*ಗುಣಗಳ ಗಣಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು*

ಪಡೆಯಲೇ ಹುಟ್ಟಿದವರು ನಾವು. ಪಡೆಯಲು ಇರಬೇಕು, ಪಡೆಯುವ ಪದಾರ್ಥದ ಮೇಲೆ ಪ್ರೀತಿ. ಪ್ರೀತಿ ಇದ್ದರೆ ಪಡೆಯುವ ಹಂಬಲ. ಪಡೆಯುವ ಪದಾರ್ಥದ ಮೇಲೆ ಪ್ರೀತಿ ಹುಟ್ಟುವದು ತುಂಬ ವಿರಳ. ಪ್ರೀತಿ ಹುಟ್ಟುವದು ದೃಢವಾಗುವದು *ತಾಳ್ಮೆ* ಇರುವಲ್ಲಿ ಮಾತ್ರ. *ತಾಳ್ಮೆ* ಪ್ರೀತಿಗೊಂದೇ ತವರು ಅಲ್ಲ, ಎಲ್ಲ ಗುಣಗಳಿಗೂ ತವರು *ತಾಳ್ಮೆ* ಎಂದರೆ ತಪ್ಪಾಗದು.
ತಾಳ್ಮೆ ಇಲ್ಲದವನಿಗೆ ಪ್ರೀತಿಸಲಾಗದು, ಪ್ರೀತಿಯೇ ಇಲ್ಲದಿರೆ ಪಡೆಯುವ ಮನಸ್ಸೇ ಬರದು. ಪಡೆಯುವದಂತೂ ದೂರದ ಮಾತು. "ಪ್ರೀತಿಯಿಲ್ಲದ ವಸ್ತು ನಮ್ಮಲ್ಲಿ ಇದ್ದರಷ್ಟೆ, ಇಲ್ಲದಿದ್ದರೂ ಅಷ್ಟೆ." ತಾಳ್ಮೆ ಇರುವಲ್ಲಿ ಪ್ರೀತಿಯಿದೆ. ಪ್ರೀತಿ ಯಾವದೆಲ್ಲದರ ಮೇಲಿದೆಯೋ ಅದೆಲ್ಲದಕ್ಕೂ ನಾನು ಒಡೆಯನೆಂದೆನಿಸಿಕೊಳ್ಳವಹುದು.
*ಪಡೆಯಲು ಇಚ್ಛೆ ಇದ್ರೆ ಸಾಲದೆ... ??*
ಒಬ್ಬ ವ್ಯಕ್ತಿಯಲ್ಲಿ Athletic ಓಟಗಾರ ಆಗುವ ಬೇಕಾದ ಶಕ್ತಿಯೂ ಇದೆ. ಅಂತೆಯೇ ಓಟಗಾರನಾಗಲು ಇಚ್ಛೇ ಪ್ರಬಲವಾಗಿದೆ. ಇಚ್ಛೆ ಇದ್ರೆ ಸಾಲದು. ಅಪಾರ ಇಚ್ಛೆ ಶಕ್ತಿ ಇದೆ ಎಂದ ಮಾತ್ರಕ್ಕೆ "ಅಂಬೆಗಾಲು ಇಡುವದಕ್ಕೂ ಮೊದಲೇ, ಇಪ್ಪತ್ತು ಮೈಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲವಷ್ಟೆ." ಮೊದಲು ನಿಲ್ಲಬೇಕು, ಮೇಲೆರಬೇಕು, ನಡಿಯಬೇಕು. ಈಗಿನ ಸಾಮರ್ಥ್ಯವೇನು ?? ಇನ್ನೆಷ್ಟು ಪ್ರಗತಿ ಸಾಧಿಸಬೇಕು...?? ಇಷ್ಟೆಲ್ಲ ಯೋಚಿಸದೆ ಧುಮಕಿದರೆ ಕೈಕಾಲು ಮುರಿದುಕೊಂಡು ಕೂಡಬೇಕು ಆಗತ್ತೆ ಅಷ್ಟೆ. ಇಚ್ಛೆ ಇದ್ದರೆ ಸಾಲದು, ತಾಳ್ಮೆ ಅವಷ್ಯವಾಗಿ ಬೇಕು.
*ಪಡೆಯಲು ಛವಿದ್ದರೆ ಸಾಲದೇ... ??*
ಛಲ ಸಾಧಕವಾಗುತ್ತದೆ. ಫಲ ಕೊಡುವ ಸಮಯದಲ್ಲೆ ಕೊಡತ್ತೆ. ಕೊಡುವ ಸಮಯ ಬರುವವರೆಗೂ ತಾಳುವದು ಅನಿವಾರ್ಯ.
ಏನನ್ನಾದರೂ ಸಾಧಿಸಿ ತೀರುವೆ ಎಂಬ ಛಲವಿದ್ದವನು *ತಾಳ್ಮೆ* ಎಂಬ ಮಹಾ ಗುಣವನ್ನು ದಿನೆ ದಿನೆ ಬೆಳಿಸಿಕೊಳ್ಳುತ್ತಾ ಸಾಗಲೇಬೇಕು. ಸಸಿ ನೆಟ್ಟಿದ್ದೇನೆ, ನೀರು ಬಿಟ್ಟಿದ್ದೇನೆ, ಗೊಬ್ವರ ಹಾಕಿದ್ದೇನೆ, ಬೆವರು ಸುರಿಸಿ ಹಣ್ಣಾಗಿದ್ದೇನೆ, ಈಗಲೆ ಫಲ ಬರಲಿ ಅಂದರೆ ಸಾಲದು, ನಾಟಿ ಮಾಡಿಯಾದ ಮೇಲೆ ಕನಿಷ್ಠ ತೊಂಭತ್ತು ದಿನಗಳವರೆಗೆ ತಾಳಲೇ ಬೇಕು. "ನೆಟ್ಟ ಸಸಿ ಫಲಬರುವ ತನಕ ಶಾಂತಿಯ ತಾಳು" ಎಂದರು ಶ್ರೀ ವಾದಿರಾಜರು.
ಇಂದಿನ ಜನ ನಾವು 4g. ಸಮವೇ ಇಲ್ಲ. ಒಬ್ಬರ ಜೊತೆಗೆ ಒಂದು ನಿಮಿಷ ಮಾತಾಡುವ ತಾಳ್ಮೆ ಇಲ್ಲ, ಮರುಕ್ಷಣಕ್ಕೆ ಮತ್ತೊಬ್ಬರಿಗೆ massege. ಹಾಗಾಗಿ ಬೆರೆ ಬೆರೆ ಮಾರ್ಗಗಳು ನೂರಿ ಇವೆ. ಆ ಮಾರ್ಗಗಳಿಂದ ಬೇಕಾದದ್ದನ್ನು ಅತ್ಯಂತ ಬೇಗನೇ ಪಡೆಯುತ್ತೇವೆ. *ಅನ್ಯ ಮಾರ್ಗಗಳು ಇರುವದೇ ತಾಳ್ಮೆ ಇಲ್ಲದವನಿಗಾಗಿ.*
ಹಣ ಘಳಿಸಲು ತಾಳ್ಮೆ ಇಲ್ಲದವ ೧) ಕಳ್ಳತನಕ್ಕೆ ಇಳಿಯುವ. ೨) ಎಲ್ಲಿ ಶೀಘ್ರದಲ್ಲಿ ಎರಡುಪಟ್ಟು ಆಗುವದೋ ಅಲ್ಲಿ ಹಣಹೂಡುವ. ೩) Share market ಅವಲಂಬಿಸುವ. ಮೊದಲನೇಯದಕ್ಕೆ ಜೇಲುಇ ಆಗಬಹುದು, ಎರಡನೇಯದವ ಮೋಸವನ್ನೂ ಮಾಡಬಹುದು, ಮೂರನೇಯದು ಮಾರ್ಕೆಟ್ ಡೌನ್ ಆಗಬಹುದು. ಆದರೆ ಹಾನಿ ಮಾತ್ರ ನಮಗೇ ಇದು ಅತ್ಯಂತ ನಿಖರ ಹಾಗೂ ನಿಶ್ಚಿತ.
ತಾಳ್ಮೆ ಇಲ್ಲದವ ಅನ್ಯ ಮಾರ್ಗ, short cut ದಾರಿಯನ್ನು ತುಳಿಯುವ. ಅಪೇಕ್ಷಿತವಾದದ್ದನ್ನು ಪಡೆಯಲು ಅಡ್ಡದಾರಿಯನ್ನು ಹಿಡಿದರೆ, ನಮ್ಮ ಬೆಳವಣಿಗೆಗೆ ಕೆಡಕು ಆಗುತ್ತದೆ. Short cut ಎಂದು ರೈಲಿನ ಪಟ್ರಿ ದಾಟಲು ತೆರಳಿದರೆ, ಯಾರೋ ಉಗುಳಿದಲ್ಲಿ ಕೈನೂ ಇಡಬಹುದು, ಹೊಲಸೂ ತುಳಿಯಬಹುದು, ಪ್ರಾಣಾಪಾಯವಂತೂ ಇದ್ದದ್ದೇ.... ಯಾವ ವಿಷಯದಲ್ಲಿಯೂ short cut ಸರ್ವಥಾ ಬೇಡ.
*ತಾಳ್ಮೆ* ಒಂದು ಮಹಾಗುಣ ವಿದ್ದಲ್ಲಿ, ಎಲ್ಲ ಗುಣಗಳೂ ಇವೆ. ಎಲ್ಲ ಸದ್ಗುಣಗಳೂ *ತಾಳ್ಮೆ* ಎಂಬ ಒಂದೇ ಗುಣದಿಂದ ನಮ್ಮ ವಶವಾಗಿ ಇರುತ್ತವೆ. ಅಂತೆಯೇ *ತಾಳಿದವನು ಬಾಳಿಯಾನು, ತಾಳದವನು ಹಾಳಾದಾನು* ಎಂಬ ನಾಣ್ಣುಡಿಯೇ ಬಂತು.
*ಸಹನೆ ಇರುವಲ್ಲ ಸತ್ಯವಿದೆ, ಸಹನೆ ಇರುವಲ್ಲಿ ಕ್ಷಮೆ ಇದೆ. ಸಹನೆ ಇರುವಲ್ಲಿ ದಾನವಿದೆ. ಸಹನೆ ಇರುವಲ್ಲಿಯೇ ಅನ್ನೋನ್ಯತೆ ಇದೆ. ಸಹನೆ ಇದ್ದಲ್ಲಿಯೇ ಆರ್ಜವ ಇದೆ. ಸಹನೆ ಇರುವಲ್ಲಿಯೇ ಜ್ಙಾನವಿದೆ. ಸಹನೆ ಇರುವಲ್ಲು ಧರ್ಮವಿದೆ. ಸಹನೆ ಇದ್ದಲ್ಲಿಯೇ ಪುಣ್ಯವಿದೆ. ಸಹನೆ ಇರುವಲ್ಲಿಯೇ ದೇವರೂ ಇದ್ದಾನೆ* ಹೀಗೇ ಏನೆಲ್ಲ ಗುಣಗಳಿವೆಯೋ ಆ ಎಲ್ಲಗುಣಗಳಿಗೂ ಮೊದಲು ಇರುವದು ಸಹನೆ ತಾಳ್ಮೆ. ಹೀಗೆ ಮಹಾಭರದಿ ಸ್ವಯಂ ವ್ಯಾಸರೇ ನುಡಿಯುತ್ತಾರೆ. ಅಂತೆಯೇ *ತಾಳ್ಮೆ ಗುಣಗಳಗಣಿಗೆ ಹೊಸ್ತಿಲು ಇದ್ದಂತೆ* ಅಂದರು ಹಿರಿಯರು.
*ಅಪೇಕ್ಷಿತವನ್ನು ಪಡೆಯಲು ತಪಸ್ಸುಬೇಕಲ್ಲವೆ...??*
ತಪಸ್ಸೇ ಎಲ್ಲದಕ್ಕೂ ಮೂಲ. ತಪಸ್ಸು ಸಾಗಲು ತಾಳ್ಮೆ ಬೇಕು. ಶಕ್ತಿ ಬರಲು ಅನ್ನ ಬೇಕು ನಿಜ. ತಿಂದಕೂಡಲೇ ಶಕ್ತಿ ಯಾರಪ್ಪನಿಗೂ ಬರದು. ಶಕ್ತಿ ಬರಲು ತಿಂದ ಅನ್ನ ಜೀರ್ಣವಾಗುವವರೆಗೂ ತಾಳಬೇಕು. ತಾಳ್ಮೆ ಇದು ಎಲ್ಲಿ ಹೋದರೂ ಅನಿವಾರ್ಯ.
*ತಾಳುವದಕ್ಕಿಂತ ತಪವು ಬೇರೊಂದಿಲ್ಲ* ಎಂದು ಪುರಂದರ ದಾಸರು ಸ್ಪಷ್ಟವಾಗಿ ಹಾಡು ಮಾಡಿ ತಿಳಿಸುತ್ತಾರೆ. ತಪಸ್ಸು ಮಾಡುವದು ಎನ್ನ ಕರ್ತವ್ಯ. ಫಲಾಫಲಗಳು ದೇವರಕೈಲಿ ಇರುವದು. ಅಲ್ಲಿಯವರೆತೆ ತಾಳುವದೇ ಅತ್ಯಂತ ಸೂಕ್ತ. ಸಹನೆಗೆಟ್ಟಿತೋ ತಪಸ್ಸು ಹಾಳಾಯ್ತು. ಪ್ರೀತಿ ಹೋಯ್ತು. ಸಹನೆಗೆಟ್ಟಿತೋ ಗುಣಗಳೂ ಢಮಾರ್ ಅಂದವು. ಸಹನೆ ಹೋಯಿತೋ ನಾನೂ ಹೊದಂತೆಯೇ......
ದೇವರ ಅನುಗ್ರಹ ವಾಗುವವರೆಗೆ *ತಾಳು ತಾಳು ತಾಳು* ತಾಳಿದವ ತಿಳಿಯುವದರೊಳಗೆ ಎಲ್ಲವನ್ನೂ ಪಡೆದವನಾಗಿರುತ್ತಾನೆ.
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments