*ನಾಳೆಯಿಂದ ನವರಾತ್ರೋತ್ಸವ...*
*ನಾಳೆಯಿಂದ ನವರಾತ್ರೋತ್ಸವ...*
ಕುಲಸ್ವಾಮಿಯ ಆರಾಧನಾ ರೂಪವಾದ ಈ ನವರಾತ್ರೋತ್ಸವ ಸಾಧನೆಗೆ ಯೋಗ್ಯ, ಆಪತ್ತುಗಳಪರಿಹಾರಕ್ಕೆ ಸೂಕ್ತ, ಕಷ್ಟಕಳೆದುಕೊಳ್ಳಲು ಸುಲಭ, ಇಷ್ಟಾರ್ಥಗಳೀರೇಡಿಸಿಕೊಳ್ಳಲು ಉಚಿತ, ಜ್ಙಾನಭಕ್ತಿ ಬೆಳಿಸಿಕೊಳ್ಳಲು ಸಾಧಕ ನಮ್ಮೆಲ್ಲರ ಕುಲದ ಹೆದ್ದೈವನಾದ *ಶ್ರೀಭೂ ಸಹಿತ ಶ್ರೀಶ್ರೀನಿವಾಸನ ನವಾರಾತ್ರೋತ್ಸವ.*
*ಇಷ್ಟಾರ್ಥಪ್ರದ ಶ್ರೀಶ್ರೀನಿವಾಸ*
ಸ್ತಂತಂತ್ರ, ಗುಣಪೂರ್ಣ, ಸಚ್ಚಿದಾನಂದ ವಿಗ್ರಹನಾದ, ವೈಕುಂಠದಿಂದೇ ಭುವಿಗೆ ಇಳಿದುಬಂದ, ವರದಹಸ್ತನಾಗಿ ನಿಂತಿರುವ ಶ್ರೀನಿವಾಸ ತನ್ನ ಬಳಿ ಬಂದವರ, ತನ್ನನ್ನು ಸ್ತುತಿಸಿ ಕೊಂಡಾಡಿದವರ, ತನ್ನ ಭಕ್ತರ, ತನ್ನನ್ನು ವೈಭವದಿಂದ ಪೂಜಿಸುವವರ, ತನ್ನವರ ಇಷ್ಟಾರ್ಥಗಳನ್ನು ಈಡೇರಿಸುವ ಹೆದ್ದೊರೆ ಶ್ರೀಶ್ರೀನಿವಾಸ. ಜ್ಙಾನಕೊಟ್ಟು, ಭಕ್ತಿ ಬೆಳಿಸಿ, ಮೋಕ್ಷಕೊಡುವ ಹೆದ್ದೊರೆ ಶ್ರೀಶ್ರೀನಿವಾಸ.
*ಅನಿಷ್ಟ ನಿವಾರಕಳು ದುರ್ಗೆ*
ಅನಿಚ್ಟನಿವಾರಕಳು ದುರ್ಗೆ, ಇಷ್ಟಾರ್ಥಗಳಿಗಿರುವ ವಿಘ್ನಗಳನ್ನು ನಿವಾರಿಸವವಳು ದುರ್ಗೆ, ಅಂತೆಯೇ ಶರನ್ನವರಾತ್ರಿಯ ಈ ಪ್ರಸಂಗದಲ್ಲಿ ನಾನಾರೂಪಳಾದ ದುರ್ಗಾದೇವಿಯ ಅತ್ಯಂತ ವೈಭವದ ಪೂಜೆ ದೇಶದೇಶಗಳಲ್ಲಿ, ರಾಜ್ಯಗಳಲ್ಲಿ, ಉರೂರುಗಳಲ್ಲಿ, ಮನೆಮನೆಗಳಲ್ಲಿ ನಡೆಯುತ್ತದೆ. ನಾನಾ ತರಹದ ವ್ರತೋಪವಾಸಗಳೂ ಜರುಗುತ್ತವೆ. ಉದ್ಯೇಶ್ಯ ದುರ್ಗೆ ಪ್ರಸನ್ನಳು ಆಗಿರಲಿ ಎಂಬುವದೇ.
ಜ್ಙಾನಕ್ಕೆ, ಧರ್ಮಕ್ಕೆ, ಸೌಖ್ಯಕ್ಜೆ, ಸಮೃದ್ಧಿಗೆ, ವೈಭವಕ್ಕೆ, ದಾನಕ್ಕೆ, ಸದ್ಗುಣಗಳಿಗೆ, ವಿವಾಹ, ಸಂತಾನ, ಐಶ್ವರ್ಯ, ಮನೆಯಲ್ಲಿ ಶಾಂತಿ, ಸಮೃದ್ಧಿ, ಸೌಭಾಗ್ಯ ಇತ್ಯಾದಿಗಳಿಗೆ ಪ್ರತಿಬಂಧಕವಾದ ಎಲ್ಲ ಅಡೆತಡೆಗಳು ದೂರಾಗುವದೇ ದುರ್ಗೆಯ ಅನುಗ್ರಹದಿಂದ.
*ಜ್ಙಾನಪಡೆಯಲು ಸೂಕ್ತ ಸಮಯ*
" ಜ್ಙಾನೇನೈವ ಪರಂ ಪದಂ" ಜ್ಙಾನವಿಲ್ಲದೇ ಮೋಕ್ಷವಿಲ್ಲ" ಇದು ಶಾಸ್ತ್ರ ಸಮ್ಮತ ಹಾಗೂ ಶಾಸ್ತ್ರಸಿದ್ಧ ಮಾತು. ಜ್ಙಾನ ಬರುವದು ಗುರ್ವನುಗ್ರಹದಿಂದ. ಗುರುಗಳಿಗೆ ಗುರು ಶ್ರೀಮದಾಚಾರ್ಯರಾದರೆ, ಅವರಿಗೆ ಗುರು *ಶ್ರೀವೇದವ್ಯಾಸದೇವರು.* ಅಂತೆಯೆ ಈ ನವರಾತ್ರ ಉತ್ಸವದ ಪ್ರಸಂಗದಲ್ಲಿಯೇ ವೇದವ್ಯಾಸದೇವರ ವಿಶಿಷ್ಟ ಆರಾಧನೆ ಜರುಗುತ್ತದೆ.
ವೇಸದವ್ಯಾಸದೇವರ ತರುವಾಯ ವೇದಾಭಿಮಾನಿ, ಸಕಲ ಶಾಸ್ತ್ರಾಭಿಮಾನಿ, ವಿದ್ಯಾಭಿಮಾನಿ *ಸರಸ್ವತೀದೇವಿ* ಆದ್ದರಿಂದ ಸರಸ್ವತೀದೇವಿಯ ಪೂಜೆಯೂ ಅಷ್ಟೇ ಉತ್ಕೃಷ್ಟ ರೀತಿಯಿಂದ ನಡೆಯುತ್ತದೆ.
*ಮಧ್ವನವರಾತ್ರೋತ್ಸವ*
ಕುಲಸ್ವಾಮಿ ಶ್ರೀಶ್ರೀನಿವಾಸನ ನವರಾತ್ರೋತ್ಸವದ ಕೊನೆಯದಿನ ವಿಜಯಾದಶಮೀ ದಿನದಂದು ನಮ್ಮೆಲ್ಲರ ಕುಲಗುರುಗಳಾದ, ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಶ್ರೀಮದ್ವೈಷ್ಣವ ಸಿದ್ಧಾಂತ ಪ್ರತಿಷ್ಠಾಮನಾಚಾರ್ಯರಾದ *ಶ್ರೀಮದಾಚಾರ್ಯರ ಜಯಂತೀ* ಅಂತೆಯೇ ಈ ಹತ್ತುದಿನಗಳಲ್ಲಿ ಮಧ್ವನವಾರಾತ್ರೋತ್ಸವವೂ ನಡೆಯುತ್ತದೆ.
*ಮಹಾವೈಭವ*
ಜಗತ್ತಿನಲ್ಲಿ ಸರ್ವೋತ್ತಮ ಶ್ರೀನಿವಾಸ ಹಾಗೂ ವೇದವ್ಯಾಸದೇವರು, ತದನಂತರ ನಿತ್ಯಮುಕ್ತಳಾದ ದುರ್ಗೆ, ನಂತರ ಜೀವೋತ್ತಮರಾದ ಶ್ರೀಮದಾಚಾರ್ಯರು, ನಂತರ ಸಕಲವಿದ್ಯಾಭಿಮಾನಿ ಸರಸ್ವತೀ ದೇವಿ ಹೀಗೆ ಉತ್ತಮೋತ್ತಮ ದೇವತೆಗಳ ಪೂಜಾ ವೈಭವದ ಈ ಪ್ರಸಂಗವೇ *ನವರಾತ್ರೋತ್ಸವ.*
ಈ ಪ್ರಸಂಗದಲ್ಲಿ ವಿಷ್ಣು ಸಹಸ್ರನಾಮ, ವೇಂಕಟೇಶಸ್ತೋತ್ರ, ವ್ಯಾಸಗದ್ಯ ಕರಾವಲಂಬನ ಸ್ತೋತ್ರ.
ಶ್ರೀಸೂಕ್ತ, ದುರ್ಗಾಸೂಕ್ತ, ಲಕ್ಷ್ಮೀಹೃದಯ ನಾರಾಯಣ ಹೃದಯ, ದುರ್ಗಾಸ್ತುತಿ, ದುರ್ಗಾಸುಳಾದಿ.
ವಾಯುಸ್ತುತಿ, ಸುಂದರಕಾಂಡ, ವಾಯುಮಹಿಮೆ, ಸುಮಧ್ವವಿಜಯ.
ಸರಸ್ವತೀಸೂಕ್ತ ಮೊದಲಾದವುಗಳನ್ನು ಎಷ್ಟೆಷ್ಟು ಸಾಧ್ಯವೋ ಅಷ್ಟು ಪಾರಾಯಣ ಮಾಡೋಣ. ನಿತ್ಯ ನೂರೆಂಟು ಅಥವಾ ಇಪ್ಪತ್ತುನಾಲಕು ನಮಸ್ಕಾರ ಮಾಡೋಣ. ಅರ್ಚನೆ, ಪಂಚಾಮೃತ, ಮೊದಲಾದ ವೈಭವದ ಪೂಜೆ ಮಾಡೋಣ. ಬ್ರಾಹ್ಮಣಭೋಜನ ಮಾಡಿಸೋಣ. ದಾನಗಳನ್ನು ಕೊಡೋಣ. ವೇಂಕಟೇಶಮಾಹಾತ್ಮ್ಯ ಶ್ರವಣ ಮಾಡೋಣ. ವ್ರತೋಪವಾಸಗಳನ್ನು ಆಚರಿಸೋಣ. ಎಷ್ಟೆಲ್ಲ ಏನೆಲ್ಲ ಸಾಧ್ಯವಿದೆ ಅಷ್ಟೆಲ್ಲ ಮಾಡಿ ಶ್ರೀಶ್ರೀನಿವಾಸನಿಗೆ ಅರ್ಪಿಸೋಣ.... ನಿನ್ನ ದಾಸರ ದಾಸರ ದಾಸರು ನಾವೇ ಎಂದು ಬೀಗೋಣ.
*✍🏽✍🏽✍ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.

Comments