*ಮುನ್ನಡೆಯಬೇಕೇ.......*
*ಮುನ್ನಡೆಯಬೇಕೇ.......*
ಮುನ್ನಡೆಯುವದು, ಮೇಲೇರುವದು, ಸರ್ವತೋಮುಖವಾಗಿ ಪ್ರಗತಿಯಾಗುವದು ಜೀವನ ಒಂದು ಉದ್ಯೇಶ್ಯ. ಈ ಉದ್ದ್ಯೇಶ್ಯದ ಈಡೇರಿಕೆಗೆ *ಹಲವು ಬಿಡಬೇಕು, ಕೆಲವುಗಳನ್ನು ಹಿಡಿಯಬೇಕು* ಇದು ನಿಶ್ಚಿತ.
ಮುನ್ನಡೆಯಲು, ಪ್ರಗತಿ ಸಾಧಿಸಲು ಮೊದಲು "ಉತ್ತಮ ಆಸೆಗಳು ಇರಲೇಬೆಕು." ಆಸೆಗಳು ಇರಬೇಕು ಎಂದ ಮಾತ್ರಕ್ಕೆ ಅತಿ ಆಸೆಯೋ ಅಥವಾ ದುರಾಸೆಗಳೊ ಸರ್ವಥಾ ಸಲ್ಲ. ಆಸೆಗಳು ಫಲಕೊಟ್ಟೇ ಕೊಡುತ್ತವೆ, ಅತಿ ಆಸೆಗಳಾಗಲಿ ಅಥವಾ ದುರಾಸೆಗಳಾಗಲಿ ಕೆಲವೊಮ್ಮೆ ಮಹಾಫಲದಾಯಕವಾಗಿವೆ. ಆದರೆ ಆಸೆಗಳು ಋಷಿ ಮುನಿಗಳನ್ನು ಮುಂದೋಯ್ದರೆ, ಅತಿ ಆಸೆ ದುರಾಸೆಗಳು ರಾವಣ ಕುಂಭಕರ್ಣರ ಹಾಗೆ ದುರಂತಕ್ಕೆ ಎಡೆಮಾಡುತ್ತವೆ.
*ಹೆದರದಿರು ನಿನ್ನ ಆಸೆ ಈಡೇರುತ್ತದೆ*
ಆಸೆಗಳು ಇರಬೇಕು. ಇರುವ ಆಸೆಗಳು ಈಡೇರಬೇಕು. ಆಸೆಗಳನ್ನು ಮಾಡುವದು ನನ್ನ ಕೆಲಸವಾದರೆ, ಈಡೇರಿಸುವದು ದೇವರ ಕೆಲಸ.
ದೇವರ ಮೂರ್ತಿಗಳನ್ನು ನೋಡುತ್ತೇವೆ. ಮೂರ್ತಿಗಳ ಕೈಗಳು ಅನೇಕ ಭಂಗಿಗಳಲ್ಲಿ ಇರುತ್ತವೆ. ಹೆಚ್ಚಾಗಿ "ಅಭಯ ಹಸ್ತ, ವರದ ಹಸ್ತ"ಗಳುಳ್ಳದ್ದಾಗಿಯೇ ಇರುತ್ತವೆ. ವರದ ಹಸ್ತ ಅಸೆಪಡು, ವರಪಡೆ" ಎಂದು ಸೂಚಿಸಿದರೆ. ಅಭಯ ಹಸ್ತ "ನನ್ನ ಆಸೆ ಈಡೇರತ್ತೋ ಇಲ್ಲೊ ಎಂಬ ಭಯಗ್ರಸ್ತನಾಗಬೇಡ" ಎಂದು ಸೂಚಿಸುತ್ತವೆ. ಆಸೆ ಇಲ್ಲದವ, ಭಯಭೀತನಾದವ ಏನನ್ನೂ ಪಡೆಯಲಾರ. *ಆಸೆ ಈಡೇರಿಸುವ ದೇವರ ಹಸ್ತಗಳನ್ನು ಚಿಂತಿಸು. ಪ್ರಗತಿ ಸಾಧಿಸು. ಮುಂದೆ ಸಾಗು.
ಉತ್ತಮವಾದದ್ದನ್ನೇ ಪಡೆಯಲು ಪೂರಕವಾದ ಕೆಲವು ಪುಟ್ಟ "ಬೇಕು"ಗಳನ್ನು ಪೂರ್ಣಮಾಡಿಕೊಳ್ಳಬೇಕು. "ಬೇಕು"ಗಳಿಗೆ ಪೂರಕವಾದ ಪುಟ್ಟ ಪುಟ್ಟ ಬೇಕುಗಳ ಪಟ್ಟಿ ತಯಾರಿಸಿಕೊಂಡು, ಈ ಪುಟ್ಟ ಬೇಕುಗಳು ನಮಗೇಕೆ ಬೇಕು ಎಂಬುವದನ್ನೂ ಸಿದ್ಧಮಾಡಿಟ್ಟುಕೊಳ್ಳಬೆಕು.
ಸಣ್ಣವಯಸ್ಸಿಗೆ "ಉತ್ತಮ ಸಿದ್ಧ ಪುರುಷನಾಗಬೇಕು, ವಿದ್ವಾಂಸನಾಗಬೇಕು ಅಥವಾ ವಿಮಾನ ಚಾಲಕನಾಗಬೇಕು" ಎಂಬ ಬಯಕೆ ಮೂಡಿದ್ದರೆ, ಇದಕ್ಕೆ ಪೂರಕವಾದ ಅನೇಕ ಸಣ್ಣಪುಟ್ಟ ಬೇಕುಗಳನ್ನು ಪೂರ್ಣ ಮಾಡಿಟ್ಟುಕೊಳ್ಳಬೇಕು.
ಸಿದ್ಧ ಪುರುಷನಾಗಬೇಕು ವಿದ್ವಾಂಸನಾಗಬೇಕು ಎಂದಿದ್ದರೆ, ಗಾಯತ್ರೀ, ಸಂಧ್ಯಾ, ಪೂಜೆ, ವ್ರತ, ಉಪವಾಸ ಗಳನ್ನು ಮಾಡುತ್ತಾ ಸಾಗಬೇಕು. ದಿಢೀರ ಎಂದು ಸಿದ್ಧ ಪುರುಷ ಎಂದಿಗೂ ಆಗಲಾರ. *ವಿದ್ವಾಂಸನಾಗಬೇಕು* ಎಂಬ ಬಯಕೆ ಇದ್ದರೆ ಸಣ್ಣ ವಯಸ್ಸಿನಿಂದಲೇ ಸಾಹಿತ್ಯ, ವ್ಯಾಕರಣ, ತರ್ಕ, ಮೊದಲಾದವುಗಳ ಅಧ್ಯಯನ, ಗುರುಸೇವೆ ಮೊದಲಾದವುಗಳು ಆಗಿ, ಕೊನೆಯ ಪರೀಕ್ಷೆಯಲ್ಲಿ ಉತ್ತೀರ್ಣನೂ ಆಗಿರಬೇಕು. ಅದೇರೀತಿ *ವಿಮಾನ ಚಾಲಕನಾಗಬೇಕು* ಎಂಬ ಬಯಕೆ ಇದ್ದರೆ, ದೃಷ್ಟಿಪಾಟವ, ದೇಹಸೌಷ್ಠವ, ಚಾಕಚಕ್ಯತೆ ಇವುಗಳಿಂದ ದೃಢವಾಗಿದ್ದು ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುತ್ತಾ ಸಾಗಬೇಕು. ಹೀಗೆ ಪ್ರತಿಯೊಂದರಲ್ಲಿಯೂ ಸಣ್ಣ ಪುಟ್ಟ ಬೇಕುಗಳನ್ನು ಒಂದೊಂದಾಗಿ ಪೂರ್ಣಗೊಳಿಸುತ್ತಾ ಸಾಗವೇಕು. ಆಗ ಉತ್ತಮವಾದ ಆಸೆ ಈಡೇರುತ್ತದೆ. ಯಾವದೂ ದಿಢೀರ ಎಂದು ಒಲಿಯುವದಿಲ್ಲ. ಎಲ್ಲದಕ್ಕೂ ಉತ್ತಮ ಯೋಗ್ಯ ಆಸೆ, ನಿರಂತರ ಶ್ರಮ, ಪೂರಕಳ ಪಟ್ಟಿ, ಅವುಗಳಪೂರೈಕೆ, ಗುರ್ವನುಗ್ರಹ, ದೇವಪ್ರೀತಿ ಇವುಗಳನ್ನು ರೂಢಿಸಿಕೊಂಡಾಗಲೇ ಮುನ್ನುಗ್ಗಲು, ಮುಂದೆ ಓಡಲು, ಪ್ರಗತಿ ಸಾಧಿಸಲು ಸಾಧ್ಯ.....
*ಕೆಲವುಗಳನ್ನು ಬಿಡುವದು ರೂಢಿಸಿಕೊಳ್ಳಬೇಕು*
ಅನವಶ್ಯಕವಾಗಿ ಮೋಬೈಲಿನಲ್ಲಿ ಹರಟೆ, ಪ್ರಗತಿಗೆ ಮಾರಕ. ಅದನ್ನು ಕೈಬಿಡಲೇಬೇಕು. ನಮಗೆ ಗೊತ್ತಾಗುವದರೊಳಗೇ ಸಾವಿರಾರು ಗಂಟೆಗಳನ್ನು ತಿಂದು ಹಾಕಿರುತ್ತದೆ. ನಿದ್ರೆಯನ್ನು ಕಡಿತಗೊಳಿಸಲೇಬೇಕು. "ನಮ್ಮ ಬೃಹತ್ತಾದ ಕೆಲಸಗಳಿಗೆ, ಪ್ರೋತ್ಸಾಹ ಕೊಡದ ಎಲ್ಲರ ಸಂಪರ್ಕ ಕಡಿತಗೊಳಿಸುವದು ಅನಿವಾರ್ಯ." "ತಾವೂ ಸಾಧಿಸರು, ನಮಗೂ ಸಾಧಿಸಲು ಬಿಡರು."
*ಕೆಲವು ಹಿಡಿಯವದೂ ಅನಿವಾರ್ಯ*
ನಮಗಿಷ್ಟವಾದ, ನಮ್ಮ ಸಾಧನೆಯಲ್ಲಿ ಯಾರು ಮುಂದಿದ್ದಾರೆ, ಅವರ ಮಾರ್ಗದರ್ಶನ ಅನಿವಾರ್ಯ. ನಮ್ಮ ಹಿತೈಷಿಯಾದ ಪ್ರೋತ್ಸಾಹ ಕೊಡುವ, ಧೈರ್ಯ ತುಂಬ ವ್ಯಕ್ತಿಗಳನ್ನು ಹುಡುಕಿ ಅವರ ಸಹವಾಸ ಮುಖ್ಯ.
ನಿರಂತರ ಉತ್ತಮರ ಜೀವನ ಚರಿತ್ರೆಯ ಅಧ್ಯಯನ. ನಮ್ಮ ಕನಸಿನ ಆಸೆಯ ಈಡೇರಿಗೆ ಕೆಲ ಹೊತ್ತಿನ ಯೋಚನೆ. ಕೆಲಹೊತ್ತಗಳ ಪರಿಶ್ರಮ ಕೈಹಿಡಿಯಲೇಬೇಕು.
ಮೋಸ, ವಂಚನೆ, ಅಡ್ಡದಾರಿಗಳಿಂದ ಮಹತ್ವವಾದದ್ದನ್ನು ಯಾವದೂ ಸಾಧಿಸಲಾಗುವದಿಲ್ಲ ಎಂಬ ಎಚ್ಚರಿಕೆ ಸದಾ ಇರಲೇಬೇಕು.
ಸೋಲುಗಳು ಬಂದೇ ಬರುತ್ತವೆ. ಧೃತಿಗೆಡದೆ, ಸೋಲಿನ ಕಾರಣವನ್ನು ಹುಡುಕಿಕೊಂಡು, ಅವುಗಳನ್ನು ಸರಿಪಡಿಸಿಕೊಳ್ಳಬೇಕು.
*ನಮ್ಮ ನಿರಂತರ ಪ್ರಯತ್ನಮಾತ್ರ ಸಾಧ್ಯವೆ.... ?*
ನಮ್ಮ ಪ್ರಯತ್ನ ಫಲ ಕೊಡತ್ತೆ ನಿಜ. ಪ್ರಯತ್ನವೇ ತುಂಬ ಮೂಲ ಎಲ್ಲದಕ್ಕೂ. ಆದರೆ ಪ್ರಯತ್ನ ನೂರರಷ್ಟು ಫಲಕೊಡುವದಾಗಲಿ, ಅಥವಾ ನಮ್ಮ ಪ್ರಯತ್ನವನ್ನು ಗುರುತಿಸುವದಾಗಲಿ ಸಾಧ್ಯವಾಗುವದು ಫಲಕೊಡುವ ವ್ಯಕ್ತಿಯ ಪ್ರೀತಿಪಾತ್ರತೆಯೇ ತುಂಬ ಮುಖ್ಯ. ಫಲಕೊಡುವ ವ್ಯಕ್ತಿಯ ಪ್ರೀತಿಸಂಪಾದಿಸದೇ ಮಾಡಿದ ಸಕಲಪ್ರಯತ್ನವೂ ಇಂದಿಗೆ ಫಲಕೊಡದು. ಇದು ಇಂದಿಗೂ ಎಂದೆಂದಿಗೂ ನಿಶ್ಚಿತ.
ಎಲ್ಲದರಮೇಲೆ ಅಧೀರನಾಗದೆ, ಹೇಡಿಯಾಗದೆ *ಆಸೆ ಈಡೇರಿಸುವ ದೇವರ ನಿರಂತರ ಧ್ಯಾನ ಸೇವೆ ಅನುಗ್ರಹ ಅತ್ಯಂತ ಅನಿವಾರ್ಯ.* ಆಗ ನಮ್ಮ ಪ್ರಗತಿ ನಮ್ಮ ಅಂಗೈಯಲ್ಲಿಯೇ 😊😊😊 ......
*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments