಿದಿದ್ದಾನೆ. ತಾ ಮಾಡಿದ ಉದ್ಯೋಗ ಕೆಲಸದಿಂದ ತನಗೂ ತನ್ನವರಿಗೂ ಸಂತೃಪ್ತಿಯಿಲ್ಲ. ದೇವರಿಗಂತೂ ದೂರದ ಮಾತೆ....
ಇಂದಿನ ಉದ್ಯೋಗದ ಒಂದು ಫಲವೇನೆಂದರೆ ದುಡ್ಡು ಸಂಪಾದನೆಯ ಮುಖಾಂತರ bank balance ಎಷ್ಟು ಬೆಳೆದಿದೆ ಎಂದು ನೋಡುತ್ತಾ ಕುಳಿತಿರುವದು ಒಂದಾದರೆ, ಎಷ್ಟು lone ತೆಗೆಸಿದ್ದೇನೆ ಎನ್ನುವದು ಮತ್ತೊಂದು ಆಗಿದೆ. ಈ ಎರಡರ ಮಧ್ಯದಲ್ಲಿ ಮನೆಯ ಶಾಂತಿ, ನೆಮ್ಮದಿ, ತೃಪ್ತಿ, ಸಂತೋಷ ಇವುಗಳು ಕಾಣೆಯಾಗಿ ಹೋಗಿವೆ.
ಪಾಲಿಗೆ ಬಂದ ಯಾವುದೇ ಉದ್ಯೋಗ ಕೆಲಸ ನನಗೇ ಸಂತೃಪ್ತಿಯನ್ನೋ ಸಂತೋಷವನ್ನೊ ನೆಮ್ಮದಿಯನ್ನೋ ತಂದು ಕೊಡುವದಿಲ್ಲ ಎಂದಾದರೆ, ದೇವರಿಗೆ ಹೇಗೆ ಸಂತೋಷ ತಂದು ಕೊಟ್ಟೀತು.....???
ಪಾಲಿಗೆ ಬಂದ ಯಾವುದೇ ಕೆಲಸವಾಗಲಿ ಪರಿಪೂರ್ಣ ಏಕಾಗ್ರತೆಯಿಂದ ಮಾಡಿದರೆ, ಮನುಷ್ಯನ ಹೃದಯದಲ್ಲಿ ಆನಂದ ಸಂತೃಪ್ತಿ ಉಕ್ಕಿ ಹರಿಯುತ್ತವೆ. ಇದು ನೂರರಷ್ಟು ನಿಜವಾದ ಮಾತು. ಆಗ ನನಗೂ ಸಂತೃಪ್ತಿ ಇದೆ. ದೇವರೂ ಸಂತೃಪ್ತನಾಗಬಹುದು.
ಕೇವಲ ಸಂಬಳ sallry ಹಾಗೂ ಬಡ್ತಿ promotion ಇವುಗಳಿಂದಲೇ ನಮ್ಮ ಕೆಲಸದ ಗುಣಮಟ್ಟವನ್ನು ಅಳೆದುಕೊಳ್ಳುವದು ಸರ್ವಥಾ ತಪ್ಪು. ಕೆಲಸದ ಬಗೆಗಿನ ದೃಷ್ಟಿಕೋನ ಹಾಗೂ ದಕ್ಷತೆಯ ನಿರ್ವಹಣೆಗಳಿಂದಲೇ ಕೆಲಸದ ಗುಣಮಟ್ಟ ವೃದ್ಧಿಸುತ್ತದೆ. ಗುಣಮಟ್ಟತೆಯ ಅಭಿವೃದ್ಧಿಯೇ ಆನಂದದ ಹರಿವಿಗೆ ಮೂಲ ಕಾರಣ.
ನಮ್ಮ ಗುರುಗಳಾದ ಪೂ. ಮಾಹುಲೀ ಆಚಾರ್ಯರು ಒಂದು ಮಾತನ್ನು ಹೇಳುತ್ತಿದ್ದರು "ಕೈಗೊಂಡ ಕೆಲಸದಲ್ಲಿ ಪೂರ್ಣ ಮನಸ್ಸಿಟ್ಟು, ಸಂಪೂರ್ಣ ತನ್ಮಯನಾಗಿ ಮಾಡು. ಮಾಡಿದ ಆ ಕಾರ್ಯ ಅತ್ಯುತ್ತಮ ಸಿದ್ಧಿಯನ್ನು ಪಡೆಯುತ್ತದೆ, ಜೊತೆಗೆ ಕೆಲಸ ಮಾಡಿದ ನಿನಗೆ ನೈಜ ಆನಂದಾನುಭವವನ್ನುಂಟು ಮಾಡುತ್ತದೆ" ಎಂದು. ಹೀಗೆ ತಿಳಿದ ಭಾವಿಸಿದ ವ್ಯಕ್ತಿ ಎಷ್ಟೇ ಸಣ್ಣ ಕೆಲಸವಾದರೂ ಅಸಡ್ಡೆ ತೋರಲಾರ. ಪರಿಪೂರ್ಣ ಮನಸ್ಸಿನಿಂದಲೇ ಮಾಡುತ್ತಾನೆ. ಆ ಕಾರ್ಯದಲ್ಲಿ ಯಶಸ್ವಿಯೂ ಆಗುತ್ತಾನೆ. *ತಾ ಮಾಡಿದ ಕಾರ್ಯ ತನಗೆ ತೃಪ್ತಿಯಾಗುವದೇ* ಉದ್ಯೋಗಸ್ಥರ ಯಶಸ್ಸಿನ ಮೊದಲ ಹೆಜ್ಹೆ ಎಂದು ವಿವೇಕಾನಂದರು ನುಡಿಯುತ್ತಾರೆ. ತಾನು ತೃಪ್ತನಾಗುವದೇ ಮೊದಲ ಯಶಸ್ಸು.
ನಮ್ಮ ಪಾಲಿಗೆ ಬಂದ ಯಾವುದೇ ಕೆಲಸವಿದ್ದರೂ ಅತ್ಯುತ್ತಮ ಮಟ್ಟದಲ್ಲಿ ನಿರ್ವಹಿಸುವಂತೆ ನೋಡಿಕೊಳ್ಳುವಂತಾಗಬೇಕು. ಆಗ ನನಗೂ ತೃಪ್ತಿ ಸಂತೋಷ ಆನಂದ. ತನ್ಮುಖಾಂತರ ಕೆಲಸ ಕೊಟ್ಟ ಯಜಮಾನ ದೇವರಿಗೂ ಸಂತೃಪ್ತಿ. ಯಜಮಾನನ ಸಂತೃಪ್ತಿಯೂ ಸಹ ನಮ್ಮ ಆನಂದಕ್ಕೇ ಕಾರಣ... 😊😊😊😅 ಆದ್ದರಿಂದ ಮಾಡುವ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಅದ್ಭುತ ಕೌಶಲವನ್ನು ಪಡೆಯೋಣ......
ನಿಜ ಉದ್ಯೋಗಸ್ಥ ದೆವರೊಬ್ಬನೇ, ಅವನಿಗೇ ಮೊರೆ ಹೋಗುವೆ. ತಾ ಮಾಡುವ ಜಗತ್ತಿನ ಸೃಷ್ಟಿಯಿಂದ ಆರಂಭಿಸಿ, ಪೂತನಾ ವಧವೋ ಅಥವಾ ಬಲಿಯಬಳಿ ಭಿಕ್ಷೆ ಬೇಡುವದೋ, ಕೀಟನನ್ನು ರಾಜನನ್ನಾಗಿ ಮಾಡುವದೋ, ಮೋಹಿನಿಯಾಗಿ ಹೆಣ್ಣಾಗುವದೋ, ಬುದ್ಧನಾಗು ಬೆತ್ತಲೆ ನಿಲ್ಲುವದೋ ಮತ್ತಿನ್ಯಾವುದೇ ಕೆಲಸವಿರಬಹುದು, ಆ ಕೆಲಸ ತನಗೂ ಸಂತೃಪ್ತಿಯನ್ನೇ ತಂದುಕೊಟ್ಟಿದೆ, ಆ ಕಥೆಗಳನ್ನು ಓದುವ ನೋಡುವ ನಮ್ಮವರೆಗೆ ಎಲ್ಲರಿಗೂ ಸಂತೃಪ್ತಿಯನ್ನೇ ಹರಿಸಿದೆ. ಅಂತೆಯೇ ನಿಜವಾದ ಉದ್ಯೋಗಸ್ಥ ಶ್ರೀಹರಿಯೇ.
ಆ ಹರಿಯಲ್ಲಿ *ನಾನು ಮಾಡುವ ಕೆಲಸ ನೀನೇ ಮಾಡುತ್ತಿಯಾ ಮಾಡಿಸುತ್ತೀಯಾ. ಆ ಕೆಲಸ ಪೂರ್ಣಮಟ್ಟದಲ್ಲಿ ಯಶಸ್ವಿಯಾಗುವಂತೆಯೇ ಮಾಡಿಸು.* ಎಂದು ಪ್ರಾರ್ಥಿಸುವೆ.
*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments