*ವಿಜಯದಶಮೀ ಹಬ್ಬದ ಹೃತ್ಪೂರ್ವಕ ಶುಭಾಷಯಗಳು 🌿🌿🌿🌹🌹*
*ವಿಜಯದಶಮೀ ಹಬ್ಬದ ಹೃತ್ಪೂರ್ವಕ ಶುಭಾಷಯಗಳು 🌿🌿🌿🌹🌹*
ಇಂದು ದಸರಾ ಹಬ್ವದ ಕೊನೇಯದಿನ. ನಾವೆಲ್ಲರೂ ನಮ್ಮ ಕುಲದ ಹೆದ್ದೈವನಾದ *ಶ್ರೀ ಭೂ ಸಹಿತ ಶ್ರೀಶ್ರೀನಿವಾಸ ದೇವರ* ಆರಾಧನಾ ರೂಪದ ನವರಾತ್ರೋತ್ಸವ ಶ್ರೀನಿವಾಸನ ಪ್ರೀತ್ಯರ್ಥಕವಾಗಿ, ಅನುಗ್ರಹಕ್ಕಾಗಿ ಯಥಾ ಶಕ್ತಿ ವ್ರತ ಉಪವಾಸಾದಿಗಳನ್ನು ಮಾಡಿದ್ದೇವೆ. ಆ ಸೇವಿಗಳಿಂದ ಸಂತೃಪ್ತನೇ ಆಗಿದ್ದರೆ ನಮನಮಗೆ ಜ್ಙಾನ ಕೊಡಲಿ, ಭಕ್ತಿ ಬೆಳಿಸಲು, ಧರ್ಮ ಮಾಡಿಸಲಿ, ಗುರು ದೇವತೆಗಳ ಆರಾಧನೆ ಹೆಚ್ಚು ಹೆಚ್ಚಾಗಿ ಮಾಡಿಸಲಿ. ಜಪ ಅಧ್ಯಯನ ಅಧ್ಯಾಪನ ಹೆಚ್ಚಿಸಲಿ ಎಂದು ಪ್ರಾರ್ಥಿಸಿಕೊಳ್ಳೋಣ.
ಸೋಲುಗಳೇ ಜೀವನ ನಮ್ಮದು. ಗೆಲುವ ಮರುಮರೀಚಿಕೆಯಾಗಿಯೇ ಉಳಿದಿದೆ. ಹಾಗಾಗಿ "ಅಪಜಯಗಳು ದೂರಾಗಲಿ, ಜಯಗಳು ನಮ್ಮದಾಗಲಿ" ಎಂದು ಆಶಿಸೋಣ.
ದುಃಖ, ದುಮ್ಮಾನ, ego , ಅಸೂಯೆ, ಮಾತ್ಸರ್ಯಗಳು ಸೋತು ಹೋಗಲಿ.
ನಿರ್ವ್ಯಾಜ ಪ್ರೀತಿ ಮಮತೆ ಸ್ನೇಹಗಳಿಗೆ ಜಯ ಸಿಗಲಿ.
ಚಿಂತೆ ಸಂತೆ ಸಂತಾಪಗಳು ಪಲಾಯನ ಮಾಡಲಿ.
ಸುಖ , ಶಾಂತಿ, ಸಮೃದ್ಧಿಗಳು ಮನೆಯಲ್ಲಿ, ಮನದಲ್ಲಿ ಮನೆ ಮಾಡಿರಲಿ.
ಅಹಿತವನ್ನೇ ಬಯಸುವ, ಸ್ವಾರ್ಥಕ್ಕಾಗಿ ಬಳಿಸಿಕೊಳ್ಳುವ, ನಮ್ಮವರಲ್ಲದವರು ಓಡಿ ಹೋಗಲಿ.
ಹಿತೈಷಿಗಳೇ ಆದ, ನಮಗಾಗಿ ಪರಿತಪಿಸುವ, ತಮ್ಮದೆಲ್ಲವನ್ನೂ ನಮಗೆ ಧಾರೆಯೆರೆಯಲು ಸಿದ್ಧರಾದ, ಅಂತೆಯೇ ನಮ್ಮವರೆಂದಾದವರು ನಿರಂತರ ನಮ್ಮ ಬಳಿಯೇ ಉಳಿಯುವಂತಾಗಲಿ.
ಅಧರ್ಮವನ್ನು ಮೆಟ್ಟಿ ನಿಲ್ಲುವ, ಎದುರಿಸುವ ದಾರ್ಢ್ಯ ಬರಲಿ.
ಧರ್ಮವನ್ನು ಘಟ್ಟಿಯಾಗಿ ಅಪ್ಪಿಕೊಳ್ಳುವ ಪ್ರೀತಿ ಒದಗಿಬರಲಿ.
ದುಶ್ಚಟಗಳು ದೂರೋಡಲಿ, ದೂರೋಡಿಸಲು ಹಠ ಎಮ್ಮದಾಗಲಿ
ಸಂಧ್ಯೆ ಜಪ ಪೂಜೆಗಳು ಸನಿಹಬರಲಿ. ಇವುಗಳಲ್ಲಿ ಆಗ್ರಹ ಬೆಳೆಯಲಿ.
ಅಜ್ಙಾನ, ವಿಪರೀತ ಜ್ಙಾನ, ಭ್ರಾಂತಿಗಳು ಕ್ಷೀಣಿಸಲಿ.
ಪರಿಶುದ್ಧ ಜ್ಙಾನ, ದೃಢವಾದ ಭಕ್ತಿಗಳು ಕ್ಷಣ ಕ್ಷಣಕ್ಕೂ ಅಭಿವೃದ್ಧಿಸಲಿ.
ಅನ್ಯರನ್ನು ಮೆಚ್ಚಿಸಲು ಮನಸ್ಸು ನಾಲಿಗೆ ಸವಿಯುವದು ಸರ್ವಥಾ ಬೇಡ.
ಗುರು ದೇವತಾ ದೇವರನ್ನೇ ಮೆಚ್ಚಿಸಲು ಅವಶ್ಯವಾಗಿ ಮನಸ್ಸು ದುಡಿಯಲಿ, ನಾಲಿಗೆ ಸವಿಯಲಿ.
ಕಾಮ ಕ್ರೋಧವೇ ಮೊದಲಾದ ದುರ್ಗುಣಗಳು ಎಂದು ಏನೇನಿವೆ ಅವೆಲ್ಲವನ್ನೂ ಮೆಟ್ಟಿನಿಲ್ಲವ ಶಕ್ತಿ ಬರಲಿ.
ಸಹನೆ ದಯೆ ಕ್ಷಮೆ ಔದಾರ್ಯ, ಪರೋಪಕಾರ ಮುಂತಾದ ಮುಂತಾದಗುಣಗಳ ಸ್ನೇಹವೇ ಎಮಗಾಲಿ.
ಯಾವದಕ್ಕೂ ಎಂತಹದ್ದನ್ನೂ ಅನ್ಯರನ್ನು ಯಾಚಿಸುವ ದೌರ್ಭಾಗ್ಯ ಸರ್ವಥಾ ಬೇಡ.
ಏನನ್ನೇ ಯಾಚಿಸುವದಾದರೂ ನನ್ನ ಅತ್ಯಂತ ಪ್ರಿತಮನಾದ ದೇವರನ್ನೇ ಯಾಚಿಸುವ ಸೌಭಾಗ್ಯ ಒದಗಿ ಬರಲಿ. ಕೊಟ್ಟೇ ಕೊಡುತ್ತಾನೆ ಎಂಬ ಭರವಸೆ ದೃಢವಾಗಲಿ.
ಸರ್ವಸಮರ್ಥ, ಸ್ವತಂತ್ರ, ನನಗೆ ಅತ್ಯುಪಕಾರ ಮಾಡಿದ ಮಾಡುವ ದೇವರ ವಿಶಾಲ ಬಾಹುಗಳಲ್ಲಿ ನಿಶ್ಚಿಂತವಾಗಿ ಮಲಗುವ ಸಮಯ ಬೇಗ ಬರಲಿ.
ದುರ್ಮಾರ್ಗ ದೂರಾಗಿ, ಸನ್ಮಾರ್ಗದಲ್ಲಿ ಇರುವಂತಾದರೆ ಈ ನವರಾತ್ರೋತ್ಸವ ಸಾರ್ಥಕ.
ಮತ್ತೊಮ್ಮೆ *ವಿಜಯದಶಮೀ ಹಬ್ಬದ ಹೃತ್ಪೂರ್ವಕ ನಮನಗಳು ಹಾಗೂ ಶುಭಾಷಯಗಳನ್ನು ಕೋರುವ ತಮ್ಮವ.......🌿🌿🌿🌹*
*ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments